20 June 2011

ಮನನ ಅಧ್ಯಯನ ಸಭೆ ದಿನಾಂಕ: 18.6.2011ರ ನಡವಳಿಗಳು :

ಈ ದಿನದ ಮನನ ಅಧ್ಯಯನ ಸಭೆಯಲ್ಲಿ ನಿಕಟಪೂರ್ವ ಸಭೆಯಲ್ಲಿ ಚರ್ಚಿಸಿದಂತೆ ವಿಶೇಷವಾಗಿ 'ವಿದ್ಯುತ್ ಸದ್ಬಳಕೆ' ಹಾಗೂ 'ಕಾಗದ ಸಾಮಗ್ರಿಗಳ ಬಳಕೆ' ವಿಷಯಗಳ ಬಗೆಗಿನ ಅಧ್ಯಯನವನ್ನು ಕೈಗೊಳ್ಳುವ ಬಗ್ಗೆ ಇಂದಿನ ಸಭೆಯಲ್ಲಿಯೂ ವಿಷಯವನ್ನು ಮಂಡಿಸಲಾಯಿತು.

ಕಳೆದ ಬಾರಿಯೂ ತಿಳಿಸಿದಂತೆ  'ವಿಧಾನಸೌಧ' 'ವಿಕಾಸಸೌಧ' ಹಾಗೂ 'ಎಂ.ಎಸ್.ಬಿಲ್ಡಿಂಗ್' ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ಮನನ ಸದಸ್ಯರು ಅವರುಗಳ ಕಾರ್ಯಕ್ಷೇತ್ರದಲ್ಲಿರುವ ಸ್ನೇಹಿತರೊಂದಿಗೆ, ಸಹೋದ್ಯೋಗಿಗಳೊಂದಿಗೆ ವಿಷಯಗಳನ್ನು ಚರ್ಚಿಸುತ್ತಾ ವಿಷಯವನ್ನು ಸೂಕ್ಷ್ಮವಾಗಿ ಗ್ರಹಿಸಿ ಪ್ರತಿಫಲವಾಗಿ ಟಿಪ್ಪಣಿಯನ್ನು ಸಿದ್ಧಪಡಿಸಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದು ಸೂಕ್ತವೆನ್ನುವ ಅಭಿಪ್ರಾಯ ಪಡಲಾಯಿತು. ಮನನ ತಂಡದ ಎಲ್ಲಾ ಸದಸ್ಯರು ಒಂದಿಲ್ಲೊಂದು ರೀತ್ಯ ಇತರರೊಂದಿಗೆ ಸಂವಹನೆ ನಡೆಸಿ ಸಮಗ್ರವಾಗಿ ಅಧ್ಯಯನ ನಡೆಸಲು ಕ್ರಮವಹಿಸುವ ಬಗ್ಗೆ ಒಮ್ಮತ ವ್ಯಕ್ತಪಡಿಸಲಾಯಿತು.

ಮನನ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸದಿರುವುದು, ಸಂಘಟಿತರಾಗದೇ ಇರುವುದು, ಬೇರೆ ಬೇರೆ ವಿಷಯಗಳ ಬಗ್ಗೆ ಚರ್ಚೆ ನಡೆಸದೇ ಇರುವುದರ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿ; ಮೂರು ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸದಸ್ಯರು ಇಬ್ಬಿಬ್ಬರಂತೆ ಒಟ್ಟು ಆರು ಮಂದಿ 'ಕೋರ್ ಕಮಿಟಿ' ರಚಿಸಿಕೊಂಡು ಇತರರನ್ನು ಸಂಪರ್ಕಿಸುವುದು, ಅಧ್ಯಯನ ವ್ಯಾಪ್ತಿ ಸ್ವರೂಪವನ್ನು ವಿಸ್ತರಿಸುವುದು, ಸಭೆಗೆ ಕರೆತರುವುದು ಮತ್ತು ಅಧ್ಯಯನದ ಕ್ರಿಯಾವಂತಿಕೆ ಬಗ್ಗೆ ರೂಪುರೇಷೆಗಳನ್ನು ಸಿದ್ಧಪಡಿಸುವುದು... ಹೀಗೆ ಹಲವು ಕಾರ್ಯಗಳನ್ನು ಕೈಗೊಂಡು 'ಮನನ' ತಂಡವನ್ನು ಇನ್ನಷ್ಟು ಪ್ರಜ್ಞಾಪೂರ್ವಕವಾಗಿ ನೈತಿಕವಾಗಿ ರೂಪಿಸಲು ಸಹಕರಿಸುವುದು ಸೂಕ್ತವೆನ್ನುವ ಅಭಿಪ್ರಾಯಕ್ಕೆ ಸಭೆಯಲ್ಲಿ ಒಮ್ಮತ ಮೂಡಿತು. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವ ಬಗ್ಗೆ ಎಲ್ಲರಿಗೂ ತಿಳಿಸಲು ತೀರ್ಮಾನಿಸಲಾಯಿತು.

ಇಂದಿನ ಸಭೆಯಲ್ಲಿ ಹಲವಾರು ವಿಶೇಷ ಅಂಶಗಳು, ಪ್ರಸಕ್ತ ವಿದ್ಯಮಾನಗಳು, ರಾಜಕೀಯ, ತಂತ್ರಜ್ಞಾನಕ್ಕೆ ಬಂಧಿಯಾಗಿರುವ ಮನುಷ್ಯ... ಹೀಗೆ ಅತ್ಯಂತ ಸೂಕ್ಷ್ಮ ಮತ್ತು ಗಂಭೀರ ವಿಷಯಗಳ ಬಗ್ಗೆ ಚರ್ಚೆ ನಡೆದು,
ಬುಡಕಟ್ಟು ಜನಾಂಗದವರ ರಿವಾಜುಗಳು, ಯಡಿಯೂರಪ್ಪರವರು ಇಂದು ಪ್ರಕಟಿಸಿರುವ ಪತ್ರಿಕಾ ಪ್ರಕಟಣೆ (ಹೆಚ್.ಡಿ.ಕೆ.ಅವರಿಗೆ ನೇರ ಪತ್ರ).. ದೇವರು, ಮೌಲ್ಯ ರಾಜಕಾರಣ, ಪ್ರಜಾಸತ್ತಾತ್ಮಕ ರೀತಿ ಎಲ್ಲದರ ಬಗ್ಗೆಯೂ ಒಂದು ಸಂಕ್ಷಿಪ್ತ ಚರ್ಚೆ ನಡೆದದ್ದು ಅತ್ಯಂತ ಸ್ವಾರಸ್ಯಕರವಾಗಿತ್ತು. ದತ್ತರಾಜ್ ಪ್ರಸ್ತಾಪಸಿದ ವಿಷಯಗಳಿಗೆ ಮಂಜು ಹಾಗೂ ರಾಮ್ ಭಟ್ ರವರು ತಮ್ಮದೇ ದೃಷ್ಟಿಕೋನದಲ್ಲಿ ನೀಡಿದ ವಿಶ್ಲೇಷಣೆ ಚರ್ಚೆಯನ್ನು ತೀವ್ರಗೊಳಿಸಿತ್ತು ಮತ್ತು ಶಿವಕುಮಾರ್ ಹಾಗೂ ಮಹೇಂದ್ರ ಇದಕ್ಕೆ ಪೂರಕವಾಗಿ ಒದಗಿಸಿದ ಮಾಹಿತಿಗಳು ಚರ್ಚೆಯ ಗಾಂಭೀರ್ಯತೆಗೆ ಸಾಕ್ಷಿಯಾಗಿತ್ತು.

ಇವೆಲ್ಲಾ ಅಂಶಗಳನ್ನು ಒಳಗೊಂಡಂತೆ ಮನನ ತಂಡವು ಹೆಚ್ಚು ತಿಳಿಯುವ / ಅಧ್ಯಯನ ನಡೆಸುವ ನಿಟ್ಟಿನಲ್ಲಿ ಉತ್ಸುಕರಾಗಿ ಕಾರ್ಯಪ್ರವೃತ್ತರಾಗುವಂತೆ ಎಲ್ಲರನ್ನೂ ಕೋರುವಂತೆ ಪ್ರತಿಬಾರಿಯಂತೆ ಈ ಬಾರಿಯೂ ಸಭೆಯಲ್ಲಿರುವವರು ಅಭಿಪ್ರಾಯಪಟ್ಟರು. ಕೆಲವು ಸದಸ್ಯರು ಗೈರು ಹಾಜರಾಗುತ್ತಿದ್ದು ಮತ್ತು ನಿಯಮಿತವಾಗಿ ಹಾಜರಾಗದೇ ಇರುವುದರಿಂದ ವಿಷಯಗಳ ಕಂಟಿನ್ಯೂಟಿ ಕಳೆದುಕೊಂಡು ಹಮ್ಮಿಕೊಳ್ಳುವ ಕಾರ್ಯಕ್ರಮಗಳು ಅರ್ಧಕ್ಕೇ ನಿಂತು ಹೋಗುತ್ತಿರುವುದು ಹಾಗೂ ವಿಷಯವನ್ನು ಸಂಪೂರ್ಣವಾಗಿ ಅಧ್ಯಯನ ಮಾಡಲು ಸಾಧ್ಯವಾಗದೇ ಇರುವುದನ್ನು ಪ್ರತಿ ಬಾರಿಯಂತೆ ಈ ಬಾರಿಯ ಸಭೆಯಲ್ಲಿಯೂ ಮಾತನಾಡಿಕೊಳ್ಳುವುದೇ ಆಯಿತು.
ಸಭೆಯಲ್ಲಿ ಕೈಗೊಂಡ ತೀರ್ಮಾನಗಳು :
1. ಮುಂದಿನ ಸಭೆಗೆ ಎಲ್ಲರೂ ತಪ್ಪದೆ ಹಾಜಾರಾಗುವಂತೆ ಕೋರುವುದು.
2. ಹೆಚ್ಚು ಸದಸ್ಯರನ್ನು ನೋಂದಾಯಿಸುವುದು.
3. ಮನನ ಸಭೆಗೆ ಇನ್ನುಮುಂದೆ ಬರಲಾಗದ ಅಥವಾ ಮನನ ಅಧ್ಯಯನಕ್ಕೆ ತೊಡಗಿಸಿಕೊಳ್ಳಲಾಗದವರು ದಯಮಾಡಿ ತಿಳಿಸುವುದು.
4. ನಮ್ಮ ಅಧ್ಯಯನದ ಭಾಗವಾಗಿ 'ವಿದ್ಯುತ್ ಬಳಕೆ' ಬಗ್ಗೆ ಅಧ್ಯಯನ ನಡೆಸುವುದು- ಈ ಅಧ್ಯಯನಕ್ಕೆ ತೊಡಗಿಸಿಕೊಳ್ಳುವ ಆಸಕ್ತರು ದಯಮಾಡಿ ತಾವು ನಿರ್ವಹಿಸುವ ಪಾತ್ರವನ್ನು ತಿಳಿಸುವುದು.
5. ಕೋರ್ ಕಮಿಟಿಯನ್ನು ರಚಿಸಲಾಗುತ್ತಿದ್ದು, ವಿಧಾನಸೌಧ / ವಿಕಾಸಸೌಧ / ಎಂ.ಎಸ್.ಬಿಲ್ಡಿಂಗ್ ನಲ್ಲಿನ ಇಬ್ಬರು ಸದಸ್ಯರು ಕೋರ್ ಕಮಿಟಿಯಲ್ಲಿ ಇರುವುದರಿಂದ ಆಸಕ್ತಿಯುಳ್ಳವರು ತಿಳಿಸುವುದು.
6. ಮುಂದಿನ ತಿಂಗಳ ವಿಷಯ 'ತಂತ್ರಜ್ಞಾನ ರಹಿತ ಮನುಷ್ಯ'
   ಅಂದರೆ ಮುಂದಿನ ತಿಂಗಳ ಮೊದಲ ವಾರದ ಸಭೆಗೆ ಪೂರ್ವಭಾವಿಯಾಗಿ ಮೇಲೆ ತಿಳಿಸಿದ ವಿಷಯದ ಬಗ್ಗೆ ಎಲ್ಲಾ ಸದಸ್ಯರು ಅಧ್ಯಯನ ನಡೆಸಿ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸುವುದು.
7. ಮೇಲ್ ಮೂಲಕ ಇತರರೊಡನೆ ಸಂವಹನೆ ನಡೆಸಲು ಸಾಧ್ಯವಾಗದೇ ಇರುವವರು ಈ ಕೆಳಕಂಡವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಅಭಿಪ್ರಾಯಗಳನ್ನು / ಸಲಹೆಗಳನ್ನು ತಪ್ಪದೆ ತಿಳಿಸುವಂತೆ ಸಹ ಕೋರಿದೆ.
    ಮಂಜು :        9902963582
    ಪರಶುರಾಮ್ :  9632593469
    ದತ್ತ ರಾಜ್  :    9916818932

ಹಾಜರಿದ್ದ ಸದಸ್ಯರು : ಮಂಜು, ದತ್ತರಾಜ್, ರಾಮ್ ಭಟ್, ಮಹೇಂದ್ರ, ಶಿವಕುಮಾರ್


No comments:

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago