24 August 2009

EXERCISE NO.11

HAI Friends,Welcome to

"SAKKAT SACCHI ENGLISH GRAMMAR COMPETITION EXERCISE No.11"


ಪಾಠಕ್ಕೆ ಕೂರುವ ಮುನ್ನ ನಮ್ಮ ಬ್ಲಾಗ್ಗೆ ಅಡಿಯಿಟ್ಟ ಹೊಸಬರನ್ನು ಬರಮಾಡಿಕೊಳ್ಳೋಣ ಬನ್ನಿ:-

" ನಮ್ಮ blog " ಗೆ ಅಡಿಯಿಟ್ಟ ಹೊಸಬರು :-

1) E.Srinivasa ( kathi ) ------ Blog Follower -----------Junior Assistant (Our Batch)

2) Parvathi ( Pavithra Dear ) ----- Blog Follower-------Data Entry Operator

3) Nagaraj.C------------Blog Follower ----------Junior Assistant ( Additional Batch)

Come on Friends ; let us all welcome our new blog friends with a " HUGE APPLAUSE"


HEARTY WELCOME" TO "ALL THE THREE OF YOU" ,TO OUR BLOG.

AND NOW, " ಪಾಠ "

"SAKKAT SACCHI ENGLISH GRAMMAR COMPETITION "

EXERCISE NO.11

Fill in the blanks with the correct word from those in the brackets in the following :-

1) I have not seen him........................a month. (since,from)

2) She did not go to the college .............................the 5th of December. (since,from)

3) She has not written to me...........................the 5th of December. (since,from)

4) This office is working both in the mornings and evenings..................the 1st instant for the convenience of the public. (since,from)

5) I have known your brother ........................his childhood. (since,from)


Shoot your answers towards:-

sacchi.kgs@gmail.com


Note:- Shoot Your Answers Before 9:00 p.m TODAY

ಈಗ ಆಟದ ಸಮಯ :-

ಇಂದಿನ ಆಟ :- ಒಗಟುಗಳನ್ನು ಬಿಡಿಸುವುದು

ಬನ್ನಿ, ಗೆಳಯ ಗೆಳತಿಯರೆ ,ಎಂದಿನಂತೆ ಇಂದೂ ಸಹ ಒಗಟುಗಳನ್ನು ಬಿಡಿಸುವುದರಲ್ಲಿ ನಮ್ಮ ಒಗ್ಗಟ್ಟನ್ನು ಕಂಡುಕೊಳ್ಳೋಣ:-

೧ ) ಮಳೆ ಇಲ್ದೆ ಕೆರೆ ತುಂಬ್ತು ; ಅಗಸ ಇಲ್ದೆ ಮಡಿಯಾಯ್ತು.

೨ ) ಹಿಡಿ ಹಿಡಿದರೆ ಹಿಡಿ ತುಂಬಾ ; ಬಿಟ್ಟರೆ ಮನೆ ತುಂಬಾ.


ಕಾಯಿಗಳನ್ನು ( ಒಗಟುಗಳನ್ನು ) ಬಿಡಿಸಿ ಕಾಳುಗಳನ್ನು ( ಉತ್ತರಗಳನ್ನು ) ಈ ಕೆಳಕಂಡ ವಿಳಾಸಕ್ಕೆ ಕಳುಹಿಸುವುದು :-

sacchi.kgs@gmail.com

ಸೂಚನೆ :- ಕಾಳುಗಳನ್ನು ( ಉತ್ತರಗಳನ್ನು ) ಇಂದು ರಾತ್ರಿ 9:00 ಘಂಟೆಯ ಒಳಗೆ ಕಳುಹಿಸುವುದು.

{ ಮಲಗುವ ಮುನ್ನ ನಾನು ಕಾಳುಗಳನ್ನು "ಊಟದೊಂದಿಗೆ" ( EX.NO.11 ನ ಪ್ರಶ್ನೆಗಳಿಗೆ ನೀವು ಕಳುಹಿಸಿದ ಉತ್ತರಗಳೊಂದಿಗೆ ) ಸೇವಿಸುವುದು ಬೇಡವೇ ?! }


ಆಟಪಾಟಗಳಾದ ಮೇಲೆ------ಚೆಲ್ಲಾಟ ; ಹುಡುಗಾಟ ; ತುಂಟಾಟ

So, ಈಗ ಇತರೆ ಚಟುವಟಿಕೆಯಲ್ಲಿ ನಮ್ಮೆಲ್ಲರ ಒಡನಾಟ

Friends, ಈವತ್ತು ಒಂದು ಬಲು " ಗಂಭೀರವಾದ " ವಿಷಯದ ಬಗ್ಗೆ ನಿಮ್ಮೊಡನೆ ಮಾತಾನಾಡಬೇಕೆನ್ದಿದ್ದೇನೆ ( ನಾ ಎಂದಾದರೂ ನಿಮ್ಮೊಡನೆ ಗಂಭೀರವಾದ ವಿಷಯಗಳ ಬಗ್ಗೆ ಮಾತಾಡಿದ್ದುನ್ಟೇ?

ಇಲ್ಲ ಅಲ್ಲವೇ?

ಆದ್ರೀವತ್ತು for a change(?) ಗಂಭೀರವಾದ ವಿಷಯವನ್ನು ಕೈಗೆತ್ತುಕೊಂಡಿದ್ದೇನೆ.ಅದುವೇ :-

H1N1

ಅಷ್ಟಕ್ಕೂ "ಈ" H1N1 ಹೊಸ ವ್ಯಾಧಿಯೇನು ಅಲ್ಲ .ಅನಾದಿಕಾಲದಿಂದಲೂ ಇದು "ಯುವಕರನ್ನು" ಬಲವಾಗಿ
ಬಾದಿಸುತ್ತ ಬಂದಿದೆ. ಈಗಲೂ "ಈ " H1N1 ಯುವಕರನ್ನು ಬಾದಿಸುತ್ತಲೇ ಇದೆ. ಬಹುಷಃ ಮುಂದೆಯೂ "ಈ" H1N1 ಯುವಕರನ್ನು ಎಡಬಿಡದೆ ಬಾದಿಸುತ್ತಲೇ ಇರುತ್ತದೋ ಏನೋ.

ಹೌದು, "ಈ" H1N1 ಎಂದರೆ ಏನು ?
"ಹಂದಿ ಜ್ವರ " ಅಲ್ಲವೇ?
ಅಲ್ಲವೇ ಅಲ್ಲ
ಅದು "ಪ್ರೇಮ ಜ್ವರ"

ಏನು "ಪ್ರೇಮ ಜ್ವರ"ವೇ ?!

ಹೌದು, H1N1 ಎಂದರೆ "HUDGI --1 NADG IVAN" (ಹುಡ್ಗಿ-1 ; ನಡ್ಗ್ ಇವನ್ )

ಅಂದರೆ ( ಹುಡ್ಗಿ----1 ; ನಡುಗಿದ ಇವನ್ )

ಇನ್ನೂ ವಿಸ್ತಾರವಾಗಿ ಹೇಳುವುದಾದರೆ :- ( ಹುಡ್ಗಿ----1 ; ನಡುಗಿದ ಇವನು )

"ಪ್ರೇಮಜ್ವರ" ದ ಆರಂಭಿಕ ಲಕ್ಷಣ :- ಯುವಕ " ಹುಡ್ಗಿ--1 " ನನ್ನು ನೋಡಿ ನಡುಗುವುದು .

" ಹುಡ್ಗಿ -1 " ಎಂದರೆ " NO.1 ಹುಡ್ಗಿ "

" NO.1 ಹುಡ್ಗಿ " ಅಂದರೆ ಆ "ನಡುಗಿದ ಯುವಕನ" ಕಣ್ಣುಗಳಿಗೆ ಸುಂದರವಾಗಿ ಕಾಣಿಸಿದ ಹುಡುಗಿ.

ಹೀಗೆ ಪ್ರೇಮದ ಸೋಂಕು ತಗುಲಿದ ಯುವಕನಿಗೆ ನಡುಗುವಾಗ ಆಗುವ ಮೂರು ಪ್ರಮುಖ ದೈಹಿಕ ಬೇನೆಗಳು:-

1) Severe Perspiration---- ವಿಪರೀತ ಬೆವರುವಿಕೆ

2) Uncontrollable Palpitation--- ತಡೆಯಲಾಗದ ( jet ವೇಗದ ) ಎದೆ ಬಡಿತ

3) Abrupt Temperature Fluctuation------ ದೇಹದ ಉಷ್ನಾಂಶದಲ್ಲಿ ಧಿಡೀರ್ ಏರಿಳಿತ

(ಅಂದರೆ ದೇಹ ಧಿಡೀರ್ ಎಂದು ಬೆಚ್ಚಗಾಗುವುದು ; ಇದ್ದಕ್ಕಿದಂತೆ ಧಿಡೀರ್ ಎಂದು ತಣ್ಣಗಾಗುವುದು ;ಮತ್ತೆ......ಹೀಗೆ )

ಒಟ್ಟಿನಲ್ಲಿ ಸಿಕ್ಕಾಪಟ್ಟೆ "ಭಯ"ವಾದಾಗ ಯಾವುದೇ ಒಬ್ಬ ಮನುಷ್ಯನಿಗೆ ಸಾಮಾನ್ಯವಾಗಿ ಆಗುವ ಅನುಭವವೇ "ಈ " H1N1 ಪೀಡಿತ ಯುವಕನಿಗೆ ಆಗುತ್ತದೆ.

ಅವನಿಗೆ , ಹೀಗೆ " ಭಯ"ವಾಗಿ ಜ್ವರ ಬಂದೀತೆಂದರೆ ಆ "H1" (ಹುಡ್ಗಿ---1) ಎಷ್ಟು ಸುಂದರವಾಗಿದ್ದಿರಬೇಕು (?!!!) ಹೇಳಿ?!

"ಈ" H1N1 ಗೆ ಮದ್ದಿಲ್ಲವೇ ?
ಬಹುಷಃ ಇಲ್ಲವೆನಿಸುತ್ತದೆ ; ಒಮ್ಮೆ " ಸೋಂಕು " ತಗುಲಿದ ಮೇಲೆ ಮುಗಿಯಿತು.
ಏಕೆಂದರೆ ಯುವಕರನ್ನು ಕಾಪಾಡಬೇಕಾದ ಆ "Lakshmipathi--- ಲಕ್ಷ್ಮಿಪತಿ" (ಹರಿ) ; "Umapathi--ಉಮಾಪತಿ" (ಹರ) ; "Vanipathi----ವಾಣಿಪತಿ" (ಬ್ರಹ್ಮ ) -- ಗಳಿಂದಲೇ " H1N1" ಗೆ ಪರಿಹಾರ ಕಾಣಿಸಲಾಗದೆ ಅವರೇ ಅದಕ್ಕೆ ಒಳಗಾದರು
ಅಂದರೆ
"ಹರಿಹರಬ್ರಹ್ಮಾದಿಗಳಿಂದಲೇ" H1N1 ಗೆ ಮುಕ್ತಿಕಾಣಿಸಲಾಗಲಿಲ್ಲ
ಅಂದಮೇಲೆ
ಇನ್ನು "Allopathy" ; "Homeopathy " ಗಳಿಂದ ಏನು ಮಾಡಲಾದೀತು ?

ಆದರೆ , ಗಾಂಧೀಜಿಯವರ "ಮೂರು ಕೋತಿ" ಗಳ ತತ್ವವನ್ನು ಕಟ್ಟುನಿಟ್ಟಾಗಿ ಯುವಕರು ಪಾಲಿಸಿದರೆ "ಈ" H1N1 ನಿಂದ ಪಾರಾಗಲು ಸಾಧ್ಯವಿದೆ.

"ಮೂರು ಕೋತಿಗಳ" ತತ್ವದಲ್ಲಿ ಬರುವ "ಕೆಟ್ಟದ್ದನ್ನು" ಪದದ ಬದಲಾಗಿ "ಹುಡುಗಿಯನ್ನು " ಎಂದು ಸೇರಿಸಿದರೆ ಹುಟ್ಟುವುದೇ H1N1 ತಡೆಗಟ್ಟುವ "FORMULA"

( ಹುಡ್ಗೀರೆ :- NO B.P ! BE HAPPY! ------ರಸಿಕನಾದ ನಾನು ಹುಡುಗಿಯರನ್ನು ಕೆಟ್ಟವರು ಎಂದು ಭಾವಿಸಲು ಸಾಧ್ಯವೇ ?--------ಸುಮ್ಮನೆ ಒಂದು ಉದಾಹರಣೆಗಾಗಿ ಬಳಸಿಕೊಳ್ಳುತ್ತಿರುವೆ ಅಷ್ಟೇ -----Take it easy girls )


ಅಂದರೆ:-

1) ಹುಡ್ಗೀರನ್ನು ನೋಡಬೇಡ
2) ಹುಡ್ಗೀರ ಮಾತನ್ನು (ಮುಖ್ಯವಾಗಿ ನಗುವನ್ನು ) ಕೇಳಬೇಡ (ಆಲಿಸಬೇಡ)
3) ಹುಡ್ಗೀರ ಜೊತೆ / ಬಗ್ಗೆ ಮಾತಾಡಬೇಡ.

ಮೇಲೆ ತಿಳಿಸಿರುವ ಮೂರೂ ತತ್ವಗಳನ್ನು ಒಂದನ್ನೂ ಬಿಡದಂತೆ ಎಡೆಬಿಡದೆ ಯುವಕರು ಸತತವಾಗಿ ಪಾಲಿಸಿದರೆ
ಅವರಿಗೆ H1N1 ತಟ್ಟುವುದಿಲ್ಲ.

ಆದರೆ ಅದು ಹೇಗೆ ಸಾಧ್ಯ ಹೇಳಿ ?
ಹೇಳಿ ಕೇಳಿ ಇದು "ಕೋತಿ ತತ್ವ"
ಹುಡ್ಗೀರ ವಿಷಯದಲ್ಲಿ ಕೋತಿಯಂತೆ ಆಡುವ ಯುವಕರಿಗೆ " ಕೋತಿ ತತ್ವ" ಹೇಗೆ ಪಾಲಿಸಲಾದೀತು ?
ಆಗಾದರೆ "ಈ" H1N1ಗೆ ಕೊನೆಯೇ ಇಲ್ಲವೇ ?
ಇದಕ್ಕಿರುವ ಒಂದೇ ಮಾರ್ಗ ----ಹುಡ್ಗೀರು
ಹುಡ್ಗೀರು ಮನಸ್ಸು ಮಾಡಬೇಕು ಅಷ್ಟೇ
ಹುಡ್ಗೀರು ಹುಡುಗರನ್ನು(ಯುವಕರನ್ನು) ಕಾಡದೇ ಅವರ ಪಾಡಿಗೆ ಅವರನ್ನು ಬಿಟ್ಟುಬಿಡುವುದು ಒಳ್ಳೆಯದು

ಹುಡ್ಗೀರನ್ನೇ ತಮ್ಮ "ಉಸಿರೆಂದು" ಭಾವಿಸಿಕೊಳ್ಳುವ ಹುಡುಗರಿಗೆ ಹುಡ್ಗೀರು "ಹುಚ್ಚು" ಹಿಡಿಸದೆ ಹುಡುಗರನ್ನು ನೆಮ್ಮದಿಯಾಗಿ ಉಸಿರಾಡಲು ಬಿಟ್ಟರೆ ಹುಡುಗರು H1N1 ( ಹುಡ್ಗಿ--1 ನಡ್ಗ್ ಇವನ್ ) ಗೆ ಅಂದ್ರೆ " ಪ್ರೇಮ ಜ್ವರ "ಕ್ಕೆ ತುತ್ತಾಗುವುದಿಲ್ಲ.

( " ಹುಚ್ಚ " ಚಿತ್ರದ " ಹುಡ್ಗೀರೋ ಹುಡ್ಗೀರೋ ಹುಚ್ಚು ಹಿಡ್ಸೋ ಹುಡ್ಗೀರು" ಹಾಗು "ಉಸಿರೇ ಉಸಿರೇ...ಈ ಉಸಿರ ಕೊಲ್ಲ ಬೇಡ " ಹಾಡುಗಳು ನೆನಪಾದವೇ ?)

ಅದೂ ಅಲ್ಲದೆ ಈ ಜ್ವರಕ್ಕೆ "MASK"ನ್ನು ಹಾಕಿಕೊಂಡು ಉಸಿರಾಡಿರಿ ಎಂದು ಹೇಳೋಣವೆಂದರೆ ಇನ್ನೂ ಪ್ರೇಮಕ್ಕಾಗಲಿ ಪ್ರೇಮಜ್ವರಕ್ಕಾಗಲಿ ಯಾರು "MASK"ನ್ನು ಕಂಡುಹಿಡಿದಿಲ್ಲವಲ್ಲ .

ಒಟ್ಟಿನಲ್ಲಿ ಹುಡುಗರನ್ನು ಹುಡ್ಗೀರೆ ಕಾಪಾಡಬೇಕು ?

ಓಯ್ , ಇವನೆಂತ ಮಾರಾಯ ? ಈ "ಸಕ್ಕತ್ ಸಚ್ಚಿ "?
Monday Monday ನಮ್ಮ ಮಂಡೆ ಬಿಸಿಮಾಡಿಬಿಟ್ಟ
"ಆ" H1N1 ಗಿಂತ ಇವನ "ಈ" H1N1 ಉಪಟಳವೇ ಜಾಸ್ತಿಯಾಯಿತು ಅಲ್ಲವೋ ?

ಓಯ್ , ಅದು ನನಗೆಂತ ಗೊತ್ತು ?
ಅದನ್ನು ನೀವೇ ಹೇಳ್ಲಿಕ್ಕೆ ಉಂಟು ?

---------ನಿಮ್ಮ ಮಾಣಿ
ಸಕ್ಕತ್ ಸಚ್ಚಿ

3 comments:

ADM - nistrator said...

ಮೂರ್ತಿಗಳೇ ಸ್ವಲ್ಪ ಸೀರಿಯಸ್ಸಾಗಿ ಕವನ ಬರೀರಿ ...
ನನಗ್ಯಾಕೋ ನೀವು ಬರೆಯೋ ಶೈಲಿ ಹಿಡಿಸ್ತಿಲ್ಲ...
ಬರವಣಿಗೆ ಅನ್ನೋದು ಎಲ್ಲರಿಗೂ ಸಿದ್ಧಿಸೋಲ್ಲ ...ಅಲ್ಲದೆ ಅದು ಸರಸ್ವತಿ ಪೂಜೆ ಥರ ...ಥರ ಏನ್ ಬಂತು ಪೂಜೇನೆ ...
ಅದನ್ನ ನೀವು ಹೀಗೆ ಬೇಕಾಬಿಟ್ಟಿಯಾಗಿ ಮಾಡೋದು ನನಗ್ಯಾಕೋ ಸೇರೋಲ್ಲ ಅಪ್ಪಾ ...

ನೋಡಿ ನೀವು ಮೋಜಿಗಾಗಿ ಆ ಥರ ಬರೀತಿರಬಹುದು ...ಆದ್ರೆ ನಮ್ಮ ಕನ್ನಡ ಭಾಷೆ ಸುಂದರ ಭಾಷೆ ಶಬ್ದಗಳು ಮುತ್ತು ಹವಳ ...ಆದ್ರೆ ಅದನ್ನ ನೀವು ಜೋಡಿಸಿರೋ ಸಾಲು ಮಾತ್ರ ಬೇಕಾಬಿಟ್ಟಿ ...
ನೀವು ನನ್ನ ಇಮೇಜಿಗೆ ತಕ್ಕ ಕವನ ಬರೀತಿದೀನಿ ಅಂತ ಅನ್ಕೊಂಡಿರಬಹುದು.....
ಆದ್ರೆ ..
[ನೀವು ಕಾಲೇಜಲ್ಲಿ ಹೀಗೆ ಇದ್ರೇನೋ ನನಗೆ ಗೊತ್ತಿಲ್ಲ]
ಆದ್ರೆ ಮನುಷ್ಯ ಸಮಯ ಸಂದರ್ಭಕ್ಕೆ ಅನುಗುಣವಾಗಿ ವರ್ತನೆ ಶಿಷ್ಟಾಚಾರಗಳನ್ನ ಬದಲಿಸಿಕೊಳ್ಳೋದು ಖಂಡಿತ ಆಷಾಢಭೂತಿತನ ಅಲ್ಲ ...
ನಾನು ಮೊದಲಿನಿಂದ ಹೀಗೆ ...ಹಾಗೆ ಕಡೆತನ ಇರ್ತೀನಿ ಅನ್ನೋದು ತಪ್ಪು ...
ವ್ಯಕ್ತಿಯೊಬ್ಬನಿಗೆ ತನ್ನದೇ ಆದ अदा (Adaa..) ಇರ್ಬೇಕು ಒಪ್ತೀನಿ ...
ಆದ್ರೆ ಸಮಾಜದಲ್ಲಿ ಅದು ಸಹ್ಯವಾಗಿರಬೇಕು ...ಮತ್ತು ಅನುಕರನೀಯವಾಗಿರಬೇಕು ...
ಇಲ್ದೆ ಇದ್ರೆ ಜೀವ ಮತ್ತು ಜೀವನ ಎರಡೂ ಹಾಸ್ಯಸ್ಪದ ಆಗುತ್ತೆ ...

ನಿಮ್ಮಂಥ ನಿಷ್ಕಲ್ಮಶ ಪರೋಪಕಾರಿ ಯನ್ನ ನಾನು ಇಲ್ಲೀವರೆಗೆ ನೋಡಿರಲಿಲ್ಲ ...

ಈ ಬಂಗಾರದ ಮೇಲೆ ಅಲ್ಲಲ್ಲಿ ಕೂತಿರೋ ಧೂಳನ್ನ ಸ್ವಲ್ಪ polish ಮಾಡಿದರೆ ಅದು ಹೊಳೆಯುತ್ತೆ ಅಂತ ಅಭಿಪ್ರಾಯ / ಸಲಹೆ ...

ನಿಮ್ಮವ,
ರೇವಪ್ಪ

yashavanth said...

ಸಚ್ಚಿ ಏನ್ರಿ ನಿಮ್ research ಉ ಸಕ್ಕತ್ ... ರೀ .... ಒಂದು ವಿಷ್ಯ ... ಹುಡುಗ ರನ್ನ ಹುಡ್ಗಿರು ಕಾಪಾಡುತ್ತಾರೆ ಅನ್ನೋದನ್ನ ನಂಬಬಹುದಾ ....?

ರೇವ್
ಬರಹದ ವಿಚಾರದಲ್ಲಿ ಇದು ನನಗೆ ಹಿಡಿಸಲಿಲ್ಲ ಅಂತ ಹೇಳೋದೇನೋ ಪರವಾಗಿಲ್ಲ ಆದ್ರೆ ಹೀಗೇ ಬರೀರಿ .... ಅನ್ನೋದು ಸರಿಯಲ್ಲ... ಬರಹ ಹೀಗೆ ಇರಬೇಕು ಎಂಬ ಕಟ್ಟುಗಳು ಮತ್ತು ಸಹ್ಯತೆ ಇವ್ಯಾವುದು ಅರ್ಥವಿಲ್ಲದ್ದು ..... ಮಾನವನ ಆಲೋಚನೆಗೆ ನಿಲುಕದ ಅಸಹ್ಯತೆ ಎಲ್ಲಿದೆ.. ? ನನ್ನ ಪ್ರಕಾರ ಅಹಂ ಅನ್ನು ಬದಿಗಿಟ್ಟು ಬರೆವ ಎಲ್ಲ ಬರಹಗಳು ಉತ್ತಮವೇ ....

sakkath sacchi.blogspot.com said...

ಹಾಯ್ REV, ನಿನ್ನ ಸಲಹೆಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ . ಹಾಗು ನಿನಗೆ ನನ್ನ ಬಗ್ಗೆ ಇರುವ ಒಳ್ಳೆಯ ಭಾವನೆಗೆ ಹಾಗು ನಂಬಿಕೆಗೆ ಚಿರಋಣಿಯಾಗಿರುತ್ತೇನೆ. ನಿಜ ಹೇಳಬೇಕೆಂದರೆ ನಾನು ನನ್ನ ಕಾಲೇಜು ದಿನಗಳಲ್ಲಿ ಇದ್ದ ರೀತಿಗೂ ಈಗಿರುವ ರೀತಿಗೂ ಅಜಗಜಾಂತರ ವ್ಯತ್ಯಾಸವಿದೆ. ಅಲ್ಲದೆ ನಾನು ಈಗೆ ಇರಬೇಕು ಹಾಗೆ ಇರಬೇಕು ಎಂದು ಹಟಕ್ಕೂ ಬಿದ್ದಿಲ್ಲ .ಕಾಲಾಯ ತಸ್ಮಯ್ ನಮಃ ಎನ್ನುವ ಹಾಗೆ ಎಲ್ಲವು ಕಾಲನಿರ್ಧಾರಿತ. ಇಲ್ಲಿ ನನ್ನದೆಮ್ಬುದೇನು ಇಲ್ಲ. ಇದು ನನ್ನ ಜೀವನದ ವಿಚಾರವಾಯಿತು. (ಹೆಚ್ಚು ಕಮ್ಮಿ ಎಲ್ಲರ ಬದುಕು ಹಾಗೆ ಅಂದುಕೊಂಡಿದ್ದೇನೆ ).
ಇನ್ನು ನನ್ನ ಲೇಖನದ ವಿಚಾರಕ್ಕೆ ಬರುವುದಾದರೆ , ಇದುವರೆಗೂ "ಕವನ" ಎಂದು "ನಮ್ಮBLOG" ನಲ್ಲಿ ಪ್ರಕಟಗೊಂಡಿರುವ ಕವಿತೆಗಳೆಲ್ಲವು ನಾನು ಒಂದಾನೊಂದು ಕಾಲದಲ್ಲಿ ಬರೆದಿದ್ದ ಕವಿತೆಗಳೇ. ( ಪ್ರಕಟಗೊಳ್ಳದ " ಟಪೋರಿ ಹಾಡು" ಸಹ ). ಇನ್ನು ನನ್ನ ಬಳಿ ಉಳಿದುಕೊಂಡಿರುವ ಕೆಲವೊಂದು ಸುಧೀರ್ಘವಾದ RE-FIX ಹಾಡುಗಳು ಅಷ್ಟೇ.
ಇತ್ತೀಚೆಗೆ ನಾನು ಯಾವ ಕವಿತೆಗಳನ್ನು ರಚಿಸಿಲ್ಲ.ನೀನೇ ತಿಳಿಸಿರುವಂತೆ ಬರವಣಿಗೆಎಂಬುದೂ ಎಲ್ಲರಿಗು
ಸಿದ್ದಿಸುವುದಿಲ್ಲ ಆ ತಾಯಿ ಸರಸ್ವತಿಯು ಇನ್ನು ನನ್ನ ಮೇಲೆ ಸಂಪೂರ್ಣವಾಗಿ ಅನುಗ್ರಹಿಸಿಲ್ಲ ಎಂದು ಕೊಳ್ಳುತ್ತೇನೆ . ಅವಳು ಹಾದು ಹೋಗುವಾಗ ನನ್ನ ಮೇಲೆ ಸುಮ್ಮನೆ ಒಂದು ಸಣ್ಣ ಕಿರುನೋಟ ಬೀರಿ ಹೊರಟು ಬಿಟ್ಟಳೇನೋ ಎಂದನಿಸುತ್ತದೆ ನನಗೆ. ಆದ್ದರಿಂದ ಅಷ್ಟೋ ಇಷ್ಟೋ ನನಗೆ ತೋಚಿದಷ್ಟು GEECHUTIDDENE.
NANNANU ನಾನು SAMARTHISIKOLLUTTIDENE ENDUKOLLA ಬೇಡ.ಇರುವ
VICHAARAVANNU HELIDE
.
ನನ್ನ JEEVANADALLIDDANTE ನನ್ನ LEKHANADALLU ಅಷ್ಟೇ. ಹೀಗೆ BAREYABEKU ಹಾಗೆ ಬರೆಯಬೇಕು ಎಂದು NAANENU ANDUKONDILLA .

NODONA ;
ನೀ ಬಯಸುವಂತೆ ನಾನು ಬರೆಯಲು ಪ್ರಯತ್ನಿಸುತ್ತೇನೆ.

SADHYAKKE ನನ್ನ ಬಳಿಯಿರುವ "SABHYA" ಕವಿತೆಗಳನ್ನು ನಿನಗೆ KALISUTTENE. JOTEGE OOTAKKE UPPINAKAYIDDANTE COMPETITION JOTEYALI KELAVU SANNA PUTTA HAADU KAVITEGALU MOODIBARALIVE.
YOUTH TOUCH IRALI BARAVANIGEYALLI EMBA KAARANAKKE ನಾನು
HECCHAGI SHRUNGAARA ಮತ್ತು HASYAVANNU AARISIKOLLUTTENE ಅಷ್ಟೇ .
DODDA DODDA KAVIGALONDIGE ಹೋಲಿಸಿಕೊಂಡು MAATANADUVA YOGYATE NANAGILLADIDDARU ONDERADU MAATUGALANNU HELALU ICCHISUTTENE.

1) SAHITYADALLI ಎಲ್ಲರು NARASIMHARE
KELAVARU ಪೂ. ತೀ. ನರಸಿಂಹಚಾರ್ ಆದರೆ
ಮತ್ತೆ KELAVARU KE. YES . NARASIMHASWAMY IDDANTE

2) NAA AAGADIDDARENU GOPAALAKRISHNA ಅಡಿಗ
NAANAGIRUVENALLA ನಿಜ KANNADIGA
NAA TODISADIDDARENU MALLE HOOVA ಕನ್ನಡ ತಾಯ MUDIGA
NEMMADIYA KAANVE ನಲ್ಲ ತಲೆಯಿಟ್ಟು ಅವಳ ಪಾದದ ಅಡಿಗ

ಇನ್ನು BHASHEYA ಬಗ್ಗೆ HELUVUDAADARE:-

ನಾನು ವ್ಯಾಕರಣದಲ್ಲಿ KANNADIGANAAGADIDDARU ಅಂತಕರಣದಲ್ಲಿ ಕನ್ನಡಿಗನಾಗಿದ್ದೇನೆ
ನಾನು ಉಚ್ಚಾರಣೆಯಲ್ಲಿ KANNADDIGANAGADIDDARU ಆಚರಣೆಯಲ್ಲಿ ಕನ್ನಡಿಗನಾಗಿದ್ದೇನೆ.

SADHYAKKASHTU ಸಾಕು ಮುಂದೆ ನೋಡೋಣ:-
SAHISI BAALUVAVANE SAAHASI
ನೀವೆಲ್ಲರೂ SAAHASIGALU .
ನೀವು BAYASUVANTA" SACHI" NAANAGUVAVAREGU NANNANNU ಸಾಹಸಿಗಳಂತೆ SAHISIKONDU SAHAKARISUVIRI ಎಂದು NAMBIRUTTENE
(tantrika karanagalinda beligge post madabekidda comment post maadalagade word nalli save maadi eega post maduttiddene) innu yash na comment bagge heluvudaadare yash nambikeye devaru -eqn-1preetiye devaru-eqn-2
so from eqn-1 and eqn-2, we get -nambikeye preeti; preetiye nambike.preetiyannu andare preetisidavarannu nambade mattinnyarannu nambuttiya?---your's sacchi ನಿಮ್ಮ "SAKKAT SACCHI"

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago