26 February 2011

'ಮನನ ಸ್ವಾರಸ್ಯ'

ತುಂಬಾ ದಿನಗಳ ಬಿಡುವಿನ ನಂತರ ಇಂದು ಅಂದ್ರೆ ದಿನಾಂಕ 26/02/2011ರ ಅಪರಾಹ್ನ 'ಮನನ' ತಂಡದ ಕೆಲವೇ ಕೆಲವು ಮಂದಿ ಸದಸ್ಯರು ಸಭೆ ಸೇರಿಕೊಂಡಿದ್ವಿ.   ರೇವಪ್ಪನನ್ನು ಸಚಿವಾಲಯದಿಂದ ಬೀಳ್ಕೊಟ್ಟ ನಂತರ ಇದೇ ಪ್ರಥಮ ಬಾರಿಗೆ ಮನನದ  ಸದಸ್ಯರು ಒಟ್ಟಿಗೆ ಸೇರಿದ್ವಿ.  ಒಂದು ಕಾಲದಲ್ಲಿ (ಅಂದ್ರೆ ಕೆಲವು ತಿಂಗಳುಗಳ ಹಿಂದೆ ಅಷ್ಟೆ ) ಬಿರುಸಿನ ಚರ್ಚೆ ನಡೆಯುತ್ತಿದ್ದ ನಮ್ಮ ಮನನ ತಂಡದಲ್ಲಿ ಇತ್ತೀಚೆಗೆ ಅಂತಹ ಚರ್ಚೆಗಳು ನಡೆಯದೆ ತುಂಬಾ ದಿನಗಳಾದ್ದರಿಂದ ಮತ್ತೆ ಹೊಸ ಹೊಸ ವಿಚಾರಗಳನ್ನು ಎತ್ತಿಕೊಂಡು ನೀರಸಗೊಂಡಿರುವ 'ಮನನ'ದ ಮಂಥನಕ್ಕೊಂದು ಬಿರುಸು ತರಬೇಕೆಂಬುದು ನಮ್ಮ ಉದ್ದೇಶ. ಅದಕ್ಕಾಗಿಯೇ ಪ್ರತೀ ಶನಿವಾರ ಸೇರಬೇಕೆಂಬಂತಿದ್ದ ಸಭೆಯ ವೇಳಾ ಪಟ್ಟಿಯನ್ನು ಸ್ವಲ್ಪ ಬದಲಾಯಿಸಿ ತಿಂಗಳಿಗೆ ಎರಡು ಬಾರಿ (ಒಂದು ಶನಿವಾರ ಬಿಟ್ಟು ಇನ್ನೊಂದು ಶನಿವಾರ) ಸಭೆ ಸೇರಬೇಕೆಂಬ ನಿರ್ಧಾರ ತಳೆದಿದ್ದೇವೆ.  ಆದರೆ ಇದು ಮುಂದಿನ ಮಾರ್ಚ್ ನಿಂದ ಅನ್ವಯವಾಗುತ್ತೆ. ಮುಂದಿನ ತಿಂಗಳ ಪ್ರಥಮ ಶನಿವಾರದಂದು ಮಧ್ಯಾಹ್ನ 1-45 ಕ್ಕೆ ಸಚಿವಾಲಯದ ಕ್ಲಬ್ ನಲ್ಲಿ ಮನನದ ಸಭೆ ಜರುಗಲಿದೆ. ಎಲ್ಲರೂ ತಪ್ಪದೇ ಭಾಗವಹಿಸಿ.  ಹಳಬರೂ ಬನ್ನಿ... ಹೊಸಬರನ್ನೂ ಕರೆತನ್ನಿ..

ಅಯ್ಯೋ ಇದೇನ್ರೀ ತಲೆ ಬರಹ ಏನೋ ಸ್ವಾರಸ್ಯ ಅಂತ ಕೊಟ್ಕೊಂಡು ಒಳ್ಳೆ  ಜಾಹಿರಾತು ತರ ಬರಿದಿದೀರಾ ಅಂತ ನೀವು ಅನ್ಕೊಂಡಿರಬಹುದು  ಅಲ್ವೇ...?  ನಿಜ ಮೇಲೆ ನಾನು ಬರೆದಿದ್ದು ಒಂಥರಾ ಜಾಹಿರಾತು ನೇ.. ಸಚಿವಾಲಯದ ಆಸಕ್ತ ಸಹೋದ್ಯೋಗಿಗಳು ಒಗ್ಗೂಡಿ ಶನಿವಾರಗಳಂದು ಊಟದ ಸಮಯದಲ್ಲಿ ಸ್ವಲ್ಪ ಬಿಡುವು ಮಾಡಿಕೊಂಡು,  ಸಾಹಿತ್ತಿಕ, ಸಾಮಾಜಿಕ, ಹಾಗೂ ಇನ್ನಿತರೆ ವಿಷಯಗಳ ಬಗ್ಗೆ ಆರೋಗ್ಯಕರ ಚರ್ಚೆನಡೆಸಲು ಯೋಜಿಸಿರುವಂತಹ 'ಮನನ' ದ ಸಭೆಗೆ ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಆಸಕ್ತರು ಬರಬೇಕು ಎಂಬ ಪುಟ್ಟ ಹಂಬಲ ಮನದಲ್ಲಿ ಇದ್ದಿದ್ದರಿಂದ ಜಾಹಿರಾತು ತರಾನೇ ಬರೆದಿದೀನಿ... ಮತ್ತೆ ಹೇಳ್ತಿದೀನಿ ಈಗಾಗಲೇ ಸದಸ್ಯರಾದವರು ತಪ್ಪದೇ ಬನ್ನಿ... ಬರುವಾಗ ಆಸಕ್ತಿ ಇರುವವರನ್ನು ನಿಮ್ಮೊಡನೆ ಕರೆತನ್ನಿ...

ಇವತ್ತು ಸ್ವಾರಸ್ಯ ಏನು ನಡೀತು ಅಂದ್ರೆ. ಮಧ್ಯಾಹ್ನ ಸಭೆಯನ್ನು ಮುಗಿಸಿ ನಾನು, ಮಂಜುನಾಥ್, ಗುರುಪ್ರಕಾಶ್, ರಮೇಶ್ ಎಲ್ರೂ ಒಟ್ಟಿಗೇ ಬರ್ತಾ ಇದ್ವಿ. (ಕೆಲವರು ಆಗಲೇ ಮುಂದೆ ಹೋಗಿದ್ರು). ನನಗೆ ಸ್ವಲ್ಪ ನೆಗಡಿಯಾಗಿ ಮುಖ ಬಾಡಿದಂತಿತ್ತು. ಅಲ್ಲದೆ ತುಂಬಾದಿನಗಳಿಂದ ನಾನು ಇವರಾರಿಗೂ ದರ್ಶನ ಕೊಟ್ಟಿರಲಿಲ್ಲ. ಇದನ್ನು ಸೂಕ್ಷ್ಮವಾಗಿ ಗುರುಪ್ರಕಾಶ್ ಗಮನಿಸಿದರು ಅನ್ಸುತ್ತೆ..
ಗುರುಪ್ರಕಾಶ್: "ಯಾಕ್ರಿ ಡಲ್ ಆಗಿದೀರಾ ? ನಿಮ್ ಫ್ರೆಂಡ್ (ರೇವಪ್ಪ) ಹೋದ್ರು ಅಂತ ನೀವೂ ಡಲ್  ಆಗಿಬಿಟ್ಟಿದೀರಿ"
ನಾನು: ಹೆ ಹೆ  ಹ ಹಾ.. ಗೇ.. ನಿಲ್ಲ
ಮಂಜುನಾಥ್: "ಹಾಗೆಲ್ಲಾ ಡಲ್ ಆಗ ಬಾರದ್ರೀ... ನಮ್ ಬ್ಯಾಚಿನ ಎಷ್ಟೋ ಹುಡುಗೀರೇ ಬಿಟ್ಟೋದ್ರು ಗೊತ್ತಾ...ಆದ್ರೂ !?"
ಗುರುಪ್ರಕಾಶ್:  ಹೌದ್ರೀ.. ನಮ್ ಬ್ಯಾಚಿನ ಎಲ್ಲಾ ಹುಡುಗೀರಿಗೂ  ನಮ್ಮೆದುರೇ ಮದುವೆ ಆಯ್ತು..!!
ನಾನು: ಹ್ಹ ಹ್ಹ ಹಹ್
ಮಂಜುನಾಥ್ : (ಗುರು ಪ್ರಕಾಶ್ ಗೆ) ನಿಮ್ ಮದುವೇನೂ ನನ್ನೆದುರೇ ಆಗಿದ್ದು ಸುಮ್ನಿರ್ರೀ...

(ಅಷ್ಟರಲ್ಲಿ ರಸ್ತೆ ಅಡ್ಡ ಬಂತು,, ಅಲ್ಲಲ್ಲ ರಸ್ತೆಗೆ ನಾವು ಬಂದ್ವಿ ವಾಹನಗಳು ಅಡ್ಡ ಬಂದ್ವು  ರಸ್ತೆ ದಾಟಿ ಎಂ.ಎಸ್. ಬಿಲ್ಡಿಂಗ್ ಕಡೆ ಹೆಜ್ಜೆ ಹಾಕಿದೆವು. ಇನ್ನೂ ಸ್ವಲ್ಪ ಹೊತ್ತು ಮಾತಾಡ್ತಾ ನಿಂತಿದ್ರೆ ಇನ್ನೂ ಆನೇಕ ಸಂಗತಿಗಳು ಹೊರಬರ್ತಿದ್ದುವೇನೋ..!!!??)



ಪರಶು..,

No comments:

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago