19 April 2010

ವಾರಕ್ಕೊಂದು ವಿಷಯ ಮಾಲಿಕೆ 2




:: ವಾರಕ್ಕೊಂದು ವಿಷಯ ಮಾಲಿಕೆ 2 ::



ನಮ್ಮ ಇಸ್ರೋದವರು  ಉಡಾಯಿಸಿದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಪಥ ಬದಲಾಯಿಸಿ ವಿಫಲವಾದ ಸಂತೋಷದ ಬೆನ್ನಲ್ಲೇ ಯುರೋಪ್ನಲ್ಲಾದ ಜ್ವಾಲಾಮುಖಿಯ ಸ್ಫೋಟ ಜೀವಸೆಲೆಯ ಭೂಮಿಯನ್ನು ಕಂಗೆಡಿಸಿದ್ದು ನಮ್ಮ ತಾಂತ್ರಿಕ  ಆವಿಷ್ಕಾರಗಳಿಗೆ   ಚಾಟಿ ಪೆಟ್ಟು ನೀಡುತ್ತಿದೆ. ಪ್ರಕೃತಿ ವಿಕೋಪಕ್ಕಿಂತಲೂ ನಮ್ಮೊಳಗೇ ಆಗುತ್ತಿರುವ ವಿಕೋಪಗಳು ಹೆಚ್ಚು ಅಪಾಯಕಾರಿಯಾಗಿ ಕಾಣುವುದು ಇಂದಿನ   ಸ್ಥಿತಿಗೆ  ಕಾರಣವಾಗಿದೆ. ಕನ್ನಡದ ಯುವ ಬರಹಗಾರ ಕವಿ ಎನ್.ಕೆ. ಹನುಮಂತಯ್ಯ ನಿಧನ ಹೊಂದಿದ್ದು ನಿಜಕ್ಕೂ ಬೇಸರದ ಸಂಗತಿ. ಕವಿಯಾಗಿ ಅತ್ಯಂತ ಭರವಸೆ ನೀಡಿದ್ದ ಎನ್.ಕೆ. ರವರು ಕಿರಿ ವಯಸಿನಲ್ಲೇ ನಮ್ಮಿಂದ ದೂರವಾಗಿದ್ದು ದುರಂತ.  ಈ ಎಲ್ಲ ವಿಷಯಗಳನ್ನು ಮನಸ್ಸಿನಲ್ಲಿ ತುಂಬಿಕೊಂಡೇ,  ನಾನು ಒಂದು ಪದ್ಯದೊಂದಿಗೆಯೇ ಈ ವಾರದ ವಿಷಯವನ್ನು ವಿಸ್ತರಿಸಲು ಪ್ರಯತ್ನಿಸುತ್ತೇನೆ. 


ಗೈಡ್
ಬುಗುಬುಗನೆ ಉದ್ಗಮಿಸುತ್ತಿದೆ ದುಮ್ಮು
ಪದರಗಳಂತೆ ಮಸುಕಾದ ಸಮಸ್ಟಿ
ದಿಟ್ಟಿ ನೆತ್ತಿದಷ್ಟು  ಟಿಸಿಲೊಂದಿಲ್ಲ
ಅಡಿಯಳಕ್ಕಿಳಿದರು  ಹನಿ ಜಿನುಗುತ್ತಿಲ್ಲ.   
ನಾನೊಬ್ಬ ಗೈಡ್
ಬನ್ನಿ, ನಿಮಗೆ ಗತವೈಭವವನ್ನು
ಬಣ್ಣಿಸುವುದಕ್ಕಿಂತಲೂ  ರಂಜನೀಯವಾಗಿ
ಸಮರ ಕತೆಯನ್ನು ಹೇಳುತ್ತೇನೆ.
ಇಗೋ ಇದೆ ಜಾಗದಲ್ಲಿ
ಹೂ ಬಿರಿದಂತೆ ಬಿರಿಯಿತು!
ಅಹ! ಎಂತ ರಭಸ ಆ ಬಾ೦ಬನದ್ದು. 
ಜೇನಿನ ರೆಕ್ಕೆ ಬದಿತಕ್ಕಿಂತಲೂ ವೇಗ!
ಗಮ್ಮಲಿನ ತೀವ್ರತೆ  ಎಷ್ಟೆಂದರೆ 
ಉಸಿರೇ ಕಟ್ಟುತ್ತದೆ. 
ಎಷ್ಟೇ ಆಗಲಿ ಇಂಪೋರ್ಟೆಡ್ ಅಲ್ಲವೇ
ಘಾಟು ಜಾಸ್ತಿ! 
 
ತ್ರಾಣವಿಲ್ಲ ನಡೆಯಲು
ಪಾದಗಳು ಸುಂಡುತ್ತಿವೆ.
ಉಸುಕಿನೊಳಗೆ ದೇಹವೇ  ಉಳುಕಿದೆ.
'ಈ ಪಾದ ಪುಟ್ಟ ಪಾದ'
ಕಾಲ್ಗೆಜ್ಜೆ ಸುತ್ತು ಕರಕಲಾಗಿದೆ
ಕೂಸಿನ ಕುಲಾವಿ ಬಿಳಿಯಿಂದ
ಕೆಂಪಿಗೆ ತಿರುಗಿದ್ದು
ಜಗದ ವರ್ಣ ಭೇದದ 'ಸನ್ನಿಯಿಂದೇನೋ?   
ಜಿರಳೆ, ಗೆದ್ದಲು ವಾಂತಿ ಮಾಡುತ್ತಿವೆ!
ವಿಷಪೂರಿತ ದೇಹಗಳ  ತಿಂದು
'ಫುಡ್ ಪಾಯ್ಸನ್' ಆಗಿವೆ ಅವಕ್ಕೆ.  
ನೋಡಿ ಸ್ವಾಮಿ ನಿನ್ನೆಯಷ್ಟೇ 
ಇಲ್ಲಿ ಬಡುಕುಗಳಿದ್ದವು
ನಾನು, ನೀನು, ಅವಳು, ಇವಳು- ಹೀಗೆ
ಜನವೋ ಜನ.
ಗೂಡಿನೂಳು ಹಕ್ಕಿಗಳ  ಗಾನ
ನಮ್ಮ ನಿಮ್ಮೊಳಗಿನ ಗದ್ದಲಕ್ಕೆ
ಅಲ್ಲಲ್ಲೇ ಸಂಧಾನ!   
ನನಗೆ ಗೊತ್ತಿದೆ ನಾನು ಹೇಳುತ್ತಿರುವುದು
ನಿಮಗೀಗ ಕೇಳಿಸುತ್ತಿಲ್ಲ  ಎಂದು!
ಸುಯ್ ಎಂದು ಛೇದಿಸುತ್ತ  ಬಂದ
'ಬುಲೆಟ್' ಗಾಳಿಯ ಗಂಟಲನ್ನು ಚಿದ್ರಗೊಳಿಸಿದೆ!
ಶಬ್ದವಿಲ್ಲ ಈಗ ಎಲ್ಲಿಯು.   
ಕಣ್ಣುಗಳಿಗೆ ಎವೆಯಿಕ್ಕಿದಷ್ಟು ನಿತ್ರಾಣ.
ದೊರಗು ಎಷ್ಟೆಂದರೆ  ಬಿರುಕೋ ಬಿರುಕು.  
ಹಣ ಕೊಡಿ ಪ್ಲೀಸ್ ಹಣ
ಮಣಿ ಪ್ಲೀಸ್..
ಮೊದ್ಲೇ ಹೇಳಿದ್ನಲ್ಲ ಸಾರ್
ತಲೆಗಿಷ್ಟು ಅಂತ ಕೊಟ್ಬಿಡಿ
money per head..! 



ಮಂಜು

4 comments:

spandana said...

ಕನ್ನಡದ ಯುವ ಬರಹಗಾರ ಕವಿ ಎನ್.ಕೆ. ಹನುಮಂತಯ್ಯ ರವರ ನಿಧನಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ನಿಮ್ಮ ಗೈಡ್ ಕವಿತೆಯನ್ನು ಈ ಹಿಂದೆ ಸಹ ಓದಿದ್ದೇನೆ. ಈಗಿನ ವಾಸ್ತವಾಂಶಗಳನ್ನ symbolic ಆಗಿ ಹೇಳಿರುವುದು ಚೆನ್ನಾಗಿದೆ.

ಸುಧಾ.

solvent said...

toynk!....

Modalne pyaara nanaga tilililla....

PSLV haalaagiddakka 'santoshaa?'...andhanga adu PSLV alla GSLV.

Anamika said...

ನಮ್ಮಂಥ ಹೊಸಬರಿಗೆ ಹನುಮಂತಯ್ಯನವರ ಪರಿಚಯ ಇಲ್ಲ. ಹೀಗಾಗಿ ಮಂಜು ಅವರು ಸದರಿ ಕವಿಗಳ ಒಂದೆರಡು ರಚನೆಗಳನ್ನ ಎಲ್ಲರಿಗೂ mail ನಲ್ಲಿ Forward ಮಾಡಿದರೆ ಚೆನ್ನಾಗಿದ್ದೀತು. ( Blog ನಲ್ಲಿ Publish ಮಾಡೋದು ಬೇಡ. ಯಾಕಂದ್ರೆ ಅನುಮತಿ ಇಲ್ಲದೇ ಇನ್ನೊಬ್ಬರ ಇಡೀ ರಚನೆ Publish ಮಾಡೋದು ತಪ್ಪಾದೀತು )

ಆದರೆ ಬ್ಲಾಸ್ಟ್ ತಲೆಬರಹಕ್ಕೂ GSLV ( PSLV ??? ) ಹಾಳಾದ ಸಂತೋಷ (?)ದ ಸಮಾಚಾರಕ್ಕೂ , ಕವನಕ್ಕೂ ... ಸಂಬಂಧ ಕಲ್ಪಿಸಿದ ಮಂಜು ಅವರ ಬಗೆ ತಿಳಿಯುತ್ತಿಲ್ಲ. ಅದನ್ನ ತಿಳಿಗೊಳಿಸಿದಲ್ಲಿ ಮುಂದೆ ಅಭಿಪ್ರಾಯ ನೀಡಲು ಅನುಕೂಲವಾಗುತ್ತದೆ.

- ರೇವಪ್ಪ

ಪರಶು.., said...

ಹಾಯ್ ಮಂಜುನಾಥ್
ಹನುಮಂತಯ್ಯನವರ ಸಾವಿಗೆ ಬೇಸರಪಟ್ಟಿರುವುದು ಸಹಜವೇ ಆದರೆ ನಮ್ಮ ವಿಜ್ಞಾನಿಗಳ ಹದಿನೆಂಟು ವರ್ಷಗಳ ಪರಿಶ್ರಮದ ಕ್ರಯೋಜನಿಕ್ ಎಂಜಿನ್ ವಿಫಲವಾದ ಬಗ್ಗೆ
"ನಮ್ಮ ಇಸ್ರೋದವರು ಉಡಾಯಿಸಿದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಪಥ ಬದಲಾಯಿಸಿ ವಿಫಲವಾದ ಸಂತೋಷದ ಬೆನ್ನಲ್ಲೇ...." ಅಂತ ನೀವು ಬರೆದಿದ್ದೇಕೋ ಅರ್ಥವಾಗಲಿಲ್ಲ.... ಸ್ವಲ್ಪ ವಿವರಿಸಿ ಬರೆದರೆ ಚೆನ್ನಾಗಿತ್ತು...

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago