14 August 2009

ನಾಳೆ ಸ್ವಾತಂತ್ರ್ಯೋತ್ಸವ ...


ನಮಸ್ಕಾರ ನಮಸ್ಕಾರ ...



ನಾಳೆ
ಸ್ವಾತಂತ್ರ್ಯ ದಿನಾಚರಣೆ ...



ಚಿಕ್ಕವರಿದ್ದಾಗ ಬೇಗ ಎದ್ದು, ಇಸ್ತ್ರಿ ಮಾಡಿದ ಬಟ್ಟೆ ತೊಟ್ಟು ಧ್ವಜ ಹಿಡ್ಕೊoಡೋ ಅಥವಾ ತೊಟ್ಕೋoಡೋ ಬೆಳಿಗ್ಗೆ 7.00 ಕ್ಕೆ ಶಾಲೆಯಲ್ಲಿ ಹಾಜರಿರೋ 'ಸಮಸ್ಯೆ' ಇರ್ತಿತ್ತು ... ಈಗ ಅದ್ಯಾವುದೂ ಇಲ್ಲ ಆಲ್ವಾ ?

"ಭಾಷಣ ಉರು ಹೊಡೆದು ---ನಡುಗುತ್ತಿರುವ ಕೈ ಕಾಲು ಗಟ್ಟಿಯಾಗಿ ಹಿಡಿದುಕೊಂಡು ಭಾಷಣ ಮುಗಿಸಿದರೂ--- ಒಂದು ಪ್ಯಾರಎಗರಿಸಿದ ಗುಟ್ಟನ್ನ ಯಾರಿಗೂ ಹೇಳದೆ ...... " ಇದ್ದ ಆ ದಿನಗಳು ಖಂಡಿತ ಕಾಡ್ತಾವೆ ... ಕಾಡಬೇಕು.

ಆವಾಗ ನಮ್ಮಲ್ಲಿ ಅನೇಕ ಜನರಿಗೆ ಗಾಂಧೀ, ನೆಹರು, ಸುಭಾಶ್, ಲಾಲ್ , ಬಾಲ್, ಪಾಲ್ ಸೇರಿ ಸ್ವಾತಂತ್ರ್ಯ ತಂದು ಕೊಟ್ರು ಅಂತ ತಾಯಿ ತಂದೆ ಅಥವಾ ಇನ್ಯಾರೋ 'ದೊಡ್ಡೋರು' ಬರೆದುಕೊಟ್ಟ ಭಾಷಣದ ಉದ್ದಗಲಗಳ ಬಗ್ಗೆ ತಿಳುವಳಿಕೆ-ಭಯ-ಭಕ್ತಿ ಇತ್ತೇಹೊರತು ಆ ಮಹಾತ್ಮರು ಪಟ್ಟ ಪಾಡು--- ಅನುಭವಿಸಿದ ಕರಾಳ ದಿನಗಳ ಬಗ್ಗೆ ಖಂಡಿತ ಅರಿವಿರಲಿಲ್ಲ ...

23 ನೇ ವಯಸ್ಸಿಗೆ ಭಗತ್ ಉರುಳಿಗೆ ತಲೆಯೂಡ್ಡಿದ್ದರು ಅಂದ್ರೆ ಆ WillPower ಗೆ ಕಾರಣವಾದ ಘಟನೆಗಳ ತೀವ್ರತೆಯನ್ನ ಮನಮುಟ್ಟುವಂತೆ ನಮಗೆ ತಿಳಿಸಿದವರೆಷ್ಟು ಜನ ದೊಡ್ಡವರು ಇದಾರೆ ?

ಸ್ವಾತಂತ್ರ್ಯ - ದೇಶ - ಭಾಷೆಗಳ ವಿಚಾರ ಸ್ವಲ್ಪ ಪಕ್ಕಕ್ಕಿಡೋಣ ...
ಅಂದ್ರೆ ತೀರ ಉದಾತ್ತ ಧ್ಯೇಯಗಳು ಅಂತ ಅನ್ನಿಸಿಕೊಂಡಿರೋ ವಿಚಾರಗಳ ಬಗ್ಗೆ ಆಮೇಲೆ ನೋಡೋಣ


ನಮ್ಮ ಮನೆ --ನಮ್ಮ ಕುಟುಂಬ ವನ್ನೇ ನೋಡಿದರೆ ...

