22 June 2009

.............................................................ನೆನ್ನೆಯಿಂದ ಮುಂದುವರೆದಿದೆ .



ತಮ್ಮ ತಂದೆಯ ವಯಸ್ಸಿನ, ತಾವು ಕಲಿತ ಹಳ್ಳಿಯ ಶಾಲೆಯ ಮೇಷ್ಟ್ರ ಒಳ್ಳೆಯ ಗುಣ , ಕಲಿಕಾ ವೈಖರಿ ಬಗ್ಗೆ ಬಡಾಯಿಕೊಚ್ಚಿಕೊಳ್ಳೋ ಇವರುಗಳು ಅಂಥ ಪ್ರಾತಃ ಸ್ಮರಣೇಯರ ಕೈಯಲ್ಲಿ ಕಲಿತು ಇಂಥ ಬೇಜವಾಬ್ದಾರಿ ಶಿಕ್ಷಕರಾಗೊದೆ ?


ಅಂದಿನ ಕಾಲದ ತಮ್ಮ ತಂದೆಯ ಪ್ರಾಮಾಣಿಕತೆ ಹೊಗಳೋ ಇವರು ಇರುವ ಒಬ್ಬನೇ ಮಗ ಮಗಳ ಭವಿಷ್ಯಕ್ಕೆ ಲಂಚದ ಹಣದಿಂದ ನಾಂದಿ ಹಾಡೋದೇ ?

"ಬರುವ ಪುಟ್ಟ ಸಂಬಳದಲ್ಲಿ ನಮ್ಮಪ್ಪ ಆರು ಜನ ಮಕ್ಕಳನ್ನ ಬೆಳೆಸಿ ದೊಡ್ಡವರನ್ನಾಗಿ ಮಾಡಿದ" ಅಂತ ಅವರ ದೊಡ್ಡ ಗುಣವನ್ನಹೊಗಳೋ ಇವರು ತಮ್ಮ ಯೋಗ್ಯತೆಗೆ ತಕ್ಕ ನೌಕರಿ ಸಿಕ್ಕಾಗ ಅದಕ್ಕೆ ತಕ್ಕಂತೆ ಕಾಲು ಚಾಚೋದು ಬಿಟ್ಟು ನಮ್ಮ ಮಕ್ಕಳ ಭರ್ಜರಿದುವೆ ಮಾಡ್ಬೇಕು... ಅವ್ನು ಇಂಜಿನಿಯರ್ರೆ ಆಗಬೇಕು.... ಅವಳು ಡಾಕ್ಟರ್ರೆ ಆಗಬೇಕು ಅಂದ್ರೆ ...ತಪ್ಪಲ್ವಾ ?

ಸಾಮಾನ್ಯ ಆರ್ಥಿಕ ಸ್ಥಿತಿಯಿಂದನೇ ಬಂದ ಒಬ್ಬ ವ್ಯಕ್ತಿ ಮುಂದೆ ಶ್ರಮ ಪಟ್ಟು ಇಂದು ಜಗತ್ತಿನ ಅತಿ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಐದು ಸ್ಥಾನಗಳಲ್ಲಿ ತನ್ನ ಹೆಸರನ್ನ ಸುಮಾರು ವರ್ಷಗಳಿಂದ ಕಾದುಕೊಂಡು ಬಂದಿರುವವ ಹೇಳಿದ್ದು ಹೀಗೆ :
" ಬಡವನಾಗಿ ಹುಟ್ಟೋದು ನಿನ್ನ ತಪ್ಪಲ್ಲ ; ಬದಲಿಗೆ ಬಡವನಾಗಿದ್ದುಕೊಂಡೆ ಸಾಯೋದು ಖಂಡಿತ ನಿನ್ನ ತಪ್ಪು "


ಪ್ರಯತ್ನ ಮಾಡುವ ಕಾಲದಲ್ಲಿ ಆಲಸ್ಯದ ದಾಸರಾಗಿ ಅಥವಾ ಸಿಕ್ಕದ್ದಕ್ಕೆ ತೃಪ್ತರಾಗುವ ಇವರು, ಕೆಲಸ ನಿವೃತ್ತಿಯ ಕಾಲದ ವರೆಗೂ ನೀಡುವ ಸಂಬಳದ ಅರಿವಿದ್ದೂ, ಅದಕ್ಕೇ ಕಟ್ಟು ಬೀಳುವ ಇವರು, ಕೆಲವೇ ವರ್ಷಗಳಲ್ಲಿ ಅದರಿಂದ HIGH YIELD ಬಯಸೋದು ಯಾವ ನ್ಯಾಯ.ಈ ದುರಾಸೆಯ ಫಲವಾಗಿ ಲಂಚ , ಭೃಷ್ಟಾಚಾರದ ವ್ಯಭಿಚಾರಕ್ಕೆ ಕೈ ಹಾಕಿದ್ದಕ್ಕೆ ಯಾವ ಸಬೂಬು ಸೂಕ್ತ ಕಾರಣ ಅಲ್ಲ .

ಇನ್ನು ಅತಿ ಮುಖ್ಯ ತಕರಾರು ...

" ಈಗಿನ ಹುಡುಗರು ನಮ್ಮ ಸಂಸ್ಕೃತಿ ಎಲ್ಲ ಮರತಿದಾರೆ ...Western Culture ನ ದಾಸರಗಿದಾರೆ" ಅಂತ ಗೊಣಗಿಕೊಳ್ಳೋ ವಾಗ ಆತ್ಮ ಸಾಕ್ಷಿಯನ್ನ ಪ್ರಶ್ನಿಸ್ಕೊಬೇಕು ...

ಸಂಸ್ಕೃತಿ ಅಂದ್ರೆ ಏನು ?

ಅದು ಒಂದು ನಾಗರಿಕತೆಯ ಸ್ವಯಾರ್ಜಿತ ಸ್ವತ್ತು .

ಕಾಲನು ಕ್ರಮದಲ್ಲಿ ಬೆಳೆಯುತ್ತಾ ಬಂದ ರೂಢಿ, ಆಚರಣೆ ಗಳು ,

ಪ್ರಕೃತಿ ವ್ಯಾಪಾರ ನೋಡಿ,

ಅದರೊಟ್ಟಿಗೆ ಕಲೆತು ,

ಅದರಿಂದ ಕಲಿತು

ಪಡೆದುಕೊಂಡ ಜ್ಞಾನ - ಒಟ್ಟಿಗೆ ( COLLECTIVELY ) ನಮ್ಮ ಸಂಸ್ಕೃತಿ ಯಾಗ್ತದೆ ....


ಹೀಗೆ ಮಸ್ತಕದಲ್ಲಿ ತಳೆದ ಮಣಿ ಬರಹ ರೂಪ ತಾಳಿದಾಗ ಇವುಗಳೇ ಆ ನಾಗರಿಕತೆಯ SCRIPTURE ಗಳಾಗ್ತವೆ.


ಹೀಗಾಗಿ ಆ ಗ್ರಂಥಗಳ ಸಮೃದ್ಧಿ ಮತ್ತು QUALITY ಇದೆಯಲ್ಲ ಅದು ನಮ್ಮವರು ಅದೆಷ್ಟು ಪ್ರಕೃತಿಯೊಂದಿಗೆ ACQUAINT ಆಗಿದ್ದರು ಅನ್ನೋದನ್ನ ತೋರಿಸಿ ಕೊಡುತ್ತೆ . ನಾವು ಹುಟ್ಟೋದು ಅದರ ಮಡಿಲಲ್ಲಿ , ಕೊನೆಗೆ ಸತ್ತಾಗ ನಾವು ಒಂದಾಗೋದು
ಅದರೊಟ್ಟಿಗೆ . ಹೀಗಾಗಿ ನಾಗರಿಕತೆಯ ಈ ಅರ್ಜನೆಗೆ ಭೌಗೊಲಿಕತೆಯ ಸಹಾಯ ಅತಿ ಮುಖ್ಯ ...ಭರತಖಂಡದ ವೈವಿಧ್ಯಪೂರ್ಣ ಭೌಗೊಲಿಕತೆ ನಮ್ಮ ಸಂಸ್ಕೃತಿ ಬೆಳವಣಿಗೆಗೆ ನೀಡಿರಬಹುದಾದ ಕೊಡುಗೆ ಅನನ್ಯ.

ಈ ಸ್ವಯಾರ್ಜಿತ ಸ್ವತ್ತು ಅಪ್ರಯತ್ನವಾಗಿ ವೃದ್ಧಿಯಾಗದ ಸ್ವತ್ತು ...[ ಅಂದ್ರೆ ತನ್ನಿಂತಾನೆ ವೃದ್ಧಿಯಾಗೊದಕ್ಕೆ ಅದು ಇಡಿ ಗಂಟನ್ನ FIXED DEPOSIT ಇಟ್ಟ ಹಾಗಲ್ಲ ....] ಹುಟ್ಟಿದಾಗ ಒಂದು ಪ್ರಾಣಿ ಯಾಗಿದ್ದ ಮಾನವ ವಿಕಾಸದ ಮೆಟ್ಟಿಲು ಗಳನ್ನೆರುತ್ತ ಇಂದು GENTLEMAN ಅನ್ನಿಸಿಕೊಳ್ಳೋ ಮಟ್ಟಕ್ಕೆ ತಲುಪಿದ್ದಾನೆ . ಇದೇ ಗಮ್ಯ ಸ್ಥಾನ. ನಾವು ನಿಂತಿರೋದೆ ಕೊನೆ ಮೆಟ್ಟಿಲು ಅನ್ಕೊಂಡ್ರೆ ...?

ನಮ್ಮ ಕಾಣಿಕೆ / ನಮ್ಮ ಪಾಲಿನ ದುಡಿಮೆಯಿಂದ ಮಾತ್ರ ಅದು ಒಂದಕ್ಕೆ ಎರಡಾಗಿ ಎರಡಕ್ಕೆ ನಾಲ್ಕಾಗಿ ಬೆಳೆಯೋದು ...
ಇದಕ್ಕೆ, Actual ಚಲನಶೀಲತೆ ಅನ್ನೋದು . ನಮ್ಮ ಸಂಸ್ಕೃತಿಯ ( ಧರ್ಮ ) ಕಂದಾಚಾರಗಳ ಬಗ್ಗೆ ಬೊಟ್ಟು ಮಾಡಿ ಇದುವೇ 'ಅದು' ಸ್ಥಾವರವಾಗಿರೋದಕ್ಕೆ ಸಾಕ್ಕ್ಷಿ ಅಂತ ಹೇಳೋ ಚಲನಶೀಲವಾದಿಗಳು , ಆಚಾರಗಳು ಕಂದಾಚಾರಗಳಾಗೋದು ಶಬ್ದಗಳು ಅಪಭ್ರಂಶವಾಗುವಷ್ಟೇ ನಿತ್ಯ ಸತ್ಯಗಳು ಅನ್ನೋ ಸರಳ ಸತ್ಯವನ್ನ ಅರಿತ್ಕೊಬೇಕು ....ಚಲನಶೀಲತೆಯ ಬೊಬ್ಬೆ ಹಾಕುವ ಬುದ್ಧಿಜೀವಿಗಳು ಇದನ್ನ ಗಮನಿಸಬೇಕು ..

ಶಬ್ದದ ಹುಟ್ಟು, ಅರ್ಥ ಗೊತ್ತಿರೋ ಸಾಕ್ಷರ ಎಂದಿಗೂ
ಅಪಭ್ರಂಶದ ಕೆಲಸಕ್ಕೆ ಕೈ ಹಾಕಲಾರ ..ಹಾಗಾದರೆ ಶಬ್ದ ಅಪಭ್ರಂಶವಾಗೋದು ಎಲ್ಲಿ ? ಯಾರಿಂದ ? ಅಂತ ಪ್ರಶ್ನೆ ಎದುರಾದಾಗ ಸಿಗೋ ಉತ್ತರ :

ಶಬ್ದದ ಜನ್ಮ ರಹಸ್ಯ [ ಆಚರಣೆ ಹುಟ್ಟಿನ ಹಿನ್ನೆಲೆ ], ಉಚ್ಛಾರ [ ಪಾಲಿಸಬೇಕಾದ ನಿಯಮಗಳು ] , ಶಬ್ದವನ್ನ ಬಳಸಬಹುದಾದ ಔಚಿತ್ಯಗಳು [ same ] ಇವೆಲ್ಲ ಅರಿತಿರದ ವ್ಯಕ್ತಿ ಅದನ್ನ ಬಳಸಲು ಪ್ರಾರಂಭಿಸಿ ಶುರುವಲ್ಲಿ ಅನುಕರಣೆಯಿಂದ ಕಲಿತ ಮೇಲಿನ ಕಟ್ಟಳೆಗಳನ್ನ ಕಾಲಕ್ರಮೇಣ ಮರೆತು ತನ್ನದೇ ಆದ ಹೊಸ ನಿಯಮಗಳನ್ನ ಅದಕ್ಕೆ ಲೇಪಿಸಿ ಬಳಸಿದಾಗ ಹುಟ್ಟುವುದೇ ಅಪಭ್ರಂಶ...

ಈಗ ಆ ಶಬ್ದ ಉಚ್ಛಾರಕ್ಕೆ ಕಷ್ಟಕರವಾಗಿರೋದೆ ಅಪಭ್ರಂಶಕ್ಕೆ ಕಾರಣ ಅನ್ನೋದು ಎಷ್ಟು ಅಸಮಂಜಸ ಅಂತ ವ್ಯಾಕರಣ ಕಲಿಯದೆ ಇರುವ ಸಾಮಾನ್ಯನಿಗೂ ಅರ್ಥವಾಗೋ ಸಂಗತಿ [ ಬರೀ ಅಲ್ಪಪ್ರಾಣಗಳೇ ಕೂಡಿದ ಭಾಷೆ ಎಂಥ ಭಾಷೆ ..? ಮಹಾಪ್ರಾಣಗಳೂ ಭಾಷೆಗೆ ಅಷ್ಟೇ ಮುಖ್ಯ ಅಲ್ವೇ ? ] ..ಆದರೆ ಇದು ಅರ್ಥವಾಗಲಿಲ್ಲ ಅಂದ್ರೆ ಹೆದರುವ ಅವಶ್ಯಕತೆಯಿಲ್ಲ ..ಆಗ ಆ ಅಜ್ಞಾನದ ಫಲವಾಗಿ ಬುದ್ಧಿಜೀವಿ ಅನ್ನೋ ELITE ಗುಂಪಿಗೆ ಸೇರ್ಪಡೆ ಯಾಗುತ್ತೀರಿ

ಜಗತ್ತಿನ ಕೆಲವೇ ಕೆಲವು ರಾಷ್ಟ್ರಗಳು( ನಾಗರಿಕತೆಗಳು ) ಹೊಂದಿರುವ ಸಂಸ್ಕೃತಿ ಅನ್ನೋ ಸ್ವಯಾರ್ಜಿತ ಸ್ವತ್ತುಗಳಲ್ಲಿ ನಮ್ಮ ದೇಶದ ಸ್ವತ್ತು ಅತಿ ಬೆಲೆಬಾಳುವಂಥದ್ದು ...

ಇದನ್ನ ಮರೆತಿದೀರಿ ಅಂತ ನಮ್ಮನ್ನ ದೂರುವ ಮುನ್ನ ನಮ್ಮ ಪಾಲಕರು ಈ ಪಿತ್ರಾರ್ಜಿತ ಆಸ್ತಿಯ ಮೌಲ್ಯದ ಲೆಕ್ಕ ಹಾಕಬೇಕು ...
ಆಮೇಲೆ ಜತನ ಮಾಡೋ ದಾರಿ ಹುಡುಕಬೇಕು ...ಇವೆರಡೂ ಸುಭದ್ರವಾದಾಗ ಆ ಸ್ವತ್ತನ್ನ ವೃದ್ಧಿಸೋ ಪ್ರಯತ್ನಕ್ಕೆ ಕೈ ಹಾಕಬೇಕು ...



ನಮ್ಮೀ ಪಾಲಕರಿಗೆ ಮೊದಲನೆಯದಾಗಿ ತಮ್ಮ ಸ್ವತ್ತು ಎ
ಷ್ಟು ಬೆಲೆಬಾಳುತ್ತೆ ಅಂತಾನೆ ಗೊತ್ತಿಲ್ಲ ..ಆದರೆ ನಮ್ಮಗಳ ಹೆಸರಿಗೆ WILL ಬರೆದಿಡೋ ಮಾತಾಡ್ತಿದಾರೆ ...!!

ಅವರಿಗೆ ಗೊತ್ತಿಲ್ಲದ ಈ ಪಿತ್ರಾರ್ಜಿತ ಆಸ್ತಿಯ ಬೆಲೆಯನ್ನ ನಾವು ನಿಗದಿ ಮಾಡೋದು ಎಷ್ಟು ಕಷ್ಟದ ಕೆಲಸ ಅಂತ ಅವರಿಗೇನು ಗೊತ್ತು ? ಆಮೇಲೆ ಮಂಗನ
ಕೈಗೆ ಮಾಣಿಕ್ಯ ಕೊಟ್ಟಂಗಾಯ್ತು ಅಂತ ಮೇಲೆ ಸ್ವರ್ಗದಲ್ಲಿ ಕೂತ್ಕೊಂಡು ಕೈ ಕೈ ಹಿಸುಕಿಕೊಳ್ಳೋ ಪ್ರಮೇಯ ಬಂದರೆ ಆಶ್ಚರ್ಯ ಇಲ್ಲ ..!!




......ಇನ್ನೂ ಇದೆ.


DONT FORGET TO
DOWNLOAD & SAVE & USE THE EXCEL(LENT) SHEET ...

IT'S VERY USEFUL.


Revappa



4 comments:

yashavanth said...

ಎಂತಹ ವಿಚಾರಧಾರೆ...... ಭಾರತೀಯ ಸಂಸ್ಕೃತಿಯ ಬಗ್ಗೆ ಹೊಸ ಆಯಾಮದಲ್ಲಿ ಚಿಂತನೆಗೆ ಹಚ್ಚುವ ಹೊಸ ಹೊಸ ವ್ಯಾಖ್ಯಾನಗಳಂತು.... ವರ್ಣಿಸಲಸದಳವಾದದ್ದು..... ಲೇಖನದಲ್ಲಿ ಗಮನಿಸ ಬೇಕಾದ ಅಂಶವೆಂದರೆ ವಾಕ್ಯ ವಾಕ್ಯಗಳ ನಡುವಿನ ಮತ್ತು ಪ್ಯಾರ ಪ್ಯಾರಗಳ ನಡುವಿನ ಸುಸಂಬಂಧಿತ ಜೋಡಣೆ....ಎಲ್ಲೂ ವಿಷಯಾಂತರ ಆಯ್ತು ಅನಿಸೊಲ್ಲ.... ಅದದೇ ವಿಷಯದ ಸುತ್ತ ಇಡೀ ಲೇಖನ ಗಿರಕಿ ಹೊಡೆಯುತ್ತಿದೆ...... ಎಂದು ಅನಿಸುವುದೇ ಇಲ್ಲ.....ಎಲ್ಲವು ಹೊಸ ಹೊಸ ವಿಷಯಗಳೇ..... ಹೋಲಿಕೆ & ಸಾದೃಶ್ಯಗಳು ಅನೂಹ್ಯವಾದವು...... ಒಂದೇ ಓದಿಗೆ ಮನನವಾಗುವಂತಹ ಅಪರೂಪದ ಲೇಖನ.... ಸಂಗ್ರಹ ಯೋಗ್ಯವಾದದ್ದು..... ಮುಂದಿನ ಕಂತಿನ ನಿರೀಕ್ಷೆಯಲ್ಲಿ....

ಪರಶು.., said...

ಡಿಯರ್ ರೇವಪ್ಪಾ....

ಇಂದಿನ ನಿಮ್ಮ ಬರಹದಲ್ಲಿ ಎತ್ತಿರುವ ವಿಚಾರಗಳು, ಆ ವಿಚಾರಗಳ ಹಿಂದಿರುವ ಒಳತೋಟಿ, ಕಳಕಳಿ ಮೆಚ್ಚುವಂತದ್ದೇ, ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ 'ಹಣ' ಮನುಷ್ಯನ ಅಸ್ಥಿತ್ವವನ್ನು ಆಳುತ್ತಿರುವಂತಿದೆ. ಈ ಹಣದ ಗಳಿಕೆಯೊಂದರಿಂದಲೇ ಸಮಾಜದಲ್ಲಿ ಸ್ಥಿತಿವಂತನಾಗಿ ಬದುಕಲು ಸಾಧ್ಯ ಎಂಬ ಭ್ರಮೆಯಲ್ಲಿರುವ ಇಂದಿನ ಮಂದಿ, ನಾನಾ ತರಹದ ಅನೈತಿಕ ಮಾರ್ಗಗಳಲ್ಲಿ ಹಣಗಳಿಸಿ ಸ್ಥಿತಿ ವಂತರಾಗಲು ಹವಣಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅಲ್ಪ ಸಂಬಳದಲ್ಲಿ ಆರು ಜನ ಮಕ್ಕಳನ್ನು ಸಾಕಿದ ಅಪ್ಪನ ಕಷ್ಟಕರ ಬದುಕನ್ನು ನೆನೆಯಲು ಇಷ್ಟಪಡಬಹುದೇ ವಿನಃ ಅವನಂತೆ ಬಾಳಲು ಸುತಾರಾಂ ಮಗರಾಯ ಒಪ್ಪಲಾರ... ಹಿಂದಿನವರ ಒಳ್ಳೆಯತನ ಹೇಳಿಕೊಳ್ಳಲಷ್ಟೇ ಹೊರತು ಅನುಸರಿಸಲು ಅಲ್ಲ ಎಂಬ ಸ್ಥಿತಿ ನಿರ್ಮಾಣಗೊಳ್ಳುತ್ತಿರುವ ಈ ಸಂದರ್ಭದಲ್ಲಿ ನಿಮ್ಮ ಬರಹ ಅತ್ಯಂತ ಪ್ರಸ್ತುತ... ಬರಹದ ಶೈಲಿ ಆಪ್ತವಾಗಿದೆ... ಹೀಗೇ ನಿಮ್ಮ ವಿಚಾರಧಾರೆಯನ್ನು ಹರಿಯ ಬಿಡಿ..

ಪರಶು.., said...
This comment has been removed by the author.
Unknown said...

ಮನುಷ್ಯ ಸ್ವಭಾವವನ್ನು ಅನಾವರಣಗೊಳಿಸಿ,ಯೋಚನೆಗೆ ಹಚ್ಚುವಂತಹ ಲೇಖನ.ಹೀಗೆ ಹರಿದು ಬರಲಿ ನಿಮ್ಮ ವಿಚಾರಧಾರೆ.

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago