26 May 2009

ಮತ್ತೊಂದು ಪ್ರೇಮ ನಿವೇದನೆ ....ಅಚ್ಚರಿಯ ಅಭ್ಯರ್ಥಿಯಿಂದ

ಭಾ ರಿ



ಹೇಯ್.......! ಮುದ್ದು ಹುಡುಗಾ.......
ಯಾಕೆ ಹೀಗೆ ಕಾಡಿಸ್ತೀಯಾ? ಮಳೆ ನಿಂತ ಮೇಲೆ ಮೆಲ್ಲನೆ ಬೀಸುವ ಹಿತವಾದ ತಂಗಾಳಿಯ ಹಾಗೆ!!!...
ನಿನ್ನ ಸಾಮೀಪ್ಯ ಭಾವವೇ..... ಒಂದು ಆಹ್ಲಾದಕರ ಅನುಭೂತಿ............
'ನಾನು ಎಲ್ಲೇ ಹೋದ್ರು ನನ್ನ ಹಿಂದೆ ಹಿಂದೆನೇ ಬರ್ತಿಯಾ!', ನಾನು ತಿರುಗಿ ನೋಡಿದ್ರೆ,
'ಏನೂ ಗೊತ್ತೇ ಇಲ್ಲಾ!'
ಅನ್ನುವವನ ಹಾಗೆ ಗಕ್ಕನೆ ನಿಂತು ಬಿಡ್ತೀಯಾ!.....
''.....................!''
'ಇಲ್ಲಾ,ಅಂತಾ ಹೇಳ್ಬೇಡಾ!......?'
'ಅಲ್ಲಾ! ಕಣೋ.....ಕಾರಿಡಾರಲ್ಲಿ ನಿಂತ್ರೂ ಕಾಣ್ತಿಯಾ!?, ಬಸ್ಸಲ್ಲಿ ವಿಂಡೋ ಸೀಟಲ್ಲಿ ಕೂತಿದ್ರೂ
ಕಾಣ್ತಿಯಾ!?,ದಾರಿಯಲ್ಲಿ ನನ್ನ ಪಾಡಿಗೆ ನಾನು ಹೋಗ್ತಾ ಇದ್ರೇ.......
ತ್ತೆ, ಮತ್ತೆ, ನಿನ್ನ ಕಡೆ ನೋಡೊವಂತೆ ಮಾಡಿ, ನನ್ನ ಮನ ಒಲವಿಗಾಗಿ ಹಂಬಲಿಸುವಾಗ ಒಮ್ಮೆಲೆ
ಮರೆಯಾಗಿ ಹೋಗ್ತಿಯಾ........!?
' ನಿನ್ನ ಒಂದು ದಿನಾ ನೋಡಿಲ್ಲಾ ಅಂದ್ರೂ...... ಏನೋ ಕಳೆದುಕೊಂಡ ಭಾವ'!
"ಪ್ಲೀಸ್......... ಕಾಯಿಸ ಬೇಡ್ವೋ..............." .
' ಹೇ... ತುಂಟ, ಏನ್ ಮೋಡಿ ಮಾಡಿದಿಯಾ ಮಾರಾಯಾ ನೀನು!.......?'
ರಾತ್ರಿ ಎಲ್ಲಾ ಕಿಟಕಿಯಲ್ಲಿ ಇಣುಕಿ ನೋಡಿ, ನನ್ನ ನಿದ್ದೆ ಕದ್ದು, ಬೆಳಿಗ್ಗೆ ಮತ್ತೆ ನಿನ್ನ ನೊಡೋ ಬಯಕೆ ಹುಟ್ಟಿಸ್ತಿಯಲ್ಲಾ!?
'ಮತ್ತೆ, ಮತ್ತೆ ಯಾಕೆ ಸೋಲ್ತೀನಿ ನಾನು!?'
'ನೋಡೊಕೆ, ಕೇವಲ ನಿನ್ನ ನೋಡೋಕೆ ಯಾಕೆ ಇಷ್ಟು ಹಂಬಲಿಸ್ತಿನಿ!?
'ನೀನು ಬೆಳ್ಳಗೆ ಚಂದವಾಗಿ ಇದಿಯಾ, ಅಂತಾನಾ?,ನನ್ನ ಮನದ ಹೊಂಗನಸಿಗೆ ಜೀವ ತುಂಬುತ್ತೀಯಾ, ಅಂತಾನಾ?,
'ನನ್ನ ಭಾವನೆಗಳಿಗೆ ಮೌನವಾಗಿ ಸ್ಪಂದಿಸ್ತೀಯಾ,ಅಂತಾನಾ?
ಹಾಗೇ ಸುಮ್ಮನೆ ಬೆಳೆದ ಸ್ನೇಹ ದಿಂದ ಖುಷಿ ಕೊಡ್ತೀಯಾ ಅಂತಾನಾ?,
ನಿನ್ನ ನೋಡಿ " ಸುಂದರ ಬೆಳದಿಂಗಳ ತಂಪಿನ ಅಂಗಳದಲಿ............"
ಹಾಡನ್ನ ಗುನುಗೊ
ಹಾಗೆ ಮಾಡ್ತೀಯಾ ಅಂ
ತಾನಾ?
ಇಲ್ಲಾ...... ನೀನೊಂದು ವಿಸ್ಮಯ, ಬೆರಗು ಅಂತಾನಾ........................?'
'ಗೊತ್ತಿಲ್ಲಾ,ಕಣೋ........ ಯಾಕೆ ಅಂತಾ!.........?
".............................................................?"

'ನಿನಗೇನು ಗೊತ್ತು'!? ಬರೀ ನನ್ನ ಮುಂದೆ ಕಾಣಿಸಿಕೊಳ್ಳೋದು ಬಿಟ್ಟು!?
'ಹೌದು.....! ನಿನ್ನ ಮೌನದಾಚೆ ಏನಿದೆ?'
"................................................."
'ಯಾಕೂ ಇಲ್ಲ ಕಣೋ......... ಏನೋ...... ತಿಳ್ಕೋಬೇಕು ಅಂತಾ ಆಸೆ..............!'.
".............................."
'ಹೇಳಲ್ಲಾ..... ಅಂದ್ರೆ, ಬೇಡಾ ಬಿಡು.ನೀನೇ ಇಟ್ಕೊಂಡು ಉಪ್ಪಿನಕಾಯಿ ಹಾಕ್ಕೋ!'
".............................?"
"ನಿನಗೇನು ಬೇಕು?" ಅಂತಾ,ಕೆಳ್ತೀಯಾ?
'ಏನೂ.....ಬೇಡಾ ನೀನು ಬೇಕು ,ದಿನವೆಲ್ಲಾ ನಿನ್ನ ಮುಗ್ಧ ಮುಖ ನೋಡ್ತಾ ಕೂತಿದ್ರೆ ಸಾಕು.
ಹೌದು........
ಇಡೀದಿನಾ ನಿನ್ನ ನೋಡ್ಬೇಕಲ್ಲಾ? ಯಾವಾಗ ಸಿಗ್ತೀಯಾ?.
ಗೊತ್ತು ನೀನು ಇಡೀದಿನಾ ಸಿಗಲ್ಲಾ ಅಂತಾ.ಪರ್ವಾಗಿಲ್ಲಾ ಕಣೋ.....
ನಿನಗೆ ಎಷ್ಟು ಹೊತ್ತು ಪುರುಸೊತ್ತು ಆಗತ್ತೊ
ಷ್ಟು ಹೊತ್ತು ಸಿಕ್ಕು ಸಾಕು.
ಅಷ್ಟಕ್ಕೆ ಖುಷಿ ಪಡ್ತೀನಿ.
' ನಿನಗೆ ಗೊತ್ತಾ?' ನೀನ್ಯಾವಾಗಲೂ ನನ್ನ ಜೋತೇನೆ ಇರ್ತೀಯಾ.......
"......................?"
ಈಗ ನೋಡು, ನಿನ್ನ ಸಹವಾಸವೇ ಬೇಡಾ ಅಂತಾ ಮುಸುಕು ಹಾಕಿ ಮಲಗಿದ್ರೂ, ಕನಸಲ್ಲಿ,
"ಮುಗಿಲಲ್ಲಿ ನಿನ್ನ ಕೈ ಹಿಡಿದು ಮೇಘಗಳ ಮಧ್ಯೆ ತೇಲುತ್ತಾ ಇರೋ ಹಾಗೆ" ಬಂದು ಕಾಡ್ತೀಯಾ.
".............................!"
'ನಿನ್ನ ಬಿಟ್ಟು ಹೋಗ್ತೀನಿ' ಅಂತ ದರಿಸ್ತೀಯಾ? ಅದೆಲ್ಲಾ ಆಗಲ್ಲಾ.........
ಯಾಕೆ ಗೊತ್ತಾ? ನೀನು ನನ್ನ ಕಣ್ಮುಂದೆ ಬರಲಿಲ್ಲಾ ಅಂದ್ರೂ 'ನನ್ನ ಕಣ್ಣಲ್ಲಿ ನಿನ್ನದೇ ಚಿತ್ರ' ಇರತ್ತೆ.
ಮರೆಯೋ ಹಾಗಿದ್ರೆ, ಇ
ಷ್ಟೊಂದು ಹುಚ್ಚು ಹಿಡಿಸ್ಕೊತಾ ಇರಲಿಲ್ಲಾ ಬಿಡು.........
"............................!?"
'ಏನ್ಮಾಡ್ತೀನಿ ಗೊತ್ತಾ?' ನನ್ನ ಮನಸ್ಸಲ್ಲಿ ನಿನ್ನ ಬೆಚ್ಚಗೆ ಇಟ್ಕೊಂಡು ಆರಾಧನೆ ಮಾಡ್ತೀನಿ.
'ನನಗೊತ್ತು, ನಿನ್ನನ್ನ ತುಂಬಾ ಜನ ಇಷ್ಟ ಪಡ್ತಾರೆ ಅಂತಾ.ಆದ್ರೆ......... ನನ್ನಷ್ಟು!?'
'ಯಾರೂ ಇಲ್ಲ. ಅಲ್ಲಾ .......?
"..................................?"
'ಈಗ ನೋಡು!' ನನ್ನ ಲಹರಿಗೆ ನೀನೇ ,"ಭಾವ"
ಬಾಳಿ(ನಿ)ಗೆ,ನೀನೇ "ಚೇತನ"
'ಈಗಲಾದ್ರೂ, ಒಪ್ಪಿಕೋತೀಯಾ?' ನನ್ನಷ್ಟು ಯಾರೂ ನಿನ್ನ ಇಷ್ಟ ಪಡಲ್ಲಾ ಅಂತಾ...........!










7 comments:

yashavanth said...

ನಿಹಾರಿಕಾ.... ನಿಮ್ಮ ಪದ ಸಂಯೋಜನೆ..... ನಿರೂಪಣೆ ಸೊಗಸಾಗಿದೆ.... ಚಂದ್ರನ ಬೆಳದಿಂಗಳ ನೆನಪಿಸುವಷ್ಟು ಹಿತವಾಗಿದೆ....
ನಿಮ್ಮ ಭಾವ ಲಹರಿಯ ಝರಿ ಹೀಗೇ ಹರಿದು ಬರಲಿ.... ಬೇರೆ ಪ್ರಾಕಾರಗಳಲ್ಲೂ ನಿಮ್ಮ ಬರವಣಿಗೆಯನ್ನು ನಿರೀಕ್ಷಿಸೋಣವೇ...?

sakkath sacchi.blogspot.com said...

ನಿಹಾರಿಕ ,ನಿಮ್ಮ ಭಾವಲಹರಿ ಅತ್ಯಂತ ಮುಗ್ಧವಾಗಿ ಮನೋಹರವಾಗಿ ಕುತೂಹಲಕಾರಿಯಾಗಿ ಹಾಗು ಭಾವಪೂರ್ಣವಾಗಿ ಮೂಡಿ ಬಂದಿದೆ. "ನಿನ್ನ ಸಾನಿದ್ಯ , ನಿನ್ನ ಸಾಮಿಪ್ಯ ,ನಿನ್ನ ಸಖ್ಯ -ಇದಿಷ್ಟೇ ನನಗೆ ಮುಖ್ಯ -ಅಲ್ಲೇ ಇರುವುದು ನನ್ನ ಬಾಳಿನ ಸೌಖ್ಯ"-ಎನ್ನುವ ಭಾವವನ್ನು ನೀವು ಆ ಚಂದ್ರನ ಬಗ್ಗೆ ಇರಿಸಿಕೊಂಡಿರುವುದು ನಿಮ್ಮೊಳಗಿನ ಮೊಗುವನ್ನು ಬಿಂಬಿಸುತ್ತದೆ.ನಮ್ಮ ಕನ್ನಡ ಭಾಷೆಯು ಎಷ್ಟೊಂದು ಸುಂದರವಾಗಿದೆ ಹಾಗು ಮಧುರವಾಗಿದೆ ಎಂಬುದನ್ನು ನಿಮ್ಮ ಭಾವಪೂರ್ಣ ಲೇಖನವು ಮತ್ತೊಮ್ಮೆ ಸಾಬೀತು ಪಡಿಸಿದೆ .ನಿಜವಾಗಲು ನಿಮ್ಮ ಭಾವ ಲಹರಿಯು ನನಗೆ ತುಂಬಾ ತುಂಬಾ ಇಷ್ಟವಾಯಿತು ...........................ನಿಹಾರಿಕ ಎಂದರೆ ನಕ್ಷತ್ರ ಪುಂಜ.
ಹೀಗಿದ್ದೂ ನೀವು ಚಂದ್ರನನ್ನು ನೋಡಲು ಕಾತರಿಸುವುದು ಎಷ್ಟು ವಿಸ್ಮಯವಲ್ಲವೇ?ಬಹುಷಃ ನೀವು ಅವನ ಮನವನ್ನು ನೋಡಲು(ಅರಿಯಲು) ಯತ್ನಿಸುತ್ತಿರಿವಿರೆನೋ ?ಆದಷ್ಟುಬೇಗ ಅವನ ಮುಗ್ದ ಮನವು ನಿಮಗೆ ಕಾಣಲಿ?ಹೃತ್ಪೂರ್ವಕ ಅಭಿನಂದನೆಗಳೊಂದಿಗೆ ,ಇನ್ನೂ ಹೆಚ್ಚಿನ್ನದ್ದನ್ನು ನಿರೀಕ್ಷಿಸುತ್ತ -ಸಚ್ಚಿ

Unknown said...

ನಿಹಾರಿಕ ಅವ್ರೆ ನೀವು ಬರೆದ article ಚೆನ್ನಾಗಿತ್ತು. ಚಂದಿರನ ಜೊತೆಗಿನ ಒಡನಾಟ, ಸ್ವಲ್ಪ ಮುಂಗೋಪ, ಪ್ರೀತಿ ತುಂಬಿದ ಮಾತುಗಳು ಇವೆಲ್ಲ ಚೆನ್ನಾಗಿ ಮೂಡಿ ಬಂದಿವೆ.

Ferojasha said...
This comment has been removed by the author.
Ferojasha said...

ಹಾಯ್ ನಿಹಾರಿಕಾ...... ಭಾವಲಹರಿ ತು0ಬಾ ಚನ್ನಾಗಿದೆ...... ನೀವು ಆ ಹುಡ್ಗನ್ನ ತು0ಬಾ ಹಚ್ಕೋ0ಡಿರೋ ಹಾಗೆ ಕಾಣ್ಸುತ್ತೆ.....

madhu.br said...

ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುವ ನಿಮ್ಮ ಪ್ರೀತಿಯ ಚಂದ್ರಮನ ಪ್ರೇಮ ಪತ್ರವು ತುಂಬಾ ಚನ್ನಾಗಿ ಮುೂಡಿ ಬಂದಿದೆ, ನಿಮ್ಮ ಪದಪುಂಜದಿಂದ ಮುೂಡಿ ಬಂದಿರುವ ಪದಸಂಯೋಜನೆ ಕಥೆಯನ್ನು ಕೊನೆಯವರೆಗೂ ಓದಿಸಿಕೊಂಡು ಹೋಗುತ್ತದೆ,ನಿಮ್ಮಿಂದ ಹೆಚ್ಚಿನದನ್ನು(ಸಾಹಿತ್ಯ ಕೃಷಿ) ನಿರೀಕ್ಷಿಸುತ್ತ ...

ಪರಶು.., said...

ಭೆಷ್ ಭೆಷ್ ನಿಹಾರಿಕಾ...!
ನಿಮ್ಮ ಭಾವಲಹರಿ ಸೊಗಸಾಗಿದೆ.
'ನೀಹಾರಿಕಾ ಪ್ರಪಂಚದಲ್ಲಿ' ಚಂದಿರನಿಗೊಂದು ಪ್ರೇಮ ನಿವೇದನೆ ಬರೆಯುತ್ತಾ ಬ್ಲಾಗ್ ನೊಳಗೆ ಅಡಿ ಇಟ್ಟ ನಿಮ್ಮ ಭಾವಯಾತ್ರೆ ಹೀಗೇ ಸಾಗಲಿ...

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago