04 June 2011

ದಿನಾಂಕ: 4.6.2011ರ ಮನನ ಸಭೆಯ ನಡವಳಿಗಳು



ಇಂದಿನ ಸಭೆಯಲ್ಲಿ ಈಗಾಗಲೇ ತಿಳಿಸಲಾದಂತೆ ಮನನ ಸದಸ್ಯರನ್ನು ಇನ್ನಷ್ಟು ಹೆಚ್ಚು ಮಾಡಿಕೊಂಡು ವಿವಿಧ ಸಮಿತಿಗಳನ್ನು ರಚಿಸಿ 'ವಿಶೇಷ ಅಧ್ಯಯನಗಳು' ಹಾಗೂ 'ಸಣ್ಣ ವಿಷಯಗಳ ಅಧ್ಯಯನ' ಅಂದರೆ small things study ಕೈಗೊಳ್ಳುವ ಬಗ್ಗೆ ಚರ್ಚಿಸಲು ವಿಷಯವನ್ನು ಮಂಜುರವರು ಪ್ರಸ್ತಾಪಿಸಿ ನಾವು ಈ ಹಿಂದೆ ಅಧ್ಯಯನ ಕೈಗೊಂಡಿದ್ದ 'ನೀರಿನ ಸದ್ಬಳಕೆ' ಕುರಿತು ತಯಾರಿಸಿದ ಟಿಪ್ಪಣಿ ಹೆಚ್ಚು ಜನರನ್ನು ತಲುಪಿ ಮನನ ತಂಡದ ಅಧ್ಯಯನ ಕ್ರಿಯೆಯನ್ನು ಇನ್ನಷ್ಟು ಉಲ್ಲಸಿತಗೊಳಿಸಿದೆ ಎಂಬುದನ್ನು ಹೇಳಿದರು.
 
ಅದೇ ರೀತಿಯ ವಿಷಯಗಳ ಬಗ್ಗೆ ಅಧ್ಯಯನ ನಡೆಸಿ ಟಿಪ್ಪಣಿಗಳನ್ನು ಸಿದ್ಧಪಡಿಸಲು ಸಲಹೆಗಳು ಬಂದಿದ್ದು  ಆ ರೀತಿಯ ಅಭಿಪ್ರಾಯಗಳಂತೆ ಇನ್ನು ಮುಂದೆ 'ಇಂಧನ / ವಿದ್ಯುತ್' ಹಾಗೂ ಕಚೇರಿಯಲ್ಲಿ ಬಳಸುವ ಕಾಗದ ಪತ್ರಗಳ ಬಗ್ಗೆ ಒಂದು ತಿಂಗಳ ಅವಧಿಯ ಅಧ್ಯಯನವನ್ನು ಕೈಗೊಳ್ಳುವಂತೆ ಹಾಗೂ ಇಂದಿನ ಪ್ರಸಕ್ತ ವಿದ್ಯಮಾನಗಳು, ಚರಿತ್ರೆ, ವಿಜ್ಞಾನ, ಸಂಘಟನೆ ಹಾಗೂ ಇನ್ನಿತರ ಜ್ವಲಂತ ಸಮಸ್ಯೆಗಳ ಬಗ್ಗೆ ಮೂರು ತಿಂಗಳ ಅವಧಿಯ ಅಧ್ಯಯನವನ್ನು ಕೈಗೊಂಡು ಟಿಪ್ಪಣಿಗಳನ್ನು ಸಿದ್ಧಪಡಿಸುವ ಯೋಜನೆಯನ್ನು ರೂಪಿಸಿ ಕಾರ್ಯರೂಪಕ್ಕೆ ತರುವಂತೆ ಸಭೆಗೆ ತಿಳಿಸಿದರು.
 
ನಂತರ ವಿಷಯವು ಇಂದು ದೇಶವ್ಯಾಪಿ ನಡೆಯುತ್ತಿರುವ 'ಭ್ರಷ್ಟಾಚಾರ ವಿರೋಧಿ ಆಂದೋನದ ಬಗ್ಗೆ ಹೊರಳಿ 'ಅಣ್ಣಾ ಹಜಾರೆ ಹಾಗೂ ರಾಮದೇವ್'' ಅವರುಗಳ ನಿರಶನ, ಅದರ ನೈತಿಕ ನೆಲೆಗಟ್ಟು, ಪ್ರಜಾಪ್ರಭುತ್ವದ ಬಗೆಗಿನ ನಿಲುವು, ಜಾಗತೀಕರಣ ವರ್ತುಲ ಹೀಗೆ ಹಲವು ಮಜಲುಗಳನ್ನು ಹಾಯ್ದು ಚರ್ಚೆ ಗಂಭೀರ ಸ್ವರೂಪ ಪಡೆದದ್ದು ವಿಶೇಷವಾಗಿತ್ತು.
 
ಮಂಜು ಮತ್ತು ಶಾಂತರಾಮ್ ರವರು ಭಿನ್ನ ನೆಲೆಗಳಲ್ಲಿ ಭ್ರಷ್ಟಾಚಾರದ ಸ್ವರೂಪಗಳ ಬಗ್ಗೆ,  ಪರಶುರಾಮ್ ರವರು ಭ್ರಷ್ಟಾಚಾರ ವಿರೋಧಿ ನೆಲೆಗಟ್ಟಿನ ನೈತಿಕತೆ ಬಗ್ಗೆ ಹಾಗೂ ಗುರುಸ್ವಾಮಿರವರು ಸಂಘಟನೆಯ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದರು ಇದಕ್ಕೆ ಪೂರಕವಾಗಿ ಮಹೇಂದ್ರ, ಶಿವಕುಮಾರ್, ಮಂಜುಳ ಹಾಗೂ ಶ್ರೀಲಕ್ಷ್ಮಿರವರು ಭ್ರಷ್ಟಾಚಾರದ ವಿರುದ್ಧ ನೈತಿಕ ನೆಲೆಗಟ್ಟಿನಲ್ಲಿ ವಿರೋಧಿಸುವ ಬಗ್ಗೆ ತಮ್ಮ ಸಹಮತವನ್ನು ವ್ಯಕ್ತಪಡಿಸಿದರು. ಈ ಬಗ್ಗೆ ಚರ್ಚೆಯನ್ನು ವಿಸ್ತರಿಸಲು ಉದ್ದೇಶಿಸಿದ್ದು, ಮನನ ತಂಡದ ಎಲ್ಲಾ ಸದಸ್ಯರು ಪ್ರಜಾಪ್ರಭುತ್ವ, ಸಾಂವಿಧಾನಿಕ ಹಾಗೂ ವೈಯಕ್ತಿಕ ನೆಲೆಗಟ್ಟಿನಲ್ಲಿ 'ಭ್ರಷ್ಟಾಚಾರ ವಿರೋಧಿ ಆಂದೋಲನದ' ಬಗ್ಗೆ ತಮ್ಮ ಸ್ಪಷ್ಟ ಅಭಿಪ್ರಾಯಗಳನ್ನು ಬರಹದ ಮೂಲಕ ನೀಡುವಂತೆ ಅಥವಾ ಇ-ಮೇಲ್ ಮೂಲಕ ರವಾನಿಸುವಂತೆ ಕೋರಲು ಸಭೆಯಲ್ಲಿ ತೀರ್ಮಾನಿಸಲಾಯಿತು.
 
ಕೊನೆಯಲ್ಲಿ ಮನನ ಸಂಘಟನೆಯನ್ನು ಇನ್ನಷ್ಟು ವಿಸ್ತಾರಗೊಳಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಹಾಜರಿದ್ದ ಸದಸ್ಯರಿಗೆ ತಿಳಿಸುತ್ತಾ, ಮುಂದಿನ ಸಭೆಯೊಳಗೆ ಎಲ್ಲಾ ಸದಸ್ಯರು ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸುವಂತೆ, ಜತೆಯವರಿಗೂ ಮನನ ಸೇರುವಂತೆ ತಿಳಿಸುವಂತೆ ಸಂಘಟನೆಯ ಕಾರ್ಯಗಳಿಗ ಹೆಚ್ಚು ಒತ್ತು ನೀಡಿ ಮುಂದಿನ ಸಭೆಯೊಳಗೆ ಮನನಕ್ಕೆ ಒಂದು ಸ್ಪಷ್ಟ ರೂಪ ನೀಡಿ ಮೇಲೆ ತಿಳಿಸಿದ ಅಧ್ಯಯನಗಳನ್ನು ಕೈಗೊಳ್ಳುವಂತೆ ಎಲ್ಲಾ ಸದಸ್ಯರು ಸಕ್ರಿಯವಾಗಿ ಭಾಗವಹಿಸಲು ಕೋರಿ ಸಭೆಯನ್ನು ಮುಕ್ತಾಯಗೊಳಿಸಲಾಯಿತು.
 
ಸಭೆಯಲ್ಲಿ ಹಾಜರಿದ್ದ ಸದಸ್ಯರು : ಮಂಜು, ಪರಶುರಾಮ್, ಮಂಜುಳ, ಶ್ರೀಲಕ್ಷ್ಮಿ, ಗುರುಸ್ವಾಮಿ, ಶಾಂತರಾಮ್, ಮಹೇಂದ್ರ, ಶಿವಕುಮಾರ್.
 
 
ಸಭಾ ನಿರ್ಣಯದಂತೆ ಮನನದ ಎಲ್ಲಾ ಸದಸ್ಯರು :
1. ಪ್ರಜಾಪ್ರಭುತ್ವ, ಸಾಂವಿಧಾನಿಕ ಹಾಗೂ ವೈಯಕ್ತಿಕ ನೆಲೆಗಟ್ಟಿನಲ್ಲಿ 'ಭ್ರಷ್ಟಾಚಾರ ವಿರೋಧಿ ಆಂದೋಲನದ' ಬಗ್ಗೆ ತಮ್ಮ ಸ್ಪಷ್ಟ ಅಭಿಪ್ರಾಯಗಳನ್ನು ಬರಹದ ಮೂಲಕ ನೀಡುವಂತೆ ಅಥವಾ ಇ-ಮೇಲ್ ಮೂಲಕ ರವಾನಿಸುವಂತೆ ಕೋರಿದೆ.

2. ಮುಂದಿನ ಸಭೆಯೊಳಗೆ ಎಲ್ಲಾ ಸದಸ್ಯರು ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸುವಂತೆ, ಜತೆಯವರಿಗೂ ಮನನ ಸೇರುವಂತೆ ತಿಳಿಸುವಂತೆ ಸಂಘಟನೆಯ ಕಾರ್ಯಗಳಿಗ ಹೆಚ್ಚು ಒತ್ತು ನೀಡಿ ಮುಂದಿನ ಸಭೆಯೊಳಗೆ ಮನನಕ್ಕೆ ಒಂದು ಸ್ಪಷ್ಟ ರೂಪ ನೀಡಿ ಮೇಲೆ ತಿಳಿಸಿದ ಅಧ್ಯಯನಗಳನ್ನು ಕೈಗೊಳ್ಳುವಂತೆ ಎಲ್ಲಾ ಸದಸ್ಯರು ಸಕ್ರಿಯವಾಗಿ ಭಾಗವಹಿಸಲು ಕೋರಿದೆ.
 
 
'ಮನನ'

No comments:

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago