ಈಗ್ಗೇ 5 ದಶಕಗಳ ಹಿಂದಿನ ಮಾತು....ಆಗ ಇರುತ್ತಿದ್ದುದು..ಗ್ರಾಮಕ್ಕೆ..ಒಂದು ಶಾಲೆ.ಅದಕ್ಕೆ ಇರುತ್ತಿದ್ದುದು ಒಬ್ಬನೇ ಶಿಕ್ಷಕ.ಅಂದಿಗೆ ಶಿಕ್ಷಕನಾದವನಿಗೆ ಸಮಾಜದಲ್ಲಿ ಅವನದ್ದೇ ಆದ ವಿಶೇಷ ಸ್ಥಾನ ಮಾನಗಳಿದ್ದವು.ಆತ ಕೇವಲ ಶಾಲೆಗೆ ಮಾತ್ರ ಶಿಕ್ಷಕನಾಗಿರದೆ,ಈಡೀ..ಊರಿಗೆ ಶಿಕ್ಷಕ....ಆದರ್ಶ ವ್ಯಕ್ತಿ.ಆ ಕಾಲದಲ್ಲಿ, ಸಾಕ್ಷರಾಗಿದ್ದುದು..ಅಲ್ಲಿನ ಶಾಲೆಯ ಶಿಕ್ಷಕ ಮತ್ತು ಆತನ ವಿದ್ಯಾರ್ಥಿಗಳು ಮಾತ್ರ ಹೀಗಾಗಿ...ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಯ ಮೂಲ ಶಿಕ್ಷಕ ಮಾತ್ರ ಆಗಿರುತ್ತಿದ್ದ.ಊರಿನಲ್ಲಿ ನಡೆಯುವ ಚಿಕ್ಕ ಪುಟ್ಟ ಜಗಳ,ಕಾದಾಟಗಳ ತೀರ್ಪುಗಾರ ಆತನೇ ಊರಿನ ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡುವ ಮಾರ್ಗದರ್ಶಿ.ಎಷ್ಟೋ ಸಲ ಊರಿಂದ ಊರಿಗೆ ಮಾಹಿತಿ ರವಾನಿಸುವ ಮಧ್ಯವರ್ತಿ,ಈಡೀ ರಾಜ್ಯ .ದೇಶ ವೀದೇಶಗಳ ಸುದ್ದಿಗಳನ್ನು ಊರಿನವರಿಗೆ ತಿಳಿಸುವ ಸಂವಾಹಕ.ಹೀಗೆ ಆತನ ಪಾತ್ರ ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತಿತ್ತು.ಆತ ಊರಿನವರ ದೃಷ್ಟಿಯಲ್ಲಿ,ವಿದ್ಯಾರ್ಥಿಗಳ ದೃಷ್ಟಿಯಲ್ಲಿ "ಸಾಕ್ಷಾತ್ ದೇವರು".
ಅಂದಿನ ಶಾಲೆಗಳಲ್ಲಿ ಇರುತ್ತಿದ್ದುದು..1 ಅಥವಾ 2 ಕೊಠಡಿಗಳು ಭೋದನೋಪಕರಣವೆಂದರೆ.ಕರಿಹಲಗೆ ಮಾತ್ರ.ಹೀಗಾಗಿ ಶಿಕ್ಷಕ ತನಗೆ ಗೊತ್ತಿದ್ದಿದ್ದಷ್ಟನ್ನು ಕೇವಲ ತನ್ನ ಅಭಿವ್ಯಕ್ತಿ ಸಾಮರ್ಥ್ಯದಿಂದ ಮಕ್ಕಳಿಗೆ ಅರ್ಥೈಸಬೇಕಾಗಿತ್ತು.ಯಾವುದೇ ರೀತಿಯ ಬೋಧನೆ- ಕಲಿಕಾ ಸಾಮಾಗ್ರಿಗಳು ಲಭ್ಯವಿರಲಿಲ್ಲ.ಬೋಧನೆ ಎನ್ನುವುದು ಕೇವಲ ಶಿಕ್ಷಕನ ವೈಯಕ್ತಿಕತೆಯನ್ನು ಆಧರಿಸಿತ್ತು.ಬಹುತೇಕ ಶಿಕ್ಷಕರಿಗೆ ಮಕ್ಕಳ ಮೇಲೆ ವೈಯಕ್ತಿಕ ಕಾಳಜಿ ಇತ್ತು.ಈ ಕಾರಣದಿಂದಲೇ ಮಕ್ಕಳನ್ನು ದಂಡಿಸುವ ನೈತಿಕ ಹಕ್ಕನ್ನು ಆತ ಹೊಂದಿರುತ್ತಿದ್ದ. " ಛಡಿ ಛಡಿ ಚಂ ಚಂ ವಿದ್ಯಾಯೇ ಘಂ ಘಂ"ಎಂಬುದು ಬಹುತೇಕ ಶಿಕ್ಷಕರ ನಿಲುವಾಗಿತ್ತು.ಆದರೂ ಕೂಡ ಶಿಕ್ಷಕರೆಂದರೆ ಮಕ್ಕಳಿಗೆ ವೈಯಕ್ತಿಕವಾದ ಪ್ರೀತಿ,ಗೌರವ ಅಭಿಮಾನಗಳಿದ್ದವು.
ಕಾಲ ಬದಲಾದ ಹಾಗೇ ಶೈಕ್ಷಣಿಕ ವ್ಯವಸ್ಥೆ, ಸಾಮಾಜಿಕ ವ್ಯವಸ್ಥೆ ಅದರೊಳಗಿನ ಒಂದು ಭಾಗವಾದ ಶಿಕ್ಷಕರು-ವಿದ್ಯಾರ್ಥಿಗಳ ಪಾತ್ರ ಕೂಡ ಬದಲಾಗುತ್ತಾ ಸಾಗಿದೆ....
ಈಗ ಪ್ರತಿ ಹಳ್ಳಿಗೂ ಶಾಲೆಗಳಿವೆ,ಬಹುತೇಕ ಎಲ್ಲಾ ಶಾಲೆಗಳಲ್ಲೂ ಮೂಲಭೂತ ಸೌಕರ್ಯಗಳಿವೆ,ಕನಿಷ್ಠ 2-3 ಶಿಕ್ಷಕರಿದ್ದಾರೆ,ಜೊತೆಗೆ ಬೋಧನೆಯ ಮೌಲ್ಯ ವಿಧಾನ ಪದ್ದತಿ,ಪಠ್ಯವಿಷಯ,ಪಠ್ಯವಸ್ತು,ಭೋ
ಸಮಾಜ-ಶೈಕ್ಷಣಿಕ ವ್ಯವಸ್ಥೆ ಬದಲಾಗಿದ್ದರೂ ಕೂಡ ಸಮಾಜದಲ್ಲಿ ಶಿಕ್ಷಕನಿಗಿರುವ ಗೌರವ,ಮೌಲ್ಯ ಕಡಿಮೆಯಾಗಿಲ್ಲ ಅನ್ನಬಹುದು.
ಆದರೂ,ಇಂದಿನ ದಿನಗಳಲ್ಲಿ ಶಿಕ್ಷಣ -ಶಿಕ್ಷಕ ಎಂಬ ಪವಿತ್ರ ವಿಚಾರವನ್ನು,ಮಾರಾಟಕ್ಕೆ ಇಳಿಸುತ್ತಾ ಇರುವುದು ಶೋಚನೀಯ ಸಂಗತಿ.
ನನ್ನೆಲ್ಲಾ ಶಿಕ್ಷಕರಿಗೆ ಗೌರವಪೂರ್ವಕ ವಂದನೆಗಳೊಂದಿಗೆ,
ನಿಹಾರಿಕಾ.








