20 June 2009

HAPPY FATHERS DAY



"
.....ಹೀಗೆ ಹನ್ನೆರಡನೇ ವರ್ಷಕ್ಕೆ ಮನೆಯಿಂದ ಹೊರಹಾಕುವ ಅಮೆರಿಕದಲ್ಲೇ ಮಕ್ಕಳು ಮದರ್ಸ್ ಡೇ, ಫಾದರ್ಸ ಡೇ ಆಚರಿಸುತ್ತಾರೆ ! ಹಾಗಿರುವಾಗ ಭಾರತೀಯರಾದ ನಮ್ಮಲ್ಲಿ ಕೊನೆಯುಸಿರುವವರೆಗೂ ಮಕ್ಕಳ ಅಭ್ಯುದಯದ ಬಗ್ಗೆಯೇ ಯೋಚಿಸುವ ಅಪ್ಪ ಅಮ್ಮನನ್ನು ನೆನಪಿಸಿಕೊಳ್ಳದಿರುವುದು ಥರವೇ ? ಇದೆಲ್ಲಾ ಗ್ರೀಟಿಂಗ...................................................ಲಿ. ನಾಳೆ ಜೂನ್ ೨೧ 'ಫಾದರ್ಸ್ ಡೇ ', ನಾವು ಅಂಬೆಗಾಲಿಡುವಾಗ ಕೈ ಹಿಡಿದು ಮುನ್ನಡೆಸಿದ, ನಾವೇ ಜನ್ಮ ಕೊಟ್ಟಾಗ ಮೊಮ್ಮಕ್ಕಳಿಗೂ ಪುಟ್ಟ ಪುಟ್ಟ ಹೆಜ್ಜೆಯಿಡುವುದನ್ನು ಕಲಿಸುವ ಅಪ್ಪನ ಅಗೋಚರ ಪ್ರೀತಿ, ನಿಸ್ವಾರ್ಥತೆಯನ್ನು ನೆನೆದು ಕನಿಷ್ಠ ಕೃತಜ್ನತೆಯನ್ನಾದರೂ ಹೇಳೋಣ ......"


ಇದಿಷ್ಟು ನಿನ್ನೆಯ I mean ಮೊನ್ನೆ ಶನಿವಾರ ಲೇಖನದ ಉಪಸಂಹಾರ .....

ಪ್ರತಾಪ್ ಕಂಡ ತಂದೆಯ ಮಾನವೀಯ ಮುಖ ದ ಜೊತೆಗೆ,

ಅವರುಗಳು ನಮ್ಮನ್ನ IGNORANCE ನಲ್ಲಿ ಇಟ್ಟಿರೋ ಅವರ ಒಂದು ಗೌಣತೆಯನ್ನ ನಾವಿಂದು ಚರ್ಚಿಸಬೇಕು ...

ಅವರ ಎದುರಲ್ಲೇ ನಿರ್ಭಯರಾಗಿ, OFCOURSE...

ಭಾರತ ದೇಶ High Pecrentage of Youthstock ಹೊಂದಿರುವ ದೇಶಗಳಲ್ಲಿ ಒಂದೆಂಬುದು ನಮಗೆಲ್ಲ ತಿಳಿದಿರುವ ವಿಷಯ...
ಇಂದು 20-30 ರ ಒಳಗಿರುವ ಯುವಕ ಯುವತಿಯರಿಗೆಲ್ಲ PARENTING ಜವಾಬ್ದಾರಿ ಹೊತ್ತಿರುವ
ಭಾರತೀಯರೆಲ್ಲ 50-60 ರ ದಶಕದ ಒಳಗೆ ಜನಿಸಿರುವವರು ....ಇವರುಗಳು ಈ ಭರತ ಖಂಡದಲ್ಲಿ ಜನಿಸಿದ ಸಮಯ ಅತ್ಯಂತ Crucial....ಇವರದ್ದೊಂದುಪೀಳಿಗೆ ಇದೆಯಲ್ಲ ಅದು ಅನುಭವಿಸಿದ ಬಾಲ್ಯದ ಕಾಲ, ಭವಿಷ್ಯದ ಭಾರತ ಕಟ್ಟಲು ಬುನಾದಿಯಾಗೋ ಕಾಲ ಅನ್ನೋ ಸತ್ಯ
ಅರಿತಿರುವವರು ಇವರೆಲ್ಲೆಷ್ಟು ಜನ ? ...ಅಂದ್ರೆ .......
"ನಮ್ಮ ಕಾಲದಲ್ಲಿ ....." ಅಂತ ರಾಗ ಎಳೆಯೋ ಇವರುಗಳಿಗೆ ಆ "ಆ ಕಾಲ" ಅನ್ನೋ ಸುವರ್ಣಯುಗದ ಕಿಮ್ಮತ್ತು ಎಷ್ಟು ಗೊತ್ತು ಅನ್ನೋದು ಇವತ್ತಿನ TOPIC.


"ಮುಘಲರು ಭರತ ವರ್ಷವನ್ನ ತಮ್ಮ ಕಪಿಮುಷ್ಟಿಗೆ ತೆಗೆದುಕೊಳ್ಳುವದಕ್ಕೆ ನಮ್ಮ ಪೂರ್ವಜರು ಒಡ್ಡಿದ ಪ್ರತಿರೋಧದ ಹಿಂದಿರುವ WillPowerಗೆ ನಾವು ತಲೆದೂಗಲೇಬೇಕು ....

ಬ್ರಿಟಿಷರು ಭರತ ಖಂಡವನ್ನ ತಮ್ಮ ಕಬಂಧ ಬಾಹುಗಳಲ್ಲಿ ಬಂಧಿಸಲು ಯಶಸ್ವಿಯಾದ ಕೆಲವೇ ವರ್ಷಗಳಲ್ಲಿ ನಡೆದ ಮೊದಲಸ್ವಾತಂತ್ರ್ಯ ಸಂಗ್ರಾಮ ಎಂಬ ಕಿಡಿ ಹೊತ್ತಿಸಿದ ಬೆಂಕಿಯನ್ನು ನಂದಿಸಲು ಬ್ರಿಟಿಷರು ಎರಡೇ ವರ್ಷ ತೆಗೆದುಕೊಂಡರು ಅಂತಇತಿಹಾಸ ಹೇಳಿದರೂ ಆ ಪವಿತ್ರ ಯಾಗದ ಬೂದಿಯಡಿಯಲ್ಲಿ ಜೀವಂತವಾಗಿದ್ದ ಕೆಂಡ ಮುಂಬರುವ ದಿನಗಳಲ್ಲಿ ಕಾಡ್ಗಿಚ್ಚಿನ ರೂಪಪಡೆದುಕೊಂಡದ್ದೂ ಇತಿಹಾಸದ ಸತ್ಯ ಅಂತ ನಮ್ಮಲ್ಲನೇಕ ಜನರಿಗೆ ತಿಳಿದಿರುವ ವಿಚಾರ ....


ಇಷ್ಟೆಲ್ಲಾ ಶೌರ್ಯ, ಸಾಹಸ , ದೇಶಭಕ್ತಿ ಮೆರೆದವರಲ್ಲಿ ಯುವಕರೂ ಇದ್ದರು, ತಂದೆಯ ಸ್ಥಾನದಲಿರುವವರೂ ಇದ್ದರುಒಬ್ಬರಿಗೊಬ್ಬರು ಒತ್ತಾಸೆಯಾಗಿ . ಆದರೆ ಅಂದು ಹೋರಾಡಿದ ಪ್ರತಿ ವ್ಯಕ್ತಿಗೆ ತನ್ನ ತಂದೆ ಸ್ಥಾನದಲ್ಲಿರೋ ವ್ಯಕ್ತಿಯಿಂದ / I mean ತಂದೆಯಿಂದ ನೀಡಲ್ಪಟ್ಟ ಶಿಕ್ಷಣದ ಪಠ್ಯ ಇಲ್ಲಿ ಸ್ತ್ಯುತ್ಯರ್ಹ ...ಜೊತೆಗೆ ಆ ಪ್ರಾಥಮಿಕ ಶಿಕ್ಷಣದ ಬುನಾದಿಯಲ್ಲೇ ಅವರು ತಮ್ಮಯೌವನವನ್ನ ದೇಶ ಕಟ್ಟಲು ಮುಡಿಪಿಟ್ಟದ್ದು.


ಇಂಥ ಇತಿಹಾಸ ಹೊಂದಿರುವ ತಂದೆಯ ಸ್ಥಾನಕ್ಕೆ ಇಂದಿನ ಭಾರತೀಯ ತಂದೆ ತಾನು ಬೆವರು ಸುರಿಸಿ ಗಳಿಸಿದ ಹಣಕ್ಕಿಂತ ಬೆಲೆ , ಮಹತ್ವ ಹೊಂದಿರುವ ರಕ್ತ ಸುರಿಸಿ ಪಡೆದ ಸ್ವಾತಂತ್ರ್ಯ ಕ್ಕೆ ನೀಡಿದ ಬೆಲೆಯೇನು ...ಅದನ್ನ ರಕ್ತ ಚೆಲ್ಲಿ ಪಡೆದವರು , ಪಡೆಯುವಲ್ಲಿಭಾಗಿಯಾಗಿಯಾದವರು ತಮ್ಮ ಮುಂದಿನ ಪೀಳಿಗೆ ಯಾದ ಇವರಿಗೆ ಅದನ್ನ ತಿಳಿಸದೇ ಹೋದರೇ ?

'ಅಂದ ಕಾಲತ್ತಿಲ್ ' ಕಥೆ ಹೇಳುವ ನಮ್ಮ ತಂದೆ ತಾಯಂದಿರು ತಮ್ಮ ತಂದೆ ತಾಯಿಯರಿಂದ ಪಡೆದ ಬಾಲ್ಯದ ಪಾಠದ ಪಠ್ಯದಲ್ಲಿಈ ಬಹುಮುಖ್ಯ ಪಾಠ ಕಣ್ಮರೆಯಾಗಿತ್ತ ? ಅಂತ ನಾವೇಕೆ ಪ್ರಶ್ನೆ ಮಾಡಬಾರದು ಅಂತ ಅನ್ಸೋದಿಲ್ವಾ ...


ಈಗ ನಾನು ಕೇವಲ '
.. ಸ್ವಾತಂತ್ರ್ಯದ ಮಹತ್ವ'ದ ಬಗ್ಗೆ ಪ್ರಶ್ನಿಸುತ್ತಿಲ್ಲ ...ಅವರ ತಂದೆ ತಾಯಿ ಹೇಳಿದ ( ಳದೆ ಹೋದ ) ....ನಮ್ಮಪಾಲಕರ ಅಂದ ಕಾಲತ್ತಿಲ್ ಪಠ್ಯದ ಕಳೆದು ಹೋಗಿರೋ Chapter ನಲ್ಲಿ 'ಸ್ವಾತಂತ್ರ್ಯದ ಮಹತ್ವ' ಎಂಬೋದು ಬರೀ ಒಂದುಪ್ಯಾರಾ ಆಗಿದ್ದು ಇನ್ನುಳಿದ ಪ್ಯಾರಾ ಗಳಾಗಿರುವ

ನಮ್ಮ ಆಚರಣೆಗಳು ,


ನಮ್ಮ ಸಂಸ್ಕೃತಿ
[ ಇಲ್ಲಿ ಚಲನ ಶೀಲತೆಯ ಪ್ರಶ್ನೆ ನಿಮ್ಮಲ್ಲಿ ಕೆಲವರಲ್ಲಿ ಸುಳೀಬಹುದು...ಅದನ್ನ ಸ್ವಲ್ಪ ಅದುಮಿಟ್ಟು ಕೊಳ್ಳಿ ] ,


ನೈತಿಕತೆ
[ ಇಲ್ಲಿ ,
ನಾವಿಂದು ಮಹಿಳೆಗೆ ನೀಡುತ್ತಿರುವ ಅಗೌರವದ ಮಟ್ಟವಾಗಿರಬಹುದು .... ಕರ್ತವ್ಯ ನಿಷ್ಠೆ , ಪ್ರಾಮಾಣಿಕತೆಯ ಕೊರತೆಯಾಗಿರಬಹುದು .... ಲಂಚಗುಳಿತನ , ಭೃಷ್ಟಾಚಾರದ ವ್ಯಭಿಚಾರಕ್ಕೆ ವ್ಯಾವಹಾರಿಕತೆ ಎಂಬ ಹೆಸರು ನೀಡುವ ಅಧೋಗತಿಯಾಗಿರಬಹುದು .... ಇಂತಹ ವಿರುದ್ಧ ಶಬ್ದಗಳು ಇವರ ಶಬ್ದಾರ್ಥ ಕೋಶಗಳಲ್ಲಿ ಸುಳಿದದ್ದೆಲ್ಲಿಂದ....ಇದಕ್ಕೆ ಬ್ರಿಟಿಷರರನ್ನಹೊಣೆಗಾರರನ್ನಾಗಿಸಬೇಕೆಂದರೆ ಇವರು ಹುಟ್ಟೋ ಕಾಲಕ್ಕೆ ಅವರು ಇಲ್ಲಿ ಇರಲಿಲ್ವೆ ..! ]

ಪ್ರಕೃತಿಯ ಪರ ಕಾಳಜಿಯಾಗಿರಬಹುದು
,

ರಾಜಕೀಯ ಮತ್ತು
Beaureacracy
ಯಲ್ಲಿ ಪ್ರಾಮಾಣಿಕತನ ,

....
ಇವೆಲ್ಲ ಕಳೆದು ಹೋದದ್ದೆಲ್ಲಿ ?

PRINTING MISTAKE ಆಗಿರಲಿಕ್ಕೆ ಸಾಧ್ಯವಿಲ್ಲ ಅಲ್ವಾ? ಶಬ್ದಗಳ ಕುರುಹೇ ಇಲ್ಲ ಅಲ್ಲಿ !

ಅಥವಾ

ಪುಟ ಏನಾದರೂ ಹರಿದು ಹೋಯಿತೆ
?


.............ಇನ್ನೂ ಇದೆ .


ರೇವಪ್ಪ
----------------------------------


Actually ನಾನು ನಿನ್ನೆಯೇ ಬರೆದು ಮುಗಿಸ್ತಿದ್ದೆ ಆದರೆ ಒಂದು FLASHTRIP ORGANISE ಆಗಿದ್ದರಿಂದ ನಿನ್ನೆಯ ದಿವಸ Computer ಮುಂದೆ ಕೂಡಲಾಗಲಿಲ್ಲ. ನಾಳೆ ಮುಗಿಸುವ ಪ್ರಯತ್ನ ಮಾಡ್ತೀನಿ ...There Is Lot To Complain. So I Doubt ....ನಾಳೆ ಮುಗಿಯುತ್ತೋ ಇಲ್ವೋ ಅಂತ.


'ಉದ್ದಾಮ' ಲೇಖನ ಬರೀಲಿಕ್ಕೆ ನನ್ನ ಮನದಲ್ಲಿ ಸುಪ್ತವಾಗಿದ್ದ IDEA ಒಂದನ್ನ ಬಡಿದೆಬ್ಬಿಸಿದ ಗೆಳೆಯ ಸಹೃದಯಿ ಶೀತಲ್ ಕುಮಾರ್ ಗೆ Thanks...

ಅಂದಂಗೆ
FLASHTRIP ಅಂದ್ನಲ್ಲ ....ನಿನ್ನೆ ದಿವಸ ಗೆಳೆಯ ಜೊತೆ ಭರಚುಕ್ಕಿ
ಮತ್ತೆ ತಲಕಾಡು ಪ್ರವಾಸಕ್ಕೆ ಹೋಗಿದ್ದೆ ...ಬರೀ ಹುಡುಗರು ಮಾತ್ರ ಹೋಗಿದ್ದೆವು .ಇತ್ತೀಚಿಗೆ ನನ್ನ ಮೇಲೆ ಬಹಳ ಜನ ಅನುಮಾನ ಪಟ್ಟು ನನ್ನ SINGLE STATUS ಬಗ್ಗೆ ಸಂದೇಹ ಪಟ್ಟಿದ್ದರಿಂದ ಸಾಕ್ಷಿ ...ಅನ್ಯಥಾ ಭಾವಿಸಬಾರದು ...ಇನ್ನೂ ಅನುಮಾನ ಬಂದರೆ ನಾಳೆ ದಿವಸ ಸಾಕ್ಷಿಗಾಗಿ ಕೆಲ ಫೋಟೋಗಳನ್ನ ನೀಡುವೆ .

Revappa

No comments:

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago