03 August 2009

ಸಂತೋಷ್ ಸಿಹಿಮೊಗೆ 2 ಕವನಗಳು

ಅರಳಿ ಮರ....

ಒಂದು ಅರಳಿ ಮರ,

ತುಂಗೆ ತೀರದ ಬಳಿ.

ನಾ ಅದರ ಮುಂದೆ ಅಜ;

ಅದು ನೂರ್ಮಡಿಗಳಷ್ಟು ಗಜ.

ಮಳೆಯಲ್ಲೊಮ್ಮೆ

ಬುಡದಲ್ಲಿ ನಿಂತಿದ್ದೆ.

ಪಕ್ಕದ ಬೇವಿನೊಂದಿಗೆ

ಮದುವೆಯಾಗಿತ್ತು.

ಕಲ್ಲುಗಳ ರಾಶಿಗೆ

ಪೂಜೆ ಸಾಗಿತ್ತು.

ಕೆಳಗೆ ಅರಳಿಯ ಹಣ್ಣುಗಳು,

ಬಿಡಿಸಿದರೆ ಬರೀ ಹುಳುಗಳು.

ಬಿತ್ತು ಕೊಂಬೆಯೊಂದು ಮಳೆಗೆ.

ಹೊತ್ತೊಯ್ದೆ ಮನೆಗೆ.

ಅರಳಿ ಮರ ಶ್ರೇಷ್ಠ,

ಒಲೆಗೆ ಒಡ್ಡಬಾರದೆಂದಳಮ್ಮ.

ಪಕ್ಕದ ಹುಸೇನಣ್ಣನ ಮನೆಯಲಿ

ಒಡ್ಡಿ ಅರಳಿಯ ಕೊಂಬೆ,

ರೊಟ್ಟಿ ಮಾಡಿ ತಿಂದು;

ಜಾರಿದರು ಸುಖ ನಿದ್ದೆಗೆ...!

ನಿರ್ವಾಣ...

ನನ್ನಜ್ಜ

ಗಾಣದೆತ್ತಿನ ಜೀವ.

ಅವನಿಗೆ ಅಸಾಧ್ಯ

ಅಳುನಗುಗಳು.

ಅಪಘಾತಕ್ಕೊಳಗಾದ.

ಹೊತ್ತಿ-ಸುತ್ತಿ ಬಂದರು,

ಊರು-ನಗರಗಳ ಆಸ್ಪತ್ರೆ.

"ಪ್ರಾಣ" ಹೋಗದೆ

ತಂದರು ಮನೆಗೆ.

ನಡುಮನೆಯಲಿ

ನಿಶ್ಚಲನಾಗಿದ್ಧವನು

ಮನದಲ್ಲೇ ಮನೆನೋಡಿದ.

ಕಣ್ಣಂಚಲಿ ಕಂಬನಿ ಮಿಡಿಯಿತು.

ಮನೆಯ ಮೇಲೆ ಕೂತಿದ್ದ ಹಕ್ಕಿ ಹಾರಿತ್ತು.



-ಸಂತೋಷ್ ಸಿಹಿಮೊಗೆ.

6 comments:

Unknown said...

ಸಂತೋಷ್ ಬ್ಲಾಗ್ ಗೆ ಎಂಟ್ರಿ ಕೊಟ್ಟಿದ್ದಕ್ಕೆ ಸ್ವಾಗತ. ನಿಮ್ಮ ತಿಳಿ ಹಾಸ್ಯದ, ಚಿಂತನಾಪರ ಕವಿತೆಗಳು ನನಗೆ ತುಂಬಾ ಇಷ್ಟವಾಗುತ್ತವೆ. ಪ್ರಸ್ತುತ ಅರಳಿ ಮರ ಕವಿತೆಯಲ್ಲಿಯ ಅರಳಿಯ ವಿಶಿಷ್ಟತೆ ಹಾಗೂ ನಮ್ಮ ಸಂಸ್ಕೃತಿಯ ನಡುವಿನ ಬಂಧವು ತಿಳಿ ಹಾಸ್ಯದ ಮುಖೇನ ಚನ್ನಾಗಿ ಮೂಡಿಬಂದಿದೆ. ನಿರ್ವಾಣದಲ್ಲಿನ ವೃದ್ಧನ ಅಂತ್ಯವನ್ನು ಪೂರ್ವದ ಆತನ ತುಮುಲದ ಜೊತೆಗೆ ಮುಷ್ಟಿಯಲ್ಲಿ ಹಿಡಿದಂತಿದೆ,ಅರ್ಥವತ್ತಾಗಿದೆ.

ಸಂತೋಷ್ ಸಿಹಿಮೊಗೆ said...

ಮಂಜು ಧನ್ಯವಾದಗಳು, ನಿಮ್ಮ ಸಲಹೆ ಸೂಚನೆಗಳು ನನ್ನ ಬೆಳವಣಿಗೆಗೆ ಸ್ಪೂರ್ತಿದಾಯಕ. ಸ್ನೇಹಿತನಿಗೆ ಸ್ನೇಹಪೂರ್ವಕ ಕೋರಿಕೆ.

yashavanth said...

ಸಂತು... ನಮ್ಮ ಬ್ಲಾಗ್ ಗೆ ನಿನಗೆ ಹೃತ್ಪೂರ್ವಕ ಸ್ವಾಗತ....
ಅರಳಿ ಮರ ಕವನ, ಮೌಢ್ಯತೆಯ ಲೇವಡಿ ಅಷ್ಟೇ ಅಲ್ಲ, ಬದಲಾವಣೆ ಮತ್ತು ಅನಿವಾರ್ಯತೆಗೆ ಒಗ್ಗಿಕೊಂಡ ಬದುಕಿನ ವಾಸ್ತವಿಕತೆಗೆ ಹಿಡಿದ ಕನ್ನಡಿ

ನಿರ್ವಾಣ ಬದುಕಿನದೋ,ದುಡಿಮೆಯದೋ, ಸಾರ್ಥಕತೆ(?)ಯದೋ... ಅಪೂರ್ಣತೆಯದೋ... ಚಿಂತನೆಗೆ ಹಚ್ಚುವಂತ ಕವನ...

ಅರ್ಥಪೂರ್ಣ ಕವನಗಳು....

ಮುಂದಿನ ಕವನಗಳ ನಿರೀಕ್ಷೆಯಲ್ಲಿ....

ಪರಶು.., said...

ಹಾಯ್
ಇಷ್ಟು ದಿನ ಎಲ್ಲಿದ್ರಿ ಸಂತೋಷ್...!?

ಕವನಗಳೆರಡೂ ತುಂಬಾ ಚೆನ್ನಾಗಿವೆ... ಒಬ್ಬರಿಗೆ 'ಪವಿತ್ರ'ವೆನಿಸಿರುವುದು, ಇನ್ನೊಬ್ಬರಿಗೆ ಹಾಗೆನಿಸದೇ ಇರುವುದನ್ನು ತುಂಬಾ ಸೂಚ್ಯವಾಗಿ ಅರಳಿಮರ ಕವನದಲ್ಲಿ ಬಿಂಬಿಸಿದ್ದೀರ...


ಇನ್ನು ನಿರ್ವಾಣ....
"ಪ್ರಾಣ" ಹೋಗದೆ
ತಂದರು ಮನೆಗೆ...

ಪ್ರಾಣ ಹೋಗಲೆಂದು ಹೊತ್ತು ಸುತ್ತಿ ಬಂದರಾ
ಊರು-ನಗರ ಆಸ್ಪತ್ರೆ..?

ಅರ್ಥವಾಗದ ಮನುಷ್ಯ ಜೀವನದ ಜಠಿಲತೆ ...
ಸೂಪರ್..



ಪ್ರಯತ್ನ ನಿರಂತರವಾಗಿರಲಿ...

Unknown said...

ಸಂತೋಷ್ ಬ್ಲಾಗ ಗೆ ಸ್ವಾಗತ .ನೀವು ಕವನ,ಕಥೆಗಳನ್ನು ಚೆನ್ನಾಗಿ ಬರೀತೀರಾ ಅಂತಾ ಗೊತ್ತಿತ್ತು ಆದರೆ ಓದೋ ಅವಕಾಶ ಸಿಕ್ಕಿರಲಿಲ್ಲಾ ಇವತ್ತು ನಿಮ್ಮ ಕವನ ಓದಿ ತುಂಬಾ ಖುಷಿ ಆಯ್ತು....
ಮೇಲ್ನೋಟಕ್ಕೆ ಸರಳ ಅಂತ ಅನ್ನಿಸಿದರೂ...ತುಂಬಾ ಅರ್ಥಪೂರ್ಣವಾದ ಕವನಗಳು...
ನಿಮ್ಮ ಮುಂದಿನ ಕಥೆ ಕವನಗಳ ನಿರೀಕ್ಷೆಯಲ್ಲಿ....

sakkath sacchi.blogspot.com said...

ಹಾಯ್ (ಸಾಧು) ಸಂತೋಷ್ ,ನಮ್ಮ blog ಗೆ ನೀನು ಪ್ರವೇಶಿಸಿದ್ದು ನನಗೆ ತುಂಬಾ ಕುಶಿಯಾಯಿತು .ಸಚಿವಾಲಯದಲ್ಲಿ ಎಳೆಯ ಮರೆಯ ಕಾಯಿಯಂತಿರುವ ನೀನು ಈಗಲಾದರೂ ನಮಗೆ blog ನ ಮೂಲಕ ನಮಗೆ ಕಾಣಸಿಗುವನ್ತಾಗಿದ್ದಕ್ಕೆ ನಾನು ಹರ್ಷಿಸುತ್ತೇನೆ .ನೀನು ಬೂದಿ ಮುಚ್ಚಿದ ಕೆಂಡದಂತ ಪ್ರತಿಬೆ ಎಂಬುದನ್ನು ನಾನು ಬಲ್ಲೆ .ನಿಜ ಹೇಳಬೇಕೆಂದರೆ ನಿಮ್ಮಂತವರ ಸಾಹಿತ್ಯವನ್ನು ವಿಮರ್ಶಿಸುವ ಸಾಮರ್ಥ್ಯ ನನಗಿಲ್ಲ. ಆದರು ಗ್ರಹಿಸಲು ಪ್ರಯತ್ನಿಸುವೇನು ."ಅರಳಿ ಮರದಲ್ಲಿ" ನ ಅಂಧ ಶ್ರದ್ದೆ ಯಾ ವಿಡಂಬನೆ ಹಾಗು "ಅಜ್ಜ" ನ ಗತಕಾಲದ ನೆನಪು ಹಾಗು ನಾಗರಿಕ ಬದುಕಿನ ನಡುವಿನ ಸಂಗರ್ಷ ಗಳಿಗೆ ಒಗ್ಗಲಾಗದ ಅಸಹಾಯಕತೆ ಚೆನ್ನಾಗಿ ಮೂಡಿಬಂದಿದೆ

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago