
ಎಲ್ರಿಗೂ ಶುಭ ಮುಂಜಾವು ...
" ನಾನು ನನ್ನ ಪ್ರತಿ ಪುಸ್ತಕ ಬರೆದ ಮೇಲೂ ನನ್ನ ಓದುಗ ಮಹಾಶಯರಿಂದ
ಸಣ್ಣ ಸಣ್ಣ ಪ್ರತಿಕ್ರಿಯೆಗಳಿಗಾಗಿ ಚಡಪಪಡಿಸ್ತಿರ್ತೀನಿ ..." ಅಂತ ನಮ್ಮ ರವಿ ಬೆಳಗೆರೆ ಹೇಳ್ತಾರೆ .
ಅಂಥಾದ್ರಲ್ಲಿ ನಾನ್ಯಾವ ಲೆಕ್ಕ ನೀವೇ ಹೇಳಿ ...
ರಾತ್ರಿಯೆಲ್ಲಾ ....ಅನ್ನೋದಕ್ಕಿನ್ನ ನಸುಕಿನಲ್ಲಿ ಬೇಗ ಎದ್ದು ಎಲ್ಲರಿಗೂ ಇಷ್ಟ ಆಗೋ ಥರ
ದಿನ ನಿತ್ಯ ಒಂದು ಹೊಸದನ್ನ ನೀಡೋ ಮೂರ್ಖತನಕ್ಕೆ ಕೈ ಹಾಕಿದೀನಿ...
ಇದನ್ನ ನಾನಾಗಿನೇ ನನ್ನ ಸ್ವಂತ ಆಸಕ್ತಿಯಿಂದ ಶುರು ಮಾಡಿದ್ರು ಕೂಡ ....
ದಾರಿಯಲ್ಲಿ / canteen ನಲ್ಲಿ ಸಿಕ್ಕಾಗ ...ನೀವೇ ಹೇಳಿದಿರಿ ಚನ್ನಾಗಿದೆ ...continue continue ಅಂತ .
ಅಂಥದ್ರಲ್ಲಿ ನೀವು ನನಗೆ ಈ ಥರ ಮೋಸ ಮಾಡಿದ್ರೆ ಹೇಗೆ ?
ಒಂದು ಪತ್ರಿಕೆ ಆಗ್ಲಿ , magazine ಆಗ್ಲಿ ಪ್ರತಿ ಕ್ಷಣ ಯೋಚಿಸೋದು ಒಂದೇ ವಿಷಯ ...
"ನನ್ನ ಓದುಗ ಮಹಾಶಯನನ್ನ ಹೇಗೆ ಸಂತುಷ್ಟಿ ಗೊಳಿಸಲಿ" ಅಂತ ....
ಅಷ್ಟೆಲ್ಲಾ ಶ್ರಮದ ಬದಲಿಗೆ ಅವರು ಬಯಸೋದು ಒಂದು ಎಂಟಾಣೆ ಕಾಗದದ ಪ್ರತ್ಯುತ್ತರ ....
ನಿಮಗಿಲ್ಲಿ ಆ ಎಂಟಾಣೆಯ ಖರ್ಚೂ ಇಲ್ಲ ...
# " ಇವತ್ತು ನೀನು ಹಾಕಿರೋ photo ಚನ್ನಾಗಿದೆ ರೇವಪ್ಪ. "
# " ಆ Member Poll Question, Very Good "
# " Book shelf ನಲ್ಲಿರೋ ಪುಸ್ತಕನ್ನ ನಿನ್ನೆ library ಇಂದ ತಗೊಂಡೆ ...It's Really Nice "
.......Etc......Etc...
ಹೀಗೆ ನಾಲ್ಕು ಪದಗಳ ಒಂದು SMS ಬಂದ್ರೂ ನನಗಾಗೋ ಖುಷಿ ಅಷ್ಟಿಷ್ಟಲ್ಲ ....
ಪಟ್ಟ ಶ್ರಮ ಈ ಪರಿ बेकार ಆದ್ರೆ ಯಾರಿಗಾದ್ರು ದುಃಖ ಆಗುತ್ತೆ ...
ನಿಮಗೆ ಶಾಲೆನಲ್ಲಿ ಆಗಿಲ್ವ ಆ ಥರ ನೀವು ಬಾಯಿಪಾಠ ಮಾಡಿಕೊಂಡು ಹೋಗಿರೋ ಏನೋ ಒಂದನ್ನ
ಇಡಿ ಕ್ಲಾಸಲ್ಲಿ ನೀವು ಒಬ್ಬರೇ ಉತ್ತರ ಹೇಳಿದ್ರು ನಿಮ್ಮ ಮೇಷ್ಟ್ರು ಗುಡ್ ಅನ್ನೋದಿರಲಿ ....
ನಿಮ್ಮನ್ನ ವಾಪಸ್ ಕುಳಿತುಗೋ ಅಂತನೂ ಹೇಳ್ದೆ ಹೋದ್ರೆ ಹೇಗೆ ಇರ್ತ ಇತ್ತು ನೀವೇ ಯೋಚಿಸಿ ನೋಡಿ ಒಂದು ಸಾರಿ....
ನಿಮ್ಮ ಅಭಿವ್ಯಕ್ತಿ ಗೋಸ್ಕರ ಇರೋ ಈ ವೇದಿಕೆ ಈ ಥರ ಪರಿತ್ಯಕ್ತ ಆಗೋದು ನೋಡಿದರೆ ಬೇಜಾರಾಗುತ್ತೆ ...
ಆದ್ರೆ ಇಲ್ಲಿ ನಾನು ಆ ಥರ ಯೋಚಿಸಿ ಅರ್ಧಕ್ಕೇ ಕೈ ಬಿಡೋದಕ್ಕೆ ಬಂದಿಲ್ಲ ....
ನನಗೆ ಒಂದು ಒಳ್ಳೆ ಹವ್ಯಾಸ ಇದೆ ....ಯಾರಾದ್ರು ತಮಗೆ ನೀಡಿರೋ ಕರ್ತವ್ಯ ದಿಂದ ಹಿಂದೆ ಸರಿದರೆ
ನಾನು ಅದನ್ನ ನನ್ನದರ ಜೊತೆಗೆ ನಿರ್ವಹಿಸಲಿಕ್ಕೆ ಸದಾ Ready ....
For Example :
ನೀವೆಲ್ಲ ಗೆಳೆಯರು ಸೇರಿ ಪ್ರವಾಸಕ್ಕೆ ಹೋಗ್ತಿದಿರಿ ...
ಆಗ ಸ್ಥಳಗಳನ್ನ Final ಮಾಡೋ ವಿಚಾರ ಬಂದಾಗ ಅವರೇನಾದ್ರೂ ಹಿಂದೆ ಸರಿದರೆ ನಿಮಗದು ವರದಾನ ಅಲ್ವ ....
ನಿಮಗೆ ಚಂದ ಅನ್ಸೋ ಸ್ಥಳಗಳನ್ನ ಆರಿಸಿ ....Route Map ರೆಡಿ ಮಾಡಿ...ಉಳಿದುಕೊ ಳ್ಳುವ ವ್ಯವಸ್ಥೆ ಬಗ್ಗೆ ವಿಚಾರಿಸಿ ...
ಎಷ್ಟೆಲ್ಲ ಅನುಭವ ಬರುತ್ತೆ ....ಅದು ಬಿಟ್ಟು ನಾನೇಕೆ ಮಾಡ್ಲಿ ಅಂತ ಕೂತಿದ್ರೆ ಏನೂ ಗೊತ್ತಾಗೊಲ್ಲ ...
ಸಿಕ್ಕಿರೋ ಅವಕಾಶ ಬಿಟ್ರೋ ....ಹೋಯ್ತು ಟ್ರೇನು ....
"Opportunity Seldom Comes Twice"
ಇನ್ನೊಂದು ಸಾರಿ ಅದು ಬಂದಾಗ ನಾವು ಇರಬೇಕಲ್ಲ ಈ ಭೂಮಿ ಮೇಲೆ ...
ಎಲ್ರು ಈ ಭೂಮಿಗೆ ಬರಬೇಕಾದ್ರೆ Return Journey Ticket ತಗೊಂಡು ಬಂದಿರೋರೆ....
{ Reservation Counter ಅಲ್ಲಿ ಮಾತ್ರ ಇರೋದು ತಾನೆ ! }
ಆದ್ರೆ Waiting List ಅಲ್ಲಿ ಇರೋ ನಮ್ಮ Ticket, Confirm ಆದ ತಕ್ಷಣ ರೈಟ್ ಹೇಳ್ತಿರೋದೆ ...
ಅದಕ್ಕೆ ನಾನು ಹೇಳೋದು ನಿಮಗೆ ಸಿಗೋ ಒಂದೊಂದು ಅವಕಾಶವೂ ಅಮೂಲ್ಯ ....
ಒಂದು ಪುಟ್ಟ ಧನ್ಯವಾದ ....
ಒಂದು ಚಿಕ್ಕ ಮೆಚ್ಚುಗೆ ...
ಈ ಎಲ್ಲವು ನಿಮ್ಮನ್ನ ಎತ್ತರಕ್ಕೇರಿಸುತ್ತೆ ....
ಈ Life ನಮ್ದು ...End ಯಾವಾಗ ಅಂತ ಗೊತ್ತಿಲ್ಲ ...
ಈ ದಿನ ...ಈ ಕ್ಷಣ ..ಯಾವಾಗ್ ಬೇಕಾದ್ರೂ The End ಆಗ್ಬಹುದು.
ಅದ್ಕೆ ಅದನ್ನ Happy Ending ಇರೋ ಥರ ನೋಡ್ಕೋಬೇಕು.
ಈಗ ಈ ಹಳೆ ರಾಗ ಮತ್ತೆ ಹಾಡೋ ಪ್ರಸಂಗ ಏಕೆ ಬಂತು ಅಂದ್ರೆ ...
ಕಳೆದ ಸೋಮವಾರ ಒಂದು ವಿಷಯ ಪ್ರಸ್ತಾಪಿಸಿದ್ದೆ .....
( contest / ಸ್ಪರ್ಧೆ ಅಂತನು ನೀವು ತಿಳ್ಕೋಬಹುದು ...)
ಹಾಗೇನಾದ್ರೂ ನೀವು ತಿಳ್ಕೊಂಡಿದ್ರೆ .....ಭಾಗವಹಿಸ್ದೆ ಸೋಲೋದು ಎಂಥ ಲಕ್ಷಣ ....

ಅಂಥ ಹೇಳ್ಬಾರ್ದ0ಥದ್ದೇನು ನಾನು ಹೇಳಿರಲಿಲ್ಲ ...ಅಲ್ವಾ?
ಯಾವ objectionable / obscene content ಅನ್ನೋವಂಥದ್ದು ಆ contest ಲ್ಲಿ ಇರ್ಲಿಲ್ಲ ..
ಆದ್ರೂ ನಿಮ್ಮಿಂದ ಬಂದ response ಮತ್ತೆ ನಾನೇ ಬರೀಲಿಕ್ಕೆ ತುಂಬಾ ಉತ್ತೇಜನಕಾರಿಯಾಗಿದೆ...
......To Be Continued
1 comment:
ಹುಡುಗಿಯರನ್ನ Theatre ಗೆ, ಸಿನೆಮಾ ತೋರಿಸಲಿಕ್ಕೆ ಕರ್ಕೊಂಡು ಹೋಗ್ತಾರೆ ಅಂತ ತಿಳ್ಕೊಂಡಿರೋ ಮುಗ್ಧ ನಾನು ...!!
ಸಿಟಿಗೆ ಬಂದೋಳೋ ಸಿನಿಮಾಗೆ ಬರಲ್ವಾ...
ನೋಡಿ ಕಲಿ ಮಾಡಿ ಮಾಡಿ ನಲಿ ಬೇರೆ ಕಂಟೆಕ್ಟ್ಸ್ ನಲ್ಲಿ...ಬಳಸ್ತಾರೆ...
ಇಷ್ಟೆಲ್ಲಾ ಗೊತ್ತಿರುವ ಸ್ವ ಘೋಷಿತ ಮುಗ್ಧ ರೇವ್ ಗೆ.....
ದಯಮಾಡಿ ಈ ತರದ ಫಿಲಾಸಫಿ ಡೈಲಾಗ್ಸ್ ನ ಬಳಸ ಬೇಡಪ್ಪಾ.....
ನೀನೆ ಯೋಚ್ನೆ ಮಾಡು ನಿನಗೇ ಇದು over ಆಯ್ತು ಅನ್ನಿಸ್ಲಿಲ್ವಾ.....
ನಿನ್ನ ಬರಹಕ್ಕೆ ಕಾಯ್ತಾಯಿದ್ದೀನಿ.. ಯಾವಾಗ್ ಹಾಕ್ತೀಯ.....
Post a Comment