ನಮ್ಮ ಸಂವಿಧಾನದ Article 48 ನಲ್ಲಿ ಗೋಹತ್ಯೆ ನಿಷೇಧ ಕುರಿತು ಹೇಳಲಾಗಿದೆ. ನಾವಿರುವುದು For the people, by the people ಎಂದು ಹೇಳುವ Democratic Country ಅಲ್ಲಿ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ.
Indian Constitution Article 48 reads: Organisation of agriculture and animal husbandry", Its state "the state shall endeavor to organise agriculture and animal husbandry on modern and scientific lines and shall, in particular, take steps for preserving and improving the breeds, and prohibiting the slaughter of cows and calves and other milch and draught cattle".
ಅದರಂತೆ, ಕೃಷಿ ಮತ್ತು ಪಶು ಸಂಗೋಪನೆ ಅಭವೃದ್ದಿ ಕುರಿತು ಆಧುನಿಕ ಹಾಗೂ ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಳ್ಳುವ/ಅನುಸರಿಸುವ ಬಗ್ಗೆ ಪ್ರಯತ್ನಿಸುವುದು ಹಾಗೂ ವಿಶೇಷವಾಗಿ ಗೋಹತ್ಯೆ ನಿಷೇಧ ಮತ್ತು ಜಾನುವಾರುಗಳ (ದನ, ಕರು, ಎತ್ತು, ಎಮ್ಮೆ, ಹೋರಿ) ಪೋಷಣೆ, ಸಂರಕ್ಷಣೆ ಮಾಡುವ ಕುರಿತಂತೆ ಆಯಾ ರಾಜ್ಯಗಳು ಕ್ರಮ ಕೈಗೊಳ್ಳುವುದು ಎಂದು ಹೇಳಲಾಗಿದೆ.
Article 48 specifically provides that the State should make a law prohibiting slaughter of cows, calves as also milch and draught.ನಮ್ಮ ಸಂವಿಧಾನ ಎನ್ನುವುದು Sacrosanct and Superior ಅಂದರೆ ಧಾರ್ಮಿಕ ಮನ್ನಣೆ ಪಡೆದ, ಸರ್ವಶ್ರೇಷ್ಟವಾದ, ಅಪವಿತ್ರ ಮಾಡಕೂಡದ ಹಾಗೂ ರಾಜ್ಯದ ನೀತಿ-ನಿಯಮಗಳು/ಸಾಮಾನ್ಯ ನಿಯಮಗಳು ಕುರಿತಂತೆ ಮಾರ್ಗದರ್ಶನ ನೀಡುವ ಪ್ರಬಲವಾದ ಒಂದು ಶಾಸನ. ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರ, ಗುಜರಾತ್ ರಾಜ್ಯಗಳಲ್ಲಿ ಗೋಹತ್ಯೆ ನಿಷೇಧವನ್ನು ಜಾರಿಗೆ ತಂದು ಸಂವಿಧಾನಕ್ಕೆ ಗೌರವ ಸಲ್ಲಿಸಿದ್ದಾರೆ ಎಂದು ಹೇಳಬಹುದು.
ಗುಜರಾತ್ ನಲ್ಲಿ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಜಾರಿಗೆ ತಂದ ಕುರಿತು ಒಂದು Case ದಾಖಲಾಯಿತು. ಅದೇ, "State of Gujarath V/s Mirzapur Moti Kureshi Kasab Jammath" (2005(8) SCC 534). And this was referred to larger bench of 7 judges and the judgement was,
"ಸಂವಿಧಾನದ Article 48 ರಲ್ಲಿ ಹೇಳಲಾಗಿರುವ ವಿಷಯಗಳ ಹಿತದೃಷ್ಟಿಯಿಂದ, ರಾಜ್ಯ ಸರ್ಕಾರ ಯಾವುದೇ ನಿರ್ಧಾರಗಳನ್ನು ಕೈಗೊಂಡರೂ ಅದು ಅಕ್ರಮವಲ್ಲ, ಸಂವಿಧಾನದ ಪ್ರಕಾರ ನ್ಯಾಯಯುತವಾದದ್ದು, " ಎಂಬ ನಿಲುವನ್ನು ಎತ್ತಿ ಹಿಡಿಯಿತು.
ಅಲ್ಲದೇ ಯಾವುದೇ ರಾಜ್ಯ ಶಾಸಕಾಂಗವು ಗೋಹತ್ಯೆ ನಿಷೇಧಿಸಲು ದಕ್ಷ ಮತ್ತು ಸಮರ್ಥನೀಯವಾಗಿರುವುದಲ್ಲದೇ ಅಂತಹ ಕಾನೂನನ್ನು Article 48 ರಲ್ಲಿ ಸ್ಪಷ್ಟವಾಗಿ ಹೇಳಿರುವಂತೆ ಜಾರಿಗೆ ತರುವುದು ಸಹ ಸಂವಿಧಾನಾತ್ಮಕ ಕರ್ತವ್ಯವಾಗಿದೆ. ಸಂವಿಧಾನದಲ್ಲಿ ಈ ಬಗ್ಗೆ ಎಲ್ಲಿಯೂ redundant ಆಗಿ ಅಂದರೆ ಅತಿರೇಕವಾಗಿ ಹೇಳಲಾಗಿಲ್ಲ.
Indian Constitution ಗೆ ಗೌರವ ಕೊಡಬೇಕಾದ್ದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಕರ್ತವ್ಯ. ಆದ್ದರಿಂದ, ಈ ಶಾಸನಕ್ಕೆ ವಿರೋಧ ವ್ಯಕ್ತಪಡಿಸುವುದು, ಭಾರತದ ಸಂವಿಧಾನಕ್ಕೆ ಅಗೌರವ ತೋರಿದಂತೆ ಹಾಗೂ ರಾಜಕೀಯ ಪ್ರೇರಣೆ ನೀಡಿದಂತಾಗುತ್ತದೆ. ನಮ್ಮ ಹಕ್ಕಿಗೆ ಯಾವುದೇ ರೀತಿಯ ಧಕ್ಕೆ ಉಂಟಾದರೆ ನಮ್ಮ Constitution ನಲ್ಲಿರುವ fundamental rights ( eg. Right to speak) ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುವ ನಾವು, ಅದೇ Constitution ನಲ್ಲಿ ಹೇಳಲಾಗಿರುವ ಗೋಹತ್ಯೆ ನಿಷೇಧ ಕುರಿತು ಉದಾಸೀನ/ತಾರತಮ್ಯ ತೋರುವುದು ಎಷ್ಟು ಸರಿ. ನಮ್ಮ ಸಂವಿಧಾನವನ್ನು ನಮ್ಮ ಸ್ವಾರ್ಥ ಸಾಧನೆ ಹೊರತು ಪಡಿಸಿಯೂ ಸಹ ಗೌರವಿಸಬೇಕಾದ್ದು ನಮ್ಮೆಲ್ಲರ ಆದ್ಯ ಕರ್ತವ್ಯ. 300 B.C. ಯಲ್ಲಿ ಬರೆದ ಕೌಟಿಲ್ಯನ ಅರ್ಥಶಾಸ್ತ್ರದಲ್ಲೂ ಗೋಹತ್ಯೆ ನಿಷೇಧ ಹಾಗೂ ಅದರ ಸಂತತಿಯನ್ನು ರಕ್ಷಿಸುವ ಬಗ್ಗೆ ಹೇಳಿರುವುದು ನಿಜಕ್ಕೂ ಸಮಂಜಸವಾಗಿದೆ.
ಈ ಕುರಿತಂತೆ ಮಹಾತ್ಮ ಗಾಂಧಿ, ಅಂಬೇಡ್ಕರ್, ವಿವೇಕಾನಂದ ರಂತಹ ಮಹನೀಯರು ಈ ನಿಷೇಧವನ್ನು ಸ್ವಾಗತಿಸಿದ್ದರು.
ಈ ಗೋಹತ್ಯೆ ನಿಷೇಧವನ್ನು Dalits and Minorities, concentrate ಮಾಡಿ ವಿರೋಧಿಸುತ್ತಿರುವುದಾದರೆ, ನಮ್ಮ Indian Constitution ರಚಿಸಿದವರೂ ಸಹ ಒಬ್ಬ Dalit ಎಂಬುದನ್ನು ಯಾರೂ ಮರೆಯಬಾರದು. ಇನ್ನೂ ಕ್ಯೂಬಾ, ಇರಾನ್ ಅಲ್ಲದೇ ಪಾಕಿಸ್ತಾನ ದಂತಹ ಮುಸ್ಲಿಂ ರಾಷ್ಟ್ರಗಳಲ್ಲೂ ಗೋಹತ್ಯೆಯನ್ನು ನಿಷೇಧಿಸಲಾಗಿದೆ.
ಇನ್ನೂ ಹೇಳುವುದಾದರೆ It is a blatant act of heresy. ಇದು ನಾವು ನಂಬಿ ಸ್ವೀಕರಿಸಿರುವ ಧಾರ್ಮಿಕ ತತ್ವ/ಸಿದ್ದಾಂತಗಳ ವಿರುದ್ದ ಎತ್ತಿ ಕಟ್ಟಿ, ಗಲಭೆ ಹುಟ್ಟುಹಾಕುವ ಹುನ್ನಾರವಾಗಿದೆ. ಇದರಲ್ಲಿ ಯಾವುದೇ ರೀತಿಯ conspiracy ಆಗಲೀ, ರಾಜಕೀಯ ಆಗಲೀ ಮಾಡುವುದು ಸರಿಯಲ್ಲ. ಇದು ಸಂವಿಧಾನವನ್ನು ಅಂಗೀಕರಿಸಿದ್ದೇನೆಂದು ಅದಕ್ಕೆ ಬದ್ದನಾಗಿದ್ದೇನೆ ಎಂದು ಹೇಳಿ ಪ್ರಮಾಣ ಮಾಡಿರುವವರೆಲ್ಲರೂ ಸಂವಿಧಾನವನ್ನು ಉಲ್ಲಂಘನೆ ಮಾಡುವುದಷ್ಟೇ ಅಲ್ಲ, ಅದನ್ನು ಖಂಡಿಸಿದಷ್ಟೇ ಸಮನಾಗಿದೆ.
"ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ, ತಟ್ಟದೆ ಹಾಕಿದರೆ ಮೇಲು ಗೊಬ್ಬರವಾದೆ, ಸುಟ್ಟರೆ ನೊಸಲಿಗೆ ವಿಭೂತಿಯಾದೆ, ನೀನ್ಯಾರಿಗಾದೆಯೋ ಎಲೆ ಮಾನವ" ಎಂಬುದೊಂದು ನುಡಿ ಗಟ್ಟಿದೆ.
ಗೋವುಗಳು ಹಿಂದೂ ಧರ್ಮದ ಅವಿಭಾಜ್ಯ ಅಂಗ ಆಗಿವೆ. ಅವುಗಳನ್ನು ಪರಮ ಪೂಜ್ಯ ಎಂದು ಭಾವಿಸಲಾಗುತ್ತದೆ. ಅವುಗಳು ತಾಯಿ (ತಾಯಿಯಂತೆ ಹಾಲು ನೀಡಿ ಪೋಷಿಸುತ್ತವೆ) ತಂದೆ (ದುಡಿಯುವ ದೃಷ್ಟಿಯಿಂದ ಹೇಳುವುದಾದರೆ, ಹೊಲದಲ್ಲಿ ದುಡಿದು, ವಸ್ತುಗಳ ಸಾಗಣೆಗೆ ಬಳಸಲಾಗುತ್ತದೆ) ಸಾಕ್ಷಾತ್ ಭಗವಂತನ ಸ್ವರೂಪವಾಗಿ ಪೂಜಿಸಲ್ಪಡುತ್ತವೆ (ಶುಭ ಸಮಾರಂಭದಲ್ಲಿ ಹಬ್ಬಗಳಲ್ಲಿ ವಿಶೇಷವಾಗಿ ಪೂಜಿಸಲ್ಪಡುತ್ತವೆ) ಅಷ್ಟೇ ಅಲ್ಲದೇ ಅವುಗಳ ಸಗಣಿ ಮತ್ತು ಗೋಮೂತ್ರ ಪವಿತ್ರ ಅಷ್ಟೇ ಅಲ್ಲ ಅವುಗಳನ್ನು ಆಯುರ್ವೇದಿಕ್ ಔಷಧಿಯ ತಯಾರಿಕೆಯಲ್ಲಿ ಹಾಗೂ ಸಗಣಿಯನ್ನು ಗೊಬ್ಬರವಾಗಿ ಬಳಸಲಾಗುತ್ತಿದೆ. ಇಂತಹ ಗೋವುಗಳನ್ನು ಹತ್ಯೆ ಮಾಡುವುದು ನಿಜಕ್ಕೂ ಹೇಯ ಕೃತ್ಯ. It is a brutal activity.
ಹೀಗೆ ಪ್ರತಿಯೊಂದು ವಿಷಯದಲ್ಲೂ ನಾನಾ ರೀತಿಯಾಗಿ ಉಪಯೋಗಕ್ಕೆ ಬರುತ್ತಿರುವ ಗೋವುಗಳನ್ನು ಸಂರಕ್ಷಿಸುವುದರ ಮೂಲಕ ನಮ್ಮ ಸಾಂಸ್ಕೃತಿಕ ಮೌಲ್ಯಗಳನ್ನು ಉನ್ನತ ಮಟ್ಟಕ್ಕೆ ಏರಿಸುವುದಲ್ಲದೇ ಅವುಗಳಿಗೆ ಪುನರ್ಜೀವ ಕೊಟ್ಟಂತಾಗುತ್ತದೆ.
ನಮ್ಮ ಹಿಂದೂಶಾಸ್ತ್ರದಲ್ಲಿ:
ಗೋಬ್ರಾಹ್ಮಣ ಹಿತಾಯಚ, ಜಗದ್ದಿತಾಯ ಕೃಷ್ಣಾಯ, ಗೋವಿಂದಾಯ ನಮೋ ನಮ: ||
ಗೋಬ್ರಾಹ್ಮಣೇಭ್ಯ: ಶುಭಮಸ್ತು ನಿತ್ರ ಲೋಕಸಮಸ್ತಾ ಸುಖಿನೋ ಭವಂತು:||
ಎಂದು ಹೇಳುತ್ತಾರೆ, ಅಂದರೆ ಎಲ್ಲಿ ಗೋವುಗಳನ್ನು ಸಂರಕ್ಷಿಸಿ ಪೂಜಿಸಲಾಗುತ್ತದೋ ಅದು ಸಾಕ್ಷಾತ್ ಭಗವಂತನ ಸ್ಮರಣೆ ಮಾಡಿದಂತಾಗಿ ಲೋಕ ಕಲ್ಯಾಣವಾಗುತ್ತದೆ ಎಂದು.
Finally,
forget about the constitution : forget about the anti-slaughter bill : forget about the conspiracy.
ಮನುಷ್ಯರಾದ ನಾವೆಲ್ಲರೂ ಒಮ್ಮೆ ಮಾನವೀಯತೆ ದೃಷ್ಟಿಯಿಂದ, ಮಾನವೀಯ ಹಾಗೂ ಸಾಂಸ್ಕೃತಿಕ ಮೌಲ್ಯಗಳಿಗೆ ಬೆಲೆ ಕೊಟ್ಟು ಯೋಚಿಸುವುದಾದರೆ, ಹುಲ್ಲು ತಿಂದು ಹಾಲು ನೀಡಿ ಕಾಪಾಡುವ ಮುಗ್ಧ ಮೂಕ ಪ್ರಾಣಿಯಾದ ಗೋವುಗಳನ್ನು ಹತ್ಯೆ ಮಾಡುವುದು ಎಷ್ಟು ಸರಿ?? ಮನುಷ್ಯರಾಗಿ ನಮಗೆ ನಾವು ಮಾಡುವ ಕೆಲಸದಿಂದ retire ಆಗಬೇಕು ಎಂದು ಅನ್ನಿಸುವಾಗ ಸಾಧು ಪ್ರಾಣಿಯಾದ ಗೋವುಗಳು ನಿರಂತರವಾಗಿ ದುಡಿಯುತ್ತಿರಬೇಕು, ಅವುಗಳು ಬಳಲಿ ಬೆಂಡಾದಾಗ ಪ್ರಯೋಜನಕ್ಕೆ ಬಾರದು ಎಂದಾಗ ಅವುಗಳನ್ನು ಹತ್ಯೆ ಮಾಡಬೇಕು ಎನ್ನುವುದು ಎಲ್ಲಿಯ ನ್ಯಾಯ???
ಹಾಗಾಗಿ ಯಾವುದೇ ಪಕ್ಷ/ಜಾತಿ, ಕೋಮು/ಧರ್ಮ ಭೇದವನ್ನು ಮರೆತು ಗೋವುಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎನ್ನುವುದು ನನ್ನ ಭಾವನೆ. - Spandana
PS : Images : As It's Horrible Seen To See Our Mother Cow Slaughtered I Cant Publish The Images Here ... But Those Who Want To Witness The Brutality Can Clik Here
The Human Cattle Ratio Graph For Who Boast of Sufficient Livestock in India Clik Here
{ ಕ್ಯೂಬಾದಲ್ಲಿ ಗೋವುಗಳಿಗೆ ಬೇಕಾದ ಹುಲ್ಲನ್ನು ಕೊಳ್ಳುವ ಶಕ್ತಿಯೂ ಇಲ್ಲ ಹಾಗಾಗಿ ಗೋವುಗಳ ಸಾವು ವಿಪರೀತ, ಇದರ ಜೊತೆಗೆ ಬರ ಸಹಾ ಗೋ ಸಂಖ್ಯೆಯ ಮೇಲೆ ತೀವ್ರ ಪರಿಣಾಮ ಬೀರಿತು. ಈ ಹಿನ್ನೆಲೆಯಲ್ಲಿ ಹಾಲಿನ ತೀವ್ರ ಬರ. ಅಲ್ಲಿನ ಜನಸಂಖ್ಯೆಗೆ ಹೋಲಿಸಿದರೆ ತೀರಾ ತೀರಾ ಕಡಿಮೆ. ಈ ಕಾರಣದ ಹಿನ್ನೆಲೆಯಲ್ಲಿ ಗೋ ಹತ್ಯೆಯನ್ನು ನಿಷೇಧಿಸಲಾಗಿತ್ತು.
ಅಷ್ಟೇ ಅಲ್ಲ ಕ್ಯೂಬಾದಲ್ಲಿ ಆರ್ಥಿಕ ನಿಷೇಧ ಹೇರಿ ಅವರ ಉಸಿರುಗಟ್ಟಿಸಲು ಪ್ರಯತ್ನಿಸಿದಾಗೆಲ್ಲ ಅವರು ಜೀವತಂತ್ರಜ್ಞಾನದ ಮೊರೆ ಹೊಕ್ಕು ತಮ್ಮನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಗೋವಿನ ಸಂಖ್ಯೆ ಕಳವಳ ಹುಟ್ಟಿಸುವಷ್ಟು ಕಡಿಮೆ ಆದಾಗ ಬಯೋ ಟೆಕ್ನಾಲಜಿ ಮೂಲಕ ಮನೆಯೊಳಗೇ ಸಾಕಬಹುದಾದ ಹಸುವನ್ನು ಸೃಷ್ಟಿಸುವ ಕಲ್ಪನೆಯೂ ಕ್ಯೂಬಾಕ್ಕಿತ್ತು. - Add On From ಮಂಜುನಾಥ್ ಎಸ್. - Varify Yourself }

