06 July 2009

ಸಚ್ಚಿ ಪ್ರತಿಕ್ರಿಯೆ

ಹಾಯ್ ರೇವ್,

'ಸಾಯೋ ಟೇಮಿಗೆ ಮಾಳಪ್ಪ ಮೀನ್ ತಿಂದ್ ಸತ್ನಂತೆ' ಬಹಳ ಚೆನ್ನಾಗಿ ಮೂಡಿಬಂದಿದೆ.ಮೇಲ್ನೋಟಕ್ಕೆ ಇದು ಕಾಡ

ಹರಟೆಯಂತಿದ್ದರು ಅದು ಸಾರ್ವಕಾಲಿಕ ಸತ್ಯವೊಂದನ್ನು ನೀತಿಕತೆಯ ರೂಪದಲ್ಲಿ ನಿರೂಪಿಸುವುದು

ವಿಶಿಷ್ಟವೆನಿಸುತ್ತದೆ.ಮುಂದಾಲೋಚನೆ ಇಲ್ಲದೆ ತೆಗೆದು ಕೊಳ್ಳುವ ನಿರ್ಧಾರಗಳಿರಲಿ ಇಲ್ಲವೇ ಇಚ್ಚಾಶಕ್ತಿಯ

ಕೊರತೆಯಿದ್ದು ಮಾಡಿಕೊಳ್ಳುವ ದುಡುಕಿನ "ಕ್ರಾಂತಿಕಾರೀ" ಬದಲಾವಣೆಗಳಾಗಲಿ ಅಥವಾ "ಸುಧಾರಣೆಗಳಾಗಲಿ

ಯಾವತ್ತಿಗೂ ಫಲಕಾರಿಯಾಗುವುದಿಲ್ಲವೆಂಬುದನ್ನು ಚೆನ್ನಾಗಿ ತಿಲಿಸಿದ್ದೀಯ .ಹಳ್ಳಿಯನ್ನು ಬಿಟ್ಟು ಪಟ್ಟಣವನ್ನು

ಸೇರುವುದಕ್ಕೂ ಮಾಳಪ್ಪ ಮೀನು ತಿಂದು ಸಾಯುವುದಕ್ಕೂ ಇರುವ ನಂಟನ್ನು ;"ಸಕಾಲದಲ್ಲಿ ಸರಿಯಾಗಿ

ನಿರ್ಧಾರಗಳನ್ನು ತೆಗೆದುಕೊಳ್ಳದೆ -ಸಾಯೋಕಾಲದಲ್ಲಿ ಏನೇನೋ ನಿರ್ಧಾರಗಳನ್ನು ತೆಗೆದುಕೊಳ್ಳುವುದು

ಸರಿಯಲ್ಲ" ಎನ್ನುವ ನೀತಿಯನ್ನು ಹೇಳಿರುವ ರೀತಿ ಚೆನ್ನಾಗಿದೆ ."ಭಾಷೆಯಲ್ಲಿರುವ ದೇಸಿ ಸೊಗಡು ಹಾಗು

ಸಂಭಾಷಣೆಯಲ್ಲಿರುವ ಸಹಜತೆ ಕಟ್ಟೆ ಮೇಲಿನ ಮಾತಿಗೆ ಸರಿವೊಂದುವಂತಿದೆ ಹಾಗು ನಮ್ಮ ಹಳ್ಳಿಗಳ ನೈಜ

ಚಿತ್ರಣವನ್ನು ನೀಡುತ್ತದೆ.''ನಾವು ತಿಳಿದವರು ಎಂಬ ಭಾವನೆಯನ್ನು ತುಳಿದು ;ನಾವು ತಳಿರುಗಳು ಎಂಬ

ಭಾವನೆಯನ್ನು ತಳೆದು ;ತಿಳುವಳಿಕೆಯ ತಿಳಿಗೊಳದಲ್ಲಿ ತೇಲಲು;ತೇಲಿ ಮುಳುಗಿ ತಳವ ಮುಟ್ಟಿ ಮೇಲೇಳಲು

ಮುಂದಾದರೆ ಯಾವ ಕತೆಯು ಬಾಲೀಶವೆಂದೋ,ಬಾಲಮಿತ್ರ ಚಂದಾಮಾಮನ ಕತೆಯೆಂದೋ ಅನಿಸುವುದಿಲ್ಲ

.ನಿನ್ನ ಈ ಸರಳ ಸುಂದರ ಪ್ರಯೋಗ ಹಾಗು ಪ್ರಯತ್ನ ಪ್ರಶಂಸನೀಯ. ಹಿಂದಿನ ಬಾರಿಯಂತೆ ಈ ಬಾರಿಯೂ ನಿನ್ನ

ಕತೆಯ "CLIMAX SCENE" [CLIMAX LINE] ದಿಟ್ಟತನದಿಂದ ಕೂಡಿದೆ.ಮೊದಲಿನಿಂದ ಕೂಲಾಗಿ

ಮಾತಾಡಿಕೊಂಡು ಬಂದು ಕೊನೆಯಲ್ಲಿ ಜ್ವಾಲಾಮುಖಿಯಂತೆ ಸ್ಪೋಟಿಸುವುದು ಬಹುಷಃ "ರೇವ್ STYLE"

ಇರಬಹುದೇನೋ.ನೇರವಾಗಿ ರಾಜಕೀಯ ವಿಚಾರಗಳನ್ನು ಉಲ್ಲೇಖಿಸಿದ "ದಿಲ್" ನನಗೆ ಇಷ್ಟವಾಯಿತು .ಈ

ಕತೆ
ಹೇಳುವ ; 'ಕಟ್ಟೆ ಮೇಲೆ ಮಾತಾಡುವ ' ನಿನ್ನ ಕಾಯಕವು ನಿರಂತರವಾಗಿ ಸಾಗಲಿ ,ನಿನಗೆ ಶುಭವಾಗಲಿ



-ಎಂದೂ ನಿಮ್ಮವ

-ಸಕ್ಕತ್ ಸಚ್ಚಿ


[
ಇಂದು (ಜುಲೈ 7-ಮಂಗಳವಾರ )ಮನೋಹರನ (ಸಂಸದೀಯ ವ್ಯವಹಾರ ಹಾಗು ಶಾಸನ ರಚನೆ ಇಲಾಖೆ )ಹುಟ್ಟುಹಬ್ಬ. ಈ ಸಂತೋಷದ ಸಂದರ್ಭದಂದು ನಮ್ಮ ಗೆಳೆಯ ಮನೋಹರನಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ -ನಿಮ್ಮ -ಜೋಗಿ ಜಂಗಮ -ಸಕ್ಕತ್ ಸಚ್ಚಿ ]




No comments:

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago