20 May 2010

ಕನಸು


ಕನಸು ಅರ್ಥ ವ್ಯಾಪ್ತಿಗೆ ದಕ್ಕದಷ್ಟು ವಿಸ್ತೃತವಾದ ಬಯಲು. 
ಕನವರಿಕೆಗಳನ್ನು
ನನಸಂನಗಿಸಿ ಸಂಭ್ರಮಿಸುವ
ಸುಪ್ತ ಭ್ರಮಾ ಲೋಕ.    
ಅಥವಾ  
ಕನವರಿಕೆಗಳನ್ನು
ನಕರಾತ್ಮಕವಾಗಿ ವ್ಯಾಕುಲಗೊಳಿಸುವ 
ಸುಪ್ತ ಭ್ರಮಾ  ಲೋಕ.  


- ಈ ಎರಡು ರೀತಿಯ  ಸಂಘರ್ಷಗಳು ಸಾತ್ವಿಕ  / ತಾತ್ವಿಕ  ಹಾಗು ಮಾನಸಿಕ ಹಂದರಗಳಲ್ಲಿ  ಒಂದಕ್ಕೊಂದು ಬೆಸೆದುಕೊಲ್ಲುತ್ತಲೇ ನಮ್ಮನ್ನು ವಾಸ್ತವ ರುಪದಲ್ಲಿರುವಂತೆಯೇ ಬೇರೊಂದು ಅ೦ತ ಸ್ವರೂಪಕ್ಕೆ ಕೊಂದೊಯುವ ಅತ್ಯಂತ ಬೆರಗಿನ ಲೋಕ .

ವೈಜ್ಞಾನಿಕವಾಗಿ ಅಥವಾ ಮನೋವೈಧಿಕವಾಗಿ ಯಾವುದೇ ವಿಶ್ಲೇಷಣೆಗಳನ್ನು ನೀಡಿದರು  ಸಹ ಮಾನವ ಸಹಜ ಕಲ್ಪನೆಗಳೇ  ಎಲ್ಲವನ್ನು ಮೀರಿದ್ದು. ಕನಸು ಭಾವುಕವಾಗಿ ಯಾರ ಕೈಗೂ ಸಿಗದೇ  ಸಾಗುವ ನಾಗಲೋಟದ ಹಿಂದೆ  ದೇಹ ಮತ್ತು ಮನಸ್ಸುಗಳೆರಡು ಸ೦ಚಲನಗೊ೦ಡು ಅದರ ಪರಿಮಿತಿಯಲ್ಲಿ ಗುರುತ್ವಾಕರ್ಷಣೆಗೆ ಒಳಗಾಗಿ ಸುಪ್ತವಾಗಿ ಸಂಭ್ರಮಿಸುವುದೋ / ಭ್ರಮಿಸುವುದೋ ಆಗಿ ನಮ್ಮನ್ನು ಇನ್ನಷ್ಟು ಹಗುರವಾಗಿಯೋ ಅಥವಾ ಭಾರವಗಿಯೋ ಮಾಡುತ್ತದೆ. ಕನಸನ್ನು refine  ಮಾಡಲಿಕ್ಕೋ ಅಥವಾ define ಮಾಡಲಿಕ್ಕೋ ಆಗುವುದಿಲ್ಲವೆಂದೋ ನನ್ನ ಅನಿಸಿಕೆ. ಗಣ್ಯನಾದವನು ಕಾಣುವ ಕನಸು, ವಿಜ್ಞಾನಿಯೋರ್ವ ಕಾಣುವ ಕನಸು, ಹಸಿದವನು ಕಾಣುವ ಕನಸು- ಎಲ್ಲವು ಕೂಡ ತಮ್ಮ ಇರುವಿಕೆಯಿಂದ ಹೊರಬಂದು ನೋಡುವ ಒಂದು ಇಣುಕು ನೋಟವೇ ಆಗಿದೆ.   

ನೀರಿನ ಆಳಕ್ಕೆ ಇದುವ ಮೊದಲ ಹೆಜ್ಜೆ, ಬೀಳುವ ನಕ್ಷತ್ರವನ್ನು ಕಂಡ ಮೊದಲ ಗಳಿಗೆ, ಒಮ್ಮೆಲೇ ಅಪ್ಪಳಿಸುವ ಕಡಲಿನ ಅಲೆಗಳು, ನಿರ್ಜನ ಕಾಡಿನ ಕತ್ತಲ ದಾರಿ, ಬೊಗಸೆಯಿಂದ ಜಾರುವ ಕಡಲೆಪುರಿ, ನಿರಾಳಗೆ, ಅಪ್ಪುಗೆ, ಗಾಳಿಯನ್ನು ಕೈಯಲ್ಲಿ ಹಿಡಿಯುವ, ಮೊದಲ ಮಳಿಗೆ ಸಿಕ್ಕಿ ನರ್ತಿಸುವ, ಕೈಗಂಟಿಕೊಂಡ ಬಣ್ಣ, ಹೊಗಳಿಕೆಗೆ ನಾಚುವುದು ಮತ್ತು ಅದನ್ನೇ ಬಯಸುವುದು, ಬಲಿತ ಮರಕ್ಕೆ ಆನಿಕೊಲ್ಲುವುದು.. ಇವೆಲ್ಲವೂ ಕನಸಿನ ಕಾಳುದಾರಿಗಳೇ. ನಾವು ಕಂಡ, ಕೇಳುವ, ಭ್ರಮಿಸುವ, ಸಂಭ್ರಮಿಸುವ ಎಲ್ಲ ಕ್ರಿಯೆಗಳಿಗೂ ಕನಸು ಒಂದು ವೇದಿಕೆ.

 
ಒಂದು ಕತೆ ಹೇಳಲೇಬೇಕು :

ಅಪ್ಪ ಮತ್ತು  ಅವನ ಮೂವತ್ತು ವರ್ಷದ ಮಗ ಇಬ್ಬರು ರೈಲಿನಲ್ಲಿ ಪ್ರಯಾಣಿಸುತ್ತಿರುತ್ತಾರೆ. ಅವರ ಎದುರುಗಡೆ ಹೊಸದಾಗಿ ಮದುವೆಯಾಗಿರುವ ಒಂದು ಜೋಡಿ. ರೈಲು ಸ್ವಲ್ಪ ದೂರ  ಚಲಿಸಿದಂತೆ ಮೂವತ್ತು ವರ್ಷದ  ಮಗ ಕಿಟಕಿಯಿಂದ ಹೊರಗಡೆ ನೋಡಿ ಚಲಿಸುತ್ತಿರುವ ಮರಗಳನ್ನು ನೋಡಿ ಬೆರಗುಗೊಂಡು 'ಅಪ್ಪ ಅಪ್ಪ ನೋಡಿ ಮರಗಳು ನಮ್ಮ ಜೊತೆಗೆ ಚಲಿಸುತ್ತಿವೆ' ಎನ್ನುತ್ತಾನೆ. ಇದನ್ನು ಕೇಳಿ ತುಸು ಆಶ್ಚರ್ಯಗೊಂಡ ಜೋಡಿ ಅಪ್ಪನ ಮುಖ ನೋಡಿ ತುಸು ನಕ್ಕು ಸುಮ್ಮನಾಗುತ್ತಾರೆ. ಸ್ವಲ್ಪ ಸಮಯದ ನಂತರ ಮತ್ತೆ ಆ ಮಗ ಮೋಡಗಳನ್ನು ನೋಡಿ 'ಅಪ್ಪ ಅಪ್ಪ ನೋಡಿ ಮೋಡಗಳು ನಮ್ಮ ಜೊತೆಗೆ ಚಲಿಸುತ್ತಿವೆ' ಎನ್ನುತ್ತಾನೆ. ಇದನ್ನು ಕೇಳಿ ಇನ್ನಷ್ಟು ಚಕಿತರಾದ ಜೋಡಿ ಅಪ್ಪನ ಕಡೆ ತಿರುಗಿ 'ನಿಮ್ಮ ಮಗನನ್ನು ಆಸ್ಪತ್ರೆಗೆ ಕರೆದೊಯ್ಯಬೇಕು ಎಂದು ನಿಮಗೆ ಅನ್ನಿಸುತ್ತಿಲ್ಲವೇ? ಎಂದು ಕೇಳುತ್ತಾರೆ. ಆಗ ಅಪ್ಪ ಹೇಳುತ್ತಾನೆ 'ಹೌದು ನಿಜ. ನಾವು ಈಗ ತಾನೇ ಆಸ್ಪತ್ರೆಯಿಂದ ಬರುತ್ತಿದ್ದೇವೆ. ನನ್ನ ಮಗನಿಗೆ ಇವತ್ತೇ ಕಣ್ಣು ಬಂದಿರುವುದು' ಎಂದು.   
ಒಂದು ಕನಸು ಎಷ್ಟೆಲ್ಲಾ ಪ್ರಾಕಾರಗಳನ್ನು ಪಡೆದುಕೊಳ್ಳಬಹುದು ಎಂಬುದಕ್ಕೆ ಈ ಕತೆ ಒಂದು ನಿದರ್ಶನ. ಈ ಕತೆ ನನ್ನನ್ನು ಸದಾ ಕಾಡುತ್ತಲೇ ಇರುತ್ತದೆ.  
 
-ಮಂಜು

No comments:

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

 • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
  4 years ago
 • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದು...
  4 years ago
 • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
  5 years ago
 • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
  7 years ago
 • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
  8 years ago
 • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
  8 years ago
 • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
  8 years ago
 • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
  8 years ago