ತಂದೆ ತಾಯಿ ಕಷ್ಟದಲ್ಲಿ ಬೆಳೆದು ದುಡ್ಡಿನ ಮಹತ್ವ ಅರಿತವರು ತಮ್ಮ ಮಕ್ಕಳು ದುಡ್ಡಿನ ಬೆಲೆ ತಿಳೀದಿದ್ದಾಗ ಅವರ ಮೇಲೆ ಕೂಗಾಡೋರು...... ತಮ್ಮ ಮಕ್ಕಳನ್ನವರು ಬೆಳೆಸಿದ ಪರಿ ಬಗ್ಗೆ ಅವಲೋಕಿಸಬೇಕಲ್ವೆ ?
ತಾವು ಅನುಭವಿಸಿದ ಕಷ್ಟಗಳ ಮೇಲೆ ಸೇಡು ತೀರಿಸಿಕೊಳ್ಳೋ ಹಾಗೆ ತಮ್ಮ ಮಕ್ಕಳನ್ನ ಸುಖದಲ್ಲಿ ಬೆಳೆಸಿದರೆ ಅವರಿಗೆ ಹೇಗೆ ಆಮಹತ್ವ ದ ಅರಿವಾಗಬೇಕು ...ಆಲ್ವಾ?
ನಮಗೆ ಬರೀಲಿಕ್ಕೆ ಪೇಪರ್ ಇರ್ತೀರ್ಲಿಲ್ಲ ಅನ್ನೋರು ತಮ್ಮ ಮಕ್ಕಳಿಗೆ ಮಾರ್ಕೆಟ್ ನಲ್ಲಿರೋ ಹೊಚ್ಚ ಹೊಸತನ್ನ ಕೊಡಿಸಿ ರೂಢಿಮಾಡಿದರೆ ಅವರಿಗೆ ಕಷ್ಟದ ಅರಿವಾಗೋ ಸಾಧ್ಯತೆ ಇದೆಯಾ ?
.
.
.
.
ಇವತ್ತೂ ನಾನು ಮತ್ತೆ ದೊಡ್ದೋರನ್ನ ದೂರಲಿಕ್ಕೆ ಬಂದಿಲ್ಲ ...
ಬದಲಿಗೆ ನಮ್ಮಲ್ಲಿ I Mean ಭಾರತೀಯರಲ್ಲಿ ಬೆಳೀತಿರೋ ಕರ್ತವ್ಯ ಮರೆಯೋ : ಮರೆತು ಇನ್ನೊಬ್ಬರನ್ನು ದೂರೋ ---ಚಾಳಿ ಬಗ್ಗೆ ಹೇಳ್ಲಿಕ್ಕೆ ಹೊರಟೆ ಅಷ್ಟೆ !! Parenting ಅಂದ್ರೆ ಪಾಲನೆ ಪೋಷಣೆ ಅನ್ನೋದಿದೆಯಲ್ಲ ಅದಕ್ಕೆ Broad Meaning ಇದೆ ....
ಯಾವುದೇ ಪ್ರಾಣಿ ಪಕ್ಷಿ ತಗೊಳ್ಳಿ ಅವು ತಮ್ಮ ಮಕ್ಕಳಿಗೆ ತಮ್ಮ ಸಕಲ ವಿದ್ಯೆಗಳನ್ನೋ ಧಾರೆಯರಿತಾವೆ ... ನೀವು ಪಕ್ಷಿ ಪ್ರಾಣಿಗಳ ಸಂಖ್ಯೆ ಕಡಿಮೆಯಾಗೋದು ನೋಡಬಹುದೇ ಹೊರತು ಅವುಗಳ ಗುಣ ವ್ಯತ್ಯಾಸ ಆಗೋದು ನೋಡೋಲ್ಲ ... ಒಂದು ಕಾಲಿಲ್ಲದ ನಾಯಿ ತನ್ನ ತಂದೆ ತಾಯಿಯ ಎಲ್ಲ ಗುಣಗಳನ್ನೂ ಪಡೆಯುತ್ತೆ ಅಂದ್ರೆ ಕಲಿಸಲ್ಪಟ್ಟಿರುತ್ತೆ ...ಅದೂ ಕೂಡ ಬೇಟೆ ಯಾಡುತ್ತೆ. ಪೀಳಿಗೆ ಬೆಳೆದ ಹಾಗೆ ಗುಣ ಮರೀತ ಹೋಗೋಲ್ಲ !!

ನಾವು ಭಾರತೀಯರು ಹಿಂದೆ ಬೇರೆ ಖಂಡದ ಜನ ಬಟ್ಟೆ ಕೂಡ ತೊಡದೆ ಅಲೆದಾಡ್ತಿರಬೇಕಾದ್ರೆ ವೇದ ಬರ್ದು ರಾಮಾಯಣ -ಮಹಾಭಾರತ ಊಹಿಸಿ ಏನೇನೆಲ್ಲ ಮಾಡಿದೋರು ಹೀಗೆ ಹಿಂದೆ ಬಿದ್ರೆ ಹೇಗೆ ? ಮನುಷ್ಯ ಪ್ರಾಣಿ ತನ್ನತನ ಉಳಿಸಿಕೊಳ್ಳೋದಿಕ್ಕೆ ಸಮರ್ಥ ಆಲ್ವಾ ?ಹಾಗಾದರೆ ಇದು ಅತಿ ಬುದ್ಧಿವಂತ ಸಸ್ತನಿ (ಪ್ರಾಣಿ) ಅಂತ ಪುಸ್ತಕಗಳಲ್ಲಿ ಬರಕೊಂಡು ಓದ್ತಿರೋದು ಎಲ್ಲ ಬರಿ ಓಳಾ ?

ನಾನು ಹೇಳ್ಲಿಕ್ಕೆ ಹೊರಟಿರೋದು ಇಷ್ಟೇ ...
ಮನುಷ್ಯ ತಾನು ಹುಟ್ಟಿದಂದಿನಿಂದ ಕಲಿತ ಸಕಲ ವಿಷಯಗಳನ್ನ ಅಧಿಕಾರಯುತವಾಗಿ ತಿಳಿಸಿಕೊಡಲು -ಕಲಿಸಿಕೊಡಲು ಇರೋ ಸ್ಥಾನವೇ PARENTING OR ಪಾಲಕರ ಸ್ಥಾನ ...

ಗಂಡು ಹೆಣ್ಣು ಮದುವೆಯಾಗಿ ಮಕ್ಕಳು ಮಾಡಿದರೆ ಸಾಲದು ... ಅವ್ರನ್ನ ಸಮಾಜ ಕ್ಕೆ ಮುಳ್ಳಆಗದಿರೋ ರೀತಿಯಲ್ಲಿ ಬೆಳೆಸೋದು ಮುಖ್ಯ ... ಇಂದು ಸಂತೋಷ ಹೆಗಡೆಯವರ ಕೈಯಲ್ಲಿ ಸಿಕ್ಕಿ ಬೀಳೋ ಕಡು ಭ್ರಷ್ಟ ಹಿಂದೊಂದು ದಿನ ಏನಂದ್ರೆ ಏನೂ ಅರಿಯದ ಮಗು ಆಗಿದ್ದು ಹೆಮ್ಮರ ಹಿಂದೊಮ್ಮೆ ಸಸಿ ಯಾಗಿದ್ದಷ್ಟೇ ಸತ್ಯ ಆಲ್ವಾ ? ಅವನ ಜೀವನದಲ್ಲಿ ನಾನಾ ಸಮಸ್ಯೆಗಳು ಎದುರಾಗಿ ಅವನು ಕೃತ್ಯಕ್ಕೆ ಕೈ ಹಾಕಿದ ಅನ್ನೋದು ವಾಸ್ತವಕ್ಕೆ ದೂರವಾದ ಮಾತು ... ಬದಲಿಗೆ ಅವನು ಬೆಳೆಸಲ್ಪಟ್ಟ ಪರಿಸರ ಖಂಡಿತ ಅವನ ಮೇಲೆ ಪ್ರಭಾವ ಬೀರುತ್ತೆ. Software ಕೆಲಸ ಮಾಡ್ತಿರೋ ಹುಡುಗನೊಬ್ಬನಿಗೆ ಅಪ್ಪ KPTCL / PWD ನಲ್ಲಿ ಇಂಜಿನಿಯರ್ ಮಾಡಿಸಿ ಹೇಳೋ ಮಾತು ಏನು ಅಂತ ನಿಮಗ್ಗೊತ್ತು ? ಹಿಂದೆ ಸಾಫ್ಟ್ ವೇರ್ ನಲ್ಲಿದ್ದಾಗ ಭ್ರಷ್ಟರ ಮೇಲೆ ಜಿಗುಪ್ಸೆ ತಾಳಿದ್ದ ಮಗ ಇಂದು ತನ್ನ ಕೆಲಸಕ್ಕೆ ಒಂದು ದಿನವೂ ರಜೆ ಹಾಕದೆ ಬೆಳೆ ತಗೀತಾನೆ ಅಂದ್ರೆ ... ತಪ್ಪು ಯಾರದ್ದು ?

ಹಾಗೇನೇ ...

ಪಾಲಕರ ಸ್ಥಾನದಲ್ಲಿರೋರು ತಾವು ಮಾಡಿದ ತಪ್ಪು : ಸರಿ ಗಳಿಂದ ಪಾಠ ಕಲಿತು ತಾವು ತಿದ್ದಿ ಕೊಳ್ಳೋ ದರ ಜೊತೆ ಜೊತೆ ಗೆ ತಾವು ಕಲಿತ ಶಿಸ್ತನ್ನ ಇನ್ನೊಬ್ಬರಿಗೆ /ಕಿರಿಯರಿಗೆ ತಿಳಿಸಿಕೊಡೋ ಕಲೆಯನ್ನೂ ಕಲೀಬೇಕು.... ನಮ್ಮ ಜೀವನದಲ್ಲಾದ ಯಾವುದೋ ಘಟನೆಯನ್ನಾಧರಿಸಿ ನಾವು ಸಮಯ ಪಾಲನೆ ಕಲಿತಿದ್ದರೆ IT'S WELL & GOOD ಆದರೆ ಕಲಿತ ಶಿಸ್ತನ್ನ ಇನ್ನೊಬ್ಬರಿಗೆ ಕಲಿಸಬೇಕು ಅಂದ್ರೆ ಅದನ್ನ ಅವರ ಮೇಲೆ ಒತ್ತಾಯಪೂರಕವಾಗಿ ಹೇರೋದಲ್ಲ ಬದಲಿಗೆ ಒಂದು ಸೂಕ್ತ ಸಂದರ್ಭದಲ್ಲಿ ಮನದಟ್ಟಾಗುವಂತೆ ತಿಳಿಸಿಕೊಡೋದು ಆಲ್ವಾ?

ಇನ್ನೂ ಅನೇಕ ವಿಚಾರಗಳು ಕಾಡ್ತಿದಾವೆ ...ಆದ್ರೆ ಈಗ ನನ್ನ ಸಮಯ ಕಡಿಮೆ ...
ಇನ್ನೊಂದು ಸಾರಿ Detail ಆಗಿ ಚರ್ಚೆ ಮಾಡೋಣ ...
ಆದ್ರೆ ಈಗಾಗಲೇ ತಂದೆ ತಾಯಿ ಆಗಿರೋ ನಿಮ್ಮಲ್ಲಿ ಕೆಲವರು ...ಮತ್ತೆ ಇಂದೋ ನಾಳೆ ಆಗಬೇಕು ಅನ್ನೋ ಹುರುಪಲ್ಲಿ ಇರೋರು ವಿಚಾರದಲ್ಲಿ ಸ್ವಲ್ಪ ವಿಚಾರ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ ...
ಅಭಿಪ್ರಾಯ ತಿಳಿಸೋದಕ್ಕೆ Websense ಅಡ್ಡಿ ಬರೋಲ್ಲ ಅನ್ನೋದು ನಿಮಗೆ ತಿಳಿದಿರಲಿ...
ನಿಮ್ಮ ಅನಿಸಿಕೆ - ಅಭಿಪ್ರಾಯಗಳನ್ನ ನನಗೆ e-mail ಮಾಡಿ ...


ಸ್ವಾತಂತ್ರ್ಯೋತ್ಸವದ ಶುಭಾಶಯಗಳೊಂದಿಗೆ..
ರೇವಪ್ಪ

No comments:

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago