Showing posts with label Soft Corner. Show all posts
Showing posts with label Soft Corner. Show all posts

14 February 2010

gmail BUZZ


Twitter ಹೆಸರು ಕೇಳಿಯೇ ಕೇಳಿರ್ತೀರಾ ನೀವೆಲ್ರೂ ... ಏನ್ ಹೇಳಿ Twitter ಅಂದ್ರೆ ?

" Twitter ಅಂದ್ರೆ Social Networking Cum Micro-Blogging Site. ಅಲ್ಲಿ ಒಬ್ಬ ವ್ಯಕ್ತಿ ತನ್ನದೊಂದು ವಿಳಾಸ ಸೃಷ್ಟಿಸಿಕೊಂಡು ಅದರ ಮುಖೇನ 140 ಶಬ್ದಗಳ, ಒಂದು SMS ಗಿನ್ನ ಇಪ್ಪತ್ತು ಅಕ್ಷರಕ್ಕೆ ಚಿಕ್ಕದಾದ ( ಹೀಗಾಗಿ ಇದನ್ನ Still Short Message Service [SSMS] ಅಂತ ಕರೀಬೇಕು ಅನ್ಸುತ್ತಪ್ಪ ನಂಗಂತೂ ) ಸಂದೇಶ, ಸುದ್ದಿ, ಅಭಿಪ್ರಾಯ, ಗುಸು-ಗುಸು ಸುದ್ದಿ, ... ಹೀಗೆ ಮನಸಿಗನ್ನಿಸಿದ ಮನದ ಮಾತು ( Tweet ) ಯಾವ್ದಾದ್ರೂ ಬರೆದ್ರಾಯ್ತು. ಆ ಮನಸಿನ ಮಾತು ನಿಮ್ಮ ವಿಳಾಸನ ತಮ್ಮ ಸ್ನೇಹಿತನ ವಿಳಾಸ ಅನ್ನೋ ಥರ ಪಟ್ಟಿ ಮಾಡ್ಕೊಂಡೋರ ಎಲ್ಲರ ವಿಳಾಸಕ್ಕೂ ತಲುಪುತ್ತೆ...ಯಾವ ಅಂಚೆ ವೆಚ್ಚ ಕೂಡ ಇಲ್ದೆ. ನೀವು ಒಂದು ಸಾರಿ ಬರೆದ ಒಂದು Tweet ಎಲ್ಲರ ವಿಳಾಸಕ್ಕೂ ಒಂದೇ ಸಮಯಕ್ಕೆ ತಲುಪುತ್ತೆ. ಅಂದ್ರೆ ಅರ್ಥ : ನೀವು ಕೊಟ್ಟ ಹೊಸ ಸುದ್ದಿ ಜಗತ್ತಿನ ಯಾವ್ಯಾವ್ದೋ ಮೂಲೇಲಿರೋ ಯಾವ್ಯಾವ್ದೋ ಸ್ನೇಹಿತನಿಗೆ ಒಂದೇ ಸಮಯಕ್ಕೆ ಪ್ರಸಾರ ಆದ ಹಾಗಾಯ್ತು. Actually ನಮ್ಮ Mobile ಗಳಲ್ಲಿರೋ Group Message Service Option ಇದೆಯಲ್ಲ , ಆ Concept ಬಳಸಿಕೊಂಡು 2006ರಲ್ಲಿ ಜನ್ಮತಾಳಿದ ಈ Twitter ಇವತ್ತು ಲೋಕಪ್ರಿಯವಾಗಿದೆ ಅಂದ್ರೆ ನಮ್ಮ ವಿಳಾಸ ಪುಸ್ತಕದಲ್ಲಿರೋ ಸಮಸ್ತರಿಗೂ ಒಂದೇ ಏಟಿಗೆ ಸಂದೇಶ ತಲುಪಿಸೋ ಅದರ ಸರಳತೆ ಯಿಂದಾಗಿ ಅಷ್ಟೆ. ಇಲ್ಲಿ ನೀವು Tweet ಮಾಡುವ ವಾಕ್ಯದ ಮೇಲೆ ಗಮನ ಇಟ್ಕೋಬೇಕು. ಅಂದ್ರೆ ನಿಮ್ಮ Tweet ಯಾವುದೇ ಒಬ್ಬ ವ್ಯಕ್ತಿಯನ್ನ ನಿರ್ದೇಶಿಸಿ ಬರೆದ್ರೆ ಅದು Stupid ಅನ್ಸುತ್ತೆ. So, ನಿಮ್ಮ Tweet ನ ವಾಕ್ಯ ಒಂದು ಗುಂಪನ್ನ ಉದ್ದೇಶಿಸಿ ಹೇಳೋವಂಥದ್ದಿರಬೇಕು, ಸಾಮಾನ್ಯವಾಗಿ. "



ಇಷ್ಟು Twitter ಬಗ್ಗೆ ಪುರಾಣ ಕೇಳಿದ್ರಲ್ಲಾ ... Ditto ಇದೆ ನಮ್ಮ ಈ gmail BUZZ.

Tweet ಅಂದ್ರೆ ಹಕ್ಕಿಯ ಕೂಜನ ಅನ್ನೋ ಭಾವ ಬಿಂಬಿಸಿದ್ರೆ BUZZ ಅನ್ನೋದು ದುಂಬಿಯ ಝೇಂಕಾರ ಅಂತ ಹೇಳುತ್ತೆ.

ಒಟ್ನಲ್ಲಿ ನಮ್ಮಿಂದ ಹೊರಟ ಧ್ವನಿ ದಶದಿಕ್ಕುಗಳಲ್ಲೂ ಪ್ರತಿಧ್ವನಿಸೋದೇ ಈ ತಂತ್ರಾಂಶದ ಮರ್ಮ.



" ಈ gmail BUZZ ನಲ್ಲಿ ನಮ್ಮ gmail Contacts List ಅಲ್ಲಿ ಇರೋರೆಲ್ಲರೂ ಈ ಅನುರಣನ ದ ವ್ಯಾಪ್ತಿಗೆ ಬರ್ತಾರೆ. ನಾವು ಅವರ ಕೂಜನದ ವ್ಯಾಪ್ತಿಗೆ ಬರ್ತೀವಿ ಅವರು ನಮ್ಮ ಕೂಜನದ ವ್ಯಾಪ್ತಿಗೆ ಬರ್ತಾರೆ. ನಂತರದ್ದೆಲ್ಲ Twitter ದ್ದೇ ನಕಲು. Almost. ನಮ್ಮ SSMS ಜೊತೆಗೆ ಫೋಟೋ - ವಿಡಿಯೋ ಗಳನ್ನೂ ಹಂಚಿಕೊಳ್ಳೋ Super ಅವಕಾಶ ಕೊಡ್ತಿದೀವಿ ಅಂತ ಗೂಗ್ಲಿಗರು ಹೇಳ್ತಿದಾರೆ. ಇಲ್ಲಿ Public ಮತ್ತು Pivate ಅಂತ Option ಬೇರೆ ಇಟ್ಟಿದೀವಿ. ಇದರ ಜೊತೆಗೆ ನೀವು Web ದುನಿಯಾದಲ್ಲಿ ಬೇರೆ ಬೇರೆ ಎಲ್ಲೆಲ್ಲಿ Account ಇಟ್ಟಿದೀರಲ್ಲ ಅವೆಲ್ಲದರ ವಿಳಾಸವನ್ನ ಲಿಂಕಿಸಿದಾರೆ. ಉದಾ : picasa, flickr, googlereader, twitter...ಹೀಗೆ. ಮತ್ತು ನಿಮ್ಮ ದುಂದುಭಿಗೆ ಬಂದ ಪ್ರತಿ ಪ್ರತಿಕ್ರಿಯೆನ ನಿಮ್ಮ inbox ಗೆ mail ಮಾಡಲಾಗುತ್ತೆ. ಜೊತೆಗೆ ಇದು mobile ನಲ್ಲೂ ಸಿಗುತ್ತೆ. ಒಂದು ಮಾತನ್ನ ಇಲ್ಲಿ ಎಲ್ರೂ ಒಪ್ಲೇಬೇಕು :: ಈ BUZZ ಏನಿದೆಯಲ್ಲ ..ಇಲ್ಲಿ ಈ Social Network ದುನಿಯಾ ದ ವೈರಿಗಳ ಲಿಸ್ಟ್ ಅಲ್ಲಿರೋ facebook, twitter ಗಳೆರಡರ ವಿರುದ್ಧದ ಸಮರ ಇಲ್ಲಿ ಕಾಣಬಹುದು. ಒಂದು ಬೇಸರದ ಸಂಗತಿ ಅಂದ್ರೆ ಈ ಗೂಗ್ಲಿಗರು ಇಲ್ಲಿ ಸ್ವಂತ ಶ್ರಮ ಹಾಕಿರೋ ಯಾವ ಲಕ್ಷಣಗಳು ಕಾಣ್ತಾ ಇಲ್ಲ. ಎಲ್ಲ ಅಗ್ಗದ ನಕಲುಗಳ ಥರ ಕಾಣ್ತಾವೆ. ಸರಿ ಒಟ್ನಲ್ಲಿ ...ಎಲ್ಲೇ ಇರು ಹೇಗೇ ಇರು .. ಎಂದೆಂದೂ.. "

|| Buzz ಪುರಾಣ ಸಮಾಪ್ತಿ : ||

28 January 2010

The Bite of Apple & ISHQIYA


I Love Apple.

Here Apple Is Not The Fruit But The Company Which Produces Exciting Electronic Stuffs. Their Creations Are Always Mindblowing. You Fall In Love With Them @ First Sight, Guaranteed. Their Design, Aestheticity, WOW features, Cutest interface....Evvverything....Evverything That Comes Out Of Appl
es Stable is A Masterpiece.


I Just Indulge.

Yesterday The Boss of Apple, Steve Jobs, Unvieled The New iPad. It's News was Leaked In The Market Months Before It's Release & Rumoured to Be Named As iSlate, iPad,...etc. But Company Decided To Go With The Name iPad ( Remember iPod - It's WorldFamous MusicPlayer ). Have A Look @ This Picture..


These R Not The Company's Creations. These R Just The Digital Manufactures Of Die Hard Fans of Apple Who PainStakingly Designed These Tablets & Tried To Farsee Their Dream Device Through Their Eyes.


This Is Apple Fan Club. They Stand In Ques To Buy Its First Copy of All Their Goods.

-------------------------------------

ಈಗ ವಿಷಯಕ್ಕೆ ಬರೋಣ. ನಿನ್ನೆಯ ದಿವಸ ಆ್ಯಪಲ್ ಕಂಪನಿಯ ಮಾಸ್ಟರ್ ಸ್ಟೀವ್ ಜಾಬ್ಸ್ ಹೊಸ ಉತ್ಪನ್ನವೊಂದನ್ನ ಸಾದರಪಡಿಸಿದರು. ಅದುವೇ iPad.










ಇದನ್ನ ನಿಮ್ಮೆದುರಿಗೆ ಈ ಥರ ಪರಿಚಯಿಸ್ತೀನಿ ನೋಡಿ....ಅಂದ್ರೆ ಅದರಲ್ಲಿ ಬಳಸಿರೋ ಒಂದೊಂದು technical Spec ಅನ್ನ Explain ಮಾಡ್ತಾ ಹೋಗ್ತೀನಿ ::

  • ಇದನ್ನ Tablet ಗಳ ಗುಂಪಿಗೆ ಸೇರಿಸಿರುವ ಕಂಪೆನಿ ಅದನ್ನ iPhone ಗಿನ್ನ Large Screen Device ಮತ್ತೆ Laptop ಗಳಿಗಿಂತ Handy ಅಂತ ಹೇಳಿಕೊಂಡಿದೆ. So, ಇದೊಂದು Full Touch Screen - Multitouch Enabled Tablet. A Bit Less In Size of A Magazine. That's why it Boasts To Be Handy & Ofcourse It's.
  • ಇತ್ತೀಚೆಗೆ ಭಾರತಕ್ಕೂ ಕಾಲಿಡಲು ಹವಣಿಸುತ್ತಿರುವ Kindle ನಂತಹ e -Book Reader ಗಳಿಗೆ iPad ನಿಂದ ಸ್ಪರ್ಧೆ ಯಂತೂ guarantee. Dont You Love This InterFace ? Oops !! Damn Cute. Books Mounted on a Wooden Cupboard. Just Pick The Book U Want To Read. That's it .
  • ಈ Tablet, A4 ಶ್ರೇಣಿಯ 1GHz Apple Chip ಒಳಗೊಂಡಿದೆ. Actually It's Not A Boasting Kind of Speed Still Manageabale.
  • Has A Optional Hard Disk Space of 16Gb, 32GB & 64GB.
  • Multitouch Diagonal 9.7 inch LED Display with IPS ( Inches Per Second ) Technology. 1024*768 pixels & 132 pixels per inch (ppi) Brightness ಇದೆ. ಜೊತೆಗೆ Finger Print Smudge ತಪ್ಪಿಸೋದಕ್ಕೆ oleophobic coating ಇದೆ. ಬೇರೆ ಬೇರೆ ಭಾಷೆಗಳನ್ನ At A Time Support ಮಾಡುವ technology ಒಳಗೊಂಡಿದೆ. 9.7 ಇಂಚಿನ Screen ಚಲನಚಿತ್ರ ನೋಡೋದಕ್ಕೆ / ಫೋಟೋ Browse ಮಾಡೋದಕ್ಕೆ Dream device.
  • Connectivity : ಇದರಲ್ಲಿ SIM Card Tray ಕೂಡ ಇದೆ. ಮುಂಚೆನೇ ಹೇಳಿದ ಹಾಗೆ ಇದು ಐ ಫೋನ್ ಗಿಂತ ದೊಡ್ಡದು ಮತ್ತೆ ಲ್ಯಾಪ್ ಟಾಪ್ ಗಿಂತ ಚಿಕ್ಕದು ಅಂತ. ಆದ್ರೆ ಇಲ್ಲಿ SIM Card ಹಾಕೋಕೆ ಬರುತ್ತೆ ಅಂತ ನೋಡಿ ಫೋನ್ ಮಾಡೋಕೆ ಪ್ರಯತ್ನ ಮಾಡ್ಬೇಡಿ. ಆ SIM Card ಇರೋದು 3G Connectivity ಗಾಗಿ. ಜೊತೆಗೆ Wi-Fi ಇದೆ. & Ofcourse BlueTooth ಇದೆ. ಈ Blutooth ನ ನೀವು Wirelees Apple Keypad Connect ಮಾಡ್ಕೊಳ್ಳಿಕ್ಕೂ ಬಳಸಿಕೋಬಹುದು. ಈ ಮೇಲಿನ ಚಿತ್ರಗಳಲ್ಲಿ wireless key Board ಗೆ Connect ಮಾಡಿರೋದನ್ನ ನೋಡಬಹುದು. ಎರಡನೇ ಚಿತ್ರದಲ್ಲಿ it's Been Connected To Charger Dock. Third & Fourth Show The Carry Case Which Dons MultiRoles As Photo * Movie Viewing Stand & Even As Type Friendly Posotionning Stand. UnderStood ?
  • It's Got Safari Web Browser To Surf The Net.
  • When There Is A Web Browser You R Equipped To Do All Mailing & Surfing & Connecting To Your Friend. & Truly It Gives You All in Full. Take It !
  • & It Has All It's iPod Features Intact.
  • & Now Contacts & Calendar. It's Like U R In Harry Potter's World.ಹೇಗಿದೆ ? ಈ ಪಕ್ಕದ ಪುಟದಲ್ಲಿ ವ್ಯಕ್ತಿಯ ಹೆಸರು ಬರೆದಿದ್ರೆ ಆ ಪಕ್ಕದಲ್ಲಿ ಅವರ ಬಗ್ಗೆ ಫುಲ್ ಡೀಟೇಲ್. & this One Below Here. Check It.Damn Cute Calendar :: To Do List :: Evvverything. It's Like Your Personal Diary Pesonal Assistant. All In One.
  • & They Have Added One More Option Here Called : SpotLight Search . Which Helps U Search Across The iPad. This feature Enables You To Find Any data Of Any Form, In A Flash.
& It Has Got Maps & Notes.ಹೀಗೆ ನಿಮ್ಮ ಕಲ್ಪನೆಗೆ ಸಾಣೆ ಹಿಡಿಯುವ device ನಿನ್ನೆ ದಿವಸ ಜನ್ಮ ತಾಳಿದೆ. ನಮ್ಮೂರಿಗೆ ಬರೋದಕ್ಕೆ ಇನ್ನೊಂದು ವರ್ಷ ತಗೊಳ್ಳುತ್ತೋ ಏನೋ...ಯಾವ್ದಕ್ಕೂ ಹಣ ಕೂಡಿಡೋಣ.

Take Out Your PIGGY BANK Name it ::


iSave 4 iPad.

...................................................................

NOW

Bit About The Movie Ishqiya.

From The Factory of Vishal Bharadwaj.

Has Plenty of Space For गालियाँ

Watch out VIDYA - NASSIRUDDIN - ARSHAD

Already The Songs..

इब्न - - बतूता ... By Sukhwinder

&

दिल तो बच्चा है जी ... By Rahat Fateh Ali Khan

R Famous With A Lyrics Support By Gulzar.

Personally I Also Liked The Song : बड़ी धीरे जली ... By Rekha Bharadwaj

Me planning To Watch it As Soon As it Releases Tomorrow, The 29th Jan 2010.


30 April 2009

The fascinating World of Internet





[ ಓದುಗ ಮಹಾಶಯ, ಲೇಖನದಲ್ಲಿ ಎಲ್ಲೆಲ್ಲಿ ಶಬ್ದಗಳ ಕೆಳಗೆ ಗೆರೆಯೊಂದು ಮೂಡಿ ಬಂದು cursor ಬದಲಿಗೆ

hand signal
ಬರುತ್ತದೆಯೋ ಅದನ್ನ internet link ಎಂದು ಭಾವಿಸುವುದು.....

ಅಂದರೆ ಅದರ ಮೇಲೆ click ಮಾಡಬೇಕು, ಆಗ ಅದು
ಅದಕ್ಕೆ ಸಂಬಂಧಿಸಿದ website open ಮಾಡುತ್ತೆ...

ಇವುಗಳನ್ನ ತಕ್ಷಣ o
pen ಮಾಡೋ ಮನಸ್ಸಾದ್ರೆ right click ಮಾಡಿ open in new window / tab ಅಂತ

ಸೆಲೆಕ್ಟ್ ಮಾಡುವುದು
]

{ ಇಲ್ಲಿ ನೀಡಿರೋ ಮಾಹಿತಿ ಬರೀ Outline ಮಾತ್ರ... Technical Points ಗಳಿಗೆ ಇಲ್ಲಿ ಸ್ಥಳ ಕಲ್ಪಿಸಿಲ್ಲ... ಹಾಗಾಗಿ ಇದನ್ನ ಅದೇ ದೃಷ್ಟಿಯಲ್ಲಿ ಸ್ವೀಕರಿಸಬೇಕಾಗಿ ವಿನಂತಿ. }

In All i Have Given You 50+ INTERNET LINKS In This Article...
'Use It' To Become 'Used to It.'



I.N.T.E.R.N.E.T.




The Internet is a global network of interconnected computers, enabling users to share


information along multiple channels.- ಅಂತ wikipedia ಹೇಳುತ್ತೆ .


ಈಗ ನಮ್ಮ ಅನುಕೂಲಕ್ಕಾಗಿ ಅಂತರ್ಜಾಲ ಜಗತ್ತ
ನ್ನ 3 ಭಾಗಗಳಾಗಿಸೋಣ :


1. e-mail


2. Search Engine


3. Particular Website




ಪ್ರಥಮವಾಗಿ e-mail.....



ನಾವು ದಿನಗಳಲ್ಲಿ ನಮ್ಮ ಸಂದೇಶಗಳನ್ನ ಕಳಿಸಲು ನಮ್ಮ ಅಂಚೆ ಕಚೇರಿಯನ್ನ ಬಳಸ್ತಿದ್ವಿ ....
[ ತೀರ
ಪಾರಿವಾಳದ ದಿನಗಳಿಗೆ ಹೋಗಬೇಡಿ..ಅದು ಆಆಆ ದಿನಗಳಾಗ್ತದೆ.....]


ನಂತರ courier ಬಂತು ...ಈಗ ಬಂದಿದೆ e-mail.


ಪದ electronic mail ಎಂಬ ಪದದ ಚೊಕ್ಕ ರೂಪ ....ಅಷ್ಟೇ ಚೊಕ್ಕವಾಗಿವೆ ಅದರ ಉಪಯೋಗಗಳು ....



ಕುಂತಲ್ಲೇ ಸಂದೇಶ ಕಳಿಸಿ - ಸ್ವೀಕರಿಸಿ ....ಬೇಕಾದವರೊಂದಿಗೆ ಹರಟೆ ಹೊಡೆಯಿರಿ ...



ಇಲ್ಲಿ ನಿಮಗೆ ಒಂದು ಖಾಯಂ ವಿಳಾಸದ ಅವಶ್ಯಕತೆಯಿಲ್ಲ ...



ನೀವು ಕಳಿಸಿದ ಪಡೆದುಕೊಂಡ ಪತ್ರಗಳ ಒಂದು ಪ್ರತಿ ನಿಮ್ಮ ಹತ್ತಿರ ಸದಾ ಉಳಿಯುತ್ತದೆ...



ಅದೇ ರೀತಿ ಕಟ್ಟೆಗೆ ಕುಳಿತು ಹರಟೆ ಹೊಡೆಯುಷ್ಟೇ ಸಲೀಸಾಗಿ ಹರಟೆ ಹೊಡಿಬಹುದು...ಅದುವೇ chatting.



ನಿಮ್ಮವರೆಲ್ಲರ ವಿಳಾಸಗಳನ್ನ ಒಟ್ಟಿಗೆ ಒಂದೇ ಕಡೆ ಉಳುಸಿಕೊಂಡಿರಬಹುದು....contacts.


ಒಟ್ಟಿಗೆ ಸಾಕಷ್ಟು ಜನರಿಗೆ ಪತ್ರ ಬರೀಬಹುದು....


ಹಿಂದೆ ನಿಮ್ಮ ಭಾವನೆಗಳನ್ನ ಹಂಚಿಕೊಳ್ಳಿಕ್ಕೆ
ಸಹಾಯಕ್ಕೆ ಬರ್ತಿದ್ದಿದ್ದು ಶಬ್ದಗಳು ಮಾತ್ರ ...


ಈಗ ನಿಮ್ಮ ಭಾವಚಿತ್ರಗಳು , ಚಲಿಸುವ ಚಿತ್ರಗಳು i mean videos ಇವೆಲ್ಲವೂ ನಿಮ್ಮೊಟ್ಟಿಗಿದ್ದಾವೆ....Attach File




ಇದು
ದಿನಗಳನ್ನ ಮೂದಲಿಸ್ತದೆ ಅಂತ ನಿಮಗನ್ನಿಸಿದ್ರೆ ಅದು ಶುದ್ಧ ತಪ್ಪು...


ನಿಜವಾಗಿ ಅದು, ನಮ್ಮನ್ನ ಅಣಗಿಸ್ತಾ ಇದೆ...ನಿನ್ನಲ್ಲಿರುವ creativity , ಸೃಜನಶೀಲತೆ ಅಂತ ಒಂದು

ಇತ್ತಲ್ಲ ಅದನ್ನ ನಿನ್ನ ಕೈಯಾರ ನೀನೇ ಹಾಳು ಮಾಡ್ಬಿಟ್ಟೆ
ಯಲ್ಲೋ ...ಅಂತ !!



ಬರೀ ಇಂಗ್ಲೀಷಿನಲ್ಲೇ ಬರೀಬೇಕಾ ?? ಅಲ್ಲಿ
ನ್ನ ಮನದ ಫೀಲಿಂಗ್ ಬರೋದಿಲ್ಲ ಗುರು ....ಅಂತೀರಾ!!

ಶುರುವಿಗೆ ಆಂಗ್ಲ ಭಾಷೆಯಲ್ಲಿ ಮಾತ್ರ ಇದ್ದ ಸೇವೆ ಈಗ
ಪ್ರಾದೇಶಿಕ ಭಾಷೆಗಳಲ್ಲೂ ಲಭ್ಯ ....ಆದರೆ ಅದು ನಿಮ್ಮ computer configuration ಅವಲಂಬಿಸಿದೆ...

[ ಕೆಲವು ಜನ ಸ್ನೇಹಿತರು ಕೇಳಿದ್ರಲ್ಲ ಅದಕ್ಕೆ ಇದೇ ಉತ್ತರ ...ನಿಮ್ಮ computer ಹೊಸ model ಇದ್ರೆ ಮಾತ್ರ option ಸಿಗುತ್ತೆ ]

ನೀವು ಕನ್ನಡದಲ್ಲಿ mail ಮಾಡ್ಬೇಕು ಅಂತಿದ್ರೆ
ಒಂದು ಹೊಸ computer ತಗೊಳ್ಳಿ ಇಲ್ಲ Quillpad / Google Kannada ಬಳಸಿ ಇಲ್ಲ ನುಡಿ 4.0 ಹಾಕಿಸಿಕೊಳ್ಳಿ ...


ಇಲ್ಲಿ ನಿಮಗೆ ಹೊಸತೆನಿಸೋ ಮಾಹಿತಿ ಅಂದರೆ ನಿಮ್ಮ ಪ್ರತಿ ಪುಟದ ತಳಭಾಗದಲ್ಲಿ ನೀವು ಮೊದಲು


ಯಾವಾಗ sign in ಆಗಿದ್ರಿ ಮತ್ತು ಯಾವ ip address ಬಳಸಿದ್ರಿ ಅಂತ ಕಾಣಬಹುದು.-ಕಳ್ಳತನ ತಪ್ಪಿಸಲಿಕ್ಕೆ.


ಹೇಗೆ ದಿನಗಳ ನಂತರದ ದಿನಗಳಲ್ಲಿ ನಿಮ್ಮ ಪತ್ರ ಕಳಿಸಲು ನಿಮಗೆ india post, VRL courier,


Proffessional Courier, ...ಅಂತ ಬೇರೆ
ಬೇರೆ option ಗಳಿದ್ವೋ ಅದೇ ರೀತಿ



e-mail ನಲ್ಲಿ ಬೇರೆ ಬೇರೆ service provider ಗಳಿದ್ದಾರೆ .....Google mail (gmail),Yahoo mail, Rediff mail...etc.



ನಿಮಗಿಷ್ಟದ್ದನ್ನ ಆರಿಸಿಕೊಳ್ಳಿ ...




ಈಗ ಬರೋಣ search engine ಕಡೆಗೆ ....





ಅದರ ಹೆಸರೇ ಸೂಚಿಸುವಂತೆ ಇದರ ಕೆಲಸ ನಾವು ಕೇಳಿದ ಪದ, ವಾಕ್ಯಕ್ಕೆ ಅರ್ಥ ಉತ್ತರ ಒದಗಿಸಿಕೊಡೋದು...



Google , Field ನಲ್ಲಿ DON...



ಇಲ್ಲಿ ನೀವು ಮಾದಬೇಕಾದ್ದಿಶ್ಟೇ....ನಿಮಗೆ ಯಾ
ವಿಷಯದ ಮಾಹಿತಿ ಬೇಕೋ ವಿಷಯದ key word ಗಳನ್ನ ಅಲ್ಲಿ type ಮಾದಿ...


search engine ಮತ್ತೆ 4 ಕವಲುಗಳಾಗಿ ಹರಿಯುತ್ತೆ ..
.


1. Website Search - google page ಎಡಭಾಗದ ಮೇಲ್ತುದಿಯಲ್ಲಿ web option click ಮಾಡಿ.


2. Image Search - google page ಎಡಭಾಗದ ಮೇಲ್ತುದಿಯಲ್ಲಿ images option click ಮಾದಿ.



3. Video Search - google ಅಂಗಸಂಸ್ಥೆಯಾದ YouTube ಇದರ ಗುರು.


4. Encyclopedia enabled Search - wikipedia Field ನಲ್ಲಿ ಒಳ್ಳೇ ಹೆಸರು ಮಾಡಿದೆ.


ಯಾವುದೋ University website address ಬೇಕೇ google web search ನಲ್ಲಿ ಪಡೆಯಿರಿ.


ನಮ್ಮ ರಮ್ಯಳ ಫೋಟೋ ಸವಿಯಬೇಕೇ....google image search ಬಳಸಿ.


ಇನ್ನು india-pak 20-20 bowl ou
t match ನೋಡ್ಬೇಕೇ ...ಸೀದಾ YouTube ದಾರಿ ಹಿಡೀರಿ...


ಆಮೇಲೆ ಆಫ್ರಿಕಾದ ಮಂಗಗಳ ಬಗ್ಗೆ Fultoo Information ಬೇಕಾ....ಹೋಗಿ ಸೀದಾ wiki ಗೆ...


ಇದಲ್ಲದೇನೆ ಶಬ್ದಕೋಶಗಳಿದಾವೆ..ಶಬ್ದದ ಅರ್ಥ s
earch ಮಾಡ್ಲಿಕ್ಕೆ.


search engine ನಲ್ಲಿ ಮದುವೆಗೆ ಗಂಡು ಹುಡುಕ್ತೀನಿ ಅಂತ ನೀವು ಹುಡುಗಿಯರು ಯಾರಾರು ಹೊರಟಿರಾ ಮತ್ತೆ !!

ಅದಕ್ಕೆ ಬೇರೆ option ಇದೆ, ಮುಂದೆ ಹೇಳ್ತೀನಿ .




ಈಗ particular website ಸರದಿ....




ಇದು ಯಾವಾಗ ಉಪಯೋಗಕ್ಕೆ ಬರುತ್ತೆ ಅಂದ್ರೆ ನಿಮಗೆ ಇಂಥದೇ ಸಂಸ್ಥೆಯ / ವ್ಯಕ್ತಿಯ website ಗೆ


ಹೋಗಬೇಕು ಅಂತ ಇರುತ್ತಲ್ಲಾ ಆವಾಗ...ಇಲ್ಲಿ ನಿ
ಮಗೆ web address ಗೊತ್ತಿರಬೇಕು.


ಒಂದು ಅಕ್ಷರ ತಪ್ಪಿದ್ದರೂ ಆಗೋದಿಲ್ಲ ...ಸರಿಯಾಗಿ ನೋಡಿಕೊಂಡು type ಮಾಡಬೇಕು.


ಇದರ ಬಗ್ಗೆ ಹೆಚ್ಚಿಗೆ ಹೇಳೋದೇನಿಲ್ಲ...ಇಷ್ಟೇ.



e-mail, search engine & particular website ಇವೆಲ್ಲ inernet basic uses ಗಳ


ಪಟ್ಟಿಯಲ್ಲಿ ಇರೋ application ಗಳು ...


ಇವುಗಳನ್ನ ಹೊರತುಪಡಿಸಿ ಇನ್ನೊಂದು ಜಗತ್ತಿದೆ...ಅದು addict ಆದ್ರೆ ಬಿಡಲಿಕ್ಕೆ ಸಾಧ್ಯ ಇಲ್ಲ ಅನ್ನೋವಂಥದ್ದು....



orkut - facebook - hi5 :: Social Networking Sites


twitter :: talk to the world...use it, to kn
ow it


free movie downloads



watch new movies online for free


blogging ..... bigadda .....Another Fa
ntasy


Books Online :: Less Attractive Adiction



share photos online efficiently :: of Less Use But Of Immense Capacities


gadget search :: one more


free mm uu ss ii cc online.....download- listen- share


free softwares.....Very Useful



C H A T TI N G :: Time Eater



section ನಲ್ಲೇ ಕೂತ್ಕೊಂಡು ಮದುವೆಗೆ ಹೆಣ್ಣು ನೋ
ಡ್ರಿ...matrimonial

[ ನಮ್ಮ ಬ್ಯಾಚ್ ನಲ್ಲಿ ಹುಡುಗರಿಗಿನ್ನ ಹುಡುಗಿಯರೇ ಇದರ ಉಪಯೋಗ ಪಡೆದುಕೊಳ್ತಿದಾರೆ ಅಂತ ಒಂದು ಸಮೀಕ್ಷೆ ಹೇಳುತ್ತೆ ]


I Dont Like GAMES on Computer ..
.So I Dont Have The Information

About Them....It's One More Addiction


108 applications ಇದಾವೆ..



ಇಷ್ಟೆಲ್ಲಾ ತಿಳಿದುಕೊಂಡಿದ್ದಾಯ್ತು...


ಇನ್ನು application ಗಳನ್ನ ಬಳಸಬೇಕು ಅಂತಿದ್ರೆ ಅದಕ್ಕೆ INTERNET EXPLORER ಬೇಕು ತಾನೇ ..ಅದರಲ್ಲೂ ನಾನಾ ವಿಧಗಳಿವೆ ::




ಇದೇನಿದು ಅಂತ ಮಹಾ ವಿಷಯಾನಾ..!!ಅಂತ ಕೇಳಬೇಡಿ..ಹೌದು..ಇದು ತುಂಬಾ imp. topic .

internet explorer ಅನ್ನೋದು microsoft ನವರು ತಯಾರು ಮಾಡಿರೋ tool.

ಇದರಲ್ಲಿ limited option ಗಳಿರೋದನ್ನ ಮನಗಂ
ಕೆಲವು ಇತರೆ ಕಂಪೆನಿಗಳು...ಇದಕ್ಕೆ ಪರಿಹಾರ ಕಂಡುಹಿಡಿಲಿಕ್ಕ್ ಹೊರಟ್ವೂ...

ಆಗ ಅವು ಕಂಡು ಕೊಂಡಿದ್ದೇನು ಅಂದ್ರೆ ಸುಮ್ಮನೇ internet ನ್ನ explore ಮಾಡೋದರ ಜೊತೆಗೆ ಸಾಕಷ್ಟು ವಿಷಯಗಳ ಕಡೆಗೆ ಗಮನ ಕೊಡಬೇಕಾ
ದ್ದಿದೆ ಅಂತ...

ಅವುಗಳು search ಮಾಡೋ speed ....

ಒಂದೇ window ನಲ್ಲಿ ಬಹಳಷ್ಟು site ( tab ) ಗಳನ್ನ ತೆರೆಯೋದು...

Download Manager ...

ಇನ್ನೂ ಏನೇನೋ complicated ವಿಷಯಗಳಿದಾವೆ...ಇದೆಲ್ಲದರ ಫಲವೇ ನಮ್ಮ

Mozilla Firefox


Opera Web Browser

Inernet Explorer 8

Apple Safari

Google Chrome

Download And Use Each and EveryOne...Then Stick to The Best...ok?


ಇನ್ನು, internet ನ್ನ fast ಆಗಿ ಬಳಸಲಿಕ್ಕೆ..
ಕೆಲವು KEYBOARD SHORTCUTS

ಕಲಿಯೋದು ತುಂಬಾ ಉಪಯುಕ್ತ.



ನಾನು ನಿಮಗೆ ಪದೇ ಪದೇ Google ಬಳಸಿ ...ಬಳಸಿ ...ಬಳಸಿ...ಅಂತ ತಲೆ ಒಡೆದುಕೊಳ್ತಿನಲ್ಲಾ ಅದಕ್ಕೆ ಕಾರಣ ಇಲ್ದೇ ಇಲ್ಲ ...




ಈಗ ಹೇಳ್ತೀನಿ ಕೇಳಿ ಅದರ immense uses , i mean ಅಸಾಧ್ಯ ಸಾಧ್ಯತೆಗಳ ಬಗ್ಗೆ...

g-mail login ID ಏನಿದೆಯಲ್ಲ ಅದು ನಿಮ್ಗೆ Master Key ಇದ್ದಂಗೆ ...I Mean It Can Open Any Lock...


Internet World ಲ್ಲಿ Google ಏನಿದೆಯಲ್ಲ ಅದು ಭೂಗತ ಜಗತ್ತಿನ ಭಾಯ್ ಲೋಗ್ ಇದ್ದಂಗೆ ....

ಬಹಳಷ್ಟು ಜನ ಅದರ ದಾಸಾನು ದಾಸರು....

Google Search Engine - Web & Image

Google News

Google Maps

Google Earth

Google Groups

Gmail


Google Desktop

Google Sketch


Google Talk

Google Kannada

YouTube


Picasa Web Albums


ಇವೆಲ್ಲ ಸ್ವಂತ product ಗಳಾದುವು[ ಕೆಲವನ್ನ ಕೊಂಡುಕೊಂಡಿದಾರೆ ]...ಇನ್ನು ಇದನ್ನೇ ಆಶ್ರಯಿಸಿರೋ ಸಾಕಷ್ಟು Service ಗಳಿದಾವೆ.

YOU CAN FIND IT ANYWHERE IN INTERNET ...It's Omnipresent.


ಇನ್ನು BlogWorld ಒಂದಿದೆ...ನಿಮ್ಮ ಕಣ್ಣ ಮುಂದೇನೇ ಇದೆ...ಇಲ್ಲಿರೋ ಸಾಧ್ಯತೆಗಳು

'ಅಸಾಧ್ಯವಾದವುಗಳು' ಅಂತ ಮನವರಿಕೇನೂ
ಗಿದೆ ಅನ್ಕೋತೀನಿ ...


ಬ್ಲಾಗ್ ಜಗತ್ತಿನ ಬಗ್ಗೆ ಇನ್ನೊಂದು ವಿಸ್ತೃತ ಮಾಹಿತಿ ಕಣಜವನ್ನ ಶೀಘ್ರದಲ್ಲೇ ನಿಮ್ಮ ಮುಂದಿಡ್ತೀನಿ.... ನಿಮ್ಮ ಸೂಕ್ತ ಸಹಕಾರ ಒಂದಿದ್ರೆ ನಾನು ಜಗತ್ತನ್ನೇ ನಿಮ್ಮ ಮುಂದಿಡಬಲ್ಲೆ...ನಿಜವಾಗ್ಲೂ.

--------------------

ಇಲ್ಲಿ ನಿಮ್ಮ feedback ತುಂಬಾನೇ important.


"ಇದೆಲ್ಲ ನನಗೆ ಮುಂಚೇನೇ ಗೊತ್ತಿದ್ದ ವಿಚಾರ ...ಇಲ್ಲೇನ್ ಹೊಸತಿದೆ ? " ಅಂತ ಯಾರಿಗಾದ್ರೂ ಅನ್ಸಿದ್ರೆ ...

ಎಲ್ಲೂ ಹಾಗೇ ಹೇಳೋಕೋಗ್ಬೇಡಿ..
ಯಾಕಂದ್ರೆ " ಇಷ್ಟು ದಿವಸ ನನಗೆ internet ಅಂದ್ರೆ ಏನೂ ಗೊತ್ತಿಲ್ಲಪ್ಪಾ ...ನನ್ನನ್ನ ನೋಡಿದ್ರೆ ಸಾಕು

mouse ಹೆದರ್ಕೊ0ಡು ಓಡೋಗುತ್ತೆ..!" -
ಅಂತ ಹೇಳಿ ಎಲ್ಲ Activity ಯಿಂದ ದೂರ ಉಳಿದು ಈಗ contradictory statement ಕೊಟ್ರೆ


ಆತ್ಮ ಸಾಕ್ಷಿಗೆ ವಿರುದ್ಧ ಆಗುತ್ತೆ.
ಇನ್ನು, ಗೊತ್ತಿಲ್ದಿರೋರಿಗೆ ಇದನ್ನ ಓದಿ ಹೀಗೂ ಉಂಟೆ...?! ಅಂತ ಅನ್ನಿಸಿದ್ರೆ ಸಾ......ಲದು.

ನಿಮ್ಮ ಪ್ರತ್ಯುತ್ತರಕ್ಕೆ ನಾನು ಸದಾ ಕಾಯ್ತಿರ್ತೀನಿ....

ನನ್ನ ಪರಿಸ್ಥಿತಿ ಯಾವ ಥರ ಆಗಿದೆ ಗೊತ್ತಾ ...?

"ಕಾಲೇಜಲ್ಲಿ ಆಗ್ಲಿ ಹೊರಗಡೆ ಆಗ್ಲಿ ನಾವು ಹುಡುಗರು ಒಂದು ಅಂದವಾಗಿರೋ ಹುಡುಗಿನ್ನ್ ಎಷ್ಟೇ

ಕೆಕ್ಕರಿಸಿ ನೋಡಿದ್ರು ಕವಡೇ ಕಾಸಿನ
ಕಿಮ್ಮತ್ತಿಲ್ಲ....


ಆದ್ರೆ ಅದೇ ಹುಡುಗಿಯ ಒಂದು unintentional ನೋಟಕ್ಕೂ ಕೋಟಿ ಕೋಟಿ ಬೆಲೆಯಿದೆ...

"
ನಿಮ್ಮ ಒಂದು reply ಗೂ ನನ್ನಲ್ಲಿ ಸದ್ಯಕ್ಕೆ Ditto ಬೆಲೆಯಿದೆ...



ನಿಮ್ಮ market price down ಆಗೋದಕ್ಕಿನ್ನ ಮುಂಚೆ ಎಚ್ಚೆತ್ತುಕೊಂಡ್ರೆ ಒಳ್ಳೆದು ...ಇಲ್ಲಾಂದ್ರೆ ನಿಮಗೇ ಗೊತ್ತಲ್ಲ..

-----------------------

Replying Methods :

1. By Commenting To The Posts On The Blog.

2. Through e-mail.- mail me : revappa@gmail.com

3. By Phone - call me at 9481773790

4. any of the above three will satisfy me more than the road side appreciation


-----------------------


ಈಗ Thanks ಹೇಳೋ ಸಮಯ ...

ಇಷ್ಟು ಬರೀಲಿಕ್ಕೆ, ಅನ್ನೋದಕ್ಕಿನ್ನ compose ಮಾಡ್ಲಿಕ್ಕೆ ಬೇಕಾಗಿದ್ದು,
ಭರ್ತಿ 4 ತಾಸುಗಳ 3 Sittings.

ಇದನ್ನ ಬರೀಬೇಕಾದ್ರೆ ತುಂಬಾ ಕಾದ್ತಾಇದ್ದ ಹಾಡಿಗೆ -

'ಮುಸ್ಸಂಜೆ ಮಾತು' ಇಂದ "ಆಕಾಶ ಭೂಮಿ ಇಂದು ಒಂದಾದ ಹಾಗಿದೆ......." ತುಂಬ Thanks.


ನಮ್ಮ ಆಡಳಿತ ಸಿ ಸೆಕ್ಷನ್ ಪರಶುರಾಮ ...ಅವರು ಹೇಳಿದ quillpad ನ್ನೇ ನಾನು ಇಲ್ಲೀವರೆಗೂ ಪ್ರತಿ

ಸಾರಿ ಬಳಸಿರೋದು...


ಈಗ ನಿನ್ನೆ ಇನ್ನೊಂದು ಹೊಸ ಲಿಂಕ್ ಹೇಳಿದಾರೆ : Google Transliteration LABS ಇಂದ

ಕನ್ನಡ Typing Pad...ನೀವು try ಮಾಡಿ ಚೆಂದ ಅನ್ನಿಸಿದ್ರೆ ಅವ್ರಿಗೆ Thanks ಹೇಳಿ.



ಬರೆದ್ ಮೇಲೆ ನೋಡೋರಿಗೆ , ಓದೋರಿಗೆ ಅಂದರೆ ನಿಮಗೆ ಧನ್ಯವಾದಗಳು...


ಮತ್ತೇಕೋ ಅದೇ ಹಾಡು ಕಾಟ ಕೊಡ್ತಿದೆ....38 ನೇ ಸಾರಿ.
.




ಮತ್ತೆ ಸಿಗ್ತೀನಿ..
ರೇವಪ್ಪ



DOWNLOAD THE FREE EDITIONS OF USEFUL SOFTWARES IN A SINGLE CLICK :

PICASA 3

Filehippo - The Free Software Download Site.

ITunes - Music Player From Apple. In It's 40 GB Space it stores All your Music in A

systematic Manner.

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    11 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    11 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದ...
    13 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    15 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    15 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    15 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    16 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    16 years ago