03 August 2009

ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ - ಮಧುಚಂದ್ರ ViewPoint



ಸ್ನೇಹಿತರೆ,

ಇತ್ತೀಚಿನ ದಿನದಲ್ಲಿ ಕರ್ನಾಟಕ ರಾಜ್ಯದಲ್ಲಿ ಪ್ರಾಥಮಿಕ ಶಿಕ್ಷಣದಲ್ಲಿ ಯಾವ ಭಾಷೆಯಲ್ಲಿ ಬೋಧನೆ ಮಾಡಬೇಕು ಎಂಬ ಗೊಂದಲ ಹೈಕೋರ್ಟ್ ಮತ್ತು ರಾಜ್ಯಸರ್ಕಾರದ ಮುಸುಕಿನ ಗುದ್ದಾಟದ ನಂತರ ಈಗ ಚೆಂಡು ಸುಪ್ರಿಂ ಕೋರ್ಟ್ ಅಂಗಳದಲ್ಲಿ ಬಿದ್ದಿದೆ ಮತ್ತು ಪೋಷಕರಿಗೆ ಅವರ ಮಕ್ಕಳಿಗೆ ಯಾವ ಮಾದ್ಯಮದಲ್ಲಿ ಕಲಿಸಬೇಕು ಎಂಬ ಬಗ್ಗೆ ಅವರಿಗೆ ಸ್ವಾತಂತ್ರ್ಯ ಕೊಡಿ ಅಂತ ನಿರ್ದೇಶನ ನೀಡಿದೆ .ಆದರು ಕನ್ನಡ ಸಾಹಿತಿಗಳು ಮತ್ತೆ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಬೊಧನೆಗೆ ನಿರ್ದೇಶನ ನೀಡಬೇಕೆಂದು ಮತ್ತೆ ಮನವಿ ಸಲ್ಲಿಸಿದ್ದಾರೆ .ಶಿಕ್ಷಣ ಸಚಿವರು ಈ ಬಗ್ಗೆ ಕೇಂದ್ರ ಸರ್ಕಾರ ಮದ್ಯ ಪ್ರವೇಶಿಸ ಬೇಕೆಂದು ಮನವಿ ಮಾಡಿದ್ದಾರೆ. ಈ ಬಗ್ಗೆ ನನ್ನ ವೈಯಕ್ತಿಕ ಅಭಿಪ್ರಾಯ ಗಳನ್ನೂ ಹೇಳಲು ಬಯಸುತ್ತೇನೆ

ವಿಶ್ವದ ಅತಿ ಹೆಚ್ಚು ಜನರಿಂದ ಮಾತನಾಡಲ್ಪಡುವ ಭಾಷೆಗಳಲ್ಲಿ ಕನ್ನಡ ಭಾಷೆ ೨೭ನೆ ಸ್ಥಾನ ಪಡೆದಿದೆ .ಭಾರತ ಸಂವಿದಾನದಲ್ಲಿ ಕನ್ನಡ ಅಧಿಕೃತ ಭಾಷೆಯೆಂದು ಮಾನ್ಯತೆ ಪಡೆದಿದೆ .ಇತ್ತೀಚಿಗೆ ಶಾಸ್ತ್ರಿಯ ಸ್ಥಾನಮಾನವು ದೊರಕಿದೆ ಕರ್ನಾಟಕ ರಾಜ್ಯದಲ್ಲಿ ಆಡಳಿತ ಭಾಷೆಯಾಗಿದೆ .ಆದರು ಸಹ ಒಂದು ಅಂದಾಜಿನ ಪ್ರಕಾರ ಬಹುಬೇಗ ನಶಿಸಿ ಹೊಗುತ್ತಿರುವ ಭಾಷೆಗಳಲ್ಲಿ ಕನ್ನಡ ಭಾಷೆಯು ಒಂದಾಗಿದೆ .ಇದೆ ವೇಗದಲ್ಲಿ ಇದು ಮುಂದುವರೆದರೆ ಇನ್ನು ೫೦ ವರ್ಷಗಳಲ್ಲಿ ಕನ್ನಡ ಭಾಷೆ ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು ಅಭಿಪ್ರಾಯ ಪಡಲಾಗಿದೆ ....ಸುಮಾರು ೨೦೦೦ ಸಾವಿರ ವರ್ಷಗಳ ಇತಿಹಾಸವಿರುವ ಒಂದು ಭಾಷೆಗೆ ಈ ಸ್ಥಿತಿ ಬರಲು ಕಾರಣವೇನೆಂದು ಕೆದಕುತ್ತ ಹೋದರೆ ನಮ್ಮೆಲ್ಲರ ನಿರ್ಲಕ್ಷ್ಯತೆ ಕಂಡುಬರುತ್ತದೆ . ಒಂದು ಕಡೆ ನಮ್ಮ ಭಾಷೆಗೆ ಒದಗಿರುವ ಈ ಸ್ಥಿತಿಗೆ ಮರುಗಿದರೆ ಇನ್ನೊದು ಕಡೆ ವಾಸ್ತವದಲ್ಲಿ ಇದು ಅನಿವಾರ್ಯವೇನೋ ಎಂಬ ಸ್ಥಿತಿಯಲ್ಲಿ ಈಗ ನಾವಿದ್ದೇವೆ ....
ಒಬ್ಬ ಗ್ರಾಮೀಣ ಕನ್ನಡ ಮದ್ಯಮದಿಂದ ಬಂದ ನನ್ನಂಥ ಹಲವರು ಅಭ್ಯರ್ಥಿಗಳು ಕನ್ನಡ ಮಾದ್ಯಮದಲ್ಲಿ ಓದಿದ್ದೆ ತಪ್ಪಾಯ್ತೇನೋ ಎಂದು ಬಹಳ ಸಾರಿ ಅನ್ನಿಸಿದೆ .ಯಾಕೆಂದರೆ ನಮ್ಮ ಶಾಲೆಗಳಲ್ಲಿ ಇಂಗ್ಲಿಷ್ ಕಲಿಸುತ್ತಿದ್ದ ಶಿಕ್ಷಕರು ಒಂದು ಸಾರಿ ಇಂಗ್ಲಿಷ್ ಪಠ್ಯ ಓದಿ ಯಾವುದೊ ಗೈಡ್ ನೋಡಿಕೊಂಡು ಒಮ್ಮೆಲೇ ಭಾವಾರ್ಥ ಓದಿ ಹೇಳಿ ಪಾಠ ಮುಗಿಸುತ್ತಿದ್ದರು .ಇಂಗ್ಲಿಷಿನ ಮುಲಪದಗಳನ್ನು ಪದಗಳನ್ನು ಕಲಿಯುವುದಕ್ಕೆ ಕಾಲೇಜಿನ ಮೆಟ್ಟಿಲೇರಬೇಕಾಯಿತು ..ಕನ್ನಡ ಮಾದ್ಯಮದಲ್ಲಿ ಓದಿ ಪಿಯುಸಿ ಗೆ ಬಂದು ವಿಜ್ಞಾನ ವಿಷಯವನ್ನು ಅಇಚ್ಚಿಕ ವಾಗಿ ತೆಗೆದುಕೊಂಡರೆ ಒಮ್ಮೆಲೇ ಕುದಿಯುವ ಬಾಣಲೆಗೆ ಬಿದ್ದಂಥ ಅನುಭವವಾಗುತ್ತದೆ ...
ಇಂದಿನ ಸ್ಪರ್ದಾತ್ಮಕ ಯುಗದಲ್ಲಿ ಬರಿಯ ಕನ್ನಡ ಭಾಷೆ ಒಂದು ಗೊತ್ತಿದ್ದರೆ ಬಾಳುವೆ ಮಾಡಲು ಸಾದ್ಯವಿಲ್ಲ ..ಅದು ಅಲ್ಲದೆ ಉದ್ಯೋಗವಕಶವು ಕಡಿಮೆ ..ಕನ್ನಡ ಮಾದ್ಯಮದಲ್ಲಿ ಓದಿದವರಿಗೆ ಒಂದು ರೀತಿಯ ಕೀಳರಿಮೆ ಬಂದುಬಿಡುತ್ತದೆ ...ಆಶ್ಚರ್ಯವೆಂದರೆ ಇಂದಿನ ಸ್ಥಿತಿಯಲ್ಲಿ ಯಾವ ಸ್ವಾಭಿಮಾನಿ ಕನ್ನಡಿಗನು ಕನ್ನಡ ಮಾದ್ಯಮದಲ್ಲಿ ಓಡಿಸಲು ದೈರ್ಯ ಮಾಡಲಾರ ..ಎಂಥಹ ಬಡವನಾದರೂ ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾದ್ಯಮದಲ್ಲಿ ಓದಿಸಲು ಪ್ರಯತ್ನಿಸುತ್ತಾನೆ ...
ಈ ನಾಡಿನ ಹಲವು ಕನ್ನಡಪರ ಹೋರಾಟಗಾರರು ,ಸಾಹಿತಿಗಳು ,ರಾಜಕಾರಣಿಗಳು ಕನ್ನಡದ ಉಳಿವಿನ ಬಗ್ಗೆ ಗಂಟೆ ಗಟ್ಟಲೆ ಭಾಷಣ ಬಿಗಿಯುತ್ತಾರೆ ಆದರೆ ಅವರಲ್ಲಿ ಎಷ್ಟುಜನ ತಮ್ಮ ಮಕ್ಕಳನ್ನು ಸರ್ಕಾರೀ ಶಾಲೆಯ ಕನ್ನಡ ಮಾದ್ಯಮದಲ್ಲಿ ಓದಿಸುತ್ತಿದ್ದಾರೆ? ಎಲ್ಲ ಉಳ್ಳವರು ,ಉತ್ತಮ ಇಂಗ್ಲಿಷ್ ಮಾದ್ಯಮದ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಪಡೆದು ಸಮಾಜದಲ್ಲಿ ಉತ್ತಮ ಸ್ಥಾನ ಪಡೆಯುತ್ತಿದ್ದಾರೆ ಆದರೆ ಕನ್ನಡ ಮಾದ್ಯಮದಲ್ಲಿ ಓದಿದ ವಿಧ್ಯಾರ್ಥಿಗಳು ಡಿಗ್ರಿ, ಡಬಲ್ ಡಿಗ್ರಿ ಓದಿದ್ದರು ಇಂಗ್ಲಿಷ್ ಭಾಷಾ ಮಾದ್ಯಮದ ಕೊರತೆಯಿಂದ ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಹೆಣಗುತ್ತಿದ್ದಾರೆ.ಕೇವಲ ಗುಮಾಸ್ತ ಹುದ್ದೆಗೆ ಲಾಯಕ್ಕೆನೋ ಎಂಬಂಥ ವಾತಾವರಣ ಸೃಷ್ಟಿಸಲಾಗಿದೆ ...
ಕೇವಲ ಬಡವರು ಮತ್ತು ಸರ್ಕಾರೀ ಶಾಲೆಯಲ್ಲಿ ಓದುವವರು ಮಾತ್ರ ಯಾಕೆ ಕನ್ನಡ ಮಾದ್ಯಮದಲ್ಲಿ ಓದಬೇಕು?ನಮ್ಮ ಆಳುವ ವರ್ಗ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟಗಳು "ನೀನು ಹೊಡೆದ ಹಾಗೆ ನಟಿಸು, ನಾನು ಅತ್ತ ಹಾಗೆ ನಟಿಸುತ್ತೇನೆ " ಎಂಬಂತೆ ವರ್ತಿಸುತ್ತಿವೆ ..ಇಂದಿನ ವ್ಯವಸ್ಥೆಯಲ್ಲಿ ಕನ್ನಡವನ್ನು ಪ್ರಾಮಾಣಿಕವಾಗಿ ಕಲಿಸುವ ಬದ್ದತೆಯನ್ನು ಶಿಕ್ಷಣ ಸಂಸ್ಥೆಗಳು ಪ್ರದರ್ಶಿಸಬೇಕಿದೆ ,ಅದೇ ರೀತಿ ಸರ್ಕಾರಗಳು ಕನ್ನಡವನ್ನು ಎಲ್ಲ ರಂಗಗಳಲ್ಲೂ ಅಳವಡಿಸಿ ಕನ್ನಡ ಕಲಿತವರಿಗೆ ಅವಕಾಶವನ್ನು ಕಲ್ಪಿಸಬೇಕಾಗಿದೆ .ಯುರೋಪಿನ ಹಲವಾರು ದೇಶಗಳು ತಮ್ಮ ಆಡಳಿತದಲ್ಲಿ ಸ್ಥಳೀಯ ಭಾಷೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿವೆ ಅದು ನಮ್ಮಲ್ಲೇಕೆ ಸಾದ್ಯವಿಲ್ಲ ಎನಿಸುತ್ತದೆ. ಶಾಲೆಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳೆರಡನ್ನು ಉತ್ತಮವಾಗಿ ಕಲಿಸಬೇಕಿದೆ ...ಇಲ್ಲವಾದರೆ ನಾವೆಷ್ಟೇ ಕನ್ನಡದ ಬಗ್ಗೆ ಅನುಕಂಪ ತೋರಿಸಿದರು ಅದು ಕೇವಲ ತೋರಿಕೆ ಎನಿಸುತ್ತದೆ,ಏಕೆಂದರೆ ಇಂದು ಕನ್ನಡವನ್ನು ಉಳಿಸಬೇಕಾದರೆ ಕನ್ನಡವನ್ನು ಅನ್ನವನ್ನು ದೊರಕಿಸಿಕೊಡುವ ಭಾಷೆಯನ್ನಾಗಿ ಮಾಡಬೇಕಾದ ಅಗತ್ಯ ಹಿಂದೆಂದಿಗಿಂತ ಈಗ ಇದೆ.
ಭಾಷೆ ಮತ್ತು ಅನ್ನ ಇವೆರಡನ್ನೂ ಒಂದು ಕಡೆ ಇಟ್ಟಾಗ ಮನುಷ್ಯ ಮೊದಲು ಅನ್ನವನ್ನು ಆಯ್ಕೆ ಮಾಡಿಕೊಳ್ಳುತ್ತಾನೆ ಏಕೆಂದರೆ ಹಸಿವು ಭಾಷೆಗಿಂತ ಮುಖ್ಯ .ತನ್ನ ಹಸಿವು ನೀಗಿಸಿಕೊಳ್ಳಲು ಯಾವ ಭಾಷೆ ಅನುಕೂಲ ಮಾಡಿಕೊದುತ್ತದೋ ಆ ಭಾಷೆಯನ್ನು ಆತ ಆಯ್ಕೆ ಮಾಡುತ್ತಾನೆ . ರಾಷ್ಟ್ರ ಮಟ್ಟದಲ್ಲಿ "ಏಕರೂಪ ನಾಗರೀಕ ಸಂಹಿತೆ "ಒತ್ತಾಯಿಸುತ್ತಿರುವ ರಾಷ್ಟ್ರೀಯ ಪಕ್ಷಗಳು "ಏಕರೂಪ ಶಿಕ್ಷಣ ನೀತಿ"ಯನ್ನು ಯಾಕೆ ಒತ್ತಾಯಿಸುತ್ತಿಲ್ಲ .ಈ ಬಗ್ಗೆ ಎಲ್ಲರು ಚಿಂತಿಸಬೇಕಾದ ಅಗತ್ಯ ಇದೆ ...ಶಿಕ್ಷಣ ರಾಷ್ಟ್ರೀಕರಣವಾಗಲಿ ..ಕೇಂದ್ರ ಸರ್ಕಾರ ಇದರ ಬಗ್ಗೆ ಚಿಂತಿಸಲಿ ಮತ್ತು ಅಗತ್ಯ ಕಾನೂನು ರೂಪಿಸಲಿ..."ಎಲ್ಲರಿಗು ಸಮಬಾಳು ,ಸಮಪಾಲು"ದೊರಕಲು ಅವಕಾಶ ದೊರಕಿಸಲು ಆಳುವ ವರ್ಗಗಳು ಪ್ರಾಮಾಣಿಕ ಪ್ರಯತ್ನ ಮಾಡಲಿ.... ನೀವೇನ್ ಹೇಳ್ತಿರ ?


4 comments:

Unknown said...

ಮಧು, ನಿನ್ನ ಚಿಂತನೆಯಲ್ಲಿ ವ್ಯಕ್ತವಾಗಿರುವ ಕನ್ನಡದ ಅನಿವಾರ್ಯತೆ ನಿಜಕ್ಕೂ ಎಲ್ಲರೂ ಯೋಚಿಸಬೇಕಾದ ವಿಷಯವಾಗಿದೆ. ಈಗಿರುವ ಎಷ್ಟೋ ಉನ್ನತ ಅಧಿಕಾರಿಗಳು ಕನ್ನಡ ಮಾಧ್ಯಮದಲ್ಲಿ ಕಲಿತು ಮೇಲೆಬಂದವರಾದರೂ ಕೂಡ ತಮ್ಮ ಮಕ್ಕಳಿಗೆ ಮಾತೃ ಭಾಷೆಯನ್ನು ಬಿಟ್ಟು ಆಂಗ್ಲ ವ್ಯಾಮೋಹ ತುಂಬುತ್ತಿರುವುದು ಹಾಗೂ ಹಳ್ಳಿಯಲ್ಲಿರುವವರಿಗೆ, ಬಡವರಿಗೆ, ಮಧ್ಯಮ ವರ್ಗದವರಿಗೆ ಕನ್ನಡವನ್ನು ಕಲಿಯಲು ಹೇಳುತ್ತಿರುವುದು ಬಲವಂತದ , ಅಧಿಕಾರದ ವ್ಯಾಮೋಹವೇ ಹೊರತು ಮತ್ತೇನೂ ಅಲ್ಲ. ಈ ಚಿಂತನೆಯಲ್ಲಿ ನಿನ್ನ ಲೇಖನ ಎಲ್ಲರಲ್ಲಿಯೂ ಕ್ರಾಂತಿಕಾರಕ ಬದಲಾವಣೆಗೆ ನಾಂದಿ ಹಾಡುವುದೆಂಬ ನಂಬಿಕೆ ನನ್ನದು.

ಸಂತೋಷ್ ಸಿಹಿಮೊಗೆ said...

ಮಧು,
ಮಂಜಪ್ಪ ರ ಅನಿಸಿಕೆಯಂತೆ ಕ್ರಾಂತಿಯಾದರೆ ತುಂಬಾ ಖುಷಿ. ಆದರೆ...? ಮುಖ್ಯ ವಿಷಯಕ್ಕೆ ಬರೋಣ.
೧. ಪ್ರಜಾಪ್ರಭುತ್ವದ ಮಾದರಿಯ ಪಾಳೇಗಾರಿಕೆ ಆಡಳಿತಶಾಹಿ ನಮ್ಮ ವ್ಯವಸ್ಥೆ. ಜನರು ಮೂರ್ಖರಾದಷ್ಟು ಆಡಳಿತವರ್ಗಕ್ಕೆ ಅನುಕೂಲ. ಆದ್ದರಿಂದ ಯಾವೊಂದು ಗ್ರಾಮವಿರಲಿ,ರಾಜ್ಯವೇ ಸ್ವಾವಲಂಭಿಯಲ್ಲ. ನಾವು ಮೊದಲು ಸ್ವಾವಲಂಭಿಯಾದರೆ ತಾನೆ ನಮ್ಮ ನುಡಿಯನ್ನು ಕಾಪಾಡುವುದು.
೨. ನಮ್ಮ ಜನಪ್ರ್ತತಿನಿಧಿಗಳು ಇಂದಿಗೂ ಲೋಕಸಭೆಯಲ್ಲಿ ಕನ್ನಡಿಗರಿಗೆ(ಅವರಿಗೂ) ಭಾವಾರ್ಥವಾಗದ ಹಿಂದಿಯಲ್ಲೋ, ಇಂಗ್ಲೀಷಿನಲ್ಲೋ ಹೇಳುತ್ತಿದ್ದಾರೆ. ನಮ್ಮ ಸಮಸ್ಯೆಗಳನ್ನು ಪ್ರಭಾವಿಯಾಗೆ ಮಂಡಿಸುತ್ತಿಲ್ಲ.
೩. ಎಷ್ಥು ಜನ ನಮ್ಮ ಎಂ.ಪಿ ಗಳು ಲೋಕ ಸಭೆಯಲ್ಲಿ ಭಾಗವಹಿಸಿ ಮಾತಾಡುತ್ತಾರೆ. ವಿವರಿಸುವ ಅಗತ್ಯವಿಲ್ಲವೆಂದು ಭಾವಿಸುವೆ.
೪. ಮೇಲ್ನೋಟಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ಸರಿ ಎಂದು ಅನಿಸಬಹುದು. ಆದರೆ ಈ ಸ್ಥಿತಿಗೆ ಯಾರು ಕಾರಣ ಮಧು...?
೫. ಇಂಗ್ಲೀಷ್ ಬರದೇ ಬದುಕೇ ಇಲ್ಲ ಎಂಬುದನ್ನು ನಾನು ಒಪ್ಪುವುದಿಲ್ಲ. ಉತ್ತರ ಭಾರತದಲ್ಲಿ ಹಿಂದಿ ಭಾಷೆಯಲ್ಲೇ ಎಂ.ಎಸ್ಸಿ ಮಾಡುತ್ತಾರೆ. ಪಿ.ಎಚ್.ಡಿ ಕೂಡ. ಅಯ್.ಎ.ಎಸ್ ಸಹ. ನಮ್ಮಲ್ಲಿ ಅಂತಹ ಪ್ರಯತ್ನಗಳು ನಡೆದಿಲ್ಲ. ಪ್ರಯತ್ನ ಪ್ರಯತ್ನವಾಗೇ ಉಳಿದಿದೆ.(ಕೆ.ಶಿವರಾಂ) ದಾರಿಯಾಗಿಲ್ಲ. ಎಲ್ಲವೂ ಪಾಶ್ಚಾತ್ಯ ದ್ರುಷ್ಠಿಯಲ್ಲಿ ನೋಡೋ ನಮಗೆ ಇಂಗ್ಲೀಷ್ ಇಲ್ಲದೇ ಬದುಕೇ ಇಲ್ಲ ಅನಿಸುವುದು ಸಹಜ ಅಲ್ಲ್ವೇ ಮಧೂ....?
ಈ ಚರ್ಚೆಗೆ ಕೊನೆಯೇ ಇಲ್ಲ. ಒಟ್ಟಿನಲ್ಲಿ ಸಮಸ್ಯೆಯ ಬೇರು ವಿಶಾಲವಾಗಿ ಹರಡಿಕೊಂಡಿದೆ. ಆದರೆ ನಿನ್ನ ಆಶಯಕ್ಕೆ ಒಳ್ಳೆಯದಾಗಲಿ. ಶುಭವಾಗಲಿ ...

yashavanth said...

ನಾನು ಪ್ರತಿಕ್ರಿಸುವುದಕ್ಕಿಂತ ಈ ಲಿಂಕ್ ನ್ನ ನೀಡುವುದು ಸಮಂಜಸವೆನಿಸುತ್ತಿದೆ... ಮೊನ್ನೆ ಸಂಪದದಲ್ಲಿ ಮಧುವಿನ ಬರಹದ ಬಗ್ಗೆ ದೊಡ್ಡ ಚರ್ಚೆಯೇ ನಡೆದಿದೆ... ನೋಡಲು ಇಲ್ಲಿ ಚಿಟುಕಿಸಿ http://www.sampada.net/article/23154

ಪರಶು.., said...

ಹಾಯ್ ಮಧು..
ಕನ್ನಡ ಭಾಷೆಯ ಬಳಕೆಯ ವಿಷಯಕ್ಕೆ ಬಂದಾಗ ಎಲ್ಲರೂ ಒಬ್ಬಿಲ್ಲೊಬ್ಬರನ್ನು ದೂರುವುದೇ ಆಗುತ್ತಿದೆ.. ಬದಲಿಗೆ ನಾವು ದೈನಂದಿನ ಜೀವನದಲ್ಲಿ ಎಷ್ಟರ ಮಟ್ಟಿಗೆ ನಮ್ಮ ಭಾಷೆಯನ್ನು ಬಳಸುತ್ತಿದ್ದೇವೆ..? ಯಾರೂ ಯೋಚಿಸುವುದಿಲ್ಲ.. ಕೇವಲ ಕಲಿಕೆಯಿಂದಷ್ಟೇ ಭಾಷೆಯ ಜೀವಂತಿಕೆ ಉಳಿಯದು, ಅದು ಸದಾ ಬಳಕೆಯಲ್ಲಿರಬೇಕು..
ಯಾವುದೇ ಭಾಷೆಯ ಬೆಳವಣಿಗೆಯ ಒಂದು ಪ್ರಮುಖ ಗುಣ ಎಂದರೆ ಅದು ನದಿಯಂತೆ ಸದಾ ಚಲನ ಶೀಲವಾಗಿರುವುದು.. ತನ್ನ ಚಲನೆಯ ಪಥದಲ್ಲಿ ಇತರ ಭಾಷೆಗಳ ಸತ್ವವನ್ನೂ ತನ್ನದಾಗಿಸಿಕೊಳ್ಳುತ್ತಾ ಸಾಗುವುದು. ಈಗ ಕನ್ನಡದಲ್ಲಾಗುತ್ತಿರುವುದೂ ಈ ರೀತಿಯ ಬೆಳವಣಿಗೆ ಅನಿಸುತ್ತಿದೆ..
ನೋಡಿ ಪಂಪನ ಕಾಲದಲ್ಲಿ ಆಡುತ್ತಿದ್ದ ಕನ್ನಡಕ್ಕೂ, ಈಗ ನಾವಾಡುವ ಕನ್ನಡಕ್ಕೂ ಎಷ್ಟೊಂದು ಅಜ-ಗಜಾಂತರ ವ್ಯತ್ಯಾಸವಿದೆ.. ಅಂದು ಪ್ರಭಾವಿ ಭಾಷೆಯಾಗಿದ್ದ ಸಂಸ್ಕೃತ ಕನ್ನಡದೊಂದಿಗೆ ಬೆರೆತು ಬಳಕೆಯಲ್ಲಿತ್ತು.. ಆದರೆ ಇಂದು ಇಂಗ್ಲೀಷ್ ಆ ಸ್ಥಾನದಲ್ಲಿ ನಿಂತಿದೆ.. ಆದರೂ ಕನ್ನಡ ಇನ್ನೋಂದು ದಿಕ್ಕಿನಲ್ಲಿ ಹೊರಳಿ ಬೆಳೆಯುತ್ತೆ ಎಂಬ ನಂಬಿಕೆ ನನ್ನದು..

ನಮ್ಮ ಕಾಲ್ಪನಿಕ ಭ್ರಮೆಯನ್ನು ತೊಡೆದುಕೊಂಡರೆ ಕನ್ನಡ ಅನ್ನಕೊಡುವ ಭಾಷೆಯೂ ಆಗಬಲ್ಲದು.. ಈಗ ನೋಡಿ ನಮ್ಮ ಕಿ.ಸರಲ್ಲಿ ಕನ್ನಡ ಭಾಷೆಯಲ್ಲಿಯೇ ಅತಿ ಹೆಚ್ಚು ಅಂಕ ಪಡೆದು ಈ ಕೆಲಸ ಗಿಟ್ಟಿಸಿಕೊಂಡವರಿಲ್ಲವೇ..?

ಚರ್ಚೆಗೆ ನಿಲುಕುವ ಬರಹಗಳು ನಿಮ್ಮಿಂದ ಹೀಗೇ ಮೂಡಿಬರಲಿ...

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago