27 August 2010

ಇನ್ನೊಂದು ! ಮತ್ತೊಂದು !! ಮಗದೊಂದು !!!

ನಮಸ್ತೆ .. ಬಹಳ ದಿನದ ನಂತರ ನಿಮ್ಮಗಳ ಜೊತೆ ಮಾತಾಡ್ತಿದೀನಿ. ಆದರೆ ಇಷ್ಟು ದಿನ ನಿಮ್ಮ ಜೊತೆ ಮಾತಾಡದೇ ಇದ್ದದ್ದಕ್ಕೆ ಇವತ್ತಿನ ಮಾತಿನ ವಿಷಯವೇ ಕಾರಣ ಅಂತ ನಿಮ್ಮಲ್ಲಿ ಭಾಳ ಜನರಿಗೆ ಗೊತ್ತಿಲ್ಲ ಅನ್ಕೊಂಡಿದೀನಿ. ಸೀದಾ ವಿಷಯಕ್ಕೆ ಬರ್ತೀನಿ ನೋಡಿ :

ಪರೀಕ್ಷಾ ದೃಷ್ಟಿಯಿಂದ ಅನುಕೂಲವಾಗುವಂಥ ಒಂದು ಬ್ಲಾಗ್ ಶುರು ಮಾಡಬೇಕು ಅಂತ ಹೊರಟವನು ನಾಲ್ಕು ಬ್ಲಾಗ್ ಗಳನ್ನ ತಯಾರು ಮಾಡಿ ಅವನ್ನ ಸಂಭಾಳಿಸುತ್ತ ದಿನ ದೂಡ್ತಿದೀನಿ ... ನಿಮಗೆ ಈ ಮುಂಚೆ ಅವುಗಳ ಬಗ್ಗೆ ಹೇಳಿದೀನೋ ಇಲ್ವೋ ನೆನಪಿಲ್ಲ ನಂಗೆ. ಹೇಳಿದ್ರೆ ಒಳ್ಳೇದು. ಹೇಳದೇ ಇದ್ರೆ ಇವತ್ತು ಹೇಳ್ತೀನಿ ಕೇಳಿ.

 • ಸ್ಪರ್ಧಾರ್ಥಿ : ಎಲ್ಲ ತರಹದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವ ಹಾಗೆ ಇದನ್ನ ತಯಾರಿಸೀದೀನಿ. ವಿವಿಧ Optional Subject ಗಳಿಗೆ ಯಾವ ಪುಸ್ತಕಗಳನ್ನ ಓದಬೇಕು, ಮುಂಬರುವ ಹೊಸ ಹೊಸ ಪರೀಕ್ಷೆಗಳು ಯಾವು ಯಾವು ?, ಸಮಗ್ರ ಸಾಮಾನ್ಯ ಜ್ಞಾನ, ಅಂತರ್ಜಾಲ ಲೋಕದಲ್ಲಿನ ಪರೀಕ್ಷಾಸ್ನೇಹಿ ತಾಣಗಳ ಪಟ್ಟಿ, ... ಇತ್ಯಾದಿ ಇದಕ್ಕಿಂತ ಹೆಚ್ಚಿಗೆ ಏನೇನು ನೀಡಬಹುದು ಅಂತ ನನಗೆ ತೋಚದೇ ಇರದಷ್ಟರ ಮಟ್ಟಿಗೆ Varied Topics ಅಲ್ಲಿದಾವೆ. ಇವೆಲ್ಲಕ್ಕೂ ಮಿಗಿಲಾಗಿ ಕನ್ನಡದಲ್ಲಿ ಜ್ಞಾನ ಹಂಚುವ ಕೆಲಸವನ್ನ ಈ ತಾಣ ನಿರ್ವಹಿಸುತ್ತಿದೆ. ನೀವೂ ಕೂಡ ನಿಮಗೆ ತಿಳಿದಿರುವ ನಾಲ್ಕು ಜನರ ಜೊತೆಗೆ ಹಂಚಿಕೊಳ್ಳ ಬಯಸುವ ಯಾವುದೇ ಲೇಖನವನ್ನ ಕಳಿಸಬಹುದು. ಅದನ್ನ ಅಲ್ಲಿ ಪ್ರಕಟಿಸಲಾಗುವುದು. ಇವತ್ತಿನ ದಿನದ ಪ್ರಾರಂಭಕ್ಕೆ ಹೇಳುವುದಾದರೆ 172 ಜನ ಸ್ಪರ್ಧಾರ್ಥಿಗಳು ಪ್ರತಿ ದಿನ ಆ ತಾಣದ ಜ್ಞಾನವನ್ನ email ಮೂಲಕ ಪಡೆಯುತ್ತಿದ್ದಾರೆ. ಅದರ ಅರ್ಥ ನೀವು ಬರೆದು ಕಳಿಸುವ ಒಂದು ಲೇಖನ ಅಲ್ಲಿ ಪ್ರಕಟವಾದರೆ ಕರ್ನಾಟಕದ ಮೂಲೆ ಮೂಲೆಯಲ್ಲಿರುವ 172 ಜನರ mailbox ನಲ್ಲಿ ಸೇರಿ ಅವರಿಂದ ಓದಲ್ಪಡುತ್ತದೆ, ಮೆಚ್ಚುಗೆ - ಟೀಕೆ - ಟಿಪ್ಪಣಿ ಬರುತ್ತದೆ. ಒಂದು ಸಾರಿ ನೀವೇ ಭೇಟಿ ನೀಡಿ. 'ಸಾರ್ಥ' ತಾಣದ Follower ಆಗಿರುವ ಹಾಗೆ 'ಸ್ಪರ್ಧಾರ್ಥಿ' ತಾಣದ Follower ಕೂಡ ಆಗಿ. ಇದು ನನ್ನ Request.


 • ಪ್ರಶ್ನೋತ್ತರ : ಕರ್ನಾಟಕದಲ್ಲಿ ನಡೆಯುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳನ್ನ ಉತ್ತರ ಸಹಿತವಾಗಿ , ಅಲ್ಲಲ್ಲ... ವಿವರಣಾತ್ಮಕ ಉತ್ತರಗಳ ಸಹಿತವಾಗಿ ಸಂಗ್ರಹಿಸುವ ಧ್ಯೇಯದೊಂದಿಗೆ ಈ ತಾಣ ತಯಾರಾಗಿದೆ. ಈಗಾಗಲೇ ಸಾಕಷ್ಟು ಪ್ರಶ್ನೆಪತ್ರಿಕೆಗಳು ತಯಾರಿರುವ ಈ ತಾಣದಲ್ಲಿ ಮುಂಬರುವ ದಿನಗಳಲ್ಲಿ ಸಮಸ್ತ ಪ್ರಶ್ನೆಪತ್ರಿಕೆಗಳನ್ನ ವಿವರಣಾತ್ಮಕ ಉತ್ತರಗಳ ಸಹಿತವಾಗಿ ನಿಮ್ಮ ಮುಂದಿಡುವ ನಿಟ್ಟಿನಲ್ಲಿ ಪ್ರಶ್ನೋತ್ತರ ತಂಡ ಸಿದ್ಧತೆ ನಡೆಸುತ್ತಿದೆ. ಇಲ್ಲಿ FDA, SDA, KAS ... ಹೀಗೆ ಎಲ್ಲ ವಿಭಾಗಗಳ ಪ್ರಶ್ನೆಪತ್ರಿಕೆಗಳನ್ನ ಪರೀಕ್ಷಾವಾರು ಹಾಗೂ ಪರೀಕ್ಷೆ ನಡೆದ ವರ್ಷವಾರು ವಿಂಗಡಿಸಿ ನೀಡಲಾಗಿದೆ. ನಿಮಗೆ ಅನುಕೂಲ ಬರುವ ಹಾಗೆ ಆಯ್ಕೆ ಮಾಡಿಕೊಳ್ಳಿ !!



 • e-ನಾಡು ಕನ್ನಡ : ಈಗ KPSC ನಡೆಸುವ ಬಹುತೇಕ ಪರೀಕ್ಷೆಗಳಲ್ಲಿ ' ಸಾಮಾನ್ಯ ಕನ್ನಡ' ಪರೀಕ್ಷೆ ಕಡ್ಡಾಯವಾಗಿದೆ. ಸದರಿ ಪರೀಕ್ಷೆಗಳಲ್ಲಿ ಕೇಳುವ ಸಾಹಿತ್ಯ, ಸಿನೆಮಾ, ಕ್ರೀಡೆ .. ಇತ್ಯಾದಿ ಕೇವಲ ಕನ್ನಡ ಕರ್ನಾಟಕ ಸಂಬಂಧೀ ಮಾಹಿತಿಗಳ ಕಣಜ ಈ ತಾಣ. ಕವಿ - ಕೃತಿ - ಕಾವ್ಯನಾಮ - ಸಂಭಾವನಾ ಗ್ರಂಥ - ಕನ್ನಡದ ಮೊದಲುಗಳು - ಊರು ಪ್ರಸಿದ್ಧಿ ... ಇತ್ಯಾದಿ ಮಾಹಿತಿ ಇಲ್ಲಿ ಲಭ್ಯ. ನೀವೇ ಒಂದ್ಸಾರಿ ಭೇಟಿ ನೀಡಿ, ನೋಡಿ.
 • e-ದಿನವಹಿ : ದಿನನಿತ್ಯದ ಪರೀಕ್ಷಾ ದೃಷ್ಟಿಯಿಂದ ಪ್ರಮುಖವೆನಿಸುವ ಘಟನಾವಳಿಗಳನ್ನ ಕನ್ನಡಲ್ಲಿ ಕಲೆಹಾಕಿ ಒಂದೆಡೆ ಬರೆಯುತ್ತಾ ಹೋಗುವ ಹುನ್ನಾರ ಈ ತಾಣದ ಹೀಮದಿದೆ. ಮುಂದೊಂದು ದಿನ ನಿಮಗೆ ಯಾವುದೋ ದಿನದ ಆಗುಹೋಗುಗಳ ಬಗ್ಗೆ ಮಾಹಿತಿ ಬೇಕಾದರೆ e-ದಿನವಹಿ ನೋಡಿದರಾಯಿತು !! ( ಸದ್ಯಕ್ಕೆ  ಈ ತಾಣ ನಿರ್ಮಾಣ ಹಂತದಲ್ಲಿದೆ )

ನಿಮಗೆ ಬಿಡುವು ಮಾಡಿಕೊಂಡು ಈ ಎಲ್ಲ ತಾಣಗಳನ್ನ ನೋಡಿ, ಎಲ್ಲ ತಾಣಗಳ Follower ಆಗಿ ... ದಿನವೂ ಸ್ಪರ್ಧಾರ್ಥಿ ನೋಡುವುದನ್ನ ಮರೆಯಬೇಡಿ. ಅದಕ್ಕೆ ದಿನಪತ್ರಿಕೆಯ ಚೈತನ್ಯ ವನ್ನ ನೀಡಲಾಗಿದೆ !!

ಶುಭದಿನ,
ರೇವಪ್ಪ

No comments:

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

 • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
  4 years ago
 • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದು...
  4 years ago
 • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
  5 years ago
 • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
  7 years ago
 • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
  8 years ago
 • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
  8 years ago
 • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
  8 years ago
 • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
  8 years ago