ಮುದ್ದಿನ ಮನಸೇ.....
ಹೃನ್ಮನ ಮನಸೇ....
ಕನಸಿನ ಮನಸೇ...
ಭಾವದ ಮನಸೇ....
ಯಾತಕೆ ಕಾಣುವೆ..
ಮುದ್ದಿನ ಕನಸಾ...
ತಿಳಿಯಲಿ ಎಂತೋ.....
ಪ್ರೀತಿಯ ಸೊಗಸಾ....
’ ಹೇ.. ನಿಂಗ್ಯಾರೋ ಕವಿತಗಳ ಬಗ್ಗೆ ಸಿಕ್ಕಾಪಟ್ಟೆ ಮಿಸ್ ಗೈಡ್ ಮಾಡಿದ್ದಾರೆ.. ಇಲ್ಲಾ.. ನಿನ್ನ ಕವಿತ್ವದ ಬಗ್ಗೆ ಸೀರಿಯಸ್ಸಾಗಿ ಜೋಕ್ ಮಾಡಿದ್ದಾರೆ ..ಅಷ್ಟೇ.. ಅಷ್ಟು ಮಾತ್ರಕ್ಕೆ ಪೇಪರ್ರೂ ಪೆನ್ನೂ ಹಿಡಿದು ಕೂತ್ ಬಿಟ್ರೆ ಹೇಗೆ ಅಂತಾ...? ಮೇಲಾಗಿ ನೀನು ಬರೆದಿರೋದನೆಲ್ಲ ಮೊದಲು ಓದೋಳೆ ನಾನು.. ಅಲ್ಲಲ್ಲ.. ನೀ ಬರೆದದ್ದನೆಲ್ಲಾ... ನನಗೇ ಮೊದಲು ಓದಿಸ್ತೀಯ.....ಅದ್ಕೆ...ಅದ್ಕೆ....
’ಅದ್ಕೆ...ಏನೂ...?’
’ಅದ್ಕೆ.... ನನ್ನ ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಇರ್ಲಿ ಅಂದೇ....!!!!’
’ಅಷ್ಟೇ ಅಂತೀಯಾ.... ಕವಿತೆ ಚೆನ್ನಾಗಿಲ್ಲದಿದ್ರೆ ಬಿಡು.. ಹೇಗಿರ್ಬೇಕು ಅದನ್ನಾದ್ರೂ ಹೇಳೂ...’
"ಹಾಂ.... ಕವಿತೆ ಅಂದ್ರೆ.... ಅಂತರಂಗದಾ ಮೃದಂಗ...ದ ತರ ಇರ್ಬೇಕು ನೋಡು.. ಇನ್ನೊಂದು ವಿಷ್ಯ..... ಕವಿತೆ ಬರೆಯೋರಷ್ಟೇ ಅಲ್ಲ ಓದೋರು ಮುಖ್ಯ... ಈಗ ’ಅಂತರಂಗದಾ ಮೃದಂಗ..ಅಂತು ತೋಂತನಾನಾ...’ ಅಂತ ಹೆಣ್ತಿ ಸತ್ತೊರ್ ಹಾಗೆ ಹಾಡಿದ್ರೆ... ಕುವೆಂಪು ಬೇಜಾರ್ ಆಗಲ್ವಾ...?"
’ಅದು ಬರೆದಿರೋದು.....ಕುವೆಂಪು.. ಅಲ್ಲ ಮಾರಾಯ್ತಿ....ಬೇಂದ್ರೆ...’
’ಏಯ್... ಕುವೆಂಪು ಬೇಜಾರ್ ಆಗ್ತಾರೆ ಅಂದೆ ಹೊರ್ತು ಬರೆದಿರೋದು ಅಂದಿಲ್ಲ... ಓಹೋ ಇವನೊಬ್ನಿಗೆ ಸಾಹಿತ್ಯ ಗೊತ್ತಿರೋದು.... ಮೊದಲು ನಾನು ಮಾತಾಡೋದನ್ನ ಸರಿಯಾಗಿ ಕೇಳಿಸ್ಕೊಳೋದು ಕಲಿ... ’
ಅಂದು ..
ಮುಖಗಂಟು ಹಾಕಿ ಕೂರೋದು...ನೀನು ಹೀಗೆ ಮುನಿಸ್ಕೊಂಡಾಗ್ಲೇ ನನ್ಗೆ ಈ ಪ್ರಶ್ನೆಗಳು ಹುಟ್ಟೋದು....ಪ್ರೀತಿ ಅಂದ್ರೆ ಏನು..? ಅದು ಹೇಗಿರುತ್ತೆ...? ಉತ್ತರಾನೂ ಸಿಕ್ಕಿರುತ್ತೆ ಬಿಡು......... ಪ್ರೀತಿ ಅಂದ್ರೆ ನೀನು....ಅದು ನಿನ್ನ ಹಾಗಿರುತ್ತೆ..... ಥೇಟ್ ನಿನ್ ತರಾನೇ ಮುದ್ದಾಗಿರುತ್ತೆ.... ಅಂತ.....ಪ್ರೀತಿಗೂ ನಿನಗೂ ಪದಗಳಲಷ್ಟೇ ವ್ಯತ್ಯಾಸ .. ಭಾವದಲಲ್ಲ....ಏಯ್.... ನಡೂ ರಾತ್ರೀಲೀ... ನಿನ್ನ ಕಿವಿ ನೋಯಿವಷ್ಟು ಸಲ ಐ ಲವ್ ಯು ಹೇಳಿಸಿರೋ ನನ್ನ ಪ್ರೀತಿ ಮುದ್ದಲ್ಲ ಅನ್ನೋ ಧೈರ್ಯ ಯಾರಿಗಿದೆ ಹೇಳು....? ನಿನ್ನೊಬ್ಬಳನ್ನ ಬಿಟ್ಟು.... ನಿನ್ಗೆ ನಿನ್ಗಿಂತ ಮುದ್ದಾಗಿರೋದು ಈ ಪ್ರಪಂಚದಲ್ಲೇ ಯಾವ್ದೂ ಇಲ್ಲ ಅನ್ನೋ ಜಂಭ.... ಅಲ್ವಾ.. ನನ್ನ ಮುದ್ದಿನ ರಾಣಿ...."
ಹೇ.... ಆ ಕೊನೆ ಪದನಾ ವಾಪಸ್ ತಗೋತ್ತೀನಪ್ಪ.... ನಿನ್ನ ರಾಣಿ ಅಂತ ಕರೆಯೋದು ಬೇಡ.. ನೀನು ಮೂರು ದಿನ ಮುನಿಸ್ಕೊಳೋದು ಬೇಡ..... ನೀನಿಲ್ಲದೆ ಮೂರು.... ದಿನ....ಮೂ....ರು ದಿನ ಹೋಗ್ಲಿ ....ಮೂರು ಕ್ಷಣನೂ ಇರೋಕಾಗಲ್ಲ ... ನಿಂಗೊತ್ತು ತಾನೆ....?
ಆದ್ರೂ ಜಗಳಗಳು ಬೇಕು... ಮುನಿಸುಗಳು... ಇರ್ಬೇಕು... ಇಲ್ಲದಿದ್ರೆ ಏನ್ ಚೆನ್ನ ಅಲ್ವಾ...?
"ನಿನ್ಗೆ ನಿನ್ ಫ್ರೆಂಡ್ಶಿಪ್ ಗೆ ದೊಡ್ಡ ನಮಸ್ಕಾರ..... ಮತ್ತೆ ನನ್ನ ಮಾತಾಡಿಸ್ಬೇಡ... ಬೇಡ ಅಂದ್ರೆ ಬೇಡ.. ಅಷ್ಟೇ...." ಎಷ್ಟು ಸಾರ್ತಿ ಆಗೋಗಿದೆ ಈ ವಿದಾಯದ ಡೈಲಾಗ್ ಗಳು.....ಕೊನೆಗೆ ನನ್ನ ಉಪಟಳ ತಡೆಯಲಾರದೆ..... " ಏನಾದ್ರು ಮಾಡ್ಕೊಂಡು ಸಾಯ್ಲಿ ..ಅಂತ ಮಾತಾಡಿಸ್ದೆ... .." ಅನ್ನೋ ರಾಜಿ ಖಬೂಲಿ..... ನೀನ್ ಮಾತ್ ಮಾತಿಗೂ ಸಾಯಿ ಅನ್ನೋದು ಬಿಡ್ಲಿಲ್ಲ... ನಾನಂತು ಸಾಯ್ಲಿಲ್ಲ...
(ನನ್ನ...?!!!)ಪ್ರೀತಿನೇ ಹಾಗೆ...
ಅನುಕ್ಷಣವೂ ಅರಳೋ......
ಮಲ್ಲಿಗೆಯ ಹಾಗೆ......
ಹಾಂ ಮಲ್ಲಿಗೆ ಅಂದಾಗ ನೆನಪಾಯ್ತು ನೋಡು... ಈ ಸಾಲು....
ನಿನ್ನ ಮೊಗದಿ ...
ನಗೆಯ ಮಲ್ಲಿಗೆ...
ಕಂಡು ನಾಚಿತು...
ನಮ್ಮೂರ(ದುಂಡು) ಮಲ್ಲಿಗೆ.....
ಯಾವಾಗ್ ಬರೆದಿದ್ದು ಗೊತ್ತಾ...?
"ಗೊತ್ತು ಬಿಡು.... ಹೇ.... ನೀನು ಸ್ವಲ್ಪ ಲೂಸು ಅಂತ ಗೊತ್ತಿತ್ತು... ಆದ್ರೆ ಈ ಪರಿ ಮೆಂಟಲ್ ಅಂತ ಗೊತ್ತಿರ್ಲಿಲ್ಲ ....ನಿನ್ನನ್ನ ಸೇರಿಸೋಣ ಅಂದ್ರೆ... ನಿಮಾನ್ಸ್ ನಲ್ಲಿ ನಂಗ್ಯಾರು ಫ್ರೆಂಡ್ ಇಲ್ಲ ಗೊತ್ತಾ...." ಅಂದವಳೇ ಸ್ವಲ್ಪ ತಡೆದು.... ಇಂತಾ ಸಾಲೆಲ್ಲ ನಮ್ಮಂತೋರಿಗೆ ತೋಚಲ್ಲ ಬಿಡು.... ಅಂತೀಯ..... ಚೆನ್ನಾಗಿದೆ ಅನ್ನೋ ಹೊಗಳಕೆನೋ... ಅಥ್ವಾ ಮೆಂಟಲ್ ಗಳಿಗೆ ಮಾತ್ರ ಇಂತಾವು ಹೊಳಿತ್ತಾವೆ... ಅನ್ನೋ ಛೇಡಿಕೆನೋ.... ಗೊತ್ತಾಗದ ಹಾಗೆ ಮಾತಾಡ್ತೀಯ....
ಹೋಗ್ಲಿ ಇದನ್ನ ಕೇಳು....
ಸೊಕ್ಕಿನ ಸಾಲ ಪಡೆದಿರುವೆ...
ನಿನ್ನ ಸೊಕ್ಕಿಗೂ ...
ಸೊಗಸಿದೆಯಲ್ಲ...ಮುದ್ದಿದೆಯಲ್ಲ...
.....
ಹೇಗಿದೆ...?
....
...
...
...
...... ’ಸಾಯ್ಲಿ’.... ಅಂತನಾ....?!!!!!!
ಆದ್ರೆ ನೀನು ಒಳ್ಳೆ ಲಹರಿಯಲ್ಲಿದ್ದಾಗ ಆ ಮಾತೆ ಬೇರೆ ಬಿಡು... ಮರೆತು ಹೋದ ಭಾವಗೀತನ ನೆನಪಿಸಿ ಹಾಡೋದು .... ಹಿಂದಿ ಹಾಡು ಹೇಳಿ ಅದರ ಅರ್ಥ ಬೇಕಾದ್ರು ಹೇಳೋಳೇ ನೀನು....... ನಿನ್ನಷ್ಟು ಮನಸ್ವೀ ಗೆಳತಿ ಮತ್ತೊಬ್ಬಳಿಲ್ಲ ನೋಡು ನನ್ಗೆ.... ಒಟ್ಟಿನಲ್ಲಿ ನಿನ್ನ ಹಾಡಿಗೆ ಅಹೋರಾತ್ರಿಯ ಅಭಿಮಾನಿ ನಾನು.... ಆಗೆಲ್ಲ ಒಮ್ಮೆ ನೀನು ಪದ್ಯ ಹೇಳೋ ಪ್ರೈಮರಿ ಪೋರಿ .... ಮಗದೊಮ್ಮೆ ಯುಗಳ ಗೀತೆಯ ನನ್ನ ಹೀರೋಯಿನ್....ಇನ್ನೊಮ್ಮೆ... ಲಾಲಿಪದದ ನನ್ನವ್ವ...
ನೀನು..... ನೀನು...ನೀನು....
......ನಾನು,,,,,,
ನಿನ್ನ ನಗೆಯ ಕಂಡವರು..ಲೆಕ್ಕವಿಲ್ಲ ಬಿಡು...
ಲೆಕ್ಕ ಬೇಡಬಿಡು...
ಸುಡುವಷ್ಟು ಸಿಟ್ಟನ್ನ...
ಕ್ಷಣದಲ್ಲೇ ಮರೆಮಾಚಿ..
ಹೊಮ್ಮಿಸಿದ ಹೊನ್ನಗೆಯ..
ಕಂಡವನು....ನಾನು...
ನಾನು ಮತ್ತೇನಲ್ಲ..
ನಿನ್ನಂದದ ಆಕರ್ಷಣೆಗೆ
ಮೊದಲಾಗಿ....
ನಿನ್ನಾತ್ಮದ ನೆಂಟಿಗೆ..
ಬಿದ್ದವನು ....ಅಷ್ಟೇ... ’ನಾನು’....
’ನಾ ಮಾತಾಡಿದೆಲ್ಲ ಬರಿತ್ತೀಯಾ ನೀನು... ಇನ್ಮೇಲ್... ನಿನ್ ಜೊತೆ... ಮಾತೇ ಆಡ್ಬಾರ್ದು... ನೋಡು....’
’ಹಂಗ್ಯಾಕೆ ಅಂತೀಯ... ನಿನ್ನ ಮಾತುಗಳಿಗೆಲ್ಲ.. ಪೇಟೆಂಟ್ ತಗೊಂಡಿರೋಳ್ ತರ ಆಡ್ಬೇಡ.... ಹಾಗದ್ರೂ ಮಾಡು ಮಾರಾಯ್ತಿ... ಒಳ್ಳೇ ರಾಯಲ್ಟಿನಾದ್ರು ಸಿಗ್ಬಹುದು...!!!!!’
ಹೋಗ್ಲಿ ಇದು ಕೊನೇದು.... ಸ್ವಲ್ಪ ದೊಡ್ಡ ಮನಸು ಮಾಡಿ ಕೇಳು....
ಕೆಲವು ನೀ ನೀಡಿದ್ದು...
ಹಲವು ನಾ ಹುಡುಕಿದ್ದು...
ಮಿಕ್ಕವೆಲ್ಲ...ನಿನ್ನಿಂದ ಕದ್ದದ್ದು...!!!!
ಪ್ರತಿ ಸಾಲಿನ ಪದಗಳಷ್ಟೇ ಅಲ್ಲ ..
ಪ್ರತಿ ಅಕ್ಷರದ ಭಾವವೂ ಕೂಡ...
ನಿನ್ನ ಪಾದ ಸೋಕಿಸೋ..
ಪುಷ್ಪಗಳಷ್ಟೇ......
.....
ಸರಿ ನಾ...ಜಗಳಕ್ಕೆ ಬೀಳೊಲ್ಲ ತಾನೆ.....?
--------
ಒನ್ ವೇ ಲವ್ವಾ..? ಟು ವೇ ಲವ್ವಾ..? ಟೈಮ್ ಪಾಸ್ ಲವ್ವಾ ಲೈಫ್ ಟೈಮ್ ಲವ್ವಾ...?
ಪಾರ್ಕ್ ಲವ್ವಾ..? ಪಾಕೆಟ್ ಲವ್ವಾ...? ಸಿನಿಮಾ ಲವ್ವಾ ಸೀರಿಯಸ್ ಲವ್ವಾ...?
ಒನ್ ಇಯರ್ ಪ್ಯಾಕೇಜಾ...? ಫೈವ್ ಇಯರ್ ಪ್ಲಾನೋ...?
ಸೇಮ್ ಕ್ಯಾಸ್ಟ್ ತಾನೆ...? ಇಂಟರ್ ಕ್ಯಾಸ್ಟ್ ರಿಸ್ಕೂ ಅದ್ಕೆ ಕೇಳ್ದೆ...
ನೋಡೋ ಲವ್ವಾ..? ಮಾತಾಡೋ ಲವ್ವಾ...?
ಮೀಟಿಂಗ್ ಲವ್ವಾ..? ಚಾಟಿಂಗ್ ಲವ್ವಾ...?
ಮೇಲ್ ಲವ್ವಾ...? ಮೇಸೇಜ್ ಲವ್ವಾ...?
11 comments:
ಭಾಷೆಯ ಪ್ರೌಢತೆಯೊಂದಿಗೆ ಮೇಳೈಸಿರುವ, ಪ್ರಿಯತೆಮೆಗಾಗಿ ಬರೆಯುವ ಕವಿತೆಗಳೊಂದಿಗೆ, ಓದುಗರನ್ನು ಸೆಳೆದೊಯ್ಯುವ ಪ್ರೇಮಿಗಳ ಚಾಟಿಂಗ್ ಮಧುರವಾಗಿದೆ.
ಯಶವಂತ ,
ಪ್ರೀತಿಯ...... ಮಧುರ ಮೋಹದ ಒಲುಮೆಯ ಸುಂದರ ಕನಸುಗಳು, ಸುಂದರ ಮಾತುಗಳು, ಸುಂದರ ಸರಸಗಳು, ಸುಂದರ ವಿರಸಗಳು, ಮತ್ತು ಇನ್ನೆನೋ…....... !
"ಚನ್ನಾಗಿದೆ".......
ಆದ್ರೆ ಒಂದು ಪ್ರಶ್ನೆ .......!
ಆ ನಿನ್ನ ಪ್ರೇಯಸಿ ಯಾರು..........?
ಯಶವಂತ್ ನಿಮ್ಮ ಬರಹ ಓದುತಿದ್ದಂತೆ ನಾನೆಲ್ಲೋ ನಿಮ್ಮ ಚಾಟ್ ಬಾಕ್ಸ್ ಓಪನ್ ಮಾಡಿ ಕದ್ದು ಓದ್ತಾ ಇದೀನಾ ಅನಿಸ್ತು...
ತುಂಬಾ ಆಪ್ತತೆ ಇದೆ...
ಆದರೆ ಮೊದಲ ಬರಹಕ್ಕೆ ಕೊನೆ ಎರಡು ಸ್ಟ್ಯಾಂಜಾಗಳ 'ಲಿಂಕ್' ತಪ್ಪಿರುವಂತೆಯೂ ಭಾಸವಾಯಿತು...
'ಮುಗ್ಧ ಪ್ರೇಮದ ಸಮರ್ಥ ಅಭಿವ್ಯಕ್ತಿ'....ಬರಹ ತುಂಬಾ ಚೆನ್ನಾಗಿ ಮೂಡಿ ಬಂದಿದೆ....ಯಶವಂತ.
ಯಶು,ನಿನ್ನ ನವಿರು ಹಾಸ್ಯದ ,ಮಧುರ ಪಿಸುಮಾತುಗಳ ,ಸಿಲ್ಲಿ ಜಗಳಗಳ,ಸಂಭಾಷಣೆ ಮುತ್ತುಗಳನ್ನು ಪೋಣಿಸಿದಂತೆ ಚೆಲುವಾದ ಸರವಾಗಿದೆ...ಇಲ್ಲಿನ ಪ್ರೇಮಿಗಳ ನಡುವಿ ಸಂಭಾಷಣೆ ನೈಜವೇನೋ ಎಂಬ ಅನುಮಾನ ಮುಡುತ್ತಿದೆ.... ಪದ ಜೋಡಣೆ ,ಕಿರುಕವನಗಳು ಕಥೆಯ ಸೊಬಗನ್ನು ಹೆಚ್ಚಿಸಿವೆ .....
ಲವ್ ನಲ್ಲೂ ಇಷ್ಟೊಂದು ನಮುನೆಗಳಿರುವುದು ಗೊತ್ತೇ ಇರಲಿಲ್ಲ ...ಒಟ್ಟಿನಲ್ಲಿ "ಮುದ್ದು ಪ್ರೀತಿ" ನಿನ್ನ ಮುದ್ದಾದ ಬರಹದಿಂದ ನವಿರಾಗಿ ಮೂಡಿಬಂದಿದೆ ....
ಮಧು.....
ಯಶವಂತನ "ಮುದ್ದು ಪ್ರಿತಿಯ" ಬಗ್ಗೆ ನಿಂಗೆ ಅನುಮಾನ ಬೇಡ............!
ಅದು ನೈಜವೋ ಅಥವಾ ಊಹೆಯೋ ಅಂತ......!
ಅದು ಅವನ ನಿಜವಾದ ಪ್ರೇಮಾಲಾಪ...(ಅಂತ).....ಅನ್ಸುತ್ತೆ......!
ಬೇಕಿದ್ರೆ ಕೇಳಿನೋಡು.............!
ಈಗ ನೀನ್ನ ವಿಷಯಕ್ಕೆ ಬರ್ತೀನಿ ಲವ್ ನ ಲ್ಲೂ ಇಷ್ಟೊಂದು ನಮುನೆಗಳಿರುವುದು ಗೊತ್ತೇ ಇರಲಿಲ್ಲ ಅಂತ.....
ಹೇಳಿದಿಯಲ್ಲ ನಿನ್ನವು ಇಂತಹ ಎಸ್ಟೊಂದು ಮುದ್ದು ಪ್ರೀತಿಯ ಕಥೆಗಳಿವೆಯೋ.....! ಯಾರಿಗೆ ಗೊತ್ತು ....!
ನಮಸ್ತೆ ...
ನಾನು ಯಾರಿಗೂ ಪ್ರತಿಕ್ರಿಯೆ ನೀಡೋದಿಲ್ಲ ಅಂತ ದೂರಿದೆ....
ಅದಕ್ಕೆ ಇವತ್ತು ಪ್ರತಿಕ್ರಿಯೆ ನೀಡಿ ಅದನ್ನ ಹೋಗಲಾಡಿಸೋಣ ಅಂತಿದೀನಿ ...
.
.
.
ಸಾಹಿತ್ಯ ಕೃಷಿ ಅನ್ನೋದು ಜನ್ಮತ್ ಃ ಬಂದರೆ ಅದರ ಖದರ್ರೆ ಬೇರೆ .. ಆನುವಂಶಿಕವಾಗಿ ಬರೋದು ವಿರಳ ಆದರೂ ಅದ್ಭುತ .. ಪ್ರತಿ ವ್ಯಕ್ತಿ ಒಂದಲ್ಲ ಒಂದು ಹಂತದಲ್ಲಿ 'ಬರೆಯುವ' ಪ್ರಸಂಗ ಎದುರಿಸ್ತಾನೆ ..
ಆವಾಗ ಅವನು ತಾನು ಓದಿದ ಸಾಹಿತ್ಯದಿಂದ ಸಾಲ ಪಡೀತಾನೆ... ಅವಾಗ ಅದನ್ನ ಓದಿದವನಿಗೂ ಅದರ FEEL ಆಗುತ್ತೆ...
So, ಈಗ ಯಶವಂತ ವಿಷಯದಲ್ಲಿ ನಮಗೆ ಯಾವತ್ತೂ ಹಾಗನಿಸೋದಿಲ್ಲ ...ಅಲ್ದೆ ಅಲ್ಲಿ ತಪ್ಪುಗಳು ನುಸುಳಿದರೂ ನಮಗೆ ನಾವೇ ಸಮಜಾಯಿಷಿ ಕೊಟ್ಕೊಂಡು ಅದರಲ್ಲಿ spelling mistake ಆಗಿದೆಯಾ ಅಂತ ನೋಡ್ಕೋತೀವಿ ...ಅಷ್ಟು ಪ್ರಬುದ್ಧತೆ ನಮ್ಮ ಯಶವಂತ ಲೇಖನದಲ್ಲಿದೆ ...ಮುಂದೆಯೂ ಅದನ್ನೇ ಕಾಪಾಡಿ ಕೊಳ್ತಾನೆ ಅಂತ ಅನ್ಕೋತೀನಿ ..ಮತ್ತು ನನ್ನ ಶುಭ ಹಾರೈಕೆ ಸಲ್ಲಿಸ್ತೀನಿ ..
ಈ ಲೇಖನದ ಮಟ್ಟಿಗೆ ಹೇಳೋದಾದರೆ ಸರಳ , ಕೋಮಲ , ನಿಷ್ಕಪಟ , ಎಸಳು ಪ್ರೇಮದ ಅಭಿವ್ಯಕ್ತಿಯಲ್ಲಿ ಯಶವಂತ ಗೆದ್ದಿದಾನೆ ...
ನಿಮ್ಮವ ,
ರೇವಪ್ಪ
ಹಲೋ ನೇಮ್ ಇಲ್ಲದ ಅನಾಮಿಕ,ಏನ್ ಸಮಾಚಾರ ನಾನ್ ಹೇಳಿದ್ದು ಯಶು ಲೇಖನದ ಪ್ರೀತಿ ಬಗ್ಗೆ ...ನನಗಿನ್ನು ನೀನ್ ಹೇಳಿದ ಲವ್ ಬಗ್ಗೆನೇ ಗೊತ್ತಿಲ್ಲ ... ಇನ್ನು ವಿವಿಧ ನಮೂನೆ ಗಳು ನನಗೆಲ್ಲಿ ಗೊತ್ತಿರಬೇಕು ಸ್ವಾಮಿ? ಯಾರಿಗೂ ಹೇಳಲ್ಲ ನೀವ್ ಎಷ್ಟು ನಮೂನೆ ಲವ್ ಮಾಡಿದ್ದಿರಿ?
ಯಶ್ ,ಇದೇನು ಬರಿ ಲೇಖನವೋ ಅಥವಾ ನಿನ್ನ ಜೀವನವೋ ? ಯಾರಿಗಾದರು ಈ ಅನುಮಾನ ಮೂಡುತ್ತದೆ ;ಜೊತೆಗೆ ಅಭಿಮಾನವು ಕೂಡ .ಅದೇನ್ ಭಾಷೆನಪ್ಪ ನಿಂದು .ಗದ್ಯ ,ಪದ್ಯ ,ನಾಟಕ,ಲಹರಿ ಎಲ್ಲವನ್ನು ಹದವಾಗಿ ಬೆರೆಸಿ ಒಂದು ಮೃದುವಾದ ಅನುಭವವನ್ನು ನೀಡಿರುವೆ .ಒಟ್ಟಿನಲ್ಲಿ ನಿನ್ನ ಪ್ರೀತಿ ನಿನಗೆ ಹೆಚ್ಚು ,ಆದರವಳಪಾಲಿಗದು ಬರಿ ಹುಚ್ಚು .ಒಬ್ಬಳು ಹೆಂಡತಿಯಾ ಬಗ್ಗೆ ಸಾಮಾನ್ಯವಾಗಿ ಭಾವಿಸುವ ಹಾಗೆ ನೀನು ನಿನ್ನ ಪ್ರೇಯಸಿಯು ಆ ಎಲ್ಲ ಸ್ತ್ರೀ ಸ್ಥಾನದಲ್ಲಿರುವ ಮುದವನ್ನು ನೀಡುತ್ತಾಲೆಂದು ಭಾವಿಸುತ್ತಿಯ ಎಂದರೆ ಪ್ರೀತಿ ಹಾಗು ಪ್ರೇಯಸಿಯ ವಿಚಾರದಲ್ಲಿ ನಿನ್ನದದೆಂತ ತನ್ಮಯತೆ ?ಒಟ್ಟಿನಲ್ಲಿ ನಮ್ಮ ಹುಡುಗರಿಗೆ ಪ್ರೀತಿಯ ಬಗ್ಗೆ ಪ್ರೇಯಸಿಯ ಬಗ್ಗೆ ಒಟ್ಟಾರೆಯಾಗಿ ಒಂದು ಕಡೆ ವಿಶ್ವಾಸ ಅಭಿಮಾನಗಲಿದ್ದರು ಮತ್ತೆಲ್ಲೋ ಒಂದುಕಡೆ ಅವರ ಪ್ರೀತಿಯ ಬಗ್ಗೆ ಅವರ ಪ್ರೇಯಸಿಯ ಪ್ರತಿಕ್ರಿಯೆಯನ್ನು ಕಂಡು ಈ ರೀತಿ ಗೊಂದಲಕ್ಕೂ ಒಳಗಾಗಿದ್ದರೆನೋ :-"ಇದನ್ನೇನು ಮೊಹಬ್ಬತ್ ಎಂದು ಕರೆಯಲೇ ? ,ಬತ್ತದ ಮೋಹವೆಂದು ಅರಿಯಲೇ ?,ನನಗೊಂದು ತಿಳಿಯದಾಗಿದೆ ಕೆಳೆಲೆ !-------ಯಶ್ ನಿನ್ನ ಲೇಖನವು ನಿನ್ನ ಬಗ್ಗೆ ಅಷ್ಟೇ ಅಲ್ಲದೆ ನಿನ್ನ "ಆ "ಪ್ರೇಯಸಿಯ ಬಗ್ಗೆಯೂ ಅಭಿಮಾನವನ್ನು ಮೂಡಿಸುತ್ತದೆ .ನಿನ (ನಿಮ)ಗೆ ಶುಭವಾಗಲಿ . ನಿನ್ನ (ನಿಮ್ಮ) ಪ್ರೇಮಲಹರಿಯು ನಿನ್ನ ಲೇಖನ ಹಾಗು ಜೀವನ
ಎರಡರಲ್ಲು ನಿರ್ವಿಘ್ನವಾಗಿ ಮುಂದೆಸಾಗಲಿ -ಸಕ್ಕತ್ ಸಚ್ಚಿ
ಯಶು, ನವಿರು ಭಾವ ಚನ್ನಾಗಿದೆ. ಪ್ರೀತಿ, ಪ್ರೀತಿ ಮತ್ತು ಪ್ರೀತಿಯೇ ತುಂಬಿದೆ. ಮೂಲಭೂತ ಪ್ರಶ್ನೆ ಕೇಳೋಲ್ಲ. ಅರ್ಥ ಮಾಡಿಕೊಂಡಿರುವೆ ಎಂದು ಭಾವಿಸಿ ಮುಂದೆ ಸಾಗುವೆ. ಶುಭವಾಗಲಿ.
ಸಂತು...
ನಿಮ್ಮ ಪ್ರೀತಿಗೆ....ಎರಡಂಕಿದಾಟಿದ ಪ್ರತಿಕ್ರಿಯೆಗೆ... ನಾ ಆಭಾರಿ.....
ಓದಿ ಮೆಚ್ಚಿದ .... ಮೆಚ್ಚಿ ಪ್ರತಿಕ್ರಿಯಿಸಿದ ಎಲ್ಲರಿಗೂ ವಂದನೆಗಳು...
-ಯಶವಂತ್...
Post a Comment