05 July 2009

ನಮ್ಮ ಬ್ಲಾಗ್ ಬಳಸುವುದು ಹೇಗೆ ?





ನಮ್ಮ ಬ್ಲಾಗ್ ಗೆ ಪ್ರತಿ ದಿನ ಹೊಸ ಹೊಸ ಸ್ನೇಹಿತರ ಸೇರ್ಪಡೆ ಯಾಗುತ್ತಿರುವುದು ಸಂತೋಷದ ವಿಷಯ ...
ಆದರೆ ಪ್ರತಿಯೊಬ್ಬ ಹೊಸ ಸದಸ್ಯನಿಗೆ ಈ ಬ್ಲಾಗ್ ಬಳಸುವ ಪರಿ ತಿಳಿಸುವುದು ADM - inistrator ಆಗಿರುವ ನನ್ನ ಆದ್ಯ ಕರ್ತವ್ಯ ..



ಅದಕ್ಕಾಗಿ ಈ ಹೊಸ GADGET ( PagePeel )ಸಹಾಯ

ಪಡೆಯುವ ವಿಚಾರ ಬಂತು ..



ನಾನು ಈ ಬ್ಲಾಗ್ ನಲ್ಲಿ ಸೇರಿಸುವ ಯಾವತ್ತೂ ಹೊಸ Gadget / Widget / ಯಾವುದೇ ಹೊಸತನದ ವಿವರಣೆ ಇಲ್ಲಿ ಸೇರಿರುತ್ತೆ ..ಹೀಗಾಗಿ ಇದು ನಿರಂತರ fresh ಆಗೋ ಲೇಖನ. ನೀವು ಯಾವುದೇ ದಿನ , ಕ್ಷಣ ಇದನ್ನ ಬಳಸಲಡ್ಡಿಯಿಲ್ಲ..ಇದು ನಿಮಗೆ All Time Ready Reckoner User Manual ಥರ ಕೆಲಸ ಮಾಡುತ್ತೆ..ಓಕೆ?

ಸೀದಾ ವಿಷಯಕ್ಕೆ ಬರ್ತೀನಿ ...


GUIDED TOUR / PRODUCT TOUR OF
ನಮ್ಮ ಬ್ಲಾಗ್

------------------------------------------------------------

A blog (a contraction of the term "weblog") is a type of website, usually maintained by an individual with regular entries of commentary, descriptions of events, or other material such as graphics or video. Entries are commonly displayed in reverse-chronological order. "Blog" can also be used as a verb, meaning to maintain or add content to a blog.


Many blogs provide commentary or news on a particular subject; others function as more personal online diaries. A typical blog combines text, images, and links to other blogs, web pages, and other media related to its topic. The ability for readers to leave comments in an interactive format is an important part of many blogs. Most blogs are primarily textual, although some focus on art (artlog), photographs (photoblog), sketches (sketchblog), videos (vlog), music (mp3 blog), and audio (pod-casting). Micro-blogging is another type of blogging, featuring very short posts.


----- ಇದು ಬ್ಲಾಗ್ ಅನ್ನೋ ಪದಕ್ಕೆ wiki ನೀಡಿರೋ ವ್ಯಾಖ್ಯಾನ. -----


ಬ್ಲಾಗ್ ಅನ್ನೋದು ಒಂದು ತೆರನ Website. ಇದರ Actual ಹೆಸರೇ Weblog ಅಂತ. ಒಬ್ಬ ವ್ಯಕ್ತಿ ತನ್ನ ವಿಚಾರಗಳನ್ನ ಅಭಿವ್ಯಕ್ತಿಸಲು ಇರುವ ಒಂದು ಅದ್ಭುತ ಸಾಧನ ಬ್ಲಾಗ್. ಇದು ಇಷ್ಟು ಪ್ರಸಿದ್ಧವಾಗಲು ಕಾರಣ ಇದರ ವೆಚ್ಚರಹಿತ ನಿರ್ವಹಣೆ ಮತ್ತು ಇದರ ವ್ಯಾಪ್ತಿ ವೈಶಾಲ್ಯತೆ. ನೀವು ನಿಮ್ಮ ಕಂಪ್ಯೂಟರ್ ಮುಂದೆ ನಿಮ್ಮ ಮನೆಯಲ್ಲಿ ಕುಳಿತು ಬರೆದ ಲೇಖನವೊಂದನ್ನ ನಿಮ್ಮ ಸ್ನೇಹಿತ ಅಮೆರಿಕೆಯೋ ಜಪಾನೋ ..ಎಲ್ಲಿಯೋ ಕುಳಿತು ಓದಬಹುದು , ಮೆಚ್ಚು - ಚುಚ್ಚು ಗಳನ್ನ ತಿಳಿಸಬಹುದು. ನಿಮ್ಮ ಸೃಜನಶೀಲತೆಗೆ ಸಾಣೆ ಹಿಡಿಯುವ ಅನೇಕ ಸವಾಲುಗಳನ್ನ ನೀವಿಲ್ಲಿ ಕಾಣಬಹುದು ಮತ್ತು ಅವನ್ನು ದಾಟುವ ಸಾಧನಗಳನ್ನೂ ದೊರಕಿಸಿಕೊಳ್ಳಬಹುದು. ಒಬ್ಬ ವ್ಯಕ್ತಿ ತನ್ನ ಜಾಣ್ಮೆ ( Talent ) ತೋರಿಸಲು ಇದೊಂದು ಉತ್ತಮ ವೇದಿಕೆ. ಅಲ್ಲದೆ ನಾವಿದನ್ನ ಜ್ಞಾನ ಪ್ರಸಾರದ ಮಾಧ್ಯಮವಾಗಿ ಕೂಡ ಬಳಸಬಹುದು ...





Like the one we are using here in our secretriat. We can find very rare such initiatives in this blog world, where lot of them are engaged in exhibiting their poetry skills, travelogue 'n' trekking experiences, paintings..etc. One can find some institutions and companies advertising their services & products, also. So, Blogging is all your thing.


ಯಾವುದೇ ಬ್ಲಾಗಿಗನಿಗೆ ತನ್ನ ಬ್ಲಾಗ್ ನಲ್ಲಿ ತನ್ನ ವಿಚಾರಧಾರೆಗಳ ಹೊರತಾಗಿ ಸೇರಿಸಲು ಅವಕಾಶವಿರುವುದು Widget ಅನ್ನೋ ವಿದ್ವತ್ ಪೂರ್ಣ Gadget ಗಳನ್ನ ...ಇವು software ಆಧಾರಿತ ಪುಟ್ಟ ಪುಟ್ಟ ಸಲಕರಣೆಗಳು ...

ಕೆಲವು ಜ್ಞಾನ ವೃದ್ಧಿಗೆ ..ಕೆಲವು ಹಾಗೇ ಸುಮ್ಮನೆ ಕಾಲ ಕಳೆಯಲು ...


ನಮ್ಮ ಬ್ಲಾಗ್ ಬಳಕೆಗೆ ಕೆಲವು ಅತ್ಯಗತ್ಯ Software ಗಳು ನಿಮ್ಮ ಕಂಪ್ಯೂಟರನಲ್ಲಿ ಮನೆ ಮಾಡಿರುವುದು ಅಪೇಕ್ಷಣೀಯವಾಗಿದೆ. ಆದಕಾರಣ ಕೆಳಕಂಡ e-link ಗಳನ್ನ ಬಳಸಿ ಸದರಿ Software ಗಳನ್ನ ನಿಮ್ಮ ನಿಮ್ಮ ಕಂಪ್ಯೂಟರ್ ಗಳಲ್ಲಿ ಬೆಚ್ಚಗೆ ಕೂರಿಸುವ ವ್ಯವಸ್ಥೆ ಮಾಡಿ.

1.
Adobe reader

2.
Java

3.
Flash Player

4.
Nudi 4.0 / Baraha 8.0 + Unicode 2.0






ನಮ್ಮ ಅನುಕೂಲಕ್ಕಾಗಿ ನಮ್ಮ ಬ್ಲಾಗ್ ಅನ್ನ 3 ಭಾಗಗಳಾಗಿ ವಿಭಾಗಿಸೋಣ ...


1. ಬ್ಲಾಗ್ ನ ಸೌಂದರ್ಯ / ಉದ್ದೇಶ ತಿಳಿಸುವುದಕ್ಕಾಗಿ ಇರುವ Gadget ಗಳು.


2. ಮಾಹಿತಿ / ಜ್ಞಾನ ವೃದ್ಧಿಗಾಗಿ ಇರುವ Widget ಗಳು.


3. ನಮ್ಮ ಸ್ವಂತ ಲೇಖನ / ಸಾಹಿತ್ಯ ಪ್ರಯತ್ನಗಳು. ( ಒಟ್ಟು ನಮ್ಮ INPUTಗಳು )





[1]



ಈ ತೆರನ Gadget ಗಳು ಕೇವಲ make-up ಗಳು ...ಇವುಗಳಿಂದ ನೀವು ಪ್ರತಿ ದಿನ ಏನನ್ನೂ ಅಪೇಕ್ಷಿಸುವ ಅಗತ್ಯವಿಲ್ಲ ..ತಮ್ಮ ದೈನಂದಿನ ಸ್ಥಾನದಲ್ಲಿದ್ದುಕೊಂಡೆ ಮನಸ್ಸಿಗೆ ಮುದ ನೀಡುವ ಕೆಲಸ ಇವುಗಳದು ...ನಮ್ಮ ಬ್ಲಾಗ್ ನಲ್ಲಿರೋ ಈ ಥರದ Gadget ಗಳು ಈ ಕೆಳಗಿನಂತಿವೆ :

# Heading : ಅಂದ್ರೆ ಪುನರ್ನವ .
[ ಇದರ ಮೇಲೆ Right-Click ಮಾಡಿ ಆ ಚಿತ್ರವನ್ನ ನೀವು ಉಳಿಸಿಕೊಳ್ಳಬಹುದು ]

# ಭಾರತ ಧ್ವಜ

# ಸ್ವಾಗತ ಬರಹ

# WorkStation ಚಿತ್ರ

# Hit Counter : ಯುಗಾದಿಯಿಂದಿಚೆಗೆ ಹೊಸತನ ಅನುಭವಿಸಿದವರ ಸಂಖ್ಯೆ

# We owe to be environment friendly, All seasons.

# ಹೊಸತನ ಹರಿಕಾರರು :
ಜೂನ್ ಒಂದರಿಂದ ಈಚೆಗೆ ಹೊಸತನ ಅನುಭವಿಸಿದವರ ಸಂಖ್ಯೆ

# ಸಮಯ



[2]



# New Today : ಈ ದಿನ ಹೊಸತು ಏನೇನಿದೆ ಅಂತ ತಿಳಿಸುವ ಇದು ನಿಮ್ಮ ಬೆಲೆಬಾಳುವ ಸಮಯ ಉಳಿಸುತ್ತೆ.

# Notice Board : ಇಲ್ಲಿ ಆಡಳಿತ - ಡಿ ಶಾಖೆಯಿಂದ ನಿಮಗೆ ತಿಳಿಸಬೇಕಿರುವ ಸೂಚನೆ - ಸಲಹೆ ಗಳನ್ನ ತಿಳಿಸಲಾಗುತ್ತೆ.

# ದಿನದ ವಚನ / ಸರ್ವಜ್ಞನ ವಚನ / ದಿನದ ಕಗ್ಗ /.....

# ಲೇಖಕರ ಕಾಲಂ ಹೆಸರು ಚಿತ್ರದೊಂದಿಗೆ ..

# ಸ್ವಗತ : ನಿಮ್ಮ ADM - inistrator ನ ಸ್ವಪರಿಚಯ

# Knowledge Tablet : ಇದು ನಮಗೆ ಜ್ಞಾನದ DOSE ನೀಡುವ Widget.

# Sports This Month : ಇದು ಆಯಾ ತಿಂಗಳ ಕ್ರೀಡಾ ಲೋಕದ Event Calendar.

# Quick Links : ಪ್ರತಿ ದಿನ ಬೇಕೆನಿಸಬಹುದಾದ 6 Website ಗಳ Preset Links...

Just Click to Open in a new Window.

1. AMS
2. Employment Newspaper
3. ಕನ್ನಡ ಬೆರಳಚ್ಚಿಸಲು Type Pad
4. NDTV ವಾರ್ತಾ website
5. KPSC
6. Railway Seat ಕಾದಿರಿಸುವ ಮುನ್ನ ಎಷ್ಟು ಸ್ಥಳ ಉಳಿದಿವೆ ಅಂತ ತಿಳಿಯುವ ಸಲುವಾಗಿ
[ with Preset ID and Password ] [ ID : mmahiti Password : kannadiga ]



# Search For Anything From This Blog : ನೀವು ಹಿಂದೆ ಯಾವುದೊ ದಿನ ಓದಿದ ಲೇಖನ ಇವತ್ತು ಇನ್ನೊಮ್ಮೆ ಓದುವ ಮನಸ್ಸಾದರೆ ಇಲ್ಲಿ ನೀಡಿರೋ box ನಲ್ಲಿ ಆ ಲೇಖನದ ಒಂದು ಶಬ್ದ [ KeyWord ] ತುಂಬಿ Search Button ಒತ್ತಿ


# ಈ ಸ್ನೇಹ ಸಾಗರ ಸೇರುವ ತೊರೆಗಳು : ನಾವು ನಮಗಾಗಿ ಬರೆದುಕೊಳ್ಳುವ ಪ್ರತಿ ಲೇಖನ / ಸೂಚನೆ / ಮುನ್ಸೂಚನೆ ಗಳನ್ನ ಒಂದು ವ್ಯವಸ್ಥಿತ ಪಟ್ಟಿಯಲ್ಲಿ (Bunch ನಲ್ಲಿ) ಸೇರಿಸಿ ಇಡಲಾಗಿದೆ. ನಿಮಗೆ ಬೇಕಾದ ಲೇಖಕರ ಲೇಖನ ಓದಲು ಸಂಬಂಧಿಸಿದ ಹೆಸರಿನ ಮೇಲೆ Click ಮಾಡಿದರಾಯಿತು.

# Random Post : ಇದು ಒಂಥರಾ ಆಟ ..ಈ Link ಮೇಲೆ Click ಮಾಡಿದರೆ ನಮ್ಮ ಬ್ಲಾಗ್ ನಲ್ಲಿ ಇಲ್ಲೀವರೆಗೆ ಅಚ್ಚು ಕಂಡಿರುವ ಯಾವುದಾದರೊಂದು ಲೇಖನವನ್ನ ನಮ್ಮ ಮುಂದೆ ಎಸೆಯುತ್ತದೆ ...ಹಾಗೆ ಸುಮ್ಮನೆ ಅನ್ನೋ ಥರ.

# Book Shelf : ಇದು ಪ್ರತಿ ವಾರ Update ಆಗೋ Widget. ಇದು ನಮಗೆ At the Least ತಿಳಿಸೋ ಮಾಹಿತಿ ಏನೆಂದರೆ ಆ ಪುಸ್ತಕ ಬರೆದಿರೋರು ಯಾರು ಅಂತ ...ಯಾವುದಾದರೊಂದು ಪರೀಕ್ಷೆಯಲ್ಲಿ ಇದನ್ನ ಕೇಳಿದರೆ ಅನುಕೂಲವಾದೀತು ..ಆದರೆ ಈ Widget ನ ಉದ್ದೇಶ ಬೇರೆ ..ಇಲ್ಲಿ ನೀಡಿರೋ ಪುಸ್ತಕವನ್ನ ಗ್ರಂಥಾಲಯದಿಂದ ಎರವಲು ಪಡೆದು ವಾರದಲ್ಲಿ ಓದಿ ನಿಮ್ಮ ಅನಿಸಿಕೆ ತಿಳಿಸಿದರೆ ...ಹೇಗಿರುತ್ತೆ ? ಅನ್ನೋ ಥರದ್ದು.

# Blog Archive : ಜನವರಿಯಿಂದ ಶುರುವಾಗಿ ಇಂದಿನವರೆಗೆ ಮತ್ತೆ ಮುಂದೆಯೂ ಆಯಾ ತಿಂಗಳು ಅಚ್ಚಾದ ಲೇಖನಗಳನ್ನ ಒಂದು ಕಡೆ ಸೇರಿಸಿ ಇಡುತ್ತೆ ..ನಿಮಗೆ ಬೇಕಾದ ತಿಂಗಳಿಂದ ತೆಗೆದು ಓದಿ ಸವಿಯಬಹುದು.

# ಕನ್ನಡ ಪತ್ರಿಕಗಳು : ನಮ್ಮ ಭಾಷೆಯ ಪತ್ರಿಕಗಳ e-ತಾಣಗಳು. ಖರ್ಚಿಲ್ಲದೆ , ಕೊಂಡುಕೊಳ್ಳದೆ ಪತ್ರಿಕೆ ಓದುವ ಹೊಸಪರಿ.

# ಕರ್ನಾಟಕಕ್ಕೆ ಸಂಬಂಧಿಸಿದ e-ತಾಣಗಳು.

# GRE Vocabulary Quiz : English ಜ್ಞಾನ ವೃದ್ಧಿಗೆ ಸಹಕಾರಿ.

# Our Blog In Your Language : ಇದು Actually ನಮಗಲ್ಲ. ಬೇರೆ ದೇಶದ ಸಂದರ್ಶಕರಿಗೆ ನಮ್ಮೀ ಲೇಖನಗಳನ್ನ [ ಅಂಗ್ಲ ಭಾಷೆಯಲ್ಲಿರುವ ಲೇಖನಗಳನ್ನ ಮಾತ್ರ ] ತಮ್ಮ ಗಳ ಮಾತೃ ಭಾಷೆಯಲ್ಲಿ ಸವಿಯಲು ಅವರಿಗೆ ಅವಕಾಶ ಮಾಡಿಕೊಡುವ ಸಾಧನ .. ಅತಿಥಿ ದೇವೋ ಭವ

# Subscribe : ಇದು ಒಂದು ಉಪಯುಕ್ತ ಸಾಧನ. ನೀವಿಲ್ಲಿ ನಿಮ್ಮ e-mail ID ಯನ್ನ ಬಳಸಿ ಚಂದಾದಾರರಾದರೆ ನಿಮ್ಮ e-mail ID ಗೆ ಈ ಬ್ಲಾಗ್ ನ ದೈನಂದಿನ ಆಗು ಹೋಗುಗಳ ವರದಿ ಹೋಗುತ್ತೆ. ಇದನ್ನ ಬಳಸಿದರೆ ನೀವು ಪ್ರತಿ ದಿನ ಬ್ಲಾಗ್ ನೋಡೋ ರೀತಿ ಬದಲಾಗುತ್ತೆ .ಪ್ರತಿ ದಿನ mail Check ಮಾಡಿ ರೂಢಿ ಇರೋ ಅನೇಕರಿಗೆ ನಮ್ಮ ಬ್ಲಾಗ್ ನಲ್ಲಿ ಹೊಸ ಲೇಖನ ಅರಳಿದ್ದರೆ ಅದರ ಸುವಾಸನೆ ಅವರ INBOX ನಲ್ಲಿ ಪಸರಿಸುತ್ತೆ ...ಅನಾಯಾಸವಾಗಿ.

# ವಕ್ರತುಂಡೋಕ್ತಿ : ಇದು ಅಂಗ್ಲ ಭಾಷೆಯ Cheeky Quote. ಪ್ರತಿ ಅರ್ಧ ಗಂಟೆಗೊಮ್ಮೆ ತಾನಾಗಿಯೇ ಬದಲಾಗುವ ಇದು ಹೊಸ ಹೊಸ ಪದ ಗಳನ್ನ ಕಲಿಯಲು ತನ್ನ ಕೈಲಾದ ಸಹಾಯ ಮಾಡುತ್ತೆ.

# ಶಬ್ದಕೋಶ : ಶಬ್ದಾರ್ಥ ಹುಡುಕುವ ಸೇವಕ.

# ವಿಶ್ವಕೋಶ : ಯಾವುದೇ ಶಬ್ದವಿರಲಿ ಅರ್ಥ ಅನರ್ಥ ಒಂದನ್ನೂ ಲೆಕ್ಕಿಸದೆ ತನಗೆ ನೀಡಿದ ಶಬ್ದಕ್ಕೆ ಯಾವುದಾದರೂ ವಿವರಣೆ ಇದ್ದಾವಾ ಅಂತ ತಿಳಿಸುವ ಮುಗ್ಧ ಅಷ್ಟೇ Efficient ಸೇವಕ.

# ಉಪಯುಕ್ತ e-ತಾಣಗಳು

# ಅಂಗ್ಲ ವ್ಯಾಕರಣ : ನೀವೇ ಬಳಸಿ ತಿಳಿಸಿ.

# News Map : ಇದು ಜಗತ್ತಿನ ಯಾವುದೇ ದೇಶದ ದಿನಪತ್ರಿಕೆ ಓದಿಸುವ ಒಳ್ಳೆ ಮೇಷ್ಟ್ರ ಕೆಲಸ ಮಾಡುತ್ತೆ.
[ Just Place Your Mouse Over Any Country You Want Read The News Paper from, A hand Signal appears Instead of normal arrow and the country name will be displayed in small white patch ..then click there to proceed ]


# SENSEX LIVE : ಬೆಳಿಗ್ಗೆ ಹತ್ತಕ್ಕೆ ಶುರುವಾಗುವ BSE Market Watch ಸಾಯಂಕಾಲ ಮುಚ್ಚುವವರೆಗೂ ಏರಿಳಿತ ತೋರಿಸುತ್ತೆ .

# ಭಗವದ್ಗೀತೆ : ಎಲ್ಲ 18 ಅಧ್ಯಾಯಗಳ ಎಲ್ಲ ಶ್ಲೋಕಗಳನ್ನಾ ನೀವಿಲ್ಲಿ ಓದಬಹುದು.

# ಇವುಗಳ ಜೊತೆ ಜೊತೆಯಾಗಿ ಅದೃಶ್ಯವಾಗಿ ಕೆಲಸ ಮಾಡೋ Widget ಗಳೂ ಇದಾವೆ ...


1. Answer.com - ಇದು ನಮ್ಮ ಬ್ಲಾಗ್ ನಲ್ಲಿ ಬಳಸಲಾದ ಯಾವುದೇ ಆಂಗ್ಲ ಭಾಷೆಯ ಶಬ್ದದ ಶಬ್ದಾರ್ಥವನ್ನ ನಿಂತ ಪೆಟ್ಟಿನ ಮೇಲೆ ವಸೂಲಿ ಮಾಡಿ ನಿಮ್ಮ ಮುಂದೆ ಸುರಿಯುತ್ತೆ , ಒಂದು ಪುಟ್ಟ ಪರದೆಯ ಮೇಲೆ .ನೀವು ಅರ್ಥ ಅರಿಯಬೇಕೆಂದಿರುವ ಶಬ್ದದ ಮೇಲೆ Double-Click ಮಾಡಿದರಾಯಿತು.


2. Snapshot : ಇದು ನಮ್ಮ ಬ್ಲಾಗ್ ನಲ್ಲಿ ನೀಡಲಾಗಿರೋ / ಇರೋ ಯಾವತ್ತು e-link ಗಳ Preview ತೋರಿಸೋ ಕೆಲಸ ಮಾಡುತ್ತೆ ..ಅಂದ್ರೆ ನೀವು ಅದರ ಮೇಲೆ click ಮಾಡಿಯೇ ಅದೇನು ಅಂತ ತಿಳಿಯುವ ಅನಿವಾರ್ಯತೆ ಇಲ್ಲ ..ನೀವು ನಿಮ್ಮ Mouse Cursor ಅನ್ನ ಆ Link ಮೇಲೆ ಇಟ್ಟರೆ ಸಾಕು ಅದು 'ಅದು' ಏನು ಅಂತ ತನ್ನ ಪುಟ್ಟ ಪರದೆಯ ಮೇಲೆ ತೋರಿಸುತ್ತೆ.


3. InLine Comments : ಇದು ನಮ್ಮ ಲೇಖಕರ ಸಣ್ಣ ಸಣ್ಣ ತಪ್ಪು ಒಪ್ಪುಗಳನ್ನೂ ತಿದ್ದಿ / ಎತ್ತಿ ತೋರಿಸಲು ಇರುವ ಸಾಧನ.ಇಲ್ಲಿ ನೀವು ಮಾಡಬೇಕಿರುವುದು ಇಷ್ಟೇ ..ನೀವು ಪ್ರತಿಕ್ರಿಯಿಸಬೇಕೆನ್ದಿರುವ ಲೇಖನದ ಭಾಗವನ್ನ ನಿಮ್ಮ mouse ಬಳಸಿ Select ಮಾಡಿ ..ಆವಾಗ ಮುಂದೆ ತಾನೇ ದಾರಿ ಕಾಣುತ್ತೆ..!!


[3]


# ನಮ್ಮ ಸ್ವಂತ ಲೇಖನ / ಸಾಹಿತ್ಯ ಪ್ರಯತ್ನಗಳು. ( ಒಟ್ಟು ನಮ್ಮ INPUTಗಳು ) : ಈ ಪ್ರಕಟಣೆಗಳ ಕೆಳಗೆ ಪ್ರತಿಕ್ರಿಯೆ ( ಕಾಮೆಂಟ್) ಅನ್ನೋ ಶಬ್ದವೊಂದಿರುತ್ತೆ . ನೀವು ಅದರ ಮೇಲೆ Click ಮಾಡಿದರೆ ನೀವು ಹೊಸತಾಗಿ ಆ ಲೇಖನಕ್ಕೆ ನಿಮ್ಮ ಮೆಚ್ಚು - ಚುಚ್ಚು ಗಳನ್ನ ತಿಳಿಸಬಹುದು. ಜೊತೆಗೆ ಈಗಾಗಲೇ ಅವುಗಳನ್ನ ತಿಳಿಸಿ ರೋ ನಿಮ್ಮ ಸ್ನೇಹಿತರ ಅಭಿಪ್ರಾಯಗಳನ್ನ ನೋಡಬಹುದು . ಪ್ರತಿಕ್ರಿಯೆಯ ಪಕ್ಕದಲ್ಲಿ ಇನ್ನೊಂದು ಚಿತ್ರ ಇದೆ ...ಒಂದು ಪತ್ರ ಲಕೋಟೆಯ ಚಿತ್ರ ...ಇದರ ಮೇಲೆ Click ಮಾಡಿದರೆ ನಮ್ಮ ಬ್ಲಾಗ್ ನಲ್ಲಿ ಪ್ರಕಟವಾದ ಆ ಸಂಗ್ರಹ ಯೋಗ್ಯ ಲೇಖನವನ್ನ ನೀವು ನಿಮ್ಮ ದೂರದೂರಿನ ಗೆಳೆಯ ಗೆಳತಿಯರೊಂದಿಗೆ ಹಂಚಿಕೊಳ್ಳಬಹುದು...ಅಂದ್ರೆ ಆ ಲೇಖನದ e-link ಅನ್ನ ನಿಮ್ಮವರಿಗೆ ಕಳಿಸುವ ವ್ಯವಸ್ಥೆಯಿದೆ.


ಇದು ನಮ್ಮಿಂದ, ನಮಗಾಗಿ ಇರೋ ಮಹತ್ವಾಕಾಂಕ್ಷೆಯ ಯೋಜನೆ.

ಇದರ ಸಾಫಲ್ಯ ನಿಮ್ಮ ಕೈಯಲ್ಲಿದೆ , Ofcourse ವೈಫಲ್ಯವೂ ...!!


Your Service Always.

1 comment:

amartya-aditi said...

your information makes our friends'involvement much easy and it dessiminates a message of change and affluent.

thanks

-Ramesha

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago