19 August 2009

ನಮಸ್ಕಾರ ...


ಎಲ್ಲರಿಗೂ ಶುಭ ಮುಂಜಾವು ...

ನಮ್ಮ ಬ್ಲಾಗ್ ಗಾಗಿ ಒಂದು ಹೊಸ ಧ್ಯೇಯ ವಾಕ್ಯ ಹುಡುಕಿದ್ದೀನಿ : Be The Change You Want To See ಅಂತ ...
ನಿಮ್ಮ ಮೆಚ್ಚು - ಚುಚ್ಚು ಗಳನ್ನ ತಿಳಿಸಲು ಹಿಂಜರಿಬೇಡಿ ... ಇದು ನಮ್ಮ ಬ್ಲಾಗ್.

-------------

ಒಂದು ಹೊಸ ವಾಕ್ಯ ನೋಡ್ದೆ ಮೊನ್ನೆ :

" FOLLOW THE LEADER IN THE PRESENT, TO BE A LEADER IN THE FUTURE "

ಈಗ ವಿಷಯ ಏಕೆ ಬಂತು ಅಂತೀರಾ ?
ಏನಿಲ್ಲ ಬ್ಲಾಗ್ ನಾನು ಮಾಡೋ ಬದಲಾವಣೆಗಳನ್ನ ನೋಡುತ್ತಾ : ಮೆಚ್ಚುತ್ತಾ ಎಷ್ಟು ದಿವಸ ಇರ್ತೀರಾ ? ನೀವು ನಿಮ್ಮ ಸ್ವಂತದ್ದನ್ನ ಒಂದನ್ನ ನಿರ್ಮಿಸಿ [ ನನ್ನನ್ನ ನಾನು ಇಲ್ಲಿ ಸ್ವಯಂ ಘೋಷಿತ ಲೀಡರ್ ಅಂತ ಹೇಳ್ತಿಲ್ಲ ಬದಲಿಗೆ ಹಾಗೆ ಹೋಲಿಕೆ ರೀತಿಯಲ್ಲಿ ವಾಕ್ಯ ಬಳಸದೆ ಅಷ್ಟೆ !! ತಪ್ಪು ತಿಳೀಬಾರ್ದು] ...


ಅದನ್ನ ಇಲ್ಲಿ PROMOTE ಮಾಡೋಣ ....
ನಮ್ಮ ASSOCIATE BLOGs ಅಂತ ಅವನ್ನ ಕರೆಯೋಣ...
ಮತ್ತೆ ಅಲ್ಲಿ ಏನು ವಿಷಯ ಇದ್ದರೆ ಚೆನ್ನ ಅಂತ ಕೇಳ್ತೀರಾ ? ಕೆಳಕಂಡ ಯಾವುದಾದರೂ ಆಗಬಹುದು ...
  • ನೀವು ನಿಮ್ಮೆಲ್ಲ ಅಪ್ರಕಟಿತ ಕವನಗಳನ್ನ ಪ್ರಕಟಿಸಲು ಅದನ್ನ ಬಳಸಿ
  • ನಿಮ್ಮ ಕಥೆ ಬರೆಯೋ Dairy ಆಗಿ ಅದನ್ನ ಬಳಸಿ
  • ನಾಲ್ಕು ಜನರಿಗೆ ಉಪಯೋಗ ಆಗೋ ಮಾಹಿತಿ ನೀಡೋ Site ಆಗಿ ಮಾಡಿಕೊಳ್ಳಿ
  • ದಿನಕ್ಕೊಂದು ಗಾದೆ : ವಚನ : ಸುಭಾಷಿತ ನೀಡಿ
  • ಹೊಸ ಉದ್ಯೋಗಗಳ ಬಗ್ಗೆ ವಿಸ್ತೃತ ಮಾಹಿತಿಯನ್ನ ಕನ್ನಡದಲ್ಲಿ ನೀಡಿ
ಹೀಗೆ ಜನರ ಕುತೂಹಲ ಕೆರಳಿಸುವ / ನಿಮ್ಮ ಭಾವನೆ - ಜಾಣ್ಮೆ ಯನ್ನ ಅಭಿವ್ಯಕ್ತಿಗೊಳಿಸುವ ಕೆಲಸ ಬ್ಲಾಗ್ ನಲ್ಲಿರಲಿ ....



ಪ್ರಯತ್ನಿಸಿ ... ನಿಮ್ಮ ತಲೆಯಲ್ಲಿರುವ IDEA ಮತ್ತೊಬ್ಬರು ಕದಿಯುವ ಮುಂಚೆ ...OK?

ನೋಡೋಣ ಎಷ್ಟು ಜನ ಪ್ರಯತ್ನ ಮಾಡ್ತೀರಿ ಅಂತ ...

ನಮಗೆ ಬ್ಲಾಗ್ ಬಗ್ಗೆ ಏನೂ ಗೊತ್ತಿಲ್ಲ ಅಂತ ಕೈ ಚೆಲ್ಲಬೇಡಿ ...
ನಾನು ಕಳೆದ ಡಿಸೆಂಬರ್ ನಲ್ಲಿ ನನ್ನ ಹುಟ್ಟುಹಬ್ಬದ ದಿನ ವಿಚಾರಮಾಡಿದ್ದೆ ಮುಂದಿನ ಹುಟ್ಟುಹಬ್ಬ ಬರೋದ ರೊಳಗೆ ನಾಲ್ಕು ಜನ ಗುರುತಿಸುವ ಏನಾದರೂ ಒಂದು ಕೆಲಸ ಮಾಡಬೇಕು ಅಂತ....ಆವಾಗ ಆಯ್ದುಕೊಂಡದ್ದು ಬ್ಲಾಗ್ ಅನ್ನ ...ಆಯ್ಕೆ ಮಾಡ್ಲಿಕ್ಕೆ ತಗೊಂಡಿದ್ದು ಎರಡೇ ದಿನ ...31 ಕ್ಕೆ ಶುರು ಆಯ್ತು ನಮ್ಮ ಬ್ಲಾಗ್ ...

ಕಳೆದ ಸುಮಾರು 230 ದಿನಗಳಲ್ಲಿ ನಾನು ಕಲಿತ ವಿಷಯಗಳು ಹಲವು ...ಹಾಗೆ ಕಲಿಸಿದ ವಿಷಯಗಳೂ ಹಲವು ..ಯಾಕಂದ್ರೆ ನನಗೆ ತಿಳಿದ ಪ್ರತಿ ವಿಷಯವನ್ನೂ ನಿಮ್ಮ್ಮಿಂದ ಮುಚ್ಚಿಡದೆ ತಿಳಿಸೀದೀನಿ...ಪ್ರಯತ್ನ ಮಾಡದ ಹೊರತು ಹೊಸತು ಹೊಸತಾಗೆ ಉಳಿಯುತ್ತೆ ..... ಕಳೆದ
28 ಕ್ಕೆ ನನಗೂ ಬ್ಲಾಗ್ ಅಂದ್ರೆ ಏನಂದ್ರೆ ಏನೂ ಗೊತ್ತಿರಲಿಲ್ಲ ...ನೋಡಿ ಪ್ರಯತ್ನ ಮಾಡಿ ..All The Best

Nimmava,
ರೇವಪ್ಪ

----------

ಕೆಲವು ಜನ Subscribe Via e-mail Option ಬಳಸಿದ್ದೀರಿ ...
ಆದರೆ ಕೆಲಸ ಅರ್ಧಕ್ಕೇ ಬಿಟ್ಟಿದ್ದೀರಿ ... ನೀವು ಇಲ್ಲಿ ನಿಮ್ಮ ID ನೀಡಿದ ನಂತರ ಸದರಿ ID ಗೆ Login ಆಗಿ ಅಲ್ಲೊಂದು validation e-mail ಬಂದಿರುತ್ತೆ ...ಅದರಲ್ಲಿ ನೀಡಿರೋ Link ಮೇಲೆ Click ಮಾಡಿದಾಗ ಕೆಲಸ ಪೂರ್ತಿ ...ಆವಾಗಿಂದ ನಿಮಗೆ e-mail Updates ಬರ್ತಾವೆ ಹೊರತು ಹಾಗೆ ಬರೋದಿಲ್ಲ ..ಆಯ್ತಾ ಮಧುಚಂದ್ರ ? ಇವತ್ತಿನವರೆಗೆ 12 ಜನರಲ್ಲಿ 05 ಜನ ಹಾಗೆ ಬಿಟ್ಟಿದ್ದೀರಿ ನಿಮ್ಮ Mail ಗಳನ್ನ ಒಂದು ಸಾರಿ Check ಮಾಡಿ



No comments:

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago