14 August 2009

H1N1 ತಿಳುವಳಿಕೆ

ಹಕ್ಕಿಗಳು ಮನುಷ್ಯನ್ನ ಹೆದರಿಸಿಯಾಯ್ತು (ಹಕ್ಕಿ ಜ್ವರ ) ಈಗ ಹಂದಿಗಳ ಸರದಿ ....

ಹಂದಿ ಜ್ವರ ಅಂತ ಕರೆಸಿಕೊಂಡು H1N1 ಅಂತ ಮರುನಾಮಕರಣ ಗೊಂಡಿರುವ ರೋಗದ ಭೀತಿ ಎಲ್ಲೆಡೆ ಹಬ್ಬಿದೆ ..

ಮೊದಲು
ಏನು ಹೇಳಬಯಸ್ತೀನಿ ಅಂದ್ರೆ ನಿತ್ಯ ಜೀವನದಲ್ಲಿ ಯಾವುದೇ ಪ್ರಶ್ನೆ ಸಮಸ್ಯೆ ಗಳು ಎದುರಾದಾಗ ಅವಕ್ಕೆ ಮರುಪ್ರಶ್ನೆಹಾಕೊದಕ್ಕಿನ್ನ ಉತ್ತರ ಕಂಡುಹಿಡಿಯೋದು ಸೂಕ್ತ ದಾರಿ / ಪದ್ಧತಿ ಅಂದ್ರೆ ಹೀಗೆ ರೋಗದ ಭೀತಿ ಎದುರಾದಾಗ ಅದಕ್ಕೆ ಉತ್ತರವಾಗಿರುವ ತಿಳುವಳಿಕೆ / ಜಾಗೃತಿ ಹಬ್ಬಿಸುವ ಬದಲು ವದಂತಿ / ಭಯ ಹಬ್ಬಿಸೋದು ಸೂಕ್ತ ದಾರಿ / ಪದ್ಧತಿ ಅಲ್ಲ ... ಹೀಗಾಗಿ ನನಗೆ ತಿಳಿದಿರುವ ಕೆಲ ಮಾಹಿತಿಗಳನ್ನ ನಿಮಗೆ ತಿಳಿಸ ಬಯಸ್ತೇನೆ ...

H1N1 Virus ಹಂದಿಗಳಲ್ಲಿ ವರ್ಷಪೂರ್ತಿ ಜೀವಂತವಾಗಿರುತ್ತೆ... ಅಂದ್ರೆ ಅವುಗಳ ದೇಹದಲ್ಲಿ ಆಶ್ರಯ ಪಡೆಯುತ್ತೆ ... ಮನುಷ್ಯರು ಸರಿಯಾಗಿ ಬೇಯಿಸದ ಹಂದಿ ಮಾಂಸ ತಿಂದಾಗ ಅವರ ದೇಹ ಪ್ರವೇಶಿಸುವ ಸಾಧ್ಯತೆ ಇರುತ್ತೆ ... ಇದೆ ರೀತಿ ನಡೆದು ರೋಗ ಮೊದಲು ಕಾಣಿಸಿಕೊಂಡದ್ದು ಮೆಕ್ಸಿಕೋ ದಲ್ಲಿ ....
ಆದರೆ ಇಲ್ಲಿ ನಾವು ಗಮನಿಸಬೇಕಾದ ಅಂಶ ಏನು ಅಂದ್ರೆ ಹಂದಿಗಳು ಮಾಡಿರೋ ತಪ್ಪು ಏನೂ ಇಲ್ಲ : ಆ Virus ಗಳಿಗೆ ಆಶ್ರಯ ನೀಡಿದ್ದನ್ನ ಹೊರತುಪಡಿಸಿ ... ವೈರಸ್ ಮುಖ್ಯ ಗುಣ ಏನು ಅಂದ್ರೆ ಹಂದಿಗಳಲ್ಲಿದ್ದಾಗ ತೆಪ್ಪಗೆ ಕೂತು ಮನುಷ್ಯರಲ್ಲಿ ಬಂದಾಗ ಪ್ರಸರಣವಾಗ್ತಾ ಹೋಗುತ್ತೆ ..

ನಂತರ ಒಬ್ಬರಿಂದ ಒಬ್ಬರಿಗೆ ಹರಡೋದು ಸುಲಭ...


ನಮಗೆ 3 ದಿನಗಳಿಗಿಂತ ಹೆಚ್ಚಿಗೆ ನೆಗಡಿ, ಶೀತ, ಜ್ವರ ಉಳಿದುಕೊಂಡ್ರೆ ಮಾತ್ರ ಆತಂಕ ನಿವಾರಣೆಗಾಗಿ ಪರೀಕ್ಷೆ ಮಾಡಿಸಿಕೊಳ್ಬೇಕು....ಸುಮ್ನೆ ಬೆಂಗ್ಳೂರಲ್ಲಿ ಯಾರಿಗೋ ಬಂತು ಅಂತ ನಾವು ಆಸ್ಪತ್ರೆ ಎದುರಿಗೆ ಸಾಲು ಗಟ್ಟಿ ನಿಲ್ಲೋದು ಮೂರ್ಖತನ ವಾಗುತ್ತೆ ...

ಆಮೇಲೆ Mask ಧರಿಸುವ ಬಗ್ಗೆ :

ನಿನ್ನೆ ನಮ್ಮ ಕೇಂದ್ರ ಆರೋಗ್ಯ ಸಚಿವರೇ ಹೇಳಿರೋ ಹಾಗೆ ಇದು ಇರೋದು ಚಿಕಿತ್ಸೆ ತಗೊತಿರೋರಿಗೆ ಮತ್ತು ಕೊಡ್ತಿ ರೋರಿಗೆ ....ಸಾಮನ್ಯ ಜನ ಕರವಸ್ತ್ರ ಕಟ್ಟಿಕೊಂಡರೆ ಸಾಕು ... ಒಮ್ಮೆ ಧರಿಸಿದ ಕರವಸ್ತ್ರ ವನ್ನ 5-6 ಗಂಟೆಗಳ ಬಳಕೆ ನಂತರ ಸ್ವಚ್ಚವಾಗಿ ಒಗೆದು ಮತ್ತೆ ಬಳಸಬೇಕು ...ಅಥವಾ ದಿನಕ್ಕೆ 4 ಸ್ವಚ್ಚ್ ಇರೋ ಕರವಸ್ತ್ರ ಇಟ್ಟುಕೊಂಡು ಸರದಿಯಲ್ಲಿ ಬಳಸಿದರಾಯಿತು ...Actually ಸುರಕ್ಷಿತ Mask ಅಂದ್ರೆ N95 Mask ... ಅದು ದುಬಾರಿ ಕೂಡ ಅಂತ ಬೆಳಿಗ್ಗೆ ರೇಡಿಯೋದಲ್ಲಿ ವೈದ್ಯರೊಬ್ಬರು ಹೇಳಿದ್ರು ...

ಮುಂಜಾಗೃತೆ :

ಸಾಧ್ಯವಾದಷ್ಟು ಸಾರ್ವಜನಿಕ ಸ್ಥಳಗಳನ್ನ Avoid ಮಾಡಿ ...
ಜ್ವರ,ನೆಗಡಿ,ಕೆಮ್ಮು ಇರೋ ಮಕ್ಕಳನ್ನ ಕೆಲ ದಿನ ಶಾಲೆಗೆ ಕಳಿಸದೆ ಸೂಕ್ತ ಚಿಕಿತ್ಸೆ ಕೊಡಿಸಿ ...
ಭಯ ತಂದುಕೊಳ್ಳೋದು / ತರಿಸೋದನ್ನ ಬಿಟ್ಟು ಸರಿಯಾದ ತಿಳುವಳಿಕೆ ತಗೊಳ್ಳೋದು + ತಂದುಕೊಡೋದು ...

ಇದೂ ಕೂಡ ಬೆಳಿಗ್ಗೆ ರೇಡಿಯೋದಲ್ಲಿ ಡಾಕ್ಟರು ಹೇಳಿದ್ದು ...


*********************

ಸ್ನೇಹಿತರೊಬ್ಬರು ತಮ್ಮ ಬ್ಲಾಗ್ ನಲ್ಲಿ ಬರೆದ ಸರಕನ್ನ ಕದ್ದು ಇಲ್ಲಿ ಕೆಳಗೆ ನೀಡಿದೀನಿ ( ಇದರ ಸತ್ಯಾಸತ್ಯತೆ ಅವರ ಜವಾಬ್ದಾರಿ ಅಂತ ಗುಟ್ಟನ್ನ ಹೇಳ್ದೆ ) ಆಯುವ್ರೇದ ವಿಧಾನ ಯಾವತ್ತಿದ್ರೂ ಒಳ್ಳೇದೇ ಅಲ್ವೇ ?

ಗೃಹಬಳಕೆಯ ವಸ್ತುಗಳಿಂದ ಹಂದಿಜ್ವರ ಅಲಿಯಾಸ್ ಸ್ವೈನ್ ಫ್ಲೂ ಅಲಿಯಾಸ್ ಎಚ್1ಎನ್1 ಇನ್‌ಫ್ಲೂಯೆಂಜಾ ಎಂಬ ಮಹಾಮಾರಿ ಹತ್ತಿರ ಸೋಂಕದಂತೆ ದೂರವಿರಿಸಬಹುದು.

* ನಿಮ್ಮ ಕರವಸ್ತ್ರದಲ್ಲಿ ಒಂದು ಹನಿ ನೀಲಗಿರಿ ತೈಲವನ್ನು ಚಿಮುಕಿಸಿಕೊಳ್ಳಿ.
* ಒಂದು ಸೆಕೆಂಡುಗಳ ಕಾಲ ಲವಂಗದ ತೈಲವನ್ನು ಇನ್‌ಹೆಲ್ ಮಾಡಿ.
* ಲವಂಗವನ್ನು ಬಾಯಲ್ಲಿರಿಸಿಕೊಂಡು ನಿಧಾನಕ್ಕೆ ಅದರ ರಸವನ್ನು ನುಂಗಿ (ದಿನಕ್ಕೊಂದು)
* ಒಂದರಿಂದ ಐದು ಗ್ರಾಂಗಳಷ್ಟು ಹಸಿ ಬೆಳ್ಳುಳ್ಳಿ, ಈರುಳ್ಳಿ ಹಾಗೂ ಶುಂಠಿಯನ್ನು ತಿನ್ನಿ
* ಬಿಸಿ ಹಾಲಿನಲ್ಲಿ ಎರಡು ಗ್ರಾಂ ಅರಸಿನಪುಡಿ ಸೇರಿಸಿ ಕುಡಿಯಿರಿ
* ವಿಟಮಿನ್ ಸಿ ಇರುವ ಹಣ್ಣು-ತರಕಾರಿಗಳನ್ನು ಹೇರಳವಾಗಿ ಸೇವಿಸಿ
* ಪ್ರತಿನಿತ್ಯ ತುಳಸಿ ಎಲೆಗಳನ್ನು ಜಗಿದು ತಿನ್ನಿ

ಇದರಿಂದ ಹಂದಿಜ್ವರ ಮಾತ್ರವಲ್ಲ, ಎಲ್ಲಾ ರೀತಿಯ ರೋಗದಿಂದಲೂ ದೂರ ಇರಬಹುದು.


*****************************

FACT :

ಈ ಜ್ವರ ಬರೋ ವ್ಯಕ್ತಿಗಳಲ್ಲಿ 95 % ವ್ಯಕ್ತಿಗಳು ಸಂಪೂರ್ಣ ಗುಣಮುಖರಾಗ್ತಾರೆ...ಸೂಕ್ತ ಸಮಯದಲ್ಲಿ ಸರಿಯಾದ ಚಿಕಿತ್ಸೆ ಪಡೆದಾಗ ....ಈಗಾಗಲೇ ನೀವುಗಳು ಪತ್ರಿಕೆಗಳಲ್ಲಿ ಓದಿರೋ ಹಾಗೆ ಈಗಾಗಲೇ ಬಲಿಯಾಗಿರುವ ಅನೇಕರಿಗೆ ಶ್ವಾಸಕೋಶ ಸಂಬಂಧಿ ಕಾಯಿಲೆ ಇರೋದರ ಜೊತೆಗೆ ಇದೂ ಸೇರಿಕೊಂಡು ಪರಿಸ್ಥಿತಿ ಕೈ ಮೀರಿದ್ದು ..

ಸಮಸ್ಯೆಯ
ವೈಭವೀಕರಣ / ಪರಿಸ್ಥಿತಿಯ ದುರುಪಯೋಗ :

ಇದೂ ಆಗೋ ಸಾಧ್ಯತೆಯನ್ನ ತಳ್ಳಿ ಹಾಕುವಂತಿಲ್ಲ ... ನಮ್ಮ ಗೃಹ ಮಂತ್ರಿಗಳು ನಿನ್ನೆ ಹೇಳಿದರಲ್ಲ " ಇದು ಪ್ರವಾಸಿಗರು ನಮ್ಮದೇಶಗಳ ಕಡೆ ಬರೋ ಕಾಲ ಅವರನ್ನ ಬೇರೆ ಕಡೆ Divert ಮಾಡೋ ಸಲುವಾಗಿ ಕೆಲವರು ಮಾಡಿರೋ ಕುತಂತ್ರ " ಅಂತ ...

ಮತ್ತೆ Mask ಕಂಪನಿಗಳ ಕುಮ್ಮಕ್ಕೂ ಇರಬಹುದು ...

ನೀವು ಮಾತ್ರ ಜಾಗೃತಿ ತಗೊಳ್ಳಿ ಮತ್ತು ನೀಡಿ ....


ಮುಗಿಸೋದಕ್ಕಿನ್ನ ಮುಂಚೆ ಹಾಸ್ಯಾಸ್ಪದ ವಿಚಾರ ಹೇಳ್ಬೇಕು :



ನಾವು ನೂರ ಹತ್ತು ಕೋಟಿ ಜನರಲ್ಲಿ ಕೆಲವೇ ಜನರಿಗೆ ಬಂದಿರೋ
H1N1 ಗೂ ಮತ್ತೆ ಲಕ್ಷ ಲಕ್ಷ ಜನರಿಗೆ ಹಬ್ಬಿರೋ AIDS ಗೂ IRONY ನೋಡಿ




ಜಾಗೃತಿ ಪಡೆಯಿರಿ ಮತ್ತು ನೀಡಿ ಎಂಬ ಸದಾಶಯದೊಂದಿಗೆ ,
Revappa





No comments:

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    10 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    10 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದ...
    12 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    14 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    14 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    14 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    15 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    15 years ago