01 August 2009

" ಮುದ್ದು ಪ್ರೀತಿ....."





ಮನ ಮನ ಮನಸೇ..
ಮುದ್ದಿನ ಮನಸೇ.....
ಹೃನ್ಮನ ಮನಸೇ....
ಕನಸಿನ ಮನಸೇ...
ಭಾವದ ಮನಸೇ....

ಯಾತಕೆ ಕಾಣುವೆ..
ಮುದ್ದಿನ ಕನಸಾ...
ತಿಳಿಯಲಿ ಎಂತೋ.....
ಪ್ರೀತಿಯ ಸೊಗಸಾ....


ನಿನಗೋಸ್ಕರಾನೆ ಇದನ್ನ ಬರೆದಿರೋದು... ಬರೀ ನಿನ್ನೊಬ್ಬಳಿಗೆ... ನಿನ್ನ ಮೇಲಿರೋ ಪ್ರೀತಿಯ ತುಡಿತಕ್ಕೆ... ಮನಸಿನ ಮಿಡಿತಕ್ಕೆ... ಅಷ್ಟೇ.... ಹೇಗನ್ನಿಸ್ತು....?

’ ಹೇ.. ನಿಂಗ್ಯಾರೋ ಕವಿತಗಳ ಬಗ್ಗೆ ಸಿಕ್ಕಾಪಟ್ಟೆ ಮಿಸ್ ಗೈಡ್ ಮಾಡಿದ್ದಾರೆ.. ಇಲ್ಲಾ.. ನಿನ್ನ ಕವಿತ್ವದ ಬಗ್ಗೆ ಸೀರಿಯಸ್ಸಾಗಿ ಜೋಕ್ ಮಾಡಿದ್ದಾರೆ ..ಅಷ್ಟೇ.. ಅಷ್ಟು ಮಾತ್ರಕ್ಕೆ ಪೇಪರ್‍ರೂ ಪೆನ್ನೂ ಹಿಡಿದು ಕೂತ್ ಬಿಟ್ರೆ ಹೇಗೆ ಅಂತಾ...? ಮೇಲಾಗಿ ನೀನು ಬರೆದಿರೋದನೆಲ್ಲ ಮೊದಲು ಓದೋಳೆ ನಾನು.. ಅಲ್ಲಲ್ಲ.. ನೀ ಬರೆದದ್ದನೆಲ್ಲಾ... ನನಗೇ ಮೊದಲು ಓದಿಸ್ತೀಯ.....ಅದ್ಕೆ...ಅದ್ಕೆ....

’ಅದ್ಕೆ...ಏನೂ...?’

’ಅದ್ಕೆ.... ನನ್ನ ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಇರ್‍ಲಿ ಅಂದೇ....!!!!’

’ಅಷ್ಟೇ ಅಂತೀಯಾ.... ಕವಿತೆ ಚೆನ್ನಾಗಿಲ್ಲದಿದ್ರೆ ಬಿಡು.. ಹೇಗಿರ್‍ಬೇಕು ಅದನ್ನಾದ್ರೂ ಹೇಳೂ...’

"ಹಾಂ.... ಕವಿತೆ ಅಂದ್ರೆ.... ಅಂತರಂಗದಾ ಮೃದಂಗ...ದ ತರ ಇರ್‍ಬೇಕು ನೋಡು.. ಇನ್ನೊಂದು ವಿಷ್ಯ..... ಕವಿತೆ ಬರೆಯೋರಷ್ಟೇ ಅಲ್ಲ ಓದೋರು ಮುಖ್ಯ... ಈಗ ’ಅಂತರಂಗದಾ ಮೃದಂಗ..ಅಂತು ತೋಂತನಾನಾ...’ ಅಂತ ಹೆಣ್ತಿ ಸತ್ತೊರ್‍ ಹಾಗೆ ಹಾಡಿದ್ರೆ... ಕುವೆಂಪು ಬೇಜಾರ್‍ ಆಗಲ್ವಾ...?"

’ಅದು ಬರೆದಿರೋದು.....ಕುವೆಂಪು.. ಅಲ್ಲ ಮಾರಾಯ್ತಿ....ಬೇಂದ್ರೆ...’

’ಏಯ್... ಕುವೆಂಪು ಬೇಜಾರ್‍ ಆಗ್ತಾರೆ ಅಂದೆ ಹೊರ್‍ತು ಬರೆದಿರೋದು ಅಂದಿಲ್ಲ... ಓಹೋ ಇವನೊಬ್ನಿಗೆ ಸಾಹಿತ್ಯ ಗೊತ್ತಿರೋದು.... ಮೊದಲು ನಾನು ಮಾತಾಡೋದನ್ನ ಸರಿಯಾಗಿ ಕೇಳಿಸ್ಕೊಳೋದು ಕಲಿ... ’

ಅಂದು ..

ಮುಖಗಂಟು ಹಾಕಿ ಕೂರೋದು...ನೀನು ಹೀಗೆ ಮುನಿಸ್ಕೊಂಡಾಗ್ಲೇ ನನ್ಗೆ ಈ ಪ್ರಶ್ನೆಗಳು ಹುಟ್ಟೋದು....ಪ್ರೀತಿ ಅಂದ್ರೆ ಏನು..? ಅದು ಹೇಗಿರುತ್ತೆ...? ಉತ್ತರಾನೂ ಸಿಕ್ಕಿರುತ್ತೆ ಬಿಡು......... ಪ್ರೀತಿ ಅಂದ್ರೆ ನೀನು....ಅದು ನಿನ್ನ ಹಾಗಿರುತ್ತೆ..... ಥೇಟ್ ನಿನ್ ತರಾನೇ ಮುದ್ದಾಗಿರುತ್ತೆ.... ಅಂತ.....ಪ್ರೀತಿಗೂ ನಿನಗೂ ಪದಗಳಲಷ್ಟೇ ವ್ಯತ್ಯಾಸ .. ಭಾವದಲಲ್ಲ....ಏಯ್.... ನಡೂ ರಾತ್ರೀಲೀ... ನಿನ್ನ ಕಿವಿ ನೋಯಿವಷ್ಟು ಸಲ ಲವ್ ಯು ಹೇಳಿಸಿರೋ ನನ್ನ ಪ್ರೀತಿ ಮುದ್ದಲ್ಲ ಅನ್ನೋ ಧೈರ್ಯ ಯಾರಿಗಿದೆ ಹೇಳು....? ನಿನ್ನೊಬ್ಬಳನ್ನ ಬಿಟ್ಟು.... ನಿನ್ಗೆ ನಿನ್ಗಿಂತ ಮುದ್ದಾಗಿರೋದು ಪ್ರಪಂಚದಲ್ಲೇ ಯಾವ್ದೂ ಇಲ್ಲ ಅನ್ನೋ ಜಂಭ.... ಅಲ್ವಾ.. ನನ್ನ ಮುದ್ದಿನ ರಾಣಿ...."

ಹೇ.... ಆ ಕೊನೆ ಪದನಾ ವಾಪಸ್ ತಗೋತ್ತೀನಪ್ಪ.... ನಿನ್ನ ರಾಣಿ ಅಂತ ಕರೆಯೋದು ಬೇಡ.. ನೀನು ಮೂರು ದಿನ ಮುನಿಸ್ಕೊಳೋದು ಬೇಡ..... ನೀನಿಲ್ಲದೆ ಮೂರು.... ದಿನ....ಮೂ....ರು ದಿನ ಹೋಗ್ಲಿ ....ಮೂರು ಕ್ಷಣನೂ ಇರೋಕಾಗಲ್ಲ ... ನಿಂಗೊತ್ತು ತಾನೆ....?

ಆದ್ರೂ ಜಗಳಗಳು ಬೇಕು... ಮುನಿಸುಗಳು... ಇರ್ಬೇಕು... ಇಲ್ಲದಿದ್ರೆ ಏನ್ ಚೆನ್ನ ಅಲ್ವಾ...?

"ನಿನ್ಗೆ ನಿನ್ ಫ್ರೆಂಡ್ಶಿಪ್ ಗೆ ದೊಡ್ಡ ನಮಸ್ಕಾರ..... ಮತ್ತೆ ನನ್ನ ಮಾತಾಡಿಸ್ಬೇಡ... ಬೇಡ ಅಂದ್ರೆ ಬೇಡ.. ಅಷ್ಟೇ...." ಎಷ್ಟು ಸಾರ್ತಿ ಆಗೋಗಿದೆ ವಿದಾಯದ ಡೈಲಾಗ್ ಗಳು.....ಕೊನೆಗೆ ನನ್ನ ಉಪಟಳ ತಡೆಯಲಾರದೆ..... " ಏನಾದ್ರು ಮಾಡ್ಕೊಂಡು ಸಾಯ್ಲಿ ..ಅಂತ ಮಾತಾಡಿಸ್ದೆ... .." ಅನ್ನೋ ರಾಜಿ ಖಬೂಲಿ..... ನೀನ್ ಮಾತ್ ಮಾತಿಗೂ ಸಾಯಿ ಅನ್ನೋದು ಬಿಡ್ಲಿಲ್ಲ... ನಾನಂತು ಸಾಯ್ಲಿಲ್ಲ...

(ನನ್ನ...?!!!)ಪ್ರೀತಿನೇ ಹಾಗೆ...
ಅನುಕ್ಷಣವೂ ಅರಳೋ......
ಮಲ್ಲಿಗೆಯ ಹಾಗೆ......

ಹಾಂ ಮಲ್ಲಿಗೆ ಅಂದಾಗ ನೆನಪಾಯ್ತು ನೋಡು... ಈ ಸಾಲು....

ನಿನ್ನ ಮೊಗದಿ ...

ನಗೆಯ ಮಲ್ಲಿಗೆ...

ಕಂಡು ನಾಚಿತು...

ನೀ ಮುಡಿದ...

ನಮ್ಮೂರ(ದುಂಡು) ಮಲ್ಲಿಗೆ.....

ಯಾವಾಗ್ ಬರೆದಿದ್ದು ಗೊತ್ತಾ...?



"ಗೊತ್ತು ಬಿಡು.... ಹೇ.... ನೀನು ಸ್ವಲ್ಪ ಲೂಸು ಅಂತ ಗೊತ್ತಿತ್ತು... ಆದ್ರೆ ಪರಿ ಮೆಂಟಲ್ ಅಂತ ಗೊತ್ತಿರ್ಲಿಲ್ಲ ....ನಿನ್ನನ್ನ ಸೇರಿಸೋಣ ಅಂದ್ರೆ... ನಿಮಾನ್ಸ್ ನಲ್ಲಿ ನಂಗ್ಯಾರು ಫ್ರೆಂಡ್ ಇಲ್ಲ ಗೊತ್ತಾ...." ಅಂದವಳೇ ಸ್ವಲ್ಪ ತಡೆದು.... ಇಂತಾ ಸಾಲೆಲ್ಲ ನಮ್ಮಂತೋರಿಗೆ ತೋಚಲ್ಲ ಬಿಡು.... ಅಂತೀಯ..... ಚೆನ್ನಾಗಿದೆ ಅನ್ನೋ ಹೊಗಳಕೆನೋ... ಅಥ್ವಾ ಮೆಂಟಲ್ ಗಳಿಗೆ ಮಾತ್ರ ಇಂತಾವು ಹೊಳಿತ್ತಾವೆ... ಅನ್ನೋ ಛೇಡಿಕೆನೋ.... ಗೊತ್ತಾಗದ ಹಾಗೆ ಮಾತಾಡ್ತೀಯ....

ಹೋಗ್ಲಿ ಇದನ್ನ ಕೇಳು....

ಯಾವ ಮುದ್ದಿನ ಬೆಕ್ಕಿನಿಂದ...
ಸೊಕ್ಕಿನ ಸಾಲ ಪಡೆದಿರುವೆ...
ನಿನ್ನ ಸೊಕ್ಕಿಗೂ ...
ಸೊಗಸಿದೆಯಲ್ಲ...ಮುದ್ದಿದೆಯಲ್ಲ....

.....
ಹೇಗಿದೆ...?

" ಸುಳ್ಳೇ ಏನೇನೋ ಹೇಳ್ಬೇಡ ನೀನು... ನಾನು ಹೇಗಿದ್ದೀನಿ ಅಂತ ನಂಗೊತ್ತಿಲ್ವಾ...? ನಿನ್ನೊಬ್ಬನಿಗೆ ಅಷ್ಟೇ ನಾನು ಮುದ್ದಾಗಿದ್ದೀನಿ ಅನ್ನಿಸೋದು..... ಬೇರ್ಯಾರಿಗೂ ಹಾಗನ್ನಿಸೊಲ್ಲ ಗೊತ್ತಾ.... ಯಾರೂ ಹಾಗೆ ಹೇಳೂ ಇಲ್ಲ... ಗೊತ್ತಾ... "

.....ಅಪ್ಪಿ ತಪ್ಪಿ ನಿಂಗೆ ಹಾಡೇ ಅಂದ್ರೆ ಸಾಕು... ಬಾಯಿಗೆ ಬೀಗ ಹಾಕಿ ಕೂತ್ ಬಿಡ್ತೀಯ.. ಇಲ್ಲ ಜಗಳಕ್ಕೆ ಬೀಳ್ತಿಯ.. ಏನ್ ಅನ್ಕೋಂಡ್ಡಿದ್ದೀಯಾ ನನ್ನ.. ನೀನ್ ಹೇಳ್ದಂಗೆಲ್ಲ ಕೇಳೋಕಾಗಲ್ಲ... ತಿಳ್ಕೋ... ’ ಅಂದವಳು ಕಡೇಪಕ್ಷ ಎರಡು ಸಾಲನ್ನಾದ್ರು ಗುನುಗೇ ಗುನುಗ್ತೀಯ... .. ಯಾಕೆ....?

....
...
...
...
...... ಸಾಯ್ಲಿ.... ಅಂತನಾ....?!!!!!!

ಆದ್ರೆ ನೀನು ಒಳ್ಳೆ ಲಹರಿಯಲ್ಲಿದ್ದಾಗ ಆ ಮಾತೆ ಬೇರೆ ಬಿಡು... ಮರೆತು ಹೋದ ಭಾವಗೀತನ ನೆನಪಿಸಿ ಹಾಡೋದು .... ಹಿಂದಿ ಹಾಡು ಹೇಳಿ ಅದರ ಅರ್ಥ ಬೇಕಾದ್ರು ಹೇಳೋಳೇ ನೀನು....... ನಿನ್ನಷ್ಟು ಮನಸ್ವೀ ಗೆಳತಿ ಮತ್ತೊಬ್ಬಳಿಲ್ಲ ನೋಡು ನನ್ಗೆ.... ಒಟ್ಟಿನಲ್ಲಿ ನಿನ್ನ ಹಾಡಿಗೆ ಅಹೋರಾತ್ರಿಯ ಅಭಿಮಾನಿ ನಾನು.... ಆಗೆಲ್ಲ ಒಮ್ಮೆ ನೀನು ಪದ್ಯ ಹೇಳೋ ಪ್ರೈಮರಿ ಪೋರಿ .... ಮಗದೊಮ್ಮೆ ಯುಗಳ ಗೀತೆಯ ನನ್ನ ಹೀರೋಯಿನ್....ಇನ್ನೊಮ್ಮೆ... ಲಾಲಿಪದದ ನನ್ನವ್ವ...

ನೀನು..... ನೀನು...ನೀನು....

ಅಳುವಿಗೆ ನನ್ನಮ್ಮ... ಕಿತ್ತಾಡೋ ತಂಗಿ...ಹೆದರಿಸೋ ಅಕ್ಕ... ಹಠಕ್ಕೆ ಬಿದ್ದ ಮುದ್ದು ಮಗಳು... ಎದುರಿಗೆ ಗೆಳತಿ.. ಒಲುಮೆಗೆ ಪ್ರೇಯಸಿ.... ಕನಸಿಗೆ ಹೆಂಡತಿ...ಎಷ್ಟೆಲ್ಲಾ ಭಾವ ಬಿಂಬನದ ನಿನ್ನ ಬಂಧ ನನಗಿಂತಾದೇ.. ಇಷ್ಟೇ ಅನ್ನೋಕೆ ಸಾಧ್ಯನಾ....?

......ನಾನು,,,,,,

ನಿನ್ನ ನಗೆಯ ಕಂಡವರು..

ನೂರಾರು ಸಾವಿರ ಜನರು...
ಲೆಕ್ಕವಿಲ್ಲ ಬಿಡು...
ಲೆಕ್ಕ ಬೇಡಬಿಡು...
ಸುಡುವಷ್ಟು ಸಿಟ್ಟನ್ನ...
ಕ್ಷಣದಲ್ಲೇ ಮರೆಮಾಚಿ..
ಹೊಮ್ಮಿಸಿದ ಹೊನ್ನಗೆಯ..
ಕಂಡವನು....ನಾನು...
ನಾನು ಮತ್ತೇನಲ್ಲ..
ನಿನ್ನಂದದ ಆಕರ್ಷಣೆಗೆ
ಮೊದಲಾಗಿ....
ನಿನ್ನಾತ್ಮದ ನೆಂಟಿಗೆ..
ಬಿದ್ದವನು ....ಅಷ್ಟೇ... ’ನಾನು’....


’ನಾ ಮಾತಾಡಿದೆಲ್ಲ ಬರಿತ್ತೀಯಾ ನೀನು... ಇನ್ಮೇಲ್... ನಿನ್ ಜೊತೆ... ಮಾತೇ ಆಡ್‌ಬಾರ್ದು... ನೋಡು....’

’ಹಂಗ್ಯಾಕೆ ಅಂತೀಯ... ನಿನ್ನ ಮಾತುಗಳಿಗೆಲ್ಲ.. ಪೇಟೆಂಟ್ ತಗೊಂಡಿರೋಳ್ ತರ ಆಡ್ಬೇಡ.... ಹಾಗದ್ರೂ ಮಾಡು ಮಾರಾಯ್ತಿ... ಒಳ್ಳೇ ರಾಯಲ್ಟಿನಾದ್ರು ಸಿಗ್ಬಹುದು...!!!!!’

ಹೋಗ್ಲಿ ಇದು ಕೊನೇದು.... ಸ್ವಲ್ಪ ದೊಡ್ಡ ಮನಸು ಮಾಡಿ ಕೇಳು....

ನಾನು ಬರೆದದ್ದೇನಿದೆ...?
ಕೆಲವು ನೀ ನೀಡಿದ್ದು...
ಹಲವು ನಾ ಹುಡುಕಿದ್ದು...
ಮಿಕ್ಕವೆಲ್ಲ...ನಿನ್ನಿಂದ ಕದ್ದದ್ದು...!!!!
ಪ್ರತಿ ಸಾಲಿನ ಪದಗಳಷ್ಟೇ ಅಲ್ಲ ..
ಪ್ರತಿ ಅಕ್ಷರದ ಭಾವವೂ ಕೂಡ...
ನಿನ್ನ ಪಾದ ಸೋಕಿಸೋ..
ಪುಷ್ಪಗಳಷ್ಟೇ......

.....
ಸರಿ ನಾ...ಜಗಳಕ್ಕೆ ಬೀಳೊಲ್ಲ ತಾನೆ.....?

--------


.......ಏನ್ರೀ ನೀವ್ .. ಲವ್ ಮಾಡ್ತಾಯಿದ್ದೀರಾ...?


ಒನ್ ವೇ ಲವ್ವಾ..? ಟು ವೇ ಲವ್ವಾ..? ಟೈಮ್ ಪಾಸ್ ಲವ್ವಾ ಲೈಫ್ ಟೈಮ್ ಲವ್ವಾ...?
ಪಾರ್ಕ್ ಲವ್ವಾ..? ಪಾಕೆಟ್ ಲವ್ವಾ...? ಸಿನಿಮಾ ಲವ್ವಾ ಸೀರಿಯಸ್ ಲವ್ವಾ...?
ಒನ್ ಇಯರ್‍ ಪ್ಯಾಕೇಜಾ...? ಫೈವ್ ಇಯರ್‍ ಪ್ಲಾನೋ...?
ಸೇಮ್ ಕ್ಯಾಸ್ಟ್ ತಾನೆ...? ಇಂಟರ್‍ ಕ್ಯಾಸ್ಟ್ ರಿಸ್ಕೂ ಅದ್ಕೆ ಕೇಳ್ದೆ...
ನೋಡೋ ಲವ್ವಾ..? ಮಾತಾಡೋ ಲವ್ವಾ...?
ಮೀಟಿಂಗ್ ಲವ್ವಾ..? ಚಾಟಿಂಗ್ ಲವ್ವಾ...?
ಮೇಲ್ ಲವ್ವಾ...? ಮೇಸೇಜ್ ಲವ್ವಾ...?


ಸಕ್ಸಸ್ ಆ..? ಫೇಲ್ಯೂರ್‍ ಆ...? ......??????? ಊ...ಫ್‌‌ಫ್‌ಫ್...... ಈ ತರದ ಪ್ರಶ್ನೆ ಯಾವ್ದೂ ಕೇಳಲ್ಲ ನಾನು....




ಹೇಳಿ
.... ನಿಮ್ದು cute ಲವ್ವಾ..?
ನಿಮ್
ಲವ್ pretty ನಾ,,,?
ಹೇಳ್ರೀ... ನಿಮ್ ಪ್ರೀತಿ ಮುದ್ದಾಗಿದಿಯಾ....?

11 comments:

Unknown said...

ಭಾಷೆಯ ಪ್ರೌಢತೆಯೊಂದಿಗೆ ಮೇಳೈಸಿರುವ, ಪ್ರಿಯತೆಮೆಗಾಗಿ ಬರೆಯುವ ಕವಿತೆಗಳೊಂದಿಗೆ, ಓದುಗರನ್ನು ಸೆಳೆದೊಯ್ಯುವ ಪ್ರೇಮಿಗಳ ಚಾಟಿಂಗ್ ಮಧುರವಾಗಿದೆ.

Ferojasha said...

ಯಶವಂತ ,

ಪ್ರೀತಿಯ...... ಮಧುರ ಮೋಹದ ಒಲುಮೆಯ ಸುಂದರ ಕನಸುಗಳು, ಸುಂದರ ಮಾತುಗಳು, ಸುಂದರ ಸರಸಗಳು, ಸುಂದರ ವಿರಸಗಳು, ಮತ್ತು ಇನ್ನೆನೋ…....... !
"ಚನ್ನಾಗಿದೆ".......
ಆದ್ರೆ ಒಂದು ಪ್ರಶ್ನೆ .......!
ಆ ನಿನ್ನ ಪ್ರೇಯಸಿ ಯಾರು..........?

ಪರಶು.., said...

ಯಶವಂತ್ ನಿಮ್ಮ ಬರಹ ಓದುತಿದ್ದಂತೆ ನಾನೆಲ್ಲೋ ನಿಮ್ಮ ಚಾಟ್ ಬಾಕ್ಸ್ ಓಪನ್ ಮಾಡಿ ಕದ್ದು ಓದ್ತಾ ಇದೀನಾ ಅನಿಸ್ತು...

ತುಂಬಾ ಆಪ್ತತೆ ಇದೆ...
ಆದರೆ ಮೊದಲ ಬರಹಕ್ಕೆ ಕೊನೆ ಎರಡು ಸ್ಟ್ಯಾಂಜಾಗಳ 'ಲಿಂಕ್' ತಪ್ಪಿರುವಂತೆಯೂ ಭಾಸವಾಯಿತು...

Unknown said...

'ಮುಗ್ಧ ಪ್ರೇಮದ ಸಮರ್ಥ ಅಭಿವ್ಯಕ್ತಿ'....ಬರಹ ತುಂಬಾ ಚೆನ್ನಾಗಿ ಮೂಡಿ ಬಂದಿದೆ....ಯಶವಂತ.

madhu.br said...

ಯಶು,ನಿನ್ನ ನವಿರು ಹಾಸ್ಯದ ,ಮಧುರ ಪಿಸುಮಾತುಗಳ ,ಸಿಲ್ಲಿ ಜಗಳಗಳ,ಸಂಭಾಷಣೆ ಮುತ್ತುಗಳನ್ನು ಪೋಣಿಸಿದಂತೆ ಚೆಲುವಾದ ಸರವಾಗಿದೆ...ಇಲ್ಲಿನ ಪ್ರೇಮಿಗಳ ನಡುವಿ ಸಂಭಾಷಣೆ ನೈಜವೇನೋ ಎಂಬ ಅನುಮಾನ ಮುಡುತ್ತಿದೆ.... ಪದ ಜೋಡಣೆ ,ಕಿರುಕವನಗಳು ಕಥೆಯ ಸೊಬಗನ್ನು ಹೆಚ್ಚಿಸಿವೆ .....
ಲವ್ ನಲ್ಲೂ ಇಷ್ಟೊಂದು ನಮುನೆಗಳಿರುವುದು ಗೊತ್ತೇ ಇರಲಿಲ್ಲ ...ಒಟ್ಟಿನಲ್ಲಿ "ಮುದ್ದು ಪ್ರೀತಿ" ನಿನ್ನ ಮುದ್ದಾದ ಬರಹದಿಂದ ನವಿರಾಗಿ ಮೂಡಿಬಂದಿದೆ ....

Anonymous said...

ಮಧು.....
ಯಶವಂತನ "ಮುದ್ದು ಪ್ರಿತಿಯ" ಬಗ್ಗೆ ನಿಂಗೆ ಅನುಮಾನ ಬೇಡ............!
ಅದು ನೈಜವೋ ಅಥವಾ ಊಹೆಯೋ ಅಂತ......!
ಅದು ಅವನ ನಿಜವಾದ ಪ್ರೇಮಾಲಾಪ...(ಅಂತ).....ಅನ್ಸುತ್ತೆ......!
ಬೇಕಿದ್ರೆ ಕೇಳಿನೋಡು.............!
ಈಗ ನೀನ್ನ ವಿಷಯಕ್ಕೆ ಬರ್ತೀನಿ ಲವ್ ನ ಲ್ಲೂ ಇಷ್ಟೊಂದು ನಮುನೆಗಳಿರುವುದು ಗೊತ್ತೇ ಇರಲಿಲ್ಲ ಅಂತ.....
ಹೇಳಿದಿಯಲ್ಲ ನಿನ್ನವು ಇಂತಹ ಎಸ್ಟೊಂದು ಮುದ್ದು ಪ್ರೀತಿಯ ಕಥೆಗಳಿವೆಯೋ.....! ಯಾರಿಗೆ ಗೊತ್ತು ....!

Anamika said...

ನಮಸ್ತೆ ...
ನಾನು ಯಾರಿಗೂ ಪ್ರತಿಕ್ರಿಯೆ ನೀಡೋದಿಲ್ಲ ಅಂತ ದೂರಿದೆ....
ಅದಕ್ಕೆ ಇವತ್ತು ಪ್ರತಿಕ್ರಿಯೆ ನೀಡಿ ಅದನ್ನ ಹೋಗಲಾಡಿಸೋಣ ಅಂತಿದೀನಿ ...
.
.
.
ಸಾಹಿತ್ಯ ಕೃಷಿ ಅನ್ನೋದು ಜನ್ಮತ್ ಃ ಬಂದರೆ ಅದರ ಖದರ್ರೆ ಬೇರೆ .. ಆನುವಂಶಿಕವಾಗಿ ಬರೋದು ವಿರಳ ಆದರೂ ಅದ್ಭುತ .. ಪ್ರತಿ ವ್ಯಕ್ತಿ ಒಂದಲ್ಲ ಒಂದು ಹಂತದಲ್ಲಿ 'ಬರೆಯುವ' ಪ್ರಸಂಗ ಎದುರಿಸ್ತಾನೆ ..

ಆವಾಗ ಅವನು ತಾನು ಓದಿದ ಸಾಹಿತ್ಯದಿಂದ ಸಾಲ ಪಡೀತಾನೆ... ಅವಾಗ ಅದನ್ನ ಓದಿದವನಿಗೂ ಅದರ FEEL ಆಗುತ್ತೆ...

So, ಈಗ ಯಶವಂತ ವಿಷಯದಲ್ಲಿ ನಮಗೆ ಯಾವತ್ತೂ ಹಾಗನಿಸೋದಿಲ್ಲ ...ಅಲ್ದೆ ಅಲ್ಲಿ ತಪ್ಪುಗಳು ನುಸುಳಿದರೂ ನಮಗೆ ನಾವೇ ಸಮಜಾಯಿಷಿ ಕೊಟ್ಕೊಂಡು ಅದರಲ್ಲಿ spelling mistake ಆಗಿದೆಯಾ ಅಂತ ನೋಡ್ಕೋತೀವಿ ...ಅಷ್ಟು ಪ್ರಬುದ್ಧತೆ ನಮ್ಮ ಯಶವಂತ ಲೇಖನದಲ್ಲಿದೆ ...ಮುಂದೆಯೂ ಅದನ್ನೇ ಕಾಪಾಡಿ ಕೊಳ್ತಾನೆ ಅಂತ ಅನ್ಕೋತೀನಿ ..ಮತ್ತು ನನ್ನ ಶುಭ ಹಾರೈಕೆ ಸಲ್ಲಿಸ್ತೀನಿ ..

ಈ ಲೇಖನದ ಮಟ್ಟಿಗೆ ಹೇಳೋದಾದರೆ ಸರಳ , ಕೋಮಲ , ನಿಷ್ಕಪಟ , ಎಸಳು ಪ್ರೇಮದ ಅಭಿವ್ಯಕ್ತಿಯಲ್ಲಿ ಯಶವಂತ ಗೆದ್ದಿದಾನೆ ...

ನಿಮ್ಮವ ,
ರೇವಪ್ಪ

madhu.br said...

ಹಲೋ ನೇಮ್ ಇಲ್ಲದ ಅನಾಮಿಕ,ಏನ್ ಸಮಾಚಾರ ನಾನ್ ಹೇಳಿದ್ದು ಯಶು ಲೇಖನದ ಪ್ರೀತಿ ಬಗ್ಗೆ ...ನನಗಿನ್ನು ನೀನ್ ಹೇಳಿದ ಲವ್ ಬಗ್ಗೆನೇ ಗೊತ್ತಿಲ್ಲ ... ಇನ್ನು ವಿವಿಧ ನಮೂನೆ ಗಳು ನನಗೆಲ್ಲಿ ಗೊತ್ತಿರಬೇಕು ಸ್ವಾಮಿ? ಯಾರಿಗೂ ಹೇಳಲ್ಲ ನೀವ್ ಎಷ್ಟು ನಮೂನೆ ಲವ್ ಮಾಡಿದ್ದಿರಿ?

sakkath sacchi.blogspot.com said...

ಯಶ್ ,ಇದೇನು ಬರಿ ಲೇಖನವೋ ಅಥವಾ ನಿನ್ನ ಜೀವನವೋ ? ಯಾರಿಗಾದರು ಈ ಅನುಮಾನ ಮೂಡುತ್ತದೆ ;ಜೊತೆಗೆ ಅಭಿಮಾನವು ಕೂಡ .ಅದೇನ್ ಭಾಷೆನಪ್ಪ ನಿಂದು .ಗದ್ಯ ,ಪದ್ಯ ,ನಾಟಕ,ಲಹರಿ ಎಲ್ಲವನ್ನು ಹದವಾಗಿ ಬೆರೆಸಿ ಒಂದು ಮೃದುವಾದ ಅನುಭವವನ್ನು ನೀಡಿರುವೆ .ಒಟ್ಟಿನಲ್ಲಿ ನಿನ್ನ ಪ್ರೀತಿ ನಿನಗೆ ಹೆಚ್ಚು ,ಆದರವಳಪಾಲಿಗದು ಬರಿ ಹುಚ್ಚು .ಒಬ್ಬಳು ಹೆಂಡತಿಯಾ ಬಗ್ಗೆ ಸಾಮಾನ್ಯವಾಗಿ ಭಾವಿಸುವ ಹಾಗೆ ನೀನು ನಿನ್ನ ಪ್ರೇಯಸಿಯು ಆ ಎಲ್ಲ ಸ್ತ್ರೀ ಸ್ಥಾನದಲ್ಲಿರುವ ಮುದವನ್ನು ನೀಡುತ್ತಾಲೆಂದು ಭಾವಿಸುತ್ತಿಯ ಎಂದರೆ ಪ್ರೀತಿ ಹಾಗು ಪ್ರೇಯಸಿಯ ವಿಚಾರದಲ್ಲಿ ನಿನ್ನದದೆಂತ ತನ್ಮಯತೆ ?ಒಟ್ಟಿನಲ್ಲಿ ನಮ್ಮ ಹುಡುಗರಿಗೆ ಪ್ರೀತಿಯ ಬಗ್ಗೆ ಪ್ರೇಯಸಿಯ ಬಗ್ಗೆ ಒಟ್ಟಾರೆಯಾಗಿ ಒಂದು ಕಡೆ ವಿಶ್ವಾಸ ಅಭಿಮಾನಗಲಿದ್ದರು ಮತ್ತೆಲ್ಲೋ ಒಂದುಕಡೆ ಅವರ ಪ್ರೀತಿಯ ಬಗ್ಗೆ ಅವರ ಪ್ರೇಯಸಿಯ ಪ್ರತಿಕ್ರಿಯೆಯನ್ನು ಕಂಡು ಈ ರೀತಿ ಗೊಂದಲಕ್ಕೂ ಒಳಗಾಗಿದ್ದರೆನೋ :-"ಇದನ್ನೇನು ಮೊಹಬ್ಬತ್ ಎಂದು ಕರೆಯಲೇ ? ,ಬತ್ತದ ಮೋಹವೆಂದು ಅರಿಯಲೇ ?,ನನಗೊಂದು ತಿಳಿಯದಾಗಿದೆ ಕೆಳೆಲೆ !-------ಯಶ್ ನಿನ್ನ ಲೇಖನವು ನಿನ್ನ ಬಗ್ಗೆ ಅಷ್ಟೇ ಅಲ್ಲದೆ ನಿನ್ನ "ಆ "ಪ್ರೇಯಸಿಯ ಬಗ್ಗೆಯೂ ಅಭಿಮಾನವನ್ನು ಮೂಡಿಸುತ್ತದೆ .ನಿನ (ನಿಮ)ಗೆ ಶುಭವಾಗಲಿ . ನಿನ್ನ (ನಿಮ್ಮ) ಪ್ರೇಮಲಹರಿಯು ನಿನ್ನ ಲೇಖನ ಹಾಗು ಜೀವನ
ಎರಡರಲ್ಲು ನಿರ್ವಿಘ್ನವಾಗಿ ಮುಂದೆಸಾಗಲಿ -ಸಕ್ಕತ್ ಸಚ್ಚಿ

ಸಂತೋಷ್ ಸಿಹಿಮೊಗೆ said...

ಯಶು, ನವಿರು ಭಾವ ಚನ್ನಾಗಿದೆ. ಪ್ರೀತಿ, ಪ್ರೀತಿ ಮತ್ತು ಪ್ರೀತಿಯೇ ತುಂಬಿದೆ. ಮೂಲಭೂತ ಪ್ರಶ್ನೆ ಕೇಳೋಲ್ಲ. ಅರ್ಥ ಮಾಡಿಕೊಂಡಿರುವೆ ಎಂದು ಭಾವಿಸಿ ಮುಂದೆ ಸಾಗುವೆ. ಶುಭವಾಗಲಿ.
ಸಂತು...

yashavanth said...

ನಿಮ್ಮ ಪ್ರೀತಿಗೆ....ಎರಡಂಕಿದಾಟಿದ ಪ್ರತಿಕ್ರಿಯೆಗೆ... ನಾ ಆಭಾರಿ.....
ಓದಿ ಮೆಚ್ಚಿದ .... ಮೆಚ್ಚಿ ಪ್ರತಿಕ್ರಿಯಿಸಿದ ಎಲ್ಲರಿಗೂ ವಂದನೆಗಳು...
-ಯಶವಂತ್...

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago