ಅಬ್ಬಾ !! ವರುಷ ಒಂದು ಕಳೆಯಿತು... ನಂಬಲಿಕ್ಕಾಗುವುದಿಲ್ಲ ಅನ್ನೋದು ಸಾಮಾನ್ಯ ಉವಾಚವಾದರೆ , ಹೇಗೆ ಕಳೆಯಿತು ಗೊತ್ತೇ ಆಗಲಿಲ್ಲ ಅನ್ನೋದು ಕೂಡ ಅಂಥದೇ ಧಾಟಿಯದು... ಒಟ್ಟಾರೆಯಾಗಿ ಸುಖವೋ ದುಃಖವೋ ಕಳೆದೆವು ಒಂದು ವರುಷ. ಅದುವೇ 2009.
ಸುಮ್ಮನೆ ಸಚಿವಾಲಯ ಕಿರಿಯ ಸಹಾಯಕರ ವೇದಿಕೆ ಅಂತ ಶುರುವಾದ ಈ ಬ್ಲಾಗ್ ನಂತರ ಅದಮ್ಯ ಅಂತ ಹೆಸರು ಪಡೆದು ತದನಂತರ ಪುನರ್ನವ ಅಂತ ಮರುನಾಮಕರಣಗೊಂಡು... ಇಂದು ....
ನಾನು, ನಿಮ್ಮ ರೇವಪ್ಪ, Revs, ಬ್ಲಾಗ್ ಶುರು ಮಾಡಿದ್ದು ಕುತೂಹಲದಿಂದ .. ಅದರ ಜೊತೆಗೆ ಸದುದ್ದೇಶ ಬೆರೆಸಿ ನಿಮ್ಮ ಮುಂದೆ ಇಟ್ಟೆ. ನೀವದನ್ನ ಪೋಷಿಸಿದಿರಿ, ಪ್ರೋತ್ಸಾಹಿಸಿದಿರಿ. ಆದರೆ ಕೆಲವು ದಿನ ನೀರೆರೆಯುವುದನ್ನು ಮರೆತರೂ ಅದ್ಹೇಗೋ ಸಾವರಿಸಿಕೊಂಡು ಜೀವ ಹಿಡಿದೆ...
ಮತ್ತೀಗ
2010 ಬಂದಿದೆ. ನಮ್ಮ ಮುಂದಿದೆ. ಈ ವರ್ಷ ಸರಿಯುವ ಮುಂಚೆ ನಮ್ಮಲ್ಲಡಗಿರುವ ಸಮಸ್ತ ಪ್ರತಿಭೆಯನ್ನ ನಮ್ಮ ಸುತ್ತಲಿನ ಜಗತ್ತಿಗೆ ಪರಿಚಯಿಸೋದು ನನ್ನ ಗುರಿ. ಅದಕ್ಕಾಗಿ ಈ 2010ರಲ್ಲಿ ಯಾರೊಬ್ಬರ ಪೋಷಣೆಗೂ ಕಾಯದೇ ನನಗೆ ಸಿಕ್ಕಿರುವ ಅಂತರ್ಜಲ ಸ್ವರೂಪಿ ಸ್ಫೂರ್ತಿಯನ್ನ ಹೀರುತ್ತಾ ದಿನೇ ದಿನೇ ಬೆಳೆಯುವ ಹುಮ್ಮಸ್ಸಿನಲ್ಲಿದ್ದೇನೆ.
ActuAlly ನಾನು ಬ್ಲಾಗ್ ಶುರು ಮಾಡಲು ಮುಖ್ಯವಾಗಿ ನನ್ನ ತಲೆಯಲ್ಲಿದ್ದ IDEA ಏನಂದ್ರೆ ನನಗೆ ಗೊತ್ತಿರುವ ಅನೇಕ ವಿಚಾರಗಳನ್ನ ನಿಮ್ಮೊಂದಿಗೆ ಹಂಚಿಕೊಳ್ಳೋದು ಮತ್ತು ನಿಮ್ಮಲ್ಲಿರುವ ಸುಪ್ತ ಪ್ರತಿಭೆಯನ್ನ ಹೊರಗೆಳೆಯೋದು.
ಇದರಲ್ಲಿ ತಕ್ಕ ಮಟ್ಟಿಗೆ ಯಶಸ್ವಿ ಆಗಿದೀನಿ ಕೂಡ. ಆದರೆ ಕಾಲೆಳೆಯುವ ಜನ ಎಲ್ಲೆಡೆಯಂತೆ ಇಲ್ಲಿಯೂ ಸಿಕ್ಕರು. ತಮ್ಮ ಚಾಳಿ ಮುಂದುವರೆಸಿದರು. ನಾನು ಕೂಡ ಅದಕ್ಕೆ ಸ್ವಲ್ಪ ನೊಂದುಕೊಂಡೆ ಅನ್ನಿ. ಜೊತೆಗೆ ಸಂಗಾತಿಯಂತಿದ್ದ ನನ್ನ ಕಂಪ್ಯೂಟರ್ ಕೂಡ ಕೈಕೊಟ್ಟು ಮನಸನ್ನ ದುಗುಡ ಆವರಿಸಿತ್ತು.
But, ಹೊಸ ವರುಷ ಕ್ಕೆ RESOLUTION ಅನ್ನೋ ಥರ ನಮ್ಮ ಬ್ಲಾಗ್ ಅನ್ನ ಮಾದರಿ ಬ್ಲಾಗ್ ನಂತೆ ರೂಪಿಸಲು ಪಣ ತೊಟ್ಟು ಮತ್ತೆ ನಿಮ್ಮ ಮುಂದೆ ಬರ್ತಿದೀನಿ.
ಕಾಲೆಳೆಯೋರು ಕಾಲ ಬಳಿಯೇ ಬಿದ್ದಿರಲಿ .... ನಾವು ಮುಂದೆ ಸಾಗೋಣ... ಹೊಸ ದಿಗಂತ ದೆಡೆಗೆ.
ನಿಮ್ಮವ,
ರೇವಪ್ಪ

2 comments:
'ನಮ್ಮ ಬ್ಲಾಗ್' ಗೆ ಒಂದು ವರ್ಷ ತುಂಬಿದ್ದಕ್ಕೆ ಶುಭಾಶಯಗಳು.
ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
'ನಮ್ಮ ಬ್ಲಾಗ್' ಗೆ ಒಂದು ವರ್ಷ ತುಂಬಿದ್ದಕ್ಕೆ ಶುಭಾಶಯಗಳು.
ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು.
Post a Comment