Showing posts with label ಹಾಗೇ ಸುಮ್ಮನೆ ..... Show all posts
Showing posts with label ಹಾಗೇ ಸುಮ್ಮನೆ ..... Show all posts

05 January 2011

ಗುಂಡನ ವಾದ

ನಮ್ಮ ಉಂಡಾಡಿ ಗುಂಡನ ವಾದ ಹೇಗಿದೆ ನೋಡಿ!

ಉಂಡಾಡಿ ಗುಂಡನ ವಾದಗಳನ್ನೊಳಗೊಂಡ mail ಒಂದು ಬಂದಿತ್ತು. ಗುಂಡನ ತರಲೆ ವಾದಗಳು ಓದಲು ಮಜಬೂತಾಗಿವೆ. ಹಾಗೇ ಸುಮ್ಮನೆ ಓದಿ ಎಂಜಾಯ್ ಮಾಡಿ...

 

* ಕ್ರೀಂ ಬಿಸ್ಕತ್ ನಲ್ಲಿ ಕ್ರೀಂ ಇರುತ್ತೆ, ಆದ್ರೆ ಬೆಣ್ಣೆ ಬಿಸ್ಕತ್ ನಲ್ಲಿ ಬೆಣ್ಣೆ ಇರುತ್ತಾ?

* ನಾನ್ ಬಸ್ ನಲ್ಲಿ ಹತ್ತಿದ್ರೂ ಅಥವಾ ಬಸ್ ನನ್ ಮೇಲೆ ಹತ್ತಿದ್ರು ಟಿಕೆಟ್ ತಗೊಳೋನು ನಾನೇ!

* ಸೆಲ್ ನಲ್ಲಿ ಬ್ಯಾಲನ್ಸ್ ಇಲ್ಲಾಂದ್ರೆ
'ಕಾಲ್' ಮಾಡೋಕೆ ಆಗಲ್ಲಾ.. ಮನುಷ್ಯನಿಗೆ 'ಕಾಲ್' ಇಲ್ಲಾಂದ್ರೆ ಬ್ಯಾಲನ್ಸ್ ಮಾಡೋಕೆ ಆಗಲ್ಲಾ!

* ರೈಲು ಎಷ್ಟೇ ವೇಗವಾಗಿ ಬಂದ್ರೂನೂ ಕೊನೆಯ ಬೋಗಿ ಬರೋದು ಕೊನೆಗೇನೆ..

* ಬಸ್ ಹತ್ತಿ ಹೋದ್ರೂ.. ಬಸ್ ಸ್ಟ್ಯಾಂಡ್ ಅಲ್ಲೇ ಇರುತ್ತೆ.. ಆದ್ರೆ ಸೈಕಲ್ ಹತ್ತಿ ಹೋದ್ರೆ ಸೈಕಲ್ ಸ್ಟ್ಯಾಂಡ್ ನಮ್ಮ ಜೊತೆಗೆ ಬರುತ್ತೆ..

* ನಾಯಿಗೆ ನಾಲ್ಕು ಕಾಲ್ ಇರಬಹುದು.. ಆದರೂ ಅದಕ್ಕೆ ಕಾಲ್ ಮೇಲೆ ಕಾಲ್ ಹಾಕೊಂಡು ಕೂರಕ್ಕೆ ಆಗುತ್ತಾ
?
 
* 10 ಇರುವೆ ಸೇರಿ ಒಂದು ಆನೆ ಕಚ್ಚಬಹುದು.. ಆದ್ರೆ 10 ಆನೆ ಸೇರಿ ಒಂದು ಇರುವೆನಾ ಕಚ್ಚಕ್ಕೆ ಆಗುತ್ತಾ?




27 October 2010

ಜಾತಿ ಪದ್ಧತಿ : ರೇವಪ್ಪನ ಅವಲೋಕನ


ನಮಸ್ತೆ ...
ಭಾಳ ದಿನಗಳ ನಂತರ ನಿಮ್ಮೆದುರಿಗೆ ಬರ್ತಿದೀನಿ. ಏನೋ ಹಾಗೇ ಸುಮ್ಮನೆ ಗೀಚೋ ಮನಸಾಯ್ತು.. ಬರೀತಿದೀನಿ. ಅದೇನೋ ಗೊತ್ತಿಲ್ಲ " ಜಾತಿ ಪದ್ಧತಿಯ ಬಗ್ಗೆ ನನ್ನ ಅನಿಸಿಕೆಗಳೇನು ? " ಅಂತ ಯೋಚನೆ ಮಾಡೋ ಮನಸಾಯ್ತು. ಮಾಡಿದೆ. ಬರೆಯೋ ಮನಸಾಯ್ತು. ಬರೀತಿದೀನಿ. ಈಗ ಇಲ್ಲಿ ಬರೆದಿರೋದು ಸಂಪೂರ್ಣ ನನ್ನ ತಿಳುವಳಿಕೆಗಳು. ಅವು ತಪ್ಪಿರಲೂಬಹುದು - ಸರಿ ಇರಲೂಬಹುದು. ನಾನು ಕಂಡಂತೆ ಮತ್ತು ನನ್ನ ಬುದ್ಧಿಗೆ ದಿನೇ ದಿನೇ ತಿಳುವಳಿಕೆ ಮೂಡುತ್ತಾ ಬಂದ ಹಾಗೆ ನಾನು ತಿಳಿದುಕೊಂಡಂತೆ ಜಾತಿ ವ್ಯವಸ್ಥೆಯ ಒಂದು 'ಪದ-ಬಂಧ' ಇಲ್ಲಿದೆ. ಈ ಲೇಖನದ ಮೂಲಕ ನಾನು ಹೀಗೆಲ್ಲಾ ವಿಚಾರ ಮಾಡ್ತೀನಿ, ನೀವೂ ಮಾಡಿ ಅಂತಾಗಲಿ ಅಥವಾ ನಿಮ್ಮ ವಿಚಾರಸರಣಿ ನನಗಿಂತ ಕೆಳಗಿದೆ ಅಂತಾಗಲಿ  ಯಾವ ಹಂತದಲ್ಲೂ ಹೇಳಲು ಹೊರಟಿಲ್ಲ. ಬದಲಿಗೆ ನಾನು ಕಂಡಂತೆ ಜಾತಿ ವ್ಯವಸ್ಥೆ ಅಥವಾ ನನ್ನ ದೃಷ್ಟಿಯಲ್ಲಿ ಜಾತಿ ವ್ಯವಸ್ಥೆ ಅನ್ನುವ ನಿಬಂಧ ರೂಪದಲ್ಲಿ ಮಾತ್ರ ಬರೆದಿದೀನಿ. ತನ್ಮೂಲಕ ಯಾರನ್ನೂ ನೋಯಿಸುವ ಮೂರ್ಖತನ ಮಾಡದ ಹಾಗೆ ನನ್ನ ಶಬ್ದಬಳಕೆ ಇರಲಿ ಅಂತ ತಾಯಿ ಸರಸ್ವತಿಗೆ ಕೇಳಿಕೊಳ್ತೀನಿ :

ಚಿಕ್ಕಂದಿನಲ್ಲಿ ನನ್ನ ತಿಳುವಳಿಕೆ ಹೇಗಿತ್ತು ?

ಚಿಕ್ಕಂದಿನಲ್ಲಿ, ಅಂದ್ರೆ 10ನೇ ಕ್ಲಾಸಿನವರೆಗೆ ಅಂತ ಅರ್ಥ, ಮೇಲ್ನೋಟಕ್ಕೆ ನಮ್ಮ ಶಾಲೆಯ & ಓರಗೆಯ  ಇತರ ಮಕ್ಕಳಂತೆ ನನ್ನಲ್ಲಿ & ನಮ್ಮ ನಡುವೆ ಯಾವ ಭೇದವೂ ಇರದೇ ಇದ್ದದ್ದು ಶತಪ್ರತಿಶತ ನಿಜವಾದರೂ , ನಮ್ಮಗಳಲ್ಲಿ ಜಾತಿ ಭೇದಕ್ಕಿಂತ ಧರ್ಮಭೇಧದ ತಿಳುವಳಿಕೆ ಇತ್ತು ಎನ್ನಬಹುದು. ನಮ್ಮೂರಲ್ಲಿ ಹಿಂದೂ ಮುಸ್ಲಿಂ ಎಂಬ ಎರಡು ಧರ್ಮಗಳು ಮಾತ್ರ ಇದ್ದು ಅವೆರಡರ ತಿಳುವಳಿಕೆ ಮಾತ್ರ ನಮ್ಮಗಳಿಗಿತ್ತು.  ಪಠ್ಯಪುಸ್ತಕಗಳ ಮೂಲಕ ಜಗತ್ತಿನ ವಿವಿಧ ಧರ್ಮಗಳ ಪರಿಚಯವಿದ್ದರೂ ಮುಖತಃ ಅವುಗಳ ಯಾವುದೇ ಪರಿಚಯವಿಲ್ಲದೇ ಆ ಧರ್ಮಗಳ ಸ್ವರೂಪ ತಿಳಿಯುವುದಿಲ್ಲ ಅಂತ ನನ್ನ ಅನಿಸಿಕೆ.

ಇನ್ನು ನನ್ನ ಸ್ವಂತ ಜಾತಿಯ ಬಗ್ಗೆ ಹೇಳಬೇಕಂದ್ರೆ : ಪ್ರತಿ ಮನೆಯ ಅಮ್ಮನ ಹಾಗೆ ನನ್ನಮ್ಮನೂ ನಮ್ಮ ಜಾತಿ ಒಳ್ಳೆಯದೆಂದೇ ಹೇಳಿದ್ದರು. ಆದರೆ ಇವತ್ತಿಗೂ ನನಗೆ ನಮ್ಮ ಜಾತಿಯ / ಜಾತಿಯ ಹೆಸರಿನ ನಿಜ ಅರ್ಥ  ಏನು ಅಂತ ಗೊತ್ತಿಲ್ಲ ಅಂದ್ರೆ ನೀವು ನಂಬಬೇಕು. ಗೊತ್ತು ಮಾಡಿಕೊಳ್ಳುವ ಗೋಜಿಗೂ ಹೋಗಿಲ್ಲ ಬಿಡಿ.

ಸಂಪೂರ್ಣ ಮೇಲ್ಜಾತಿಯ ಮನೆಗಳನ್ನ ಹೊರತುಪಡಿಸಿ, ಇನ್ನುಳಿದೆಲ್ಲ ಜಾತಿಯ ಮನೆಗಳಲ್ಲಿ ತಮಗಿಂತ ಕೆಳಗಿರುವ ಮನೆಗಳನ್ನ ಮನಸಲ್ಲಿಟ್ಟುಕೊಂಡು ತಮ್ಮ ಜಾತಿಯ ಮೇಲ್ಗುಣಗಳನ್ನ ಅಮ್ಮಂದಿರು ಅವರ ಮಕ್ಕಳಿಗೆ ಪ್ರಸಾರ ಮಾಡಿಯೇ ಇರುತ್ತಾರೆ. ಜೊತೆಗೆ ಮೇಲಿನವರ ಬಗೆಗಿನ ಸಣ್ಣ ಅಸಹನೆಯೂ ಪ್ರಸಾರವಾಗಿದ್ದರೂ ಆಶ್ಚರ್ಯವಿಲ್ಲ. ಇದು ಜಾತಿ ವ್ಯವಸ್ಥೆಯ ಅರಿವಿರುವ - ಅನುಭವಿಸಿರುವ ಪ್ರತಿ ಭಾರತೀಯ ಮನೆಯ ಅನುಮೋದಿತ ನಡವಳಿ ಎಂದು ನನ್ನ ತಿಳುವಳಿಕೆ. 

ಇಂತಿಪ್ಪ ನನ್ನ ಸ್ವಯಂ ಜಾತಿಯ ಪ್ರಾಥಮಿಕ ತಿಳುವಳಿಕೆಯ ಮೇಲೆ 
ಮೇಲಿನವರ ಬಗ್ಗೆ ಕೊಂಚ ಅಸಮಾಧಾನ 
& 
ಕೆಳಗಿನವರ ಬಗೆಗೆ ಕೊಂಚ ಅಸಡ್ಡೆ 
ಇಟ್ಟುಕೊಂಡಿದ್ದಂತೂ ಮನಃಸಾಕ್ಷಿಯಾಗಿ ನಿಜ.

------------------------------

ಇದಿಷ್ಟು
ಕುವೆಂಪುರವರ ವಿಶ್ವ ಮಾನವ ಕಲ್ಪನೆ ಎಂದರೆ ಏನು ?
ಅಂತ ಅರಿಯದೇ ಇದ್ದಾಗಿನ ನನ್ನ ಮನಸ್ಥಿತಿಯ ಚಿತ್ರಣ.

------------------------------
 

ಕಾಲೇಜು ದಿನಗಳಲ್ಲಿ ನನ್ನ ತಿಳುವಳಿಕೆಯ ವಿವಿಧ ಹಂತಗಳು :

ಕಾಲೇಜು ಸೇರಿದ ಮೊದಲ ಎರಡು ವರ್ಷಗಳಲ್ಲಿ ಪಿಯು ಸೈನ್ಸ್ ಮಾಡಿದ ಇತರ ವಿಧ್ಯಾರ್ಥಿಗಳಿಗಿರುವ ಅಭ್ಯಾಸದ ಧಾವಂತದ ನಡುವೆ ಇಂಥ ಚಿಂತನೆಗಳಿಗೆ ಸಮಯ ಇದ್ದಿಲ್ಲದಿರುವುದು ನಿಜ ಅಂತ ಒಪ್ಪಿಕೊಳ್ಳುವುದಾದರೆ ಚಿಕ್ಕಂದಿನ ತಿಳುವಳಿಕೆಗಳೇ ಮುಂದುವರೆದಿದ್ದನ್ನೂ ಒಪ್ಪಿಕೊಳ್ಳಬೇಕು. ಆಮೇಲೆ ಇಂಜಿನಿಯರಿಂಗ್ ಎಂಬ ಕಾರ್ಖಾನೆ ಸೇರದೇ ಪ್ಯೂರ್ ಸೈನ್ಸ್ ಎಂಬ ವಿರಾಮಶಾಲೆ ಸೇರಿದ ನನಗೆ ಇಂಥ ಎಲ್ಲ ವಿಚಾರಗಳ ಕಡೆಗೆ ಗಮನ ಹರಿಸಲು ಗಳಿಸಿ ಉಳಿಸಿದಷ್ಟು ಸಮಯ ಸಿಕ್ಕಿತ್ತು. ಅದೇ ದಿನಗಳಲ್ಲಿ ವೀರೇಶ್ ಎಂಬ ನನಗಿಂತ ಮೇಲ್ವರ್ಗದ ಸ್ನೇಹಿತನೊಬ್ಬ ಆಪ್ತನಾದದ್ದು ನಾನೂ Upgrade ಆದ ಅನುಭವ ನೀಡಿದ್ದು ಸುಳ್ಳಲ್ಲ. ಬಹಳ ದಿನಗಳವರೆಗೆ ಆ ಭ್ರಮೆ ಮುಂದುವರೆಯಿತು ಕೂಡ. ಆ ದಿನಗಳಲ್ಲಿ ನಮ್ಮಿಬ್ಬರಲ್ಲಿ ಜಾತಿ ಪದ್ಧತಿಯಲ್ಲಿದ್ದ ಎರಡು ಪಂಗಡಗಳೆಂದರೆ : General Merit  ಜನ ಮತ್ತು Reservation Claim ಮಾಡುವ ಜನ. ನನ್ನದೇ ಜಾತಿಯ ಇತರರನೇಕರು ನಮ್ಮ ಜಾತಿಗೆ ಸರ್ಕಾರ ನೀಡಿ 'ಗೌರವಿಸಿದ್ದ' Reservation ಎಂಬ Previliege ಅನ್ನ ಪಡೆದಿದ್ದರೂ, ನನ್ನ ತಂದೆಯ ಔದಾಸೀನ್ಯವೋ ಅಥವಾ ಜಾತಿ ಪದ್ಧತಿಯ ಬಗೆಗಿನ ತಿರಸ್ಕಾರವೋ ಅಥವಾ ಅವರ ವರ್ಷದ ಆದಾಯ, ನಮ್ಮನ್ನ ಜಾತಿ ಪದ್ಧತಿಯಿಂದ ಹೊರಗಿಡಲು ಸಾಕಷ್ಟಾಯ್ತು, ಎಂಬ ಸರ್ಕಾರದ ನಿಯಮವೋ .. ಯಾವುದೋ ಒಂದು ಕಾರಣಕ್ಕೆ ನಾನು General Merit Student ಅಡಿಯಲ್ಲಿ ದಾಖಲಾಗಿದ್ದೆ. ಹೀಗಾಗಿ Reservation ಪಡೆಯುವ ವರ್ಗದ ಮೇಲೆ ತಿರಸ್ಕಾರ, ಅಸಮಾಧಾನ .. ಇತ್ಯಾದಿಗಳು ಬೆಳೆಯಲು ಕಾರಣವಾಯಿತು. ನನ್ನ ಪದವಿ ಮುಗಿಯುವವರೆಗೂ ಇದೇ ಯೋಚನಾ ಲಹರಿ ನನ್ನಲ್ಲಿ ಸದಾ ತುಂಬಿತ್ತು. ನಂತರ ಅದ್ಯಾವ ಗಳಿಗೆಯಲ್ಲಿ ನನ್ನ ತಲೆಯಲ್ಲಿ ಅದೇನು ಕಿಡಿ ಹೊತ್ತಿತೋ ಗೊತ್ತಿಲ್ಲ. ಸುಮಾರು ಮೂರು ವರ್ಷದ ಕಾಲಘಟ್ಟದಲ್ಲಿ ( 2007-2010) ನನ್ನಲ್ಲಿ ಜಾತಿ ಪದ್ಧತಿಯ ಬಗೆಗಿನ ದೃಷ್ಟಿಕೋನಗಳೇ ಬದಲಾದವು. ಬದಲಾಗಿವೆ. ಬದಲಾಗ್ತಿದಾವೆ. ಬದಲಾಗುತ್ವೆ. ಆದರೆ ಇವತ್ತಿನ ದಿನದ ಲೆಕ್ಕವನ್ನೇ ನೀಡುವುದಾದರೆ : ಗಾಂಧೀಜಿಯವರಂತೆ ಎಲ್ಲರನ್ನೂ ಸಮಾನರಾಗಿ ಕಾಣುವ ದಿವ್ಯತೆ ನನ್ನಲ್ಲಿ ಇನ್ನೂ ಮೂಡಿಲ್ಲ. ಆದರೆ ಹಾಗೆ ಮೂಡಿಸುವ ನಿಟ್ಟಿನಲ್ಲಿ ನೈಜ & ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದು ಅಪ್ಪಟ ನಿಜ.



ಹಾಗಿದ್ದಲ್ಲಿ ಬದಲಾದ ಸನ್ನಿವೇಶದಲ್ಲಿ ನನ್ನಲ್ಲಿರುವ ಜಾತಿ ಪದ್ಧತಿಯ ಬಗೆಗಿನ ದೃಷ್ಟಿಕೋನವೇನು ?

------------------

( ಈ ಮುಂದೆ ಬರೆಯುವ ಸಾಲುಗಳು ನನ್ನ Hypothesis ನ ಡೈರಿಯಿಂದ ಹೆಕ್ಕಿದ ಸಾಲುಗಳು & 
ಅವು ನನ್ನ ವಿಚಾರಸರಣಿಯ Copyright ಹೊಂದಿದ್ದು, ಅವುಗಳ ಮೇಲೆ ನನ್ನ ಹಕ್ಕಿಲ್ಲ ಬದಲಿಗೆ ಹೆಮ್ಮೆಯಿದೆ. 
ಯಾಕಂದ್ರೆ ಅಧ್ಯಯನ  - ಪರಾಮರ್ಶೆ - ಅವಲೋಕನ ಇತ್ಯಾದಿಗಳಿಂದ ನಾನೇ ನೀಡಿರುವ ವ್ಯಾಖ್ಯಾನಗಳಿವು !!  )

ಮನುಷ್ಯ ಅನಾಗರಿಕತೆಯನ್ನ ತೊಡೆದು ನಾಗರಿಕನಾದ ನಂತರ, ಇಂದಿಗೂ ಇರುವ ಹಾಗೆ, ಅಂದೂ ಜಾಣ & ಕೋಣ ಎಂಬ ಎರಡು ರೀತಿಯ ಜನರಿದ್ದಿರಬಹುದು. ಅವರಲ್ಲಿ ಜಾಣರು ಮುನ್ನಡೆದರು & ಮುನ್ನಡೆಸಿದರು. ಉಳಿದ  ಕಡಿಮೆ ಬುದ್ದಿಮತ್ತೆಯವರು ಅವರನ್ನ ಹಿಂಬಾಲಿಸಿದರು. ಈ ಹಂತದಲ್ಲಿ ಇವತ್ತಿನ ದಿನ ಕೆಳವರ್ಗದಲ್ಲಿರುವವರೆಲ್ಲಾ ಕೋಣರು ಎಂಬ ಅತಿ ಜಾಣತನದ ನಿರ್ಧಾರಕ್ಕೆ ಯಾರೂ ಬರಕೂಡದು ಎಂದು ನನ್ನ ವಿನಂತಿ. ಯಾಕಂದ್ರೆ ಅಂದು ಜಾಣತನ ತೋರಿಸಿ ಇಂದು ಕೋಣರಾಗಿ ಅಲೆದಾಡುತ್ತಿರುವವರು ಇರಬೇಕಾದರೆ ಅಂದು ಹಿಂದುಳಿದು ಇಂದು ಮುಂದೆ ಬಂದಿರುವವರೂ ಇದ್ದಾರೆ. ಜೊತೆಗೆ ಇದೊಂದು Hypothesis ಮಾತ್ರ. ಹಾಗೆ ಹೆಚ್ಚು ಬುದ್ಧಿಮತ್ತೆಯುಳ್ಳವರು ಅಕ್ಷರ - ಅಭ್ಯಾಸ ಅಂತ ಮಾಡಿಕೊಂಡಿದ್ದರೆ ಉಳಿದವರು Unskilled & ಅಕ್ಷರಾಭ್ಯಾಸ ಅವಶ್ಯಕತೆ ಇರದ ಕೆಲಸಗಳಲ್ಲಿ ಮಗ್ನರಾದರು. ಬಹುಶಃ ಮುಂದೊಂದು ದಿನ ತಾವೇ ಸೃಷ್ಟಿಸಿಕೊಂಡ ಈ ಅಂತರ ಅಳಿಸಲು ಸಹಸ್ರಮಾನಗಳೇ ಸಂದು ಹೋಗುತ್ತವೆ ಎಂಬ ಅರಿವಿದ್ದರೆ ನಮ್ಮ ಪೂರ್ವಜರ್ಯಾರೂ ಅಂಥ ಆಲಸ್ಯತನ ತೋರಿಸುತ್ತಿರಲಿಲ್ಲ ಅನಿಸುತ್ತದೆ. ಇಂದಿಗೂ ಹಾಗೇ ತಾನೇ ? ಕಾಲೇಜು ದಿನಗಳಲ್ಲಿ ಆಲಸ್ಯತನ ತೋರಿಸಿ ಅಕ್ಷರಾಭ್ಯಾಸದಲ್ಲಿ ಹಿಂದೆ ಉಳಿದು, ಕೆಲಸ ಹುಡುಕುವ ಸಮಯದಲ್ಲಿ ಇರುಬರುವ ಸಮಸ್ಯೆಗಳನ್ನೆಲ್ಲ ಮೈಮೇಲೆ ಎಳೆದುಕೊಂಡು Spoken English - Leadership Skills - Seminars .. ಎಂಬ ನೂರಾ ಎಂಟು ಕಸರತ್ತು ಮಾಡುವುದನ್ನ ನಾವು ಕಾಣಬಹುದು. ಅಂತೆಯೇ ಆಗಲೂ ಆಗಿದೆ. ಅಂದಿನ ಆಲಸ್ಯ ಮುಂದೊಮ್ಮೆ ಬೃಹದಾಕಾರದ ದಾಸ್ಯವಾಗಿ ಪರಿಣಮಿಸಿದೆ. ಅಂದಿನ ಪುರೋಹಿತಶಾಹಿ ವರ್ಗ ಕೆಳಗಿನವರಿಗೆ ಓದಿಗೆ ಅವಕಾಶ ನೀಡಲಿಲ್ಲ ಎಂಬ ಬಾಲಿಶ ವಾದ ಯಾರೂ ಮಾಡಬೇಡಿ. ಯಾಕಂದ್ರೆ ನಾನೀಗ ಮಂಡಿಸಿರುವುದು - ಅಂಥ ಪುರೋಹಿತಶಾಹಿ ವರ್ಗ ಓದಿಕೊಂಡು, ಪುರೋಹಿತಶಾಹಿ ವರ್ಗ ಅನಿಸಿಕೊಳ್ಳುವ ಮುಂಚಿನ ದಿನಗಳದ್ದು. ಆಗ ಎಲ್ಲರಿಗೂ ಸಮಾನ ಅವಕಾಶಗಳಿರಲಿಕ್ಕೂ ಸಾಕಲ್ವೇ ?

ಹೀಗೆ ಸೃಷ್ಟಿಯಾದ ಅಂತರಗಳು ವಿವಿಧ ಹಂತಗಳನ್ನ ದಾಟಿ ನಾಲ್ಕು ವರ್ಗವಾಗಿ ವಿಂಗಡನೆ ಯಾದದ್ದು ನಿಮಗೂ ತಿಳಿದಿದೆ. ನಮ್ಮ ಜಾನಪದದಲ್ಲಿ ತಿಳಿದವರಿಗೆ ಗೌರವ ನೀಡಿ ಅವರ ನಡೆ-ನುಡಿಗಳನ್ನ ಹೇಗೆ ಪಾಲಿಸುತ್ತಿದ್ದರೋ ಅಂತೆಯೇ - " ತಿಳಿದವರು ಮನುಕುಲವನ್ನ ನಾಲ್ಕು ಪಂಗಡಗಳಾಗಿ ವಿಂಗಡಿಸಿರಬೇಕಾದರೆ ನಾವೂ ನಮ್ಮೊಳಗೇ ನಾಲ್ಕಾರು ಪಂಗಡಗಳನ್ನ ವಿಂಗಡಿಸಿಕೊಳ್ಳೋಣ " ಎಂಬ ಊಹೆ ಮೂಡಿರಲಿಕ್ಕೂ ಸಾಕು. ಆ ಊಹೆಗೆ ಇನ್ನಿಲ್ಲದ ಮಾನ್ಯತೆ ಸಿಕ್ಕು ಇಂದಿನ ಅಗಣಿತ ಜಾತಿಗಳು ಆ ಊಹೆಯ Brain Child ಗಳಾದವು.

ಪೌರೋಹಿತ್ಯದ ಮೂಲಕ ಪಾರಮಾರ್ಥಿಕ ಲೋಕದ ವ್ಯಾಪಾರಗಳಿಗೆ ಸಾಮಾನ್ಯರು & ಪರಮಾತ್ಮನ ನಡುವಿನ ಕೊಂಡಿಯಂತಿರುವವ ಬ್ರಾಹ್ಮಣ - ಯುದ್ಧ ಕಲೆ ಕಲಿತು ದೇಶ ರಕ್ಷಣೆ ಮಾಡುವವ ಕ್ಷತ್ರಿಯ - ವ್ಯಾಪಾರ ವೃತ್ತಿಯ ಮೂಲಕ ಸರ್ವರಿಗೂ ದಿನನಿತ್ಯದ ಲೌಕಿಕ ಬೇಡಿಕೆಗಳನ್ನ ಪೂರೈಸುವವ ವೈಶ್ಯ - ತನಗರಿವಿಲ್ಲದೆಯೇ, ದೇವರು ಅತಿಯಾಗಿ ಮೆಚ್ಚುವ, ನಿಸ್ವಾರ್ಥ ಸೇವೆಯ ಮೂಲಕ ಸರ್ವರ ಹಿತಕ್ಕಾಗಿ ಅವರ ಬೇಡಿಕೆಗಳ ಬಹುಪಾಲನ್ನು ಪೂರೈಕೆ ಮಾಡುವವ ಶೂದ್ರ.

ಎಂದು ಜ್ಞಾನಿಗಳು ವಿಂಗಡಿಸಿರಬೇಕಾದರೆ

ಪೌರೋಹಿತ್ಯದ ಸಮಯದಲ್ಲಿ ವಿಷ್ಣುವನ್ನ ಆರಾಧಿಸುವ ವೈಷ್ಣವ - ಐದು ದೇವತೆಗಳ ಸಾರಭೂತ ಸಂಯೋಜನೆಯಲ್ಲಿ ನಂಬಿಕೆಯಿಟ್ಟವರು ಸ್ಮಾರ್ತ ರೆಂದೂ ವಿಂಗಡನೆಯಾದರು. ಕ್ಷತ್ರಿಯರೂ ತಮ್ಮ ಕ್ಷಾತ್ರತೆಯನುಸಾರ ತಮ್ಮನ್ನೇ ತಾವು ವಿಂಗಡಿಸಿಕೊಂಡರು. ವೈಶ್ಯರೂ ತಾವು ವಿಕ್ರಯ ಮಾಡುವ ಪದಾರ್ಥದ ಆಧಾರದ ಮೇಲೆಯೇ ತಮ್ಮನ್ನ ತಾವು ವಿಂಗಡಿಸಿಕೊಂಡರು. ಶೂದ್ರರೂ ಮೇಲಿನವರನ್ನೇ ಅನುಸರಿಸಿದರು.

ಮೇಲ್ಕಂಡಂತಿರುವ ಜಾತಿ ಪದ್ಧತಿಯನ್ನ ಗಮನಿಸಿದಾಗ- ಒಂದು ಪಂಗಡದವರು ಇನ್ನೊಂದು ಪಂಗಡದವರ ವಿಂಗಡನೆಗೆ ಮುಂದಾಗಿರುವುದನ್ನ ನಂಬಲಿಕ್ಕೆ ಸಾಧ್ಯವಿಲ್ಲ ಅಲ್ಲವೇ ? ಬ್ರಾಹ್ಮಣರನ್ನ ಶೂದ್ರರು ವಿಂಗಡಿಸಿರಲಿಕ್ಕೆ ಸಾಧ್ಯವಿಲ್ಲ. ಅಂತೆಯೇ ವೈಶ್ಯರನ್ನ ಕ್ಷತ್ರಿಯರು. ಹೀಗಿರುವಾಗ ಯಾರೋ ಪ್ರಾಜ್ಞರು ತಮ್ಮ ಬುದ್ಧಿಮತ್ತೆ ಬಳಸಿ ಸಮಸ್ತ ಹಿಂದೂ ಧರ್ಮ ಪರಿಪಾಲಕರನ್ನ ನಾಲ್ಕು ವಿಭಾಗಗಳನ್ನಾಗಿ ವಿಂಗಡಿಸಿದರೆ, ನಂತರ ಬಂದ ಪ್ರಾ-ಪ್ರಾಜ್ಞರು ತಮ್ಮನ್ನೇ ತಾವು ಇನ್ನೂ ವಿಭಜಿಸಿಕೊಂಡರು. ಇಂದು ನಾವು ಮುಟ್ಟಿರುವ ಸ್ಥಿತಿ ನೋಡಿದರೆ ವಿಭಜಿಸಲು ಈಗ ಉಳಿದುಕೊಂಡಿರುವುದು ನಮ್ಮ ಕೈಕಾಲುಗಳು - ಕಿವಿಮೂಗುಗಳು ಮಾತ್ರ ಅನಿಸುತ್ತದೆ ಅಲ್ಲವೇ ?

ಹೀಗೆ ಬೆಳೆದು ಬಂದಿರುವ ಜಾತಿ ಪದ್ಧತಿಯಲ್ಲಿ :

ವಿಂಗಡನೆ ಮೂಲಕ ಬ್ರಾಹ್ಮಣನಾಗಿರುವವ - ಬ್ರಾಹ್ಮಣ ಪದದ ಅರ್ಥ ಪಾಲಿಸದೇ ತಾನು ಮೇಲ್ವರ್ಗದವ ಎಂದು ಬೀಗಿದರೆ ಅರ್ಥವಿದೆಯೇ ? ಅಂತೆಯೇ ಶೂದ್ರನಾಗಿರುವವ - ತಾನು ಎಲ್ಲ ಸುಸಂಸ್ಕೃತ ನಡವಳಿಕೆಗಳನ್ನ ರೂಢಿಸಿಕೊಂಡಿದ್ದರೂ ತನ್ನ ಪೂರ್ವಜರ ಕಾಣಿಕೆಯಾಗಿ ಬಂದಿರುವ ಶೂದ್ರತನದ ಹಣೆಪಟ್ಟಿ ಇಟ್ಟುಕೊಂಡು ಅಲೆದಾಡುವುದು ತಪ್ಪಲ್ಲವೇ ? ಹಿಂದೆ ಮುತ್ತಜ್ಜ ಯಾವುದೋ ವ್ಯಾಪಾರ ಮಾಡುತ್ತಿದ್ದ ಎಂಬ ಕಾರಣಕ್ಕೆ ತಾನೊಂದು ಜಾತಿಗೆ ಸೀಮಿತವಾಗಿ, ಇಂದು ಆ ವ್ಯಾಪಾರವೇ ಇಲ್ಲವಾಗಿ ಶತಮಾನ ಕಳೆದಿದ್ದರೂ ಅದೇ ಜಾತಿಯಲ್ಲೇ  ಬೇರು ಇಳಿಬಿಟ್ಟುಕೊಂಡು, ಅದೇ ನನ್ನ Identity ಎನ್ನುವುದು ಸಮಂಜಸವೇ ?

" ಇದೆಲ್ಲ ಮಾತಾಡುವುದಕ್ಕೆ ಚೆಂದ. ನಿಜಜೀವನದಲ್ಲಿ ಪಾಲನೆ ಕಷ್ಟ. ಬಂದ ಇವನು ಹೇಳೊದಕ್ಕೆ. ಹೋಗಲೇ .. ? " ಅಂತ ನಿಮ್ಮಲ್ಲಿ ಯಾರಾದರೂ Temper ಕಳೆದುಕೊಂಡಿದ್ದರೆ...

ನಿಮ್ಮ ಇಂದಿನ ಈ 21ನೇ ಶತಮಾನದ ಇದೇ ವರ್ಷದ ಒಂದು ದಿನದ ಕಾರ್ಯಕಲಾಪಗಳನ್ನ ಸೂಕ್ಷ್ಮವಾಗಿ ಅವಲೋಕಿಸಿ. ಹಾಗೆ ಅವಲೋಕಿಸಿದ ದಿನದ ಯಾವ ಯಾವ ಭಾಗದಲ್ಲಿ ನಿಮ್ಮ ಜಾತಿ ನಿಮ್ಮನ್ನ ಇತರರಿಂದ ಪ್ರತ್ಯೇಕಿಸಿತು ಎಂಬುದನ್ನ ಗುರುತು ಮಾಡಿಟ್ಟುಕೊಳ್ಳಿ. ಆಗ ಬಹುಶಃ ನನ್ನ ವಾದ ನಿಮಗೆ ಸಮಂಜಸ ಅನ್ನಿಸಬಹುದು.
  • ಬೆಳಿಗ್ಗೆ ಎದ್ದು ಸ್ನಾನ ಮಾಡುವವರೆಗೆ ಜಾತಿಯ ಅಡೆ ತಡೆ ಇಲ್ಲ. 
  • ನಂತರ ಬರುವ ಪೂಜಾ ವಿಧಾನ ಅತಿ ಪ್ರಮುಖ ಜಾತಿ ಬಿಂಬಕ ವಾದ. (ಸದ್ಯಕ್ಕೆ ಇದನ್ನ ವಿಲೇ ಇಡೋಣ)
  • ನಂತರದ ತಿಂಡಿ. ಅಲ್ಲಿ ಇಣುಕುವುದು ಜಾತಿಯ ಆಹಾರವಲ್ಲ. ಬದಲಿಗೆ ಭೌಗೋಳಿಕ ವೈವಿಧ್ಯತೆ & ಹಣಕಾಸಿನ ಸಂಪನ್ನತೆ ಬಿಂಬಿಸುವ ಆಹಾರ. ಉಳಿದೆಡೆ ಮೀನೆಂದರೆ ಮೂಗು ಮುರಿಯುವ ಬ್ರಾಹ್ಮಣ ಕರಾವಳಿಯಲ್ಲಿ  ಹೊಳೆಬಾಳೇಕಾಯಿ ಹೆಸರಲ್ಲಿ ತಿನ್ನುವುದಿಲ್ಲವೇ ? ಸಂಪತ್ತು ಕ್ರೂಢೀಕರಿಸಿರುವ ಇಂದಿನ ಶೂದ್ರ Identity ಯ ಅಧಿಕಾರಿಯೊಬ್ಬ ಸಂಪ್ರದಾಯ ಪೂರಿತ ಅಚ್ಚುಕಟ್ಟಾದ ಆಹಾರ ಸೇವಿಸಿದರೆ ಬಡವನಾಗಿರುವ ಕ್ಷತ್ರಿಯನೊಬ್ಬ ತಂಗಳನ್ನವನ್ನೂ ತಿನ್ನಬಹುದು. ಇಲ್ಲಿ ಜಾತಿಯನ್ನ ಹೇಗೆ ಗುರುತಿಸೋಣ ? 
  • ನಂತರ ಬರುವುದು : ಕಚೇರಿ ಕೆಲಸ ಕಾರ್ಯಗಳು - ಶಾಲಾ ಕಾಲೇಜು ಶಿಕ್ಷಣ. 
  • ಈ ಶತಮಾನದ ಶಾಲೆಯ ಚಟುವಟಿಕೆಗಳಲ್ಲಿ ಜಾತಿಯನ್ನ ಗುರುತಿಸುವವ ಮೂರ್ಖನ ಗುರು. 
  • ಇನ್ನು ಕಚೇರಿಯ ಕೆಲಸಗಳನ್ನ ಸಾಮಾನ್ಯವಾಗಿ ಅವರವರ ವಿದ್ಯಾರ್ಹತೆ & ವ್ಯಕ್ತಿತ್ವದ ಸಾಮರ್ಥ್ಯಕ್ಕನುಗುಣವಾಗಿ ನಿರ್ವಹಿಸುತ್ತಿದ್ದಾರೆ. ಇಲ್ಲಿ ಮೀಸಲಾತಿ ಬಳಸಿಕೊಂಡು ವಿದ್ಯಾರ್ಹತೆಯಲ್ಲಿಯೂ ಮಾಫಿ ಪಡೆದು ಕೆಲವರು ಮುಂದೆ ಬಂದಿದಾರೆ ಅಂತ ಹಲವರು ಅಲವತ್ತುಕೊಂಡರೆ ಅವರನ್ನ ಸಂತೈಸಬಹುದು. ಹೇಗಂದ್ರೆ 
ಜಾತಿ ಪದ್ಧತಿ ರೂಪುಗೊಂಡು, ಸ್ವಾತಂತ್ರ್ಯ ಬಂದು ಸಂವಿಧಾನ ಅಂಗೀಕರಿಸುವವರೆಗೆ  ಏನಿಲ್ಲವೆಂದರೂ 3000 ವರ್ಷಗಳ ಅಂತರವಿದೆಯೆನ್ನುವುದನ್ನ ನಾವುಗಳು ಒಪ್ಪಿಕೊಳ್ಳಬೇಕು. ಹಾಗಿರುವಾಗ ಮೇಲಿನ ಪ್ಯಾರಾದಲ್ಲಿ ಅಲವತ್ತುಕೊಂಡವರು 3000 ವರ್ಷಗಳ ವರೆಗೆ ಅನುಭವಿಸಿದ ಮೇಲ್ತನದ ಸುಖ ಸರಿ, ಈಗ ಇವರು 60 ವರ್ಷಗಳಿಂದ ಅನುಭವಿಸುತ್ತಿರುವ ಸೌಕರ್ಯ ತಪ್ಪು ಎಂದರೆ ಯಾವ ನ್ಯಾಯ. 50 ಪಟ್ಟು ವ್ಯತ್ಯಾಸ ಬರುತ್ತಲ್ರೀ ??
" ಗುರುಗಳೇ, ಆಗ ನಾವಿರಲಿಲ್ಲ. ನಮ್ಮ ಅಜ್ಜಂದಿರು ಮಾಡಿದ ತಪ್ಪಿಗೆ ನಾವು ಶಿಕ್ಷೆ ಅನುಭವಿಸಬೇಕಾ ? ಜೊತೆಗೆ ಇದು 21ನೇ ಶತಮಾನ. ಹಿಂದೆ ಆದದ್ದು ಆಗಿ ಹೋಯಿತು. ನಾವಿಂದು ಸಮಾನತೆ ಸಾರುತ್ತಾ ಎಲ್ಲರೂ ಒಟ್ಟಿಗೆ ಬಾಳೋಣ. ಅದು ಬಿಟ್ಟು Reservation Support ಮಾಡಿದರೆ ತಪ್ಪು ತಾನೇ ? "  ಅಂತ ನಿಮ್ಮ ಪ್ರಶ್ನೆಯಾದರೆ, ಖಂಡಿತ ಹೌದು ಎಂಬುದೇ ಸಮಂಜಸ ಉತ್ತರವಾದೀತು.
ಹೌದು. ಇಂದು ಜಾತಿಯ ವಿಷಯವನ್ನ ಮುಂದಿಟ್ಟುಕೊಂಡು ಮೀಸಲಾತಿ ಪದ್ಧತಿ ಸರಿ-ತಪ್ಪು ಎಂದು ಪುಸ್ತಕದಲ್ಲಿ ವಿಮರ್ಶೆ ಮಾಡುವ ಕಾಲವಲ್ಲ. ಬದಲಿಗೆ ನಿಜಜೀವನದಲ್ಲಿ ಜಾತಿ ಎಂಬ ಅಂಶದ ಗೌಣತೆಯನ್ನ ಅಕ್ಷರಸ್ತರಿಗೆ, ಅನಕ್ಷರಸ್ತರಿಗೆ & ಮುಖ್ಯವಾಗಿ ಅಕ್ಷರಸ್ತ ಅನಕ್ಷರಸ್ತರಿಗೆ ಮನದಟ್ಟಾಗುವಂತೆ ತಿಳಿಹೇಳುವ ಕೆಲಸವಾಗಬೇಕಿದೆ. ( ತನ್ನಿಮಿತ್ತವೇ ಈ ಲೇಖನ ಅನ್ನುವುದನ್ನ ಪಾಠಕ ಮಹಾಶಯ ಗಮನಿಸಬೇಕು. ) ಈ ಕೆಲಸವನ್ನ ಮಾಡಬೇಕಿರುವುದು, ಮೇಲಿನ ಪ್ಯಾರಾದಲ್ಲಿರುವ ಪ್ರಶ್ನೆಯ ಮನೋಭಾವ ಹೊಂದಿರುವವರು. ಪ್ರತಿ ಹತ್ತು ವರ್ಷಗಳಿಗೊಮ್ಮೆ ಸಂವಿಧಾನ ಪ್ರದತ್ತವಾಗಿರುವ ಜಾತಿ ಆಧಾರದ ಮೀಸಲಾತಿಯನ್ನ ಅಳಿಸುವ ಇಲ್ಲಾ ಉಳಿಸುವ ಅಧಿಕಾರವನ್ನ ನಮ್ಮ ಸಂಸತ್ತಿಗಿದೆ ಅಂತ ಹೇಳಿ, ರಾಜಕಾರಣಿಗಳು ಈ ದಶಕದಲ್ಲಿ ಮಾಡಿಯಾರು ಮುಂದಿನ ದಶಕದಲ್ಲಿ ಮಾಡಿಯಾರು ಅಂತ ಚಾತಕ ಪಕ್ಷಿಯಂತೆ ಕಾಯುತ್ತಾ 6 ದಶಕಗಳೇ ಸಂದುವಲ್ರೀ ? ಪ್ರಶ್ನೆ ಮಾಡುವ ಮನೋಭಾವವಿದ್ದಲ್ಲಿ ಆ ರಾಜಕಾರಣಿಗಳಿಗೆ ಹೋಗಿ ಪ್ರಶ್ನೆ ಮಾಡಬಹುದಲ್ಲಾ ? " ಯಾಕೆ ಸ್ವಾಮಿ ? ಈ ದಶಕದಲ್ಲೇ ಜಾತಿ ಪದ್ಧತಿಗೆ ಅಂತ್ಯ ಹಾಡುವ ಅವಕಾಶವನ್ನ ಯಾಕೆ ಕಳೆದುಕೊಂಡ್ರಿ ? "  ಅಂತ. ಅದಾಗಲ್ಲಾ ಅಲ್ಲ ? ಹಾಗಿದ್ದರೆ ಬರುವ 10 ವರ್ಷಗಳಲ್ಲಿ ಜಾತಿ ಪದ್ಧತಿ ಎಂದರೆ ಎಷ್ಟು ಬಾಲಿಶ ಪದ್ಧತಿ ಮಾಡಬೇಕಂದ್ರೆ ಯಾರಾದರೂ ತಾನು ಈ ಜಾತಿಯವ ಅಂತ ಹೇಳಿಕೊಳ್ಳಲು ತಾನೊಬ್ಬ ನಪುಸಂಕ ಅಂತ ಹೇಳುವಾಗ ಇರುವ ತುಮುಲಗಳು ಬರಬೇಕು ಅವನ ಮನಸಲ್ಲಿ !!! ಮಾಡ್ತೀರಾ ? ಆ ಹುಮ್ಮಸ್ಸಿದೆಯಾ ?

ಒಳ್ಳೇದು. ಹುಮ್ಮಸಿದ್ದರೆ ಅದಕ್ಕಿಂತ ಖುಷಿ ಇನ್ನೊಂದಿದೆಯಾ ? ಸರಿ. ಎಲ್ಲಿದ್ವಿ ನಾವು ?

  • ಆಫೀಸ್ ಕೆಲಸ ಮುಗೀತು. ಸಂಜೆಯ Walk ನಲ್ಲಿ ಸ್ವಜಾತಿ ಯವರೊಂದಿಗೆ ಮಾತ್ರ ನಿಮ್ಮ walk-talk ಇದ್ರೆ ಅದು ನಿಮ್ಮ ವೈಯಕ್ತಿಕ ಸಂಕುಚಿತತೆಯೇ ಹೊರತು ಸಾಮಾನ್ಯೀಕರಿಸಬಹುದಾದ ವಾದವಲ್ಲ.
  • ಇನ್ನು ಸಂಜೆಯ ಅತಿ ಮುಖ್ಯ ಕಾರ್ಯಕ್ರಮವಾಗಿರುವ ದೂರದರ್ಶನ ವೀಕ್ಷಣೆ. ಇಲ್ಲಿ ನೀವು Bay Watch ಆದ್ರೂ ನೋಡಿ. KingFisher Calendar Making ಆದ್ರೂ ನೋಡಿ. ಕಡೆಗೆ ಮಹಾತ್ಮರ ಮಹಾತ್ಮೆ ಸಾರುವ ಆಧ್ಯಾತ್ಮಿಕ ಧಾರಾವಾಹಿಯಾದ್ರೂ ನೋಡಿ. ಅಲ್ಲೇನು ಜಾತಿ ಬಿಂಬನ ಆಗುತ್ಯೇ ? ನಮ್ಮ ಪುಣ್ಯ ಅಂದ್ರೆ ಜಾತಿ ಆಧಾರಿತ ಟಿವಿ ಚಾನೆಲ್ ಗಳು ಇನ್ನೂ ಬಂದಿಲ್ಲ.
  • ನಿದ್ರೆಗ್ಯಾವ ಜಾತೀರೀ .. ?!!

ಇವೆಲ್ಲ ಅಂಶಗಳನ್ನ ಗಮನಿಸಿದಾಗ... ನಮ್ಮ ದಿನದ ಕಾರ್ಯಕಲಾಪಗಳಲ್ಲಿ ಮೇಲೆ ವಿಲೇ ಇಟ್ಟಿರುವ ದಿನದ 15 ನಿಮಿಷದ ಕಲಾಪವಾದ ಪೂಜಾವಿಧಾನವೊಂದರ ಮೂಲಕ ನಮ್ಮ ಜಾತಿಯನ್ನ ನಾವಿಂದು ಜೀವಂತವಾಗಿರಿಸಿಕೊಂಡಿದೀವಿ ಅಂತಾಯ್ತು ತಾನೇ ? ಹಾಗಿದ್ರೆ, ನಿತ್ಯ ಪೂಜೆಯನ್ನ ನಮ್ಮ ಧಾಟಿಯಲ್ಲೇ ಮಾಡುವ ಸಲುವಾಗಿ ಮಾತ್ರ ನಮ್ಮ ಜಾತಿಯ ಸೊಸೆಯನ್ನ ಆರಿಸಿದಂತಾಗುವುದಿಲ್ಲವೇ ? ಎಂಥ Wrong Calculation ಇದು. ಇನ್ಫಿ , ವಿಪ್ರೋ ದಲ್ಲಿ ಕೆಲಸ ಮಾಡುವ ಅನೇಕರೂ ಜಾತಿ ಲೆಕ್ಕದಲ್ಲಿ ಮಡದಿಯರನ್ನ ಕಟ್ಟಿಕೊಂಡು ತಮ್ಮ ಎದುರಿಗೆ ಇದ್ದ Fabulous ಅವಕಾಶಗಳನ್ನ ಕಳೆದುಕೊಂಡಿರುವವರು ಇತ್ತಕಡೆ ಗಮನ ಹರಿಸಬೇಕು. ಇಂಥದೇ Wrong Estimation ಅನ್ನ ತಮ್ಮ Project ಗಳಲ್ಲಿ ಎಂದಾದ್ರೂ ಅವರು ಮಾಡಿದ್ರಾ ? ಮಾಡ್ತಾರಾ ? ಇಲ್ಲ ತಾನೇ ? " ಮತ್ತೇಕೆ ಜೀವನವೆಂಬ ಅತಿ ಮಹತ್ವದ Project ನಲ್ಲಿ ತಪ್ಪು Calcutation ಮಾಡಿದ್ರಿ ಸ್ವಾಮಿ ? " ಅಂತ ಕೇಳಬಹುದು ತಾನೇ ?

ಹೀಗಿರುವ ಜಾತಿ ವ್ಯವಸ್ಥೆ ನಮಗೆ ಬೇಕೇ ? ಅನ್ನೋದು ಇಂದಿನ ಪ್ರಶ್ನೆ. ಆದರೆ ನಗ್ನಸತ್ಯಗಳು ಬೇರೆಯೇ ಇವೆ. ಅವನ್ನ ಎದುರಿಸೋದು ಲೇಖನ ಬರೆದಷ್ಟು ಸುಲಭ ಅಲ್ಲ ಅಂತ ನನಗೂ ಗೊತ್ತು. ಆದರೆ " ನನ್ನೊಬ್ಬನಿಂದ ಏನು ಮಾಡಲು ಸಾಧ್ಯ ? " ಎನ್ನುವ ಋಣಾತ್ಮಕ ಚಿಂತನೆಯನ್ನ ಬಿಟ್ಟು " ನನ್ನಿಂದ ಏನೇನು ಮಾಡಲು ಸಾಧ್ಯ " ಅಂತ ಧನಾತ್ಮಕವಾಗಿ ಯೋಚಿಸಿ ಕಾರ್ಯಪರರಾಗುವುದಕ್ಕೆ ಇದು ಸಕಾಲ. ಇಂದಿನ ತಂದೆಗೆ ಜಾತಿ ವ್ಯವಸ್ಥೆಯ ಬಗ್ಗೆ ಅಕ್ಕರೆಯಿದ್ದರೆ ಮಗನೂ ಅದಕ್ಕೆ ನೀರೆರೆಯಬೇಕು ಅಂತ ನಿಯಮ ಮಾಡಿಕೊಂಡರೆ, ಅದು ತಪ್ಪು. ಮಗನಾದವನು ಅವನಿಗೆ ತಿಳಿ ಹೇಳುವ ಸಾಹಸಕ್ಕೆ ಕೈಹಾಕುವ ಬದಲು ತಾನು ಆ ಜಾತಿ ವ್ಯವಸ್ಥೆಗೆ ಕೊನೆ ಹಾಡಬಹುದಲ್ಲಾ ?

ತಾನು ಮೊದಲ ನೋಟದಲ್ಲೇ ಇಷ್ಟಪಟ್ಟ ಹುಡುಗಿಯ ಜಾತಿ ವಿಚಾರಿಸಿ ಇಷ್ಟಪಟ್ಟಿರುವುದಿಲ್ಲ. ನಂತರ ಮನೆಯವರು ಒಪ್ಪುವುದಿಲ್ಲ ಎಂಬ ಕಾರಣಗಳು ಇತ್ತೀಚಿನ ದಿನಗಳಲ್ಲಿ  ಕರಗುತ್ತಿದ್ದರೂ ಹುಡುಗನ ಜಾತಿ ಯಾವುದೆಂದು ಮುಂಚೆಯೇ ತಿಳಿದು ಅವನಿಗೆ ಗಾಳ ಹಾಕಿದ ಹುಡುಗಿಯರ / ಹುಡುಗರ ಉದಾಹರಣೆಗಳನ್ನೂ ನಾನು ಕಂಡಿದೀನಿ. ಇವಕ್ಕೂ ಮಿಗಿಲಾಗಿ : ಒಂದು ಹುಡುಗ ಮೇಲ್ವರ್ಗದ ಹುಡುಗಿಯನ್ನ ಇಷ್ಟಪಟ್ಟು ಮದುವೆಯಾಗಿದ್ದರೆ, ಹುಡುಗ ಅಂತರ್ಜಾತಿ ವಿವಾಹ ಆದಂತೆ ಭಾಸವಾಗೋದೇ ಇಲ್ಲ ಅನೇಕರಿಗೆ. ಬದಲಿಗೆ ಹುಡುಗಿಯದು ಮಾತ್ರ ಅಂತರ್ಜಾತಿ ವಿವಾಹ. ಅವರ ಲೆಕ್ಕದಲ್ಲಿ ಮೇಲ್ವರ್ಗದವರು ಕೆಳವರ್ಗದವರೊಂದಿಗೆ ಮದುವೆ ಆದರೆ ಅದು ಮಾತ್ರ ಅಂತರ್ಜಾತಿ  ವಿವಾಹ. Reverse Equation ಕೆಲಸ ಮಾಡೋದಿಲ್ಲ ಅವರ ಮನಸಲ್ಲಿ. ಜಾತಿ ಮರೆತು ಇಷ್ಟಪಟ್ಟು ಕೊನೆವರೆಗೂ ಸುಖವಾಗಿರುವ ಉದಾಹರಣೆಗಳೂ ನಮ್ಮ ಮುಂದಿರಬೇಕಾದರೆ ನಾವೇಕೆ ಹಿಂಜರಿಯಬೇಕು. ಇದಕ್ಕೂ ಹೆಚ್ಚಾಗಿ ಯಶಸ್ಸಿನ ಉದಾಹರಣೆಗಳನ್ನ ಇಟ್ಟುಕೊಂಡೇ ಒಂದು ಕೆಲಸಕ್ಕೆ ಕೈ ಹಾಕೋದು ಎಂಥ ಮೂರ್ಖತನ.
ಹಿಂದೊಮ್ಮೆ ಒಂದೇ ತರಹದ ಎಲೆ ಬಳಸಿ ಮಾನ ಮುಚ್ಚಿಕೊಂಡು ತಿರುಗಾಡುತ್ತಿದ್ದ ನಮ್ಮಲ್ಲಿ ಈ ವ್ಯತ್ಯಾಸ ಬಂದಿದ್ದೆಲ್ಲಿಂದ ? ಬುದ್ಧಿಮತ್ತೆಯ ವ್ಯತ್ಯಾಸವೊಂದೇ ಈ ಮಟ್ಟದ ಅಂತರಗಳನ್ನ ಸೃಷ್ಟಿಸಿದ್ದು ನಿಜವಾಗಿದ್ದಲ್ಲಿ, ಹಿಂದಿನ ತಲೆಮಾರಿನ ಭಾರತೀಯರಲ್ಲಿ ಬುದ್ಧಿಮತ್ತೆಯ ಜೊತೆಗೆ ಮಿಳಿತವಾಗಿದ್ದ ಮಾನವೀಯತೆ ಇಂದಿನ ಭಾರತೀಯರಲ್ಲಿ ಕಡಿಮೆಯಾಗುತ್ತಾ ಬಂದಿದೆ. ಅಂದರೆ ಮುಂಬರುವ ಪೀಳಿಗೆ ಯಾವ ಮಟ್ಟದ ಅಂತರ ಸೃಷ್ಟಿಸಿಕೊಂಡು ಜೀವಿಸಬಹುದು ?? ಜಾತಿ ಪದ್ಧತಿ ಕಳೆದು ಇನ್ಯಾವ ಪದ್ಧತಿ ಶುರುವಾಗಬಹುದು ? ಇದಕ್ಕೆ ಉತ್ತರವನ್ನ Google ನಲ್ಲೇ ಹುಡುಕಬೇಕು.
------------------

ಇದಿಷ್ಟು ಜಾತಿ ಪದ್ಧತಿಯ ಬೇರು ಬಿಳಲುಗಳನ್ನ ನಾನು ಅರ್ಥೈಸಿರುವ ಪರಿ. ಮೇಲ್ಕಂಡ ವಾದಗಳನ್ನ ಓದುಗರನ್ನ ಆರೋಪಿ ಸ್ಥಾನದಲ್ಲಿಟ್ಟು ನಾನು ನ್ಯಾಯಾಧೀಶರ ಹಾಗೆ ತಿಳಿಹೇಳುತ್ತಿಲ್ಲ. ಬದಲಿಗೆ ಮೇಲಿನ ಪ್ರತಿ ಸಾಲೂ ನನ್ನ ಮನಸಲ್ಲಿ ನಡೆದ ವಾದ ವಿವಾದಗಳ Hearing ನಂತರ ನಾನೇ ಸಿದ್ಧಪಡಿಸರುವ ವಿಚಾರಣಾ ವರದಿಯಿಂದ ಹೆಕ್ಕಿದ್ದು. ಇಲ್ಲಿ ನಾನೇ ಆರೋಪಿ - ನಾನೇ ವಕೀಲ - ನಾನೇ ನ್ಯಾಯಾಧೀಶ. ಇವಿಷ್ಟೂ ಜಾತಿ ಪದ್ಧತಿಯ ಬಗೆಗಿನ ನನ್ನ ಇವತ್ತಿನ(As On Today) ನಿಲುವು (Stand) ಗಳು. ಇಷ್ಟೆಲ್ಲಾ ಮಾತಾಡಿದ ನಾನೇನೂ ಸಾಚಾ ಅಲ್ಲ. ಯಾವತ್ತೂ ಜಾತಿ ವಿಚಾರ ಮಾತಾಡೇ ಇಲ್ಲ ಅಂತ ಅಲ್ಲ. ಅನೇಕ ಸಾರಿ ನನ್ನ ಮನಸಲ್ಲಿ ಅದು ಸುಳಿದು ಹೋಗಿದೆ. ಆದರೆ ತಿಳುವಳಿಕೆ ಬೆಳೆದ ಹಾಗೆ ಅದನ್ನ ಕಡಿಮೆ ಮಾಡಿಕೊಳ್ಳುತ್ತಾ ಬಂದಿದೀನಿ. ತೀರ ನಿನ್ನೆ ಮಧ್ಯಾನ್ಹವೂ ಏನೋ ಒಂದು ವಿಷಯಕ್ಕೆ ಸ್ನೇಹಿತನ ಹತ್ತಿರ ಯಾರದೋ ಬಗ್ಗೆ ಜಾತಿಯ ವಿಚಾರವಾಗಿ ಹಗುರವಾಗಿ ಮಾತಾಡಿದ್ದೆ. ಆದರೆ ಸಂಜೆ ನನ್ನ ಮನಕ್ಕೆ ನಾಟುವ ಹಾಗೆ ನನ್ನ ಆಪ್ತರೊಬ್ಬರು ನನಗೇ ನೀಡಿದ Shock Treatment ನಿಂದ ಎಚ್ಚೆತ್ತುಕೊಂಡು ನನ್ನ ಜಾತಿ ಯಾವುದೆಂದು ಖಚಿತಪಡಿಸಿಕೊಳ್ಳುವ ಸಲುವಾಗಿ ಚಿಂತನೆ ಮಾಡಬೇಕಾಯಿತು. ಚಿಂತನೆಯ ಕೊನೆಯಲ್ಲಿ ಮೇಲು ಕೀಳಿಲ್ಲದ ಮನುಷ್ಯ ಜಾತಿಗೆ ಸೇರುವ ನಿರ್ಧಾರ ಮಾಡಿದೆ.  ಈ ಲಹರಿ ಆ ವಿಚಾರಮಂಥನದ ಉಧೃತ ಭಾಗವಷ್ಟೇ. ಇವೆಲ್ಲಕ್ಕೂ ಮಿಗಿಲಾಗಿ ಈ ಉದ್ದಾಮ ಲೇಖನದ ಕೊನೆಯ ಸಾಲುಗಳನ್ನ ಬರೆಯುತ್ತಿರುವ ಈ ಹೊತ್ತಿನಲ್ಲೂ ನನ್ನಲ್ಲಿ ಅನೇಕ ಉತ್ತರವಿಲ್ಲದ ಪ್ರಶ್ನೆಗಳಿದಾವೆ. ಉತ್ತರವಿಲ್ಲ ಅಂದ್ರೆ ರೇವಪ್ಪನ ಬಳಿ ಇಲ್ಲ ಅಂತ. ಬೇರೆ ಯಾರೋ ತಿಳಿದವರು ಆ ಪ್ರಶ್ನೆಗಳಿಗೆ ಈಗಾಗಲೇ ಉತ್ತರಗಳನ್ನ ನೀಡಿರಲೂಬಹುದು. ಮತ್ತು ನನಗೆ ಅವು Readymade ಆಗಿ ಸಿಗಲೂಬಹುದು. ಆದರೆ, ನಾನು ನನ್ನ ಜೀವನದಲ್ಲಿ ಎದುರಾಗುವ ಬಹುಪಾಲು ಸಮಸ್ಯೆಗಳಿಗೆ & ಪ್ರಶ್ನೆಗಳಿಗೆ ನಾನೇ ಖುದ್ದಾಗಿ ವಿಮರ್ಶಿಸಿ ಉತ್ತರ ಹುಡುಕಬೇಕೆಂಬ ಪ್ರಾಮಾಣಿಕ ಪ್ರಯತ್ನಕ್ಕೆ ಕಟ್ಟುಬಿದ್ದಿದ್ದೇನೆ. ಮುಖ್ಯವಾಗಿ 'ಜೀವನ' ಎಂಬ ಮೂರಕ್ಷರದ ಪದ್ಯವನ್ನ ನನ್ನ ತಿಳುವಳಿಕೆಗೆ ನಿಲುಕುವ ಹಾಗೆ ಅರ್ಥೈಸಿಕೊಂಡು ಓದುವ ಪ್ರಯತ್ನದಲ್ಲಿದ್ದೇನೆ. ಯಾರೋ ವಿಮರ್ಶಿಸಿ ಅರ್ಥೈಸಿ ಬಿಟ್ಟು ಹೋಗಿರುವ ಜೀವನದ ಅಚ್ಚಿನಲ್ಲಿ ( " ಮತ್ತೇನಕ್ಕೆ ಮೇಲೆ ಕುವೆಂಪು ಅವರ ವಿಶ್ವಮಾನವನ ಉಲ್ಲೇಖ ? "  ಅಂತ ನಿಮ್ಮ ಪ್ರಶ್ನೆಯಾದರೆ ,  ನನ್ನ ಉತ್ತರ : " ಮೇಲಿನದೆಲ್ಲಾ ನಾನಾಗಿಯೇ ಕಂಡುಕೊಂಡಿರುವ ಪಾಠಗಳು. ನಂತರದ ದಿನಗಳಲ್ಲಿ ಕುವೆಂಪು ಅವರ ವಿಶ್ವಮಾನವ ಸಂದೇಶವೂ ಇದೇ ಧಾಟಿಯಲ್ಲಿದೆ ಅಂತ ನನಗೆ ಅನಿಸಿತು. ಅವರ ಕಲ್ಪನೆಯಲ್ಲಿ ಜಾತಿಯಷ್ಟೇ ಅಲ್ಲ ಧರ್ಮಗಳು ಸೃಷ್ಟಿಸಿರುವ ಅಂತರಗಳನ್ನೂ ಗಾಳಿಗೆ ತೂರಿದ್ದಾರೆ. ಅವರ ವಿಚಾರ ವೈಶಾಲ್ಯತೆ ನನ್ನಂಥ ಅಲ್ಪನಲ್ಲಿ ಮೂಡುವುದು ಕಷ್ಟಸಾಧ್ಯ. ಜೊತೆಗೆ ನಾನು ಅವರ ವಿಶ್ವಮಾನವ ಕಲ್ಪನೆಯ ಬಗೆಗೆ ಹೇಳಿಕೊಳ್ಳುವಷ್ಟೇನೂ ಓದಿಕೊಂಡಿಲ್ಲ. ಇವೆಲ್ಲಕ್ಕೂ ಮಿಗಿಲಾಗಿ ನನ್ನ ವಿಚಾರಗಳನ್ನ ಅವರ ವಿಚಾರಗಳೊಂದಿಗೆ ಸಮೀಕರಿಸುವುದು ಬಾಲಿಶವಾದೀತು. ನಾನೆಲ್ಲಿ ? ಅವರೆಲ್ಲಿ ? "  ) ನಮ್ಮ ಜೀವನವನ್ನೂ ಸವೆಸುವುದು ನನಗ್ಯಾಕೋ ಸರಿ ಅನ್ನಿಸಲಿಲ್ಲ, ಅದಕ್ಕೆ. ಅಂತೆಯೇ , Why Should We Cast Ousrselves Into This Cast System. Lets Try Honestly To Cast Out Caste System From INDIA, our motherland.


{ ಇಷ್ಟೆಲ್ಲಾ Space ಬಳಸಿ ನಾನು ಬರೆದ ನಂತರ ನಿಮಗೆ ಜಾಗ ಇಲ್ಲ ಅನ್ನೋಕಾಗುತ್ತದೆಯೇ ? ಈ ಲಹರಿಯನ್ನೋದಿದ ಯಾರೇ ಆಗಲಿ ನಿಮ್ಮ ಅನಿಸಿಕೆ - ಅಭಿಪ್ರಾಯ - ಲಹರಿ .. ಯಾವತ್ತೂ ಬರಹಗಳನ್ನ ಕಳುಹಿಸಿಕೊಡಲು ಹಿಂಜರಿಯಬೇಡಿ. ನಿಮ್ಮ ಬರಹಗಳನ್ನ ಈ ವಿಳಾಸಕ್ಕೆ ಕಳುಹಿಸಿ : revappa@gmail.com }

ಕೊನೆಯದಾಗಿ : ಸಂಜೆ 8 ಗಂಟೆಗೇ ನಿದ್ರೆ ಬರುತ್ತಿದ್ದರೂ, ನಂತರದಲ್ಲಿ ಸತತ ನಾಲ್ಕು ಗಂಟೆ ಪಟ್ಟಾಗಿ ಕೂತುಕೊಂಡು ಲೇಖನ ಬರೆದು ಮುಗಿಸುವಷ್ಟು 'ಸ್ಫೂರ್ತಿ' ನೀಡಿದ ನನ್ನ ಆಪ್ತರಿಗೆ, ನನ್ನ & ಈ ಲೇಖನವನ್ನ ಓದುತ್ತಿರುವ ನಿಮ್ಮ ಪರವಾಗಿ ಧನ್ಯವಾದಗಳು.

ಪ್ರೀತಿಯಿಂದ,
- ರೇವಪ್ಪ

05 September 2010

ಆಡಳಿತ ಕನ್ನಡ ತರಬೇತಿ

ನಾವೊಂದು 60 ಜನರಿಗೆ ( ಕಿರಿಯ ಸಹಾಯಕರು + ಸಹಾಯಕರು ) ಕಳೆದ ಗುರುವಾರದಿಂದ ಶನಿವಾರದವರೆಗೆ 3 ದಿನ ಆಡಳಿತ ಕನ್ನಡ ತರಬೇತಿ ಇತ್ತು. ನಾನು ಭಾಗವಹಿಸಿದ 4ನೇ ತರಬೇತಿ ಕಾರ್ಯಕ್ರಮ ಇದು.  ಆದರೆ ಕಳೆದ 3 ತರಬೇತಿಗಳಿಗಿಂತ ಇದು ಹೆಚ್ಚು ಸತ್ವಯುತವಾಗಿತ್ತು  ಅಂತ ಹೇಳೊದಕ್ಕೆ ನಂಗೆ ಖುಷಿ ಅನ್ನಿಸ್ತಿದೆ. ಈ ಬರಹ ಓದುತ್ತಿರುವ ನಿಮ್ಮಲ್ಲನೇಕರು ಸದರಿ ತರಬೇತಿಯನ್ನ ಮುಗಿಸಿದ್ದೀರಿ ಇಲ್ಲಾ ಮುಂದೆ ಪಡೆಯಲಿದ್ದೀರಿ.. ಇನ್ನು ಮುಂದೆ ತರಬೇತಿಗೆ ಹೋಗುವವರು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಬೇಡಿ ಅಂತ ನನ್ನ ಸಲಹೆ.. ಕನ್ನಡದಲ್ಲಿ ಆಗಿರುವ ಆಗಬೇಕಿರುವ ಅನೇಕ ಕಾರ್ಯ - ಕರ್ತವ್ಯಗಳ ಬಗ್ಗೆ ಒಂದು ವಿಹಂಗಮ ನೋಟ ನೋಡಲಿಕ್ಕೆ ನಿಮಗಲ್ಲಿ ಸಿಗುತ್ತೆ.


ಮತ್ತೆ ಸಿಗೋಣ :
ರೇವಪ್ಪ

27 August 2010

ಇನ್ನೊಂದು ! ಮತ್ತೊಂದು !! ಮಗದೊಂದು !!!

ನಮಸ್ತೆ .. ಬಹಳ ದಿನದ ನಂತರ ನಿಮ್ಮಗಳ ಜೊತೆ ಮಾತಾಡ್ತಿದೀನಿ. ಆದರೆ ಇಷ್ಟು ದಿನ ನಿಮ್ಮ ಜೊತೆ ಮಾತಾಡದೇ ಇದ್ದದ್ದಕ್ಕೆ ಇವತ್ತಿನ ಮಾತಿನ ವಿಷಯವೇ ಕಾರಣ ಅಂತ ನಿಮ್ಮಲ್ಲಿ ಭಾಳ ಜನರಿಗೆ ಗೊತ್ತಿಲ್ಲ ಅನ್ಕೊಂಡಿದೀನಿ. ಸೀದಾ ವಿಷಯಕ್ಕೆ ಬರ್ತೀನಿ ನೋಡಿ :

ಪರೀಕ್ಷಾ ದೃಷ್ಟಿಯಿಂದ ಅನುಕೂಲವಾಗುವಂಥ ಒಂದು ಬ್ಲಾಗ್ ಶುರು ಮಾಡಬೇಕು ಅಂತ ಹೊರಟವನು ನಾಲ್ಕು ಬ್ಲಾಗ್ ಗಳನ್ನ ತಯಾರು ಮಾಡಿ ಅವನ್ನ ಸಂಭಾಳಿಸುತ್ತ ದಿನ ದೂಡ್ತಿದೀನಿ ... ನಿಮಗೆ ಈ ಮುಂಚೆ ಅವುಗಳ ಬಗ್ಗೆ ಹೇಳಿದೀನೋ ಇಲ್ವೋ ನೆನಪಿಲ್ಲ ನಂಗೆ. ಹೇಳಿದ್ರೆ ಒಳ್ಳೇದು. ಹೇಳದೇ ಇದ್ರೆ ಇವತ್ತು ಹೇಳ್ತೀನಿ ಕೇಳಿ.

  • ಸ್ಪರ್ಧಾರ್ಥಿ : ಎಲ್ಲ ತರಹದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವ ಹಾಗೆ ಇದನ್ನ ತಯಾರಿಸೀದೀನಿ. ವಿವಿಧ Optional Subject ಗಳಿಗೆ ಯಾವ ಪುಸ್ತಕಗಳನ್ನ ಓದಬೇಕು, ಮುಂಬರುವ ಹೊಸ ಹೊಸ ಪರೀಕ್ಷೆಗಳು ಯಾವು ಯಾವು ?, ಸಮಗ್ರ ಸಾಮಾನ್ಯ ಜ್ಞಾನ, ಅಂತರ್ಜಾಲ ಲೋಕದಲ್ಲಿನ ಪರೀಕ್ಷಾಸ್ನೇಹಿ ತಾಣಗಳ ಪಟ್ಟಿ, ... ಇತ್ಯಾದಿ ಇದಕ್ಕಿಂತ ಹೆಚ್ಚಿಗೆ ಏನೇನು ನೀಡಬಹುದು ಅಂತ ನನಗೆ ತೋಚದೇ ಇರದಷ್ಟರ ಮಟ್ಟಿಗೆ Varied Topics ಅಲ್ಲಿದಾವೆ. ಇವೆಲ್ಲಕ್ಕೂ ಮಿಗಿಲಾಗಿ ಕನ್ನಡದಲ್ಲಿ ಜ್ಞಾನ ಹಂಚುವ ಕೆಲಸವನ್ನ ಈ ತಾಣ ನಿರ್ವಹಿಸುತ್ತಿದೆ. ನೀವೂ ಕೂಡ ನಿಮಗೆ ತಿಳಿದಿರುವ ನಾಲ್ಕು ಜನರ ಜೊತೆಗೆ ಹಂಚಿಕೊಳ್ಳ ಬಯಸುವ ಯಾವುದೇ ಲೇಖನವನ್ನ ಕಳಿಸಬಹುದು. ಅದನ್ನ ಅಲ್ಲಿ ಪ್ರಕಟಿಸಲಾಗುವುದು. ಇವತ್ತಿನ ದಿನದ ಪ್ರಾರಂಭಕ್ಕೆ ಹೇಳುವುದಾದರೆ 172 ಜನ ಸ್ಪರ್ಧಾರ್ಥಿಗಳು ಪ್ರತಿ ದಿನ ಆ ತಾಣದ ಜ್ಞಾನವನ್ನ email ಮೂಲಕ ಪಡೆಯುತ್ತಿದ್ದಾರೆ. ಅದರ ಅರ್ಥ ನೀವು ಬರೆದು ಕಳಿಸುವ ಒಂದು ಲೇಖನ ಅಲ್ಲಿ ಪ್ರಕಟವಾದರೆ ಕರ್ನಾಟಕದ ಮೂಲೆ ಮೂಲೆಯಲ್ಲಿರುವ 172 ಜನರ mailbox ನಲ್ಲಿ ಸೇರಿ ಅವರಿಂದ ಓದಲ್ಪಡುತ್ತದೆ, ಮೆಚ್ಚುಗೆ - ಟೀಕೆ - ಟಿಪ್ಪಣಿ ಬರುತ್ತದೆ. ಒಂದು ಸಾರಿ ನೀವೇ ಭೇಟಿ ನೀಡಿ. 'ಸಾರ್ಥ' ತಾಣದ Follower ಆಗಿರುವ ಹಾಗೆ 'ಸ್ಪರ್ಧಾರ್ಥಿ' ತಾಣದ Follower ಕೂಡ ಆಗಿ. ಇದು ನನ್ನ Request.


  • ಪ್ರಶ್ನೋತ್ತರ : ಕರ್ನಾಟಕದಲ್ಲಿ ನಡೆಯುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳನ್ನ ಉತ್ತರ ಸಹಿತವಾಗಿ , ಅಲ್ಲಲ್ಲ... ವಿವರಣಾತ್ಮಕ ಉತ್ತರಗಳ ಸಹಿತವಾಗಿ ಸಂಗ್ರಹಿಸುವ ಧ್ಯೇಯದೊಂದಿಗೆ ಈ ತಾಣ ತಯಾರಾಗಿದೆ. ಈಗಾಗಲೇ ಸಾಕಷ್ಟು ಪ್ರಶ್ನೆಪತ್ರಿಕೆಗಳು ತಯಾರಿರುವ ಈ ತಾಣದಲ್ಲಿ ಮುಂಬರುವ ದಿನಗಳಲ್ಲಿ ಸಮಸ್ತ ಪ್ರಶ್ನೆಪತ್ರಿಕೆಗಳನ್ನ ವಿವರಣಾತ್ಮಕ ಉತ್ತರಗಳ ಸಹಿತವಾಗಿ ನಿಮ್ಮ ಮುಂದಿಡುವ ನಿಟ್ಟಿನಲ್ಲಿ ಪ್ರಶ್ನೋತ್ತರ ತಂಡ ಸಿದ್ಧತೆ ನಡೆಸುತ್ತಿದೆ. ಇಲ್ಲಿ FDA, SDA, KAS ... ಹೀಗೆ ಎಲ್ಲ ವಿಭಾಗಗಳ ಪ್ರಶ್ನೆಪತ್ರಿಕೆಗಳನ್ನ ಪರೀಕ್ಷಾವಾರು ಹಾಗೂ ಪರೀಕ್ಷೆ ನಡೆದ ವರ್ಷವಾರು ವಿಂಗಡಿಸಿ ನೀಡಲಾಗಿದೆ. ನಿಮಗೆ ಅನುಕೂಲ ಬರುವ ಹಾಗೆ ಆಯ್ಕೆ ಮಾಡಿಕೊಳ್ಳಿ !!



  • e-ನಾಡು ಕನ್ನಡ : ಈಗ KPSC ನಡೆಸುವ ಬಹುತೇಕ ಪರೀಕ್ಷೆಗಳಲ್ಲಿ ' ಸಾಮಾನ್ಯ ಕನ್ನಡ' ಪರೀಕ್ಷೆ ಕಡ್ಡಾಯವಾಗಿದೆ. ಸದರಿ ಪರೀಕ್ಷೆಗಳಲ್ಲಿ ಕೇಳುವ ಸಾಹಿತ್ಯ, ಸಿನೆಮಾ, ಕ್ರೀಡೆ .. ಇತ್ಯಾದಿ ಕೇವಲ ಕನ್ನಡ ಕರ್ನಾಟಕ ಸಂಬಂಧೀ ಮಾಹಿತಿಗಳ ಕಣಜ ಈ ತಾಣ. ಕವಿ - ಕೃತಿ - ಕಾವ್ಯನಾಮ - ಸಂಭಾವನಾ ಗ್ರಂಥ - ಕನ್ನಡದ ಮೊದಲುಗಳು - ಊರು ಪ್ರಸಿದ್ಧಿ ... ಇತ್ಯಾದಿ ಮಾಹಿತಿ ಇಲ್ಲಿ ಲಭ್ಯ. ನೀವೇ ಒಂದ್ಸಾರಿ ಭೇಟಿ ನೀಡಿ, ನೋಡಿ.
  • e-ದಿನವಹಿ : ದಿನನಿತ್ಯದ ಪರೀಕ್ಷಾ ದೃಷ್ಟಿಯಿಂದ ಪ್ರಮುಖವೆನಿಸುವ ಘಟನಾವಳಿಗಳನ್ನ ಕನ್ನಡಲ್ಲಿ ಕಲೆಹಾಕಿ ಒಂದೆಡೆ ಬರೆಯುತ್ತಾ ಹೋಗುವ ಹುನ್ನಾರ ಈ ತಾಣದ ಹೀಮದಿದೆ. ಮುಂದೊಂದು ದಿನ ನಿಮಗೆ ಯಾವುದೋ ದಿನದ ಆಗುಹೋಗುಗಳ ಬಗ್ಗೆ ಮಾಹಿತಿ ಬೇಕಾದರೆ e-ದಿನವಹಿ ನೋಡಿದರಾಯಿತು !! ( ಸದ್ಯಕ್ಕೆ  ಈ ತಾಣ ನಿರ್ಮಾಣ ಹಂತದಲ್ಲಿದೆ )

ನಿಮಗೆ ಬಿಡುವು ಮಾಡಿಕೊಂಡು ಈ ಎಲ್ಲ ತಾಣಗಳನ್ನ ನೋಡಿ, ಎಲ್ಲ ತಾಣಗಳ Follower ಆಗಿ ... ದಿನವೂ ಸ್ಪರ್ಧಾರ್ಥಿ ನೋಡುವುದನ್ನ ಮರೆಯಬೇಡಿ. ಅದಕ್ಕೆ ದಿನಪತ್ರಿಕೆಯ ಚೈತನ್ಯ ವನ್ನ ನೀಡಲಾಗಿದೆ !!

ಶುಭದಿನ,
ರೇವಪ್ಪ

24 January 2010

Part 3

ಹೀಗೇ ಇನ್ನೂ ಏನೇನೋ ಇರುತ್ತೆ ಮೂವೀ ಮೇಕಿಂಗ್ ಅಂದ್ರೆ....

ಮ್ಯೂಸಿಕ್ ಡೈರೆಕ್ಷನ್ ಮತ್ತೆ BackGround Score ಗೂ ವ್ಯತ್ಯಾಸ ಇದೆ ಅಂತ ನಂಗೆ ಒಂದೆರಡು ವರ್ಷದ ಕೆಳಗೆ ಮಾತ್ರ ಗೊತ್ತಾಯ್ತು...ಅಲ್ಲೀವರೆಗೆ ನಾನು ಅವೆರಡೂ ಒಂದೇ ಅನ್ಕೊಂಡಿದ್ದೆ...

Music Direction - ಇರೋದು ಹಾಡುಗಳಿಗೆ...

Back Ground Score - ಅಂದ್ರೆ ಹಾಡು ಹೊರತುಪಡಿಸಿ ಮೂವಿಯಲ್ಲಿ ಎಲ್ಲೆಲ್ಲಿ ಸಂಗೀತ ಕೇಳ್ಸುತ್ತಲ್ಲ ಅದು.

......................ಈ ಥರ ಏನೇನೋ ಇದೆ ಮೂವಿಗಳಲ್ಲಿ ...........................
ನಿಮಗೂ ಈ ಥರ ಕಾಡು ಹರಟೆ ಮಾಡೋ ಮನಸಾದ್ರೆ ಬರೀರಿ
ಒಂದು ಸುಶಿಕ್ಷಿತ ಗೆಳೆಯರ ಗುಂಪಿನಲ್ಲಿ ಪ್ರಕಟಿಸಬಹುದಾದ ಎಲ್ಲ Topic ಗಳಿಗೂ ಸುಸ್ವಾಗತ






Over 2 You,
Revappa

23 January 2010

Part 2

ಎಲ್ಲಿಗಿದ್ದೆ ...? ಹಾಂ... ನನ್ನ ಸಿನೆಮಾ ಫೇವರಿಟ್ ಗಳು... ಓಕೆ.

ಅಲ್ಲಿಂದ ಮುಂದೆ....

ನಾನು ಒಂದು ಸಿನೆಮಾನ್ನ ಮೆಚ್ಚಿದೆ ಅಂದ್ರೆ ಅದರ ವಿವಿಧ ತಂತ್ರಜ್ಞರನ್ನ ಗುರುತು ಹಾಕ್ಕೊಳ್ತೀನಿ...ಅಂದ್ರೆ Cinematographer - Music Composer - BackGround Scorer - Dialogue Writer - Screen Play Writer - & Ofcourse Director ... ಹೀಗೆ. ಇವೆಲ್ಲ ಏನಕ್ಕೆ ಅಂದ್ರೆ ಆ ಕಲಾವಿದ / ತಂತ್ರಜ್ಞ ಭವಿಷ್ಯದಲ್ಲಿ ತಯಾರಿಸೋ ಚಿತ್ರಗಳನ್ನ ತಪ್ಪದೇ ನೋಡೋಕೆ.

ನಾನು ಓದ್ಕೊಂಡಿರೋ ಪ್ರಕಾರ ಒಂದು ಚಲನಚಿತ್ರ ಹೇಗೆ ತಯಾರಾಗುತ್ತೆ ಅಂತ ಹೇಳ್ತೀನಿ ಕೇಳಿ ::

ಚಲನಚಿತ್ರ ತಯಾರಾಗೋದು ಒಂದು ಕತೆಯಿಂದ. ಅದೇ Script. ಒಂದು ನೈಜ ಘಟನೆಯೋ ಅಥವಾ ಯಾವುದೋ ಕಾದಂಬರಿಯೋ ಅಥವಾ ಯಾವುದೂ ಕಥೆಯೋ ಅಥವಾ ಯಾವುದೋ ಪರಭಾಷೆ ಚಲನಚಿತ್ರ ನೋಡಿದ ಮೇಲೆ ಮನಸಲ್ಲಿ ಮೂಡಿದ ' ಸ್ಫೂರ್ತಿ ' ಯೋ ಒಂದು Script Ready ಮಾಡೋದಕ್ಕೆ ಬುನಾದಿಯಾಗುತ್ತೆ. ಈ ಕಥೆಯನ್ನ ಹವ್ಯಾಸಿ ಚಲನಚಿತ್ರ Script ಬರಹಗಾರ Ready ಮಾಡ್ಬೇಕು ಇಲ್ಲಾ ಒಬ್ಬ ನಿರ್ದೇಶಕ Ready ಮಾಡ್ಬೇಕು. ಹೀಗೆ ಆದ್ಮೇಲೆ ಈ ಹವ್ಯಾಸಿ ಬರಹಗಾರನ ಹತ್ತಿರ ದುಡ್ಡು ಕಾಸಿನ ವ್ಯವಸ್ಥೆ ಇರೋದಿಲ್ಲ. ಅದಕ್ಕವನು ನಿರ್ಮಾಪಕ ಅನ್ನೋ Cashier ಹತ್ರ ತನ್ನ 'ಕತೆ' ಹೇಳಿ ನೀವು ಇದನ್ನ ಚಲನಚಿತ್ರ ಮಾಡ್ಕೊಳೋದಾದ್ರೆ ಮಾಡ್ಕೋಳಿ, ನಂಗೆ ಸ್ವಲ್ಪ ಸಂಭಾವನೆ ಕೊಟ್ರೆ ಸಾಕು ಅಂತಾನೆ. ಆ ನಿರ್ದೇಶಕನಿಗೆ ಆ ಕಥೆ ಇಷ್ಟ ಆದ್ರೆ ಅದನ್ನ ಅವನಿಂದ ' ಕೊಂಡುಕೊಂಡು ' ಚಲನಚಿತ್ರ ತಯಾರಾಗೋಕೆ ಬೇಕಾಗೋ ಇತರೆ ಸಾಮಗ್ರಿಗಳನ್ನ ಕಲೆ ಹಾಕೋಕೆ ಶುರು ಮಾಡ್ತಾನೆ. ಆ ಇತರೆ ಸಾಮಗ್ರಿಗಳಂದ್ರೆ ನಿರ್ದೇಶಕ, ಹೀರೋ, ಹೀರೋಯಿನ್, ಮ್ಯೂಸಿಕ್ ಡೈರೆಕ್ಟರ್ ...ಇತ್ಯಾದಿ. ಇದು via ನಿರ್ಮಾಪಕನ ಮೂಲಕ ಸಿನೆಮಾ ರೆಡಿಯಾಗೋ ವಿಧಾನ.

ಇನ್ನು ಖುದ್ದು ನಿರ್ದೇಶಕನೇ ಸಿನೆಮಾ ರೆಡಿ ಮಾಡೋದಾದ್ರೆ....

ನಿರ್ದೇಶಕರಲ್ಲಿ ಎರಡು ಥರ ( ಆರ್ಥಿಕವಾಗಿ ) -
  1. ಹಣವಂತ ನಿರ್ದೇಶಕರು
  2. ಬಡ ನಿರ್ದೇಶಕರು
ಈ ಹಣವಂತ ನಿರ್ದೇಶಕರೆಂದರೆ ಈ ಹಿಂದೆ ಮಾಡಿದ ಚಲನಚಿತ್ರ Commerecial Hit ಆಗಿ ಒಳ್ಳೆ ದುಡ್ಡು ಗಳಿಸಿ ಕೊಟ್ಟಿದ್ದು ಅದನ್ನ ಜತನ ಮಾಡಿಟ್ಕೊಂಡು ಮುಂದಿನ ಸ್ವಂತ ಸಿನೆಮಾ ಮಾಡೋದಕ್ಕೆ ಅಂತ ಇಟ್ಕೊಂಡಿರೋರು.

ಬಡ ನಿರ್ದೇಶಕರು ಅಂದ್ರೆ ಅವರ ಹತ್ರ ಸ್ವಂತ ದುಡ್ಡು ಇಲ್ದೆ ಇದ್ದು ಬರಿ ದುಡಿಮೆ ಗೊತ್ತಿರೋರು.

ಈ ಹಣವಂತ ನಿರ್ದೇಶಕರು ತಾವೇ ಖುದ್ದು ಚಿತ್ರ ನಿರ್ಮಾಣಕ್ಕೆ ಕೈ ಹಾಕಬಹುದು ಅಥವಾ ಒಬ್ಬ ಕಟ್ಟುಮಸ್ತಾದ ನಿರ್ಮಾಪಕನನ್ನ ಹಿಡೀಬಹುದು. ಜೊತೆಗೆ ಬಡ ನಿರ್ದೇಶಕ ತಾನೇ ರೆಡಿ ಮಾಡಿರೋ ಕಥೆಯಾಗಿದ್ರೆ ನಿರ್ದೇಶಕರಿಗಾಗಿ ಹುಡುಕಾಟ ನಡೆಸಬೇಕು ( ಆ Script writer ಥರ ) ಅಥವಾ ಯಾವ್ದೋ ನಿರ್ಮಾಪಕ ಯಾವ್ದೋ ಕಥೆ ತಂದು ಸಿನೆಮಾ ಮಾಡಿ ಅಂದಾಗ ಅವರಿಗೆ ಅವರು ಕೇಳೋ ಹಾಗೆ ಸಿನೆಮಾ ಮಾಡಿ ಕೊಡೋದು. ಹಣವಂತ ನಿರ್ದೇಶಕರೂ ಕೂಡ ನಿರ್ಮಾಪಕ ಹೇಳಿದ ಸಿನೆಮಾ ಮಾಡಿಕೊಡ್ತಾರೆ ಅನ್ನೋದೇನು ಸುಳ್ಳಲ್ಲ. ಅವರು ತಮ್ಮ ಮುಂದಿನ ಸ್ವಂತ ನಿರ್ಮಾಣದ ಸಿನೆಮಾ ಮಾಡೋಕೆ ಕಾಸು ಹೊಂದಿಸೋಕೆ ಅವರೂ ಆ ಥರ ಮಾಡ್ತಾರೆ.

But,

ಇಲ್ಲಿ ಆ ನಿರ್ದೇಶಕನ ಪ್ರಸಿದ್ಧಿ ಹೇಗಿದೆ ಅನ್ನೋದು ಕೂಡ ಕೆಲಸ ಮಾಡುತ್ತೆ ಅನ್ನೋದನ್ನ ಮರೀಬಾರ್ದು.

ನಂತರ ನಿರ್ದೇಶಕ ಒಳ್ಳೇ Reputation ಇಟ್ಕೊಂಡು ಒಳ್ಳೇ ಹೆಸರು ಮಾಡಿದ್ರೆ ಮುಂದಿನದೆಲ್ಲ Almost ಅವನದೇ ಕಾರುಬಾರು. ಇಲ್ಲ ಬಡಪಾಯಿ ನಿರ್ದೇಶಕನಾಗಿದ್ರೆ ನಿರ್ಮಾಪಕ ಹೇಳೋ Cast ಏ ಆಗಬೇಕು.

So, Next Step - Cast Selection.

ಈ Cast Selection ಅಂದ್ರೆ ಸಿನೆಮಾ ಮಾಡೋಕೆ ಬೇಕಾಗೋ ಇತರೆ ತಂತ್ರಜ್ಞರನ್ನ ಕಲೆ ಹಾಕೋ ಕೆಲಸ. ಕತೆಗೆ
( ಮತ್ತೆ ಆ ಚಿತ್ರದ Budget ಗೆ ) ಅನುಗುಣವಾಗಿ ಅವರು ಯಾರು ಅನ್ನೋದು ನಿರ್ಧಾರ ಆಗುತ್ತೆ. Costly ಚಿತ್ರ ಆದ್ರೆ ಎಷ್ಟೇ ಖರ್ಚಾಗ್ಲಿ ಎ.ಆರ್.ರೆಹಮಾನ್ ಕಡೆಯಿಂದನೇ ಮ್ಯೂಸಿಕ್ ಬರಬೇಕು...ಪ್ರಿಯಾಂಕಾ ಛೋಪ್ರಾನೇ ಹೀರೋಯಿನ್ ಆಗಬೇಕು.. ಹೃತಿಕ್ ರೋಷನ್ನೇ ಹೀರೋ ಆಗಬೇಕು...ಇವರೇ ಕ್ಯಾಮೆರಾ ಹಿಡೀಬೇಕು ಅಂತೆಲ್ಲಾ ಆಗುತ್ತೆ. ಇಲ್ಲ ಅಂದ್ರೆ ಆ ಚಿತ್ರ Budget ಗೆ ತಕ್ಕ ಹಾಗೆ ಅವರುಗಳು ಇರ್ತಾರೆ. ಈ ತಂತ್ರಜ್ಞರು ಯಾರ್ಯಾರು ಇರ್ಬೇಕು ಅನ್ನೋದನ್ನ ನಿರ್ದೇಶಕ - ನಿರ್ಮಾಪಕ ಇಬ್ರೂ ಸಮಾಲೋಚನೆ ಮಾಡಿ Final ಮಾಡ್ತಾರೆ.


[ ಸಮಯ ಇಲ್ಲಾರೀ .. ಆಗ್ಲೇ ಬೆಳಿಗ್ಗೆ 9.05 ನಿಮಿಷ ..ಸ್ನಾನ ಮಾಡಿ..ಬಸ್ ಹಿಡಿದು ಆಫೀಸ್ ಬರಬೇಕು...Sorry...ಸೋಮವಾರ Continue ಮಾಡ್ತೀನಿ. Bye ]






22 January 2010

Reactions

Cinema is everyones passion. My favourite Director is MajidMajdi- An Irani Film Maker, whose excellency in cinema made cinema art to feel verymuch proud. His committment towards cinema making is lesson to every film maker and also to the viewer. MajidMajdi made 'Color of Paradise', 'Children of Heaven', 'Baran' featurefilms to be must watch. I have the collection of Majid Majdi films who ever interested can contact me to get film CD's.contact me via mail 'cheluvantha@yahoo.co.in' or via phone:9902963582.
- Manjunath S. ( StenoGrapher )

ಸಿನೆಮಾ & Me

ನಮಸ್ತೆ...

ಏನ್ ಬರೀಬೇಕು ಅಂತ ತಿಳೀಲಿಲ್ಲ..ಅದ್ಕೆ ಇದನ್ನ ಬರೀತಿದೀನಿ...ಇದು ಹೇಗ್ ತಿಳೀತು ಅನ್ಬೇಡಿ ಮತ್ತೆ ?!

ಸಿನೆಮಾ ಜೊತೆ ನನ್ನ ನಂಟು ಹಳೆಯದೇ...ಚಿಕ್ಕವನಿದ್ದಾಗ ನಮ್ಮ ಮನೇಲಿ ನಂಗೆ 8 ವರ್ಷವಾಗೋವರೆಗೂ ಟಿ.ವಿ.ಇರಲಿಲ್ಲ ಅನ್ಸುತ್ತೆ. ನಂತರ ಬಂತು. ಅಲ್ಲೀವರೆಗೆ ನಾನು ನನ್ನ ಆಪ್ತಮಿತ್ರ ಒಬ್ಬನಿದಾನೆ ಅವನ ಮನೇಲಿ ಟಿ.ವಿ.ನೋಡೋ ಪರಿಪಾಠ ಇಟ್ಕೊಂಡಿದ್ದೆ. ಆವಾಗ ಬರ್ತಾ ಇದ್ದ ಚಾನೆಲ್ ಅಂದ್ರೆ ಚಂದನ. ನಂತರ ಉಷೆ - ಉದಯ ..Etc. ಬಂದ್ವು. ಸಿನೆಮಾ ಅಂದ್ರೆ ಪ್ರಾಣ . ಅದೇ ಸಿನೆಮಾನ ಪ್ರತಿ ದಿನ ತೋರ್ಸುದ್ರೂ ಬೇಜಾರಿರಲಿಲ್ಲ. ಈ ಚಂದನದಲ್ಲಿ ರಾತ್ರಿ ಬರೋ ಸಿನೆಮಾನೇ ಬೆಳಿಗ್ಗೇನೂ ಹಾಕ್ತಿದ್ರಲ್ಲಾ ಅದನ್ನೂ ಬಿಡ್ತಿರಲ್ಲಿಲ್ಲ-ಶಾಲೆಗೆ ರಜೆ ಇದ್ರೆ. 9 ಗಂಟೆಗೆ ಶುರುವಾಗೋ ಮೂವೀ ರಾತ್ರಿ ಎಷ್ಟೊತ್ತಾಗ್ಲಿ ಆ ಸಿನೆಮಾ ಮುಗಿದ ಮೇಲೆನೇ ಎದ್ದು ಬರೋದು ರೂಢಿ. ನಮ್ಮ ಮನೆ ಅವರ ಮನೆಗೆ ಎಣಿಸಿಕೊಂಡು ಹೆಜ್ಜೆ ಹಾಕಿದರೆ 20 ಹೆಜ್ಜೆನೂ ಆಗಲಿಕ್ಕಿಲ್ಲ. ಆದ್ರೂ ಆ ರಾತ್ರಿ 11 - 12 ರ ಹೊತ್ತಲ್ಲಿ ದೆವ್ವ ಎಲ್ಲ Walking ಬರ್ತಾವೆ ನೋಡಿ. ನಾವು ಒಬ್ರೇ ಹೋದಾಗ ನಮ್ಮನ್ನೂ ಜೊತೆಗೆ ಕರ್ಕೊಂಡು ಹೋದ್ರೆ ಏನ್ಮಾಡೋದು ? ಹೀಗಾಗಿ ನನ್ನನ್ನ ಮನೆಗೆ ಕರೆದುಕೊಂಡು ಹೋಗ್ಲಿಕ್ಕೆ ಅಪ್ಪ ಅಥವಾ ಅಮ್ಮ ಬರಲೇ ಬೇಕಲ್ಲಾ . ನನ್ನ ಈ ಸಿನೆಮಾ ಹುಚ್ಚು ತಡೀಲಾರ್ದೆ ಅಂತೀರೋ ಅಥವಾ ಅವರಲ್ಲಿದ್ದ ಈ ಟಿ.ವಿ. ಅನ್ನೋ Magic Box ಕಡೆಗಿನ ಒಲವು ಅಂತೀರೋ ಒಟ್ನಲ್ಲಿ ನಮ್ಮನೆಗೆ ಟಿ.ವಿ. ಬಂತು. Dec. 25 1994. [ ಈ ಡೇಟ್ ಏನಕ್ಕೆ ನೆನಪಿದೆ ಅಂದ್ರೆ..ಅವತ್ತು ಗ್ಯಾನಿ ಜೈಲ್ ಸಿಂಗ್ ಸತ್ತಿರೋ ದಿವಸ...ಅದೂ ಇದನ್ನ ಬರೀಬೇಕಾದ್ರೆ wiki ನಲ್ಲಿ Search ಮಾಡಿ ಬರೆದೆ. ]


ಹೀಗೆ ಶುರುವಾದ ನನ್ನ ಸಿನೆಮಾ ಯಾತ್ರೆ ಮನೆಗೆ ಟಿ.ವಿ. ಬಂದ್ಮೇಲೆ ಕೇಳ್ತೀರಾ... ಆದ್ರೆ ಎಲ್ವೂ ಕನ್ನಡ ಚಿತ್ರಗಳು. ಹಿಂದಿ ಚಿತ್ರಗಳು ಹೈಸ್ಕೂಲ್ ಮುಟ್ಟೋ ವರೆಗೂ ನೋಡೋ ಗೋಜಿಗೂ ಹೋಗ್ಲಿಲ್ಲ. ತಿಳಿತಾನೂ ಇರ್ಲಿಲ್ಲ ActuAlly. ಆಮೇಲೆ ಹಿಂದಿ ಚಿತ್ರಗಳನ್ನೇ ಜಾಸ್ತಿ ನೋಡಿದ್ದು ಅದು ಬೇರೆ ಮಾತು. ಕೆಲವೊಮ್ಮಂತೂ ಈ ಚಂದನದವರು ರಾತ್ರಿ ಸಿನೆಮಾನ ಹೇಳ್ದೆ ಕೇಳ್ದೆ Cancel ಮಾಡಿಬಿಡೋರು. ನಮ್ಮಂಥ ಅಭಿಮಾನಿಗಳ ಪಾಡೇನು ಕೇಳ್ತೀರಾ ಅವತ್ತು. ಅದೆಂಥದೋ ಕಾರ್ನಾಟಿಕ್ ಶಾಸ್ತ್ರೀಯ ಸಂಗೀತ ತೋರಿಸ್ಕೊಂಡು ಕೂಡ್ತಿದ್ರು. ಆವಾಗಿನ ನಮ್ಮ ತಾಳ್ಮೆ ಎಷ್ಟಿತ್ತು ಅಂದ್ರೆ ಆ ಥರದ ಪ್ರೋಗ್ರಾಮ್ ನ 1.30 ಗಂಟೆ ಹಾಕಿದ್ರೂ ನೋಡಿ ಕೊನೆಗೆ ಇವತ್ತಿನ ಪ್ರೋಗ್ರಾಮ್ ಇಲ್ಲಿಗೇ ಕ್ಲೋಸ್ ಆಯ್ತು. ಎಲ್ರೂ ಮಲ್ಕೊಳಿ. ಶುಭರಾತ್ರಿ ಅಂತ ಹೇಳೋವರೆಗೂ ಅಲ್ಲೇ ಅದರ ಎದುರಿಗೆ ಅಂಟು ಹಾಕೊಂಡು ಕೂಡ್ತಿದ್ವಿ. ಅಷ್ಟೊತ್ತು ಕೂತ್ಕೊಳ್ಳಿಕ್ಕೆ ನಮ್ಮಲ್ಲಿಂದ ಒಂದು ಆಶಾವಾದ ನಮ್ಮನ್ನ ಹಿಡಿದು ಕೂಡಿಸ್ತಿತ್ತು. ಅದೇನು ಅಂದ್ರೆ ಆ 1.30 ಗಂಟೆಯ ಮಧ್ಯದಲ್ಲಿ ತಕ್ಷಣ ಒಬ್ಬ ನಿರೂಪಕಿ ಬಂದು Sorry For The Inconvenience ಅಂತ Sorry ಕೇಳಿ ಈಗ ನಿಮ್ಮ ನೆಚ್ಚಿನ ಚಲನಚಿತ್ರ ನಿಮ್ಮ ಮುಂದೆ ಅಂತ ಹೇಳ್ತಾಳೆ ಅಂತ ಆ ದೇವರಲ್ಲಿ ಪ್ರಾರ್ಥನೆ ಮಾಡ್ಕೋತಿದ್ವಿ.

---------------------

ನಂತರ ಧಾರವಾಡಕ್ಕೆ PU ಓದೋದಕ್ಕೆ ಅಂತ ಬಂದ ಮೇಲೆ ನೋಡಿದ ಮೊದಲ ಮೂವೀ Die Another Day. Around November 2002. ನನ್ನ ಲೈಫ್ ನ ಮೊದಲ ಇಂಗ್ಲೀಷ್ ಚಿತ್ರ. ಅದರ ಗ್ರಾಂಡ್ ನೆಸ್ ನೋಡಿ ಆಶ್ಚರ್ಯ ಆಯ್ತು. ನಂತರ ನೋಡಿದ್ದು ಕನ್ನಡ
'ಮೂವೀ' ನಿನಗಾಗಿ... ಈ ವಿಷಯ ಏನಕ್ಕೆ ಹೇಳ್ದೆ ಅಂದ್ರೆ 1st PU ನಲ್ಲಿ ನೋಡಿದ್ದು ಕೇವಲ ಎರಡು ಮೂವೀ. ಆದ್ರೆ, 2nd PU ನಲ್ಲಿ ನೋಡಿದ್ದು 200 ಕ್ಕಿನ್ನ ಕಮ್ಮಿ ಇಲ್ಲ. ಒಂದೇ ದಿನ ನಾಲ್ಕಕ್ಕೆ ನಾಲ್ಕೂ ಷೋ ನೋಡಿದ 3 ದಿನಗಳಿವೆ. First Time ಈ ಥರ ನಾಲ್ಕೂ ಷೋ ನೋಡಿದ್ದು ರಾಮ ಶಾಮ ಭಾಮ ರಿಲೀಸ್ ಆದ ದಿವಸ. ಹೀಗೇ ಸಿನೆಮಾ ಹುಚ್ಚು ನನ್ನನ್ನಾವರಿಸ್ತು ಅಂತ ಹೇಳೋದು ಕಷ್ಟ. ಒಟ್ಟು ಹುಚ್ಚು ಹಿಡೀತು ಸಿನೆಮಾ ನೋಡಿದ್ವಿ. ಈ ಹಂತದಲ್ಲಿ ಕನ್ನಡ ಸಿನೆಮಾಗಳಲ್ಲಿ ಕಾಣುತ್ತಿದ್ದ ತಪ್ಪುಗಳ ಸಾಗರ ಕೆಲವು ಹಿಂದಿ ಚಿತ್ರಗಳ Perfection ನೋಡಿ ಅವುಗಳಿಂದ ಮೋಹಿತನಾದೆ ಅಂತ ಹೇಳ್ಬಹುದು.

So, ಹಿಂದಿ ಚಿತ್ರಗಳ ಅಭಿಮಾನಿ ಯಾದೆ. ಕನ್ನಡ ಅಂದ್ರೆ Hate ಅಂತ ಅಲ್ಲ. But ನಮ್ಮವರು ಮಾಡೋ ಮೂವಿಗಳಲ್ಲಿ ಎಷ್ಟೊಂದು ತಪ್ಪುಗಳಿರ್ತಾವೆ ಅಂದ್ರೆ ಪ್ರತೀ ಷಾಟ್ ನಲ್ಲೂ ತಪ್ಪು ಗಳನ್ನ ಹುಡುಕೋ ಪ್ರಶ್ನೆನೇ ಇಲ್ಲ ತಾವೇ ಎದ್ದು ಕಾಣ್ತಾವೆ. ಎಲ್ಲ ಕನ್ನಡ ಚಿತ್ರಗಳೂ ಹೀಗೇ ಅಂತ ಹೇಳ್ತಿಲ್ಲ ನಾನು. ನಮ್ಮ ಚಿತ್ರರಂಗದಲ್ಲೇ ಹಿಂದೆ ಇದ್ದ ನಿರ್ದೇಶಕರು ಹಿಂದಿ ಏನು ಇಂಗ್ಲೀಷ್ ಚಿತ್ರಗಳ ನಿರ್ದೇಶಕರ ಕ್ವಾಲಿಟಿಯನ್ನೂ ಮೀರಿಸಿದ್ದಾರೆ. ಆದರೆ ನಂತರ ಬಂದ ಎರಡನೆಯ ಪೀಳಿಗೆಯ ನಿರ್ದೇಶಕರಲ್ಲಿ ಅನೇಕರು ಆ ಪರಂಪರೆಯನ್ನ ಹಾಳು ಮಾಡಿದಾರೆ. ಆದರೆ ಕೆಲವು 3 ನೇ ಪೀಳಿಗೆಯ ನಿರ್ದೇಶಕರು ನಮ್ಮ ಮೊದಲ ತಲೆಮಾರಿನವರ ಪರಂಪರೆಯನ್ನ ಮುಂದುವರೆಸುವ ತವಕದಲ್ಲಿದಾರೆ. ಅವರನ್ನ ಸಾಧ್ಯವಾದಷ್ಟು Support ಮಾಡೋದು ನಮ್ಮ ಆದ್ಯ ಕರ್ತವ್ಯ. ನಮ್ಮ ಯೋಗರಾಜ್ ಭಟ್ರು, ನಮ್ಮ ಗುರುಪ್ರಸಾದ್ , ನಮ್ಮ ಸೂರಿ ... ಈ ಮೂವರು ಕನ್ನಡದಲ್ಲಿ ಸದ್ಯ ನನ್ನ Favourite Directors. ಜೊತೆಗೆ Caliber ಇರೋ ನಟರೂ ಬಂದಿದಾರೆ. ವಿಜಯ್ - ಕಿಟ್ಟಿ - ಗಣೇಶ್ - ಪ್ರೇಮ್ ... ಇವರುಗಳು ಹೊಸಬರಾದ್ರೆ ಸುದೀಪ್ - ರಮೇಶ್ ಹಳಬರಾದ್ರೂ ಇನ್ನೂ Charm ಉಳಿಸ್ಕೊಂಡಿದಾರೆ. ಇವರುಗಳು ನನ್ನ favourite. ಹೊಸಬರಲ್ಲಿ ಕಿಟ್ಟಿ Most favourite. ನಂತ್ರ ವಿಜಯ್. ನಮ್ಮ ಗುರುಪ್ರಸಾದ್ ಚಿತ್ರಗಳಲ್ಲಿ ಬರೋ ಡೈಲಾಗ್ ಗಳಲ್ಲಿರೋ PUNCH ಮತ್ತಿನ್ಯಾವ ಚಿತ್ರಗಳಲ್ಲೂ ನೋಡಿಲ್ಲ ನಾನು. ಶಭಾಷ್. ಯೋಗರಾಜ್ ಭಟ್ರ Capacity ಹೇಳ್ಬೇಕೇ !! ಇನ್ನು ಪೋಷಕ ಪಾತ್ರಗಳಲ್ಲಿ ನಮ್ಮ ತಬ್ಲಾ ನಾಣಿ ನೂ Good. ರಂಗಾಯಣ ರಘು ಕೆಲವು ಸಾರಿ Overacting ಅನ್ಸಿದ್ರೂ ಅವರ ಕ್ಯಾಲಿಬರ್ ಶ್ಲಾಘನೀಯ. ಹಾಂ .. ಕೋಮಲ್ ಕೂಡ ಇಷ್ಟ. ಇತ್ತೀಚಿನ ಚಿತ್ರಗಳಲ್ಲಿ ಎದ್ದೇಳು ಮಂಜುನಾಥ, ಗಾಳಿಪಟ, ಇಂತಿ ನಿನ್ನ ಪ್ರೀತಿಯ, ಮಠ, ರಾಮ ಶಾಮ ಭಾಮ ಇಷ್ಟ ಆದ್ವು. ರಾಜೇಶ್ ಕೃಷ್ಣನ್ - ಎಂ.ಡಿ.ಪಲ್ಲವಿ ಸದ್ಯದ Favourite Singers.




- ಇನ್ನೂ ಸ್ವಲ್ಪ ಬರೆದು ಮುಂದುವರೆಸಬೇಕು ಅಂತಿದೀನಿ ನೋಡೋಣ.
ನಿಮ್ಮವ,
ರೇವಪ್ಪ

--------------------------------------

ಎಲ್ಲಿಗಿದ್ದೆ ...? ಹಾಂ... ನನ್ನ ಸಿನೆಮಾ ಫೇವರಿಟ್ ಗಳು... ಓಕೆ.

ಅಲ್ಲಿಂದ ಮುಂದೆ....

ನಾನು ಒಂದು ಸಿನೆಮಾನ್ನ ಮೆಚ್ಚಿದೆ ಅಂದ್ರೆ ಅದರ ವಿವಿಧ ತಂತ್ರಜ್ಞರನ್ನ ಗುರುತು ಹಾಕ್ಕೊಳ್ತೀನಿ...ಅಂದ್ರೆ Cinematographer - Music Composer - BackGround Scorer - Dialogue Writer - Screen Play Writer - & Ofcourse Director ... ಹೀಗೆ. ಇವೆಲ್ಲ ಏನಕ್ಕೆ ಅಂದ್ರೆ ಆ ಕಲಾವಿದ / ತಂತ್ರಜ್ಞ ಭವಿಷ್ಯದಲ್ಲಿ ತಯಾರಿಸೋ ಚಿತ್ರಗಳನ್ನ ತಪ್ಪದೇ ನೋಡೋಕೆ.

ನಾನು ಓದ್ಕೊಂಡಿರೋ ಪ್ರಕಾರ ಒಂದು ಚಲನಚಿತ್ರ ಹೇಗೆ ತಯಾರಾಗುತ್ತೆ ಅಂತ ಹೇಳ್ತೀನಿ ಕೇಳಿ ::

ಚಲನಚಿತ್ರ ತಯಾರಾಗೋದು ಒಂದು ಕತೆಯಿಂದ. ಅದೇ Script. ಒಂದು ನೈಜ ಘಟನೆಯೋ ಅಥವಾ ಯಾವುದೋ ಕಾದಂಬರಿಯೋ ಅಥವಾ ಯಾವುದೂ ಕಥೆಯೋ ಅಥವಾ ಯಾವುದೋ ಪರಭಾಷೆ ಚಲನಚಿತ್ರ ನೋಡಿದ ಮೇಲೆ ಮನಸಲ್ಲಿ ಮೂಡಿದ ' ಸ್ಫೂರ್ತಿ ' ಯೋ ಒಂದು Script Ready ಮಾಡೋದಕ್ಕೆ ಬುನಾದಿಯಾಗುತ್ತೆ. ಈ ಕಥೆಯನ್ನ ಹವ್ಯಾಸಿ ಚಲನಚಿತ್ರ Script ಬರಹಗಾರ Ready ಮಾಡ್ಬೇಕು ಇಲ್ಲಾ ಒಬ್ಬ ನಿರ್ದೇಶಕ Ready ಮಾಡ್ಬೇಕು. ಹೀಗೆ ಆದ್ಮೇಲೆ ಈ ಹವ್ಯಾಸಿ ಬರಹಗಾರನ ಹತ್ತಿರ ದುಡ್ಡು ಕಾಸಿನ ವ್ಯವಸ್ಥೆ ಇರೋದಿಲ್ಲ. ಅದಕ್ಕವನು ನಿರ್ದೇಶಕ ಅನ್ನೋ Cashier ಹತ್ರ ತನ್ನ 'ಕತೆ' ಹೇಳಿ ನೀವು ಇದನ್ನ ಚಲನಚಿತ್ರ ಮಾಡ್ಕೊಳೋದಾದ್ರೆ ಮಾಡ್ಕೋಳಿ, ನಂಗೆ ಸ್ವಲ್ಪ ಸಂಬಾವನೆ ಕೊಟ್ರೆ ಸಾಕು ಅಂತಾನೆ. ಆ ನಿರ್ದೇಶಕನಿಗೆ ಆ ಕಥೆ ಇಷ್ಟ ಆದ್ರೆ ಅದನ್ನ ಅವನಿಂದ ' ಕೊಂಡುಕೊಂಡು ' ಚಲನಚಿತ್ರ ತಯಾರಾಗೋಕೆ ಬೇಕಾಗೋ ಇತರೆ ಸಾಮಗ್ರಿಗಳನ್ನ ಕಲೆ ಹಾಕೋಕೆ ಶುರು ಮಾಡ್ತಾನೆ. ಆ ಇತರೆ ಸಾಮಗ್ರಿಗಳಂದ್ರೆ ನಿರ್ದೇಶಕ, ಹೀರೋ, ಹೀರೋಯಿನ್, ಮ್ಯೂಸಿಕ್ ಡೈರೆಕ್ಟರ್ ...ಇತ್ಯಾದಿ. ಇದು via ನಿರ್ದೇಶಕನ ಮೂಲಕ ಸಿನೆಮಾ ರೆಡಿಯಾಗೋ ವಿಧಾನ.

ಇನ್ನು ಖುದ್ದು ನಿರ್ದೇಶಕನೇ ಸಿನೆಮಾ ರೆಡಿ ಮಾಡೋದಾದ್ರೆ....

ನಿರ್ದೇಶಕರಲ್ಲಿ ಎರಡು ಥರ ( ಆರ್ಥಿಕವಾಗಿ ) -
  1. ಹಣವಂತ ನಿರ್ದೇಶಕರು
  2. ಬಡ ನಿರ್ದೇಶಕರು
ಈ ಹಣವಂತ ನಿರ್ದೇಶಕರೆಂದರೆ ಈ ಹಿಂದೆ ಮಾಡಿದ ಚಲನಚಿತ್ರ Commerecial Hit ಆಗಿ ಒಳ್ಳೆ ದುಡ್ಡು ಗಳಿಸಿ ಕೊಟ್ಟಿದ್ದು ಅದನ್ನ ಜತನ ಮಾಡಿಟ್ಕೊಂಡು ಮುಂದಿನ ಸ್ವಂತ ಸಿನೆಮಾ ಮಾಡೋದಕ್ಕೆ ಅಂತ ಇಟ್ಕೊಂಡಿರೋರು.

ಬಡ ನಿರ್ದೇಶಕರು ಅಂದ್ರೆ ಅವರ ಹತ್ರ ಸ್ವಂತ ದುಡ್ಡು ಇಲ್ದೆ ಇದ್ದು ಬರಿ ದುಡಿಮೆ ಗೊತ್ತಿರೋರು.

ಈ ಹಣವಂತ ನಿರ್ದೇಶಕರು ತಾವೇ ಖುದ್ದು ಚಿತ್ರ ನಿರ್ಮಾಣಕ್ಕೆ ಕೈ ಹಾಕಬಹುದು ಅಥವಾ ಒಬ್ಬ ಕಟ್ಟುಮಸ್ತಾದ ನಿರ್ಮಾಪಕನನ್ನ ಹಿಡೀಬಹುದು. ಜೊತೆಗೆ ಬಡ ನಿರ್ದೇಶಕ ತಾನೇ ರೆಡಿ ಮಾಡಿರೋ ಕಥೆಯಾಗಿದ್ರೆ ನಿರ್ದೇಶಕರಿಗಾಗಿ ಹುಡುಕಾಟ ನಡೆಸಬೇಕು ( ಆ Script writer ಥರ ) ಅಥವಾ ಯಾವ್ದೋ ನಿರ್ಮಾಪಕ ಯಾವ್ದೋ ಕಥೆ ತಂದು ಸಿನೆಮಾ ಮಾಡಿ ಅಂದಾಗ ಅವರಿಗೆ ಅವರು ಕೇಳೋ ಹಾಗೆ ಸಿನೆಮಾ ಮಾಡಿ ಕೊಡೋದು. ಹಣವಂತ ನಿರ್ದೇಶಕರೂ ಕೂಡ ನಿರ್ಮಾಪಕ ಹೇಳಿದ ಸಿನೆಮಾ ಮಾಡಿಕೊಡ್ತಾರೆ ಅನ್ನೋದೇನು ಸುಳ್ಳಲ್ಲ. ಅವರು ತಮ್ಮ ಮುಂದಿನ ಸ್ವಂತ ನಿರ್ಮಾಣದ ಸಿನೆಮಾ ಮಾಡೋಕೆ ಕಾಸು ಹೊಂದಿಸೋಕೆ ಅವರೂ ಆ ಥರ ಮಾಡ್ತಾರೆ.

But,

ಇಲ್ಲಿ ಆ ನಿರ್ದೇಶಕನ ಪ್ರಸಿದ್ಧಿ ಹೇಗಿದೆ ಅನ್ನೋದು ಕೂಡ ಕೆಲಸ ಮಾಡುತ್ತೆ ಅನ್ನೋದು ಕೂಡ ಮರೀಬಾರ್ದು.

ನಂತರ ನಿರ್ದೇಶಕ ಒಳ್ಳೇ Reputation ಇಟ್ಕೊಂಡು ಒಳ್ಳೇ ಹೆಸರು ಮಾಡಿದ್ರೆ ಮುಂದಿನದೆಲ್ಲ Almost ಅವನದೇ ಕಾರುಬಾರು. ಇಲ್ಲ ಬಡಪಾಯಿ ನಿರ್ದೇಶಕನಾಗಿದ್ರೆ ನಿರ್ದೇಶಕ ಹೇಳೋ Cast ಏ ಆಗಬೇಕು.

So, Next Step - Cast Selection.

ಈ Cast Selection ಅಂದ್ರೆ ಸಿನೆಮಾ ಮಾಡೋಕೆ ಬೇಕಾಗೋ ಇತರೆ ತಂತ್ರಜ್ಞರನ್ನ ಕಲೆ ಹಾಕೋ ಕೆಲಸ. ಕತೆಗೆ
( ಮತ್ತೆ ಆ ಚಿತ್ರದ Budget ಗೆ ) ಅನುಗುಣವಾಗಿ ಅವರು ಯಾರು ಅನ್ನೋದು ನಿರ್ಧಾರ ಾಗುತ್ತೆ. Costly ಚಿತ್ರ ಆದ್ರೆ ಎಷ್ಟೇ ಖರ್ಚಾಗ್ಲಿ ಎ.ಆರ್.ರೆಹಮಾನ್ ಕಡೆಯಿಂದನೇ ಮ್ಯೂಸಿಕ್ ಬರಬೇಕು...ಪ್ರಿಯಾಂಕಾ ಛೋಪ್ರಾನೇ ಹೀರೋಯಿನ್ ಆಗಬೇಕು.. ಹೃತಿಕ್ ರೋಷನ್ನೇ ಹೀರೋ ಆಗಬೇಕು...ಇವರೇ ಕ್ಯಾಮೆರಾ ಹಿಡೀಬೇಕು ಅಂತೆಲ್ಲಾ ಆಗುತ್ತೆ. ಇಲ್ಲ ಅಂದ್ರೆ ಆ ಚಿತ್ರ Budget ಗೆ ತಕ್ಕ ಹಾಗೆ ಅವರುಗಳು ಇರ್ತಾರೆ. ಈ ತಂತ್ರಜ್ಞರು ಯಾರ್ಯಾರು ಇರ್ಬೇಕು ಅನ್ನೋದನ್ನ ನಿರ್ದೇಶಕ - ನಿರ್ಮಾಪಕ ಇಬ್ರೂ ಸಮಾಲೋಚನೆ ಮಾಡಿ Final ಮಾಡ್ತಾರೆ.


----------------------------------------------------


ಹೀಗೇ ಇನ್ನೂ ಏನೇನೋ ಇರುತ್ತೆ ಮೂವೀ ಮೇಕಿಂಗ್ ಅಂದ್ರೆ....

ಮ್ಯೂಸಿಕ್ ಡೈರೆಕ್ಷನ್ ಮತ್ತೆ BackGround Score ಗೂ ವ್ಯತ್ಯಾಸ ಇದೆ ಅಂತ ನಂಗೆ ಒಂದೆರಡು ವರ್ಷದ ಕೆಳಗೆ ಮಾತ್ರ ಗೊತ್ತಾಯ್ತು...ಅಲ್ಲೀವರೆಗೆ ನಾನು ಅವೆರಡೂ ಒಂದೇ ಅನ್ಕೊಂಡಿದ್ದೆ...

Music Direction - ಇರೋದು ಹಾಡುಗಳಿಗೆ...

Back Ground Score - ಅಂದ್ರೆ ಹಾಡು ಹೊರತುಪಡಿಸಿ ಮೂವಿಯಲ್ಲಿ ಎಲ್ಲೆಲ್ಲಿ ಸಂಗೀತ ಕೇಳ್ಸುತ್ತಲ್ಲ ಅದು.

......................ಈ ಥರ ಏನೇನೋ ಇದೆ ಮೂವಿಗಳಲ್ಲಿ ...........................
ನಿಮಗೂ ಈ ಥರ ಕಾಡು ಹರಟೆ ಮಾಡೋ ಮನಸಾದ್ರೆ ಬರೀರಿ
ಒಂದು ಸುಶಿಕ್ಷಿತ ಗೆಳೆಯರ ಗುಂಪಿನಲ್ಲಿ ಪ್ರಕಟಿಸಬಹುದಾದ ಎಲ್ಲ Topic ಗಳಿಗೂ ಸುಸ್ವಾಗತ



Over 2 You



03 November 2009

Breath New...

ನಮಸ್ತೆ...

ಪ್ರತಿ ಸಾರಿಯಂತೆ ನಾನು ಇವತ್ತು ನನ್ನ ಮನಸಲ್ಲೇ " ನಾನಿವತ್ತು ಹೀಗೇ ಬರೀಬೇಕು "
ಅಂತ Draft ಮಾಡಿ ಇಟ್ಕೊಂಡಿಲ್ಲ...

ಬದಲಿಗೆ ಈ ಕ್ಷಣದಿಂದ ವಿಚಾರ ಮಾಡ್ತಾ ಬರೀತಾ ಹೋಗ್ತೀನಿ...ಕೇಳಿ.

---------------------------

ನಮ್ಮ ಬ್ಲಾಗ್ ಶುರು ಆಯ್ತು ಡಿಸೆಂಬರ್ 31 ಕ್ಕೆ...

ಮೊನ್ನೆ 31 ಕ್ಕೆ 10 ತಿಂಗಳು ಕಳೆದ್ವು...

ಅಂದ್ರೆ ಹೆಚ್ಚುಕಮ್ಮಿ 300 ದಿನಗಳು...


ಈಗ ಹಾಗೇ ಸುಮ್ನೆ ವಿಚಾರ ಮಾಡೋಣ....


ಒಂದು ನಿಮಿಷ ಅನ್ನೋದಿದೆಯಲ್ಲ ಅದನ್ನೇ ನಾವು ಕಣ್ಮುಚ್ಚಿ ಅದರ ಪ್ರತಿ ಭಾಗಗಳನ್ನ ಅನುಭವಿಸೋ ಗೋಜಿಗೆ ಹೋದರೆ ಅದರಲ್ಲಡಗಿರೋ ಪ್ರತಿ ಕ್ಷಣದ Longivity ಯ ಅರಿವಾಗುತ್ತೆ...ಅಲ್ವಾ ಸ್ನೇಹಿತರೆ ?

ಹೀಗೆ ವಿಚಾರ ಮಾಡ್ದಾಗ , ಈಗ ನಾವೆಲ್ಲ ನಮ್ಮ ಬ್ಲಾಗ್ನೊಂದಿಗೆ ಕಳೆದಿರೋ ಕ್ಷಣಗಳೆಷ್ಟೋ ...!! ಕೋಟಿ ಖಂಡಿತ ದಾಟುತ್ತೆ ಅಲ್ವಾ ?
ಮತ್ತೂ ವಿಚಾರ ಮಾಡೋದಾದ್ರೆ.... ನಾವು ಅನುಭವಿಸಿದ ಕ್ಷಣಗಳ ಸಾರ್ಥಕತೆ ಕಣ್ಮುಂದೆ ಬರಬೇಕು.... ಸಾರ್ಥಕತೆ ನ ಹೇಗೆ ಅರ್ಥೈಸಬಹುದು ...?


ಹೀಗಾಗಬಹುದಾ ?!!
















ನಮ್ಮ ಬ್ಲಾಗ್ ನಮ್ಮ ಮಿತ್ರ ...
ಅವನ ಮನೆಯಂಗಳದಲ್ಲಿ ಕೂತು ನಾವು
ಹರಟ್ತೀವಿ... ಚರ್ಚಿಸ್ತೀವಿ...ಕವನ ವಾಚನ ಮಾಡ್ತೀವಿ...ಪ್ರೇಮ ಪ್ರಸ್ತಾಪ ಮಾಡ್ತೀವಿ...ಎಷ್ಟೆಲ್ಲ ಮಾಡಿದೀವಲ್ಲಾ !!!

ಹೀಗೆಲ್ಲ ಮಾಡೋದು ನಾವು ನಮ್ಮ ಬ್ಲಾಗ್ ನಲ್ಲಿ ಬರೆಯೋ ಮೂಲಕ...


ಈಗ ನಮ್ಮ ಬ್ಲಾಗ್ ನಲ್ಲಿ ಬರೆಯೋ ಪ್ರತಿ ಬರಹಿ ಗೆ ತಾನು ಬರೆದ ಒಂದು ಬರಹ ನಾನಲ್ಲದ ಇನ್ನೊಬ್ಬನ ಮನದ ಕದ ತಟ್ಟಿದೆ ಅನ್ನೋ ಸೂಚನೆ ಅವನಿಗೆ ತಲುಪಿದ್ರೆ ಅದೇ ನಾವು ಈ ಬ್ಲಾಗ್ ಎಂಬೋ ಮಿತ್ರನೊಂದಿಗೆ ಕಳೆದ ಸಾರ್ಥಕ ಕ್ಷಣ ಅಲ್ವಾ ?

ಆ ಸಾರ್ಥಕತೆನ ಅನುಭವಿಸಿದವ ಮಾತ್ರ ಧನ್ಯ...ಅಂತ ನನ್ನ ಅನಿಸಿಕೆ.

ಅನುಭವಿಸಲು ಸಹಕರಿಸೋದು ಒಳ್ಳೆತನ...ಆದ್ರೆ ಅನುಭವಿಸೋದು....???


ಅನುಭವಿಸಿ ನೋಡಿ ...ಅದೇನು ಅಂತ ಗೊತ್ತಾಗುತ್ತೆ


ಗೊತ್ತಾಗ್ಲಿಕ್ಕೆ ಏನು ಮಾಡ್ಬೇಕು ಅನ್ನೋ STUPID ಪ್ರಶ್ನೆ ಕೇಳ್ಬೇಡಿ...

ಬರೀರಿ...ಜಾಸ್ತಿ ಬರೀರಿ...


ನಿಮ್ಮ,
ರೇವಪ್ಪ



19 August 2009

ನಮಸ್ಕಾರ ...


ಎಲ್ಲರಿಗೂ ಶುಭ ಮುಂಜಾವು ...

ನಮ್ಮ ಬ್ಲಾಗ್ ಗಾಗಿ ಒಂದು ಹೊಸ ಧ್ಯೇಯ ವಾಕ್ಯ ಹುಡುಕಿದ್ದೀನಿ : Be The Change You Want To See ಅಂತ ...
ನಿಮ್ಮ ಮೆಚ್ಚು - ಚುಚ್ಚು ಗಳನ್ನ ತಿಳಿಸಲು ಹಿಂಜರಿಬೇಡಿ ... ಇದು ನಮ್ಮ ಬ್ಲಾಗ್.

-------------

ಒಂದು ಹೊಸ ವಾಕ್ಯ ನೋಡ್ದೆ ಮೊನ್ನೆ :

" FOLLOW THE LEADER IN THE PRESENT, TO BE A LEADER IN THE FUTURE "

ಈಗ ಈ ವಿಷಯ ಏಕೆ ಬಂತು ಅಂತೀರಾ ?
ಏನಿಲ್ಲ ಈ ಬ್ಲಾಗ್ ನಾನು ಮಾಡೋ ಬದಲಾವಣೆಗಳನ್ನ ನೋಡುತ್ತಾ : ಮೆಚ್ಚುತ್ತಾ ಎಷ್ಟು ದಿವಸ ಇರ್ತೀರಾ ? ನೀವು ನಿಮ್ಮ ಸ್ವಂತದ್ದನ್ನ ಒಂದನ್ನ ನಿರ್ಮಿಸಿ [ ನನ್ನನ್ನ ನಾನು ಇಲ್ಲಿ ಸ್ವಯಂ ಘೋಷಿತ ಲೀಡರ್ ಅಂತ ಹೇಳ್ತಿಲ್ಲ ಬದಲಿಗೆ ಹಾಗೆ ಹೋಲಿಕೆ ರೀತಿಯಲ್ಲಿ ಆ ವಾಕ್ಯ ಬಳಸದೆ ಅಷ್ಟೆ !! ತಪ್ಪು ತಿಳೀಬಾರ್ದು] ...


ಅದನ್ನ ಇಲ್ಲಿ PROMOTE ಮಾಡೋಣ ....
ನಮ್ಮ ASSOCIATE BLOGs ಅಂತ ಅವನ್ನ ಕರೆಯೋಣ...
ಮತ್ತೆ ಅಲ್ಲಿ ಏನು ವಿಷಯ ಇದ್ದರೆ ಚೆನ್ನ ಅಂತ ಕೇಳ್ತೀರಾ ? ಈ ಕೆಳಕಂಡ ಯಾವುದಾದರೂ ಆಗಬಹುದು ...
  • ನೀವು ನಿಮ್ಮೆಲ್ಲ ಅಪ್ರಕಟಿತ ಕವನಗಳನ್ನ ಪ್ರಕಟಿಸಲು ಅದನ್ನ ಬಳಸಿ
  • ನಿಮ್ಮ ಕಥೆ ಬರೆಯೋ Dairy ಆಗಿ ಅದನ್ನ ಬಳಸಿ
  • ನಾಲ್ಕು ಜನರಿಗೆ ಉಪಯೋಗ ಆಗೋ ಮಾಹಿತಿ ನೀಡೋ Site ಆಗಿ ಮಾಡಿಕೊಳ್ಳಿ
  • ದಿನಕ್ಕೊಂದು ಗಾದೆ : ವಚನ : ಸುಭಾಷಿತ ನೀಡಿ
  • ಹೊಸ ಉದ್ಯೋಗಗಳ ಬಗ್ಗೆ ವಿಸ್ತೃತ ಮಾಹಿತಿಯನ್ನ ಕನ್ನಡದಲ್ಲಿ ನೀಡಿ
ಹೀಗೆ ಜನರ ಕುತೂಹಲ ಕೆರಳಿಸುವ / ನಿಮ್ಮ ಭಾವನೆ - ಜಾಣ್ಮೆ ಯನ್ನ ಅಭಿವ್ಯಕ್ತಿಗೊಳಿಸುವ ಕೆಲಸ ಆ ಬ್ಲಾಗ್ ನಲ್ಲಿರಲಿ ....



ಪ್ರಯತ್ನಿಸಿ ... ನಿಮ್ಮ ತಲೆಯಲ್ಲಿರುವ IDEA ಮತ್ತೊಬ್ಬರು ಕದಿಯುವ ಮುಂಚೆ ...OK?

ನೋಡೋಣ ಎಷ್ಟು ಜನ ಪ್ರಯತ್ನ ಮಾಡ್ತೀರಿ ಅಂತ ...

ನಮಗೆ ಬ್ಲಾಗ್ ಬಗ್ಗೆ ಏನೂ ಗೊತ್ತಿಲ್ಲ ಅಂತ ಕೈ ಚೆಲ್ಲಬೇಡಿ ...
ನಾನು ಕಳೆದ ಡಿಸೆಂಬರ್ ನಲ್ಲಿ ನನ್ನ ಹುಟ್ಟುಹಬ್ಬದ ದಿನ ವಿಚಾರಮಾಡಿದ್ದೆ ಮುಂದಿನ ಹುಟ್ಟುಹಬ್ಬ ಬರೋದ ರೊಳಗೆ ನಾಲ್ಕು ಜನ ಗುರುತಿಸುವ ಏನಾದರೂ ಒಂದು ಕೆಲಸ ಮಾಡಬೇಕು ಅಂತ....ಆವಾಗ ಆಯ್ದುಕೊಂಡದ್ದು ಈ ಬ್ಲಾಗ್ ಅನ್ನ ...ಆಯ್ಕೆ ಮಾಡ್ಲಿಕ್ಕೆ ತಗೊಂಡಿದ್ದು ಎರಡೇ ದಿನ ...31 ಕ್ಕೆ ಶುರು ಆಯ್ತು ನಮ್ಮ ಬ್ಲಾಗ್ ...

ಈ ಕಳೆದ ಸುಮಾರು 230 ದಿನಗಳಲ್ಲಿ ನಾನು ಕಲಿತ ವಿಷಯಗಳು ಹಲವು ...ಹಾಗೆ ಕಲಿಸಿದ ವಿಷಯಗಳೂ ಹಲವು ..ಯಾಕಂದ್ರೆ ನನಗೆ ತಿಳಿದ ಪ್ರತಿ ವಿಷಯವನ್ನೂ ನಿಮ್ಮ್ಮಿಂದ ಮುಚ್ಚಿಡದೆ ತಿಳಿಸೀದೀನಿ...ಪ್ರಯತ್ನ ಮಾಡದ ಹೊರತು ಹೊಸತು ಹೊಸತಾಗೆ ಉಳಿಯುತ್ತೆ ..... ಕಳೆದ
28 ಕ್ಕೆ ನನಗೂ ಬ್ಲಾಗ್ ಅಂದ್ರೆ ಏನಂದ್ರೆ ಏನೂ ಗೊತ್ತಿರಲಿಲ್ಲ ...ನೋಡಿ ಪ್ರಯತ್ನ ಮಾಡಿ ..All The Best

Nimmava,
ರೇವಪ್ಪ

----------

ಕೆಲವು ಜನ Subscribe Via e-mail Option ಬಳಸಿದ್ದೀರಿ ...
ಆದರೆ ಕೆಲಸ ಅರ್ಧಕ್ಕೇ ಬಿಟ್ಟಿದ್ದೀರಿ ... ನೀವು ಇಲ್ಲಿ ನಿಮ್ಮ ID ನೀಡಿದ ನಂತರ ಸದರಿ ID ಗೆ Login ಆಗಿ ಅಲ್ಲೊಂದು validation e-mail ಬಂದಿರುತ್ತೆ ...ಅದರಲ್ಲಿ ನೀಡಿರೋ Link ಮೇಲೆ Click ಮಾಡಿದಾಗ ಕೆಲಸ ಪೂರ್ತಿ ...ಆವಾಗಿಂದ ನಿಮಗೆ e-mail Updates ಬರ್ತಾವೆ ಹೊರತು ಹಾಗೆ ಬರೋದಿಲ್ಲ ..ಆಯ್ತಾ ಮಧುಚಂದ್ರ ? ಇವತ್ತಿನವರೆಗೆ 12 ಜನರಲ್ಲಿ 05 ಜನ ಹಾಗೆ ಬಿಟ್ಟಿದ್ದೀರಿ ನಿಮ್ಮ Mail ಗಳನ್ನ ಒಂದು ಸಾರಿ Check ಮಾಡಿ



14 August 2009

ನಾಳೆ ಸ್ವಾತಂತ್ರ್ಯೋತ್ಸವ ...


ನಮಸ್ಕಾರ ನಮಸ್ಕಾರ ...



ನಾಳೆ
ಸ್ವಾತಂತ್ರ್ಯ ದಿನಾಚರಣೆ ...



ಚಿಕ್ಕವರಿದ್ದಾಗ ಬೇಗ ಎದ್ದು, ಇಸ್ತ್ರಿ ಮಾಡಿದ ಬಟ್ಟೆ ತೊಟ್ಟು ಧ್ವಜ ಹಿಡ್ಕೊoಡೋ ಅಥವಾ ತೊಟ್ಕೋoಡೋ ಬೆಳಿಗ್ಗೆ 7.00 ಕ್ಕೆ ಶಾಲೆಯಲ್ಲಿ ಹಾಜರಿರೋ 'ಸಮಸ್ಯೆ' ಇರ್ತಿತ್ತು ... ಈಗ ಅದ್ಯಾವುದೂ ಇಲ್ಲ ಆಲ್ವಾ ?

"ಭಾಷಣ ಉರು ಹೊಡೆದು ---ನಡುಗುತ್ತಿರುವ ಕೈ ಕಾಲು ಗಟ್ಟಿಯಾಗಿ ಹಿಡಿದುಕೊಂಡು ಭಾಷಣ ಮುಗಿಸಿದರೂ--- ಒಂದು ಪ್ಯಾರಎಗರಿಸಿದ ಗುಟ್ಟನ್ನ ಯಾರಿಗೂ ಹೇಳದೆ ...... " ಇದ್ದ ಆ ದಿನಗಳು ಖಂಡಿತ ಕಾಡ್ತಾವೆ ... ಕಾಡಬೇಕು.

ಆವಾಗ ನಮ್ಮಲ್ಲಿ ಅನೇಕ ಜನರಿಗೆ ಗಾಂಧೀ, ನೆಹರು, ಸುಭಾಶ್, ಲಾಲ್ , ಬಾಲ್, ಪಾಲ್ ಸೇರಿ ಸ್ವಾತಂತ್ರ್ಯ ತಂದು ಕೊಟ್ರು ಅಂತ ತಾಯಿ ತಂದೆ ಅಥವಾ ಇನ್ಯಾರೋ 'ದೊಡ್ಡೋರು' ಬರೆದುಕೊಟ್ಟ ಭಾಷಣದ ಉದ್ದಗಲಗಳ ಬಗ್ಗೆ ತಿಳುವಳಿಕೆ-ಭಯ-ಭಕ್ತಿ ಇತ್ತೇಹೊರತು ಆ ಮಹಾತ್ಮರು ಪಟ್ಟ ಪಾಡು--- ಅನುಭವಿಸಿದ ಕರಾಳ ದಿನಗಳ ಬಗ್ಗೆ ಖಂಡಿತ ಅರಿವಿರಲಿಲ್ಲ ...

23 ನೇ ವಯಸ್ಸಿಗೆ ಭಗತ್ ಉರುಳಿಗೆ ತಲೆಯೂಡ್ಡಿದ್ದರು ಅಂದ್ರೆ ಆ WillPower ಗೆ ಕಾರಣವಾದ ಘಟನೆಗಳ ತೀವ್ರತೆಯನ್ನ ಮನಮುಟ್ಟುವಂತೆ ನಮಗೆ ತಿಳಿಸಿದವರೆಷ್ಟು ಜನ ದೊಡ್ಡವರು ಇದಾರೆ ?

ಸ್ವಾತಂತ್ರ್ಯ - ದೇಶ - ಭಾಷೆಗಳ ವಿಚಾರ ಸ್ವಲ್ಪ ಪಕ್ಕಕ್ಕಿಡೋಣ ...
ಅಂದ್ರೆ ತೀರ ಉದಾತ್ತ ಧ್ಯೇಯಗಳು ಅಂತ ಅನ್ನಿಸಿಕೊಂಡಿರೋ ವಿಚಾರಗಳ ಬಗ್ಗೆ ಆಮೇಲೆ ನೋಡೋಣ


ನಮ್ಮ ಮನೆ --ನಮ್ಮ ಕುಟುಂಬ ವನ್ನೇ ನೋಡಿದರೆ ...

ತಂದೆ ತಾಯಿ ಕಷ್ಟದಲ್ಲಿ ಬೆಳೆದು ದುಡ್ಡಿನ ಮಹತ್ವ ಅರಿತವರು ತಮ್ಮ ಮಕ್ಕಳು ದುಡ್ಡಿನ ಬೆಲೆ ತಿಳೀದಿದ್ದಾಗ ಅವರ ಮೇಲೆ ಕೂಗಾಡೋರು...... ತಮ್ಮ ಮಕ್ಕಳನ್ನವರು ಬೆಳೆಸಿದ ಪರಿ ಬಗ್ಗೆ ಅವಲೋಕಿಸಬೇಕಲ್ವೆ ?
ತಾವು ಅನುಭವಿಸಿದ ಕಷ್ಟಗಳ ಮೇಲೆ ಸೇಡು ತೀರಿಸಿಕೊಳ್ಳೋ ಹಾಗೆ ತಮ್ಮ ಮಕ್ಕಳನ್ನ ಸುಖದಲ್ಲಿ ಬೆಳೆಸಿದರೆ ಅವರಿಗೆ ಹೇಗೆ ಆಮಹತ್ವ ದ ಅರಿವಾಗಬೇಕು ...ಆಲ್ವಾ?
ನಮಗೆ ಬರೀಲಿಕ್ಕೆ ಪೇಪರ್ ಇರ್ತೀರ್ಲಿಲ್ಲ ಅನ್ನೋರು ತಮ್ಮ ಮಕ್ಕಳಿಗೆ ಮಾರ್ಕೆಟ್ ನಲ್ಲಿರೋ ಹೊಚ್ಚ ಹೊಸತನ್ನ ಕೊಡಿಸಿ ರೂಢಿಮಾಡಿದರೆ ಅವರಿಗೆ ಕಷ್ಟದ ಅರಿವಾಗೋ ಸಾಧ್ಯತೆ ಇದೆಯಾ ?
.
.
.
.
ಇವತ್ತೂ ನಾನು ಮತ್ತೆ ದೊಡ್ದೋರನ್ನ ದೂರಲಿಕ್ಕೆ ಬಂದಿಲ್ಲ ...
ಬದಲಿಗೆ ನಮ್ಮಲ್ಲಿ I Mean ಭಾರತೀಯರಲ್ಲಿ ಬೆಳೀತಿರೋ ಕರ್ತವ್ಯ ಮರೆಯೋ : ಮರೆತು ಇನ್ನೊಬ್ಬರನ್ನು ದೂರೋ ---ಚಾಳಿ ಬಗ್ಗೆ ಹೇಳ್ಲಿಕ್ಕೆ ಹೊರಟೆ ಅಷ್ಟೆ !! Parenting ಅಂದ್ರೆ ಪಾಲನೆ ಪೋಷಣೆ ಅನ್ನೋದಿದೆಯಲ್ಲ ಅದಕ್ಕೆ Broad Meaning ಇದೆ ....
ಯಾವುದೇ ಪ್ರಾಣಿ ಪಕ್ಷಿ ತಗೊಳ್ಳಿ ಅವು ತಮ್ಮ ಮಕ್ಕಳಿಗೆ ತಮ್ಮ ಸಕಲ ವಿದ್ಯೆಗಳನ್ನೋ ಧಾರೆಯರಿತಾವೆ ... ನೀವು ಪಕ್ಷಿ ಪ್ರಾಣಿಗಳ ಸಂಖ್ಯೆ ಕಡಿಮೆಯಾಗೋದು ನೋಡಬಹುದೇ ಹೊರತು ಅವುಗಳ ಗುಣ ವ್ಯತ್ಯಾಸ ಆಗೋದು ನೋಡೋಲ್ಲ ... ಒಂದು ಕಾಲಿಲ್ಲದ ನಾಯಿ ತನ್ನ ತಂದೆ ತಾಯಿಯ ಎಲ್ಲ ಗುಣಗಳನ್ನೂ ಪಡೆಯುತ್ತೆ ಅಂದ್ರೆ ಕಲಿಸಲ್ಪಟ್ಟಿರುತ್ತೆ ...ಅದೂ ಕೂಡ ಬೇಟೆ ಯಾಡುತ್ತೆ. ಪೀಳಿಗೆ ಬೆಳೆದ ಹಾಗೆ ಗುಣ ಮರೀತ ಹೋಗೋಲ್ಲ !!

ನಾವು ಭಾರತೀಯರು ಹಿಂದೆ ಬೇರೆ ಖಂಡದ ಜನ ಬಟ್ಟೆ ಕೂಡ ತೊಡದೆ ಅಲೆದಾಡ್ತಿರಬೇಕಾದ್ರೆ ವೇದ ಬರ್ದು ರಾಮಾಯಣ -ಮಹಾಭಾರತ ಊಹಿಸಿ ಏನೇನೆಲ್ಲ ಮಾಡಿದೋರು ಹೀಗೆ ಹಿಂದೆ ಬಿದ್ರೆ ಹೇಗೆ ? ಮನುಷ್ಯ ಪ್ರಾಣಿ ತನ್ನತನ ಉಳಿಸಿಕೊಳ್ಳೋದಿಕ್ಕೆ ಸಮರ್ಥ ಆಲ್ವಾ ?ಹಾಗಾದರೆ ಇದು ಅತಿ ಬುದ್ಧಿವಂತ ಸಸ್ತನಿ (ಪ್ರಾಣಿ) ಅಂತ ಪುಸ್ತಕಗಳಲ್ಲಿ ಬರಕೊಂಡು ಓದ್ತಿರೋದು ಎಲ್ಲ ಬರಿ ಓಳಾ ?

ನಾನು ಹೇಳ್ಲಿಕ್ಕೆ ಹೊರಟಿರೋದು ಇಷ್ಟೇ ...
ಮನುಷ್ಯ ತಾನು ಹುಟ್ಟಿದಂದಿನಿಂದ ಕಲಿತ ಸಕಲ ವಿಷಯಗಳನ್ನ ಅಧಿಕಾರಯುತವಾಗಿ ತಿಳಿಸಿಕೊಡಲು -ಕಲಿಸಿಕೊಡಲು ಇರೋ ಸ್ಥಾನವೇ PARENTING OR ಪಾಲಕರ ಸ್ಥಾನ ...

ಗಂಡು ಹೆಣ್ಣು ಮದುವೆಯಾಗಿ ಮಕ್ಕಳು ಮಾಡಿದರೆ ಸಾಲದು ... ಅವ್ರನ್ನ ಸಮಾಜ ಕ್ಕೆ ಮುಳ್ಳಆಗದಿರೋ ರೀತಿಯಲ್ಲಿ ಬೆಳೆಸೋದು ಮುಖ್ಯ ... ಇಂದು ಸಂತೋಷ ಹೆಗಡೆಯವರ ಕೈಯಲ್ಲಿ ಸಿಕ್ಕಿ ಬೀಳೋ ಕಡು ಭ್ರಷ್ಟ ಹಿಂದೊಂದು ದಿನ ಏನಂದ್ರೆ ಏನೂ ಅರಿಯದ ಮಗು ಆಗಿದ್ದು ಹೆಮ್ಮರ ಹಿಂದೊಮ್ಮೆ ಸಸಿ ಯಾಗಿದ್ದಷ್ಟೇ ಸತ್ಯ ಆಲ್ವಾ ? ಅವನ ಜೀವನದಲ್ಲಿ ನಾನಾ ಸಮಸ್ಯೆಗಳು ಎದುರಾಗಿ ಅವನು ಆ ಕೃತ್ಯಕ್ಕೆ ಕೈ ಹಾಕಿದ ಅನ್ನೋದು ವಾಸ್ತವಕ್ಕೆ ದೂರವಾದ ಮಾತು ... ಬದಲಿಗೆ ಅವನು ಬೆಳೆಸಲ್ಪಟ್ಟ ಪರಿಸರ ಖಂಡಿತ ಅವನ ಮೇಲೆ ಪ್ರಭಾವ ಬೀರುತ್ತೆ. Software ಕೆಲಸ ಮಾಡ್ತಿರೋ ಹುಡುಗನೊಬ್ಬನಿಗೆ ಅಪ್ಪ KPTCL / PWD ನಲ್ಲಿ ಇಂಜಿನಿಯರ್ ಮಾಡಿಸಿ ಹೇಳೋ ಮಾತು ಏನು ಅಂತ ನಿಮಗ್ಗೊತ್ತು ? ಹಿಂದೆ ಸಾಫ್ಟ್ ವೇರ್ ನಲ್ಲಿದ್ದಾಗ ಭ್ರಷ್ಟರ ಮೇಲೆ ಜಿಗುಪ್ಸೆ ತಾಳಿದ್ದ ಮಗ ಇಂದು ತನ್ನ ಕೆಲಸಕ್ಕೆ ಒಂದು ದಿನವೂ ರಜೆ ಹಾಕದೆ ಬೆಳೆ ತಗೀತಾನೆ ಅಂದ್ರೆ ... ತಪ್ಪು ಯಾರದ್ದು ?

ಹಾಗೇನೇ ...

ಪಾಲಕರ ಸ್ಥಾನದಲ್ಲಿರೋರು ತಾವು ಮಾಡಿದ ತಪ್ಪು : ಸರಿ ಗಳಿಂದ ಪಾಠ ಕಲಿತು ತಾವು ತಿದ್ದಿ ಕೊಳ್ಳೋ ದರ ಜೊತೆ ಜೊತೆ ಗೆ ತಾವು ಕಲಿತ ಆ ಶಿಸ್ತನ್ನ ಇನ್ನೊಬ್ಬರಿಗೆ /ಕಿರಿಯರಿಗೆ ತಿಳಿಸಿಕೊಡೋ ಕಲೆಯನ್ನೂ ಕಲೀಬೇಕು.... ನಮ್ಮ ಜೀವನದಲ್ಲಾದ ಯಾವುದೋ ಘಟನೆಯನ್ನಾಧರಿಸಿ ನಾವು ಸಮಯ ಪಾಲನೆ ಕಲಿತಿದ್ದರೆ IT'S WELL & GOOD ಆದರೆ ಕಲಿತ ಶಿಸ್ತನ್ನ ಇನ್ನೊಬ್ಬರಿಗೆ ಕಲಿಸಬೇಕು ಅಂದ್ರೆ ಅದನ್ನ ಅವರ ಮೇಲೆ ಒತ್ತಾಯಪೂರಕವಾಗಿ ಹೇರೋದಲ್ಲ ಬದಲಿಗೆ ಒಂದು ಸೂಕ್ತ ಸಂದರ್ಭದಲ್ಲಿ ಮನದಟ್ಟಾಗುವಂತೆ ತಿಳಿಸಿಕೊಡೋದು ಆಲ್ವಾ?

ಇನ್ನೂ ಅನೇಕ ವಿಚಾರಗಳು ಕಾಡ್ತಿದಾವೆ ...ಆದ್ರೆ ಈಗ ನನ್ನ ಸಮಯ ಕಡಿಮೆ ...
ಇನ್ನೊಂದು ಸಾರಿ Detail ಆಗಿ ಚರ್ಚೆ ಮಾಡೋಣ ...
ಆದ್ರೆ ಈಗಾಗಲೇ ತಂದೆ ತಾಯಿ ಆಗಿರೋ ನಿಮ್ಮಲ್ಲಿ ಕೆಲವರು ...ಮತ್ತೆ ಇಂದೋ ನಾಳೆ ಆಗಬೇಕು ಅನ್ನೋ ಹುರುಪಲ್ಲಿ ಇರೋರು ಈ ವಿಚಾರದಲ್ಲಿ ಸ್ವಲ್ಪ ವಿಚಾರ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ ...
ಅಭಿಪ್ರಾಯ ತಿಳಿಸೋದಕ್ಕೆ Websense ಅಡ್ಡಿ ಬರೋಲ್ಲ ಅನ್ನೋದು ನಿಮಗೆ ತಿಳಿದಿರಲಿ...
ನಿಮ್ಮ ಅನಿಸಿಕೆ - ಅಭಿಪ್ರಾಯಗಳನ್ನ ನನಗೆ e-mail ಮಾಡಿ ...


ಸ್ವಾತಂತ್ರ್ಯೋತ್ಸವದ ಶುಭಾಶಯಗಳೊಂದಿಗೆ..
ರೇವಪ್ಪ

24 June 2009

THANK U



FIRST FOREMOST THANKS TO ....Sheetalkumar - THE INSPIRATION
Behind This Article.......



ನನ್ನ ಲೇಖನಕ್ಕೆ ತುಂಬು ಹೃದಯದ ಸ್ವಾಗತ ನೀಡಿ 'ಒಳ್ಳೆಯ' ಪ್ರತಿಕ್ರಿಯೆ ನೀಡಿ ಪ್ರೇರಿಸಿದ್ದಕ್ಕೆ ತುಂಬಾ ಧನ್ಯವಾದಗಳು ....ಹೀಗೆ ನಿಮ್ಮ ಸಹಕಾರ ಮುಂದುವರೆಯಲಿ ...



ನಿಮ್ಮವ

ರೇವಪ್ಪ

23 June 2009

............ನಿನ್ನೆಯಿಂದ ಮುಂದುವರಿದಿದೆ ..........


ಇಂದಿನ ಯುವಪೀಳಿಗೆ ತನ್ನ
ಹಠ ಬಿಡಲೊಲ್ಲದು .........



ನಮ್ಮ ಅಜ್ಜಂದಿರು ತಮ್ಮ ಛಲ ಬಿಡಲೊಲ್ಲರು............


ಇವರಿಬ್ಬರ ನಡುವೆ ಸಿಕ್ಕಿ ಹಾಕಿಕೊಂಡಿರೋರು ನಮ್ಮ ಪಾಲಕರು. ಈ GAPನ್ನ ಸಮರ್ಥವಾಗಿ FILL ಮಾಡಲು ಅವರಿಗೆ ದೇವರು ವಿಶೇಷ ಶಕ್ತಿಗಳನ್ನ ದಯಪಾಲಿಸುವ ಅಗತ್ಯವಿತ್ತು ಅಂತ ಅನಿಸುತ್ತೆ ...

ನಮ್ಮೀ ಪಾಲಕರು ಸ್ವಾತಂತ್ರ್ಯಾ ನಂತರದ ಮನ್ವಂತರಕ್ಕೆ ನಾಂದಿ ಹಾಡಿದ ಪೀಳಿಗೆಯಾಗಿ ಇತಿಹಾಸದಲ್ಲಿ CONFIRMED BIRTH BOOK ಮಾಡಿಕೊಳ್ಳೋ ಅವಕಾಶನ್ನ ಕಳಕೊಂಡಿದಾರೆ.....

ಇದಕ್ಕವರು ಕಾರಣ ಗಳೇನು ಕೊಡಬಹುದು ?

ಸ್ವಾತಂತ್ರ್ಯಾನಂತರದ ಭಾರತದ ಪರಿಸ್ಥಿತಿ ? ಬುನಾದಿಯೇ ಇಲ್ಲದೆ ಬರಿ ನೆಲದ ಮೇಲೆ ಗೋಡೆ ಏರಿಸಿಕೊಂಡ ನೆರೆ ದೇಶಗಳಂತೆ ನಮ್ಮ ದೇಶ ಅಭದ್ರವಾಗಿರಲಿಲ್ಲ ...ನಮಗಿದ್ದುದು ಮೌಲ್ಯಗಳ ಬುನಾದಿಯ ಮೇಲೆ ಕಟ್ಟಿದ ಸಂಸ್ಕೃತಿಯ ಕಂಬಗಳ ಆಧಾರದ ಮೇಲೆ ರೂಪುಗೊಂಡ ಭವ್ಯ ಕಟ್ಟಡ .

ಹೌದಪ್ಪ ...ನಮ್ಮ ದೇಶ ಸ್ವಾತಂತ್ರ್ಯಾ ನಂತರ ದಿವಾಳಿಯಾಗಿ ತನ್ನ ನೆಲೆ ತಾನು ಕಂಡುಕೊಳ್ಳಲಿಕ್ಕೆ ಹೆಣಗಾಡಿತು ಅಂತನಾ ..ಇಲ್ವಲ್ಲಾ ?

ಮತ್ತೇನು ಸಮಸ್ಯೆ ಇರಬಹುದು ... ???!!!

.
.
.
.
.
.


" ವಿಜ್ಞಾನ ಮತ್ತೆ ತಂತ್ರಜ್ಞಾನ, Industry ಮತ್ತೆ ಕೃಷಿ - ಹೀಗೆ ಅಭಿವೃದ್ಧಿ ಬಯಸಿದ್ದ ಎಲ್ಲ ಕ್ಷೇತ್ರಗಳಲ್ಲಿ ಈ ಐವತ್ತು ವರ್ಷಗಳಲ್ಲಿ ಆಗಿರುವ DRASTIC DEVELOPMENTS ಆದ ಪರಿ ನೋಡಿದೀರಾ ನನ್ಮಕ್ಕಳಾ....ಅದನ್ನೇನು ನಿಮ್ಮ ಅಜ್ಜ ಮಾಡಿದ್ದಾನಾ ? ಅದನ್ನ ಮಾಡಿದ್ದು ನಾವಪ್ಪಾ... ನಿಮ್ಮ ಅಪ್ಪಂದಿರು . ನಾವು ದಿನ ರಾತ್ರಿ ಒಂದು ಮಾಡಿ ಮಾಡಿರೋ ಈ ಶ್ರಮದ ಫಲವಾಗಿಯೇ ನೀವಿಂದು ಈ ಎಲ್ಲ ಸವಲತ್ತು ಗಳನ್ನ ಅನುಭವಿಸ್ತಿರೋದು ...." - ಇದು ಒಪ್ಪಬಹುದಾದ ಉತ್ತರ .

ಆದರೆ ಈಗ ಇಷ್ಟು ದೂರ ಬಂದ ಮೇಲೆ ಅವರು ಅಷ್ಟು ಹಿಂದೆ ಪಕ್ಕಕ್ಕಿಟ್ಟು ಬಂದಿರೋ ನಮ್ಮ ಮೌಲ್ಯ , ಸಂಸ್ಕೃತಿಯ ಗಂಟುಗಳನ್ನ ನಾವು ಎತ್ತಿಕೊಂಡು ಬರೋದು ಸಾಧ್ಯಕ್ಕೆ ಬಹಳ ದೂರ ಅನ್ನೋಕಿನ್ನ ಇವರ ವಯಸ್ಸಿನಷ್ಟು ದೂರ ...ಅದರ ಬದಲಿಗೆ ಇವರುಗಳು ಈ ದಿನಂದಿಂದಲೇ ಕಾರ್ಯಪ್ರವೃತ್ತರಾಗಿ ತಮ್ಮ ದಾರಿಯಲ್ಲಿ ಹಿಂದೆ ಸಾಗಿ ಅಲ್ಲೆಲ್ಲೋ ಇಟ್ಟು ಬಂದಿರೋ ಆ ಗಂಟುಗಳನ್ನ ಜತನವಾಗಿ ಎತ್ತಿಕೊಂಡು ಬಂದು ನಮ್ಮ ಕೈಗೆ ಹಸ್ತಾಂತರಿಸಿದರೆ ನಾವು ಅದನ್ನ ಯಥಾಸ್ಥಿತಿಯಲ್ಲಿ ನಮ್ಮ ಮುಂದಿನವರಿಗೆ ನೀಡುವ ಭರವಸೆ ಖಂಡಿತ ನೀಡ್ತೇವೆ ....ಜೊತೆಗೆ ನಮ್ಮ ಮುಂದಿನವರಿಗೆ ಈ ಇಡು ಗಂಟಿಗೆ ತಮ್ಮ ಕಾಣಿಕೆ ಸಲ್ಲಿಸುವ ಪರಿಯನ್ನೂ ತಿಳಿಸಿಕೊಡ್ತೇವೆ...

" ನೋಡ್ರಪ್ಪ ನಿಮ್ಮ ಅಜ್ಜಂದಿರ ಥರ ಇದನ್ನ ಇಲ್ಲೇ ಎಲ್ಲೋ ಮರೆತು ಮುಂದೆ ಹೋಗಿಗೀಗಿರಾ ಮತ್ತೆ ...ಅಥವಾ ಬಡ್ಡಿ ರೂಪದಲ್ಲಿ ಲಾಭ ಬರುತ್ತೆ ಅಂತ FD ಇಟ್ಟಿಗಿಟ್ಟೀರಾ ಮತ್ತೆ ...ಇದು ಅಪ್ರಯತ್ನವಾಗಿ ವೃದ್ಧಿಯಾಗದ ಸ್ವತ್ತು ...ಇದಕ್ಕೆ ನಿಮ್ಮ ಕಾಣಿಕೆ ಸೇರಿದರೇನೆ ಇದು ವೃದ್ಧಿಯಾಗೋದು..."

ಅಂತೆಲ್ಲ ಅದರ IMPORTANCE ಗಳನ್ನ ಅವರಿಗೆ ಅರ್ಥವಾಗೋ ಭಾಷೆಯಲ್ಲಿ( ಅಂದರೆ ಅರ್ಥವಾಗೋ ಹಾಗೆ ಅಂತ. ಮತ್ತೆ ಭಾಷೆ ಅಂದ್ರೆ ಇಂಗ್ಲೀಶ್ ಅಂತ ತಿಳೀಬೇಡಿ ) ತಿಳಿಸಿ....

" ನಮ್ಮ ಸಂಸ್ಕೃತಿ, ನಮ್ಮ ಪೂರ್ವಜರು ಕೂಡಿ ಟ್ಟಿರೋ ಆಸ್ತಿ. ಇದನ್ನ ಕೊಳೆಯೋದಕ್ಕೆ ಬಿಟ್ಟು ಇನ್ನೊಬ್ಬರಿಂದ ಸಾಲ ಪಡೆಯೋದು ಯಾವ ಜಾಣತನ ...ಹೋಗ್ಲಿ ಅದೂ ಯಾರಿಂದ ಪಡೀತಿದಿರಾ ನಮಗಿನ್ನ ಆಸ್ತಿ ಅಂತಸ್ತಿನಲ್ಲಿ ಕೆಳಗಿರೋರಿಂದ ...ಅವರ ಆಚರಣೆ ಗಳ್ಯಾವೂ ನಮ್ಮ ನೆಲಕ್ಕೆ ಹೊಂದುವಂಥದ್ದಲ್ಲ.

ನೀನು ಕೇಳಬಹುದು " ಅದೂ ಒಂದು ಸಂಸ್ಕೃತಿನೆ ಅಲ್ಲವ ಅಪ್ಪಾ ...ಮತ್ತೆ ಇಷ್ಟು ದಿವಸ ಚಾಲ್ತಿಯಲ್ಲಿದ್ದು ಇಷ್ಟು ಜನರಿಂದ ACCOLADE ಪಡೆದಿದೆ ಅಂದ್ರೆ ಅದರಲ್ಲಿ ಏನೂ ಇಲ್ವಾ ಅಪ್ಪಾ ..ಅಂತ ? "

ಅಲ್ಲಿರೋದು ಸ್ವೇಚ್ಚಾಚಾರ ...ನಮ್ಮಲ್ಲಿರೋದು ಸದಾಚಾರ . ನಿನಗೆ ಹಳೆ ಹಿಂದಿ MOVIE ಅಂದ್ರ ಪ್ರಾಣ ಆಲ್ವಾ ? ಅಷ್ಟೊಂದು ನೋಡಿದೀಯಾ ಅದರಲ್ಲಿ ಈ ಥರ ಯಾವತ್ತಾದರೂ ನೋಡಿದ್ದೀಯಾ ... ಅದೆಲ್ಲಾ ಯಾಕೆ ನಿನ್ನ ಫೇವರಿಟ್, ನಮ್ಮ ರಾಜಣ್ಣನ ಸಿನೆಮಾ ನೋಡಿಲ್ವಾ ...ಅವರ ಒಂದಾದರೂ ಸಿನೆಮಾದಲ್ಲಿ ನಮ್ಮ ನೆಲ , ಜಲ , ನಮ್ಮ ಸಂಸ್ಕೃತಿ ಬಿಟ್ಟು ಬೇರೆ PROPOGATE ಮಾಡಿದ್ದಿದೆಯಾ ? ಇಲ್ಲ ತಾನೇ ? ಅದಕ್ಕೆ ಹೇಳೋದು " EAST OR WEST INDIA IS THE BEST " ಅಂತ . ನಮ್ಮ ಹಿರಿಯರು ಮಾಡಿಟ್ಟಿರೋ ನೀತಿ ನಿಯಮಗಳು , ಬರೆದಿಟ್ಟಿರೋ
ಪುಸ್ತಕಗಳು ಇವೆಲ್ಲ ಪೂರ್ಣ ವಿಮರ್ಶೆ - ಪರಾಮರ್ಶೆಯ ನಂತರ ತಯಾರಾಗಿರೋದು . ನೀ ಕೇಳ್ದೆ ಲ್ಲ ಆ ಪಾಶ್ಚಿಮಾತ್ಯ ಸಂಸ್ಕೃತಿ ...ಅದರಲ್ಲಿರೋ ತಪ್ಪುಗಳನ್ನು DELETE ಮಾಡಿಕೊಂಡು , ನಮ್ಮ ನೆಲಕ್ಕೆ ಹೊಂದುವ ನಡೆ ನುಡಿಗಳನ್ನ ರೂಢಿಸಿಕೊಂಡು , ನಮ್ಮ ಹಬ್ಬ ಹರಿದಿನಗಳನ್ನ ಆಚರಿಸಿ ಕೊಂಡು ಹೋದರೆ ಅದುವೇ SIMPLEST FORM OF INDIAN CULTURE . ಇದಕ್ಕಿನ್ನ RICH ಆಗಿ ನೀನು INDIAN CULTURE ಆಚರಿಸಬೇಕು ಅಂದ್ರೆ ಸ್ವಲ್ಪ ಕಷ್ಟ ಪಡಬೇಕು ...ಅದರ ಬಗ್ಗೆ ನಿನಗೆ ನಾನು ಈ WEEKEND ನಾವಾರೂ ಜನ ಸೇರಿ ಶೃಂಗೇರಿ ಹೋಗ್ತಿದೀವಲ್ಲ ...ಅವತ್ತು ದಾರೀಲಿ ಹೇಳ್ತೀನಿ ..ಓಕೆ? "

ಅಂತೆಲ್ಲ ತಿಳಿ ಹೇಳಿ

ಸ್ವಾತಂತ್ರ್ಯಾ ನಂತರ ಮನ್ವಂತರಕ್ಕೆ ನಾಂದಿ ಹಾಡಿದ ಮೊದಲ ಪೀಳಿಗೆಯಾಗಿ ಇತಿಹಾಸ ಸೇರ್ತೀವಿ .





THANKS DAD and





Revappa

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