18 November 2010

ಇನ್ನೊಂದು ಅಭಿಪ್ರಾಯ

ನಮಸ್ತೆ...

ಅನೇಕ ದಿನಗಳ  ಮೌನ ಮುರಿದು,

ಜಾತಿ ಪದ್ದತಿಯ ಬಗ್ಗೆ   ರೇವಪ್ಪ ಬರೆದ   ವಿಚಾರ ಲಹರಿ ("ಸಂಶೋಧನಾ ಪ್ರಬಂಧ")  ಅತಿ ವಿಶಿಷ್ಟವಾಗಿತ್ತು.  ವಿಷಯವೊಂದರ ಕುರಿತು ತನ್ನ ಅನುಭವ ,ಅಭಿಪ್ರಾಯ ಮತ್ತು ತರ್ಕಗಳನ್ನು ಮೇಳೈಸಿ ಬರೆಯುವ ರೇವಪ್ಪನ ಶೈಲಿ ಅನನ್ಯವಾದದ್ದು. ಈ ಲೇಖನ  ಒಂದು  ವೈಚಾರಿಕತೆಯ  ಅಲೆಯನ್ನು   ಓದುಗರಲ್ಲಿ   ಉಂಟುಮಾಡಿದೆ  ಎಂದರೆ ತಪ್ಪಲ್ಲ.

ಸಮಾಜದ  ಅನೇಕ ಪದ್ದತಿಗಳು  (ಜಾತಿ ಪದ್ದತಿಯು ಸೇರಿದಂತೆ) ಅನಾದಿಯಿಂದಲೂ ಇವೆ. ಹಿಂದೆ ಯಾವ ಕಾರಣಕ್ಕಾಗಿ  ಜಾರಿಗೆ ಬಂತು  ಎನ್ನುವುದು ಖಚಿತವಾಗಿ  ತಿಳಿಯಲಾಗದು. ಆದರೆ ಆಯಾ ಕಾಲದ ಅವಶ್ಯಕತೆ ,ಅನಿವಾರ್ಯತೆ   ಸಾಮಾಜಿಕ ಪರಿಸ್ಥಿತಿಗಳ ಪ್ರಭಾವದಿಂದ ಇವು ಜನ್ಮ ತಳೆದವು ಎನ್ನಬಹುದು. ಅದೇನೇ ಇದ್ದರೂ  ಮಾನವತೆಯನ್ನು, ಮನುಷ್ಯತ್ವವನ್ನು, ಘಾಸಿಗೊಳಿಸುವ, ನಿರಾಕರಿಸುವ  ಎಲ್ಲ ಪದ್ದತಿಗಳು (ಜಾತಿ  ಪದ್ಧತಿ ಸೇರಿದಂತೆ)  ಅಳಿಯಬೇಕೆನ್ನುವುದೇ ನಿಜವಾದ  ಮಾನವತಾವಾದ, ವಿಶ್ವ ಮಾನವತಾವಾದ.

ಭಾರತೀಯರು  ತಮಗೆ ತಾವೇ ಆದ್ಯರ್ಪಿಸಿಕೊಂಡಿರುವ  ಸಂವಿಧಾನವೇ ಸಮಾನತೆಯನ್ನು  ಸಾರಿದ್ದರೂ   ರಾಜಕೀಯ ಸ್ವಾರ್ಥಕ್ಕಾಗಿ  ಮೀಸಲಾತಿಯ ನೆವದಲ್ಲಿ ಜಾತಿ ಪದ್ದತಿಯನ್ನು   ನಮ್ಮ  ರಾಜಕಾರಣಿಗಳೇ  ನೀರೆರೆದು  ಸಲಹಿದ್ದಾರೆ,ಸಲಹುತ್ತಿದ್ದಾರೆ. ಇಂದಿನ ಸಮಸ್ಯೆಯ ಬೇರುಗಳಿರುವುದು  ರಾಜಕೀಯ  ಇಚ್ಚಾಶಕ್ತಿಯ ಕೊರತೆಯಲ್ಲಿ. ಅದೇ ರೀತಿ  ಆರ್ಥಿಕವಾದ  ಅಸಮಾನತೆಯಿಂದ  ಉಂಟಾಗುವ  ತಾರತಮ್ಯವೂ ಸಹ ಕ್ರೂರ ಮತ್ತು ಘೋರ . ಅವು  ಹಿಂದೆಂದಿಗಿಂತಲೂ  ಪ್ರಸ್ತುತ ಸಮಾಜದ  ದೊಡ್ಡ ಅನಿಷ್ಟವಾಗಿದೆ. ಸಮಾಜದ ದೋಷಗಳು  ನಿವಾರಣೆಯಾಗ ಬೇಕು  ಎನ್ನುವುದು ಎಷ್ಟು ಮುಖ್ಯವೋ  ಉತ್ತಮ ಅಂಶಗಳು ಸ್ಥಾಪಿತವಾಗಬೇಕು ಎನ್ನುವುದು  ಅದಕ್ಕಿಂತಲೂ ಮುಖ್ಯ  ಎನ್ನಬಹುದು.

ಒಂದು  ನದಿಯ ಹರಿವಿಗೆ ಒಂದು  ಪಾತ್ರಬೇಕು (ಮಾರ್ಗ).ಅದೇ ರೀತಿ ಸಮಾಜದ ಹರಿವಿಗೂ ಒಂದು ಪಾತ್ರ,ಮಾರ್ಗ(ವ್ಯವಸ್ಥೆ)ಬೇಕು. ಒಂದು ವ್ಯವಸ್ಥೆಯನ್ನು  ಒಂದು ಒಳ್ಳೆಯ ಉದ್ದೇಶಕ್ಕೆ   ಮುರಿಯುವುದು ಅನಿವಾರ್ಯ, ಹೌದು. ಆದರೆ  ಅಲ್ಲಿ  ಮೊದಲಿಗಿಂತಲೂ ಉತ್ತಮವಾದ ಸುವ್ಯವಸ್ಥೆಯನ್ನು ಕಟ್ಟಬೇಕಾದದ್ದು  ಅದಕ್ಕಿಂತಲೂ ಅನಿವಾರ್ಯ.

ಈ ಸೂತ್ರ ಸಮಾಜದ ಸುಧಾರಣೆಯ ವಿಷಯದಲ್ಲೂ  ಅನ್ವಯಿಸಿ ಹೇಳುವುದಾದರೆ  ನಿರ್ಮಾಣವಗಬೇಕಾಗಿರುವ ನವ ಸಮಾಜ  ಉನ್ನತ ನ್ಯಾಯ, ಧ್ಯೇಯ ಮಾನವೀಯ ಮೌಲ್ಯಗಳನ್ನು  ಹೊಂದಿರಬೇಕು ಎನ್ನುವುದು ಬಹು ಮುಖ್ಯ. ಅದು ಎಲ್ಲರ ಆಶಯವೂ ಹೌದು.


---------------------------------------------------



2 comments:

sakkath sacchi.blogspot.com said...

what u have opined is true and universally acceptable.but plz may i know whose opinion is this?

Unknown said...

ee "innondu abhipraya" yaraddu embudannu abhipraya needidavaraagali atava blog na kartru "rev" aagali tilisidare chennagirutte. spashtate haagu paradarshakate namma blognalli bahala mukhya

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago