14 May 2010

ಹೇ ...!! ನಮಸ್ತೆ.



ಭಾಳ ದಿನ ಆಯ್ತು ನಿಮ್ಮನ್ನೆಲ್ಲ ಮಾತಾಡ್ಸಿ... 

ನಾನಾದ್ರೂ ಏನ್ ಮಾತಾಡ್ಲಿ ? ನನ್ ಮನೆಯ ಮುದ್ದು ಕಂಪ್ಯೂಟರ್  ಜೊತೆ ಅವನ ಮುದ್ದು ಗೆಳತಿ ಇಂಟರ್ ನೆಟ್ ಮಾತು ಬಿಟ್ಟಿದ್ರಿಂದ  ಒಂದು ವಾರದಿಂದ ಅದು  ಮಂಕಾಗಿತ್ತು. ಈಗ ಅರ್ಧ ಗಂಟೆ ಕೆಳಗೆ BSNL ಗ್ರಾಹಕ ಸೇವಾ ಸಿಬ್ಬಂದಿ ಜೊತೆ 20 ನಿಮಿಷ ಮಾತಾಡಿ, ನನ್ನ ಮುದ್ದು ಕಂಪ್ಯೂಟರ್ ತನ್ನ ನೆಚ್ಚಿನ ಗೆಳತಿ ಇಂಟರ್ ನೆಟ್ ಜೊತೆ Communicate ಮಾಡೋ ಹಾಗೆ ಮಾಡಿದೆ. 

ಸರಿ. ಇವತ್ತು ಶನಿವಾರ. ನಮ್ಮ ಮನನ ತಂಡದ ಪ್ರತಿ ವಾರದ ಸಭೆ ಸೇರೋ ದಿನ. ಇವತ್ತಿನ ವಿಷಯ, ಕನಸು. ಈ ಕನಸುಗಳ ಬಗ್ಗೆ ಏನೇನು ಮಾತಾಡ್ಬೇಕು ? ಹೇಗೆ ವಿಷಯವನ್ನ ಪ್ರಸ್ತಾಪಿಸಬೇಕು ? ಅನ್ನೋದರ ಜೊತೆಗೆ 

ಬರೋ 20+ ಜನರಲ್ಲಿ 'ಒಬ್ಬ'ರನ್ನಾದ್ರೂ Impress ಮಾಡಿ ಸಭೆ ಮುಗಿಸಿ ಹೋಗೋವಾಗ ಬೆನ್ನು ತಟ್ಟಿಸಿಕೊಳ್ಳುವ ಪುಟ್ಟ ಕಳ್ಳಾಸೆ ನಮಗೆಲ್ಲ ಇದ್ದೇ ಇದೆ.  ಆ ನಿಟ್ಟಿನಲ್ಲಿ ಅನೇಕರು ಪ್ರಯತ್ನ ಮಾಡಿಯೂ ಇದಾರೆ. ಅದು ಸ್ತುತ್ಯರ್ಹ ಪ್ರಯತ್ನ.


OK. ಈಗ, ಈ ಚಿತ್ರ ಕಾಣ್ತಿದೆಯಲ್ಲ ಇಲ್ಲಿ, 


ಇದು ನನ್ನ ಕನಸಿನ ತಾಣಗಳಲ್ಲಿ ಒಂದು. ಅಂದ್ರೆ,

ಇಂಥ ಸುಂದರ ನೈಸರ್ಗಿಕ But ಕಾಲ್ಪನಿಕ ತಾಣಗಳ ಚಿತ್ರ ಕಂಡ ಕೂಡಲೇ ನಾನು ಕನಸಿನ ಲೋಕಕ್ಕೆ ಜಾರುವ ಚಾಳಿಯನ್ನ ಚಿಕ್ಕಂದಿನಿಂದ ಬೆಳೆಸಿಕೊಂಡು ಬಂದಿದೀನಿ. ಇಂಥ ಲೋಕವೊಂದು ಇದೆಯೆಂದೇ ನಾನು ಚಿಕ್ಕಂದಿನಲ್ಲಿ ಭಾವಿಸಿದ್ದೆ Rather ಬಲವಾಗಿ ನಂಬಿದ್ದೆ. ಇಲ್ಲಿ ವಾಸ ಮಾಡುವ ಯಾವತ್ತೂ ಜೀವಸಂಕುಲಕ್ಕೆ ಕಷ್ಟ ಅನ್ನೋ ಪದವೇ ಬರೋದಿಲ್ಲ / ಅವಕ್ಕೆ ಸಂಸಾರವೆಂಬ ಭವಸಾಗರ ಈಜುವ ಗೋಜೇ ಇಲ್ಲ ಅನ್ನೋದು ನನ್ನ ತಿಳುವಳಿಕೆಯಾಗಿತ್ತು. ಅದು ಮನುಷ್ಯನನ್ನು  ಒಳಗೊಂಡಿರುವ ಹಳ್ಳಿಯ ಪೇಂಟಿಂಗ್ ಆಗಿರಬಹುದು ಅಥವಾ ಪಂಚತಂತ್ರದ ಪ್ರಾಣಿಲೋಕದ ಪೇಂಟಿಂಗ್ ಆಗಿರಬಹುದು. ಅಲ್ಲಿ ವ್ಯಕ್ತವಾಗಿರುವ ನಿಷ್ಕಪಟ ಜೀವನವೊಂದು ಈ ಲೋಕದಲ್ಲಿ ಅಸ್ತಿತ್ವದಲ್ಲಿದೆ ಅಂತನೇ ನಾನು ನಂಬಿದ್ದೆ. ಜೊತೆಗೆ ಅಲ್ಲಿ ಬಾಳುವ ಪ್ರತಿ ಜೀವಿಗೂ ನೆಮ್ಮದಿ ಅನ್ನೋದು ಜನ್ಮಸಿದ್ಧ ಹಕ್ಕಿನ ಹಾಗೆ ದೇವರು ಅವರಿಗೆ ಕರುಣಿಸಿದಾನೆ ಅನ್ನೋದು ನನ್ನ ನಂಬಿಕೆ. ಅಂಥ ಸುಂದರ ಲೋಕದ ಭಾಗವಾಗಲೂ ನಾನು ಅತಿಯಾಗಿ ಹವಣಿಸಿದ್ದೇ ನಾನಿವತ್ತು ಹೊಂದಿರುವ ಕುಂಠಿತ 'ವ್ಯವಹಾರಿಕ' ಬುದ್ಧಿಗೆ ನೈಜ ಕಾರಣ ಅನ್ನೋ ಸತ್ಯ ನನಗೊಬ್ಬನಿಗೇ ಗೊತ್ತು. ಆದರೆ, ನಾನು ಅಕ್ಷರಶಃ ಆ ನಿಷ್ಕಪಟ ಲೋಕದ ಭಾಗವಾಗಲು ಸಿದ್ಧ.

ಅಂದೂ. ಇಂದೂ. ಮುಂದೂ. ಎಂದೆಂದೂ. I Just Love It.

ಇದೇನಿವ್ನು ?!! ಮಂಜು ಹೇಳಿರೋ Topic ನ Skip ಮಾಡಿ ತನ್ನದ್ಯಾವುದೋ ಹೊಸ Topic ಶುರು ಹಚ್ಕೊಂಡಿದಾನೆ ಅನ್ಕೊಬೇಡಿ. ನಂಗೆ ಕನಸು ಅಂತ Topic  ಕೇಳಿದ ಕಣ್ಮುಂದೆ ಬಂದ ಮೊಟ್ಟ ಮೊದಲ ಚಿತ್ರ ಇದೇ. ಅದ್ಕೆ, ಹಾಗೇ ಸುಮ್ಮನೆ ಅಂತ ಹಂಚಿಕೊಂಡೆ. ಕನಸು ಅಂತ ವಿಷಯ ಇಟ್ಕೊಂಡು ನಾವು ಮಾತಾಡೋಕೆ ಹೊರಟಾಗ ಅದರ ವಿವಿಧ ಮಗ್ಗಲುಗಳ ಬಗ್ಗೆ ಮಾತಾಡಬಹುದು. ಅದರಲ್ಲಿ ಇದೂ ಒಂದು ಅಂತ ನಂಗನ್ನಿಸ್ತು. ಯಾವುದಕ್ಕೂ ಮಧ್ಯಾನ್ಹ ವಿವರವಾಗಿ ಮಾತಾಡೋಣ. ಸರಿನಾ ?



ಅಂದ ಹಾಗೆ ಮಲಗೋ ಮುಂಚೆ ನನ್ನ ಕಂಪ್ಯೂಟರ್ ನಂಗೆ ಹೇಳಿದ ಧನ್ಯವಾದ ತಲುಪಿ ನಾನು ಹಾಯಾಗಿ ನಿದ್ದೆ ಹೋದದ್ದು ಸುಳ್ಳಲ್ಲ.

ಇಂತಿ,
ರೇವಪ್ಪ

No comments:

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago