05 July 2011

ಮನನ ಅಧ್ಯಯನ ಸಭೆ- 2.7.2011ರ ನಡವಳಿ


ಸಭೆ ಪ್ರಾರಂಭವಾಗುತ್ತಿದ್ದಂತೆ ಈ ಹಿಂದೆ ತಿಳಿಸಿದಂತೆ 'ಅನೌಪಚಾರಿಕ ಶಿಕ್ಷಣ ಹಾಗೂ ಅಕಾಡೆಮಿಕ್ ಶಿಕ್ಷಣ' ದ ವಿಷಯವನ್ನು ಮಂಡಿಸಲಾಯಿತು.
ವಿಷಯದ ಬಗ್ಗೆ ಮಂಜುರವರು ಸಂಕ್ಷಿಪ್ತವಾಗಿ ನಿರೂಪಿಸಿದರು.
ಮಂಜು ಮಾತನಾಡುತ್ತಾ ನಾವು ಇಂದು ಸ್ಪರ್ಧಾತ್ಮಕ ಯುಗದಲ್ಲಿ ಕಲಿಯುತ್ತಿರುವ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣದ ಪಠ್ಯಕ್ರಮ ಮತ್ತು ಪಡೆಯುತ್ತಿರುವ ಶಿಕ್ಷಣ ಇವುಗಳು ಎಷ್ಟರ ಮಟ್ಟಿಗೆ ಜೀವಪರವಾಗಿವೆ ಮತ್ತು ನೈಸರ್ಗಿಕವಾಗಿದೆ ಎಂಬುದನ್ನು ತಿಳಿಯುವ ಅಗತ್ಯತೆಯ ಬಗ್ಗೆ ಹೇಳಿದರು.
ಇಂದು ನಾವು ಯಾವ ವಿದ್ಯೆಯನ್ನು ಆದ್ಯತೆಯ ಮೇರೆಗೆ ಮತ್ತು ಮುಂದಿನ ಜೀವನದ 'ಕಂಫರ್ಟ್' (ಆರಾಮಾಗಿರಬಹುದು) ಎಂದು ಕಲಿಯುತ್ತಿದ್ದೇವೆ ವಾಸ್ತವದಲ್ಲಿ ಅಂತಹ ವಿದ್ಯೆಗಳ ನಿಜಕ್ಕೂ ಅನಿವಾರ್ಯವೆ ಎಂಬುದು ಮುಖ್ಯ ಪ್ರಶ್ನೆ. ಪ್ರಾಕೃತಿಕವಾಗಿ ಬದುಕುವುದಕ್ಕೆ ಅಗತ್ಯವೇ ಇಲ್ಲದ ಇಂದಿನ ಶಿಕ್ಷಣ ಅಂದರೆ ಯಾವ ಕಲಿಕೆ ಸೇವೆ ಗುಣಗಳನ್ನು ಹೊಂದಬೇಕಾಗಿತ್ತೋ ಅದೇ ವೈದ್ಯ ಶಿಕ್ಷಣ ಇಂದು ಸ್ಪರ್ಧಾಯುಗದ ಮುಂಚೂಣಿಗೆ ಬಂದು ವ್ಯಾಪಾರಿಕರಣವಾಗುತ್ತಿರುವುದು ಗಂಭೀರವಾದ ಸಮಸ್ಯೆ. ಹಾಗೆಯೇ ಅದೇ ರೇಸ್ ನಲ್ಲಿರುವ 'ಇಂಜಿನಿಯರಿಂಗ್' ವಿದ್ಯೆ ಕೂಡ ಮಾನವ ಕೌಶಲ್ಯವನ್ನು ಹೆಚ್ಚಿಸಿಕೊಂಡು ತಾರತಮ್ಯವನ್ನು ಸೃಷ್ಟಿಸುತ್ತಾ, ಆಧುನೀಕರಣ ಎಂಬ ಸೋಗಿನಲ್ಲಿ 'ಕೈಗಾರಿಕೆ'ಗಳನ್ನು ನಿರ್ಮಿಸಿಕೊಂಡು ಯಂತ್ರವಾಗುತ್ತಿದ್ದಾನೆ ಮತ್ತು ಜೀವ ಸಂಕುಲಗಳಿಂದ ಬೇರೆಯಾಗುತ್ತಿದ್ದಾನೆ.
ಮನುಷ್ಯನು ಹೀಗೆ ಯಾಂತ್ರಿಕವಾಗಿ ಸಾಗುತ್ತಿರುವಾಗ ನಿಜಕ್ಕೂ ನೈಸರ್ಗಿಕವಾಗಿ ಬದುಕಲು ಅಗತ್ಯವಾಗಿರುವ ಔಪಚಾರಿಕ ಶಿಕ್ಷಣ ಅಂದರೆ ವ್ಯವಸಾಯ, ಹೈನುಗಾರಿಕೆ.. ಹೀಗೆ ಜೀವಾವಶ್ಯಕವಾಗಿರುವದನ್ನು ವಿದ್ಯೆಯನ್ನಾಗಿ ಕಲಿಯದೇ ಅದರ ಉಪ ಉತ್ಪನ್ನಗಳಿಂದ ಅಥವಾ ಕೃತಕವಾದವುಗಳನ್ನು ನಮ್ಮ ಜೀವನಕ್ಕೆ ತೀರಾ ಅನಿವಾರ್ಯ ಮಾಡಿಕೊಂಡಿರುವುದು ನಿಜಕ್ಕೂ ನಾಚಿಕೆಯ ವಿಷಯವಾಗಿದೆ. ಮನೆಯಲ್ಲಿ ಅಮ್ಮ ನಿರ್ವಹಿಸುವ ಪಾತ್ರವಾಗಲಿ, ಅವಳು ಮಾಡುವ ಅಡುಗೆಯಾಗಲಿ ಅಥವಾ ಅವಳು ಬಿಡಿಸುವ ರಂಗೋಲೆಯಾಗಲಿ ನಮಗೆ ಗುಣಾತ್ಮಕ ಶಿಕ್ಷಣ ಎಂದು ಅನಿಸುವುದೇ ಇಲ್ಲ ಮತ್ತು ವ್ಯವಸಾಯ, ಹೈನುಗಾರಿಕೆ ಇವ್ಯಾವುದೂ ನಮಗೆ ಪ್ರಾಥಮಿಕ ಶಿಕ್ಷಣದಲ್ಲಿ ಸಿಗುವುದೇ ಇಲ್ಲ.

ಜೀವಿಯ ಹುಟ್ಟಿನ ಕಾರಣ (ಸಂತಾನೋತ್ಪತ್ತಿ) ಮತ್ತು ಬದುಕುವ ಕಾರಣ (ಹಸಿವು ನೀಗಿಸಲು ಆಹಾರ ಹುಡುಕುವುದು) ಇದನ್ನು ಬಿಟ್ಟರೆ ತನಗೆ ಕೇವಲ ಬುದ್ಧಿಯೊಂದಿದೆ ಅನ್ನುವ ಮಾತ್ರಕ್ಕೆ ಜಗತ್ತಿನ ಎಲ್ಲಾ ತಾರತಮ್ಯಕ್ಕೂ ತಾನೇ ಕಾರಣನಾಗುತ್ತಾ 'ಕಂಫರ್ಟ್'ನ ಹೆಸರಿನಲ್ಲಿ ಅಪ್ರಾಕೃತಿಕವಾಗಿ ಸಾಯುತ್ತಿರುವುದು ಅತ್ಯಂತ ವಿಷಾದ. ಹಾಗೆಯೇ ಮೂಲ ವ್ಯವಸಾಯವನ್ನು ಕಡೆಗಣಿಸಿರುವುದು ಆಯವ್ಯಯದಲ್ಲಿ ನಿಗಧಿಪಡಿಸುವ ಮೊತ್ತ ರೈತರಿಗೆ ಸಿಗದೇ ಇರುವುದು, ಅವರು ಬೆಳೆಯುವ ಬೆಳೆಗೆ ಬೆಲೆಯನ್ನೂ ನಿಗಧಿಪಡಿಸಲಾಗದೇ ಇರುವ ಸ್ಥಿತಿಗೆ ತಲುಪಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುತ್ತಿರುವ 'ವ್ಯಾಪಾರ, ರಾಜಕೀಯ ಹುನ್ನಾರ'ಗಳು ಜೀವ ಸಂಕುಲದಿಂದ ಮನುಷ್ಯ ಬಹಿಷ್ಕಾರಗೊಳ್ಳುವಂತಾಗಿದೆ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದರು.
ಇದಕ್ಕೆ ಸ್ಪಂದಿಸಿದ ಮಹೇಂದ್ರ ರವರು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಒಂದು ಹೆಜ್ಜೆ ಮುಂದಿಡಬೇಕೆಂಬ ಹಪಾಹಪಿಸಿಕೆಯಲ್ಲಿ ಮನೆಯಲ್ಲಿಯೇ ಮಕ್ಕಳನ್ನು ಸ್ಪರ್ಧೆಗೆ ದೂಡುವ ವ್ಯವಸ್ಥೆ ನಿರ್ಮಾಣವಾಗಿರುವುದಾಗಿ ತಿಳಿಸಿದರು.
ಮಂಜುಳರವರು ತಮಗಾದ ಅನುಭವವನ್ನು ತಿಳಿಸುತ್ತಾ ತಮ್ಮ ಮಗಳಿಗೆ 'ಮಣ್ಣಿನಲ್ಲಿ ಬಳೆ ಚೂರನ್ನು ಹುಡುಕುವ' ಆಟವನ್ನು ಕಲಿಸಲು ಪ್ರಯತ್ನಿಸಿ ವಿಫಲರಾದದ್ದು ಮತ್ತು ಇಂದಿನ ಮಕ್ಕಳು ಕಂಪ್ಯೂಟರ್ / ಎಲೆಕ್ಟ್ರಾನಿಕ್ ಆಟಗಳನ್ನು ಬಹಳ ಬೇಗ ಕಲಿಯುವ / ಆಸಕ್ತಿ ಹೊಂದಿರುವ ಬಗ್ಗೆ ತಿಳಿಸುತ್ತಾ, ನಾವು ಅವರುಗಳು ಆಸಕ್ತಿಯಿಂದ ಜಾನಪದ ಆಟಗಳನ್ನು ಕಲಿಯುವ ಮಾರ್ಗೋಪಾಯಗಳನ್ನು ಹುಡುಕಿಕೊಳ್ಳುವುದು ಅಗತ್ಯವಿದೆ ಎಂದು ತಿಳಿಸಿದರು.
ಇದಕ್ಕೆ ಶ್ರೀಲಕ್ಷ್ಮಿರವರು ಪ್ರಾಥಮಿಕ ಹಂತದಲ್ಲಿ ಯಾವ ತಂದೆ ತಾಯಿಯೂ ತಮ್ಮ ಮಕ್ಕಳು ಹೀಗೇ ಆಗಬೇಕೆಂದು ಒತ್ತಡ ಹೇರುವುದಿಲ್ಲ ಬದಲಾಗಿ ಅವರು ಚೆನ್ನಾಗಿ ಬೆಳೆಯಲಿ ಎಂಬ ಬಗ್ಗೆಯೇ ಗಮನವಹಿಸುತ್ತಾರೆ. ಆದರೆ ಅವರು ಪ್ರೌಢ ಶಿಕ್ಷಣಕ್ಕೆ ಬರುವ ವೇಳೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಒಡ್ಡಿ ಅವರಲ್ಲಿ ಕೀಳರಿಮೆ ಉಂಟು ಮಾಡುವ ಪರಿಸರ ನಿರ್ಮಾಣವಾಗಿಬಿಟ್ಟಿರುತ್ತದೆ. ಹೀಗಿರುವಾಗಿ ನಾವು ಅವರನ್ನು ಜೀವಮೂಲಕ್ಕೆ ಕರೆದೊಯ್ಯುವುದು ತುಸು ಕಷ್ಟಕರವೆಂದು ಹೇಳಿದರು.
ಇದಕ್ಕೆ ಉತ್ತರಿಸಿದ ಗುರುಪ್ರಕಾಶ್ ರವರು "ಮಣ್ಣನ್ನು ಹದ ಮಾಡಿ ನಮಗೆ ಬೇಕಾದ ಆಕಾರದ ಮಡಿಕೆಯನ್ನು ಪಡೆದುಕೊಳ್ಳುವ" ಹಾಗೆ ನಾವುಗಳು ನಮ್ಮ ಮಕ್ಕಳು ಸ್ಪರ್ಧೆಯಿಂದ ಹಿಂದುಳಿಯದಂತೆಯೂ ಮತ್ತು ಅವರು ಜೀವ ಮೂಲ ಬದುಕಿನ ಅಂತಃಸತ್ವವನ್ನು ಮನಗಾಣುವ ಹಾಗೆ ನಾವು ಮಾಡಬೇಕಾದ ಅತ್ಯಂತ ಪ್ರಜ್ಞಾತ್ಮಕ ಜವಾಬ್ದಾರಿ ನಮ್ಮ ಮೇಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ತದನಂತರ ಮಾತನಾಡಿದ ಆಂಜಿರವರು ಇಂದು ನಾವು ಆಧುನಿಕ ಕಾಲಘಟ್ಟದಲ್ಲಿ ನಿಂತಿದ್ದು ಈ ನಿಟ್ಟಿನಲ್ಲಿ ನಮ್ಮ ಮುಂದಿನ ಜನಾಂಗಕ್ಕೆ ಜೀವಪರವಾಗಿ ಬದುಕುವ ರೀತಿಯನ್ನು 'ಮೊರಾಲಿಟಿ'ಯ ನೆಲೆಗಟ್ಟಿನಲ್ಲಿ ತಿಳಿಸುವುದು ಕಷ್ಟವಾಗಿದ್ದು, ಅವರನ್ನು ಒಂದು ಹೆಜ್ಜೆ ಹಿಂದಕ್ಕೆ ಇಡಿ ಎಂದು ತಿಳಿಸುದರಲ್ಲಿರುವ ಅಪಾಯದ ಬಗ್ಗೆಯು ಆತಂಕ ವ್ಯಕ್ತಪಡಿಸುತ್ತಾ ಸಮಾನವಾಗಿ ಬದುಕುವುದಕ್ಕೂ ಸಹ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ಅಗತ್ಯವಾಗಿರುವ ವ್ಯವಸ್ಥೆಯ ಬಗ್ಗೆ ತಿಳಿಸಿದರು.
ಈ ಎಲ್ಲಾ ಅಂಶಗಳ ಚರ್ಚೆಯಲ್ಲಿ ಎಲ್ಲರೂ ಗುಣಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ಮುಂದಿನ ಜನಾಂಗದವರಿಗೆ ಜಾನಪದ ಮೂಲದ ಜೀವಪರ ನೀತಿಯನ್ನು ತಿಳಿಸುವ ಬಗೆಗಳ ಬಗ್ಗೆ ಹೆಚ್ಚು ತಿಳಿಯುವ ಅವಶ್ಯಕತೆಯಿದೆ ಎಂದು ಎಲ್ಲರೂ ಸಹಮತ ವ್ಯಕ್ತಪಡಿಸಿದರು. ಹಾಗೆಯೇ ಮನನ ತಂಡದ ಸದಸ್ಯರು ಪ್ರಯೋಗಾತ್ಮಕವಾಗಿ ಜೀವಪರ ಕಾಳಜಿಯನ್ನು ನೈಸರ್ಗಿಕವಾಗಿ ಬದುಕುವ ರೀತಿಯ ಮಾರ್ಗಗಳ ಬಗ್ಗೆ ಹೆಚ್ಚೆಚ್ಚು ಚರ್ಚಿಸಿ 'ತಿಳಿದು ತಿಳಿಯಾಗಬೇಕು' ಎನ್ನುವ ಅಭಿಪ್ರಾಯಕ್ಕೆ ಬರಲಾಯಿತು.
ಸಭೆಯಲ್ಲಿ ಭಾಗವಹಿಸಿದ್ದ ಮಂಜು, ಪರಶುರಾಮ್, ಮಹೇಂದ್ರ, ಶಿವಕುಮಾರ್, ಮುನಿಆಂಜಿನಪ್ಪ, ಮಂಜುಳ, ಶ್ರೀಲಕ್ಷ್ಮಿ, ರಾಮ್ ಭಟ್, ದತ್ತರಾಜ್ ಹಾಗೂ ಗುರುಪ್ರಕಾಶ್ ರವರುಗಳಿಗೆ ವಂದಿಸಿ ಸಭೆಯನ್ನು ಮುಕ್ತಾಯಗೊಳಿಸಲಾಯಿತು.



No comments:

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago