22 January 2010

ಸಿನೆಮಾ & Me

ನಮಸ್ತೆ...

ಏನ್ ಬರೀಬೇಕು ಅಂತ ತಿಳೀಲಿಲ್ಲ..ಅದ್ಕೆ ಇದನ್ನ ಬರೀತಿದೀನಿ...ಇದು ಹೇಗ್ ತಿಳೀತು ಅನ್ಬೇಡಿ ಮತ್ತೆ ?!

ಸಿನೆಮಾ ಜೊತೆ ನನ್ನ ನಂಟು ಹಳೆಯದೇ...ಚಿಕ್ಕವನಿದ್ದಾಗ ನಮ್ಮ ಮನೇಲಿ ನಂಗೆ 8 ವರ್ಷವಾಗೋವರೆಗೂ ಟಿ.ವಿ.ಇರಲಿಲ್ಲ ಅನ್ಸುತ್ತೆ. ನಂತರ ಬಂತು. ಅಲ್ಲೀವರೆಗೆ ನಾನು ನನ್ನ ಆಪ್ತಮಿತ್ರ ಒಬ್ಬನಿದಾನೆ ಅವನ ಮನೇಲಿ ಟಿ.ವಿ.ನೋಡೋ ಪರಿಪಾಠ ಇಟ್ಕೊಂಡಿದ್ದೆ. ಆವಾಗ ಬರ್ತಾ ಇದ್ದ ಚಾನೆಲ್ ಅಂದ್ರೆ ಚಂದನ. ನಂತರ ಉಷೆ - ಉದಯ ..Etc. ಬಂದ್ವು. ಸಿನೆಮಾ ಅಂದ್ರೆ ಪ್ರಾಣ . ಅದೇ ಸಿನೆಮಾನ ಪ್ರತಿ ದಿನ ತೋರ್ಸುದ್ರೂ ಬೇಜಾರಿರಲಿಲ್ಲ. ಈ ಚಂದನದಲ್ಲಿ ರಾತ್ರಿ ಬರೋ ಸಿನೆಮಾನೇ ಬೆಳಿಗ್ಗೇನೂ ಹಾಕ್ತಿದ್ರಲ್ಲಾ ಅದನ್ನೂ ಬಿಡ್ತಿರಲ್ಲಿಲ್ಲ-ಶಾಲೆಗೆ ರಜೆ ಇದ್ರೆ. 9 ಗಂಟೆಗೆ ಶುರುವಾಗೋ ಮೂವೀ ರಾತ್ರಿ ಎಷ್ಟೊತ್ತಾಗ್ಲಿ ಆ ಸಿನೆಮಾ ಮುಗಿದ ಮೇಲೆನೇ ಎದ್ದು ಬರೋದು ರೂಢಿ. ನಮ್ಮ ಮನೆ ಅವರ ಮನೆಗೆ ಎಣಿಸಿಕೊಂಡು ಹೆಜ್ಜೆ ಹಾಕಿದರೆ 20 ಹೆಜ್ಜೆನೂ ಆಗಲಿಕ್ಕಿಲ್ಲ. ಆದ್ರೂ ಆ ರಾತ್ರಿ 11 - 12 ರ ಹೊತ್ತಲ್ಲಿ ದೆವ್ವ ಎಲ್ಲ Walking ಬರ್ತಾವೆ ನೋಡಿ. ನಾವು ಒಬ್ರೇ ಹೋದಾಗ ನಮ್ಮನ್ನೂ ಜೊತೆಗೆ ಕರ್ಕೊಂಡು ಹೋದ್ರೆ ಏನ್ಮಾಡೋದು ? ಹೀಗಾಗಿ ನನ್ನನ್ನ ಮನೆಗೆ ಕರೆದುಕೊಂಡು ಹೋಗ್ಲಿಕ್ಕೆ ಅಪ್ಪ ಅಥವಾ ಅಮ್ಮ ಬರಲೇ ಬೇಕಲ್ಲಾ . ನನ್ನ ಈ ಸಿನೆಮಾ ಹುಚ್ಚು ತಡೀಲಾರ್ದೆ ಅಂತೀರೋ ಅಥವಾ ಅವರಲ್ಲಿದ್ದ ಈ ಟಿ.ವಿ. ಅನ್ನೋ Magic Box ಕಡೆಗಿನ ಒಲವು ಅಂತೀರೋ ಒಟ್ನಲ್ಲಿ ನಮ್ಮನೆಗೆ ಟಿ.ವಿ. ಬಂತು. Dec. 25 1994. [ ಈ ಡೇಟ್ ಏನಕ್ಕೆ ನೆನಪಿದೆ ಅಂದ್ರೆ..ಅವತ್ತು ಗ್ಯಾನಿ ಜೈಲ್ ಸಿಂಗ್ ಸತ್ತಿರೋ ದಿವಸ...ಅದೂ ಇದನ್ನ ಬರೀಬೇಕಾದ್ರೆ wiki ನಲ್ಲಿ Search ಮಾಡಿ ಬರೆದೆ. ]


ಹೀಗೆ ಶುರುವಾದ ನನ್ನ ಸಿನೆಮಾ ಯಾತ್ರೆ ಮನೆಗೆ ಟಿ.ವಿ. ಬಂದ್ಮೇಲೆ ಕೇಳ್ತೀರಾ... ಆದ್ರೆ ಎಲ್ವೂ ಕನ್ನಡ ಚಿತ್ರಗಳು. ಹಿಂದಿ ಚಿತ್ರಗಳು ಹೈಸ್ಕೂಲ್ ಮುಟ್ಟೋ ವರೆಗೂ ನೋಡೋ ಗೋಜಿಗೂ ಹೋಗ್ಲಿಲ್ಲ. ತಿಳಿತಾನೂ ಇರ್ಲಿಲ್ಲ ActuAlly. ಆಮೇಲೆ ಹಿಂದಿ ಚಿತ್ರಗಳನ್ನೇ ಜಾಸ್ತಿ ನೋಡಿದ್ದು ಅದು ಬೇರೆ ಮಾತು. ಕೆಲವೊಮ್ಮಂತೂ ಈ ಚಂದನದವರು ರಾತ್ರಿ ಸಿನೆಮಾನ ಹೇಳ್ದೆ ಕೇಳ್ದೆ Cancel ಮಾಡಿಬಿಡೋರು. ನಮ್ಮಂಥ ಅಭಿಮಾನಿಗಳ ಪಾಡೇನು ಕೇಳ್ತೀರಾ ಅವತ್ತು. ಅದೆಂಥದೋ ಕಾರ್ನಾಟಿಕ್ ಶಾಸ್ತ್ರೀಯ ಸಂಗೀತ ತೋರಿಸ್ಕೊಂಡು ಕೂಡ್ತಿದ್ರು. ಆವಾಗಿನ ನಮ್ಮ ತಾಳ್ಮೆ ಎಷ್ಟಿತ್ತು ಅಂದ್ರೆ ಆ ಥರದ ಪ್ರೋಗ್ರಾಮ್ ನ 1.30 ಗಂಟೆ ಹಾಕಿದ್ರೂ ನೋಡಿ ಕೊನೆಗೆ ಇವತ್ತಿನ ಪ್ರೋಗ್ರಾಮ್ ಇಲ್ಲಿಗೇ ಕ್ಲೋಸ್ ಆಯ್ತು. ಎಲ್ರೂ ಮಲ್ಕೊಳಿ. ಶುಭರಾತ್ರಿ ಅಂತ ಹೇಳೋವರೆಗೂ ಅಲ್ಲೇ ಅದರ ಎದುರಿಗೆ ಅಂಟು ಹಾಕೊಂಡು ಕೂಡ್ತಿದ್ವಿ. ಅಷ್ಟೊತ್ತು ಕೂತ್ಕೊಳ್ಳಿಕ್ಕೆ ನಮ್ಮಲ್ಲಿಂದ ಒಂದು ಆಶಾವಾದ ನಮ್ಮನ್ನ ಹಿಡಿದು ಕೂಡಿಸ್ತಿತ್ತು. ಅದೇನು ಅಂದ್ರೆ ಆ 1.30 ಗಂಟೆಯ ಮಧ್ಯದಲ್ಲಿ ತಕ್ಷಣ ಒಬ್ಬ ನಿರೂಪಕಿ ಬಂದು Sorry For The Inconvenience ಅಂತ Sorry ಕೇಳಿ ಈಗ ನಿಮ್ಮ ನೆಚ್ಚಿನ ಚಲನಚಿತ್ರ ನಿಮ್ಮ ಮುಂದೆ ಅಂತ ಹೇಳ್ತಾಳೆ ಅಂತ ಆ ದೇವರಲ್ಲಿ ಪ್ರಾರ್ಥನೆ ಮಾಡ್ಕೋತಿದ್ವಿ.

---------------------

ನಂತರ ಧಾರವಾಡಕ್ಕೆ PU ಓದೋದಕ್ಕೆ ಅಂತ ಬಂದ ಮೇಲೆ ನೋಡಿದ ಮೊದಲ ಮೂವೀ Die Another Day. Around November 2002. ನನ್ನ ಲೈಫ್ ನ ಮೊದಲ ಇಂಗ್ಲೀಷ್ ಚಿತ್ರ. ಅದರ ಗ್ರಾಂಡ್ ನೆಸ್ ನೋಡಿ ಆಶ್ಚರ್ಯ ಆಯ್ತು. ನಂತರ ನೋಡಿದ್ದು ಕನ್ನಡ
'ಮೂವೀ' ನಿನಗಾಗಿ... ಈ ವಿಷಯ ಏನಕ್ಕೆ ಹೇಳ್ದೆ ಅಂದ್ರೆ 1st PU ನಲ್ಲಿ ನೋಡಿದ್ದು ಕೇವಲ ಎರಡು ಮೂವೀ. ಆದ್ರೆ, 2nd PU ನಲ್ಲಿ ನೋಡಿದ್ದು 200 ಕ್ಕಿನ್ನ ಕಮ್ಮಿ ಇಲ್ಲ. ಒಂದೇ ದಿನ ನಾಲ್ಕಕ್ಕೆ ನಾಲ್ಕೂ ಷೋ ನೋಡಿದ 3 ದಿನಗಳಿವೆ. First Time ಈ ಥರ ನಾಲ್ಕೂ ಷೋ ನೋಡಿದ್ದು ರಾಮ ಶಾಮ ಭಾಮ ರಿಲೀಸ್ ಆದ ದಿವಸ. ಹೀಗೇ ಸಿನೆಮಾ ಹುಚ್ಚು ನನ್ನನ್ನಾವರಿಸ್ತು ಅಂತ ಹೇಳೋದು ಕಷ್ಟ. ಒಟ್ಟು ಹುಚ್ಚು ಹಿಡೀತು ಸಿನೆಮಾ ನೋಡಿದ್ವಿ. ಈ ಹಂತದಲ್ಲಿ ಕನ್ನಡ ಸಿನೆಮಾಗಳಲ್ಲಿ ಕಾಣುತ್ತಿದ್ದ ತಪ್ಪುಗಳ ಸಾಗರ ಕೆಲವು ಹಿಂದಿ ಚಿತ್ರಗಳ Perfection ನೋಡಿ ಅವುಗಳಿಂದ ಮೋಹಿತನಾದೆ ಅಂತ ಹೇಳ್ಬಹುದು.

So, ಹಿಂದಿ ಚಿತ್ರಗಳ ಅಭಿಮಾನಿ ಯಾದೆ. ಕನ್ನಡ ಅಂದ್ರೆ Hate ಅಂತ ಅಲ್ಲ. But ನಮ್ಮವರು ಮಾಡೋ ಮೂವಿಗಳಲ್ಲಿ ಎಷ್ಟೊಂದು ತಪ್ಪುಗಳಿರ್ತಾವೆ ಅಂದ್ರೆ ಪ್ರತೀ ಷಾಟ್ ನಲ್ಲೂ ತಪ್ಪು ಗಳನ್ನ ಹುಡುಕೋ ಪ್ರಶ್ನೆನೇ ಇಲ್ಲ ತಾವೇ ಎದ್ದು ಕಾಣ್ತಾವೆ. ಎಲ್ಲ ಕನ್ನಡ ಚಿತ್ರಗಳೂ ಹೀಗೇ ಅಂತ ಹೇಳ್ತಿಲ್ಲ ನಾನು. ನಮ್ಮ ಚಿತ್ರರಂಗದಲ್ಲೇ ಹಿಂದೆ ಇದ್ದ ನಿರ್ದೇಶಕರು ಹಿಂದಿ ಏನು ಇಂಗ್ಲೀಷ್ ಚಿತ್ರಗಳ ನಿರ್ದೇಶಕರ ಕ್ವಾಲಿಟಿಯನ್ನೂ ಮೀರಿಸಿದ್ದಾರೆ. ಆದರೆ ನಂತರ ಬಂದ ಎರಡನೆಯ ಪೀಳಿಗೆಯ ನಿರ್ದೇಶಕರಲ್ಲಿ ಅನೇಕರು ಆ ಪರಂಪರೆಯನ್ನ ಹಾಳು ಮಾಡಿದಾರೆ. ಆದರೆ ಕೆಲವು 3 ನೇ ಪೀಳಿಗೆಯ ನಿರ್ದೇಶಕರು ನಮ್ಮ ಮೊದಲ ತಲೆಮಾರಿನವರ ಪರಂಪರೆಯನ್ನ ಮುಂದುವರೆಸುವ ತವಕದಲ್ಲಿದಾರೆ. ಅವರನ್ನ ಸಾಧ್ಯವಾದಷ್ಟು Support ಮಾಡೋದು ನಮ್ಮ ಆದ್ಯ ಕರ್ತವ್ಯ. ನಮ್ಮ ಯೋಗರಾಜ್ ಭಟ್ರು, ನಮ್ಮ ಗುರುಪ್ರಸಾದ್ , ನಮ್ಮ ಸೂರಿ ... ಈ ಮೂವರು ಕನ್ನಡದಲ್ಲಿ ಸದ್ಯ ನನ್ನ Favourite Directors. ಜೊತೆಗೆ Caliber ಇರೋ ನಟರೂ ಬಂದಿದಾರೆ. ವಿಜಯ್ - ಕಿಟ್ಟಿ - ಗಣೇಶ್ - ಪ್ರೇಮ್ ... ಇವರುಗಳು ಹೊಸಬರಾದ್ರೆ ಸುದೀಪ್ - ರಮೇಶ್ ಹಳಬರಾದ್ರೂ ಇನ್ನೂ Charm ಉಳಿಸ್ಕೊಂಡಿದಾರೆ. ಇವರುಗಳು ನನ್ನ favourite. ಹೊಸಬರಲ್ಲಿ ಕಿಟ್ಟಿ Most favourite. ನಂತ್ರ ವಿಜಯ್. ನಮ್ಮ ಗುರುಪ್ರಸಾದ್ ಚಿತ್ರಗಳಲ್ಲಿ ಬರೋ ಡೈಲಾಗ್ ಗಳಲ್ಲಿರೋ PUNCH ಮತ್ತಿನ್ಯಾವ ಚಿತ್ರಗಳಲ್ಲೂ ನೋಡಿಲ್ಲ ನಾನು. ಶಭಾಷ್. ಯೋಗರಾಜ್ ಭಟ್ರ Capacity ಹೇಳ್ಬೇಕೇ !! ಇನ್ನು ಪೋಷಕ ಪಾತ್ರಗಳಲ್ಲಿ ನಮ್ಮ ತಬ್ಲಾ ನಾಣಿ ನೂ Good. ರಂಗಾಯಣ ರಘು ಕೆಲವು ಸಾರಿ Overacting ಅನ್ಸಿದ್ರೂ ಅವರ ಕ್ಯಾಲಿಬರ್ ಶ್ಲಾಘನೀಯ. ಹಾಂ .. ಕೋಮಲ್ ಕೂಡ ಇಷ್ಟ. ಇತ್ತೀಚಿನ ಚಿತ್ರಗಳಲ್ಲಿ ಎದ್ದೇಳು ಮಂಜುನಾಥ, ಗಾಳಿಪಟ, ಇಂತಿ ನಿನ್ನ ಪ್ರೀತಿಯ, ಮಠ, ರಾಮ ಶಾಮ ಭಾಮ ಇಷ್ಟ ಆದ್ವು. ರಾಜೇಶ್ ಕೃಷ್ಣನ್ - ಎಂ.ಡಿ.ಪಲ್ಲವಿ ಸದ್ಯದ Favourite Singers.
- ಇನ್ನೂ ಸ್ವಲ್ಪ ಬರೆದು ಮುಂದುವರೆಸಬೇಕು ಅಂತಿದೀನಿ ನೋಡೋಣ.
ನಿಮ್ಮವ,
ರೇವಪ್ಪ

--------------------------------------

ಎಲ್ಲಿಗಿದ್ದೆ ...? ಹಾಂ... ನನ್ನ ಸಿನೆಮಾ ಫೇವರಿಟ್ ಗಳು... ಓಕೆ.

ಅಲ್ಲಿಂದ ಮುಂದೆ....

ನಾನು ಒಂದು ಸಿನೆಮಾನ್ನ ಮೆಚ್ಚಿದೆ ಅಂದ್ರೆ ಅದರ ವಿವಿಧ ತಂತ್ರಜ್ಞರನ್ನ ಗುರುತು ಹಾಕ್ಕೊಳ್ತೀನಿ...ಅಂದ್ರೆ Cinematographer - Music Composer - BackGround Scorer - Dialogue Writer - Screen Play Writer - & Ofcourse Director ... ಹೀಗೆ. ಇವೆಲ್ಲ ಏನಕ್ಕೆ ಅಂದ್ರೆ ಆ ಕಲಾವಿದ / ತಂತ್ರಜ್ಞ ಭವಿಷ್ಯದಲ್ಲಿ ತಯಾರಿಸೋ ಚಿತ್ರಗಳನ್ನ ತಪ್ಪದೇ ನೋಡೋಕೆ.

ನಾನು ಓದ್ಕೊಂಡಿರೋ ಪ್ರಕಾರ ಒಂದು ಚಲನಚಿತ್ರ ಹೇಗೆ ತಯಾರಾಗುತ್ತೆ ಅಂತ ಹೇಳ್ತೀನಿ ಕೇಳಿ ::

ಚಲನಚಿತ್ರ ತಯಾರಾಗೋದು ಒಂದು ಕತೆಯಿಂದ. ಅದೇ Script. ಒಂದು ನೈಜ ಘಟನೆಯೋ ಅಥವಾ ಯಾವುದೋ ಕಾದಂಬರಿಯೋ ಅಥವಾ ಯಾವುದೂ ಕಥೆಯೋ ಅಥವಾ ಯಾವುದೋ ಪರಭಾಷೆ ಚಲನಚಿತ್ರ ನೋಡಿದ ಮೇಲೆ ಮನಸಲ್ಲಿ ಮೂಡಿದ ' ಸ್ಫೂರ್ತಿ ' ಯೋ ಒಂದು Script Ready ಮಾಡೋದಕ್ಕೆ ಬುನಾದಿಯಾಗುತ್ತೆ. ಈ ಕಥೆಯನ್ನ ಹವ್ಯಾಸಿ ಚಲನಚಿತ್ರ Script ಬರಹಗಾರ Ready ಮಾಡ್ಬೇಕು ಇಲ್ಲಾ ಒಬ್ಬ ನಿರ್ದೇಶಕ Ready ಮಾಡ್ಬೇಕು. ಹೀಗೆ ಆದ್ಮೇಲೆ ಈ ಹವ್ಯಾಸಿ ಬರಹಗಾರನ ಹತ್ತಿರ ದುಡ್ಡು ಕಾಸಿನ ವ್ಯವಸ್ಥೆ ಇರೋದಿಲ್ಲ. ಅದಕ್ಕವನು ನಿರ್ದೇಶಕ ಅನ್ನೋ Cashier ಹತ್ರ ತನ್ನ 'ಕತೆ' ಹೇಳಿ ನೀವು ಇದನ್ನ ಚಲನಚಿತ್ರ ಮಾಡ್ಕೊಳೋದಾದ್ರೆ ಮಾಡ್ಕೋಳಿ, ನಂಗೆ ಸ್ವಲ್ಪ ಸಂಬಾವನೆ ಕೊಟ್ರೆ ಸಾಕು ಅಂತಾನೆ. ಆ ನಿರ್ದೇಶಕನಿಗೆ ಆ ಕಥೆ ಇಷ್ಟ ಆದ್ರೆ ಅದನ್ನ ಅವನಿಂದ ' ಕೊಂಡುಕೊಂಡು ' ಚಲನಚಿತ್ರ ತಯಾರಾಗೋಕೆ ಬೇಕಾಗೋ ಇತರೆ ಸಾಮಗ್ರಿಗಳನ್ನ ಕಲೆ ಹಾಕೋಕೆ ಶುರು ಮಾಡ್ತಾನೆ. ಆ ಇತರೆ ಸಾಮಗ್ರಿಗಳಂದ್ರೆ ನಿರ್ದೇಶಕ, ಹೀರೋ, ಹೀರೋಯಿನ್, ಮ್ಯೂಸಿಕ್ ಡೈರೆಕ್ಟರ್ ...ಇತ್ಯಾದಿ. ಇದು via ನಿರ್ದೇಶಕನ ಮೂಲಕ ಸಿನೆಮಾ ರೆಡಿಯಾಗೋ ವಿಧಾನ.

ಇನ್ನು ಖುದ್ದು ನಿರ್ದೇಶಕನೇ ಸಿನೆಮಾ ರೆಡಿ ಮಾಡೋದಾದ್ರೆ....

ನಿರ್ದೇಶಕರಲ್ಲಿ ಎರಡು ಥರ ( ಆರ್ಥಿಕವಾಗಿ ) -
 1. ಹಣವಂತ ನಿರ್ದೇಶಕರು
 2. ಬಡ ನಿರ್ದೇಶಕರು
ಈ ಹಣವಂತ ನಿರ್ದೇಶಕರೆಂದರೆ ಈ ಹಿಂದೆ ಮಾಡಿದ ಚಲನಚಿತ್ರ Commerecial Hit ಆಗಿ ಒಳ್ಳೆ ದುಡ್ಡು ಗಳಿಸಿ ಕೊಟ್ಟಿದ್ದು ಅದನ್ನ ಜತನ ಮಾಡಿಟ್ಕೊಂಡು ಮುಂದಿನ ಸ್ವಂತ ಸಿನೆಮಾ ಮಾಡೋದಕ್ಕೆ ಅಂತ ಇಟ್ಕೊಂಡಿರೋರು.

ಬಡ ನಿರ್ದೇಶಕರು ಅಂದ್ರೆ ಅವರ ಹತ್ರ ಸ್ವಂತ ದುಡ್ಡು ಇಲ್ದೆ ಇದ್ದು ಬರಿ ದುಡಿಮೆ ಗೊತ್ತಿರೋರು.

ಈ ಹಣವಂತ ನಿರ್ದೇಶಕರು ತಾವೇ ಖುದ್ದು ಚಿತ್ರ ನಿರ್ಮಾಣಕ್ಕೆ ಕೈ ಹಾಕಬಹುದು ಅಥವಾ ಒಬ್ಬ ಕಟ್ಟುಮಸ್ತಾದ ನಿರ್ಮಾಪಕನನ್ನ ಹಿಡೀಬಹುದು. ಜೊತೆಗೆ ಬಡ ನಿರ್ದೇಶಕ ತಾನೇ ರೆಡಿ ಮಾಡಿರೋ ಕಥೆಯಾಗಿದ್ರೆ ನಿರ್ದೇಶಕರಿಗಾಗಿ ಹುಡುಕಾಟ ನಡೆಸಬೇಕು ( ಆ Script writer ಥರ ) ಅಥವಾ ಯಾವ್ದೋ ನಿರ್ಮಾಪಕ ಯಾವ್ದೋ ಕಥೆ ತಂದು ಸಿನೆಮಾ ಮಾಡಿ ಅಂದಾಗ ಅವರಿಗೆ ಅವರು ಕೇಳೋ ಹಾಗೆ ಸಿನೆಮಾ ಮಾಡಿ ಕೊಡೋದು. ಹಣವಂತ ನಿರ್ದೇಶಕರೂ ಕೂಡ ನಿರ್ಮಾಪಕ ಹೇಳಿದ ಸಿನೆಮಾ ಮಾಡಿಕೊಡ್ತಾರೆ ಅನ್ನೋದೇನು ಸುಳ್ಳಲ್ಲ. ಅವರು ತಮ್ಮ ಮುಂದಿನ ಸ್ವಂತ ನಿರ್ಮಾಣದ ಸಿನೆಮಾ ಮಾಡೋಕೆ ಕಾಸು ಹೊಂದಿಸೋಕೆ ಅವರೂ ಆ ಥರ ಮಾಡ್ತಾರೆ.

But,

ಇಲ್ಲಿ ಆ ನಿರ್ದೇಶಕನ ಪ್ರಸಿದ್ಧಿ ಹೇಗಿದೆ ಅನ್ನೋದು ಕೂಡ ಕೆಲಸ ಮಾಡುತ್ತೆ ಅನ್ನೋದು ಕೂಡ ಮರೀಬಾರ್ದು.

ನಂತರ ನಿರ್ದೇಶಕ ಒಳ್ಳೇ Reputation ಇಟ್ಕೊಂಡು ಒಳ್ಳೇ ಹೆಸರು ಮಾಡಿದ್ರೆ ಮುಂದಿನದೆಲ್ಲ Almost ಅವನದೇ ಕಾರುಬಾರು. ಇಲ್ಲ ಬಡಪಾಯಿ ನಿರ್ದೇಶಕನಾಗಿದ್ರೆ ನಿರ್ದೇಶಕ ಹೇಳೋ Cast ಏ ಆಗಬೇಕು.

So, Next Step - Cast Selection.

ಈ Cast Selection ಅಂದ್ರೆ ಸಿನೆಮಾ ಮಾಡೋಕೆ ಬೇಕಾಗೋ ಇತರೆ ತಂತ್ರಜ್ಞರನ್ನ ಕಲೆ ಹಾಕೋ ಕೆಲಸ. ಕತೆಗೆ
( ಮತ್ತೆ ಆ ಚಿತ್ರದ Budget ಗೆ ) ಅನುಗುಣವಾಗಿ ಅವರು ಯಾರು ಅನ್ನೋದು ನಿರ್ಧಾರ ಾಗುತ್ತೆ. Costly ಚಿತ್ರ ಆದ್ರೆ ಎಷ್ಟೇ ಖರ್ಚಾಗ್ಲಿ ಎ.ಆರ್.ರೆಹಮಾನ್ ಕಡೆಯಿಂದನೇ ಮ್ಯೂಸಿಕ್ ಬರಬೇಕು...ಪ್ರಿಯಾಂಕಾ ಛೋಪ್ರಾನೇ ಹೀರೋಯಿನ್ ಆಗಬೇಕು.. ಹೃತಿಕ್ ರೋಷನ್ನೇ ಹೀರೋ ಆಗಬೇಕು...ಇವರೇ ಕ್ಯಾಮೆರಾ ಹಿಡೀಬೇಕು ಅಂತೆಲ್ಲಾ ಆಗುತ್ತೆ. ಇಲ್ಲ ಅಂದ್ರೆ ಆ ಚಿತ್ರ Budget ಗೆ ತಕ್ಕ ಹಾಗೆ ಅವರುಗಳು ಇರ್ತಾರೆ. ಈ ತಂತ್ರಜ್ಞರು ಯಾರ್ಯಾರು ಇರ್ಬೇಕು ಅನ್ನೋದನ್ನ ನಿರ್ದೇಶಕ - ನಿರ್ಮಾಪಕ ಇಬ್ರೂ ಸಮಾಲೋಚನೆ ಮಾಡಿ Final ಮಾಡ್ತಾರೆ.


----------------------------------------------------


ಹೀಗೇ ಇನ್ನೂ ಏನೇನೋ ಇರುತ್ತೆ ಮೂವೀ ಮೇಕಿಂಗ್ ಅಂದ್ರೆ....

ಮ್ಯೂಸಿಕ್ ಡೈರೆಕ್ಷನ್ ಮತ್ತೆ BackGround Score ಗೂ ವ್ಯತ್ಯಾಸ ಇದೆ ಅಂತ ನಂಗೆ ಒಂದೆರಡು ವರ್ಷದ ಕೆಳಗೆ ಮಾತ್ರ ಗೊತ್ತಾಯ್ತು...ಅಲ್ಲೀವರೆಗೆ ನಾನು ಅವೆರಡೂ ಒಂದೇ ಅನ್ಕೊಂಡಿದ್ದೆ...

Music Direction - ಇರೋದು ಹಾಡುಗಳಿಗೆ...

Back Ground Score - ಅಂದ್ರೆ ಹಾಡು ಹೊರತುಪಡಿಸಿ ಮೂವಿಯಲ್ಲಿ ಎಲ್ಲೆಲ್ಲಿ ಸಂಗೀತ ಕೇಳ್ಸುತ್ತಲ್ಲ ಅದು.

......................ಈ ಥರ ಏನೇನೋ ಇದೆ ಮೂವಿಗಳಲ್ಲಿ ...........................
ನಿಮಗೂ ಈ ಥರ ಕಾಡು ಹರಟೆ ಮಾಡೋ ಮನಸಾದ್ರೆ ಬರೀರಿ
ಒಂದು ಸುಶಿಕ್ಷಿತ ಗೆಳೆಯರ ಗುಂಪಿನಲ್ಲಿ ಪ್ರಕಟಿಸಬಹುದಾದ ಎಲ್ಲ Topic ಗಳಿಗೂ ಸುಸ್ವಾಗತOver 2 You1 comment:

ಪರಶು.., said...

ಹಾಯ್ ರೇವಪ್ಪಾ....

ಚೆನ್ನಾಗಿದೇರಿ ನಿಮಗೂ ಹಾಗೂ ಸಿನಿಮಾಕ್ಕು ಅಂಟಿದ ನಂಟು..
ನಮ್ಮ ವಯೋಮಾನದವರಿಗೇ ಹಾಗೆ ಅಲ್ವಾ ಮೊಟ್ಟ ಮೊದಲಿಗೆ ದೂರದರ್ಶನ ಎಂಬ ಮಾಯಾ ಪೆಟ್ಟಿಗೆಯನ್ನು ನೋಡಿದಾಗ, ದೂರವಾಣಿ ಮೂಲಕ ಮೊದಲಬಾರಿಗೆ ಎಲ್ಲೋ ದೂರದಲ್ಲಿದ್ದವರ ಬಳಿ ಮಾತನಾಡಿದಾಗ ಆಗಿರುವ ರೋಮಾಂಚನ ಅಷ್ಟಿಷ್ಟಲ್ಲ.. ಆದರೆ ಇತ್ತೀಚಿನವರಿಗೆ ಈ ರೀತಿ ಕುತೂಹಲ ಭರಿತ ಅನುಭವಗಳು ಆಗಲಿಕ್ಕೆ ಸಾಧ್ಯವಿಲ್ಲ ಬಿಡಿ... ಈಗಿನ ಮಕ್ಕಳು ಹುಟ್ಟಿ ಕಣ್ಣು ಬಿಡುವ ಮೊದಲೇ ಇಂತಹ ಸಾಧನಗಳ ಬಳಕೆ ಮನೆಯಲ್ಲಿ ಸಾಮಾನ್ಯವಾಗಿಬಿಟ್ಟಿರುತ್ತೆ ಅಲ್ವೇ....

ಸಿನಿಮಾ ವೀಕ್ಷಣೆಯೊಂದಿಗೆ ನಿಮ್ಮಲ್ಲಾದ ಬದಲಾವಣೆಗಳನ್ನೂ ಸ್ವಲ್ಪ ವಿಶ್ಲೇಷಿಸಿ ಬರೆಯಿರಿ...

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

 • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
  4 years ago
 • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದು...
  4 years ago
 • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
  5 years ago
 • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
  7 years ago
 • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
  8 years ago
 • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
  8 years ago
 • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
  8 years ago
 • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
  8 years ago