27 July 2010

ಗೋಹತ್ಯೆ ನಿಷೇಧ/ Anti Cow Slaughter



ಗೋಹತ್ಯೆ ನಿಷೇಧ/ Anti Cow Slaughter


ನಮ್ಮ ಸಂವಿಧಾನದ  Article 48 ನಲ್ಲಿ ಗೋಹತ್ಯೆ ನಿಷೇಧ ಕುರಿತು ಹೇಳಲಾಗಿದೆ. ನಾವಿರುವುದು For the people, by the people ಎಂದು ಹೇಳುವ Democratic Country  ಅಲ್ಲಿ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. 

Indian Constitution Article 48 reads: Organisation of agriculture and animal husbandry", Its state "the state shall endeavor to organise agriculture and animal husbandry on modern and scientific lines and shall, in particular, take steps for preserving and improving the breeds, and prohibiting the slaughter of cows and calves and other milch and draught cattle".

ಅದರಂತೆ, ಕೃಷಿ ಮತ್ತು ಪಶು ಸಂಗೋಪನೆ ಅಭವೃದ್ದಿ ಕುರಿತು ಆಧುನಿಕ ಹಾಗೂ ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಳ್ಳುವ/ಅನುಸರಿಸುವ ಬಗ್ಗೆ ಪ್ರಯತ್ನಿಸುವುದು ಹಾಗೂ ವಿಶೇಷವಾಗಿ ಗೋಹತ್ಯೆ  ನಿಷೇಧ ಮತ್ತು ಜಾನುವಾರುಗಳ (ದನ, ಕರು, ಎತ್ತು, ಎಮ್ಮೆ, ಹೋರಿ) ಪೋಷಣೆ, ಸಂರಕ್ಷಣೆ ಮಾಡುವ ಕುರಿತಂತೆ ಆಯಾ ರಾಜ್ಯಗಳು ಕ್ರಮ ಕೈಗೊಳ್ಳುವುದು ಎಂದು ಹೇಳಲಾಗಿದೆ.
Article 48 specifically provides that the State should make a law prohibiting slaughter of cows, calves as also milch and draught.

ನಮ್ಮ ಸಂವಿಧಾನ  ಎನ್ನುವುದು Sacrosanct and Superior ಅಂದರೆ ಧಾರ್ಮಿಕ ಮನ್ನಣೆ ಪಡೆದ, ಸರ್ವಶ್ರೇಷ್ಟವಾದ, ಅಪವಿತ್ರ ಮಾಡಕೂಡದ ಹಾಗೂ ರಾಜ್ಯದ ನೀತಿ-ನಿಯಮಗಳು/ಸಾಮಾನ್ಯ ನಿಯಮಗಳು ಕುರಿತಂತೆ ಮಾರ್ಗದರ್ಶನ ನೀಡುವ ಪ್ರಬಲವಾದ ಒಂದು ಶಾಸನ. ಮಧ್ಯಪ್ರದೇಶ,  ಉತ್ತರ ಪ್ರದೇಶ, ಬಿಹಾರ, ಗುಜರಾತ್ ರಾಜ್ಯಗಳಲ್ಲಿ ಗೋಹತ್ಯೆ ನಿಷೇಧವನ್ನು ಜಾರಿಗೆ ತಂದು ಸಂವಿಧಾನಕ್ಕೆ ಗೌರವ ಸಲ್ಲಿಸಿದ್ದಾರೆ ಎಂದು ಹೇಳಬಹುದು.

ಗುಜರಾತ್ ನಲ್ಲಿ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಜಾರಿಗೆ ತಂದ ಕುರಿತು ಒಂದು Case ದಾಖಲಾಯಿತು. ಅದೇ, "State of Gujarath V/s Mirzapur Moti Kureshi Kasab Jammath" (2005(8) SCC 534). And this was referred to larger bench of 7 judges and the judgement was,


"ಸಂವಿಧಾನದ Article 48 ರಲ್ಲಿ ಹೇಳಲಾಗಿರುವ ವಿಷಯಗಳ ಹಿತದೃಷ್ಟಿಯಿಂದ, ರಾಜ್ಯ ಸರ್ಕಾರ ಯಾವುದೇ ನಿರ್ಧಾರಗಳನ್ನು ಕೈಗೊಂಡರೂ ಅದು ಅಕ್ರಮವಲ್ಲ, ಸಂವಿಧಾನದ ಪ್ರಕಾರ ನ್ಯಾಯಯುತವಾದದ್ದು, " ಎಂಬ ನಿಲುವನ್ನು ಎತ್ತಿ ಹಿಡಿಯಿತು. 

ಅಲ್ಲದೇ ಯಾವುದೇ ರಾಜ್ಯ ಶಾಸಕಾಂಗವು ಗೋಹತ್ಯೆ ನಿಷೇಧಿಸಲು ದಕ್ಷ ಮತ್ತು ಸಮರ್ಥನೀಯವಾಗಿರುವುದಲ್ಲದೇ ಅಂತಹ ಕಾನೂನನ್ನು Article 48 ರಲ್ಲಿ ಸ್ಪಷ್ಟವಾಗಿ ಹೇಳಿರುವಂತೆ ಜಾರಿಗೆ ತರುವುದು ಸಹ ಸಂವಿಧಾನಾತ್ಮಕ ಕರ್ತವ್ಯವಾಗಿದೆ. ಸಂವಿಧಾನದಲ್ಲಿ ಈ ಬಗ್ಗೆ ಎಲ್ಲಿಯೂ redundant ಆಗಿ ಅಂದರೆ ಅತಿರೇಕವಾಗಿ ಹೇಳಲಾಗಿಲ್ಲ.
Indian Constitution ಗೆ ಗೌರವ ಕೊಡಬೇಕಾದ್ದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಕರ್ತವ್ಯ.  ಆದ್ದರಿಂದ, ಈ ಶಾಸನಕ್ಕೆ ವಿರೋಧ ವ್ಯಕ್ತಪಡಿಸುವುದು, ಭಾರತದ ಸಂವಿಧಾನಕ್ಕೆ ಅಗೌರವ ತೋರಿದಂತೆ ಹಾಗೂ ರಾಜಕೀಯ ಪ್ರೇರಣೆ ನೀಡಿದಂತಾಗುತ್ತದೆ. ನಮ್ಮ ಹಕ್ಕಿಗೆ ಯಾವುದೇ ರೀತಿಯ ಧಕ್ಕೆ ಉಂಟಾದರೆ ನಮ್ಮ Constitution ನಲ್ಲಿರುವ fundamental rights ( eg. Right to speak) ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುವ ನಾವು, ಅದೇ Constitution ನಲ್ಲಿ ಹೇಳಲಾಗಿರುವ ಗೋಹತ್ಯೆ ನಿಷೇಧ ಕುರಿತು ಉದಾಸೀನ/ತಾರತಮ್ಯ ತೋರುವುದು ಎಷ್ಟು ಸರಿ. ನಮ್ಮ ಸಂವಿಧಾನವನ್ನು ನಮ್ಮ ಸ್ವಾರ್ಥ ಸಾಧನೆ ಹೊರತು ಪಡಿಸಿಯೂ ಸಹ ಗೌರವಿಸಬೇಕಾದ್ದು ನಮ್ಮೆಲ್ಲರ  ಆದ್ಯ ಕರ್ತವ್ಯ. 300 B.C. ಯಲ್ಲಿ ಬರೆದ ಕೌಟಿಲ್ಯನ ಅರ್ಥಶಾಸ್ತ್ರದಲ್ಲೂ ಗೋಹತ್ಯೆ ನಿಷೇಧ ಹಾಗೂ ಅದರ ಸಂತತಿಯನ್ನು ರಕ್ಷಿಸುವ ಬಗ್ಗೆ ಹೇಳಿರುವುದು ನಿಜಕ್ಕೂ ಸಮಂಜಸವಾಗಿದೆ.

ಈ ಕುರಿತಂತೆ ಮಹಾತ್ಮ ಗಾಂಧಿ, ಅಂಬೇಡ್ಕರ್, ವಿವೇಕಾನಂದ ರಂತಹ ಮಹನೀಯರು ಈ ನಿಷೇಧವನ್ನು ಸ್ವಾಗತಿಸಿದ್ದರು.

ಈ ಗೋಹತ್ಯೆ ನಿಷೇಧವನ್ನು Dalits and Minorities, concentrate ಮಾಡಿ ವಿರೋಧಿಸುತ್ತಿರುವುದಾದರೆ, ನಮ್ಮ Indian Constitution ರಚಿಸಿದವರೂ ಸಹ  ಒಬ್ಬ Dalit  ಎಂಬುದನ್ನು ಯಾರೂ ಮರೆಯಬಾರದು. ಇನ್ನೂ ಕ್ಯೂಬಾ, ಇರಾನ್ ಅಲ್ಲದೇ ಪಾಕಿಸ್ತಾನ ದಂತಹ ಮುಸ್ಲಿಂ ರಾಷ್ಟ್ರಗಳಲ್ಲೂ ಗೋಹತ್ಯೆಯನ್ನು ನಿಷೇಧಿಸಲಾಗಿದೆ. 

ಇನ್ನೂ ಹೇಳುವುದಾದರೆ It is a blatant act of heresy. ಇದು ನಾವು ನಂಬಿ ಸ್ವೀಕರಿಸಿರುವ ಧಾರ್ಮಿಕ ತತ್ವ/ಸಿದ್ದಾಂತಗಳ ವಿರುದ್ದ ಎತ್ತಿ ಕಟ್ಟಿ, ಗಲಭೆ ಹುಟ್ಟುಹಾಕುವ ಹುನ್ನಾರವಾಗಿದೆ. ಇದರಲ್ಲಿ ಯಾವುದೇ ರೀತಿಯ conspiracy  ಆಗಲೀ, ರಾಜಕೀಯ ಆಗಲೀ ಮಾಡುವುದು ಸರಿಯಲ್ಲ.  ಇದು ಸಂವಿಧಾನವನ್ನು ಅಂಗೀಕರಿಸಿದ್ದೇನೆಂದು ಅದಕ್ಕೆ ಬದ್ದನಾಗಿದ್ದೇನೆ ಎಂದು ಹೇಳಿ ಪ್ರಮಾಣ ಮಾಡಿರುವವರೆಲ್ಲರೂ ಸಂವಿಧಾನವನ್ನು ಉಲ್ಲಂಘನೆ ಮಾಡುವುದಷ್ಟೇ ಅಲ್ಲ, ಅದನ್ನು ಖಂಡಿಸಿದಷ್ಟೇ ಸಮನಾಗಿದೆ.

"ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ, ತಟ್ಟದೆ ಹಾಕಿದರೆ ಮೇಲು ಗೊಬ್ಬರವಾದೆ, ಸುಟ್ಟರೆ ನೊಸಲಿಗೆ ವಿಭೂತಿಯಾದೆ, ನೀನ್ಯಾರಿಗಾದೆಯೋ ಎಲೆ ಮಾನವ" ಎಂಬುದೊಂದು ನುಡಿ ಗಟ್ಟಿದೆ.

ಗೋವುಗಳು ಹಿಂದೂ ಧರ್ಮದ ಅವಿಭಾಜ್ಯ ಅಂಗ ಆಗಿವೆ. ಅವುಗಳನ್ನು ಪರಮ ಪೂಜ್ಯ  ಎಂದು ಭಾವಿಸಲಾಗುತ್ತದೆ. ಅವುಗಳು ತಾಯಿ (ತಾಯಿಯಂತೆ ಹಾಲು ನೀಡಿ ಪೋಷಿಸುತ್ತವೆ) ತಂದೆ (ದುಡಿಯುವ ದೃಷ್ಟಿಯಿಂದ ಹೇಳುವುದಾದರೆ, ಹೊಲದಲ್ಲಿ ದುಡಿದು, ವಸ್ತುಗಳ ಸಾಗಣೆಗೆ ಬಳಸಲಾಗುತ್ತದೆ) ಸಾಕ್ಷಾತ್ ಭಗವಂತನ ಸ್ವರೂಪವಾಗಿ ಪೂಜಿಸಲ್ಪಡುತ್ತವೆ (ಶುಭ ಸಮಾರಂಭದಲ್ಲಿ ಹಬ್ಬಗಳಲ್ಲಿ ವಿಶೇಷವಾಗಿ ಪೂಜಿಸಲ್ಪಡುತ್ತವೆ) ಅಷ್ಟೇ ಅಲ್ಲದೇ ಅವುಗಳ ಸಗಣಿ ಮತ್ತು ಗೋಮೂತ್ರ ಪವಿತ್ರ ಅಷ್ಟೇ ಅಲ್ಲ  ಅವುಗಳನ್ನು ಆಯುರ್ವೇದಿಕ್ ಔಷಧಿಯ ತಯಾರಿಕೆಯಲ್ಲಿ ಹಾಗೂ ಸಗಣಿಯನ್ನು ಗೊಬ್ಬರವಾಗಿ ಬಳಸಲಾಗುತ್ತಿದೆ. ಇಂತಹ ಗೋವುಗಳನ್ನು ಹತ್ಯೆ ಮಾಡುವುದು ನಿಜಕ್ಕೂ ಹೇಯ ಕೃತ್ಯ. It is a brutal activity.

ಹೀಗೆ ಪ್ರತಿಯೊಂದು ವಿಷಯದಲ್ಲೂ ನಾನಾ ರೀತಿಯಾಗಿ ಉಪಯೋಗಕ್ಕೆ ಬರುತ್ತಿರುವ ಗೋವುಗಳನ್ನು ಸಂರಕ್ಷಿಸುವುದರ ಮೂಲಕ ನಮ್ಮ ಸಾಂಸ್ಕೃತಿಕ ಮೌಲ್ಯಗಳನ್ನು ಉನ್ನತ ಮಟ್ಟಕ್ಕೆ ಏರಿಸುವುದಲ್ಲದೇ ಅವುಗಳಿಗೆ ಪುನರ್ಜೀವ ಕೊಟ್ಟಂತಾಗುತ್ತದೆ.

ನಮ್ಮ ಹಿಂದೂಶಾಸ್ತ್ರದಲ್ಲಿ:

ಗೋಬ್ರಾಹ್ಮಣ ಹಿತಾಯಚ, ಜಗದ್ದಿತಾಯ ಕೃಷ್ಣಾಯ, ಗೋವಿಂದಾಯ ನಮೋ ನಮ: ||
ಗೋಬ್ರಾಹ್ಮಣೇಭ್ಯ: ಶುಭಮಸ್ತು ನಿತ್ರ ಲೋಕಸಮಸ್ತಾ ಸುಖಿನೋ ಭವಂತು:||

ಎಂದು ಹೇಳುತ್ತಾರೆ, ಅಂದರೆ ಎಲ್ಲಿ ಗೋವುಗಳನ್ನು ಸಂರಕ್ಷಿಸಿ ಪೂಜಿಸಲಾಗುತ್ತದೋ ಅದು ಸಾಕ್ಷಾತ್ ಭಗವಂತನ ಸ್ಮರಣೆ ಮಾಡಿದಂತಾಗಿ ಲೋಕ ಕಲ್ಯಾಣವಾಗುತ್ತದೆ ಎಂದು.

Finally, 
forget about the constitution : forget about the anti-slaughter bill : forget about the conspiracy.

ಮನುಷ್ಯರಾದ ನಾವೆಲ್ಲರೂ ಒಮ್ಮೆ ಮಾನವೀಯತೆ ದೃಷ್ಟಿಯಿಂದ, ಮಾನವೀಯ ಹಾಗೂ ಸಾಂಸ್ಕೃತಿಕ ಮೌಲ್ಯಗಳಿಗೆ ಬೆಲೆ ಕೊಟ್ಟು ಯೋಚಿಸುವುದಾದರೆ,    ಹುಲ್ಲು ತಿಂದು ಹಾಲು ನೀಡಿ ಕಾಪಾಡುವ ಮುಗ್ಧ ಮೂಕ ಪ್ರಾಣಿಯಾದ ಗೋವುಗಳನ್ನು ಹತ್ಯೆ ಮಾಡುವುದು ಎಷ್ಟು ಸರಿ?? ಮನುಷ್ಯರಾಗಿ ನಮಗೆ ನಾವು ಮಾಡುವ ಕೆಲಸದಿಂದ retire ಆಗಬೇಕು ಎಂದು ಅನ್ನಿಸುವಾಗ ಸಾಧು ಪ್ರಾಣಿಯಾದ ಗೋವುಗಳು ನಿರಂತರವಾಗಿ ದುಡಿಯುತ್ತಿರಬೇಕು,  ಅವುಗಳು ಬಳಲಿ ಬೆಂಡಾದಾಗ ಪ್ರಯೋಜನಕ್ಕೆ ಬಾರದು ಎಂದಾಗ ಅವುಗಳನ್ನು ಹತ್ಯೆ ಮಾಡಬೇಕು ಎನ್ನುವುದು ಎಲ್ಲಿಯ ನ್ಯಾಯ???

ಹಾಗಾಗಿ ಯಾವುದೇ ಪಕ್ಷ/ಜಾತಿ, ಕೋಮು/ಧರ್ಮ ಭೇದವನ್ನು ಮರೆತು ಗೋವುಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎನ್ನುವುದು ನನ್ನ ಭಾವನೆ.




 - Spandana






PS : Images : As It's Horrible Seen To See Our Mother Cow Slaughtered I Cant Publish The Images Here ... But Those Who Want To Witness The Brutality Can Clik Here
The Human Cattle Ratio Graph For Who Boast of Sufficient Livestock in India Clik Here 

{ ಕ್ಯೂಬಾದಲ್ಲಿ ಗೋವುಗಳಿಗೆ ಬೇಕಾದ ಹುಲ್ಲನ್ನು ಕೊಳ್ಳುವ ಶಕ್ತಿಯೂ ಇಲ್ಲ ಹಾಗಾಗಿ ಗೋವುಗಳ ಸಾವು ವಿಪರೀತ, ಇದರ ಜೊತೆಗೆ ಬರ ಸಹಾ ಗೋ ಸಂಖ್ಯೆಯ ಮೇಲೆ ತೀವ್ರ ಪರಿಣಾಮ ಬೀರಿತು. ಈ ಹಿನ್ನೆಲೆಯಲ್ಲಿ ಹಾಲಿನ ತೀವ್ರ ಬರ. ಅಲ್ಲಿನ ಜನಸಂಖ್ಯೆಗೆ ಹೋಲಿಸಿದರೆ ತೀರಾ ತೀರಾ ಕಡಿಮೆ. ಈ ಕಾರಣದ ಹಿನ್ನೆಲೆಯಲ್ಲಿ ಗೋ ಹತ್ಯೆಯನ್ನು ನಿಷೇಧಿಸಲಾಗಿತ್ತು.

ಅಷ್ಟೇ ಅಲ್ಲ ಕ್ಯೂಬಾದಲ್ಲಿ ಆರ್ಥಿಕ ನಿಷೇಧ ಹೇರಿ ಅವರ ಉಸಿರುಗಟ್ಟಿಸಲು ಪ್ರಯತ್ನಿಸಿದಾಗೆಲ್ಲ ಅವರು ಜೀವತಂತ್ರಜ್ಞಾನದ ಮೊರೆ ಹೊಕ್ಕು ತಮ್ಮನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಗೋವಿನ ಸಂಖ್ಯೆ ಕಳವಳ ಹುಟ್ಟಿಸುವಷ್ಟು ಕಡಿಮೆ ಆದಾಗ ಬಯೋ ಟೆಕ್ನಾಲಜಿ ಮೂಲಕ ಮನೆಯೊಳಗೇ ಸಾಕಬಹುದಾದ ಹಸುವನ್ನು ಸೃಷ್ಟಿಸುವ ಕಲ್ಪನೆಯೂ ಕ್ಯೂಬಾಕ್ಕಿತ್ತು. - Add On From ಮಂಜುನಾಥ್ ಎಸ್.  - Varify Yourself    }
 

4 comments:

Anamika said...

ThoughtFull Write Up ...

Keep it Up...

- Revappa

MANJUDADA said...

ಗೋಹತ್ಯೆ ನಿಷೇಧದ ಬಗ್ಗೆ ಬಹಳಷ್ಟು ಮಾಹಿತಿ ಕಲೆ ಹಾಕಿದ್ದೀರಿ.ಗೋವಿನಿಂದ ನಮಗೆ ಆಗುವ ಪ್ರಯೋಜನಗಳ ಬಗ್ಗೆ ಹಾಗೆಯೇ ಅದರ ರಕ್ಷಣೆ ಎಷ್ಟು ಮಹತ್ವ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಈ ಲೇಖನದಲ್ಲಿ ಲಭ್ಯವಿದೆ.ಧಾರ್ಮಿಕ ಹಾಗೂ ರಾಜಕೀಯ ನೆಲೆಗಟ್ಟಿನಲ್ಲಿ ನೋಡಿದಾಗ ಗೋಹತ್ಯೆ ಎಷ್ಟು ಸರಿ ಎಷ್ಟು ತಪ್ಪು ?ಎಂಬುದನ್ನು ಸೂಕ್ತ ರೀತಿಯಲ್ಲಿ ವಿವರಿಸಿದ್ದೀರಿ.ಒಬ್ಬ ಪ್ರಜ್ಞಾವಂತ ನಾಗರೀಕನಾಗಿ ಗೋಹತ್ಯೆ ನಿಷೇಧಕ್ಕೆ ಬೆಂಬಲಿಸುವುದು ಖಂಡಿತ ನಮ್ಮ ಕರ್ತವ್ಯ.ಯಾರು ಗೋಹತ್ಯೆ ನಿಷೇಧವನ್ನು ವಿರೋಧಿಸುತ್ತಾರೋ ಅವರು ಒಮ್ಮೆ ಈ ಲೇಖನ ಓದುವುದು ಸೂಕ್ತ ಎಂಬುದು ನನ್ನ ಅಭಿಪ್ರಾಯ.ಹೀಗೆ ನಿಮ್ಮ ಲೇಖನಗಳು ಮೂಡಿ ಬರುತ್ತಿರಲಿ.MBM.

rohith said...

thumba arthapurnavaagide neev kotiro mahithi sakashto thilido kholoanthahudey yestey aadro naavu baarthiyarallave yavoodey sandarbadallo "GO HAATHYA" virudhavaagi prathibatisa beku very good haage mundovaresikolli...ROHITH
FROM D.P.A.R (R&I)

jyothi said...

ಮಹಾತ್ಮ ಗಾಂಧಿರವರು ಹಸುವಿನ ಕುರಿತು ಈ ರೀತಿ ಹೇಳಿದ್ದಾರೆ.

Mother cow is in many ways better than the mother who gave us birth. Our mother gives us milk for a couple of years and then expects us to serve her when we grow up. Mother cow expects from us nothing but grass and grain. Our mother often falls ill and expects service from us. Mother cow rarely falls ill. Our mother when she dies means expenses of burial or cremation. Mother cow is as useful dead as when alive.

ಗೋವಿನ ಮಹತ್ವ ಬಃಳಷ್ಟಿದೆ. ಇತರೆ ಪ್ರಾಣಿಗಳ ಹಾಲಿಗಿಂತ ಗೋವಿನ ಹಾಲು ಉತ್ಕೃಷ್ಟವಾದ ಆಹಾರವಾಗಿದೆ. ಅದರ ಉತ್ಪನ್ನಗಳಿಂದ ಬಹಳವಾಗಿ ಲಾಭ ಪಡೆದ ನಾವು ಮಾನವತ್ವವನ್ನು ತೋರದೆ ನಿಷ್ಠುರರಾಗಿ ಅದರ ಹತ್ಯೆಗೆ ಮುಂದಾಗಬಾರದು.

ನಮ್ಮಿಂದ ಒಂದಿಷ್ಟು ಹುಲ್ಲನ್ನು ಬಿಟ್ಟು ಇನ್ನೇನನ್ನೂ ನಿರೀಕ್ಷಿಸದೇ ತನ್ನ ಜೀವನವನ್ನು ನಮಗಾಗಿ ಮುಡಿಪಾಗಿಡುವ ಗೋವನ್ನು ಅದು ನಿಷ್ಪ್ರಯೋಜನವಾಗಿದೆ ಎಂದಾಗ ಆಹಾರಕ್ಕಾಗಿ ಹತ್ಯ ಮಾಡುವುದು ಮನುಷ್ಯನ ಕ್ರೂರತನವನ್ನು ಸೂಚಿಸುತ್ತದೆ. ಆಹಾರಕ್ಕಾಗಿ ಹಸುಗಳನ್ನು ಕೊಲ್ಲುವುದು ಸೂಕ್ತವಲ್ಲ. ಮನುಷ್ಯನು ಜೀವನದ ಅಂತ್ಯದಲ್ಲಿ ಆರೋಗ್ಯ ಹದಗೆಟ್ಟಾಗ ನಿಷ್ಪ್ರಯೋಜನನಾಗಿರುತ್ತಾನೆ. ಅಂತಹ ಸ್ಥಿತಿಯಲ್ಲಿ ನಾವು ನಮ್ಮನ್ನು ಹೋಲಿಸಿಕೊಂಡು ನೋಡಬೇಕು. ಜೀವನದುದ್ದಕ್ಕೂ ನಮಗಾಗಿ ದುಡಿದ ಗೋವಿಗೆ ಈ ರೀತಿಯ ದಾರುಣ ಸಾವು ನೀಡುವುದು ಸರಿಯಲ್ಲ. ಇವುಗಳಿಗಾಗಿ ಗೋ ಶಾಲೆಗಳನ್ನು ಮಾಡಿ ಸಂರಕ್ಷಿಸಬೇಕು.

ಇನ್ನೊಬ್ಬರ ಆಹಾರ ಕಿತ್ತುಕೊಳ್ಳಲು ನಮಗೆ ಹಕ್ಕಿಲ್ಲವೆಂದ ಮೇಲೆ ಇನ್ನೊಬ್ಬರ ಭಾವನೆಗಳನ್ನು ಕೊಲ್ಲುವುದು ಎಷ್ಟು ಸರಿ? ಪ್ರಾಣಿಗಳಲ್ಲಿಯೂ ಭಾವನೆಗಳಿರುತ್ತವೆ. ಹಸುಗಳನ್ನು ಮೇಯಲು ಬಿಟ್ಟರೆ ದಿನವೆಲ್ಲ ತಿರುಗಾಡಿ ಸಂಜೆಯ ಹೊತ್ತಿಗೆ ತನ್ನ ಒಡೆಯನ ಮನೆ ಸುರಕ್ಷಿತವೆಂದು ತಿಳಿದು ಹಿಂದಿರುಗುತ್ತದೆ. ಪ್ರಾಣಿಗಳು ಮನುಷ್ಯರಿಗೆ ತೋರಿಸುತ್ತಿರುವ ಪ್ರೀತಿ ಮನುಷ್ಯನು ಇಷ್ಟೆಲ್ಲ ಸಹಾಯ ಮಾಡಿದ ಗೋವಿಗೆ ಏಕೆ ತೋರುವುದಿಲ್ಲ ?

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago