
ಮೊನ್ನೆ ಕಂಠೀರವ ಸ್ಟೇಡಿಯಂ ನಲ್ಲಿ ನಮ್ ಹುಡ್ಗರದ್ದೇ ಸದ್ದಂತೆ......
ಮೊದ್ಲಿಗೆ ಆಟಕ್ಕೆ ಸೇರೋಕೆ ಹೋದ ನಮ್ ಫಿರೋಜ್
ಗೆ ' ಏ ಮರಿ... ನೀ under age ನವ ಬಾ ಇಲ್ಲಿ
ನೀರು , ಗ್ಲುಕೋಸ್ ಕೊಡುವಿಯಂತೆ ಅಂದ್ರಂತೆ....' ಕೊನೆಗೆ ಐ.ಡಿ ಕಾರ್ಡ್
ತೋರ್ಸಿ ನಮ್ ಹುಡುಗರೆಲ್ಲಾ ಸಾಕ್ಷಿ ಹೇಳೀದ್ ಮೇಲೆ ಆಟಕ್ಕೆ
ಸೇರಿಸ್ಕೋಂಡ್ರಂತೆ,,,,
ನಮ್ ಫಿರೋಜ್ ಹೈಜಂಪ್ ಫಸ್ಟು, ರಿಲೇ ಫಸ್ಟು, ವಾಲಿಬಾಲ್ ಫಸ್ಟು, 100
ಮೀ & 200 ಮೀ ರನ್ನಿಂಗ್ ನಲ್ಲಿ ಸೆಕೆಂಡ್ prize ತಗೊಂಡು 'ನೀರು ಕೊಡು'
ಅಂದವರಿಗೆ ನೀರು ಕುಡಿಸಿ ಬಂದಿದ್ದಾನೆ..... ಶಬ್ಬಾಷ್...
ಇನ್ನು ನಮ್ ರಘು ... ರಿಲೇ ಫಸ್ಟು.. ಲಾಂಗ್ ಜಂಪ್ 3rd,,, 100 ಮೀ &
200 ಮೀ ರನ್ನಿಂಗ್ ಎರಡರಲ್ಲೂ ಫಸ್ಟೋ ಫಸ್ಟು... ಒಟ್ನಲ್ಲಿ ನಮ್ ರಘು
ಸೆಕ್ರೇಟರಿಯೇಟ್ ಉಸೇನ್ ಬೋಲ್ಟು....
ಭಲಾ,,, ಭಲಾ,,,,,,
ವರದಣ್ಣ , ಗುರುರಾಜ್ ಇಬ್ಬರೂ ವಾಲಿಬಾಲ್ ಫಸ್ಟ್ ಬರೋಕೆ ಸಿಕ್ಕಾಪಟ್ಟೆ
ಬೆವರು ಹರಿಸಿದ್ದಾರಂತೆ,,,, ವ್ಹಾಹ್ ವ್ಹಾಹ್....
ಬಾಲ್ ಬ್ಯಾಡ್ಮಿಂಟನ್ ನಲ್ಲಿ ಮನೋಹರ್,ಇಂದ್ರಣ್ಣ,ವರದಣ್ಣ,ಗುರು,& ಪೀಟರ್
ಡಯಾಸ್ ಟೀಮ್ ಗೆ ಫಸ್ಟ್ ಅಂತೆ... ಆದರೆ ಎದುರಾಳಿ ಟೀಮ್ ಇಲ್ಲದೇ
prize announce ಆಗಿದ್ದು ಆಫ್ ದಿ ರೆಕಾರ್ಡ್ ನ್ಯೂಸ್.....
ನಮ್ ಜ್ಯೋತಿ ಬಾಯಿ ಹಾನಗಲ್ ರವರು ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ,
ಲಘು ಸಂಗೀತ & ಜಾನಪದ ಗೀತೆಗಳ ಹಾಡುಗಾರಿಕೆಯಲ್ಲಿ ಮೊದಲ
ಬಹುಮಾನ ತಗೊಂಡ್ರಂತೆ....
ಗೆದ್ದವರೆಲ್ಲಾರಿಗೂ ಚಪ್ಪಾಳೆ ತಟ್ಟಿ ಪ್ರೋತ್ಸಹ ನೀಡೋಕಂತು ಆಗ್ಲಿಲ್ಲ...
Banquet hall ನಲ್ಲಿ ಬಹುಮಾನ ಕೊಡ್ತಾರಂತೆ... ಎಲ್ಲರೂ ಸೇರಿ.... ಶಿಳ್ಳೇ
ಹಾಕೋಣಾ......
(ವಿ.ಸೂ- ಫಿರೋಜ್ ಷಾ ರಾಜ್ಯ ಮಟ್ಟದಲ್ಲಿ prize ತಗೊಂಡ್ರೆ 1 KG
ಸಿರೆಲಾಕ್ ಬಹುಮಾನ ನೀಡುವುದಾಗಿ ಮಧುಚಂದ್ರರವರು ಘೋಷಣೆ
ಮಾಡಿದ್ದಾರೆ)
ನಲುಮೆಯಿಂದ
ಯಶವಂತ್
No comments:
Post a Comment