ಮನಸೇ ಕಾಡದಿರು
ಮನಸೇ...................
..............ಮಾತಾಡು|
ಒಲವೇ....................
..............ಕೃಪೆತೋರು||
..............ಮಾತಾಡು|
ಒಲವೇ....................
..............ಕೃಪೆತೋರು||
ಆ ನಿನ್ನ ಕುಡಿಗಣ್ಣ ನೋಟ
ಕೊಲ್ಲುತಿದೆ ಎನ್ನ ಹೃದಯ |
ಸಹಿಸುತಿದೆ ಏನೋ ನೋವನು
ಏರುತಿದೆ ಎದೆಯ ಬಡಿತ ||
ಕೊಲ್ಲುತಿದೆ ಎನ್ನ ಹೃದಯ |
ಸಹಿಸುತಿದೆ ಏನೋ ನೋವನು
ಏರುತಿದೆ ಎದೆಯ ಬಡಿತ ||
ಎನ್ನ ಹೃದಯವನು ಕೆಲ ದಿನವು
ಚುಂಬಿಸಿದ ವಸಂತವು ನೀ |
ಎನ್ನ ಜೊತೆಗೆ ಕೀಟಲೆಯ
ಮಾಡಿರುವ ಎಲ್ಲಿಹುದು ನಿನ್ನಯ ದನಿ ||
ಚುಂಬಿಸಿದ ವಸಂತವು ನೀ |
ಎನ್ನ ಜೊತೆಗೆ ಕೀಟಲೆಯ
ಮಾಡಿರುವ ಎಲ್ಲಿಹುದು ನಿನ್ನಯ ದನಿ ||
ಆ ಅಲ್ಪ ದಿನವು ನಿನ್ನನು
ನನ್ನಲಿ ತುಂಬಿಕೊಂಡೆ |
ಈ ಕಲ್ಪಿಸೋ ದಿನದಲಿ ನೀನು
ನನಗೇಕೆ ನೋವ ತಂದೆ ||
ನನ್ನಲಿ ತುಂಬಿಕೊಂಡೆ |
ಈ ಕಲ್ಪಿಸೋ ದಿನದಲಿ ನೀನು
ನನಗೇಕೆ ನೋವ ತಂದೆ ||
ನಾ ಕಂಡದ್ದೆಲ್ಲಾ ಕನಸಾಯಿತೆ?
ಈ ಒಲವು ನಿನ್ನಲಿ ಕೊನೆಯಾಯಿತೇ ?|
ನನ್ನ ನೋವು ನಿನಗೆ ಅರಿವಾಗದೆ ?
ಕಣ್ಣ ಮಾತು ಮುನಿದಾಯಿತೆ?||
ಈ ಒಲವು ನಿನ್ನಲಿ ಕೊನೆಯಾಯಿತೇ ?|
ನನ್ನ ನೋವು ನಿನಗೆ ಅರಿವಾಗದೆ ?
ಕಣ್ಣ ಮಾತು ಮುನಿದಾಯಿತೆ?||
ಎನ್ನ ನಯನವ ನೀ ನೋಡೇ
ಒಲವಿನ ಮಾತಾಡೆ |
ಎನ್ನ ಹೃದಯದ ಗುಡಿ ನೋಡೆ
ಮನಸಿನ ಜೊತೆ ಕೂಡೆ ||
ಒಲವಿನ ಮಾತಾಡೆ |
ಎನ್ನ ಹೃದಯದ ಗುಡಿ ನೋಡೆ
ಮನಸಿನ ಜೊತೆ ಕೂಡೆ ||
ಓ ಮನಸೇ ಕಾಡದಿರು
ನನ್ನ ಹೀಗೆ |
ಕರುಣೆತೋರು ನನ್ನಲಿ
ಒಲವಿನ ಹಾಗೆ ||
ನನ್ನ ಹೀಗೆ |
ಕರುಣೆತೋರು ನನ್ನಲಿ
ಒಲವಿನ ಹಾಗೆ ||
4 comments:
ಹಾಯ್! ಮಸ್ತ್ ಮಂಜ, ನೀನು ಈ ರೀತಿ ಸುಸ್ತಾದರೆ ಹೇಗೆ? ವಿರಹದಿಂದ ನೀನು ಹೀಗೆ ಬಳಲುವುದು ತರವೇ? ಅಥವಾ ವಿರಹವೆಂಬುದು ಪ್ರೀತಿಯು ನೀಡುವ ಮುಸುಕಿನ ವರವೇ? ನಿನಗೆ loveಅನ್ನು ( ಹಿತವಾದ ನೋವನ್ನು ) ನೀಡಿದ ಆ ಪೋರಿ ಯಾರು ?
ಕವಿತೆ ಚೆನ್ನಾಗಿ ಮೂಡಿ ಬಂದಿದೆ ಕಣೋ ಮಂಜ
ನಾನು ಕೇಳಿರುವ ಕೊನೆಯ ಪ್ರಶ್ನೆಯ ಉತ್ತರದ ನಿರೀಕ್ಷೆಯಲ್ಲಿ ----ಸಕ್ಕತ್ ಸಚ್ಚಿ
ಕವಿತ್ವದ ಸವಿಯನ್ನು ಸವಿದರೆ ಸಾಕು ಸಚ್ಚಿ, ನಿನ್ನ ಹಾಗೆ ನಾನೇನೂ ಹಲವಾರು ಹುಡುಗೀರ್ ಹಿಂದೆ ಹೋಗಿ-ಹೋಗಿ ಚುಡಾಯ್ಸೋನ್ ಅಲ್ವೋ!. ಈ ಕವಿತ್ವದ ಸ್ಫೂರ್ತಿಗೆ ಒಂದು ವಸ್ತು ಅಥವಾ ಪ್ರಕೃತಿ ಕಾರಣವಾಗಿರಬಹುದಲ್ಲವೇ? ನಿನ್ನ ಪ್ರತಿಕ್ರಿಯೆಗೆ ಧನ್ಯವಾದಗಳು ಸಚ್ಚಿ.
ಮಂಜು, ಕವನ ಒಳ್ಳೆಯ ಚಿತ್ರಗೀತೆಯಂತಿದೆ. ಚೆನ್ನಾಗಿದೆ. ನೀವು ಗೀತೆ ರಚಿಸಲು ಪ್ರಯತ್ನಿಸಿದ್ದಿರೇ...?
ಸಂತು, ನಾನು ಗೀತೆ ರಚಿಸೋದಕ್ಕೆ ಪ್ರಯತ್ನಿಸಿಲ್ಲ. ನಿನಗೇ ತಿಳಿದಿರೋ ಹಾಗೆ ಒಂದು ಕವಿತೆ ರಚನೆಯಾಗಬೇಕಾದರೆ ಅದಕ್ಕೆ ಅನುಭವ ಎಷ್ಟು ಮುಖ್ಯಾನೋ ಅಷ್ಟೇ ಭಾವನೆಯು ಕೂಡ ಮುಖ್ಯ. ನಮ್ಮ ಮನಸಲ್ಲಿ ಮನೆ ಮಾಡಿರೋದು ಕವಿತೆಯಾಗಿ ಹೊರಗೆ ಬರೋವರ್ಗು ಮನಸಲ್ಲಿ ತಳಮಳ ಆಗ್ತಾ ಇರುತ್ತೆ ಅಲ್ವಾ, ಎಲ್ಲಾ ಸಮಯದಲ್ಲೂ ಕವಿತೇನ ಬರೆಯೋಕೆ ಆಗಲ್ಲ, ಅದಕೆ ಮನಸು ಪಕ್ವ ಆಗಿರಬೇಕು. ನಿನ್ನ ಹಾಗೆ ನಾನೂ ಕೂಡ ಮನಸಲ್ಲಿ ಮೂಡಿದ, ಅನುಭವಿಸಿದ ಬಗೆಯನ್ನು ಕವಿತೆ ರೂಪದಲ್ಲಿ ಬರೀತೀನಿ ಅಷ್ಟೇ. ಅದು ಯಾವುದೇ ವಿಷಯಕ್ಕೆ ಸಂಬಂಧಿಸಿರಬಹುದು, ಏನಂತೀಯ.................
Post a Comment