16 May 2010

ಮಾನಿನಿ

ಮಾನಿನಿ ::

ಈ  ಹೆಸರಿನಲ್ಲೇ ಗೌರವವಿದೆ. "ಮಾನಿ" ಎಂದರೆ ಗೌರವಸ್ಥ, ಮರ್ಯಾದಸ್ಥ ಎಂದು. ಸ್ತ್ರೀ ಎಂದರೆ ಗೌರವ, ಗೌರವ ಎಂದರೆ  ಸ್ತ್ರೀ  ಎಂಬಷ್ಟರ ಮಟ್ಟಿಗೆ ಆಕೆ ತನ್ನ ಜೊತೆಗೆ ಗೌರವವನ್ನೂ ಅಂಟಿಸಿಕೊಂಡೇ ಬಂದಿದ್ದಾಳೆ ಎಂಬುದಕ್ಕೆ ಈ ಮೇಲಿನ ಮಾನಿನಿ ಪದ ಒಂದು ಸಣ್ಣ ಉದಾಹರಣೆ ಅಷ್ಟೆ.  

ಇದಕ್ಕೆ ಪೂರಕವಾಗಿ ಹೇಳುವುದಾದರೆ, ನಮ್ಮದು ಪುರುಷ ಪ್ರಧಾನ, patriarchal ಸಮಾಜವೇ ಆದರೂ ಸ್ತ್ರೀ ಗೆ ಒಂದು ವಿಶೇಷ ಸ್ಥಾನ, ಗೌರವ, ಪೂಜ್ಯನೀಯ ಭಾವನೆ ನೀಡಿ  "ಯತ್ರ ನಾರ್ಯಸ್ತು ಪೂಜ್ಯಂತೆ, ರಮಂತೆ ತತ್ರ ದೇವತಾ:" ಎಂದು ಹೇಳಲಾಗಿದೆ.  ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ವಾಸವಾಗಿರುತ್ತಾರೆ ಎಂಬುದು ಈ ಶ್ಲೋಕದ ಅರ್ಥ.  ನಮ್ಮ ಪುರಾಣಗಳಲ್ಲಿ ಇದಕ್ಕೆ ಸಾಕಷ್ಟು ನಿದರ್ಶನಗಳು  ಸಿಗುತ್ತವೆ.

ನಮ್ಮ Typical Indian Woman ಹೇಗೆ ಪಾಶ್ವಿಮಾತ್ಯ  ಮಹಿಳೆಯರಿಗಿಂತ ಭಿನ್ನವಾಗುತ್ತಾಳೆ ಎಂಬುದಕ್ಕೆ ಅವಳಲ್ಲಿ ಕಂಡುಬರುವ ಈ ಕೆಳಕಂಡ ಗುಣಗಳು/ಹೋಲಿಕೆಗಳಿಂದ ಎಂದು ನಮ್ಮ ಸನಾತನ ಧರ್ಮ ಹೇಳುತ್ತದೆ.  ಅದೇ "ಕಾರ್ಯೇಷು ದಾಸಿ, ಕರಣೇಷು ಮಂತ್ರಿ, ಪೂಜ್ಯೇಷು ಮಾತಾ, ಭೋಗೇಷು ಲಕ್ಷ್ಮೀ, ಕ್ಷಮಯಾಧರಿತ್ರಿ, ಶಯನೇಷು ರಂಭಾ"  ಎಂದು. 

ಈ ರೀತಿ ನಮ್ಮ ಸಮಾಜ ಸ್ತ್ರೀಯನ್ನು ಒಂದು ಕಡೆ ವಿಶೇಷವಾಗಿ ಕಾಣುತ್ತಾ, ಗೌರವ ಪೂಜ್ಯ ಭಾವನೆ ತೋರುತ್ತಿದ್ದರೆ, ಮತ್ತೊಂದೆಡೆ ಅದೇ ಸಮಾಜ ಸ್ತ್ರೀಯನ್ನು  ನಿಕೃಷ್ಟವಾಗಿ ಕಾಣುತ್ತಾ, ದೌರ್ಜನ್ಯ, ಶೋಷಣೆಗೆ ಒಳಪಡಿಸುತ್ತಿದೆ.  ಸ್ತ್ರೀ ಕುರಿತಂತೆ,   ಸ್ತ್ರೀ ಸ್ವಾತಂತ್ಯ್ರ ಹಾಗೂ ಸ್ತ್ರೀ ದೌರ್ಜನ್ಯ  ಈ ಎರಡೂ ಧೋರಣೆಗಳನ್ನು ನಮ್ಮ ಸಮಾಜದಲ್ಲಿ ಕಾಣುತ್ತಿದ್ದೇವೆ.  ಹಾಗಾಗಿ ಈ ಲೇಖನ  ಸ್ತ್ರೀಯ ಪರವಾಗಿಯೋ, ಅಥವಾ ಪುರುಷ ವಿರೋಧಿಯಾಗಿಯೋ ಹೇಳುವುದಕ್ಕೆ ಬದಲಾಗಿ "Socialist Realism" ಬಗ್ಗೆ ಹೇಳುವ  ಒಂದು ಸಣ್ಣ ಪ್ರಾಮಾಣಿಕ ಪ್ರಯತ್ನವಷ್ಟೇ. 

ಗಂಡ ಮನೆಗೆ ಬಂದಾಗ ಬಾಗಿಲ ಮರೆಮಾಡಿಕೊಳ್ಳುವ ಹೆಣ್ಣು, ಇಂದು ಗಂಡನಿಗೆ ಸರಿಸಮಾನವಾಗಿ ಹೊರಗೆ ದುಡಿಯುವಷ್ಟು ಮಟ್ಟಿಗೆ  Self dependent ಆಗಿದ್ದಾಳೆ.  ಅಷ್ಟೇ ಅಲ್ಲ ಅವಲಂಭಿತರನ್ನು ಸಾಕುವ ಮಟ್ಟಕ್ಕೂ ಆರ್ಥಿಕವಾಗಿ ಸಬಲಳಾಗಿದ್ದಾಳೆ.   ಸ್ತ್ರೀ ರಕ್ಷಣೆ ಕುರಿತಂತೆ ನಮ್ಮ "ಮನುಸ್ಮೃತಿ"ಯಲ್ಲಿ ಈ ರೀತಿ ಹೇಳಲಾಗಿದೆ. "ಪಿತಾ ರಕ್ಷತಿ ಕೌಮಾರ್ಯೇ, ಭರ್ತಾ ರಕ್ಷತಿ ಯೌವನೇ, ಪುತ್ರಾಸ್ತು ಸ್ಥವಿರೇ ತಸ್ಮಾತ್ ನ ಸ್ತ್ರೀ ಸ್ವಾತಂತ್ಯ್ರ ಮರ್ಹತಿ"  ಈ ಹೇಳಿಕೆಯನುಸಾರ, ಸ್ತ್ರೀಯ ರಕ್ಷಣೆಯ ಜವಾಬ್ದಾರಿಯನ್ನು ಆಕೆಯ ಬಾಲ್ದದಲ್ಲಿ ಆಕೆಯ ತಂದೆಗೆ, ಯೌವನದಲ್ಲಿ ಪತಿಗೆ ಮತ್ತು ವೃದ್ದಾಪ್ಯದಲ್ಲಿ ಪುತ್ರರಿಗೆ ವಹಿಸಲಾಗಿದೆ.   ಮಹಾತ್ಮ ಗಾಂಧೀಜಿಯವರು ಹೇಳುತ್ತಿದ್ದಂತೆ ನಮ್ಮ ದೇಶಕ್ಕೆ ನಿಜವಾದ  ಅರ್ಥದಲ್ಲಿ  ಸ್ವಾತಂತ್ರ್ಯ ಸಿಗುವುದು, ರಾಮರಾಜ್ಯದ ಕನಸು ನನಸಾಗುವುದು ಒಂದು ಹೆಣ್ಣು ಅರ್ಧರಾತ್ರಿಯಲ್ಲಿ ಯಾವುದೇ ರಕ್ಷಣೆ ಇಲ್ಲದೆ ಸುರಕ್ಷಿತವಾಗಿ ತಲುಪುವಂತಾದಾಗ. ಆದರೆ, ಇಂದು ಹಗಲಿನಲ್ಲೂ ಮಹಿಳೆ ಸುರಕ್ಷಿತಳಲ್ಲ ಎಂಬುದಕ್ಕೆ ಹಾಡುಹಗಲೇ ಅವಳ ಮೇಲೆ ನಡೆಯುತ್ತಿರುವ ಅತ್ಯಾಚಾರ, ಹತ್ಯೆ, ದೌರ್ಜನ್ಯ, ಶೋಷಣೆ ಇವುಗಳ ಬಗ್ಗೆ ಪ್ರತಿನಿತ್ಯ ಮಾಧ್ಯಮದಲ್ಲಿ ಸಾಕಷ್ಟು ನೋಡುತ್ತಲೇ ಇದ್ದೇವೆ.  ಹೊರಗೆ ದುಡಿಯುವ ಮಹಿಳೆಯ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. Yes. It is "a bed of thorns".  ಅವಳು ಕೆಲಸ ನಿರ್ವಹಿಸುವ ಸ್ಥಳದಲ್ಲಿ ನಡೆಯುವ sexual harassment ಆಗಿರಬಹುದು, ಅಥವಾ ಇನ್ನಾವುದೋ ತರಹದ ದೌರ್ಜನ್ಯಗಳಾಗಿರಬಹುದು,  ಇಂತಹ ಅನೇಕ ಘಟನೆಗಳು ಆಕೆ ಎಷ್ಟು ಸುರಕ್ಷಿತಳು ? ಎಂಬ ಭಾವನೆಯನ್ನು ನಮ್ಮಲ್ಲಿ ಮೂಡಿಸದೇ ಇರಲಾರವು.  ಕೆಲವೊಂದು ಸಂದರ್ಭದಲ್ಲಂತೂ ಅವಳ ಸ್ಥಿತಿ  between two menacing dangers  ಅನ್ನೋ ಹಾಗೆ  "ಇತ್ತ ದರಿ ಅತ್ತ ಪುಲಿ"  ಅನ್ನೋ ರೀತಿ ಇರುತ್ತದೆ.  ಇಂಥಹ ಪ್ರಕರಣಗಳು ಹೆಚ್ಚಾಗಿ ಜನಬಲ, ಹಣಬಲ ಇನ್ಯಾವುದೋ ಬಲಗಳ ಪಾಶಕ್ಕೆ  ಸಿಲುಕಿ ಬೆರಳಣಿಕೆಯಷ್ಞು ಪ್ರಕರಣಗಳು ಮಾತ್ರ ಬೆಳಕಿಗೆ ಬರುತ್ತಿವೆ ಅಷ್ಟೇ.  ಮಹಿಳೆ ಇಂತಹ ದೌರ್ಜನ್ಯಗಳ ವಿರುದ್ದ ಎಷ್ಟೇ ದಿಟ್ಟತನ ತೋರುತ್ತಾ ಬಂದಿದ್ದರೂ, She is not free from the difficulties yet.  ಅವಳ ಪರವಾಗಿ ಅನುಕಂಪದಿಂದ ಎಲ್ಲರೂ ಪುಟಗಟ್ಟಲೇ ಬರೆಯಬಹುದು, ಭಾಷಣ ನೀಡಬಹುದು.  ಆದರೆ, " The wearer know where the shoe pinches" ಅನ್ನೋ ಹಾಗೆ ವಾಸ್ತವವಾಗಿ ಕಷ್ಟ ಎಲ್ಲಿದೆ ಎಂಬುದು ಅವುಗಳನ್ನು ಅನುಭವಿಸುವವರಿಗೆ ಮಾತ್ರ ಗೊತ್ತು.

ಇನ್ನೂ ಕಳೆದ ಮಾರ್ಚ್ ನಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ಕುರಿತಂತೆ, ಸಂಸತ್ತಿನಲ್ಲಿ ಹಕ್ಕು ವಿಧೇಯಕ ಮಂಡನೆಯಾಗಿರುವುದು ಸರಿಯಷ್ಟೇ. ಆದರೆ ಈ ಮೀಸಲಾತಿಯ  ಪರ, ವಿರೋಧಗಳೆಷ್ಟು  ಎಂಬುದನ್ನೂ ಈಗಲೂ ನೋಡುತ್ತಿದ್ದೇವೆ. Its a moot point. ಈ ಕುರಿತಂತೆ ಸಾಕಷ್ಟು ಭಿನ್ನಾಭಿಪ್ರಾಯಗಳನ್ನು ಕಾಣುತ್ತಿದ್ದೇವೆ. ಇದು ಇನ್ನೂ ಇತ್ಯರ್ಥವಾಗಬೇಕಾಗಿರುವ ವಿಷಯವಾಗಿದೆ. Yes. It is "an open Question".

ಹೀಗೆ ಸ್ತೀ ಯನ್ನು ಒಂದು ಕಡೆ ಪೂಜ್ಯನೀಯ/ಗೌರವವಿಂದ ಕಾಣುತ್ತಿರುವುದು, ಇನ್ನೊಂದು ಕಡೆ ಅವಳ ಮೇಲೆ ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಿರುವುದು ಇವೆರಡೂ ನಮ್ಮ ಸಮಾಜದಲ್ಲಿ ಒಟ್ಟೊಟ್ಟಿಗೆ Parallel ಆಗಿ ಸಾಗುತ್ತಿವೆ. 

ಮತ್ತೊಂದು ಕಡೆ   " A feather in one`s cap"  ಅನ್ನೋ ರೀತಿ ನಮ್ಮ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ, ಖ್ಯಾತಿ ಪಡೆದು ನಾವೆಲ್ಲರೂ ಹೆಮ್ಮೆ ಪಡುವ ರೀತಿ ನಮ್ಮ ರಾಷ್ಟ್ರ ಪತಾಕೆಯನ್ನು ಬಾನೆತ್ತರಕ್ಕೆ  ಹಾರಿಸುತ್ತಿರುವುದಕ್ಕೆ ಉದಾಹರಣೆಯಾಗಿ highest paid CEO ಎಂಬ ಖ್ಯಾತಿಗೆ ಒಳಗಾಗಿರುವ PEPSICO ಅಧ್ಯಕ್ಷೆ ಇಂದ್ರಾನೂಯಿ,  Biocon  ಮುಖ್ಯಸ್ಥೆ ಕಿರಣ್ ಮಜುಂದಾರ್,  ಸುನೀತಾ ವಿಲಿಯಮ್ಸ್, ಕಲ್ಷನಾ ಚಾವ್ಲಾ, ನಿರುಪಮಾ ರಾಯ್,  ಇವರಂಥ ಅಸಮಾನ್ಯ ಮಹಿಳೆಯರನ್ನು ಕಾಣುತ್ತಿದ್ದೇವೆ.  

ಒಟ್ಟಿನಲ್ಲಿ ಹೇಳುವುದಾದರೆ ಈ ರೀತಿಯ ದೌರ್ಜನ್ಯಗಳು ಅಂತ್ಯಗೊಳ್ಳಬೇಕಾದರೆ ಮನುಷ್ಯರಲ್ಲಿ  ಪರಿವರ್ತನೆ  ಆಗಬೇಕಾಗಿರುವುದು ಬಹಳ ಮುಖ್ಯ. ಅದು ಅವರು ಯೋಚಿಸುವ ರೀತಿಯಲ್ಲಾಗಿರಬಹುದು, ನೋಡುವ ರೀತಿಯಲ್ಲಾಗಿರಬಹುದು. ಮೇಲು ಕೀಳೆಂಬ ತಾರತಮ್ಯ ತೋರದೇ ವಿಶಾಲಮನೋಭಾವ ಮೂಡುವಂತಾಗಬೇಕು.  ಇದು ಕಷ್ಟದ ವಿಷಯವೇನಲ್ಲ.
 
ಆದರೆ, ಅನ್ಯೋದ್ದೇಶವಾಗಲೀ, ಅಳಿಸಿಹಾಕಲು ಸಾಧ್ಯವೇ ಇಲ್ಲದಂಥ ಪೂರ್ವಗ್ರಹವಾಗಲೀ  ಇದ್ದರೆ ಮಾತ್ರ ಅಂಥವರಲ್ಲಿ ಪರಿವರ್ತನೆ ಕಷ್ಟಸಾಧ್ಯ.

ಸುಧಾ.

3 comments:

Anamika said...

Nice Article With Insightful Thoughts...

- Revappa

ಮಂಜು said...

ಅನಾದಿ ಕಾಲದಿಂದಲೂ ಹೆಣ್ಣನ್ನು ದಾಸಿಯಾಗಿ ಕೆಳಮಟ್ಟದಲ್ಲಿ ನೋಡುವುದು ಅಥವಾ ಅವಳನ್ನು ದೇವಿಯಂತೆ ಪೂಜಿಸುವುದು- ಹೀಗೆ ತಮ್ಮ ಅನುಕೂಲಕರ ವ್ಯಾಪ್ತಿಯಲ್ಲಿ ಪುರುಷ ಪ್ರದಾನ ಸಮಾಜವೆಂಬ ಅಂಕಿತ ನಾಮದ ಅಡಿಯಲ್ಲಿ ಹೆಣ್ಣನು ಚಿತ್ರಿಸುತ್ತ ಅಚರಣ ಕ್ರಮದಲ್ಲಿ ಸಮಾನತೆಯ ಸೋಗಿನ ಮುಸುಕನ್ನು ಧರಿಸಿ ಶೀತಲವಾಗಿ ಹೆಣ್ಣನ್ನು ತನ್ನ ಅಸ್ತಿತ್ವವೇ ಅರಿಯದಂತೆ ಮಾಡಿರುವುದು ಅತ್ಯಂತ ಪ್ರಭಾವಿ ಪೌರುಷತನದ ಹೇಡಿತನಕ್ಕೆ ಹಿಡಿದ ಕನ್ನಡಿ. ಈ ಬಗ್ಗೆ ಚರ್ಚೆ ಎಂದರೆಯೇ ಅದು ಮತ್ತೊಮ್ಮೆ ವಿಮುಖಗೊಳ್ಳುವ ಪ್ರಯತ್ನವೇ ಹೊರತು ನಿಜದ ಅರಿವಲ್ಲ. 'ಹೆಣ್ಣಿಗೆ ಹೆಣ್ಣೇ ಶತ್ರು' ಎಂದು ಅವಳನ್ನು ಅವಳಿಗೆ ಸ್ಪರ್ಧೆಯನ್ನಾಗಿಸಿ ವ್ಯವಸ್ಥಿತವಾಗಿ ಶರಣಾಗುವಂತೆ ಮಾಡಲಾಗಿದೆ.
ಇಲ್ಲಿ ಸ್ವಾಮಿ ವಿವೇಕನಂದರ ಮಾತು ನೆನಪಿಗೆ ಬರುತ್ತೆ:
ಪ್ರತಿಯೊಬ್ಬ ಪುರುಷನು ತನ್ನ ಹೆಂಡತಿಯಲ್ಲಿ ಎರಡನೇ ಅಮ್ಮನನ್ನು ಕಂಡುಕೊಂಡರೆ
ಪ್ರತಿಯೊಬ್ಬ ಹೆಣ್ಣು ತನ್ನ ಗಂಡನಲ್ಲಿ ಮೊದಲ ಮಗುವನ್ನು ಕಂಡುಕೊಳ್ಳುವಳು.

Unknown said...

ನಿಜ. ಹಿಂದಿನಿಂದಲೂ ನಮ್ಮದು ಪುರುಷ ಪ್ರಧಾನ ಸಮಾಜವೆಂದೇ ಬಿಂಬಿತವಾಗಿದೆ. ಮಹಿಳೆಗೆ ಸೂಕ್ತ ಸ್ಥಾನಮಾನ ಸಿಗದೆ ಆಕೆ ಬಹುತೇಕ ಗೃಹ ಬಂಧನದಲ್ಲಿರುವಂತಾಗಿದ್ದು ದುರಂತವೇ ಸರಿ. ಇದಕ್ಕೆ ಪುರುಷ ಎಷ್ಟು ಕಾರಣಕರ್ತನೊ, ಅಂದಿನ ಸಾಮಾಜಿಕ ಪರಿಸ್ಥಿತಿ, ಪ್ರಕೃತಿ ಮಹಿಳೆಗೆ ನೀಡಿರುವ ಕೆಲವೊಂದು ಮಿತಿಗಳೂ ಇದಕ್ಕೆ ಕಾರಣವೆಂದು ಹೇಳಬಹುದು. ಜೊತೆಗೆ ಇದರಲ್ಲಿ ಮಹಿಳೆಯ ಪಾತ್ರವೂ ಇರುವುದನ್ನು ಒಪ್ಪಲೇಬೇಕು. ಹಾಗೆಂದ ಮಾತ್ರಕ್ಕೆ ಸಮಾಜ ಹೆಣ್ಣನ್ನು ಸಂಪೂರ್ಣವಾಗಿ ಕಡೆಗಣಿಸಿರಲಿಲ್ಲ. ಹೆಣ್ಣಿಗೆ ಪೂಜ್ಯ ಸ್ಥಾನ ನೀಡಿ, ಆಕೆಯಲ್ಲಿರುವ ಸಹನೆ, ಮಾತೃ ಹೃದಯವನ್ನು ಎಲ್ಲರೂ ಗೌರವಿಸಿದ್ದಾರೆ. ಹೀಗಾಗಿ ಹಿಂದಿನ ಮಹಿಳೆಯ ಸ್ಥಿತಿಗತಿ / ಸ್ಥಾನಮಾನ ಕುರಿತು ಚರ್ಚಿಸುವುದಕ್ಕಿಂತ ಪ್ರಸ್ತುತ / ಭವಿಷ್ಯದಲ್ಲಿ ಇಂತಹ ತಪ್ಪಗಳು ಮರುಕಳಿಸದಂತಾಗಲು ಸಮಾಜದ ಕರ್ತವ್ಯವೇನೆಂದು ಕುರಿತು ಚರ್ಚಿಸುವುದು ಸೂಕ್ತವೆನಿಸುತ್ತದೆ.

ಪ್ರಸ್ತುತ ಮಹಿಳೆ ತನಗಿರುವ ಮಿತಿಗಳು / ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿ ತನ್ನ ಸ್ವ ಸಾಮರ್ಥ್ಯದಿಂದ ಸಮಾಜದಲ್ಲಿ ತನಗೆ ದೊರೆಯಬೇಕಾದ ಸ್ಥಾನಮಾನ ಪಡೆಯುತ್ತಿರುವುದನ್ನು ನಾವೆಲ್ಲರೂ ಮುಕ್ತ ಮನಸ್ಸಿನಿಂದ ಗೌರವಿಸಲೇಬೇಕು. ಇದಕ್ಕೆ ಪೂರಕವಾಗಿ ಇಂದಿನ ಬಹುತೇಕ ಎಲ್ಲಾ ಕುಟುಂಬಗಳೂ (ಅದು ಪುರುಷ ಪ್ರಧಾನವೇ ಇರಲಿ) ಯಾವುದೇ ಬೇಧಭಾವ ತೋರದೆ ಹೆಣ್ಣಿಗೆ ಶಿಕ್ಷಣ ನೀಡುವಲ್ಲಿ / ಉದ್ಯೋಗಕ್ಕೆ ಕಳುಹಿಸುವಷ್ಟು ಮನ: ಪರಿವರ್ತನೆಯಾಗಿರುವುದು ವಾಸ್ತವಿಕ ಸತ್ಯ. ಹೀಗೆ ಕುಟುಂಬ ನಿರ್ವಹಣೆಯ ಜೊತೆಗೆ, ಹೊರ ಪ್ರಪಂಚಕ್ಕೆ ತೆರೆದುಕೊಳ್ಳುವ ಹೆಣ್ಣು ಸಹಜವಾಗಿಯೇ ಕೆಲವೊಂದು ಅಡೆತಡೆ/ಸವಾಲುಗಳನ್ನು ಎದುರಿಸಬೇಕಾಗಿ ಬಂದಿದೆ. ಅದನ್ನು ಸಮರ್ಥವಾಗಿ ಮೆಟ್ಟಿ ನಿಲ್ಲುವ ಸಾಮರ್ಥ್ಯ / ಜಾಣ್ಮೆ ಆಕೆಗಿದೆ. ಆದರೂ ಅಲ್ಲಲ್ಲಿ ಆಕೆಯ ಮೇಲಿನ ಶೋಷಣೆ / ದೌರ್ಜನ್ಯ ನಡೆಯುತ್ತಿರುವುದು ಸತ್ಯವೇ ಆದರೂ ಅದರಲ್ಲಿ ಪುರುಷನಷ್ಟೆ ಹೆಣ್ಣಿನ ಪಾತ್ರವಿರುವುದನ್ನೂ ನಾವು ಒಪ್ಪಲೇಬೇಕು. ಏಕೆಂದರೆ ಇಂದಿನ ಮಹಿಳೆ ತನ್ನ ಮೇಲೆ ಶೋಷಣೆ ನಡೆಯುವುದನ್ನು ಸಹಿಸುವಷ್ಟು ಬಲಹೀನಳಾಗಿಲ್ಲವೆಂಬುದು ಗಮನಾರ್ಹ. ಇಂದು ನಿಜಕ್ಕೂ ಆಕೆಗೆ ಅನ್ಯಾಯವಾಗುತ್ತಿದ್ದಲ್ಲಿ ಆಕೆಗೆ ಕಾನೂನಿನ ರಕ್ಷಣೆಯಂತೂ (ಪುರುಷನಿಗಿಂತ ಹೆಚ್ಚಾಗಿಯೇ) ಇದ್ದೇ ಇದೆ. ಇನ್ನು ಮಹಿಳೆಗೆ ಮೀಸಲಾತಿಯಂತಹ ಸೌಲಭ್ಯ ಕಲ್ಪಿಸಿ ಸಮಾಜದ ಮುಖ್ಯ ವಾಹಿನಿಗೆ ತರಬೇಕೆಂಬುದೇನೊ ನಿಜ. ಆದರೆ ಇದನ್ನು ಒಂದೇ ದೃಷ್ಟಿಕೋನದಿಂದ ಯೋಚಿಸದೆ ವಾಸ್ತವಿಕ ನೆಲೆಯಲ್ಲಿ ಆಲೋಚಿಸಿ, ನಿಜಕ್ಕೂ ಅದು ಮಹಿಳಾ ಸಮಾನತೆ / ಸಬಲೀಕರಣಕ್ಕೆ ಪೂರಕವಾಗುವಂತಿದ್ದು, ಮತ್ತೊಂದು ಸಮಸ್ಯೆಗೆ ಕಾರಣವಾಗದಂತೆ ಎಚ್ಚರವಹಿಸಿ ಜಾರಿಗೊಳಿಸುವುದು ಸೂಕ್ತವೆನಿಸುತ್ತದೆ.

ಒಟ್ಟಿನಲ್ಲಿ ಸೃಷ್ಟಿಯ ನಿರಂತರ ಚಲನೆಗಷ್ಟೆ ಸ್ತ್ರೀ-ಪುರುಷರೆಂಬ ವರ್ಗೀಕರಣ ಮಾಡಿ, ಉಳಿದಂತೆ ನಾವೆಲ್ಲರೂ ಮಾನವರೆಂಬ ಭಾವನೆ ಬಂದಾಗ ಮಾತ್ರ ನಿಜವಾದ ಅರ್ಥದಲ್ಲಿ ಸಮಾನತೆ ಸಾಧಿಸಿದಂತಾಗುತ್ತದೆಂದು ನನ್ನ ಭಾವನೆ. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಮಹಿಳೆಯರ ಸ್ಥಿತಿಗತಿ ಕುರಿತು ತಮ್ಮ ಮುಕ್ತ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವ ಜಯಸುಧಾ ರವರು ನಿಜಕ್ಕೂ ಅಭಿನಂದನಾರ್ಹರು.

ಗುರು ಪ್ರಕಾಶ್

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago