23 January 2010

Part 2

ಎಲ್ಲಿಗಿದ್ದೆ ...? ಹಾಂ... ನನ್ನ ಸಿನೆಮಾ ಫೇವರಿಟ್ ಗಳು... ಓಕೆ.

ಅಲ್ಲಿಂದ ಮುಂದೆ....

ನಾನು ಒಂದು ಸಿನೆಮಾನ್ನ ಮೆಚ್ಚಿದೆ ಅಂದ್ರೆ ಅದರ ವಿವಿಧ ತಂತ್ರಜ್ಞರನ್ನ ಗುರುತು ಹಾಕ್ಕೊಳ್ತೀನಿ...ಅಂದ್ರೆ Cinematographer - Music Composer - BackGround Scorer - Dialogue Writer - Screen Play Writer - & Ofcourse Director ... ಹೀಗೆ. ಇವೆಲ್ಲ ಏನಕ್ಕೆ ಅಂದ್ರೆ ಆ ಕಲಾವಿದ / ತಂತ್ರಜ್ಞ ಭವಿಷ್ಯದಲ್ಲಿ ತಯಾರಿಸೋ ಚಿತ್ರಗಳನ್ನ ತಪ್ಪದೇ ನೋಡೋಕೆ.

ನಾನು ಓದ್ಕೊಂಡಿರೋ ಪ್ರಕಾರ ಒಂದು ಚಲನಚಿತ್ರ ಹೇಗೆ ತಯಾರಾಗುತ್ತೆ ಅಂತ ಹೇಳ್ತೀನಿ ಕೇಳಿ ::

ಚಲನಚಿತ್ರ ತಯಾರಾಗೋದು ಒಂದು ಕತೆಯಿಂದ. ಅದೇ Script. ಒಂದು ನೈಜ ಘಟನೆಯೋ ಅಥವಾ ಯಾವುದೋ ಕಾದಂಬರಿಯೋ ಅಥವಾ ಯಾವುದೂ ಕಥೆಯೋ ಅಥವಾ ಯಾವುದೋ ಪರಭಾಷೆ ಚಲನಚಿತ್ರ ನೋಡಿದ ಮೇಲೆ ಮನಸಲ್ಲಿ ಮೂಡಿದ ' ಸ್ಫೂರ್ತಿ ' ಯೋ ಒಂದು Script Ready ಮಾಡೋದಕ್ಕೆ ಬುನಾದಿಯಾಗುತ್ತೆ. ಈ ಕಥೆಯನ್ನ ಹವ್ಯಾಸಿ ಚಲನಚಿತ್ರ Script ಬರಹಗಾರ Ready ಮಾಡ್ಬೇಕು ಇಲ್ಲಾ ಒಬ್ಬ ನಿರ್ದೇಶಕ Ready ಮಾಡ್ಬೇಕು. ಹೀಗೆ ಆದ್ಮೇಲೆ ಈ ಹವ್ಯಾಸಿ ಬರಹಗಾರನ ಹತ್ತಿರ ದುಡ್ಡು ಕಾಸಿನ ವ್ಯವಸ್ಥೆ ಇರೋದಿಲ್ಲ. ಅದಕ್ಕವನು ನಿರ್ಮಾಪಕ ಅನ್ನೋ Cashier ಹತ್ರ ತನ್ನ 'ಕತೆ' ಹೇಳಿ ನೀವು ಇದನ್ನ ಚಲನಚಿತ್ರ ಮಾಡ್ಕೊಳೋದಾದ್ರೆ ಮಾಡ್ಕೋಳಿ, ನಂಗೆ ಸ್ವಲ್ಪ ಸಂಭಾವನೆ ಕೊಟ್ರೆ ಸಾಕು ಅಂತಾನೆ. ಆ ನಿರ್ದೇಶಕನಿಗೆ ಆ ಕಥೆ ಇಷ್ಟ ಆದ್ರೆ ಅದನ್ನ ಅವನಿಂದ ' ಕೊಂಡುಕೊಂಡು ' ಚಲನಚಿತ್ರ ತಯಾರಾಗೋಕೆ ಬೇಕಾಗೋ ಇತರೆ ಸಾಮಗ್ರಿಗಳನ್ನ ಕಲೆ ಹಾಕೋಕೆ ಶುರು ಮಾಡ್ತಾನೆ. ಆ ಇತರೆ ಸಾಮಗ್ರಿಗಳಂದ್ರೆ ನಿರ್ದೇಶಕ, ಹೀರೋ, ಹೀರೋಯಿನ್, ಮ್ಯೂಸಿಕ್ ಡೈರೆಕ್ಟರ್ ...ಇತ್ಯಾದಿ. ಇದು via ನಿರ್ಮಾಪಕನ ಮೂಲಕ ಸಿನೆಮಾ ರೆಡಿಯಾಗೋ ವಿಧಾನ.

ಇನ್ನು ಖುದ್ದು ನಿರ್ದೇಶಕನೇ ಸಿನೆಮಾ ರೆಡಿ ಮಾಡೋದಾದ್ರೆ....

ನಿರ್ದೇಶಕರಲ್ಲಿ ಎರಡು ಥರ ( ಆರ್ಥಿಕವಾಗಿ ) -
 1. ಹಣವಂತ ನಿರ್ದೇಶಕರು
 2. ಬಡ ನಿರ್ದೇಶಕರು
ಈ ಹಣವಂತ ನಿರ್ದೇಶಕರೆಂದರೆ ಈ ಹಿಂದೆ ಮಾಡಿದ ಚಲನಚಿತ್ರ Commerecial Hit ಆಗಿ ಒಳ್ಳೆ ದುಡ್ಡು ಗಳಿಸಿ ಕೊಟ್ಟಿದ್ದು ಅದನ್ನ ಜತನ ಮಾಡಿಟ್ಕೊಂಡು ಮುಂದಿನ ಸ್ವಂತ ಸಿನೆಮಾ ಮಾಡೋದಕ್ಕೆ ಅಂತ ಇಟ್ಕೊಂಡಿರೋರು.

ಬಡ ನಿರ್ದೇಶಕರು ಅಂದ್ರೆ ಅವರ ಹತ್ರ ಸ್ವಂತ ದುಡ್ಡು ಇಲ್ದೆ ಇದ್ದು ಬರಿ ದುಡಿಮೆ ಗೊತ್ತಿರೋರು.

ಈ ಹಣವಂತ ನಿರ್ದೇಶಕರು ತಾವೇ ಖುದ್ದು ಚಿತ್ರ ನಿರ್ಮಾಣಕ್ಕೆ ಕೈ ಹಾಕಬಹುದು ಅಥವಾ ಒಬ್ಬ ಕಟ್ಟುಮಸ್ತಾದ ನಿರ್ಮಾಪಕನನ್ನ ಹಿಡೀಬಹುದು. ಜೊತೆಗೆ ಬಡ ನಿರ್ದೇಶಕ ತಾನೇ ರೆಡಿ ಮಾಡಿರೋ ಕಥೆಯಾಗಿದ್ರೆ ನಿರ್ದೇಶಕರಿಗಾಗಿ ಹುಡುಕಾಟ ನಡೆಸಬೇಕು ( ಆ Script writer ಥರ ) ಅಥವಾ ಯಾವ್ದೋ ನಿರ್ಮಾಪಕ ಯಾವ್ದೋ ಕಥೆ ತಂದು ಸಿನೆಮಾ ಮಾಡಿ ಅಂದಾಗ ಅವರಿಗೆ ಅವರು ಕೇಳೋ ಹಾಗೆ ಸಿನೆಮಾ ಮಾಡಿ ಕೊಡೋದು. ಹಣವಂತ ನಿರ್ದೇಶಕರೂ ಕೂಡ ನಿರ್ಮಾಪಕ ಹೇಳಿದ ಸಿನೆಮಾ ಮಾಡಿಕೊಡ್ತಾರೆ ಅನ್ನೋದೇನು ಸುಳ್ಳಲ್ಲ. ಅವರು ತಮ್ಮ ಮುಂದಿನ ಸ್ವಂತ ನಿರ್ಮಾಣದ ಸಿನೆಮಾ ಮಾಡೋಕೆ ಕಾಸು ಹೊಂದಿಸೋಕೆ ಅವರೂ ಆ ಥರ ಮಾಡ್ತಾರೆ.

But,

ಇಲ್ಲಿ ಆ ನಿರ್ದೇಶಕನ ಪ್ರಸಿದ್ಧಿ ಹೇಗಿದೆ ಅನ್ನೋದು ಕೂಡ ಕೆಲಸ ಮಾಡುತ್ತೆ ಅನ್ನೋದನ್ನ ಮರೀಬಾರ್ದು.

ನಂತರ ನಿರ್ದೇಶಕ ಒಳ್ಳೇ Reputation ಇಟ್ಕೊಂಡು ಒಳ್ಳೇ ಹೆಸರು ಮಾಡಿದ್ರೆ ಮುಂದಿನದೆಲ್ಲ Almost ಅವನದೇ ಕಾರುಬಾರು. ಇಲ್ಲ ಬಡಪಾಯಿ ನಿರ್ದೇಶಕನಾಗಿದ್ರೆ ನಿರ್ಮಾಪಕ ಹೇಳೋ Cast ಏ ಆಗಬೇಕು.

So, Next Step - Cast Selection.

ಈ Cast Selection ಅಂದ್ರೆ ಸಿನೆಮಾ ಮಾಡೋಕೆ ಬೇಕಾಗೋ ಇತರೆ ತಂತ್ರಜ್ಞರನ್ನ ಕಲೆ ಹಾಕೋ ಕೆಲಸ. ಕತೆಗೆ
( ಮತ್ತೆ ಆ ಚಿತ್ರದ Budget ಗೆ ) ಅನುಗುಣವಾಗಿ ಅವರು ಯಾರು ಅನ್ನೋದು ನಿರ್ಧಾರ ಆಗುತ್ತೆ. Costly ಚಿತ್ರ ಆದ್ರೆ ಎಷ್ಟೇ ಖರ್ಚಾಗ್ಲಿ ಎ.ಆರ್.ರೆಹಮಾನ್ ಕಡೆಯಿಂದನೇ ಮ್ಯೂಸಿಕ್ ಬರಬೇಕು...ಪ್ರಿಯಾಂಕಾ ಛೋಪ್ರಾನೇ ಹೀರೋಯಿನ್ ಆಗಬೇಕು.. ಹೃತಿಕ್ ರೋಷನ್ನೇ ಹೀರೋ ಆಗಬೇಕು...ಇವರೇ ಕ್ಯಾಮೆರಾ ಹಿಡೀಬೇಕು ಅಂತೆಲ್ಲಾ ಆಗುತ್ತೆ. ಇಲ್ಲ ಅಂದ್ರೆ ಆ ಚಿತ್ರ Budget ಗೆ ತಕ್ಕ ಹಾಗೆ ಅವರುಗಳು ಇರ್ತಾರೆ. ಈ ತಂತ್ರಜ್ಞರು ಯಾರ್ಯಾರು ಇರ್ಬೇಕು ಅನ್ನೋದನ್ನ ನಿರ್ದೇಶಕ - ನಿರ್ಮಾಪಕ ಇಬ್ರೂ ಸಮಾಲೋಚನೆ ಮಾಡಿ Final ಮಾಡ್ತಾರೆ.


[ ಸಮಯ ಇಲ್ಲಾರೀ .. ಆಗ್ಲೇ ಬೆಳಿಗ್ಗೆ 9.05 ನಿಮಿಷ ..ಸ್ನಾನ ಮಾಡಿ..ಬಸ್ ಹಿಡಿದು ಆಫೀಸ್ ಬರಬೇಕು...Sorry...ಸೋಮವಾರ Continue ಮಾಡ್ತೀನಿ. Bye ]


No comments:

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

 • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
  4 years ago
 • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದು...
  4 years ago
 • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
  5 years ago
 • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
  7 years ago
 • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
  8 years ago
 • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
  8 years ago
 • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
  8 years ago
 • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
  8 years ago