05 April 2010

ಅನುಪಲ್ಲವಿ

ನಮಸ್ತೆ...

ಈ ದಿನ ಈ ಕಿರಿಯ ಸಹಾಯಕರ ಬ್ಲಾಗ್ ನ ದಿನಚರಿಯಲ್ಲಿ ಬಂಗಾರ ಬಣ್ಣದ ಶಾಯಿಯಲ್ಲಿ ಬರೆದಿಡಬೇಕಾಗಿರುವ ಪುಟ. ಯಾಕ್ ಗೊತ್ತಾ ? ತಾನು ಜನ್ಮ ತಾಳಿದ ದಿನ ( ಡಿಸೆಂಬರ್ 31 , 2008 ) ದಿಂದ , ಮೊನ್ನೆ ( ಏಪ್ರಿಲ್ 03 , 2010 ) ಯವರೆಗೆ , Rather ಮೊನ್ನೆ ಮಧ್ಯಾನ್ಹದವರೆಗೆ ಸಚಿವಾಲಯ ಕಿರಿಯ ಸಹಾಯಕರ ಕಲ್ಯಾಣ ಕಾರ್ಯಕ್ರಮಗಳ ಜೊತೆಗೆ ಸಾಮಾನ್ಯ ಜ್ಞಾನ ವೃದ್ಧಿಗೆ ಬೇಕಾಗುವ ಇತರೆ ವಿಷಯಗಳನ್ನ ಕಲೆಹಾಕಿ ಉಣಬಡಿಸುವ ಕೆಲಸದಲ್ಲಿ ತೊಡಗಿಕೊಂಡು ಬಂದಿತ್ತು.  ಹಾಗೆ ಜ್ಞಾನವನ್ನ / ಕತೆ - ಕವನಗಳನ್ನ ಹಂಚಿಕೊಂಡ ಎಲ್ಲರಿಗೂ ಸಂಪೂರ್ಣ ತೃಪ್ತಿಯಿದೆ. ಅದನ್ನ ಸ್ವೀಕರಿಸಿದ ನನ್ನ ಕಿರಿಯ ಸಹಾಯಕ ಮಿತ್ರರಿಗೂ ಇದೆ ಅನ್ಕೋತೀನಿ.  ಆದರೆ , ಮೊನ್ನೆ ಮಧ್ಯಾನ್ಹ Club Library ಯಲ್ಲಿ ನಡೆದ ಸಮಾನ ಮನಸ್ಕರ ಸಭೆಯಲ್ಲಿ ಅಂಗೀಕೃತವಾದ ನಿಲುವಳಿಯನ್ವಯ 

ಈ ಬ್ಲಾಗ್, ನಮ್ಮೆಲ್ಲರ.. ಅಂದ್ರೆ, ಸಂವೇದನಾಶೀಲ ಸಚಿವಾಲಯ  ಸಹೋದ್ಯೋಗಿಗಳ 'ಸಂಭಾವನೆ'ಗಳ ಸಂಪುಟವಾಗಿ ರೂಪುಗೊಳ್ಳಲು ವೇದಿಕೆ ಸಿದ್ಧವಾಗಿದೆ. 

ನನ್ನ ಮನಸ್ಸಿನ ಕಾರ್ಖಾನೆಯೇ ಒಂದು ವಿಸ್ಮಯ ನಂಗೆ. ನೀವೇ ನೋಡಿ ಆ ಸಭೆಯಲ್ಲಿ ಎಲ್ರೂ ಕುಳಿತು ಮಂಡನೆಯಾದ ನಿಲುವಳಿಯ ಬಗ್ಗೆ ವಿಚಾರ ಮಾಡ್ತಿರಬೇಕಾದ್ರೆ , ನನ್ನ ಮನಸ್ಸು ನಮ್ಮ 'ಪುನರ್ನವ' ಕ್ಕೆ ಹೊಸ ಹೆಸರು ಹುಡುಕಿ, Blog ಗೆ ಹೊಸ ಹೊರವಿನ್ಯಾಸ ನೀಡುವ ಕೆಲಸದಲ್ಲಿ ತೊಡಗಿಬಿಟ್ಟಿತ್ತು. ನಂತರ ಮನೆಗೆ ಬಂದವನೇ ಅದೇ ಕೆಲಸಕ್ಕೆ ಕುಳಿತು ರಾತ್ರಿ 1.30ರ ವರೆಗೂ ಅದೇ ಕೆಲಸ ಮಾಡಿ ಮುಗಿಸಿ " ಸಾಕಿನ್ನು ಮಲಗೋಣ.." ಅಂತ ಮಲಗಿದರೆ ನಿದ್ದೆ ಕೂಡ ಬರಲೊಲ್ಲದು. ಕಾರಣ : ' ಇನ್ನು ಮೇಲೆ ನಾನು ಬರೆಯುವ ಲೇಖನಗಳಿಗೊಂದು ಮುದ್ದಾದ ಹೆಸರು ಹುಡುಕುವ ಕೆಲಸ ಬಾಕಿ ಉಳಿಸಿದ್ದೆ !! '

ಸರಿ.
ಈಗ ' ಪುನರ್ನವ ' , ' ಸಾರ್ಥ ' ಕ್ಕೆ ತಿರುಗಿದೆ. ಅಲ್ಲಿ ಉಳಿದಿರೋದು juniorasst.blogspot.com/ ಅನ್ನೋ url ಮಾತ್ರ. ಈಗ ಅದು  ನಮ್ಮೆಲ್ಲರಿಗೆ ಸೇರಿದ್ದು. ಕಿರಿಯ ಸಹಾಯಕರು, ಬೆರಳಚ್ಚುಗಾರರು, ಸಹಾಯಕರು, ಶೀಘ್ರಲಿಪಿಗಾರರು... ಎಲ್ಲರೂ ಈ ತಾಣದ ಹಕ್ಕುದಾರರು.

ಅಂದ ಹಾಗೆ ಈ ಹೆಸರನ್ನ Suggest ಮಾಡಿದ್ದು ನನ್ನ ತಂಗಿ. ಈ ಹಿಂದೆ ಪುನರ್ನವಕ್ಕೂ ಅವಳೇ ಹೆಸರು Suggest ಮಾಡಿದ್ದು. 


ನಮ್ಮ ಸಾಹಿತ್ಯ ಪರಿಷತ್ತಿನ ಶಬ್ದಕೋಶದಲ್ಲಿ ಸಾರ್ಥ ಕ್ಕೆ ಹೀಗೆ ವಿವರಣೆ ನೀಡಿದಾರೆ :

ಸಾರ್ಥ (ನಾ) . ೧. ಅರ್ಥಸಹಿತವಾದುದು ; ಅನ್ವರ್ಥವಾದುದು.  ೨. ವ್ಯಾಪಾರಸ್ಥರ ಗುಂಪು ; ವರ್ತಕರ ಸಮೂಹ. ೩. ಮನುಷ್ಯರ ಗುಂಪು ; ಜನಸಮುದಾಯ. ೪. ಯಾವುದಾದರೂ ಸಮಾನ ಜಾತಿಯ ಪ್ರಾಣಿಗಳ ಗುಂಪು, - ಹಿಂಡು. ೫. ರಾಶಿ ; ಒಟ್ಟಿಲು. (ಗು) ೬. ಅರ್ಥಸಹಿತವಾದ ; ಅರ್ಥಪೂರ್ಣವಾದ. ೭. ಉಪಯುಕ್ತವಾದ ; ಪ್ರಯೋಜನದಿಂದ ಕೂಡಿದ. ೮. ಸಮೃದ್ಧವಾದ ; ಶ್ರೀಮಂತವಾದ.


ಈ ಅರ್ಥ ವಿವರಣೆಯಲ್ಲಿ  ಗುಲಾಬಿ ಬಣ್ಣ ನೀಡಿರೋ ವಿವರಣೆಗಳು ನನ್ನ ಮನಸನ್ನ ಸೂರೆಗೊಂಡು ಇದೇ ಸರಿಯಾದ ಹೆಸರು ಅನ್ನಿಸಿ ನೀಡಿದೀನಿ. ಜೊತೆಗೆ TagLine ನಲ್ಲಿ ಬಳಸಿರೋ ಶಬ್ದಗಳಲ್ಲಿ 



ಸಂವೇದನೆ (ನಾ). ೧. ಜ್ಞಾನ; ಅನುಭವ. ೨. ಅರಿವು ; ತಿಳುವಳಿಕೆ.

ಸಂಭಾವನೆ (ನಾ). ೧. ಆಲೋಚನೆ ; ಅಭಿಪ್ರಾಯ. ೨. ಊಹೆ ; ಎಣಿಕೆ. ೩. ನಂಬಿಕೆ ; ಭರವಸೆ. ೪. ಮನ್ನಣೆ ; ಸನ್ಮಾನ. ೫. ಮಾಡಿದ ಕೆಲಸಕ್ಕಾಗಿ ಕೊಡುವ ಹಣ ; ಗೌರವಧನ. 

ಅನ್ನುವ ಶಬ್ದಗಳ ಅರ್ಥ ಹೀಗಿದೆ.

So, ಗುಲಾಬಿ ಬಣ್ಣದಲ್ಲಿ ಬರೆದಿರುವ ಅರ್ಥ ವಿವರಣೆಗಳೇ ಈ ಹೊಸ ಹೆಸರಿಗೆ ಸಮರ್ಥನೆ. 

& About The Blue BackGround  : The color blue often stands for relaxation, fidelity, happiness, wisdom, faith, peace, patience, and loyalty.



ನನ್ನೆಲ್ಲ ಸಚಿವಾಲಯ ಸಹೋದ್ಯೋಗಿಗಳಿಗೆ ನನ್ನ ನಿವೇದನೆ ಏನಂದ್ರೆ : ಈ ಬ್ಲಾಗ್ ನ ಬಣ್ಣ , ಹೆಸರು , ವಿನ್ಯಾಸ ... ಇಂಥ ವಿಷಯಗಳಲ್ಲಿ ನಾನು ಪೂರ್ಣ ಸ್ವಾತಂತ್ರ್ಯ ಬಯಸ್ತೀನಿ. ಕ್ಷಮೆ ಇರಲಿ , But ಈ ವಿಷಯದಲ್ಲಿ ನಾನು ಸಲಹೆ ಮಾತ್ರ ಸ್ವೀಕರಿಸೋ ಪರಿಪಾಠ ಇಟ್ಕೊಂಡು ಬಂದಿದೀನಿ. ಆದ್ರೆ ನಿಮಗೆ ತೀರ ಇಷ್ಟ ಆಗದೇ ಇರೋ ಯಾವ ಕೆಲಸನೂ ಮಾಡೋದಿಲ್ಲ ಅಂತ ಭರವಸೆ ಕೊಡ್ತೀನಿ. 


--------------------

  • ಇಂದಿನಿಂದ ಈ ಬ್ಲಾಗ್ ಎಂಬ ವೇದಿಕೆಯಲ್ಲಿ ನಮ್ಮ ಆಲೋಚನೆ, ಅಭಿಪ್ರಾಯ, ಕಥೆ/ಕವನಗಳು... ಹೀಗೆ ಎಲ್ಲ ರೂಪದ ಮನೋಲಹರಿಗಳನ್ನ ದಾಖಲಿಸೋಣ. 
  • ನಮ್ಮ ಸಹೃದಯಿ ಸ್ನೇಹಿತರು ಪ್ರಕಟಗೊಳ್ಳುವ ಲಹರಿಗೆ ಪ್ರತಿ ಲಹರಿ ಹರಿಸಲು ಸದಾ ತಯಾರಾಗಿರ್ತಾರೆ ಅನ್ನೋದು ನಮಗೆಲ್ಲರಿಗೂ ಗೊತ್ತಿರೋ ವಿಚಾರ. 
  • ನಿಮ್ಮ ಬಗ್ಗೆ ನಿಮಗೆ ಕೀಳರಿಮೆ ಬೇಡ. 
  • ಹಂಚಿಕೊಳ್ಳಲು ಯೋಗ್ಯವೆನ್ನಿಸುವ ಯಾವತ್ತು ವಿಚಾರಗಳನ್ನ ಇಲ್ಲಿ ಬರಹ ರೂಪದಲ್ಲಿ ಮಂಡಿಸುವ ಅವಕಾಶ ಎಲ್ಲರಿಗೂ ಮುಕ್ತವಾಗಿದೆ. 
  • ತಡ ಏಕೆ ? ನಿಮ್ಮ ಲಹರಿಯನ್ನ ಹರಿಬಿಡಿ.

ಸೂಚನೆಗಳು ( Instructions ) :


1. ಬರಹವನ್ನ ಬೆರಳಚ್ಚಿಸುವ ಬಗ್ಗೆ : ಆಂಗ್ಲ ಭಾಷೆಯಲ್ಲಿ ನಿಮ್ಮ ಬರಹವಿದ್ದರೆ ಯಾವ ಸೂಚನೆಯೂ ಇಲ್ಲ. ಆದರೆ ಕನ್ನಡದಲ್ಲಿ ನಿಮ್ಮ ಬರಹವಿದ್ದರೆ ಅದನ್ನ ನುಡಿ 4.0 ಯೂನಿಕೋಡ್ ನಲ್ಲಿ ಮಾತ್ರ ಬೆರಳಚ್ಚಿಸಬೇಕು.


2. ಬೆರಳಚ್ಚಿಸಿದ ಬರಹವನ್ನು revappa@gmail.com ಗೆ ಕಳುಹಿಸಬೇಕು.


3. ಬರಹಗಳು ಸ್ವಂತದ್ದಾಗಿರಬೇಕು ಎಂಬ ಮನಸ್ಸಾಕ್ಷಿಯ ಷರತ್ತನ್ನ ಯಾರೂ ಉಲ್ಲಂಘಿಸಕೂಡದು. 


4. ಯಾವುದಾದರೂ ಪತ್ರಿಕೆಯ / ನಿಯತಕಾಲಿಕದ ಬರಹವನ್ನ ಓದಿಸುವ ಮನಸ್ಸಾಗಿದ್ದಲ್ಲಿ " ಹಾಗೆ ಓದಿ ಅಂತ ಹೇಳಿ , ಅದನ್ನ ಪಡೆಯುವ ಮಾರ್ಗ  "  ಹೇಳಿಕೊಟ್ಟರೆ ಸಾಕು. ಬದಲಿಗೆ ಅದನ್ನ ಬೆರಳಚ್ಚಿಸಿ ಪ್ರಕಟಿಸಲು ರವಾನಿಸುವುದು ಒಳ್ಳೆ ಹುಡುಗರ ಲಕ್ಷಣ ಅಲ್ಲ.


5. ತಮ್ಮ ಲೇಖನಕ್ಕೆ ಸರಿಹೊಂದುವ ಚಿತ್ರಗಳನ್ನ ಪ್ರಕಟಿಸುವ ಇರಾದೆಯಿದ್ದರೆ ಅಂಥ ಚಿತ್ರಗಳನ್ನ ತಮ್ಮ ಬರಹದ ಜೊತೆ Attach ಮಾಡಿ ಕಳುಹಿಸಲು ಕೋರಿದೆ.


6. ದಿನಕಳೆದಂತೆ ದಿನಕ್ಕೊಂದರಂತೆ ಬರಹಗಳನ್ನ ಪ್ರಕಟಿಸುವ ಯೋಜನೆಯಿದೆ. ಇದರಿಂದ ಪ್ರಕಟವಾದ ಲೇಖನಕ್ಕೆ ಸಮಸ್ತ ಸಹೃದಯಿಗಳಿಂದ ಪ್ರತಿಕ್ರಿಯೆ ಸಿಗುತ್ತವೆ.

--------------------


ನಾನು, ಅಂದ್ರೆ ರೇವಪ್ಪ ಬರೆಯುವ ಬರಹಗಳಿಗೆ 'ಅನುಪಲ್ಲವಿ' ಅನ್ನೋ ಹೆಸರು ಇಡ್ಬೇಕು ಅಂತ ನಿರ್ಧಾರ ಮಾಡಿದೀನಿ. " ಇವತ್ತು ಬರೆದಿರೋದು ಏನು ಬರಹದ ಥರ ಇಲ್ವಲ್ಲಾ ಗುರು ...? " ಅಂತ ಅನ್ಕೋಬೇಡಿ. ಏನೋ ಹೆಸರು ಸಿಕ್ಕಿದೆ ಅಂದಮೇಲೆ ಇಡೋದಕ್ಕೇನಕ್ಕೆ ತಡ ಮಾಡೋದು ಅಂತ.

" ನಾವೂ ಹೀಗೇ ಒಂದು ಹೆಸರನ್ನು ಇಟ್ಕೋಬೇಕಾ Boss ? " ಅಂತ ಕೇಳ್ಬೇಡಿ. ಅದು ನಿಮ್ಮಿಷ್ಟ. ಆದ್ರೆ ಹಾಗೊಂದು ಹೆಸರನ್ನ ಇಟ್ಕೊಳ್ಳೋ ಪ್ರಸಂಗ ಬಂದಾಗ  ನಮ್ಮ ಮನಸ್ಸಿನ ಕ್ರಿಯಾಶೀಲತೆಯ ಮಟ್ಟ ನಮಗೆ ಅರ್ಥವಾಗುತ್ತೆ ಅಂತ ನನ್ನ ನಿಸಿಕೆ. ಒಂದ್ಸಲ ಪ್ರಯತ್ನ ಮಾಡಿ ನೋಡಿ.


--------------------


ಪಕ್ಕದ Widget Bar ನಲ್ಲಿ ನಮ್ಮ ಸ್ನೇಹಿತರ Blogroll ಗಳಿಗೆ ಅವಕಾಶ ಕಲ್ಪಿಸಲಾಗಿದೆ. ನಮ್ಮ Circle ನ ಯಾವುದೇ ಸ್ನೇಹಿತ ಹೊಸ ಬ್ಲಾಗ್ ಹುಟ್ಟು ಹಾಕಿದರೆ ಅದರ Snippet ಅನ್ನ ಇಲ್ಲಿ ಕಾಣಬಹುದು. ಮೇಲು ಕೀಳು ಅನ್ನೋ ಭಾವವಿಲ್ಲದೆ ಯಾವ ಬ್ಲಾಗ್ ನಲ್ಲಿ Recent Activity ನಡೆದಿರುತ್ತೋ ಅದು ತಾನಾಗಿನೇ ಮೊದಲ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತೆ. 

" ಇನ್ನಿತರೆ ತುಂಬಾ ಚನ್ನಾಗಿರೋ ಕನ್ನಡ ಬ್ಲಾಗ್ ಗಳ ಹೆಸರು ನಂಗೊತ್ತು ಅವುಗಳ ಹೆಸರನ್ನೂ ಇವುಗಳ ಜೊತೆ ಸೇರಿಸಬಹುದಾ ? " ಅಂತ ನಿಮ್ಮ ಪ್ರಶ್ನೆಯಾದರೆ ಬೇಡ ಅನ್ನೋದು ನನ್ನ ಉತ್ತರ. ಯಾಕಂದ್ರೆ ಅವಕ್ಕೆ ಬೇರೊಂದು ವ್ಯವಸ್ಥೆ ಮಾಡಲಾಗುತ್ತೆ.

ಅಂದಂಗೆ ಈ ತಾಣದಲ್ಲಿ ಪ್ರಕಟವಾಗೋ ಪ್ರತಿ ಬರಹದ ಕೆಳಗೆ PRINT FRIENDLY ಅಂತ ಒಂದು  Button ಕಾಣುತ್ತೆ. ನೀವು ಅದರ ಮೇಲೆ Click ಮಾಡಿದರೆ ಒಂದು Window Open ಆಗುತ್ತೆ. ಆಗ ನೀವು
  • ಪ್ರತಿ ಬರಹದ Print Out ತೆಗೆದುಕೊಳ್ಳಬಹುದು.
  • ಆ ಬರಹ ಆಂಗ್ಲ ಭಾಷೆಯದ್ದಾದರೆ PDF ಗೆ ಬದಲಾಯಿಸಿ Save ಮಾಡಿಟ್ಕೋಬಹುದು. ( ಕನ್ನಡ ಭಾಷೆಯ ಬರಹವನ್ನೂ PDF ಗೆ ಬದಲಾಯಿಸಬಹುದು. ಆದರೆ, ಅದು Unicode ನಲ್ಲಿರೋದ್ರಿಂದ ಅಕ್ಷರಗಳ ಬದಲಿಗೆ ಬರೀ BOX BOX ಗಳು ಕಾಣ್ತಾವೆ. )
  • ನೀವು Tweet ಇಗರಾಗಿದ್ದಲ್ಲಿ, You Can Even Tweet The Link To That Article.
  • & Of Course U Can Mail The Link To Your Friends.
 
So, Go Ahead & Use It.



--------------------


ನಿಮ್ಮ ಬರಹಗಳ ನಿರೀಕ್ಷೆಯಲ್ಲಿ ನಾನಿರ್ತೇನೆ. ಸದ್ಯಕ್ಕೆ ಈ ಬ್ಲಾಗ್ ಅನ್ನ ಅನುಸರಿಸ್ತಿರೋ ಎಲ್ಲರನ್ನೂ ಒಟ್ಟುಗೂಡಿಸಿದರೆ 100 ಜನ ಆಗ್ತೀವೇನೋ ? ಅವರೆಲ್ಲರೂ ಅಲ್ದೇ ಹೋದ್ರೂ , ಕೆಲವು ಜನನಾದ್ರೂ ಸಕ್ರಿಯವಾಗಿ ಭಾಗವಹಿಸಿದ್ರೆ ದಿನಕ್ಕೊಂದು ಹೊಚ್ಚ ಹೊಸ ಬರಹ ಈ ಪುಟವನ್ನ ಅಲಂಕರಿಸೋದನ್ನ ಯಾರೂ ತಡೆಯೋದಕ್ಕಾಗೋದಿಲ್ಲ. ಅಲ್ವಾ ?


ನಿಮ್ಮ ಬರಹಗಳ ನಿರೀಕ್ಷೆಯಲ್ಲಿ,
ರೇವಪ್ಪ


.

3 comments:

spandana said...

Hello Revappa,

ಸಚಿವಾಲಯ ಸಹೋದ್ಯೋಗಿ ಮಿತ್ರರಿಗಾಗಿ ವಿಶಿಷ್ಟ ವಿನ್ಯಾಸದೊಂದಿಗೆ ಅಪರೂಪದ ಹೆಸರಿನಿಂದ ಹೊರತಂದಿರುವ ನಿಮ್ಮ "ಸಾಥ೵" ಬ್ಲಾಗ್ ನ ಎಲ್ಲಾ ಸದುದ್ದೇಶಗಳು ಈಡೇರಲಿ ಹಾಗೂ ನಿಮ್ಮ ಈ ಪ್ರಯತ್ನಕ್ಕೆ ನಮ್ಮಂತಹ ಸಹ್ಠದಯಿ ಓದುಗರ ಸಹಕಾರ ನಿರಂತರವಾಗಿ ಸಿಗಲಿ ಎಂದು ಹಾರೈಸುತ್ತೇನೆ. I wish u for your sincere efforts & all your future endeavors. KEEP UP THE GOOD WORK.


Sudha.

MANJUDADA said...

ಹಾಯ್ innovative rev.ನಿಜವಾಗಿ ಈ ನಿನ್ನ ಪ್ರಯತ್ನಕ್ಕೆ hats off.ಕೇವಲ ಕಿರಿಯ ಸಹಾಯಕರಿಗೆ ಮಾತ್ರ ಸೀಮಿತವಾಗಿದ್ದ ಬ್ಲಾಗ್ ಅನ್ನು ಸಾರ್ವತ್ರಿಕ ಬ್ಲಾಗ್ ಆಗಿ ಪರಿವರ್ತಿಸಿದ್ದು ತುಂಬಾ ಸಂತೋಷದ ವಿಚಾರ.ಈ ನಿನ್ನ ಪ್ರಯತ್ನದಲ್ಲಿ ನಾನು ಕೂಡ ಸಕ್ರಿಯವಾಗಿ ಭಾಗವಹಿಸುತ್ತೇನೆ.ಈ ಬ್ಲಾಗ್ ನಲ್ಲಿ ತುಂಬಾ ಸೃಜನಶೀಲ ವಿಚಾರಧಾರೆಗಳು ಹರಿದು ಬರಲಿ ಎಂದು ಹಾರೈಸುತ್ತೇನೆ.best of luck.

ಪರಶು.., said...

ಮರಳಿ ಬಂದಿದೆ ವಸಂತ..!!!

ಪ್ರಕೃತಿಯಲ್ಲಿನ ಬದಲಾವಣೆ ಹೇಗೆ ಬೆಳವಣಿಗೆಯ ಸೂಚಕವೋ ಹಾಗೆಯೇ 'ನಮ್ಮ ಬ್ಲಾಗ್' ನಲ್ಲೂ ಉಂಟಾಗಿರುವ ಈ ಬದಲಾವಣೆ ಬ್ಲಾಗ್ ನ ಬೆಳವಣಿಗೆಯನ್ನೂ ಸೂಚಿಸುತ್ತಿದೆ. 'ಕಿರಿಯ ಸಹಾಯಕರು' ಎಂಬ ಚೌಕಟ್ಟನ್ನು ಮೀರಿ 'ಸಂವೇದನಾ ಶೀಲ ಸಚಿವಾಲಯದ ಸಹೋದ್ಯೋಗಿಗಳ ಸಂ-ಭಾವನೆಗಳ ಸಂಪುಟ'ವಾಗಿ ಹೊರಹೊಮ್ಮಿರುವುದು ತುಂಬಾ ಸಂತಸವನ್ನು ತಂದಿದೆ.

'ಪುನರ್ನವ'ದಲ್ಲಿ ಅರ್ಧಕ್ಕೆ ನಿಂತ ಕೆಲವು ಪ್ರಯತ್ನಗಳು 'ಸಾರ್ಥ'ದಲ್ಲಿ ಮತ್ತೆ ಚಿಗಿತು ಬೆಳೆಯಲಿ ಎಂಬುದು ನನ್ನ ಆಶಯ.

ಹೊಸ ಯೋಚನೆ, ಹೊಸ ಆಲೋಚನೆ, ಹೊಸ ಅರಿವು, ಹೊಸ ತಿಳಿವುಗಳಿಂದೊಡಗೂಡಿದ, ಹೊಸತನದ ತೀಕ್ಷ್ಣ ದೃಷ್ಷ್ಟಿಗೆ ನಿಲುಕುವ ನವನವೀನ ಅಭಿಪ್ರಾಯಗಳ ಆಭಿವ್ಯಕ್ತಿಗೆ ಈ ಬದಲಾದ 'ಸಾರ್ಥ' ವೇದಿಕೆಯಾಗಲಿ...

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago