03 January 2010

ನಮಸ್ತೆ...

ಸೋಮವಾರ ಅಂದ್ರೆ ಒಂಥರಾ FRESHNESS ಎಲ್ಲರಲ್ಲೂ ... ಅಲ್ಲಾ ?
So, ಈ ಸೋಮವಾರದಿಂದಾನೇ ನಮ್ಮ ಹೊಸ ವರ್ಷದ ಪಯಣ ಶುರು ಮಾಡೋಣ ....ರೆಡಿನಾ ?
Ok. I Know U R Always Ready.

-----------------------

ನಮ್ಮ ಪುನರ್ನವದ 2010ರ EDITION ಹೇಗಿರ್ಬೇಕು ಅಂತ ನನ್ನ ಕಲ್ಪನೆಯಲ್ಲಿ ಹೇಳ್ತೀನಿ ಕೇಳಿ ::

  • ಮೊದಲನೆಯದಾಗಿ

ನಮ್ಮ ಬ್ಲಾಗ್ ಈಗ ಕಿರಿಯ ಸಹಾಯಕ ವೃಂದದಾಚೆಗೂ ವಿಸ್ತರಿಸಿದೆ. ಹೀಗಾಗಿ ನಾನು ನಮ್ಮ 100+ ಜನ ಕಿರಿಯ ಸಹಾಯಕರನ್ನು ಮಾತ್ರ Adress ಮಾಡಿ ಮಾತಾಡೋದು ತಪ್ಪಾಗುತ್ತೆ. ಅದಕ್ಕಾಗಿ, In General ಹೇಳ್ತೀನಿ. ನಮ್ಮ ಬ್ಲಾಗ್ ನ " ಸಮಸ್ತ Supporters " ಗಳು ಇಲ್ಲಿನ ಚಟುವಟಿಕೆಗಳಲ್ಲ
ಭಾಗವಹಿಸಬೇಕು. ಅಂದ್ರೆ ಪ್ರತಿಯೊಬ್ಬರೂ ತಮ್ಮ ಒಂದು Contribution ನ್ನ ನೀಡ್ಬೇಕು. ಅದು ಕಥೆ / ಕವನ / ಹೊಸ ಉದ್ಯೋಗ ಮಾಹಿತಿ / ಹೊಸ ಕಲಿಕಾ ಮಾಹಿತಿ / ಹಾಗೇ ಸುಮ್ಮನೆ ಬರಹಗಳು / ತಮ್ಮ ಪ್ರವಾಸ ಅನುಭವಗಳು / ತಮ್ಮ ಜೀವನದೃಷ್ಟಿ ... ಹೀಗೆ ...ನಾನು ಹೆಸರಿಸದ ಯಾವುದೇ ಲೇಖನ ಪ್ರಕಾರದಲ್ಲಿ ಕೂಡ ನೀವು ಬರೆದು ಕಳಿಸಿದರೂ ಸಾಕು.ಜೊತೆಗೆ ಅದು ಲೇಖನ ಪ್ರಕಾರವಾಗದೆಯಿದ್ದರೂ ಸರಿ. ನಿಮ್ಮ ವಿಚಾರ ಅಭಿವ್ಯಕ್ತಿಯೇ ಇಲ್ಲಿನ ಮೂಲ ಉದ್ದೇಶ.

ನೋಡ್ರೀ ..

ಯಾರೋ ಬರೆಯೋದನ್ನ , ಹೇಳೋದನ್ನ ಸುಮ್ನೆ ಕೈ ಕಟ್ಟಿ ಕೂತ್ಕೊಂಡು ಕೇಳೋದಕ್ಕೆ ಇದು ಟಿ.ವಿ.ಮಾಧ್ಯಮದ ಥರ ಅಲ್ಲ. ಇದು ನಿಮ್ಮಲ್ಲಡಗಿರೋ ಪ್ರತಿಭೆ / Talent ನ Without any cost ಹೊರಗೆಳೆಯೋ ಒಂದು ಕೈಗೆಟುಕುವ ಮಾಧ್ಯಮ. ನೀವಿಷ್ಟಪಟ್ಟ ದಿನ / ಸಮಯಕ್ಕೆ ನಿಮ್ಮ ಬರಹ ಪ್ರಕಟವಾಗುತ್ತೆ. ಓದೋದಕ್ಕೆ ಕನಿಷ್ಟ ಅಂದ್ರೂ 50 ಜನ ಸಿಗ್ತಾರೆ. ತಕ್ಷಣ ಅಲ್ದೆ ಹೋದ್ರೂ ನೀವು ಎದುರಿಗೆ ಸಿಕ್ಕಾಗ ಖಂಡಿತ ನಿಮ್ಮ ಬರಹದ ಮೇಲೆ ಅಭಿಪ್ರಾಯ ( ಟೀಕೆ / ಮೆಚ್ಚುಗೆ ... ) ನೀಡ್ತಾರೆ.


  • ಎರಡನೆಯದಾಗಿ


ಕೀಳರಿಮೆ ಬೇಡ. ಕೀಳರಿಮೆ ಅನ್ನೋದು ಒಂದು ಮನೋರೋಗ. ಅದಕ್ಕೆ ವೈದ್ಯರೂ ನಿಸ್ಸಹಾಯಕರಾಗಿಬಿಡ್ತಾರೆ. ನಿಮ್ಮಲ್ಲಿ ನೀವು ಧೈರ್ಯ ತುಂಬಿಕೊಳ್ಳೊದೇ ಅದಕ್ಕಿರೋ ಮದ್ದು.

" ಬ್ಲಾಗ್ ಆಆ !! ಹೋಗ್ರಿರೀ ...ಅಲ್ಲೇನು ಬರೆಯೋದು "

" ಇಲ್ಲಪ್ಪ.. ಹಿಂದೆ ಕಾಲೇಜ್ ಮ್ಯಾಗಝಿನ್ ನಲ್ಲಿ ಬರೆದಿದ್ವಿ... But ಈಗ...ಬ್ಯಾಡ ಗುರೂ..."

...... ಇಂಥ ಭಾವನೆಗಳನ್ನ ಬದಿಗೊತ್ತಿ ಬರೀರಿ. ಆಗ ನಿಮಗೆ ಗೊತ್ತಾಗುತ್ತೆ ಈ ಮಾಧ್ಯಮದ ಬೆಲೆ ಏನು ಅಂತ.


  • ಇನ್ನು

ಈ ಮಾಧ್ಯಮ ನಮ್ಮ ಪ್ರತಿಭೆಗೆ ವೇದಿಕೆ ಯಾಗಿರೋದರ ಜೊತೆಗೆ ನಿಮ್ಮಲ್ಲಿರೋ ಜ್ಞಾನನ ಇನ್ನೊಬ್ಬರ ಜೊತೆ ಹಂಚಿಕೊಳ್ಳೋದಕ್ಕೆ ಕೂಡ ಸಹಕಾರಿ ಅಂತ ಬೇರೆ ಹೇಳ್ಬೇಕಿಲ್ಲ. So, ನಿಮ್ಮ ಸ್ವತ್ತಾಗಿರುವ ಜ್ಞಾನವನ್ನ ಇನ್ನೊಬ್ಬರಿಗೂ ಹಂಚಿ. ಆಗ ಸಿಗೋ ಸಂತೃಪ್ತಿ ಅನುಭವಿಸಿಯೇ ನೋಡಿ.


-------------------------------------------------------------------------------------------------


ಸರಿ. ಇಷ್ಟನ್ನ ಹೇಳಿದ್ದಾಯ್ತು.

ಈಗ ಒಂದು ಹೊಸ ಅಂಕಣದ ಬಗ್ಗೆ ಹೇಳ್ತೀನಿ ಕೇಳಿ. ಇದು ಒಂಥರಾ Interesting ಅಂಕಣ. ನಿಮ್ಮನ್ನ ನಿಮ್ಮ ಗೆಳೆಯರಿಗೆ ಪರಿಚಯಿಸೋ Platform.


ಅಂಕಣ : ನಾನು ಕಂಡಂತೆ ನಾನು

[ Click on The Image Below & View it in Large size to Read The Content ]

[ Photograph is Optional, Only Interested Can Send Their Photos With This Form ]

ಇಲ್ಲಿ ನಿಮಗೆ ಯಾವ ಥರದ ಕಟ್ಟಳೆಗಳಿಲ್ಲ. ನಿಮ್ಮ ಜೀವನದ ಬಗ್ಗೆ ಏನೇನು ಹೇಳ್ಬೇಕು ಅನ್ಸುತ್ತೆ ಅದನ್ನೆಲ್ಲ ಹೇಳಿ. ಎಷ್ಟನ್ನ ಮುಚ್ಚಿಡಬೇಕು ಎಷ್ಟನ್ನ ಬಿಚ್ಚಡಬೇಕು ಎಲ್ಲವೂ ನಿಮಗೆ ಬಿಟ್ಟಿದ್ದು. It's Just How U Present Yourself To The World ಅನ್ನೋದನ್ನ ತೋರ್ಸುತ್ತೆ.

But,

ಕೆಲವು Mandatory Fields ಗಳನ್ನ Fill Up ಮಾಡಿ ಕೊಡ್ಬೇಕು. ಇದು ಏನಕ್ಕೆ ಅಂದ್ರೆ : ಒಂಥರಾ Minimum ಪರಿಚಯ ಈ Form Fill Up ಮಾಡೋದ್ರಿಂದ ಬರುತ್ತೆ. ಮತ್ತು ಇದು ಒಂದು ರೀತಿ ಎಲ್ಲರೂ ಹೇಳಲೇಬೇಕಾದ Common ಪರಿಚಯದ ಸಂಗತಿಗಳನ್ನ ಒಳಗೊಂಡಿರುತ್ತೆ. ಸರಿನಾ ? ಹಾಗಿದ್ರೆ ರೆಡಿಯಾಗಿ... ಈ ಅಂಕಣಕ್ಕೆ ನಿಮ್ಮ ಪರಿಚಯವನ್ನ ಬರೆದು ಕೊಡ್ಲಿಕ್ಕೆ ಯಾವುದೇ Time Limit ಇಲ್ಲ. ಆದ್ರೆ , ಸಾಧ್ಯವಾದಷ್ಟು ಶೀಘ್ರವಾಗಿ ಬರೆದು ಕೊಡುವಂತವರಾಗಿ. ಬರೀಲಿಕ್ಕೆ ತಡ ಮಾಡೋದ್ರಿಂದ ಏನೂ ಮುಳುಗಿ ಹೋಗದೇ ಇದ್ರೂ ನೀವು ಎಷ್ಟು TUBELIGHT ಅನ್ನೋದನ್ನ ನೀವೇ ತೋರಿಸಿಕೊಟ್ಟಹಾಗಾಗುತ್ತೆ. ಎಷ್ಟು ದಿನ ತಗೋಳ್ತೀರಿ ಅನ್ನೋದು, ಅಷ್ಟು ಸಮಯ ಬೇಕಾಯ್ತು ನಿಮ್ಮ ತಲೇಲಿ ವಿಚಾರಗಳು ಹೊಳೀಲಿಕ್ಕೆ ಅಂತ ಅರ್ಥ.


ಆಮೇಲೆ ಇನ್ನೊಂದು ವಿಚಾರ ::


ಈ ಅಂಕಣ ಸದಾ Main Screen ಮೇಲೆ FLASH ಆಗ್ತಾ ಇರುತ್ತೆ. ನಿಮಗೆ ಬೇಕು ಅನ್ನಿಸಿದಾಗ ಬೇಕು ಅನ್ಸೋ ವ್ಯಕ್ತಿಯ ಪರಿಚಯ ಓದ್ಕೋಬಹುದು. So, Why Wait ? Go Ahead & Present Yourself.

1 comment:

sakkath sacchi.blogspot.com said...

Hai Rev, as always,I will actively participate in our blog. and then regarding the "New Column" I have already sent the minimum details required.and then I request u to put my photo which u already have.
-----nimma khatarnaak geleya
khadar kariya
sakkat sacchi

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago