16 April 2010

ನನ್ನ ಅನಿಸಿಕೆ..

ಮಂಜುನಾಥ್  ನೀವು  ಚರ್ಚೆಯ ಪೀಠಿಕೆಯಲ್ಲಿ ಪ್ರಸ್ತಾಪಿಸಿರುವ ವಿಷಯಗಳೆಲ್ಲವೂ ನಿಜಕ್ಕೂ ಗಂಭೀರವಾಗಿ ಚಿಂತನೆ ಮಾಡುವಂತಹವು.
 

ನಕ್ಸಲೈಟ್ಸ್ ಗಳಿಂದ ಚತ್ತೀಸ್ ಘಡದ ರಾಯಪುರದಲ್ಲಿ ನಡೆದ CRPF ನರಮೇಧವಂತೂ ನಿಜಕ್ಕೂ ಅಮಾನವೀಯ. ನಕ್ಸಲೇಟ್ಸ್ ಗಳ ಉದ್ದೇಶ ಏನೇ ಆಗಿರಲಿ, ಆದರೆ ಅವರು ಅನುಸರಿಸುತ್ತಿರುವ ಮಾರ್ಗವಂತೂ ನಿಜಕ್ಕೂ ಖಂಡನೀಯ. 
 

"ತಾರತಮ್ಯ ನೀತಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ನಮ್ಮ ನಾಗರೀಕ ಪ್ರಜ್ಞೆ ಮತ್ತು ಬುದ್ದಿವಂತಿಕೆಗೆ ನೀವು ಹೇಳಿರುವ ಧಿಕ್ಕಾರ ನಿಜಕ್ಕೂ ಅರ್ಥಪೂರ್ಣ."

ಈ ತಾರತಮ್ಯ ನೀತಿಯನ್ನು ಅಳಿಸಿ, ಎಲ್ಲರಿಗೂ ಸಮಬಾಳು - ಎಲ್ಲರಿಗೂ ಸಮಪಾಲು ಸಿಗುವಂತಾಗಬೇಕಾದರೆ ನಮ್ಮ ನಾಗರೀಕ ಪ್ರಜ್ಞೆ ಎಚ್ಚೆತ್ತುಕೊಳ್ಳಬೇಕು. ನಮ್ಮಲ್ಲಿನ  ವಿವೇಕ ,ವಿವೇಚನೆ ಜಾಗೃತಗೊಳ್ಳಬೇಕು. ಈ ಸಮಾಜದ ವ್ಯವಸ್ಥೆಯನ್ನು ಒಟ್ಟಾರೆ ಬದಲಾಯಿಸಲು ಹೋಗುವ ಮುಂಚೆ ಪ್ರತಿಯೊಬ್ಬರು ತಮ್ಮನ್ನು ತಾವು ಈ ನಿಟ್ಟಿನಲ್ಲಿ ಬದಲಾಯಿಸಿಕೊಳ್ಳಬೇಕು.

ಮಹಾತ್ಮ ಗಾಂಧೀಜಿಯವರು ಹೇಳಿರುವಂತೆ "ನೀವು ಬಯಸುವ ಬದಲಾವಣೆ ಸಮಾಜದಲ್ಲಿ ಆಗಬೇಕಾದರೆ ಮೊದಲು ಆ ಬದಲಾವಣೆಯನ್ನು ನಿಮ್ಮಲ್ಲಿ ತನ್ನಿ" ಎಂಬ ಮಾತು ನಿಜಕ್ಕೂ ಅರ್ಥಗರ್ಭಿತ. ಈ ರೀತಿಯ ಪ್ರಾಮಾಣಿಕ ಪ್ರಯತ್ನಗಳು ಅಂತಿಮ ಘಟ್ಟ(ನಮ್ಮ ಗುರಿ) ತಲುಪುವವರೆಗೂ  ನಿರಂತರವಾಗಿ ನಡೆಯುತ್ತಲೇ ಇರಬೇಕು. ಬರಿಯ ಪ್ರಯತ್ನಗಳಷ್ಟೇ ಸಾಲದು. ನಾವು ಮುಟ್ಟಬೇಕಾದ ಗುರಿಯ ಬಗ್ಗೆ ನಮ್ಮ ನಿಲುವು ಅಚಲವಾಗಿರಬೇಕು.  
 
NOTE :  ಮತ್ತೊಂದು ವಿಷಯ. ಮಂಜುನಾಥ್ ನಿಮ್ಮ ಲೇಖನದ ಮುನ್ನುಡಿಯ ಕಥೆಯಲ್ಲಿ ಕಂಡುಬರುವ ಅನಕ್ಷರತೆ ಕುರಿತಂತೆ ನನ್ನೊಂದು ಸಣ್ಣ ಮಾಹಿತಿ. ಈ ಹಿಂದೆ ಅಮೇರಿಕಾದಂತಹ ದೇಶದಲ್ಲೂ ಬುಡಕಟ್ಟು ಜನಾಂಗದವರಲ್ಲಿ ಕಂಡುಬಂದ ಅನಕ್ಷರತೆ, ನಮ್ಮಂತಹ ಮುಂದುವರಿಯುತ್ತಿರುವ  ದೇಶದಲ್ಲಿ ಹೇಗೆ ಹಂತ ಹಂತವಾಗಿ ಬದಲಾಗುತ್ತಿದೆ ಎಂಬುದಕ್ಕೆ ನಮ್ಮ ದೇಶದ ಒರಿಸ್ಸಾ ರಾಜ್ಯದ ಭುವನೇಶ್ವರದಲ್ಲಿ Kalinga Institute of Social Science ಎಂಬ ಸಂಸ್ಥೆ ವಿದ್ಯಾಭ್ಯಾಸ ಕುರಿತಂತೆ ಹೇಗೆ ಕೆಲಸ ನಿರ್ವಹಿಸುತ್ತಿದೆ ಎಂಬುದಕ್ಕೆ ಅಲ್ಲಿನ ಬುಡಕಟ್ಟು ಮಕ್ಕಳಲ್ಲಿ ಕಂಡುಬಂದಿರುವ transformation ನಿಜಕ್ಕೂ ಜೀವಂತ ಸಾಕ್ಷಿ.   ಈ ಕುರಿತು March 28, 2010, The Week ನಲ್ಲಿ Article ಬಂದಿದೆ.  ಅವಕಾಶ ಸಿಕ್ಕರೆ ಖಂಡಿತಾ ಓದಿ.

ಸುಧಾ.

1 comment:

madhura said...

ಧನ್ಯವಾದಗಳು :
ಈ ವಿಷಯದ ಬಗ್ಗೆ ನೀವು ಸ್ಪಂದಿಸಿದ್ದಕ್ಕೆ ಮಾತು ಇದರ ಬಗ್ಗೆ ನಿಮ್ಮ ಅನಿಸಿಕೆ ನೀಡಿದ್ದಕ್ಕೆ ನಮಸ್ಕಾರ.
ಪ್ರತಿವಾರ ಒಂದು ವಿಷಯದ ಬಗ್ಗೆ ಚರ್ಚೆಯಲ್ಲಿ ನಿಮಗೆ ಪ್ರಸ್ತುತ / ಪ್ರಮುಖ ವಿಷಯಗಳ ಬಗ್ಗೆ ನೀವು ಬರೆಯಿರಿ
ಒಂದಷ್ಟು "ತಿಳಿದು ತಿಳಿಯಾಗೋಣ"
-ಮಂಜು

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

 • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
  4 years ago
 • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದು...
  4 years ago
 • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
  5 years ago
 • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
  7 years ago
 • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
  8 years ago
 • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
  8 years ago
 • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
  8 years ago
 • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
  8 years ago