14 May 2009

ಚಲನೆಯ 3 ನಿಯಮಗಳು


ಏನಿದು ....What Is This ?

ನೀನು ಸಂಪೂರ್ಣ ತಪ್ಪಾಗಿ ಅರ್ಥ ಮಾಡ್ಕೊಂಡೆ ಯಶವಂತ್ ....!!



ಮೊದಲನೆಯದಾಗಿ :

ಮುನ್ನುಡಿಯಲ್ಲಿ ಅಧ್ಯಾಯ ಹುಡುಕಿದರೆ ಸಿಗುತ್ತಾ ಯಶವಂತ್?



ಎರಡನೆಯದಾಗಿ :

"ನನ್ನ ಕಮೆಂಟು ನಿನ್ನ ಕಾಲೇಜಿನ ಅನುಭವ ಲೇಖನಕ್ಕೆ ಕಲ್ಲು ಹಾಕಿತು ಅಂದ್ರೆ ನಾನ್ ಏನ್ ತಿಳ್ಕೋಳ್ಲಿ ...."

ನಾನು
ಬರಿಬೇಕಂದದ್ದು Collage ಬಗ್ಗೆ ಹೊರತು College ಬಗ್ಗೆ ಅಲ್ಲ ...

" Actually I Was Planning To Write About The Collage Today,

But Yesterdays Yashwant's Comment Changed The The Whole Idea."

ಅನ್ನೋ
ಮಾತಿನ ಹಿಂದೆ ನನ್ನ ಉದ್ದೇಶ ಇದ್ದದ್ದು .....आपने ये बात छेड़ी है इसीलिए केह रहा हूँ ....

ನಿನಗೆ ನಾನು ಬರೆದದ್ದು ಒಣ ಬನ್ನು ಅನ್ನಿಸಿದ್ದಕ್ಕೆ ನನ್ನ ಬಳಿ ಎಳ್ಳ ಕಾಳಷ್ಟು ತಕರಾರಿಲ್ಲ ....

ಆದ್ರೆ ಮುಖಪುಟದಲ್ಲಿ ಸಂಪಾದಕೀಯ ಹುಡುಕುವ ನಿನ್ನ ಪ್ರವೃತ್ತಿಗೆ ನನಗೆ ಆಶ್ಚರ್ಯ ಆಯ್ತು ....

"......."ಆದ್ರೆ ಪ್ರತಿ ದಿನ ನಾನು ಬರೆಯೋ ಬರಹಕ್ಕೆ reply ಮಾಡೋ ಸೌಜನ್ಯ ಬೆಳೆಸಿಕೊಳ್ಳಿ ..."

ನಿನ್ನ
ಈ ತರದ ಮಾತುಗಳು ಬೋಧನೆ ಅಲ್ಲದೆ ಮತ್ತಿನ್ನೇನು......" -


ಇಲ್ಲಿರೋದು

'ಒಂದು ಹೊಸ ಪತ್ರಿಕೆ ಶುರು ಮಾಡಿರೋ ಪತ್ರಕರ್ತನಿಗೆ ತನ್ನ ಪತ್ರಿಕೆ ಬೆಳೀಲಿ....ನಾನು ನೀಡಿರೋ

ಮಾಹಿತಿ ಅವರಿಗೆ ತಲುಪಿದೆಯಾ ಇಲ್ಲವ ಅಂತ ತಿಳಿಯ ಬಯಸುವ ನಿಷ್ಕಪಟ ಹಪಹಪಿ '

ಒಂದು ದಿನಪತ್ರಿಕೆನೇ ಉದಾಹರಣೆಯಾಗಿ ತಗೊಂಡ್ರೆ ...

ಅದು Succeessful ಆಗಿದೆ ಅಂತ ಹೇಗೆ ಹೇಳೋಣ ...?

ಒಂದು ....Circulation ಜಾಸ್ತಿ ಇರಬೇಕು ....Like Times, Hindu...ಆದ್ರೆ ಇಂಥ ಪತ್ರಿಕೆಗಳೂ ಪ್ರತಿ

ದಿನ ತಮ್ಮ ಪುಟಗಳಲ್ಲಿ ಒಂದು ಕೋರಿಕೆ ಅಚ್ಚು ಹಾಕಿಸಿರ್ತಾವೆ...." ಓದುಗರು ದಯಮಾಡಿ ಈ

ಪತ್ರಿಕೆಯಲ್ಲಿ ಎಲ್ಲಾದರೂ ತಪ್ಪು ಕಂಡು ಬಂದಲ್ಲಿ ನಮಗೆ ತಿಳಿಯಪಡಿಸಿದರೆ ನಾವು ನಿಮಗೆ

ಆಭಾರಿಯಾಗಿರುತ್ತೇವೆ"

ಇದು ಆ ಪತ್ರಿಕೆಗಳು ತಮ್ಮ ಓದುಗರೊಂದಿಗೆ Communication ಇರ್ಲಿ ಅಂತ ಮಾಡ್ಕೊಂಡಿರೋ

ಒಂದು बहाना ಅಲ್ದೆ ಮತ್ತಿನ್ನೇನು ?


ಅಷ್ಟು ದೊಡ್ಡ ಪತ್ರಿಕೆಗಳಿಗೆ ಇನ್ನೊಂದಿಬ್ರು 'ತಪ್ಪುಗಳನ್ನು ಜಾಲಾಡೊ ತಜ್ಞರುಗಳನ್ನ

ನೇಮಿಸಿಕೊಳ್ಳೋದು ಕಷ್ಟನ ?


ಆ ಪತ್ರಿಕೆಗಳು ಇಂದು ಭಾರತದ ನಂ.1 ಪತ್ರಿಕೆಗಳೇ ಆಗಿದ್ರೂ ಹಿಂದೊಂದು ದಿನ ನಾಲ್ಕಾರು ಜನ

ಪತ್ರಕರ್ತರ ಕನಸಿನ ಕೂಸಾಗಿ ಹುಟ್ಟಿ ತಮ್ಮ ಅಸ್ತಿತ್ವ ಕಂಡು ಕೊಳ್ಳಲಿಕ್ಕೆ ಕಷ್ಟ ಪಟ್ಟಿರಲೇಬೇಕಲ್ಲ ....

ಒಬ್ಬ ಶೂರ ರಾಜ ಹಿಂದೊಂದು ದಿನ ಅಸಹಾಯಕ ಮಗು ಆಗಿದ್ದ ಅಂತ ನಿನಗೂ ಗೊತ್ತಿರುವ ವಿಷಯ .




ಅಥವಾ ....ಅದು ಒಂದು ಚಿಕ್ಕ ನಿರ್ದಿಷ್ಟ ಗುಂಪಿಗಾಗಿ ಎಲ್ಲ ಒಟ್ಟಿಗೆ ಕಲೆತು, ಕೂತು, ಚರ್ಚಿಸಿ ತಯಾರು

ಮಾಡಿದ ಕನಸಿನ ಕೂಸಾಗಿರಬೇಕು ...ಎಲ್ರಿಗೂ ಚಂದಾದಾರಿಕೆಯ ರಸೀದಿ ಹರಿದೇ ಮುಂದೆ ಓಂ

ಮಾಡೋದು ಅಲ್ಲಿನ ವಾಡಿಕೆ ...

ಇವೆರಡರಲ್ಲಿ ನಮ್ಮದು ಯಾವುದು ಅಲ್ಲ ...

ಇದುವೇ ಬೇರೆ ...

ಒಬ್ಬ ವ್ಯಕ್ತಿಯಿಂದ ನೂರು ವ್ಯಕ್ತಿಗಳಿಗಾಗಿ ಶುರುವಾಗಿರೋ ಅಪರೂಪದ Initiative ...

ಇಲ್ಲಿ ಸುಮ್ನೆ ನನಗೆ ತಿಳಿದಿದ್ದನ್ನ ಬರೆದು ಬಿಸಾಕಿ ಅವರು ಓದಿದ್ರೆ It's Good ಓದಲಿಲ್ಲ ಅಂದ್ರೆ ಕತ್ತೆ

ಬಾಲ ಕುದುರೆ ಜುಟ್ಟು ಅಂತ ಸುಮ್ಮನಾಗೋದು ನನ್ನ ಜಾಯಮಾನ ಅಲ್ಲ ...

ಇದು ನಾನು ಶುರು ಮಾಡಿದ್ದು ಇಲ್ಲಿ ನಾನೇ ಬಾಸ್ ಅನ್ನೋ ದರ್ಪ ನನಗಿಲ್ಲ ...

ನಿಮ್ಮ, ನಮ್ಮ ಅಭಿರುಚಿ, ಅಭಿಲಾಷೆ ಗಳಿಗೆ ತಕ್ಕಂತೆ ಈ ವೇದಿಕೆ ರೂಪು ಗೊಳ್ಳಲಿ ಅಂತ ಬಯಕೆ

....ನಿರಂತರ ಕಲಿಕೆ ಯ ಧ್ಯೇಯದೊಂದಿಗೆ



ಮೂರನೆಯದಾಗಿ :

" ಹೀಗೆ ಭಾವಿಸಿಕೊಳ್ಳಿ... ಹಾಗೆ ತಾಳೆ ಮಾಡಿ.... ಇದೇ ರೀತಿ ಯೋಚಿಸಿ ... ಏನು ಇದೆಲ್ಲಾ....."

ಪಾಠ ಹೇಳಬೇಕಾದರೆ ಉದಾಹರಣೆಗೆ ಅಂತ ಒಂದು ಶಬ್ದ ಬಳಸಿ ನಮಗೆ ತಿಳಿಯಲು ಕಷ್ಟ ಆಗಿರೋ

ಒಂದು ವಿಶ್ಯನ್ನ
ತಿಳಿದಿರೋ ವಿಷಯದ ಜೊತೆ ಹೋಲಿಸಿ ತಿಳಿಸೋದು ಬಹಳಷ್ಟು ಜನ Successful

ಮೇಷ್ಟ್ರುಗಳ Teaching Method....


ಈಗಿನ 'ಪ್ರಗತಿಪರ' , 'ಚಲನಶೀಲ' ಶಿಕ್ಷಕರು ಎಷ್ಟರ ಮಟ್ಟಿಗೆ ಈ Techinque ಬಳಸ್ತಾರೆ ಗೊತ್ತಿಲ್ಲ ...

ಆದ್ರೆ ಈಗ ನಮ್ಮ ತಾತನ ವಯಸ್ಸಿನಲ್ಲಿ ಕೂತಿರೋರು ಇದನ್ನ ತುಂಬಾ ಯಶಸ್ವಿಯಾಗಿ

ಪ್ರಯೋಗಿಸಿದ್ದಾರೆ ...

ನಾವು ಅಂದ್ರೆ ನನ್ನ ನಿನ್ನ ವಯಸ್ಸಿನೋರು ಹೈಸ್ಕೂಲಲ್ಲಿ ಇದ್ದಾಗಲೂ ಈ ಪದ್ಧತಿ ಜಾರಿಯಲ್ಲಿತ್ತು ....



ನೀನು Comment ಬರೀದೆ ಇರೋದಕ್ಕೆ ಈಗ ಕಾರಣ ಉಳ್ಕೊಂಡಿಲ್ಲ ಅಂತ ಭಾವಿಸ್ತೀನಿ ....



ಇದು
ನಮ್ಮ ಪ್ರಾರಂಭ ....


ನಾವು ಈಗ ನಮ್ಮ ಈ ಪತ್ರಿಕೇನ ಕಾಳಜಿಪೂರ್ವಕವಾಗಿ ಬೆಳೆಸಬೇಕಾಗಿದೆ ....

ಸುಮ್ನೆ Pamplet ಹಂಚೋ ಥರ ರಸ್ತೆನಲ್ಲಿ ಹೋಗೋ ಎಲ್ಲರ ಕೈಲೂ ಒಂದು ಪ್ರತಿ ತುರುಕಿ, ಅವ

ಮುಂದಿನ ಸೆಕೆಂಡು ಕಳೆಯೋದರೊಳಗೆ ಆ ಪತ್ರಿಕೆಯನ್ನ ಸರಿಯಾಗಿ ನೂರು ಜನ ಅಡ್ಡಾಡೊ ಜಾಗದಲ್ಲಿ,

ನೆಲದ ಮೇಲೆ ಬಿಸಾಕಿರೋದನ್ನ ನೋಡದೆ, ಮುಂದೆ ಈ ದಾರಿಲಿ ಬರೋ ಇನ್ನೊಬ್ಬನ ಹತ್ರ ಧಾವಿಸೋ

ಕೆಲ್ಸ ಮಾಡೋದು ಬೇಡ ....

---------------------------------------------

ಇಲ್ಲಿ ಹುಡುಗಿಯರಿಗೂ ಮುಕ್ತ ಅವಕಾಶವಿದೆ . As This Initiative Is

For The Betterment of Mankind As Well As Womankind.


I Dont Want 33% Smile On Your Face But FULL 100%.






Love,
Revappa


No comments:

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago