ನಾವೊಂದು 60 ಜನರಿಗೆ ( ಕಿರಿಯ ಸಹಾಯಕರು + ಸಹಾಯಕರು ) ಕಳೆದ ಗುರುವಾರದಿಂದ ಶನಿವಾರದವರೆಗೆ 3 ದಿನ ಆಡಳಿತ ಕನ್ನಡ ತರಬೇತಿ ಇತ್ತು. ನಾನು ಭಾಗವಹಿಸಿದ 4ನೇ ತರಬೇತಿ ಕಾರ್ಯಕ್ರಮ ಇದು. ಆದರೆ ಕಳೆದ 3 ತರಬೇತಿಗಳಿಗಿಂತ ಇದು ಹೆಚ್ಚು ಸತ್ವಯುತವಾಗಿತ್ತು ಅಂತ ಹೇಳೊದಕ್ಕೆ ನಂಗೆ ಖುಷಿ ಅನ್ನಿಸ್ತಿದೆ. ಈ ಬರಹ ಓದುತ್ತಿರುವ ನಿಮ್ಮಲ್ಲನೇಕರು ಸದರಿ ತರಬೇತಿಯನ್ನ ಮುಗಿಸಿದ್ದೀರಿ ಇಲ್ಲಾ ಮುಂದೆ ಪಡೆಯಲಿದ್ದೀರಿ.. ಇನ್ನು ಮುಂದೆ ತರಬೇತಿಗೆ ಹೋಗುವವರು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಬೇಡಿ ಅಂತ ನನ್ನ ಸಲಹೆ.. ಕನ್ನಡದಲ್ಲಿ ಆಗಿರುವ ಆಗಬೇಕಿರುವ ಅನೇಕ ಕಾರ್ಯ - ಕರ್ತವ್ಯಗಳ ಬಗ್ಗೆ ಒಂದು ವಿಹಂಗಮ ನೋಟ ನೋಡಲಿಕ್ಕೆ ನಿಮಗಲ್ಲಿ ಸಿಗುತ್ತೆ.
ಮತ್ತೆ ಸಿಗೋಣ :
ರೇವಪ್ಪ
No comments:
Post a Comment