[ ಇಲ್ಲಿ ಬರ್ತಿರೋ ರೇವಪ್ಪನ ಬರಹಗಳನ್ನ ಅವನ ಗೋಳಿನ ಸಾರಾಂಶ ಅಂತ ದಯಮಾಡಿ ತಿಳ್ಕೊಬೇಡಿ. "ಇವನೇ ಬರೀತಿರ್ಬೇಕಾದ್ರೆ ನಾನೇನು ಕಮ್ಮಿ ..." ಅಂತ ನಿಮಗೆ ಅನ್ನಿಸಲಿ ಅಂತ ನನ್ನ ಹೆಬ್ಬಯಕೆ ..
ಅದ್ಯಾವುದೋ ಶಬ್ದ 'ಅರ್ಧ ಪ್ರವಾಸ ಕಥನ' ನಾನಂತು ಇಲ್ಲೀವರೆಗೆ ಆ ಶಬ್ದನೆ ಕೇಳಿರಲಿಲ್ಲ ...ಹೇಗೋ ಹುಟ್ತು... ಹಾಗೆ ಬರೀತಾ ಬರೀತಾ ಇನ್ನೂ ಏನೇನೋ ಹುಟ್ಟುತ್ತೆ .. ಪ್ರೀತಿ ...ಪುಸ್ತಕದ ಮೇಲೆ ...ಬರೆಯುವವರ ಮೇಲೆ ..ಮೆಚ್ಚುಗೆ .ಹಾಗೇ ಸುಮ್ಮನೆ ...
ಅದಕ್ಕೆ ನಾನು ಹೇಳೋದು ....ಹೇಗೆ ದುಃಖ ಬಂದಾಗ ಅತ್ತುಬಿಡಿ ಅಂತಾರಲ್ಲ ಹಾಗೆ ಏನಾದ್ರು ಹೇಳಬೇಕು ಅನ್ನಿಸಿದ್ರೆ ಬರೆದುಬಿಡಿ ...ಇಲ್ಲಿ ಈ ಬ್ಲಾಗ್ ಗೆ ಅಂತ ಹೇಳಿದ್ದು... ಮತ್ತೆ, ಎಲ್ಲ ಕಡೆ ಮಾತಾಡೋ ಮಾತನ್ನೆಲ್ಲ steno ಥರ ಬರ್ಕೊಂಡಿರಾ ಮತ್ತೆ ..!!
ನಾನು, ನಾನೊಬ್ಬನೇ ಹೊಸ ಹೊಸ ವಿಷಯಗಳನ್ನ ತಿಳ್ಕೊಳೋ ಜೊತೆಗೆ ನಿಮಗೂ ಅವನ್ನ ತಿಳಿಸೋಣ ಅಂತ ಹೊರಟಿರೋ / ಹಾಕ್ಕೊಂಡಿರೋ Venture ಇದು ...ಅಂದ್ರೆ ಈ ಬ್ಲಾಗ್ ...
ನಿಮ್ಮಲ್ಲಿ ಕೆಲವರು 'ನನಗೆ ಬರೆಯೋಕೆ ಹೆದರಿಕೆ' ಅಂತ ಅಂತೀರಲ್ಲ ಅವರು ನನ್ನ ಇಂಥ ಬರಹಗಳನ್ನ ( ಅಪ್ರಬುದ್ಧ ಅಂತಿರೋ ok ok Type ಅಂತಿರೋ ...ಏನೇನ್ ಅನ್ಕೊಳ್ತಿರೋ ನಿಮಗ ಬಿಟ್ಟಿದ್ದು ) ನೋಡಿ ಸ್ಪಲ್ಪ Confidence ತಗೊಳ್ಳಿ ......ನಾವು ಇಲ್ಲಿ ಯಾವ ಬುದ್ಧಿಜೀವಿಗಳ ಸಮಾವೇಶನೂ ಹಮ್ಕೊಂಡಿಲ್ಲ ...ಇಲ್ಲಿರೋದು ಗೆಳೆಯರ ಕೂಟ ... ನೀವು ಬರೆಯೋ ಬರಹ ನಿಮಗೆ ಚಂದ ಅನ್ನಿಸೋದರ ಜೊತೆಗೆ ಆ ಬರಹ ಜನರ ಮುಂದೆ ನಿಮ್ಮದೊಂದು ಚಿತ್ರ ಕಟ್ಟಿಕೊಡಬೇಕು ...
ಅಂಥ ಬರಹಗಳನ್ನ ಬರೀಲಿಕ್ಕೆ ಹೆದರಿಕೆ ಏಕೆ ?
...ಮುಂದೆ ನಿಮ್ಮ ಪ್ರಿಯತಮೆಗೆ ಒಲವಿನ ಓಲೆ ಬರಿಲಿಕ್ಕಾದ್ರು ಒಂದು Rehearsal ತಗೋಳ್ರಿ ಇಲ್ಲಿ .!!
ನಮ್ಮ ಹೊಸ ಬ್ಯಾಚ್ ನ Typist ಪ್ರಕಾಶ ಪಾಟೀಲರು ಇಲ್ಲಿ ಅಂಥದೊಂದು ಪ್ರಯತ್ನ ಮಾಡಿದಾರೆ ನೋಡಿ ....

ಏ ಬಟ್ಟಲುಗಣ್ಣಿನ ಹುಡುಗಿ ಅದೇನು ಅಷ್ಟೊಂದು ವಾರೆ ನೋಟದಿಂದ ಏನು
ನೋಡುತ್ತಿರುವೆ . ಸೂಜಿ ಮೊನೆಯಂಥ ನೋಟದಿಂದ ಅದ್ಯಾರನ್ನ ಸುಲಿಗೆ ಮಾಡಬೇಕು ಅಂತಿರುವೆ.
ಅವತ್ತು ಒಂದೇ ಒಂದು ಸಾರಿ ನಿನ್ನ ನೋಡಿ ನಕ್ಕಿದ್ದಕ್ಕೆ ತಿರುಗಿ ನೋಡಿ ಕಣ್ಣಲ್ಲೇ ನಕ್ಕು , ಆಸೆಗಳ
ಬಾಣ ಬಿಟ್ಟು , ಕನಸಿನ ಚಾದರ ಹೊದಿಸಿ ಪ್ರೀತಿಯ ಚುಕ್ಕೆ ಎಣಿಸುವ ಹಾಗೆ ಮಾಡಿ ಗಾಯಬ್
ಆದವಳು ಮತ್ತೆ ನಿನ್ನ ರೆಪ್ಪೆಗಳ ಸುಳಿವೇ ಇಲ್ಲ . ಆ ನಿನ್ನ ಕಾಡಿಗೆ ಹಚ್ಚಿದ ಕಣ್ಣನ್ನೇ
ಗುರಿಯಾಗಿಸಿಕೊಂಡು ದೇವಸ್ಥಾನದಲ್ಲಿ, ಹೋಟೆಲಲ್ಲಿ , ಇನ್ನೆಲ್ಲೆಲ್ಲೋ ಹುಡುಕಿ ಹುಡುಕಿ ಸಾಕಾಯ್ತು
ಮಾರಾಯ್ತಿ. ಕಾಡುವುದಕ್ಕೂ ಒಂದು ಮಿತಿ ಇದೆ ಆದ್ರು ‘ಒಂದೇ ಗುರಿ ’ ಅನ್ನೋ ಥರ
ಯಾವಾಗಲೋ ಒಮ್ಮೆ ಸಿಗ್ತಿಯ ಅನ್ನೋ ಆಸೆಯಿಂದ search ಮಾಡ್ತಾ ಇದ್ದೀನಿ .
Office ಅಲ್ಲಿ ಕೈ ತುಂಬಾ ಕೆಲಸ ಇದ್ರುನುವೆ T.V. ಲಿ ಬರೋ ಜಾಹಿರಾತಿನ ತರಹ
ಒಮ್ಮಿಂದೊಮ್ಮೆಲೇ ಮನಸಿನ ತಿಳಿಗೊಳದಲ್ಲಿ ಮೀನಿನಂತೆ ನಿನ್ನ ನೆನಪು ತೇಲಿ ಬಿಡ್ತಿಯ .
ಆ ಕಣ್ಣುಗಳಲ್ಲಿ ಅದೆಂಥ ಮೋಡಿ ಇದೆಯೇ ? ಒಂದು ಸಾರಿ ನಿನ್ನ ಜಿಂಕೆಯಂಥ ಕಣ್ಣಲ್ಲಿ
ಕಣ್ಣಿಟ್ಟು ನೋಡಿದ್ರೆ ರಚ್ಚೆ ಹಿಡಿದು ನಿನ್ನ ಪ್ರಿತಿಸಲೇಬೇಕು ಅನ್ನಿಸುವಷ್ಟು ಮೋಹ . ಕವನ ಬರೀಲ,
ಕಥೇನ ಬರೀಲ ಅಂತ ಕೂತರೆ ಅವೆಲ್ಲ ನಿನ್ನ ಕಣ್ಣ ಕವಿತೆ ಮುಂದೆ ಏನೂ ಅಲ್ಲ ಬಿಡು .
ಇನ್ನೇನು ನಿನ್ನ ಸಹವಾಸ ಸಾಕು ಅನ್ನಿಸಿ ಕೆಲಸಕ್ಕೆ ಅಣಿಯಾದಾಗ ಸುಮ್ನೆ computer
ON ಮಾಡಿ ನೋಡ್ತಾ ಇದ್ದಾಗ ಒಮ್ಮೆಲೇನೆ ಆಶ್ಚರ್ಯ . ಅದೇನೋ ಅಂತಾರಲ್ಲ “ ರೋಗಿ
ಬಯಸಿದ್ದು ಹಾಲು ಅನ್ನ , ವೈದ್ಯ ಹೇಳಿದ್ದು ಹಾಲು ಅನ್ನ ” ಅನ್ನೋಥರ ನಾನು
ಗುರಿಯಾಗಿಸಿಕೊಂಡು ಹುಡ್ಕೋ ಕಣ್ಣು , ರಚ್ಚೆ ಹಿಡಿದು ಪ್ರೀತ್ಸೋ ಕಣ್ಣು BLOG ಅಲ್ಲಿ .
ನಾನು ಇಷ್ಟು ದಿನ ಹುಡುಕಿದ್ದು ಅದೇ ಕಣ್ಣು …. ಅದೇ ಕಣ್ಣು … ಅದೇ ಕಣ್ಣು ……
ಇಂತಿ ನಿನ್ನ --
ಪಾಪು .
ಹೀಗೆ ಚಿತ್ರಗಳು ಒಂದೇ ಆದ್ರು ನೋಡೋ ಕಣ್ಣುಗಳು ಬೇರೆ ಬೇರೆ ಇರ್ತಾವೆ...ಪಾಟೀಲರಿಗೆ ಕಂಡಿದ್ದನ್ನ ಅವರು ನಿಮ್ಮೆದುರಿಗೆ 'ಹುಡುಕಿ' ತಂದಿತ್ತಿದ್ದಾರೆ ತಮ್ಮ ಮನದಾಳದಿಂದ ...
ಈ ಕಣ್ಣಿನ ಕಥನದಲ್ಲಿರೋದು ಹನ್ನೊಂದೇ ವಾಕ್ಯಗಳು ... ಹಾಗೆ ನೀವು ಪ್ರಬಂಧ ದೊಡ್ಡ ದಾಗುತ್ತೆ ನಾನು ಒಂದೆರಡು ಸಾಲು ಮಾತ್ರ ಬರಿಬಲ್ಲೆ ....ಅಂತ Complaint ಮಾಡೋ ಬದಲು ಮೊದಲು ಆ ಎರಡು Line ಆದ್ರು ಬರೀರಿ ...ಆಯ್ತಾ ? ]
ಹೀಗೊಂದು ಸಾರಿ ಕಲ್ಪಿಸಿಕೊಳ್ಳಿ ....
ನಾವೆಲ್ಲ ಸೇರಿ ಸುಂದರ ಕರ್ನಾಟಕ ಪ್ರವಾಸ ಹೋಗಿದೀವಿ....
B.R.ಬೆಟ್ಟ ದಿಂದ ಹಿಡಿದು ಬಿಜಾಪುರದವರೆಗೂ ಎಲ್ಲ ಸುತ್ತಿ ಬರೋ / ಸಂದರ್ಶಿಸಿ ಬರೋ ಪ್ಲಾನ್ ಹಾಕ್ಕೊಂಡು ಹೋಗಿದೀವಿ ...
ರೇವಪ್ಪ ನಿಮ್ಮ Tour Leader ಅಂತ ಭಾವಿಸಿ ....
ಈ Tour Leader ಅನ್ನೋದಕ್ಕೆ Definition ಕೊಡಬೇಕಾಗುತ್ತೆ....
# ಅವನು ನಿಮ್ಮೊಳಗೇ ಒಬ್ಬ ...
# ನಿಮ್ಮ ಥರ ಅವನೂ ಸುಂದರ ಕರ್ನಾಟಕ ಪ್ರವಾಸದ ಉದ್ದೇಶದಿಂದ ಬಂದವನು ...
# ನೀವೆಲ್ಲ ಸೇರಿ ಅವನ ಹತ್ರ ದುಡ್ಡು ಕೊಟ್ಟು " ನೋಡಪ್ಪ ರೇವಪ್ಪ ...ಎಲ್ಲ ಖರ್ಚು ವೆಚ್ಚಗಳನ್ನು ಸರಿಯಾಗಿ ನೋಡ್ಕೋ ...ಎಲ್ಲ ಸ್ಥಳಗಳನ್ನ ಕೂಲಂಕಷವಾಗಿ ನೋಡೋಣ ಅಂತ ಹೊರಟಿದಿವಿ...ನಿನ್ನ ಮೇಲೆ ಎಲ್ಲ ಜವಾಬ್ದಾರಿ ...ನಮ್ಮ ಪ್ರವಾಸ ಹಾಯಾಗಿರೋ ಹಾಗೆ ನೋಡ್ಕೊಳೋ ಜವಾಬ್ದಾರಿ ನಿನ್ನದು ...." ಅಂತೆಲ್ಲ ಹೇಳಿ ತಯಾರಾಗಿದಿರಿ.
ಪ್ರವಾಸ ಶುರುವಾಯ್ತು ...ಎಲ್ರೂ ಒಂದೊಂದೇ ಸ್ಥಳಗಳನ್ನ ಆಸ್ವಾದಿಸ್ತಾ ನಡೆದಿದೀವಿ...
ನನ್ನ ಮೇಲೆ ಸ್ಥಳ ಪರಿಚಯದ ಜವಾಬ್ದಾರಿ ಹಾಕಿರೋ ನೀವು ...ನಾನು ಹೇಳ್ತಿರೋ ವಿವರಣೆ ಕೇಳ್ತಿದೀರಿ...ಎಲ್ರೂ ಏನೋ ಅಲ್ಲೇ ನನ್ನ ಎದುರಿಗೇ ನಿಂತಿದ್ರುನುವೆ ಕೆಲವರ ಗಮನ ಬೇರೆಲ್ಲೋ ಇದೆ ...
ಕೆಲವರದು ಪ್ರವಾಸಕ್ಕೆ ಬಂದಿರೋ 'ಇತರರ' ಮೇಲೆ ...ಇನ್ನು ಕೆಲವರದು ನಮ್ಮಲ್ಲಿರೋ 'ಕೆಲವರ' ಮೇಲೆ ...
ಕೆಲವರು ನನ್ನ ಮರ್ಜಿ ಕಾಯುವ ಸಲುವಾಗಿ ನಾನು ಹೇಳ್ತಿರೋದನ್ನ ಕೇಳುವಂತೆ ನಟಿಸುತ್ತ ತಲೆ ಅಲ್ಲಾಡಿಸ್ತ ಇದೀರಿ...
ಇನ್ನು ಕೆಲವರು ನಾನು ಹೇಳ್ತಿರೋದರ ಮೇಲೆ ನಿಜವಾದ ಆಸಕ್ತಿ ಇದ್ರುನುವೆ ಮುಖದ ಮೇಲೆ ಅನ್ಯಮನಸ್ಕ ಭಾವ ...ಒಳಗಡೆ ಏನ್ ನಡೀತಿದೆ ಗೊತ್ತಿಲ್ಲ ...
ಮೈಸೂರು ಅರಮನೆ ..ಅಬ್ಬೆ ಫಾಲ್ಸ್ ...ಕೊಡಚಾದ್ರಿ ...ಹೀಗೆ ಎಲ್ಲ ಕಡೆ ಸ್ಥಳ ಪುರಾಣ ಮತ್ತೆ ಅದರ ಬಗ್ಗೆ
Upto Date ಆಗಿರೋ ಮಾಹಿತಿ ಕೇಳಿ ಎಲ್ರಿಗೂ ಖುಷಿ ...ಆರಂಭದ ಹುರುಪಿನಲ್ಲಿ ಎಲ್ರಿಗೂ "ನಾವು
ಸರಿಯಾದ ವ್ಯಕ್ತಿಗೇ ಕೆಲಸ ವಹಿಸಿದೀವಿ" ಅಂತ ಖುಷಿ .
ಈಗ ನೋಡ್ತಿರೋದು ಸಾತೋಡಿ Falls ....ನಾನು ನನ್ನ Tour Notes ತೆಗೆದು ಹೇಳ್ತೀನಿ "ಇಲ್ಲಿ ಹರೀತಿರೋ ನೀರು ಕಾಳಿ ನದೀದು...

ಕಾಡಿನ ಯಾವುದೊ ಸಂದಿಯಲ್ಲಿ ಹುಟ್ಟಿ ಇಲ್ಲಿ ನಮ್ಮೆದುರಿಗೆ ಧುಮುಕ್ತಾ ಇದೆ ...etc ..etc..."
ಇದಕ್ಕೆ ನಿಮ್ಮ ಪ್ರತಿಕ್ರಿಯೆ ...
# ಕೆಲವರು ಪ್ರತಿಕ್ರಿಯಿಸದಷ್ಟು ಬೇರೆ ಕೆಲಸದಲ್ಲಿ ಮಗ್ನರಾಗಿದಾರೆ...Photo ಗಳು ..ಬಂದಿರೋ ಇತರರು ..
# ಇನ್ನು ಕೆಲವರು "ಹೌದಾ..!! ಎಷ್ಟು ಚನ್ನಾಗಿದೆಯಲ್ಲ...ಕಾಳಿ ನದಿ ಇಲ್ಲೂ ಬರುತ್ತೆ ಅಂತ ಗೊತ್ತೇ ಇರ್ಲಿಲ್ಲ ..."
# ಮತ್ತೂ ಕೆಲವರು ತಮ್ಮಲ್ಲೇ ತಮ್ಮ ಪಕ್ಕದಲ್ಲಿರೋ ತಮ್ಮಣ್ಣ ನಿಗೆ ಕಿವಿಲಿ ಉಸುರುತ್ತ " ಎಲ್ಲ ತಪ್ಪು ..ಕಣ್ರೀ .ಇದು ಕಾಳಿ ನದಿ ಅಲ್ಲ..ಇದು ಸುಮ್ಮ್ನೆ ಕಾಡಲ್ಲಿ ಎಲ್ಲ ಕಡೆಯಿಂದ ಒಟ್ಟಾಗಿ ಹರೀತಿರೋ ಝರಿ ...ಇದು ಮುಂದೆ ಹೋಗಿ ಕಾಳಿ ನದಿ ಸೇರ್ಕೋಳ್ಳುತ್ತೆ...ಎಲ್ಲ ತಪ್ಪು ."
# ಅದನ್ನ ಕೇಳಿಸಿಕೊಂಡ ತಮ್ಮಣ್ಣ ರೇವಪ್ಪನಿಗೆ ಈ ಮಾತು ತಿಳಿಸೋ ಗೋಜಿಗೆ ಹೋಗದೆ "ಇಂಥ ತಪ್ಪು ಮಾಹಿತಿ ಕೇಳೋದಕ್ಕಿನ್ನ ...ನಮ್ಮ ಪಾಡಿಗೆ ನಾವು ಫಾಲ್ಸ್ ನೋಡೋದು ಒಳ್ಳೇದು ...ಓ ಅದ್ಯಾರೋ Foreigner ಬನ್ದಿದಾಳಲ್ಲಪ್ಪ ಜೊತೆಗೆ ಯಾರೋ Symonds ಇದ್ದಂಗೆ ಇದಾನಲ್ಲ ಧಡಿಯ ......" ಅಂತ ಅನ್ಯಮನಸ್ಕನಾದ.
....ಹೀಗೆ ಸಾಗ್ತಾ ಹೋಯ್ತು ಪ್ರವಾಸ ...ಕೊನೆಯಲ್ಲಿ ..................
ಇನ್ನು ಕೊನೆ ಬಂದಿಲ್ಲ ಸ್ಪಲ್ಪ ತಾಳಿ...ಅವರ ಪ್ರವಾಸ ಮುಗಿದ ಮೇಲೆ ಕೊನೆಯಲ್ಲಿ ಏನಾಯ್ತು ಅಂತ ಹೇಳ್ತೀನಿ .
ಈ ಮೇಲಿನ ಅರ್ಧ ಪ್ರವಾಸ ಕಥನದಿಂದ ನಾವು ಏನೇನು Inference Draw ಮಾಡಬಹುದು ....
1. "ಒಬ್ಬ ವ್ಯಕ್ತಿಗೆ ಜವಾಬ್ದಾರಿ ವಹಿಸಿದ ಮೇಲೆ ನಮ್ಮ ಜವಾಬ್ದಾರಿ ಕಳೀತು"
2. "ಜವಾಬ್ದಾರಿ ವಹಿಸಿದ ಮೇಲೆ ಅವನು ನಮ್ಮ ನಾಯಕ ...ಅವನು ತಪ್ಪು ಮಾಡಿದರೆ ಅವನನ್ನ ಪ್ರಶ್ನಿಸೋದು ತಪ್ಪು."
3. " ಅವನು ಮಾಡಿರೋ ತಪ್ಪಿನ ಬಗ್ಗೆ ಹಿಂದೆ ಅಡ್ಕೊಬಹುದು ಹೊರತು ಅವನಿಗೆ " ನೀನು ಇಲ್ಲಿ ತಪ್ಪಿದಿಯ ..ಇದನ್ನ ತಿದ್ಕೋ " ಅಂತ ಹೇಳಿದರೆ ನಾನು ಎರಡನೇ Leader ಆಗೋದು ತಪ್ಪುತ್ತೆ ."
4. " ಒಟ್ಟಾರೆಯಾಗಿ ಅವನು ಅದ್ಭುತ ಕೆಲಸ ಮಾಡಿದಾನೆ ...ಆದರೆ ಇದನ್ನ ಹೇಳೋದು ಹೇಗೆ ..ವಾಪಸ್ ಬೆಂಗಳೂರಿಗೆ ಹೋದ ಮೇಲೆ ಒಬ್ಬನೇ ಸಿಗ್ತಾನಲ್ಲ ಆವಾಗ ಹೇಳೋಣ "
5. "ರೇವಪ್ಪ ತಿಳಿಸಿರೋ ಮಾಹಿತಿಗಳ ಬಗ್ಗೆ ನನ್ನದೊಂದು ನೋಟ್ಸ್ ಮಾಡ್ಕೊಬೇಕು ಅಂತ ಆಸೆ..ಆದ್ರೆ ಎಲ್ಲ ನನ್ನನ್ನೇ ನೋಡ್ತಾರಲ್ಲ ಆವಾಗ ...ಎಲ್ಲಿ ನಾನು ಅವನ Fan ಅನ್ಕೊಳ್ತಾರೋ ಏನೋ "
.............ಈ ಅರ್ಧ ಪ್ರವಾಸ ಕಥನಕ್ಕೂ ಮತ್ತೆ ನಮ್ಮ ಸಚಿವಾಲಯ ಕಿರಿಯ ಸಹಾಯಕರ ಬ್ಲಾಗ್ ನ ಸದ್ಯದ ಪರಿಸ್ಥಿತಿಗೂ ತಾಳೆ ನೋಡಿ ...ಆವಾಗ ನಿಮ್ಮಲ್ಲೇನಾದ್ರೂ ಇರೋ ಹಳೆ ವಿಚಾರಗಳ ಜೊತೆ ಈ ಹೊಸ ಕಥೆಯ ಮಂಥನ ನಡೆದು ಇನ್ನೊದು ನವ ವಿಚಾರ ಉದಿಸಿದ್ರೆ ದಯಮಾಡಿ Let me Know.
ನಿಮ್ಮವ,
ರೇವಪ್ಪ
..............ಮುಂದುವರಿಯುವುದು
ನಿನ್ನೆಯ Comment ಗೆ ಸಮಜಾಯಿಷಿ :
ಆ Theatre ವಾಕ್ಯ ಬರಬಾರದಿತ್ತು ...ಅದ್ಹೇಗೋ ನುಸುಳಿಬಿಡ್ತು...ಅದಕ್ಕೆ ಕ್ಷಮೆ ಇರಲಿ ...
ನೀವುಗಳು ಆ ಚಿತ್ರ ಗುಚ್ಛಕ್ಕೆ ಉತ್ತರ ಕೊಡದೆ ಇರೋ ಬೇಜಾರಲ್ಲಿ ಬಾರಿಗೆ ಹೋಗೋ ಹವ್ಯಾಸಗಳು
ನನಗಿಲ್ಲ ...ಅದಕ್ಕೆ ಇಡಿ ವಾರ ಹೀಗೆ ಉದ್ದುದ್ದ ಬರೀಬೇಕು ಅಂತಿದಿನಿ ...
ಶನಿವಾರ ಯಶವಂತ ಕೇಳಿರೋದು ಬರುತ್ತೆ ...ನಡುವೆ ನುಸುಳಿದ್ರೂ ಆಶ್ಚರ್ಯ ಇಲ್ಲ ...
ಆದ್ರೆ ಪ್ರತಿ ದಿನ ನಾನು ಬರೆಯೋ ಬರಹಕ್ಕೆ reply ಮಾಡೋ ಸೌಜನ್ಯ ಬೆಳೆಸಿಕೊಳ್ಳಿ ...
ಒಂದು e-Mail - revappa@gmail.com
ಒಂದು SMS - 9481773790
ಅಥವಾ
ಒಂದು Comment - ನೀವು ಬ್ಲಾಗ್ ಗೆ ಸದಸ್ಯರಾಗಿದ್ರೆ ಮಾತ್ರ comment ಬರಿಬಹುದು ..ಅದಕ್ಕೆ ಬೇಗ ಸದಸ್ಯರಾಗಿ ...
ಹೇಗೆ ಅಂತ ತಿಳಿಲಿಲ್ಲ ಅಂದ್ರೆ ..ಅಗಿರೋರನ್ನ ಕೇಳಿ ...
ಆದ್ರೆ mail message ಗಳಿಗೆ ಯಾವ ಅನಾನುಕುಲ ಇಲ್ಲ ಅನ್ಕೊತಿನಿ ...
ಮೇಲಿನ ಇಷ್ಟೆಲ್ಲಾ ಬರೀಲಿಕ್ಕೆ ತಗೊಂಡ ಸಮಯ ಸರಿಯಾಗಿ ಮೂರೂ ಗಂಟೆ ಹದಿನೈದು ನಿಮಿಷ
( 0345 hrs to 0700 hrs )...
ಅದಕ್ಕೆ ನೀವು ದ್ರೋಹ ಬಗೆಯೋಲ್ಲ ಅಂತ ನಂಬಿದೀನಿ...
Love,
Revappa

1 comment:
ಹಾಯ್ ಪಾಪು,,,,,, ಈ ಬ್ಲಾಗ್ ನಲ್ಲಿ ರೊಮ್ಯಾಂಟಿಕ್ ಅನ್ನಿಸೋ ಸಾಲುಗಳನ್ನ ನೋಡಿ ಖುಷಿಯಾಯ್ತು,,,, ನಿಮ್ಮ ಲಹರಿ ಸೂಪರ್,,,,,
ಏನ್ ರೇವಪ್ಪ.... ಇಂಥಾ ರೊಮ್ಯಾಂಟಿಕ್ ಲಹರಿ ಸ್ಥಿತಿ ಬರ್ಗರ್ ಮಧ್ಯ ಸಿಕ್ಕಿರೋ ಟೊಮ್ಯಾಟೋ ತರ ಆಗಿದೆ,,,, ನಿನ್ನ ಬರಹದ(ಬೋಧನೆ ಯಾ ರೋಧನೆ) ಬಂಧದಿಂದ ಬಿಡಿಸಿ ಬೇರೆಯಾಗಿ ಹಾಕಬಹುದಲ್ಲ....
Post a Comment