05 September 2009

ಕೋಲು ಕೊಟ್ಟರು ಶಿಕ್ಷಕರು

ಕೋಲು ಕೊಟ್ಟರು ಶಿಕ್ಷಕರು

ನನಗಾಗ ಏಳು ವರ್ಷ ಎಲ್ಲಾ ಮಕ್ಕಳನ್ನೂ ಆರು ವರ್ಷ ತುಂಬುವುದರೊಳಗೇ ಶಾಲೆಗೆ ಸೇರಿಸಿದರೆ. ನನ್ನನ್ನು ಶಾಲೆಗೆ ಸೇರಿಸಲಾಗದಂತಹ ಪರಿಸ್ಥಿತಿಯಲ್ಲಿ ನಾನಿದ್ದೆನಂತೆ. ಹುಟ್ಟಿದ ಎರಡು ವರ್ಷಕ್ಕೆ ಪೋಲಿಯೋಕ್ಕೆ ತುತ್ತಾಗಿ ತೆವಳುವ ಮಗನನ್ನು ಶಾಲೆಗೆ ಸೇರಿಸುವುದಾದರೂ ಹೇಗೆ..? ಎಂಬ ಚಿಂತೆ ನನ್ನ ತಂದೆ-ತಾಯಿಯರದ್ದಾದರೆ, ಹೇಗಾದರಾಗಲಿ ನಾನು ನನ್ನ ಜೀವ ಗಟ್ಟಿ ಇರುವ ತನಕ ನೋಡಿಕೊಳ್ತೇನೆ ಎಂದು ಪಣತೊಟ್ಟಿದ್ದ ನನ್ನ ಅಜ್ಜಿ. ದೈರ್ಯದೊಂದಿಗೆ ಶಾಲೆಗೆ ಹೋಗಿ 'ಇತರ ಮಕ್ಕಳಂತೆ ಇವನಿಗೂ ಅಕ್ಷರ ಕಲಿಸಿ' ಎಂದು ಶಿಕ್ಷಕರಲ್ಲಿ ಬೇಡಿಕೊಂಡಳಂತೆ. ಆ ಶಿಕ್ಷಕರ ಮನಸ್ಸು ಕರಗಿತೋ ಏನೋ ನನಗೂ ಒಂದನೇ ತರಗತಿಗೆ ಪ್ರವೇಶ ಕೊಟ್ಟರಂತೆ. ಅಂದಿನಿಂದ ದಿನಾಲು ಬೆಳಿಗ್ಗೆ, ಮಧ್ಯಾಹ್ನ, ಸಂಜೆ ನನ್ನನ್ನು ಶಾಲೆಗೆ ಎತ್ತಿಕೊಂಡು ಹೋಗುವುದು, ಕರೆದುಕೊಂಡು ಬರುವುದು ನನ್ನಜ್ಜಿಗೆ ದಿನದ ಕರ್ಮವಾಯಿತಂತೆ. ನನ್ನಕ್ಕನೂ ಅದೇ ಶಾಲೆಯಲ್ಲಿ ಓದುತ್ತಿದ್ದಳಾದರೂ ಅವಳು ಎತ್ತಿಕೊಂಡು ಬರಲಾಗದಷ್ಟು ದಷ್ಟ-ಪುಷ್ಟ ನಾಗಿದ್ದೆನಂತೆ ಆಗ ನಾನು. ನಮ್ಮ ಶಾಲೆಯೇನೂ ದೂರವಿರಲಿಲ್ಲ ವಿಧಾನ ಸೌಧದಿಂದ ಕಾವೇರಿ ಭವನದ ವರೆಗಿನ ದೂರವಿರ ಬಹುದೇನೋ ಅಷ್ಟು ದೂರದಲ್ಲಿತ್ತು. ಅಲ್ಲಿಗೆ ಸರಿಸುಮಾರು ಒಂದು ವರ್ಷಗಳ ಕಾಲ ದಿನಾಲು ನನ್ನಜ್ಜಿ ನನ್ನನ್ನು ಶಾಲೆಗೆ ಕರೆದುಕೊಂಡು ಹೋಗುವುದು, ಬರುವುದು ನಡೆದೇ ಇತ್ತಂತೆ. ಹೀಗಿರುವಾಗ ಹೊಸದಾಗಿ ಬಂದಿದ್ದ 'ಡಿಸೋಜಾ' ಮೇಷ್ಟ್ರು ಒಂದು ದಿನ ನನ್ನಜ್ಜಿಯನ್ನು ಕರೆದು " ನೋಡಮ್ಮಾ ಈಗೇನೋ ಮೊಮ್ಮಗ ಚಿಕ್ಕವನಿದ್ದಾನೆ, ನಿನಗೂ ವಯಸ್ಸಿದೆ ಎತ್ತಿಕೊಂಡು ಬರ್ತೀಯ, ವರ್ಷಗಳು ಕಳೆದಂತೆ ಅವನು ದೊಡ್ಡವನಾಗ್ತಾನೆ, ನಿನಗೆ ಇಳಿಪ್ರಾಯವಾಗುತ್ತೆ ಆಗಲೂ ಎತ್ಕೊಂಡು ಬರೋಕೆ ಆಗುತ್ತಾ, ಯೋಚನೆ ಮಾಡು.... ಅದ್ಕೆ ಈ ಕೋಲು ಕೊಡು ದಿನಾ ಸ್ವಲ್ಪ ಸ್ವಲ್ಪ ನಡೆಸೋದನ್ನು ಅಭ್ಯಾಸ ಮಾಡಿಸು" ಅಂತೇಳಿ. ಬೇಲಿಯ ಬದಿಯಲ್ಲಿದ್ದ ಒಂದು ಕೋಲನ್ನು ಕೊಟ್ಟರಂತೆ.

ಅಂದು ಆ ಮೇಷ್ಟ್ರ ಮಾತಿನಂತೆ ನನಗೆ ಕೋಲನ್ನು ಕೊಟ್ಟು ನಡೆಯುವಂತೆ ಮಾಡಿದಳು ನನ್ನಜ್ಜಿ. ಅದರ ಬಲದಿಂದಲೇ ನಾನು ಇದುವರೆಗೆ ಬೆಳೆದೆ, ಬೆಳೆಯುತ್ತಿದ್ದೇನೆ. ಆನಂತರ ಒಂದೆರಡು ವರ್ಷ ಆ ಮೇಷ್ಟ್ರು ನಮ್ಮ ಶಾಲೇಲೆ ಇದ್ದು ನಂತರ ವರ್ಗವಾಗಿ ಬೇರೆ ಊರಿಗೆ ಹೋದ್ರಂತೆ. ಅವರ ಮುಖ ಪರಿಚಯ ನನಗೀಗಲೂ ಇಲ್ಲ. ನನ್ನಜ್ಜಿ ಈಗಲೂ ನನ್ನ ಬಾಲ್ಯದ ಕಥೆ ಹೇಳುವಾಗ ಆ ಮೇಷ್ಟ್ರು ಬಗ್ಗೆ ಹೇಳುವಾಗ ನನ್ನಲ್ಲಿ ನನಗರಿವಿಲ್ಲದೇ ಒಂದು ಅಗೋಚರ ಆರಾಧನಾ ಭಾವ ಡಿಸೋಜಾ ಮೇಷ್ಟರ ಬಗ್ಗೆ ಉಂಟಾಗುತ್ತೆ. ಪ್ರತಿ ವರ್ಷ ಶಿಕ್ಷಕರ ದಿನಾಚರಣೆ ಬಂದಾಗಲೂ ನನಗೆ ಡಿಸೋಜಾ ಮೇಷ್ಟ್ರು ನೆನಪಾಗ್ತಾರೆ. ನಾನು ಬೆಂಗಳೂರಿಗೆ ಬಂದ ಮೇಲೂ ಆಕಸ್ಮಿಕವಾಗಿ ನನ್ನಮ್ಮನಿಗೆ ಸಿಕ್ಕಿದ ಮೇಷ್ಟ್ರು 'ಶಿಷ್ಯ'ನ ಬಗ್ಗೆ ವಿಚಾರಿಸಿದರಂತೆ. ಹೀಗೆ 'ನನ್ನ ಕೋಲಮೇಲೆ ನಾನು ನಿಲ್ಲುವಂತೆ' ನನ್ನ ಬದುಕನ್ನು ರೂಪಿಸಿದ ಆ ಮೇಷ್ಟ್ರು ಹಾಗೂ ನನಗೆ ಅಕ್ಷರ ಧಾರೆ ಎರೆದ ಎಲ್ಲಾ ನನ್ನ ನೆಚ್ಚಿನ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಹೃತ್ಪೂರ್ವಕ ಶುಭಾಷಯಗಳನ್ನು ಕೋರುತ್ತೇನೆ.

ಗುರು ಬ್ರಹ್ಮ, ಗುರು ವಿಷ್ಣು, ಗುರುದೇವೋ ಮಹೇಶ್ವರ |
ಗುರು ಸಾಕ್ಷಾತ್ ಪರಬ್ರಹ್ಮ, ತಸ್ಮೈಶ್ರೀ ಗುರುವೇ ನಮಃ ||

ಪರಶು..,
renukatanaya@gmail.com

No comments:

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago