ಮೇನಕೆ ವಿಶ್ವಾಮಿತ್ರ  
 
                                     ಮೇನಕೆ ಕಣ್ಣಲಿ ಬಿಟ್ಟಳು ಮಾದಕ ಅಸ್ತ್ರ
                                     ಅದ ತಡೆಯದಾದ ತಪಸಿ ವಿಶ್ವಾಮಿತ್ರ 
                                     ಸಡಿಲವಾಯಿತವನ ಏಕಾಗ್ರತೆಯ ಸೂತ್ರ
                                      ಅವ ಕಣ್ತೆರೆಯಲು ಕಾಣಿಸಿತವಳ ಸುಂದರ ಚಿತ್ರ 
 
                                      ಬೆರೆತವವರೀರ್ವರ ಅತ್ಯಾಸೆ ತುಂಬಿದ ನೇತ್ರ
                                       ಬರೆಯುತ ಉನ್ಮಾದದಿಂದೊಲವಿನ ಪತ್ರ 
 
                                        ಅವರ ಒಡಲಾಯಿತು ಮದನನ ಕ್ಷೇತ್ರ
                                         ಹೃದಯಗಳು ಪಟಿಸಿದವು ಮಿಲನದ ಸ್ತೋತ್ರ 
 
                                        ನಾಚಿಸಿದರವರು ಕಾಮಶಾಸ್ತ್ರ
                                        ಜಗದ ಪರಿವಿಲ್ಲದೆ ವಹಿಸುತ ರತಿಮನ್ಮತರ ಪಾತ್ರ 
 
                                        ಪ್ರೇಮಕಾಮಾಕೆ ಅಡ್ಡಿಯಾಗದು ಕುಲಗೋತ್ರ
                                         ಈ ನಿಯಮವಿರುವುದು ಪ್ರೇಮಕಾಮಾಕೆ ಮಾತ್ರ 
 
                                                                                             --------ಸಕ್ಕತ್ ಸಚ್ಚಿ 
 
1 comment:
ಸಚ್ಚಿ ........
ಈ ಆಧುನಿಕ ವಿಶ್ವಾಮಿತ್ರ ತುಂಬಾ ರಸಿಕ ಅನ್ಸುತ್ತೆ ನಿಮ್ಮ್ತರಾ......!
Post a Comment