31 January 2013

ಕರ್ನಾಟಕ ಸರ್ಕಾರ ಸಚಿವಾಲಯ 2007ನೇ ಸಾಲಿನ "ಕಿರಿಯ ಸಹಾಯಕ ಮಿತ್ರರ ಅಧ್ಯಯನ ತಂಡ"ಕರ್ನಾಟಕ ಸರ್ಕಾರ ಸಚಿವಾಲಯ2007ನೇ ಸಾಲಿನ"ಕಿರಿಯ ಸಹಾಯಕ ಮಿತ್ರರ ಅಧ್ಯಯನ ತಂಡ"

-- ಪ್ರಥಮ ಸಭೆಯ ನಡವಳಿಗಳು --
            


 •  ದಿನಾಂಕ 10.01.2013 ರಂದು ಅಂದುಕೊಂಡಂತೆ ಈ ದಿನಾಂಕ:30.01.2013 ರಂದು ಮಧ್ಯಾಹ್ನ ಆಸಕ್ತ 2007ರ ಕಿರಿಯ ಸಹಾಯಕ/ಸಹಾಯಕ ಮಿತ್ರರು ವಿಧಾನ ಸೌಧ ಹಿಂಬದಿಯ ಪಾರ್ಕಿನಲ್ಲಿ ಸಭೆ ಸೇರಲು ರೇವಪ್ಪ ಎಲ್ಲರಿಗೂ ಮೊದಲೇ ತಿಳಿಸಿದ ಸಮಯಕ್ಕೆ  ಸರಿಯಾಗಿ, ಕೆಲವರು ತಡವಾಗಿ ಬಂದು ಸೇರಿದೆವು. ಭಾರತಮಾತೆಯ ಕ್ರಾಂತಿಕಾರಿ ಪುತ್ರ ಸುಭಾಷಚಂದ್ರ ಬೋಸ್ ರ ಪ್ರತಿಮೆಯ ಪದತಲದಲ್ಲಿ ನಮ್ಮ ಮೊದಲ ಸಭೆ ಆರಂಭವಾದದ್ದು ಕಾಕತಾಳೀಯ. ಜೊತೆಗೆ ಈ ದಿನ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಪುಣ್ಯತಿಥಿ ಕೂಡ.

 • ಎಂದಿನಂತೆ ರೇವಪ್ಪ ಸ್ನೇಹಿತರನ್ನು ಆಹ್ವಾನಿಸುವುದರ ಜೊತೆಗೆ  ಸಭೆಯ ಉದ್ದೇಶವನ್ನು ಸಂಕ್ಷಿಪ್ತವಾಗಿ ವಿವರಿಸಿದರು ಮತ್ತು ತಾವು ಮೊದಲು ಭಾಗವಹಿಸುತಿದ್ದ 'ಮನನ' ತಂಡದಲ್ಲಿ ಚರ್ಚಿಸುತಿದ್ದ  ವಿಷಯಗಳ ಬಗ್ಗೆ ತಿಳಿಸಿ ಕಾರ್ಯಚಟುವಟಿಕೆಗಳ ರೂಪುರೇಷೆಗಳ ಚೌಕಟ್ಟು ಹೇಗಿರಬೇಕೆಂಬುವುದನ್ನು ಪರಶುರಾಮರವರ ಸಹಕಾರದೊಂದಿಗೆ ಜೊತೆಯಾಗಿ ತಿಳಿಸಿದರು.

 • ನಂತರ ಮಧುಚಂದ್ರ ರವರು ತಮ್ಮ ಅಭಿಪ್ರಾಯಗಳನ್ನು  ತಿಳಿಸುತ್ತಾ ಸದಸ್ಯರ ವೈಯಕ್ತಿಕ ಅಭಿಪ್ರಾಯಗಳನ್ನು ಗೌರವಿಸಬೇಕೆಂದು ಮತ್ತು ಸಾಹಿತ್ಯ ವಿಚಾರಗಳನ್ನು ಸಭೆಯಲ್ಲಿ ಚರ್ಚೆಗೆ ತೆಗೆದುಕೊಳ್ಳಬೇಕೆಂದು ತಿಳಿಸಿದರು.

 • ನಂತರ  NPS ವಿಚಾರವಾಗಿ ಹರೀಶ್ ಮತ್ತು ಹೇಮಂತ್ ಹೋರಾಟಕ್ಕೆ ಬೆಂಬಲಿಸಲು ಕಿರಿಯ ಸಹಾಯಕ ಮಿತ್ರರಲ್ಲಿ ಕೋರಿದರು ಮತ್ತು ವಿಜಯ ಕುಮಾರ್ ರವರು ಕೇರಳ ರಾಜ್ಯ ಸರಕಾರ  NPS schemeನ್ನು ಹಿಂಪಡೆದ ವಿಷಯವನ್ನು ತಿಳಿಸಿ ನಮ್ಮಲ್ಲೂ ಹೋರಾಟ ಮಾಡಿದಲ್ಲಿ ನಾವು ಸಹ ಯಶಸ್ಸು ಪಡೆಯಬಹುದೆಂದು ತಿಳಿಸಿದರು,ಉಳಿದವರು  ಇದನ್ನು  ಪ್ರೋತ್ಸಾಹಿಸುವ ಮೂಲಕ ಮತ್ತು ಭಾಗವಹಿಸುವುದಾಗಿ  ಹುರುಪಿನಿಂದ ಅನುಮೋದಿಸಿದರು.

 • ಶೀತಲ್ ರವರು ಎಲ್ಲರೂ ನ್ನತ ಹುದ್ದೆಗೇರಲು  ಪರೀಕ್ಷೆಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿದರು. ಮತ್ತು ಸಚ್ಚಿದಾನಂದಮೂರ್ತಿಯವರು ಸಭೆಗೆ ಎಲ್ಲರ ಹಾಜರಿ ಕಡ್ಡಾಯವಾಗಿರಬೇಕೆಂದು ತಿಳಿಸಿದರು. ಆದರೆ ಆಸಕ್ತರು ಮಾತ್ರ ಸಭೆಗೆ ಹಾಜರಾಗಲಿ ಎಂದು ನಿರ್ಣಯಿಸಲಾಯಿತು.

 • ನಂತರ ಕಿರಿಯ ಸಹಾಯಕ/ಸಹಾಯಕ ಸಂಗಾತಿಗಳೆಲ್ಲರನ್ನೂ ಮುಂದಿನ ಸಭೆಗೆ ಆಹ್ವಾನಿಸುವುದಾಗಿ ಮತ್ತು ಪ್ರತಿ ವಾರ ಸಭೆ ಸೇರುವುದಾಗಿ  ನಿರ್ಣಯಿಸಲಾಯಿತು.
 • ಒಟ್ಟಿನಲ್ಲಿ 15 ಜನ ಅತ್ಯುತ್ಸಾಹದಿಂದ ಭಾಗವಹಿಸಿದ್ದ ಕಿರಿಯ ಸಹಾಯಕ ಮಿತ್ರರ ಅಧ್ಯಯನ ತಂಡದ ಪ್ರಥಮ ಬೈಠಕ್(!!) ಈ ಕೆಳಕಂಡ ಸದಾಶಯಗಳೊಂದಿಗೆ ಮುಕ್ತಾಯಗೊಂಡಿತು.


 • ಸದಸ್ಯರಲ್ಲಿ ಅಧ್ಯಯನಶೀಲತೆಯನ್ನು ಪುನಃಸ್ಥಾಪಿಸುವುದು
 • ಪ್ರತಿ ವಾರದ ಪ್ರಪಂಚದ ಆಗುಹೋಗುಗಳನ್ನು ಸದಸ್ಯರ ಗಮನಕ್ಕೆ ತರುವುದು ಮತ್ತು ಆ ಘಟನೆಗಳ ಬಗ್ಗೆ ಸದಸ್ಯರ ಅಭಿಪ್ರಾಯ ಮಂಡನೆಗೆ ಅವಕಾಶ ಕಲ್ಪಿಸುವುದು.
 • ಸದಸ್ಯರಲ್ಲಿ ಸುಪ್ತವಾಗಿರುವ ಕ್ರಿಯಾಶೀಲ ವ್ಯಕ್ತಿತ್ವವನ್ನು ಗುರುತಿಸಿ ಪ್ರೋತ್ಸಾಹಿಸುವುದು.
 • ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ಸದಸ್ಯರ ಸಲಹೆ - ಸಮಸ್ಯೆಗಳನ್ನು ಸ್ವೀಕರಿಸುವುದು - ಬಗೆಹರಿಸುವುದು.
 • ಪರಸ್ಪರರಲ್ಲಿ ಸೌಹಾರ್ದತಾ ಮನೋಭಾವನೆಯನ್ನು ಬೆಳೆಸುವುದು.
 • ಅಂತರ್ಗತವಾಗಿರುವ ಪ್ರತಿಭೆಯ ಅನಾವರಣಕ್ಕೆ ಅವಕಾಶ ನೀಡುವುದು.
 • ಮುಕ್ತ ಸಂವಾದಕ್ಕೆ ಅವಕಾಶ ಕಲ್ಪಿಸುವುದು.

-feroz

No comments:

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

 • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
  4 years ago
 • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದು...
  4 years ago
 • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
  5 years ago
 • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
  7 years ago
 • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
  8 years ago
 • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
  8 years ago
 • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
  8 years ago
 • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
  8 years ago