15 April 2010

ನಕ್ಸಲ್ ವಾದ - ಮಾವೋವಾದ


ನಮಸ್ತೆ...

ಮಂಜುನಾಥ ಅವರು ಬರೆದಿರುವ ಚರ್ಚೆಯ ಪೀಠಿಕೆಗೆ ನನ್ನದೊಂದು ಅನಿಸಿಕೆಯುಕ್ತ ಬರಹ ಇಲ್ಲಿದೆ. ಇದು ಅನಿಸಿಕೆ ಮಾತ್ರ. ಪ್ರತಿಕ್ರಿಯೆ ಅಲ್ಲ. 

So It Goes Like This...

ಒಂದು ದೇಶವನ್ನ ಒಬ್ಬ ಮನುಷ್ಯನಿಗೆ ಹೋಲಿಸೋಣ. ಆಗ, ನಾವಲ್ಲಿ ಗುರುತಿಸಬಹುದಾದ ಅಂಶಗಳು ಅಂದ್ರೆ : ಅವನ ವ್ಯಕ್ತಿತ್ವ / ಸ್ವಭಾವ, ಅವನ ಗೆಳೆಯರು, ಅವನ ಶತ್ರುಗಳು, .... ಇಂಥ ಅನೇಕ ಅಂಶಗಳ ಸಾಲಿಗೆ ಅವನಿಗೆ ಕಾಡುವ ರೋಗ ರುಜಿನಗಳನ್ನೂ ಸೇರಿಸಬಹುದು ಅಲ್ವಾ ? 

ಅಂಥ ರೋಗ ರುಜಿನಗಳ ಸಾಲಿಗೆ ಸೇರಿಸಬೇಕು , ಈ ಪ್ರಸ್ತುತ ಚರ್ಚೆಯಲ್ಲಿರುವ ಸಮಸ್ಯೆಗಳನ್ನ. ಈ ರೋಗ ಖಂಡಿತ ಅವನ ಬೇಜವಾಬ್ದಾರಿ / ಅಲಕ್ಷ್ಯದ ಪರಿಣಾಮವಾಗಿ ಹುಟ್ಟಿಕೊಂಡಿರುವಂಥದು. ಅದನ್ನ ಸರಿಪಡಿಸಲು ಯಾವ ವೈದ್ಯರ ಸಹಾಯವೂ ಬೇಕಿಲ್ಲ. ಬದಲಿಗೆ ಆ ಮನುಷ್ಯನ ವಿಚಾರವಂತಿಕೆ ಕೆಲಸ ಮಾಡಲಿಕ್ಕೆ ಶುರು ಮಾಡಿ, ಆ ರೋಗ ಜನಿಸಲಿಕ್ಕೆ ಕಾರಣವಾದ ತನ್ನ ಅಸಡ್ಡೆಯ ಗುಣವನ್ನ ನಿವಾರಿಸಿಕೊಂಡು ತಾನು ಮರೆತಿದ್ದ ಆ ಕೆಲವು ಕರ್ತವ್ಯಗಳನ್ನ ಸರಿಯಾಗಿ ಪೂರೈಸಿದರೆ ಈ ಸಮಸ್ಯೆ ಹಿಡಿತಕ್ಕೆ ಬಂದೀತು ಅನ್ನೋದು ನನ್ನ ಅನಿಸಿಕೆ.

ಪ್ರಸ್ತುತ ಸಮಸ್ಯೆಗಳಿಗೆ ಕಾರಣವನ್ನ ಪಾಠಕರಿಗೆ ವಿವರಿಸುವ ಅಗತ್ಯವಿಲ್ಲ. ಅವು ಎಲ್ಲ ಮನೋಪ್ರಬುದ್ಧರಿಗೆ ತಿಳಿದಿರುವ ವಿಷಯಗಳು. 

" ಆದರೆ, ಆ ಕಾರಣಗಳಿಗೆ ಸಮಾಧಾನ ಗುರುತಿಸಿ, ಸಮಾಜದಲ್ಲಿ ಅಳವಡಿಸೋ ಕೆಲಸ ಇಲ್ಲೀವರೆಗೆ ಆಗಿಲ್ಲ. ಸಮಸ್ಯೆಯ ಮೂಲ ಮರೆತು, ಆ ಸಮಸ್ಯೆಯನ್ನ ಮುಂದಿಟ್ಟುಕೊಂಡು ಗೋಳಾಡುವುದು ಸಲ್ಲ...." ಅಂತ ಭಾಷಣ ಬಿಗಿಯುವ ಬದಲು

" ಈ ತಾರತಮ್ಯ ನೀತಿಯನ್ನು  ಅತ್ಯಂತ ಯಶಸ್ವಿಯಾಗಿ ಜಾರಿಗೊಳಿಸುತ್ತಿರುವ  ನಮ್ಮ ನಾಗರೀಕ ಪ್ರಜ್ಞೆಗೆ ಮತ್ತು  ನಮ್ಮ ಬುದ್ದಿವ೦ತಿಕೆಗೆ ಧಿಕ್ಕಾರವಿರಲಿ. "

ಅಂತ ಮಂಜು ಹೇಳಿದ ಈ ವಾಕ್ಯದ ಬಗ್ಗೆ ಚಿಂತಿಸಿದಲ್ಲಿ, ನಾವೂ ಕೂಡ ಪ್ರಸ್ತುತ ಸಮಸ್ಯೆ ಬೆಳೆಯಲಿಕ್ಕೆ ಕಾರಣೀಭೂತರಾಗಿರುವುದು ಸತ್ಯ ಅನಿಸುತ್ತೆ. ಈಗ ನಾನು - ನೀವು, ಅಂದ್ರೆ ದೇಶದ ಸಾಮಾನ್ಯ ಪ್ರಜೆಗಳು ಮಾಡಲಿಕ್ಕಿರುವುದೇನು ಅಂದ್ರೆ :

ಈ ಸಮಸ್ಯೆಯ ಮೂಲ ಹಾಗೂ ಬೆಳೆವಣಿಗೆಗೆ ನೀರೆರೆದ ಕಾರಣಗಳನ್ನು ಜನಸಾಮಾನ್ಯರಿಗೆ ಮನದಟ್ಟು ಮಾಡಿಸಿ, ಅವರು ಇನ್ನು ಮುಂದೆ ಆ ಸಮಸ್ಯೆಗೆ ನೀರೆರೆಯುವ ಕೆಲಸ ಮಾಡುವುದನ್ನ ತಪ್ಪಿಸುವುದು.
ಜೊತೆಗೆ
ಸಮಸ್ಯೆಯ ಪರಿಹಾರಗಳಲ್ಲಿ ಪ್ರಮುಖಾಂಶವಾದ ಶಿಕ್ಷಣವನ್ನ ಎಲ್ಲರಿಗೂ ತಲುಪಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನ ಕೈಗೊಳ್ಳುವುದು.


ನಾವು ತಿಳಿದೋ ತಿಳಿಯದೆಯೋ ಈ ಸಮಾಜದ ಪ್ರತಿ ಚಟುವಟಿಕೆಯ ಭಾಗವಾಗ್ತಿರಬೇಕಾದ್ರೆ, ಸಮಸ್ಯೆಗಳ ಭಾಗವಾಗುವುದೇಕೆ ? ಪರಿಹಾರಗಳ ಭಾಗವಾಗೋಣ . ಅಲ್ವಾ ?


Cheers,
Revappa

No comments:

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago