23 June 2009

............ನಿನ್ನೆಯಿಂದ ಮುಂದುವರಿದಿದೆ ..........


ಇಂದಿನ ಯುವಪೀಳಿಗೆ ತನ್ನ
ಹಠ ಬಿಡಲೊಲ್ಲದು .........



ನಮ್ಮ ಅಜ್ಜಂದಿರು ತಮ್ಮ ಛಲ ಬಿಡಲೊಲ್ಲರು............


ಇವರಿಬ್ಬರ ನಡುವೆ ಸಿಕ್ಕಿ ಹಾಕಿಕೊಂಡಿರೋರು ನಮ್ಮ ಪಾಲಕರು. ಈ GAPನ್ನ ಸಮರ್ಥವಾಗಿ FILL ಮಾಡಲು ಅವರಿಗೆ ದೇವರು ವಿಶೇಷ ಶಕ್ತಿಗಳನ್ನ ದಯಪಾಲಿಸುವ ಅಗತ್ಯವಿತ್ತು ಅಂತ ಅನಿಸುತ್ತೆ ...

ನಮ್ಮೀ ಪಾಲಕರು ಸ್ವಾತಂತ್ರ್ಯಾ ನಂತರದ ಮನ್ವಂತರಕ್ಕೆ ನಾಂದಿ ಹಾಡಿದ ಪೀಳಿಗೆಯಾಗಿ ಇತಿಹಾಸದಲ್ಲಿ CONFIRMED BIRTH BOOK ಮಾಡಿಕೊಳ್ಳೋ ಅವಕಾಶನ್ನ ಕಳಕೊಂಡಿದಾರೆ.....

ಇದಕ್ಕವರು ಕಾರಣ ಗಳೇನು ಕೊಡಬಹುದು ?

ಸ್ವಾತಂತ್ರ್ಯಾನಂತರದ ಭಾರತದ ಪರಿಸ್ಥಿತಿ ? ಬುನಾದಿಯೇ ಇಲ್ಲದೆ ಬರಿ ನೆಲದ ಮೇಲೆ ಗೋಡೆ ಏರಿಸಿಕೊಂಡ ನೆರೆ ದೇಶಗಳಂತೆ ನಮ್ಮ ದೇಶ ಅಭದ್ರವಾಗಿರಲಿಲ್ಲ ...ನಮಗಿದ್ದುದು ಮೌಲ್ಯಗಳ ಬುನಾದಿಯ ಮೇಲೆ ಕಟ್ಟಿದ ಸಂಸ್ಕೃತಿಯ ಕಂಬಗಳ ಆಧಾರದ ಮೇಲೆ ರೂಪುಗೊಂಡ ಭವ್ಯ ಕಟ್ಟಡ .

ಹೌದಪ್ಪ ...ನಮ್ಮ ದೇಶ ಸ್ವಾತಂತ್ರ್ಯಾ ನಂತರ ದಿವಾಳಿಯಾಗಿ ತನ್ನ ನೆಲೆ ತಾನು ಕಂಡುಕೊಳ್ಳಲಿಕ್ಕೆ ಹೆಣಗಾಡಿತು ಅಂತನಾ ..ಇಲ್ವಲ್ಲಾ ?

ಮತ್ತೇನು ಸಮಸ್ಯೆ ಇರಬಹುದು ... ???!!!

.
.
.
.
.
.


" ವಿಜ್ಞಾನ ಮತ್ತೆ ತಂತ್ರಜ್ಞಾನ, Industry ಮತ್ತೆ ಕೃಷಿ - ಹೀಗೆ ಅಭಿವೃದ್ಧಿ ಬಯಸಿದ್ದ ಎಲ್ಲ ಕ್ಷೇತ್ರಗಳಲ್ಲಿ ಈ ಐವತ್ತು ವರ್ಷಗಳಲ್ಲಿ ಆಗಿರುವ DRASTIC DEVELOPMENTS ಆದ ಪರಿ ನೋಡಿದೀರಾ ನನ್ಮಕ್ಕಳಾ....ಅದನ್ನೇನು ನಿಮ್ಮ ಅಜ್ಜ ಮಾಡಿದ್ದಾನಾ ? ಅದನ್ನ ಮಾಡಿದ್ದು ನಾವಪ್ಪಾ... ನಿಮ್ಮ ಅಪ್ಪಂದಿರು . ನಾವು ದಿನ ರಾತ್ರಿ ಒಂದು ಮಾಡಿ ಮಾಡಿರೋ ಈ ಶ್ರಮದ ಫಲವಾಗಿಯೇ ನೀವಿಂದು ಈ ಎಲ್ಲ ಸವಲತ್ತು ಗಳನ್ನ ಅನುಭವಿಸ್ತಿರೋದು ...." - ಇದು ಒಪ್ಪಬಹುದಾದ ಉತ್ತರ .

ಆದರೆ ಈಗ ಇಷ್ಟು ದೂರ ಬಂದ ಮೇಲೆ ಅವರು ಅಷ್ಟು ಹಿಂದೆ ಪಕ್ಕಕ್ಕಿಟ್ಟು ಬಂದಿರೋ ನಮ್ಮ ಮೌಲ್ಯ , ಸಂಸ್ಕೃತಿಯ ಗಂಟುಗಳನ್ನ ನಾವು ಎತ್ತಿಕೊಂಡು ಬರೋದು ಸಾಧ್ಯಕ್ಕೆ ಬಹಳ ದೂರ ಅನ್ನೋಕಿನ್ನ ಇವರ ವಯಸ್ಸಿನಷ್ಟು ದೂರ ...ಅದರ ಬದಲಿಗೆ ಇವರುಗಳು ಈ ದಿನಂದಿಂದಲೇ ಕಾರ್ಯಪ್ರವೃತ್ತರಾಗಿ ತಮ್ಮ ದಾರಿಯಲ್ಲಿ ಹಿಂದೆ ಸಾಗಿ ಅಲ್ಲೆಲ್ಲೋ ಇಟ್ಟು ಬಂದಿರೋ ಆ ಗಂಟುಗಳನ್ನ ಜತನವಾಗಿ ಎತ್ತಿಕೊಂಡು ಬಂದು ನಮ್ಮ ಕೈಗೆ ಹಸ್ತಾಂತರಿಸಿದರೆ ನಾವು ಅದನ್ನ ಯಥಾಸ್ಥಿತಿಯಲ್ಲಿ ನಮ್ಮ ಮುಂದಿನವರಿಗೆ ನೀಡುವ ಭರವಸೆ ಖಂಡಿತ ನೀಡ್ತೇವೆ ....ಜೊತೆಗೆ ನಮ್ಮ ಮುಂದಿನವರಿಗೆ ಈ ಇಡು ಗಂಟಿಗೆ ತಮ್ಮ ಕಾಣಿಕೆ ಸಲ್ಲಿಸುವ ಪರಿಯನ್ನೂ ತಿಳಿಸಿಕೊಡ್ತೇವೆ...

" ನೋಡ್ರಪ್ಪ ನಿಮ್ಮ ಅಜ್ಜಂದಿರ ಥರ ಇದನ್ನ ಇಲ್ಲೇ ಎಲ್ಲೋ ಮರೆತು ಮುಂದೆ ಹೋಗಿಗೀಗಿರಾ ಮತ್ತೆ ...ಅಥವಾ ಬಡ್ಡಿ ರೂಪದಲ್ಲಿ ಲಾಭ ಬರುತ್ತೆ ಅಂತ FD ಇಟ್ಟಿಗಿಟ್ಟೀರಾ ಮತ್ತೆ ...ಇದು ಅಪ್ರಯತ್ನವಾಗಿ ವೃದ್ಧಿಯಾಗದ ಸ್ವತ್ತು ...ಇದಕ್ಕೆ ನಿಮ್ಮ ಕಾಣಿಕೆ ಸೇರಿದರೇನೆ ಇದು ವೃದ್ಧಿಯಾಗೋದು..."

ಅಂತೆಲ್ಲ ಅದರ IMPORTANCE ಗಳನ್ನ ಅವರಿಗೆ ಅರ್ಥವಾಗೋ ಭಾಷೆಯಲ್ಲಿ( ಅಂದರೆ ಅರ್ಥವಾಗೋ ಹಾಗೆ ಅಂತ. ಮತ್ತೆ ಭಾಷೆ ಅಂದ್ರೆ ಇಂಗ್ಲೀಶ್ ಅಂತ ತಿಳೀಬೇಡಿ ) ತಿಳಿಸಿ....

" ನಮ್ಮ ಸಂಸ್ಕೃತಿ, ನಮ್ಮ ಪೂರ್ವಜರು ಕೂಡಿ ಟ್ಟಿರೋ ಆಸ್ತಿ. ಇದನ್ನ ಕೊಳೆಯೋದಕ್ಕೆ ಬಿಟ್ಟು ಇನ್ನೊಬ್ಬರಿಂದ ಸಾಲ ಪಡೆಯೋದು ಯಾವ ಜಾಣತನ ...ಹೋಗ್ಲಿ ಅದೂ ಯಾರಿಂದ ಪಡೀತಿದಿರಾ ನಮಗಿನ್ನ ಆಸ್ತಿ ಅಂತಸ್ತಿನಲ್ಲಿ ಕೆಳಗಿರೋರಿಂದ ...ಅವರ ಆಚರಣೆ ಗಳ್ಯಾವೂ ನಮ್ಮ ನೆಲಕ್ಕೆ ಹೊಂದುವಂಥದ್ದಲ್ಲ.

ನೀನು ಕೇಳಬಹುದು " ಅದೂ ಒಂದು ಸಂಸ್ಕೃತಿನೆ ಅಲ್ಲವ ಅಪ್ಪಾ ...ಮತ್ತೆ ಇಷ್ಟು ದಿವಸ ಚಾಲ್ತಿಯಲ್ಲಿದ್ದು ಇಷ್ಟು ಜನರಿಂದ ACCOLADE ಪಡೆದಿದೆ ಅಂದ್ರೆ ಅದರಲ್ಲಿ ಏನೂ ಇಲ್ವಾ ಅಪ್ಪಾ ..ಅಂತ ? "

ಅಲ್ಲಿರೋದು ಸ್ವೇಚ್ಚಾಚಾರ ...ನಮ್ಮಲ್ಲಿರೋದು ಸದಾಚಾರ . ನಿನಗೆ ಹಳೆ ಹಿಂದಿ MOVIE ಅಂದ್ರ ಪ್ರಾಣ ಆಲ್ವಾ ? ಅಷ್ಟೊಂದು ನೋಡಿದೀಯಾ ಅದರಲ್ಲಿ ಈ ಥರ ಯಾವತ್ತಾದರೂ ನೋಡಿದ್ದೀಯಾ ... ಅದೆಲ್ಲಾ ಯಾಕೆ ನಿನ್ನ ಫೇವರಿಟ್, ನಮ್ಮ ರಾಜಣ್ಣನ ಸಿನೆಮಾ ನೋಡಿಲ್ವಾ ...ಅವರ ಒಂದಾದರೂ ಸಿನೆಮಾದಲ್ಲಿ ನಮ್ಮ ನೆಲ , ಜಲ , ನಮ್ಮ ಸಂಸ್ಕೃತಿ ಬಿಟ್ಟು ಬೇರೆ PROPOGATE ಮಾಡಿದ್ದಿದೆಯಾ ? ಇಲ್ಲ ತಾನೇ ? ಅದಕ್ಕೆ ಹೇಳೋದು " EAST OR WEST INDIA IS THE BEST " ಅಂತ . ನಮ್ಮ ಹಿರಿಯರು ಮಾಡಿಟ್ಟಿರೋ ನೀತಿ ನಿಯಮಗಳು , ಬರೆದಿಟ್ಟಿರೋ
ಪುಸ್ತಕಗಳು ಇವೆಲ್ಲ ಪೂರ್ಣ ವಿಮರ್ಶೆ - ಪರಾಮರ್ಶೆಯ ನಂತರ ತಯಾರಾಗಿರೋದು . ನೀ ಕೇಳ್ದೆ ಲ್ಲ ಆ ಪಾಶ್ಚಿಮಾತ್ಯ ಸಂಸ್ಕೃತಿ ...ಅದರಲ್ಲಿರೋ ತಪ್ಪುಗಳನ್ನು DELETE ಮಾಡಿಕೊಂಡು , ನಮ್ಮ ನೆಲಕ್ಕೆ ಹೊಂದುವ ನಡೆ ನುಡಿಗಳನ್ನ ರೂಢಿಸಿಕೊಂಡು , ನಮ್ಮ ಹಬ್ಬ ಹರಿದಿನಗಳನ್ನ ಆಚರಿಸಿ ಕೊಂಡು ಹೋದರೆ ಅದುವೇ SIMPLEST FORM OF INDIAN CULTURE . ಇದಕ್ಕಿನ್ನ RICH ಆಗಿ ನೀನು INDIAN CULTURE ಆಚರಿಸಬೇಕು ಅಂದ್ರೆ ಸ್ವಲ್ಪ ಕಷ್ಟ ಪಡಬೇಕು ...ಅದರ ಬಗ್ಗೆ ನಿನಗೆ ನಾನು ಈ WEEKEND ನಾವಾರೂ ಜನ ಸೇರಿ ಶೃಂಗೇರಿ ಹೋಗ್ತಿದೀವಲ್ಲ ...ಅವತ್ತು ದಾರೀಲಿ ಹೇಳ್ತೀನಿ ..ಓಕೆ? "

ಅಂತೆಲ್ಲ ತಿಳಿ ಹೇಳಿ

ಸ್ವಾತಂತ್ರ್ಯಾ ನಂತರ ಮನ್ವಂತರಕ್ಕೆ ನಾಂದಿ ಹಾಡಿದ ಮೊದಲ ಪೀಳಿಗೆಯಾಗಿ ಇತಿಹಾಸ ಸೇರ್ತೀವಿ .





THANKS DAD and





Revappa

No comments:

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago