01 January 2011

ಹೊಸ ವರ್ಷದ ಹೊಸ್ತಿಲಲಿ...

ಹೊಸ ವರ್ಷದ ಹೊಸ್ತಿಲಲಿ...


ಹತ್ತು ಕಳೆಯಿತು, ಹನ್ನೊಂದು ಬಂದಿತು.

2010ನೇ ಕೋಣೆಯ ಪಯಣವನು ಮುಗಿಸಿ, 2011ನೇ ಕೋಣೆಯ ಹೊಸ್ತಿಲಲಿ ನಿಂತು ಕದವ ತೆರೆದಿದ್ದೇವೆ. ಹೌದು ಹೊಸಮನೆಯ ಹೊಸ್ತಿಲಲ್ಲವಿದು, ಹೊಸ ಕೋಣೆಯ ಹೊಸ್ತಿಲು.! ಕತ್ತಲು, ಬೆಳಕುಗಳ ಮಿಶ್ರಣವೇ ಮೆತ್ತಿರುವ ಕಿರಿದಾದ ಕೋಣೆ.! ಹಿಂದಿನ ಪಯಣದ ಅನುಭವವ ನೆನೆಯುತ, ಮುಂದಿನ ಪಯಣದ ದಾರಿಯನು ಅರಿಯುತ ದಿನದ ಹೆಜ್ಜೆಯನಿಟ್ಟು ಸಾಗಲೇ ಬೇಕು ನಾವು. ಕತ್ತಲೋ, ಬೇಳಕೋ, ಕಷ್ಟವೋ, ಸುಖವೋ ಬಂದುದನನುಭವಿಸಿ ಮುನ್ನಡೆಯಲೇ ಬೇಕು. ಹಿಂತಿರುಗಿ ನಡೆಯುವ, ಮುಂದೋಗದೆ ನಿಲ್ಲುವ ಅರ್ಹತೆಯು ನಮಗಿಲ್ಲ.  ಕಾಲನ ಕೈಯೊಳಗೆ ಪರವಶರು ನಾವು. ಅವನಾಣತಿಯನು ಮೀರಿ ಉಸಿರಾಡುವಂತೆಯೂ ಇಲ್ಲ.! ಪ್ರತಿಕ್ಷಣವನು ವ್ಯರ್ಥಯಿಸಿ  ಸಾವಿನೆಡೆಗೆ ಸಾಗುತ್ತಿರುವೆವು ನಾವು. ನಿಜ, ಆದರೂ ನಮಗೆ ಸಾವೆಂಬುದರ ಭಯ ಕಿಂಚಿತ್ತೂ ಇಲ್ಲ.! ಆಯುಷ್ಯದ ಗಡಿಯ ಗುರುತು ತಿಳಿದಿಲ್ಲ. ತಿಳಿದಿದ್ದರೆ ಮನಸ್ಸು ಚಡಪಡಿಸುತ್ತಿತ್ತೇನೋ ? ಸ್ವಾರ್ಥತೆಯ ಬಿಟ್ಟು ದೇಹ ದುಡಿಯುತ್ತಿತ್ತೇನೋ ?  ಆದರೇನು ಮಾಡುವುದು ಸಾವಿನ ಗಡಿಯ ಗುರುತು ತಿಳಿಯಲು ಸಾವೆಂಬುದೇನು ಸರ್ಕಾರಿ ನೌಕರಿಯೇ ? ಅರವತ್ತಕ್ಕೆ ನಿವೃತ್ತಿಹೊಂದಿ ಮನೆಗೆ ತೆರಳುವಂತಿದೆಯೇ?.!!

ಅಯ್ಯೋ ಹೊಸ ವರ್ಷದ ಹೊಸ್ತಿಲಲಿ ನಿಂತ ನಮಗೆ ಸಾವಿನ ಮಾತೇಕೆಂದುಕೊಳ್ಳುವೆವಾದರೂ  ಕಳೆದುಕೊಂಡಿದ್ದರ ನೆನಪೇ ಅತಿಯಾಗಿ ಕಾಡುತ್ತದೆ.  ಅಗಲಿದ ಆತ್ಮಿಯರು ತುಂಬಲಾಗದ ನಷ್ಟವಾಗುತ್ತಾರೆ. ಕಳೆದ ದಿನಗಳು ಉಳಿಸಿಹೋದ ಕಲೆಯಲ್ಲೆ ಎದ್ದು ಕಾಣುವುದು ಇಂತಹ ನೆನಪೇ ಅಲ್ಲವೇ ?

ಅದೇನೇ ಇರಲಿ,   ಭೂಮಿಗೆ ಬಿದ್ದ ಸೂರ್ಯರಶ್ಮಿ ವ್ಯರ್ಥವಾಗುವುದಿಲ್ಲ. ಗರಿಕೆಗೂ ಜೀವ ಸ್ಪುರಿಸುವಂತೆ ಮಾಡುತ್ತದೆ. ಪ್ರತಿಕ್ಷಣವೂ ಸದ್ದಿಲ್ಲದೆ ಚಲಿಸುತ್ತಲೇ ಇರುತ್ತದೆ. ಈ ಚಲನೆಯೇ ಬದಲಾವಣೆಯನ್ನೂ ತರುತ್ತದೆ. ಇಂದಿನ ಸಂಬಂಧಗಳು ಮುಂದೇನೋ ಆಗುತ್ತವೆ. ಪುನರ್ನವವು ಸಾರ್ಥವಾದಂತೆ, ಸಾರ್ಥವು ಮನನ ವಾದಂತೆ.!

 ಬದಲಾವಣೆಗಳನ್ನು ಆತ್ಮೀಯವಾಗಿ ಬರಮಾಡಿಕೊಳ್ಳೋಣ. ಕಳೆದ ದಿನಗಳ ಸವಿನೆನಪುಗಳನ್ನೇ ನೆನೆನೆನೆದು ಕಹಿ ಗಳಿಗೆಗಳನು ಶಾಶ್ವತವಾಗಿ ಮರೆಯಲೆತ್ನಿಸೋಣ. ಮುಂದಿನ ಜೀವನದ ಪ್ರಜ್ವಲತೆಗೆ ಸವಿಗನಸ ಕಾಣೋಣ. ಕನಸುಗಳ ನೆನಸಿಗೆ ಹಗಲಿರುಳು ಶ್ರಮಿಸೋಣ. ಹೊಸ ವರುಷ ಎಲ್ಲರಿಗೂ ಹೊಸ ಹುರುಪು ಕೊಡಲಿ.  ಹೊಸ ಹರುಷ ತರಲಿ. ಬದುಕಿನಲಿ ನವಚೈತನ್ಯವು ಉಮ್ಮಳಿಸಲಿ..


ಸರ್ವರಿಗೂ ಹೊಸ ವರ್ಷದ ಹಾರ್ದಿಕ ಶುಭಾಷಯಗಳು

ರೇಣುಕಾತನಯ
renukatanaya@gmail.com

1 comment:

sachidananda said...

ಹಾಯ್ ಪರಶು ಹೊಸ ವರುಷವನ್ನು ಬರಮಾಡಿಕೊಳ್ಳುವ ಜೊತೆಗೆ ಹೊಸ ಹರುಷವನ್ನು ಬರಮಾಡಿಕೊಳ್ಳುವೆಡೇ ಗೆ ಲೇಖನ ಮಾರ್ಮಿಕವಾಗಿ ಸಾಗಿದೆ .ನೆನಪೆಂಬುದು ಸಿಹಿ ಇರಲಿ ಕಹಿ ಇರಲಿ ಅದು ಸುಖಕಿಂತಲೂ ದುಖವನ್ನೇ ಹೆಚ್ಚಾಗಿ ನೀಡಿವುದರ ಜೊತೆಗೆ ನಮ್ಮನ್ನು ಜಡವಾಗಿಸುತ್ತದೆ .ನೆನಪೆಂಬುದು ಒಂದು ಸ್ಥಿರ ಗುರುವಾಗಿಯೂ ಪ್ರಗತಿ ಎಂಬುದು ಚಲನಶೀಲ ಗುರಿಯಾಗಿಯೂ ಸಾಗುತಳಿರಲೀ ಸದಾ ಎಂದು ಹಾರೈಸುತ್ತಾ ಈ ವರ್ಷದ ಮೊದಲನೆ ಲೇಖನದ ಕರ್ತೃ ವಾದ ನಿನ್ನನ್ನು ಅಭಿನಂದಿಸುತ್ತಾ ನಮ
ಗೆಳೆಯ ಗೆಳತಿಯರೆಲ್ಲರಿಗೂ ಹೊಸವರ್ಷದ ಹಾರ್ದಿಕ ಶುಭಾಶಯಗಳನ್ನು ತಿಳಿಸುತ್ತೇನೆ ಹಾಗೂ "ಏನಾಗಲಿ ಮುಂದೆ ಸಾಗಲಿ " ಎನ್ನುವಂತೆ ಹಲವು ಹೇಳು ಬೀಳುಗಳು" ಹೆದರು ತೊಡರುಗಳ ನಡುವೆಯೂ ನೇರ ದಿಟ್ಟ ನಿರಂತರವಾಗಿ ನಮ್ಮ ಬ್ಲೋಗನ್ನು ಮುನ್ನಡಿಸಿಕೊಂಡು ಹೋಗುತ್ತಿರುವ ದೈತ್ಯ ಶಕ್ತಿ "ನಮ್ಮ ರೇವ್" ಗೆ ಅಭಿಮಾನದಿಂದ ಅಭಿನಂದಿಸುತ್ತೇನೆ

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

 • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
  4 years ago
 • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದು...
  4 years ago
 • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
  5 years ago
 • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
  7 years ago
 • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
  8 years ago
 • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
  8 years ago
 • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
  8 years ago
 • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
  8 years ago