
ಇದುನಮಗೆ ಚಿಕ್ಕಂದಿನಿಂದ ತಿಳಿದಿರೋ ಅತಿ ಸರಳ ಲೆಕ್ಕ ....
ಆದರೆ ಇದು ನಾವು ಹುಟ್ಟಿದ ಕ್ಷಣವೇ ನಮಗೆ ಹೊಳೆದ ಉತ್ತರವೇನಲ್ಲ ....
ಆಗ 2 ಅಂಕಿಯೂ ಹೊಸದು...ಕೂಡಿಸುವ ಚಿಹ್ನೆಯೂ ಹೊಸದು...ಹೊಸದೇನು ಬಂತು, ನಮಗದು ಏನೆಂದೇ ತಿಳಿದಿರಲಿಲ್ಲ..
ಶಾಲೆಯಲ್ಲಿ ಇದು ಕಲಿಯೋಕ್ಕೆ ಮುಂಚೇನೇ ಒಂದು ವೇಳೆ ನಾವು ನಮ್ಮ ಸ್ವಂತ ಅನುಭವದಿಂದ ಅಥವಾ
ನಿಸರ್ಗದ ಜೊತೆ ವ್ಯವಹರಿಸಬೇಕಾದರೆ ಕಲಿತಿದ್ರೆ ಆಗೋ ಖುಷಿ ಅಷ್ಟಿಷ್ಟಲ್ಲ . ಅಲ್ವಾ ?!!
ಈಗ ನಾನು ಇದನ್ನೇನಕ್ಕೆ ಹೇಳಕ್ಕೆ ಹೊರಟೆ ಅಂದ್ರೆ .....
ನಾವು ಎಷ್ಟೇ ಪುಸ್ತಕಗಳನ್ನು ಅಭ್ಯಾಸ ಮಾಡಿದ್ರೂ ....ನಮ್ಮ ಸ್ವಂತ ಅನುಭವದಿಂದ ನಮ್ಮಲ್ಲಿ ಹುಟ್ಟೋ ಜೀವನ ದೃಷ್ಟಿಗೆ ನಮಗೆ ಸ್ವತ: ಹೆಮ್ಮೆ ಇರುತ್ತೆ .....ಏನಂತೀರ ??


ಹಾಗೆಯೇ ನಾವೂ ಕೂಡ ನಮ್ಮ ಸುತ್ತಲೂ ದಿನನಿತ್ಯ ನಡೆಯುವ ಪ್ರಕೃತಿ ವ್ಯಾಪಾರಗಳನ್ನ ನಾವೇ ಸ್ವತ: ವಿಮರ್ಶಿಸುವ ಗೋಜಿಗೆ ಹೋದರೆ
ನಮ್ಮೊಳಗಿನ ತತ್ವಜ್ಞಾನಿ , ಕವಿ , ಲೇಖಕ , ಸಂಶೋಧಕ ತಾನೇ ತಾನಾಗಿ
ಜಾಗ್ರುತನಗೋದರಲ್ಲಿ ಎಳ್ಳಷ್ಟೂ ಸಂಶಯ ಬೇಡ.
ಇಲ್ಲಿನ ಪರಿಸರದೊಂದಿಗೆ ವ್ಯವಹರಿಸಿ, ಅದನ್ನ ಅರಿತು, ಅಭ್ಯಸಿಸಿ ನಮ್ಮದೇ ಆದ ನಿರ್ಣಯಕ್ಕೆ ಬರಬೇಕು ....
ನಮ್ಮ ಭರತ ಖಂಡನೇ ತಗೊಳ್ಳಿ ....ನಮ್ಮ ವೇದಗಳಲ್ಲಿ , ಪುರಾಣಗಳಲ್ಲಿ ಹೇಳಿಕೊಡದೇ ಇರೋ ವಿಷಯನೇ ಇಲ್ಲ ....ಅಂದ ಮಾತ್ರಕ್ಕೆ
ನಮ್ಮಲ್ಲಿ ಯಾರೊಬ್ಬರು ಅಲ್ಲಿ ವಿವರಿಸಿರೋ ವಿಚಾರಗಳನ್ನ ವಿಮರ್ಶಿಸದೇ ಇರಲಿಲ್ಲ - ಅನ್ನೋದು ತಪ್ಪು ಮಾಹಿತಿ ಅಂತ ನಮಗೆ ಗೊತ್ತು.
ಹೀಗಾಗಿ ಜೀವನದ ಪ್ರತಿ ಪಾಠವನ್ನ ಯಾರೋ ಹೇಳಿಕೊಟ್ಟ ಹಾಗೆ , ಬರೆದಿಟ್ಟ ಹಾಗೆ ನಡೆಸಿಕೊಂಡು ಹೋಗೋದು ನಮ್ಮ ಅಂತರಾತ್ಮಕ್ಕೆ
ಬಗೆಯುವ ದ್ರೋಹವಾಗುತ್ತೆ.
ನಮ್ಮ ಪ್ರಾಥಮಿಕ ಶಾಲೆ ಪುಸ್ತಕಗಳೇ ಹೇಳುತ್ವೇ ನೋಡಿ ಕಲಿ ಮಾಡಿ ನಲಿ ಅಂತ....{ಈ ನುಡಿಗಟ್ಟನ್ನ ಬೇರೆ context ಅಲ್ಲಿ ಬಳಸಿ
ಕುಚೋದ್ಯದ ಖುಷಿ ತಗೋಳ್ಳೋರೂ ಇದಾರೆ...ಅದು ಬೇರೆ ಮಾತು}
ಈ ಕೊರೆತದ ಒಟ್ಟಾರೆ ಸಾರಾಂಶ ಇಷ್ಟು :
ನೀವೂ ಕೂಡ ನಿಮಗೆ ತಿಳಿದ [ಓದಿ - ಕೇಳಿ - ಅರಿತು - ಅನುಭವಿಸಿದ...] ವಿಷಯಗಳನ್ನ ಇಲ್ಲಿ ಹಂಚಿಕೊಳ್ಳಿ .....
ಅದರಿಂದ ಇತರರು ತಾವೇ ತಾವಾಗಿ ವಿಮರ್ಶಿಸಿಕೊಳ್ಳಲು ಸ್ಪೂರ್ತಿ ಸಿಗಲಿ ಅಂತಾ..
ನನ್ನ ಥರ ನಿಮಗೆ ತಿಳಿದಿರೋದನ್ನ ಗೀಚಿ ಸಂಕೋಚ ಬೇಡ...

ನಿಮ್ಮವ , ರೇವಪ್ಪ
No comments:
Post a Comment