19 April 2010

೧೭.೪.೨೦೧೦ರ 'ಮನನ' ತಂಡದ ಸಭೆ


೧೭.೪.೨೦೧೦ರ 'ಮನನ' ತಂಡದ ಸಭೆ ಅತ್ಯಂತ ಅರ್ಥಪೂರ್ಣವಾಗಿತ್ತು. 


ಸದಸ್ಯರ  ಸಂಖ್ಯೆ ಕಡಿಮೆ ಇದ್ದರೂ ಸಹ ವಿಷಯ  ಗ೦ಭೀರವಾಗಿತ್ತು. ಮೊದಲಿಗೆ  ಹೊಸದಾಗಿ ಬಂದ ಇಬ್ಬರು ಸದಸ್ಯರನ್ನ ಸ್ವಾಗತಿಸಿ ಚರ್ಚೆ ಮುಂದುವರೆಸಿದೆವು. ಹಿಂದಿನ ಸಭೆಯಲ್ಲಿ ತಿಳಿಸಿದಂತೆ ಮಾಸ್ತಿಯವರ ಕಥೆಗಳ ಬಗ್ಗೆಯೇ  ಚರ್ಚೆ ಮುಂದುವರೆಯಿತು.  

ಇಂದು ಮಾತನಾಡಿದ ದತ್ತರಾಜ್ ಮತ್ತು ರಮೇಶ್ ಇಬ್ಬರೂ ತಾವು ಓದಿದ ಕಥೆಯ ಬಗ್ಗೆ ವಿವರಣೆ ನೀಡಿದರು. ದತ್ತರಾಜ್ ಹೇಳಿದ 'ಸುಶೀಲ' ಕಥೆಯಲ್ಲಿ ಅವರು ಪ್ರಸ್ತಾಪಿಸಿದ ಸ್ವಾತಂತ್ರ್ಯಕ್ಕೆ ಸಂಭ೦ದಪಟ್ಟ ವಿಷಯ ನಿಜಕ್ಕೂ ಹೆಚ್ಚು ಚರ್ಚೆಗೆ ಅವಕಾಶ ನೀಡಿತು. ಅವರು ಸ್ವಾತಂತ್ರ್ಯ, ಗಡಿ, ಅಭಿವ್ಯಕ್ತಿತನದ ಬಗ್ಗೆ ಮಾತನಾಡುತ್ತ ಮಾನವೀಯ ಮುಲ್ಯಗಳ ಬಗ್ಗೆಯೂ ಸಹ ತಮಗಿರುವ ಕಳಕಳಿಯನ್ನು ವ್ಯಕ್ತಪಡಿಸಿದರು. ಮೊದಲ ಬಾರಿಗೆ ಮಾತನಾಡುತ್ತಿರುವುದಾಗಿ ತಿಳಿಸಿದ ದತ್ತರಾಜ್ ಅವರ ಶೈಲಿ ಮೆಚ್ಚುವಂತಿದೆ. ಕಥೆಯಲ್ಲಿನ ವಿಷಯ ತೀವ್ರತೆಯನ್ನು ದತ್ತರಾಜ್ ಚೆನ್ನಾಗಿ ಗ್ರಹಿಸಿರುವುದು ತಿಳಿಯಿತು. ನಿಜಕ್ಕೂ ನಾವು ಸ್ವಾತಂತ್ರ್ಯರಾದ ಇಷ್ಟು ವರ್ಷಗಳ ಮೇಲೆ ಈ ಬಗ್ಗೆ ಅವಲೋಕಿಸುವ ಸ್ಥಿತಿ ಒಮ್ಮೆ ಮನುಷ್ಯನ ಅಭಿವ್ಯಕ್ತಿತನದ ಕುರಿತು ಯೋಚಿಸುವ ಕೆಲಸ ನಮ್ಮ ಸದಸ್ಯರು ನಿಭಾಯಿಸುತ್ತಾರೆ ಎಂಬುದು ಮನನದ ಆಶಯ.   

ನಂತರ ಮಾತನಾಡಿದ ರಮೇಶ್ ಅವರು ತಾವು ಓದಿದ ಕತೆಯಲ್ಲಿ ವ್ಯಕ್ತವಾಗಿರುವ ಮನುಜ ಮನಸ್ಥಿತಿ, ಮಿಥ್, ನಾವು ಭ್ರಮಿಸುವ ಲೋಕಕ್ಕಿಂತ ವಾಸ್ತವವಾಗಿ ಇರುವ ಪ್ರಾಕೃತಿಕ ಸಹಜ ಸ್ಥಿತಿ ಮತ್ತು ನಾವು ಪರಿಸರಕ್ಕೆ ಅದರ ಸೌಂದರ್ಯಕ್ಕೆ ಲೀನವಾಗುವ ಜೀವಪರ ಕಾಳಜಿಯನ್ನು ವಿಶ್ಲೇಷಿಸಿದ್ದು ಚರ್ಚೆ ಕುತೂಹಲವಾಗಿರುವುದಕ್ಕೆ ಸಾಧ್ಯವಾಯಿತು.  
ಈ ಎರಡು ವಿಷಯಗಳ ಬಗ್ಗೆ ಪ್ರತಿಕ್ರಿಯೆ ವ್ಯಕ್ತವಾಗುತ್ತಲೇ  ಸ್ವಾತಂತ್ರ್ಯಕ್ಕಾಗಿ ಪರಿತಪಿಸುತ್ತಿರುವ, ಅಭಿವ್ಯಕ್ತಿಗೆ ಹಾತೊರೆಯುತ್ತಿರುವವರ ಬಗ್ಗೆ ಮಾತುಗಳು ಸಾಗಿ 'ನಕ್ಸಲಿಸಂ' ಬಗ್ಗೆ ವಾದ ಪ್ರತಿವಾದಗಳು ಬೆಳೆದು ಚರ್ಚೆ ಅತ್ಯಂತ ಪ್ರಸ್ತುತ ಮತ್ತು ನಾವು ಅರ್ಥೈಸಲೇ ಬೇಕಾದ ವಿಷಯದ ಬಗ್ಗೆ ಹೊರಳಿತು. ವಿಷಯದ ಸಂಕೀರ್ಣತೆಯು ವಿಸ್ತಾರವಾದಂತೆ  ಸಂಕಿರಣವಾಗಿ ಒಟ್ಟಾರೆ ನಾವೆಲ್ಲರೂ ಹೆಚ್ಚು ತಿಳಿಯಲು ಪ್ರೇರೇಪಿಸಿತು.  
 
ಅಷ್ಟರಲ್ಲೇ ಸಮಯ ಮೀರಿದ್ದರಿಂದ ಎಲ್ಲರಿಗೂ ವಂದನೆ ತಿಳಿಸಿ ಸಭೆಯನ್ನ ಮುಕ್ತಾಯಗೊಳಿಸಿದೆವು. 

ಚರ್ಚೆಯಲ್ಲಿ ಭಾಗವಹಿಸಿದವರು : ಜಯಸುಧ, ಲಾವಣ್ಯ, ಮಂಜುನಾಥ್, ಮಂಜು, ದತ್ತರಾಜ್, ರಮೇಶ್, ಬಿರಾದರ್, ಮುನಿ ಆ೦ಜನಪ್ಪ, ಸೀನು, ಮಹಾಲಕ್ಷ್ಮಿ, ಜ್ಯೋತಿಶ್ರೀ.  

ಮುಂದಿನ  ವಾರದ ವಿಷಯ : 

' META PHYSICS ' ತತ್ವಶಾಸ್ತ್ರಕ್ಕೆ ಸಂಭಂದಿಸಿದ್ದು.  
ಎಲ್ಲರೂ ಓದಿ : Subject is Really Exciting. 

-ಮಂಜು 

No comments:

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago