05 September 2009

" ಬದಲಾದ ಶಿಕ್ಷಕನ ಪಾತ್ರ "



" ಬದಲಾದ ಶಿಕ್ಷಕನ ಪಾತ್ರ "










ಈಗ್ಗೇ 5 ದಶಕಗಳ ಹಿಂದಿನ ಮಾತು....ಆಗ ಇರುತ್ತಿದ್ದುದು..ಗ್ರಾಮಕ್ಕೆ..ಒಂದು ಶಾಲೆ.ಅದಕ್ಕೆ ಇರುತ್ತಿದ್ದುದು ಒಬ್ಬನೇ ಶಿಕ್ಷಕ.ಅಂದಿಗೆ ಶಿಕ್ಷಕನಾದವನಿಗೆ ಸಮಾಜದಲ್ಲಿ ಅವನದ್ದೇ ಆದ ವಿಶೇಷ ಸ್ಥಾನ ಮಾನಗಳಿದ್ದವು.ಆತ ಕೇವಲ ಶಾಲೆಗೆ ಮಾತ್ರ ಶಿಕ್ಷಕನಾಗಿರದೆ,ಈಡೀ..ಊರಿಗೆ ಶಿಕ್ಷಕ....ಆದರ್ಶ ವ್ಯಕ್ತಿ.ಆ ಕಾಲದಲ್ಲಿ, ಸಾಕ್ಷರಾಗಿದ್ದುದು..ಅಲ್ಲಿನ ಶಾಲೆಯ ಶಿಕ್ಷಕ ಮತ್ತು ಆತನ ವಿದ್ಯಾರ್ಥಿಗಳು ಮಾತ್ರ ಹೀಗಾಗಿ...ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಯ ಮೂಲ ಶಿಕ್ಷಕ ಮಾತ್ರ ಆಗಿರುತ್ತಿದ್ದ.ಊರಿನಲ್ಲಿ ನಡೆಯುವ ಚಿಕ್ಕ ಪುಟ್ಟ ಜಗಳ,ಕಾದಾಟಗಳ ತೀರ್ಪುಗಾರ ಆತನೇ ಊರಿನ ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡುವ ಮಾರ್ಗದರ್ಶಿ.ಎಷ್ಟೋ ಸಲ ಊರಿಂದ ಊರಿಗೆ ಮಾಹಿತಿ ರವಾನಿಸುವ ಮಧ್ಯವರ್ತಿ,ಈಡೀ ರಾಜ್ಯ .ದೇಶ ವೀದೇಶಗಳ ಸುದ್ದಿಗಳನ್ನು ಊರಿನವರಿಗೆ ತಿಳಿಸುವ ಸಂವಾಹಕ.ಹೀಗೆ ಆತನ ಪಾತ್ರ ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತಿತ್ತು.ಆತ ಊರಿನವರ ದೃಷ್ಟಿಯಲ್ಲಿ,ವಿದ್ಯಾರ್ಥಿಗಳ ದೃಷ್ಟಿಯಲ್ಲಿ "ಸಾಕ್ಷಾತ್ ದೇವರು".

ಅಂದಿನ ಶಾಲೆಗಳಲ್ಲಿ ಇರುತ್ತಿದ್ದುದು..1 ಅಥವಾ 2 ಕೊಠಡಿಗಳು ಭೋದನೋಪಕರಣವೆಂದರೆ.ಕರಿಹಲಗೆ ಮಾತ್ರ.ಹೀಗಾಗಿ ಶಿಕ್ಷಕ ತನಗೆ ಗೊತ್ತಿದ್ದಿದ್ದಷ್ಟನ್ನು ಕೇವಲ ತನ್ನ ಅಭಿವ್ಯಕ್ತಿ ಸಾಮರ್ಥ್ಯದಿಂದ ಮಕ್ಕಳಿಗೆ ಅರ್ಥೈಸಬೇಕಾಗಿತ್ತು.ಯಾವುದೇ ರೀತಿಯ ಬೋಧನೆ- ಕಲಿಕಾ ಸಾಮಾಗ್ರಿಗಳು ಲಭ್ಯವಿರಲಿಲ್ಲ.ಬೋಧನೆ ಎನ್ನುವುದು ಕೇವಲ ಶಿಕ್ಷಕನ ವೈಯಕ್ತಿಕತೆಯನ್ನು ಆಧರಿಸಿತ್ತು.ಬಹುತೇಕ ಶಿಕ್ಷಕರಿಗೆ ಮಕ್ಕಳ ಮೇಲೆ ವೈಯಕ್ತಿಕ ಕಾಳಜಿ ಇತ್ತು.ಈ ಕಾರಣದಿಂದಲೇ ಮಕ್ಕಳನ್ನು ದಂಡಿಸುವ ನೈತಿಕ ಹಕ್ಕನ್ನು ಆತ ಹೊಂದಿರುತ್ತಿದ್ದ. " ಛಡಿ ಛಡಿ ಚಂ ಚಂ ವಿದ್ಯಾಯೇ ಘಂ ಘಂ"ಎಂಬುದು ಬಹುತೇಕ ಶಿಕ್ಷಕರ ನಿಲುವಾಗಿತ್ತು.ಆದರೂ ಕೂಡ ಶಿಕ್ಷಕರೆಂದರೆ ಮಕ್ಕಳಿಗೆ ವೈಯಕ್ತಿಕವಾದ ಪ್ರೀತಿ,ಗೌರವ ಅಭಿಮಾನಗಳಿದ್ದವು.
ಕಾಲ ಬದಲಾದ ಹಾಗೇ ಶೈಕ್ಷಣಿಕ ವ್ಯವಸ್ಥೆ, ಸಾಮಾಜಿಕ ವ್ಯವಸ್ಥೆ ಅದರೊಳಗಿನ ಒಂದು ಭಾಗವಾದ ಶಿಕ್ಷಕರು-ವಿದ್ಯಾರ್ಥಿಗಳ ಪಾತ್ರ ಕೂಡ ಬದಲಾಗುತ್ತಾ ಸಾಗಿದೆ....
ಈಗ ಪ್ರತಿ ಹಳ್ಳಿಗೂ ಶಾಲೆಗಳಿವೆ,ಬಹುತೇಕ ಎಲ್ಲಾ ಶಾಲೆಗಳಲ್ಲೂ ಮೂಲಭೂತ ಸೌಕರ್ಯಗಳಿವೆ,ಕನಿಷ್ಠ 2-3 ಶಿಕ್ಷಕರಿದ್ದಾರೆ,ಜೊತೆಗೆ ಬೋಧನೆಯ ಮೌಲ್ಯ ವಿಧಾನ ಪದ್ದತಿ,ಪಠ್ಯವಿಷಯ,ಪಠ್ಯವಸ್ತು,ಭೋದನಾ-ಕಲಿಕಾ ಸಾಮಾಗ್ರಿಗಳು,ಕಲಿಕೆಯ ವಿಧಾನ ,ಶಾಲೆಯ ಭೌತಿಕ ಪರಿಸರ,ಆಂತರಿಕ ವಾತಾವರಣ,ಶಿಕ್ಷಕರು- ಮಕ್ಕಳ ನಡುವಿನ ಸಂಬಂಧ,ಶಿಕ್ಷಕರು- ಪಾಲಕರ ಸಂಬಂಧ ಎಲ್ಲವೂ ಬದಲಾಗಿದೆ.ಇವತ್ತು ಮಕ್ಕಳಿಗೆ ಕೇವಲ ಶಿಕ್ಷಕ ಮಾತ್ರ ಕಲಿಕೆಯ ಆಧಾರವಗಿರದೆ ಹಲವು ಸಾಧನ ಸೌಲಬ್ಯಗಳು ಲಭ್ಯವಿದೆ.
ಸಮಾಜ-ಶೈಕ್ಷಣಿಕ ವ್ಯವಸ್ಥೆ ಬದಲಾಗಿದ್ದರೂ ಕೂಡ ಸಮಾಜದಲ್ಲಿ ಶಿಕ್ಷಕನಿಗಿರುವ ಗೌರವ,ಮೌಲ್ಯ ಕಡಿಮೆಯಾಗಿಲ್ಲ ಅನ್ನಬಹುದು.
ಆದರೂ,ಇಂದಿನ ದಿನಗಳಲ್ಲಿ ಶಿಕ್ಷಣ -ಶಿಕ್ಷಕ ಎಂಬ ಪವಿತ್ರ ವಿಚಾರವನ್ನು,ಮಾರಾಟಕ್ಕೆ ಇಳಿಸುತ್ತಾ ಇರುವುದು ಶೋಚನೀಯ ಸಂಗತಿ.

ನನ್ನೆಲ್ಲಾ ಶಿಕ್ಷಕರಿಗೆ ಗೌರವಪೂರ್ವಕ ವಂದನೆಗಳೊಂದಿಗೆ,
ನಿಹಾರಿಕಾ.

1 comment:

Unknown said...

"Badalad Shikshakan Patra" lekhan chennagittu. Shikshakanu tanna patyad jote maduva itare kelasagal bagge chennagi mudi bandide.

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago