02 January 2010

Sachhi's Opinion

ಹಾಯ್ FRIENDS,

ಮೊದಲಿಗೆ ಎಲ್ಲರಿಗು ಹೊಸ ವರ್ಷದ ಹಾರ್ದಿಕ ವಿಳಂಬ ಶುಭಾಶಯಗಳು .

I wish you all a belated " Happy ,Prosperous and a Nutritious New year". let you all relish the nutrients of life.

ಜೀವಕ್ಕೂ ಜೀವನಕ್ಕೂ ಬೇಕಾದಂತ ಪೌಷ್ಟಿಕಾಂಶಗಳನ್ನು ನೀವೆಲ್ಲರೂ ಅಲ್ಲ ನಾವೆಲ್ಲರೂ ಆಸ್ವಾದಿಸಿ ಅನುಭವಿಸಿ ಆನಂದಿಸುವಂತಾಗಲಿ. ಈ "ಪೌಷ್ಟಿಕಾಂಶಗಳಲ್ಲಿ" ನಮ್ಮೆಲ್ಲರ ಅಚ್ಚುಮೆಚ್ಚಿನ ನಮ್ಮ "ಬ್ಲಾಗ್ ಭಯಂಕರ " REVA INNOVA ALIAS ರೇವ್ ಉರ್ಫ್ ರೇವಪ್ಪ ಸಾರಥ್ಯದ "ನಮ್ಮ ಬ್ಲಾಗ್ " ಬಹಳ ಪ್ರಮುಖವಾದದ್ದು .ಕಾಕತಾಳೀಯವಾಗಿ "ನಮ್ಮ ಬ್ಲಾಗ್" ಇಂದು (JANUARY 1ST OF 2010) ತನ್ನ ಒಂದನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದೆ . ಮೊದಲಿಗೆ " HAPPY BIRTHDAY TO NAMMA BLOG " .

"ನಮ್ಮ ಬ್ಲಾಗ್ " ನ ಮಹಿಮೆ ಮಹತ್ವಗಳನ್ನು ನಾನು ಕಳೆದ ವರ್ಷ ಹಲವಾರು ಬಾರಿ ಅವಕಾಶ ಸಿಕ್ಕಾಗಲೆಲ್ಲ ಹೇಳುತ್ತಲೇ ಬಂದಿದ್ದೇನೆ . ಯಾವುದೇ ಒಂದು ಒಳ್ಳೆ ವ್ಯಕ್ತಿ , ವಸ್ತು , ವಿಷಯ ಹಾಗು ವಿಚಾರಗಳ ಬಗ್ಗೆ ಪದೇ ಪದೇ ಹೇಳಿದ್ದನ್ನೇ ಹೇಳುವುದಕಿಂತ ಅಥವಾ ಏನೇನೋ ಹೇಳುತ್ತಲೇ ಇರುವುದಕಿಂತ ನಾನು ಎರಡೇ ಎರಡು ಸಾಲುಗಳನ್ನು ಹೇಳಲಿಚ್ಛಿಸುತ್ತೇನೆ :-

" ನಮ್ಮ ಬ್ಲಾಗ್ " - "ನಭೂತೋ ನಾ ಭವಿಷ್ಯತಿ "

" ನಮ್ಮ ಬ್ಲಾಗ್ " - " ಏಕಮೇವ ಅಧ್ವಿತೀಯ "

ಇದಕ್ಕಿಂತಲೂ ಹೆಚ್ಚಿಗೆ ನನ್ನಿಂದ ಏನು ಹೇಳಲು ಸಾಧ್ಯವಿಲ್ಲ . ಇದು ಅತ್ಹಿಶಯೋಕ್ತಿಯು ಅಲ್ಲ ; ಉತ್ಪ್ರೇಕ್ಷೆಯು ಅಲ್ಲ . ಏಕೆಂದರೆ ಇದು " ನಮ್ಮ ಬ್ಲಾಗ್ " . "ನಮ್ಮ ಬ್ಲಾಗ್" ತನ್ನ ಹೆಸರಿಗೆ ತಕ್ಕಂತೆ ನಮ್ಮ" ಬ್ಲಾಗ್ ." ನಮ್ಮದು" ಎಂಬುದು ಯಾವತ್ತು ನಮಗೆ ಹೆಚ್ಚೇ . ಯಾವತ್ತಿಗೂ ಅದು ನಮಗೆ ಖುಷಿ ಕೊಟ್ಟೆ ಕೊಡುತ್ತದೆ . ಯಾವತ್ತು ನಾವು "ನಮ್ಮದನ್ನು " ಬಿಟ್ಟು ಕೊಡಲು ಸಾಧ್ಯವಿಲ್ಲ . ಇಂತ ಒಂದು "feel" ಸೃಷ್ಟಿಸುವ ಬ್ಲಾಗ್ ಸೃಷ್ಟಿಸಿದ "ನಮ್ಮ REV " ಗೆ ನಾನು ಹೃತ್ಪೂರ್ವಕವಾಗಿ ಹಾಗು ಪ್ರಾಮಾಣಿಕವಾಗಿ " THANKS " ಹೇಳುತ್ತೇನೆ . ಅವನು ಹೀಗೆ ಮುಂದುವರಿಯಲಿ ಎಂದು ಆಶಿಸುತ್ತೇನೆ . ಈ " ಬ್ಲಾಗ್ ವಾರ್ಷಿಕೋತ್ಸವ ಸಂದರ್ಭದಲ್ಲಿ " ನಾನು ಅವನನ್ನು ಅಭಿನಂದಿಸುತ್ತೇನೆ ".

" ಯಾರು ಪೋಷಿಸಲಿ ಬಿಡಲಿ ನಾನು ನನ್ನ ಅಂತರ್ಜಲವಾದ ನನ್ನ ಸ್ಪೂರ್ತಿಯಿಂದಲೇ ನಾನು ಬ್ಲಾಗ್ ಮುನ್ನಡೆಸುತ್ತೇನೆ " ಎಂದು REV ಆತ್ಮವಿಶ್ವಾಸದಿಂದ ನುಡಿದಿರುವುದು ನನಗೆ ತುಂಬಾ ಮೆಚ್ಚುಗೆ ಆಯಿತು . ಯಾವುದೇ ಒಂದು ವಿಚಾರಕ್ಕೆ ಸಂಭಂದಿಸಿದಂತೆ ಯಾವುದೇ ಒಬ್ಬ ವ್ಯಕ್ತಿಯಲ್ಲಿ ನಾ ಕಾಣ ಬಯಸುವ ಗುಣ ಲಕ್ಷಣವೆಂದರೆ ಇದೆ. GO AHEAD REV "ನಮ್ಮ ಬ್ಲಾಗ್ " ನಲ್ಲಿ ಏನೆಲ್ಲಾ ಇರಬೇಕು . ನಮಗೆ ನಮ್ಮ ಬ್ಲಾಗ್ನಿಂದ ಏನೆಲ್ಲಾ ಬೇಕು ಎಂಬುದನ್ನು ಕಳೆದ ವರ್ಷವೇ ನಮ್ಮೆಲ್ಲರ ಪರವಾಗಿ REV ಹೇಳಿದ್ದಾನೆ.

ರೇವ್ ಹಾಗು ನಾವೆಲ್ಲರೂ ಅಂದೆವು ಆದರೆ ಅನುಸರಿಸಿದೆವೇ?
ರೇವ್ ಹಾಗು ನಾವೆಲ್ಲರೂ ಅಂದುಕೊಂಡೆವು ಆದರೆ ಅನುಷ್ಠಾನಗೊಳಿಸಿದೆವೇ ?

ಈ ಎರಡು ಪ್ರಶ್ನೆಗಳಿಗೂ ನಮ್ಮೆಲ್ಲರ ಉತ್ತರ "ಹೌದು " ಎನ್ನುವಂತಾಗಲಿ ಈ ವರ್ಷ .


ನಿಮ್ಮ ಖತರ್ನಾಕ್ ಗೆಳೆಯ ಖದರ್ ಕರಿಯ ಸಕ್ಕತ್ ಸಚ್ಚಿ

No comments:

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago